fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಡಿಸೆಂಬರ್ 31, 2022

══> ನಮ್ಮ ಕನ್ನಡ <══

🙂🚥═𝕤𝕡𝕟𝟛𝟙𝟠𝟟═🚥🙂

ಹೇಳಿ ಹೇಳಿ ಕನ್ನಡ
ಹಾಡಿ ಹಾಡಿ ಕನ್ನಡ
ಬಲು ಸರಳ ಕನ್ನಡ
ಕಲಿಯಬೇಕು ನೀ ಕನ್ನಡ

ನಮ್ಮ ನಾಡು ಕನ್ನಡ
ನಮ್ಮ ಭಾಷೆ ಕನ್ನಡ
ನಮ್ಮ ಉಸಿರು ಕನ್ನಡ
ನಮ್ಮ ಹೆಸರೂ ಕನ್ನಡ

ಹಾಲು ಜೇನು ಕನ್ನಡ
ಒಳ್ಳೆ ರುಚಿ ಕನ್ನಡ
ಬಲು ಸರಳ ಕನ್ನಡ
ಕಲಿಯಬೇಕು ನೀ ಕನ್ನಡ

ಗಂಧದ ಗುಡಿ ಕನ್ನಡ
ಅಂದದ ಬೀಡು ಕನ್ನಡ
ಚೆಲುವ ನಾಡು ಕನ್ನಡ
ಸಮೃದ್ಧಿ ನಾಡು ಕನ್ನಡ

ನನ್ನಲಿ ಕನ್ನಡ
ನಿನ್ನಲ್ಲಿ ಕನ್ನಡ
ಅವರಲ್ಲಿ ಕನ್ನಡ
ಇವರಲ್ಲಿ ಕನ್ನಡ

ಕೋಗಿಲೆ ಧ್ವನಿ ಕನ್ನಡ
ಸಾಹಿತ್ಯ ಊರು ಕನ್ನಡ
ಕವಿ ಪುಂಗವ ಕನ್ನಡ
ಕಾವ್ಯ ಕುಸುಮ ಕನ್ನಡ

ಕೃಪೆ: ಎಚ್.ವ್ಹಿ.ಈಟಿ (ಶಿಕ್ಷಕರು), 
ಸಾ.ನರೇಗಲ್ಲ

ಭಾನುವಾರ, ಡಿಸೆಂಬರ್ 18, 2022

ಗೂಗಲ ಕಪ್ಪು ಬಿಳುಪು ಪುಟದ (Google Black & White Pages) 29


Google ನಲ್ಲಿ ಟೈಪ್ ಮಾಡಿ: "logo black" ಮತ್ತು ಎಂಟರ್ ಒತ್ತಿರಿ.  ನಂತರ ಗೂಗಲ್ ಹುಡುಕಾಟ ಫಲಿತಾಂಶಗಳ ಪುಟದ ಸಾಂಪ್ರದಾಯಿಕ ಕಪ್ಪು ಮತ್ತು ಬಿಳಿ ನೋಟವನ್ನು ನೋಡುತ್ತೀರಿ.  ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿನೋಡಿ....

ಗುರುವಾರ, ಡಿಸೆಂಬರ್ 15, 2022

ಅ-ಅಃ ವರನ ಅರ್ಹತೆ

ಮದುವೆ ವಯಸ್ಸಿಗೆ ಬಂದ ಮಗಳನ್ನು ತಂದೆ ಕೇಳುತ್ತಾನೆ

ತಂದೆ   : ವರ ಹೇಗಿರಬೇಕು?
ಮಗಳು :  ದಿಂದ ಅಃ ವರಗೆ ಅರ್ಹತೆ ಇರಬೇಕು.
ತಂದೆ   : ಅಂದರೆ ?
ಮಗಳು :  ರೀತಿ ಹೇಳಿದಳು.

ಸೂಚನೆ: (ಅಃ=ಅಹ), (=ರೂ)

ಪ್ಪ ಅಮ್ಮ ಇರಬಾರದು.

ಸ್ತಿಗೆ ನಾವೆ ಮುಖಂಡರಾಗಬೇಕು.

ಚು ಮಿಂಚು ಶ್ರೀರಾಮಚಂದ್ರನಂತಿರಬೇಕು.

ಶನಂತೆ ಒಪ್ಪಿಗೆ ಕೊಡಬೇಕು.

ನ್ನತ ಸ್ಥಾನ ಪಡೆದಿರಬೇಕು.

ರಿಗೆ ರಾಜನಂತಿರಬೇಕು.

