ಜನನ: ಸೆಪ್ಟೆಂಬರ್ ೧೭, ೧೯೫೦ ಇವರು ಭಾರತದ ಪ್ರಧಾನ ಮಂತ್ರಿಗಳು. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಹೊಂದಿದ್ದಾರೆ. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗು ಎನ್ ಡಿ ಎ ಯ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆದ್ದು ಭಾರತದ ೧೫ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಮೋದಿಯವರು, ಗುಜರಾತ್ ನ ವಡೋದರ ಹಾಗೂ ವಾರಾಣಸಿ ಚುನಾವಣಾ ಕ್ಷೇತ್ರಗಳಲ್ಲಿ ನಿಂತು, ಅತ್ಯಂತ ಬಹುಮತದಿಂದ ಜಯಗಳಿಸಿದ್ದಾರೆ.
ಹಾಲಿ | |
ಅಧಿಕಾರ ಸ್ವೀಕಾರ
೨೬ ನೇ ಮೇ ೨೦೧೪
| |
ರಾಷ್ಟ್ರಪತಿ | ಪ್ರಣಬ್ ಮುಖರ್ಜಿ |
---|---|
ಪೂರ್ವಾಧಿಕಾರಿ | ಮನಮೋಹನ್ ಸಿಂಗ್ |
ಗುಜರಾತ್ ರಾಜ್ಯದ ೧೪ನೆಯ ಮುಖ್ಯಮಂತ್ರಿ ,ಭಾರತದ ಪ್ರಧಾನ ಮಂತ್ರಿ
| |
ಅಧಿಕಾರ ಅವಧಿ
7 ಅಕ್ಟೋಬರ್ 2001 – 22 May 2014
| |
ರಾಜ್ಯಪಾಲ | |
ಪೂರ್ವಾಧಿಕಾರಿ | ಕೇಶುಭಾಯಿ ಪಟೇಲ್ |
ಉತ್ತರಾಧಿಕಾರಿ | ಆನಂದಿ ಬೆನ್ ಪಟೇಲ್ |
ವೈಯುಕ್ತಿಕ ಮಾಹಿತಿ | |
ಜನನ |
ನರೇಂದ್ರ ದಾಮೋದರದಾಸ್ ಮೋದಿ Narendra Damodardas Modi
17 ಸಪ್ಟೆಂಬರ್ 1950
|
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಅಭ್ಯಸಿಸಿದ ವಿದ್ಯಾಪೀಠ | ಗುಜರಾತ್ ವಿಶ್ವವಿದ್ಯಾಲಯ |
ಧರ್ಮ | ಹಿಂದೂ |
ಸಹಿ | |
ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 66ನೇ ಹುಟ್ಟು ಹಬ್ಬ ಸಂಭ್ರಮ.. ಈಗಾಗಲೇ ಪ್ರಧಾನಿ ಗುಜರಾತ್ನ ಗಾಂಧಿನಗರಕ್ಕೆ ತೆರಳಿ ತಾಯಿ ಹೀರಾಬೆನ್ರವರ ಆಶೀರ್ವಾದ ಪಡೆದಿದ್ದಾರೆ.
ಪ್ರಧಾನಿಯವರು ನವಸಾರಿ ಜಿಲ್ಲೆಯ ಬುಡಕಟ್ಟು ಅಂಗವಿಕಲ ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಬುಡಕಟ್ಟು ಜಿಲ್ಲೆಯಾದ ದಾಹೋದ್‌ಗೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಸೂರತ್ ಮೂಲದ ಬೇಕರಿಯೊಂದರ ಮಾಲೀಕರು, ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆಗೂಡಿ ಪಿರಮಿಡ್ ಆಕಾರದ ಬೃಹತ್ ಕೇಕ್ ತಯಾರಿಸಿದ್ದಾರೆ.
ಸೂರತ್ ನ ‘ಅತುಲ್ ಬೇಕರಿ’ ಸ್ವಯಂ ಸೇವಾ ಸಂಸ್ಥೆ ‘ಶಕ್ತಿ ಫೌಂಡೇಶನ್’ ಜೊತೆಗೂಡಿ ಈ ಕೇಕ್ ತಯಾರಿಸಿದ್ದು, ಮಹಿಳಾ ಸಬಲೀಕರಣಕ್ಕಾಗಿ 5 ಸಾವಿರ ಮಹಿಳೆಯರ ಸಮ್ಮುಖದಲ್ಲಿ ಮೋದಿ ಕೇಕ್ ಕತ್ತರಿಸಲಿದ್ದಾರೆ. ಈ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.