ಷಿವರ್ಯರ ದರ್ಶನ ಪಡೆಯುತ್ತಿರಬೇಕು.

ಪಾಯಿಗಳು ಒಲಿದು ಬರುತ್ತಿರಬೇಕು.

ತ್ತರ ಇರಬೇಕು.

ಕೈಕ ಪುತ್ರನಾಗಿರಬೇಕು.

ಶ್ವರ್ಯವಂತನಾಗಿರಬೇಕು.

ಒಂಟಿಯಾಗಿರಬೇಕು.

 ಅಂದರೆ ಓಡಿಬರಬೇಕು.

ಷಧಾಲಯಕ್ಕೆ ಹೋಗಬಾರದು.

ಅಂ ಚೆಂದ ಇರಬೇಕು.

ಅಃ ಅಹಂಕಾರ ಇರಲಾರದ ಮದುಮಗನು ಬೇಕೆಂದು ಹೇಳಿದಳು.

ಶುಕ್ರವಾರ, ಡಿಸೆಂಬರ್ 09, 2022

ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ (ಮರೆಯಬಾರದು )

      ಹೆಣ್ಣಿನ ಬಗ್ಗೆ ವಿವರಿಸುವುದು ತುಂಬಾ ಕಷ್ಟದ ವಿಷಯ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನುತ್ತಾರೆ. ಒಬ್ಬ ವ್ಯಕ್ತಿಯ ನಾಶಕ್ಕೂ ಹೆಣ್ಣೆ ಕಾರಣ ಕರ್ತಳಾಗಿರುತ್ತಾಳೆ. ಒಮ್ಮೆ ಅಬಲೆ ಅನಿಸಿದರೂ, ಮತ್ತೊಮ್ಮೆ ವಿಶ್ವವನ್ನು ನಿಯಂತ್ರಿಸುವ ಶಕ್ತಿ ಹೆಣ್ಣಗಿದೆ ಎಂದು ಅನಿಸುತ್ತದೆಯಲ್ಲವೇ? ಒಬ್ಬ ಪುರುಷನಿಗೆ ತನ್ನ ಬಾಳಿನಲ್ಲಿ ಉತ್ತಮ ಸ್ತ್ರೀಯರು ದೊರಕಿದರೆ ಅವನೇ ಅದೃಷ್ಟ ಶಾಲಿ. ಆ ಸ್ತ್ರೀಯರಲ್ಲಿ ಅವನ ತಾಯಿ ಹಾಗೂ ಕೈ ಹಿಡಿದವಳು ಪುರುಷನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಗನನ್ನು ಉತ್ತಮ ಹಾದಿಯಲ್ಲಿ ಬೆಳೆಸುವಲ್ಲಿ ತಾಯಿಯ ಮಾತ್ರ ಮಹತ್ವವಾದರೆ, ಅವನನ್ನು ಉತ್ತಮನಾಗಿಯೇ ಉಳಿಸಿಕೊಳ್ಳುವಲ್ಲಿ ಹೆಂಡತಿಯ ಪಾತ್ರ ಪ್ರಮುಖವಾಗಿರುತ್ತದೆ. ಮಾರ್ಚ್ 8. ಅಂತರಾಷ್ಟ್ರೀಯ ಮಹಿಳೆಯರ ದಿನ. ಮಹಿಳೆಯರ ದಿನದ ವಿಶೇಷವಾಗಿ ಪ್ರತೀಯೊಬ್ಬ ಪುರುಷನ ಜೀವನದಲ್ಲಿ ಬರುವ 7 ಪ್ರಮುಖ ಸ್ತ್ರೀಯರ ಬ್ಗಗೆ ಹೇಳಲಾಗಿದೆ

1) ಅಮ್ಮ:-ಅಮ್ಮನ ಪಾತ್ರವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ನಾವು ಬೆಳೆದ ಒಂದೊಂದು ಹಂತದಲ್ಲಿ ಅಮ್ಮನ ಶ್ರಮವಿರುತ್ತದೆ, ತ್ಯಾಗವಿರುತ್ತದೆ. ಅದರಲ್ಲೂ ಸಾಮಾನ್ಯವಾಗಿ ಗಂಡು ಮಕ್ಕಳು ಅಪ್ಪನಿಗಿಂತ ಹೆಚ್ಚಾಗಿ ಅಮ್ಮನನ್ನು ಹಚ್ಚಿಕೊಂಡಿರುತ್ತಾರೆ.

2) ಅಕ್ಕ-ತಂಗಿ :-ಅಕ್ಕ-ತಂಗಿ ಇವರ ಜೊತೆ ಕಳೆದ ಯಾವುದೇ ನೆನಪನ್ನು ಮರೆಯಲು ಸಾಧ್ಯವಿಲ್ಲ. ಸ್ವಂತ ಅಕ್ಕ-ತಂಗಿ ಇಲ್ಲದಿದ್ದರೂ ಚಿಕ್ಕಪ್ಪನ-ದೊಡ್ಡಪ್ಪನ ಮಕ್ಕಳನ್ನು ಅಕ್ಕ -ತಂಗಿ ಎಂದು ಕರೆಯುತ್ತಾ ಅವರ ಜೊತೆ ಆಟ ಆಡಿ ಕಳೆದ ಕ್ಷಣಗಳು ನೆನಪಿನಲ್ಲಿ ಇದ್ದೇ ಇರುತ್ತದೆ.

3) ಅಜ್ಜಿ :-ಪ್ರೀತಿಯ ಅಜ್ಜಿಯನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ತನ್ನ ಬಾಲ್ಯದ ಬಗ್ಗೆ ನೆನೆಸುವಾಗ ಪ್ರತಿಯೊಬ್ಬರಿಗೂ ಅಜ್ಜಿ ನೆನೆಪಿಗೆ ಬಂದೇ ಬರುತ್ತಾಳೆ.

4) ಟೀಚರ್ :-ಯಾವುದೇ ಪುರುಷನನ್ನು ಕೇಳಿ ನೋಡಿ, ಅವರ ನೆನೆಪಿನಲ್ಲಿ ಒಂದಾದರೂ ಅವರ ಪ್ರೀತಿಯ ಟೀಚರ್ ನ ನೆನಪು ಇದ್ದೇ ಇರುತ್ತದೆ.

5) ಮೊದಲ ಪ್ರೇಮ :-ಪುರುಷ ತಾನು ಮೊದಲು ಇಷ್ಟಪಟ್ಟ ಹುಡುಗಿಯನ್ನು ತಮ್ಮ ಜೀವನದ ಕೊನೆಯವರೆಗೂ ನೆನೆಪಿನಲ್ಲಿಟ್ಟು ಕೊಳ್ಳುತ್ತಾರೆ. ಒಂದು ವೇಳೆ ತಾನು ಪ್ರೀತಿಸಿದ ಹುಡುಗಿ ಬಾಳಿನಲ್ಲಿ ದೊರಕದೇ ಹೋದರೆ ಅಥವಾ ಅವಳು ಮೋಸ ಮಾಡಿ ಹೋದರೂ ಕೂಡ ಅವಳನ್ನು ಅವನು ಯಾವತ್ತಿಗೂ ಮರೆಯುವುದಿಲ್ಲ.

6) ಹೆಂಡತಿ :-ಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಒಳ್ಳೆಯ ಹೆಂಡತಿ ಸಿಕ್ಕಿದರೆ ಜೀವನದಲ್ಲಿ ಎಂತಹ ಕಷ್ಟವನ್ನು ಎದುರಿಸುವ ಸಾಮರ್ಥ್ಯ ಪುರುಷನಿಗೆ ಬರುತ್ತದೆ.

7) ಮಗಳು :-ಪ್ರತಿಯೊಬ್ಬ ಉತ್ತಮ ತಂದೆಯೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಾನೆ. ಎಂತಹ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅಪ್ಪ-ಅಮ್ಮನ ಮರ್ಯಾದೆಗೆ ಕುಂದು ಬರದಂತೆ ನನ್ನ ಮಗಳು ನಡೆದುಕೊಳ್ಳಬೇಕೆನ್ನುವುದೇ ಪ್ರತಿಯೊಬ್ಬ ಹೆತ್ತವರ ಆಶಯ.
ಕೃಪೆ: ಮಾ.ಕೃ. ಮಂಜು:

ಶನಿವಾರ, ಡಿಸೆಂಬರ್ 03, 2022

ಶಾಲಿನಿ / ಮೋಹಿನಿ

ರಾತ್ರಿ ದೂರದಲ್ಲಿ ಕಂಡಳು ಸುಂದರವಾದ ಶಾಲಿನಿ || ವ್ಹಾ.. ವ್ಹಾ ||

ರಾತ್ರಿ ದೂರದಲ್ಲಿ ಕಂಡಳು ಸುಂದರವಾದ ಶಾಲಿನಿ || ವ್ಹಾ.. ವ್ಹಾ ||
..

ಆದ್ರ ಅವಳ ಹತ್ತಿರ ಹೋಗಿ ನೋಡಿದಾಗ ಅವಳು ಮೋಹಿನಿ...

ಗುರುವಾರ, ಡಿಸೆಂಬರ್ 01, 2022

ಡಿಸೆಂಬರ್ ತಿಂಗಳ ಮಹತ್ವದ ದಿನಗಳು


ಡಿಸೆಂಬರ್ ೨ : ಭಾರತ ದೇಶವು, ಇಡೀ ಹಜ್ ಪ್ರಕ್ರಿಯೆಯನ್ನು ಡಿಜಿಟಲ್ ರೂಪದಲ್ಲಿಯೇ ಮಾಡಿದ ವಿಶ್ವದ ಮೊದಲ ದೇಶವೆಂದೆನಿಸಿತು.

ಡಿಸೆಂಬರ್ ೪ : ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆ
ಡಿಸೆಂಬರ್ ೧೧ : ಶಸ್ತ್ರಾಸ್ತ್ರ (ತಿದ್ದುಪಡಿ) ಮಸೂದೆ 2019 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಅಕ್ರಮವಾಗಿ ಯಾರಾದರೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಅವರಿಗೆ ಜೀವಾವಧಿ ಶಿಕ್ಷೆಯನ್ನುನೀಡುತ್ತದೆ. 

ಡಿಸೆಂಬರ್ ೧೩ :ಯುನೈಟೆಡ್ ಕಿಂಗ್ಡಮ್ ನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಮರು ಆಯ್ಕೆ
ಡಿಸೆಂಬರ್ ೧೭: ಭೂತಾನ್ದಲ್ಲಿ ರಾಷ್ಟ್ರೀಯ ದಿನಾಚರಣೆ.  

೧೮೧೯ - ಸಿಮೋನ್ ಬೊಲೀವಾರ್ಅನು ಗ್ರಾನ್ ಕೊಲಂಬಿಯ ಪ್ರದೇಶದಸ್ವಾತಂತ್ರ್ಯವನ್ನು ಘೋಷಿಸಿದ. 
೧೯೦೩ - ವ್ರೈಟ್ ಸಹೋದರರು ತಮ್ಮ ಮೊದಲ ವಿಮಾನಯಾನವನ್ನು (ಚಿತ್ರಿತ) ಮಾಡಿದರು. 

೧೯೬೧ - ಭಾರತದ ಸೇನೆಯು ಆಪರೇಶನ್ ವಿಜಯದಲ್ಲಿ ಗೋವರಾಜ್ಯವನ್ನು ಪೋರ್ಚುಗಲ್ನಿಂದ ಕಸಿದುಕೊಂಡಿತು. 

೧೯೬೭ - ಆಸ್ಟ್ರೇಲಿಯದ ಪ್ರಧಾನಮಂತ್ರಿ ಹರಾಲ್ಡ್ ಹೊಲ್ಟ್ಸಮುದ್ರದಲ್ಲಿ ಈಜುವಾಗ ಮರೆಯಾದನು. 

ಜನನಗಳು  : ಅಲೆಗ್ಜಾಂಡರ್ ಅಗಾಸಿಜ್; 
ಮರಣಗಳು : ಸಿಮೊನ್ ಬೊಲಿವಾರ್.


ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)


ಗುರುವಾರ, ನವೆಂಬರ್ 24, 2022

ಸ್ತ್ರೀ💃 - ಪುರುಷ🕺

ಕಾರ್ಯೆಷು ದಾಸಿ, ಕರಣೇಶು ಮಂತ್ರಿ,
ಭೋಜನೇಶು ಮಾತಾ, ಶಯನೇಶು ರಂಭಾ,
ರೂಪೇಶು ಲಕ್ಷ್ಮೀ, ಕ್ಷಮಯಾಧರಿತ್ರಿ,
ಸತ್ಧರ್ಮ ಯುಕ್ತಾ, ಕುಲಧರ್ಮ ಪತ್ನೀ.

ಈ ಶ್ಲೋಕವನ್ನು ನೀವೆಲ್ಲರೂ ಕೇಳಿರುತ್ತೀರಿ.

ಸ್ತ್ರೀ ಹೇಗಿರಬೇಕೆನ್ನುವುದೇ ಅಲ್ಲ
ಪುರುಷ ಕೂಡಾ ಹೇಗಿರಬೇಕೆನ್ನುವುದು
&
ಪುರುಷ ಗುಣಗಾನದ ಒಂದು ಶ್ಲೋಕ ಧರ್ಮ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಾರ್ಯೇಷು ಯೋಗೀ, ಕರಣೇಷು ದಕ್ಷ:,
ರೂಪೇ ಚ ಕೃಷ್ಣ:, ಕ್ಷಮಯಾ ತು ರಾಮಃ:,
ಭೋಜ್ಯೇಷು ತೃಪ್ತಃ:, ಸುಖ ದುಃಖ ಮಿತ್ರಂ,
ಷಟ್ಕರ್ಮಯುಕ್ತ:, ಖಲು ಧರ್ಮನಾಥ: .



ಶುಕ್ರವಾರ, ನವೆಂಬರ್ 18, 2022

ಗೂಗಲ ವಿಜಾರ್ಡ ಓಜಿ ಪುಟದ (Google wizard of oz Pages) 27


     Google ನಲ್ಲಿ ಟೈಪ್ ಮಾಡಿ: "wizard of oz" ಮತ್ತು ಎಂಟರ್ ಒತ್ತಿರಿ. ನಂತರ ಹುಡುಕಾಟ ಫಲಿತಾಂಶಗಳ ಬಲಭಾಗದಲ್ಲಿರುವ ಹೊಳೆಯುವ ಕೆಂಪು ಬೂಟುಗಳ ಮೇಲೆ ಕ್ಲಿಕ್ ಮಾಡಿ. ಮೊದಲನೆಯದಾಗಿ, ನೀವು ಬ್ಯಾರೆಲ್ ರೋಲ್ ಅನ್ನು ನೋಡುತ್ತೀರಿ ಮತ್ತು ನಂತರ ಗೂಗಲ್ ಹುಡುಕಾಟ ಫಲಿತಾಂಶಗಳ ಪುಟದ ಸಾಂಪ್ರದಾಯಿಕ ಕಪ್ಪು ಮತ್ತು ಬಿಳಿ ನೋಟವನ್ನು ನೋಡುತ್ತೀರಿ. ನಂತರ ಬಿರುಗಾಳಿಯ ಚಿತ್ರವನ್ನು ಕ್ಲಿಕ್‌ ಮಾಡಿದ ನಂತರ ಮೊದಲಿನ ಸ್ಥಿತಿಗೆ ಬರುತ್ತದೆ.

ಮಂಗಳವಾರ, ನವೆಂಬರ್ 15, 2022

ಯಾರು ಹೆಚ್ಚು ಹುಡುಗ / ಹುಡುಗಿ ?

  • Facebook,
  • whatsapp,
  • Twitter,
  • Telegram,
  • G-mail,
  • Yahoo mail,
  • Apple,
  • IMO,
  • Benz,
  • BMW,
  • Microsoft,
  • TV,
  • Radio, 
  • Computer,
  • Phone,
  • Electricity....

                     ಎಲ್ಲವನೂ ಕಂಡುಹಿಡಿದವರು ಹುಡುಗರೇ..

         ಈ ಹುಡುಗಿಯರು 91, 92, 93, 94, 95, 96, 97, 98, 99 % ವರೆಗೂ ಅಂಕಗಳನ್ನು(marks) ತಗೊಂಡ ಏನು  ಮಾಡ್ತಾರೆ ?
(ಹಾಸ್ಯಕ್ಕೆ ಯಾರು ನೋಂದಕೊಳ್ಳಬೇಡಿ...)

ಬುಧವಾರ, ನವೆಂಬರ್ 09, 2022

ನಿಮಗೆ ಗೋತ್ತೆ ?

  1. ಬೆನ್ನು ಕೆಳಗೆ ಮಾಡಿ ಮಲಗುವ ಏಕೈಕ ಪ್ರಾಣಿಯೆಂದರೆ - ಮಾನವ.
  2. ಹೆಣ್ಣು ಸೊಳ್ಳೆ ಒಂದು ವರ್ಷದಲ್ಲಿ ೧೫,೦೦,೦೦,೦೦೦ ಸೊಳ್ಳೆಗಳನ್ನು ಉತ್ಪತ್ತಿ ಮಾಡಬಲ್ಲದು.
  3. ಒಂದು ಅಂಗುಲದಷ್ಟು ಮಣ್ಣು ನಿರ್ಮಾಣವಾಗಲು ೫೦೦ ರಿಂದ ೧೫೦೦ ವರ್ಷಗಳು ಬೇಕಾಗುತ್ತವೆ.
  4. ಮಾನವನ ಮೂತ್ರ ಪಿಂಡದಲ್ಲಿ ಪ್ರತಿ ನಿಮಿಷಕ್ಕೆ ೧೨೦ ಮಿ.ಲೀ. ಮೂತ್ರ ತಯಾರಾಗುತ್ತದೆ.
  5. ಸೂರ್ಯನು ತಿರುಗುವ ವೇಗದಿಂದಾಗಿ ಯಾವುದೇ ಸೂರ್ಯಗ್ರಹಣ ೭ ನಿಮಿಷ ೫೮ ಸೆಕೆಂಡ್ ಗಿಂತ ಹೆಚ್ಚು ಕಾಲ ಇರಲಾರದು.
  6. ಮಾನವನ ಮೂತ್ರಜನಕಾಂಗವು ಒಂದು ದಿನದಲ್ಲಿ ಸುಮಾರು ಎರಡು ಸಾವಿರ ಲೀಟರಿನಷ್ಟು ರಕ್ತವನು ಶುದ್ಧೀಕರಿಸುತ್ತದೆ.
  7. ಪಾದರಸ ದ್ರವರೂಪದಲ್ಲಿರುವ ಏಕೈಕ ಲೋಹ.
  8. ನೀರಿನ ಒಂದು ಹನಿಯಲ್ಲಿ ೬,೦೦೦,೦೦೦,೦೦೦,೦೦೦,೦೦೦,೦೦೦,೦೦೦ ಅಣುಗಳಿರುತ್ತವೆ.
  9. ಇರುವೆಗಳಲ್ಲಿ ಫಾರ್ಮಿಕ್ ಆಮ್ಲವಿರುವುದರಿಂದ ಅವುಗಳು ಕಚ್ಚಿದ್ದಾಗ ಉರಿಯುಂಟಾಗುತ್ತದೆ.
  10. ಅತಿಯಾಗಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಪದಾರ್ಥ - ಸಲ್ಫರ್ ಡೈ ಆಕ್ಸೈಡ್
  11. ಪ್ರಾಚೀನ ಲಿಪಿಗಳನ್ನು ಓದುವ ಶಾಸ್ತ್ರವನ್ನು "ಪಾಲಿಯೋಗ್ರಫಿ" ಎನ್ನುತ್ತಾರೆ.

ಮಂಗಳವಾರ, ನವೆಂಬರ್ 01, 2022

ನವಂಬರ್ ತಿಂಗಳ ಮಹತ್ವದ ದಿನಗಳು

ನವೆಂಬರ್ ೧ : ೧೯೫೬ರಲ್ಲಿ ಕರ್ನಾಟಕ ರಾಜ್ಯದ ಸ್ಥಾಪನೆಯ ಆಚರಣೆ: ಕರ್ನಾಟಕ ರಾಜ್ಯೋತ್ಸವ.

ನವೆಂಬರ್ ೩ : ೧೯೫೭ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ ಲೈಕಾ ನಾಯಿಯನ್ನು ಹೊತ್ತ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೨ ಗಗನನೌಕೆಯ ಉಡಾವಣೆ.


ನವೆಂಬರ್ ೭ : ೧೯೧೭ರಲ್ಲಿ ವ್ಲಾಡಿಮಿರ್ ಲೆನಿನ್ ನೇತೃತ್ವದಲ್ಲಿ ರಷ್ಯಾದ ಕ್ರಾಂತಿಯ ಪ್ರಾರಂಭ.


ನವೆಂಬರ್ ೮ : ಕಥಕ್ ಶಾಸ್ತ್ರೀಯ ನೃತ್ಯಗಾತಿ ಸಿತಾರಾದೇವಿ ಅವರ ಜನ್ಮದಿನ.


ನವೆಂಬರ್ ೯ : ಚಲಚಿತ್ರ ಮತ್ತು ರಂಗ ನಟ ಶಂಕರನಾಗ್ ಅವರ ಜನ್ಮದಿನ.


ನವೆಂಬರ್ ೧೧ : ಅನಸೂಯಾ ಸಾರಾಭಾಯಿ ಅವರ ಜನ್ಮದಿನ.


ನವೆಂಬರ್ ೧೪ : ಮಕ್ಕಳ ದಿನಾಚರಣೆ:(ಜವಾಹರಲಾಲ್ ನೆಹರು ಜನ್ಮದಿನ).


ನವೆಂಬರ್ ೧೮ : ವಿಶ್ವ ಮೂರ್ಛೆ ರೋಗ ದಿನ.


ನವೆಂಬರ್ ೧೯ : ವಿಶ್ವ ಶೌಚಾಲಯ/ನೈರ್ಮಲ್ಯ ದಿನ, ಪೌರದಿನ, ಅಂತಾರಾಷ್ಟ್ರೀಯ ಪುರುಷರ ದಿನ, ಇಂದಿರಾಗಾಂಧಿ ಹುಟ್ಟಿದ ದಿನ.


ನವೆಂಬರ್ ೨೧ : ೧೯೬೨ರಲ್ಲಿ ಭಾರತ-ಚೀನ ಯುದ್ಧದ ಅಂತ್ಯ.


ನವೆಂಬರ್ ೨೨ : ಕಾನೂನು ಸಾಕ್ಷರತಾ ದಿನ.

ನವೆಂಬರ್ ೨೪ : ೧೮೫೯ರಲ್ಲಿ ಜೀವವಿಕಾಸವಾದವನ್ನು ಘೋಷಿಸಿದ ಚಾರ್ಲ್ಸ್ ಡಾರ್ವಿನ್ ಅವರ ದ ಆರಿಜಿನ್ ಆಫ್ ಸ್ಪೀಶೀಸ್ ಪುಸ್ತಕದ ಪ್ರಕಟಣೆ.


ನವೆಂಬರ್ ೨೫ : ೧೯೯೨ರಲ್ಲಿ ಚೆಕೊಸ್ಲೊವೇಕಿಯಾ ಒಡೆದು ಚೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ ದೇಶಗಳಾಗಲು ನಿರ್ಧರಿಸಿತು.


ನವೆಂಬರ್ ೨೫ : ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ.


ನವೆಂಬರ್ ೨೬ : ಕನಕದಾಸ ಜಯಂತಿ (ಚಿತ್ರಿತ).


ನವೆಂಬರ್ ೨೯ : ಅಂತಾರಾಷ್ಟ್ರೀಯ ಸಾಮರಸ್ಯ ದಿನ


ನವೆಂಬರ್ ೨೯ : ಮಲಯಾಳಂ ಕವಿ ಅಕ್ಕಿತಂ ಅಚ್ಯುತನ್ ನಾಯರ್ ೫೫ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವೆಂಬರ್ ೩೦ : ರಾಷ್ಟ್ರೀಯ ವಿಪತ್ತು ನಿಗ್ರಹ ದಿನ.



ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

ಬಾರಿಸು ಕನ್ನಡ ಡಿಂಡಿಮವ... 1


ಸೋಮವಾರ, ಅಕ್ಟೋಬರ್ 31, 2022

ಕನ್ನಡವೆಂದರೆ ಉಸಿರು

ಮಾತು ಆರಂಭಿಸಿದ ಮೊದಲಿನಿಂದ
ಮಾತು ನಿಲ್ಲಿಸುವ ಕೊನೆವರೆಗೂ
ಕನ್ನಡವೆಂದರೆ ಉಸಿರು.

ರಕ್ತದೊಂದಿಗೆ ಬೆರೆತುಹೋದ
ಹೃದಯದೊಂದಿಗೆ ಮಿಳಿತವಾದ
ಕನ್ನಡವೆಂದರೆ ಉಸಿರು

ಸಾವಿರಾರು ಭಾಷೆ ಜಗದಲ್ಲಿದ್ದರೂ
ತಾಯಿ ಭಾಷೆ ತವರು ಭಾಷೆ
ಕನ್ನಡವೆಂದರೆ ಉಸಿರು

ದೇಶ ವೇಷ ಭಾಷೆ ಬದಲಿಸಿದರೇನು?
ಹೃದಯಭಾಷೆ ಮರೆಯಾಗುವುದೇನು?
ಕನ್ನಡವೆಂದರೆ ಉಸಿರು

ಹೆತ್ತ ತಾಯಿ ಹೊತ್ತ ಭೂಮಿ
ಸ್ವರ್ಗಕ್ಕಿಂತ ಮಿಗಿಲಲ್ಲವೇನು?
ಕನ್ನಡವೆಂದರೆ ಉಸಿರು.

ಶುಕ್ರವಾರ, ಅಕ್ಟೋಬರ್ 28, 2022

ಉಪ್ಪಿನ ಋಣ ಕವನ ತಿಳಿಯಿರಿ

🧂𝕤═𝕡═𝕟═𝟛═𝟙═𝟠═𝟟🧂(8/8)
ಕೃಪೆ:  ಡಾ. ಅಶೋಕಕುಮಾರ
ಮನಸಿನಲ್ಲಿದ್ದರೆ ಸ್ವಾರ್ಥಗುಣ
ತೃಣಕ್ಕೆ ಸಮಾನ ನೀ ಗಳಿಸಿದ ಹಣ
ನಿಸ್ವಾರ್ಥಗುಣಕ್ಕೆ ಮೆಚ್ಚುವುದು ದೇವಗಣ.

ಪೂರ್ಣ ಕವಿತೆಗಾಗಿ  https://t.me/spn3187/41605

ಮಂಗಳವಾರ, ಅಕ್ಟೋಬರ್ 18, 2022

ಗೂಗಲ ಪುಟದ ಕ್ಯಾಲ್ಕೋಲೆಟರ್‌ (Google Calculator Pages) 26

Google ನಲ್ಲಿ ಟೈಪ್ ಮಾಡಿ: "Calculator" ಮತ್ತು ಎಂಟರ್ ಒತ್ತಿರಿ. ಆಗ ನಿಮಗೆ ಆಧುನಿಕ ಯುಗದ ಕ್ಯಾಲ್ಕೋಲೆಟರ್‌ ಕಾಣುತ್ತದೆ. ನಂತರ ಅಲ್ಲಿರುವ ಹುಡುಕಾಟ ಫಲಿತಾಂಶದ ಕ್ಯಾಲ್ಕೋಲೆಟರ್‌ ಬರುತ್ತವೆ. ಅಲ್ಲಿ ನಿಮಗೆ ಬೇಕಾದ ಲೆಕ್ಕವನ್ನು ಮಾಡಿ, ಉತ್ತರವನ್ನು ನೋಡುತ್ತೀರಿ..

ಭಾನುವಾರ, ಅಕ್ಟೋಬರ್ 09, 2022

ಮಹಾ ಭಾರತದ 18 ಪರ್ವಗಳು

1.  ಆದಿ ಪರ್ವ: ಪರಿಚಯ, ವಿಶ್ವ ಸೃಷ್ಟಿ ವಿವರ ಸೃಷ್ಟಿ ಮತ್ತು ಮಹಾಭಾರತ, ಹಿನ್ನೆಲೆ, ಪಾಂಡವ
                      ಮತ್ತು ಕೌರವರ ಜನನ ಹಾಗೂ ಬೆಳವಣಿಗೆ
2.  ಸಭಾ ಪರ್ವಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ
3.  ಅರಣ್ಯಕ ಪರ್ವ: ಹನ್ನೆರಡು ವರ್ಷದ ವನವಾಸ
4.  ವಿರಾಟ ಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ
5.  ಉದ್ಯೋಗ ಪರ್ವ: ಯುದ್ಧದ ತಯಾರಿ
6.  ಭೀಷ್ಮ ಪರ್ವ: ಯುದ್ಧ ಆರಂಭಭೀಷ್ಮ ಕೌರವ ಸೇನಾನಿ ಕೃಷ್ಣನಿಂದ ಭಗವದ್ಗೀತೆ ಉಪದೇಶ
7.  ದ್ರೋಣ ಪರ್ವ: ಯುದ್ಧದ ಮುಂದುವರಿಕೆದ್ರೋಣ ಸೇನಾಧಿಪತ್ಯದಲ್ಲಿ
8.  ಕರ್ಣ ಪರ್ವ: ಕರ್ಣ ಸೇನಾಧಿಪತ್ಯ, ಕರ್ಣಾವಸಾನ
9.  ಶಲ್ಯ ಪರ್ವ: ಶಲ್ಯನ ಸೇನಾಧಿಪತ್ಯ
10.  ಸೌಪ್ತಿಕ ಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ
11.  ಸ್ತ್ರೀ ಪರ್ವ: ಗಾಂಧಾರಿಯ ವಿಲಾಪ
12.  ಶಾಂತಿ ಪರ್ವಯುಧಿಷ್ಠಿರ ಪಟ್ಟಾಭಿಷೇಕಭೀಷ್ಮನಿಂದ ಸಲಹೆ
13.  ಅನುಶಾಸನ ಪರ್ವ: ಭೀಷ್ಮ ಕೊನೆಯ ಮಾತುಗಳು
14.  ಅಶ್ವಮೇಧಿಕ ಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ
15.  ಆಶ್ರಮವಾಸಿಕ ಪರ್ವ: ಧೃತರಾಷ್ಟ್ರಗಾಂಧಾರಿಕುಂತಿಯರ ಆಶ್ರಮವಾಸ, ಕೊನೆಗೆ ಮರಣ
16.  ಮೌಸಲ ಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")
17.  ಮಹಾಪ್ರಸ್ತಾನಿಕ ಪರ್ವ: ಪಾಂಡವರ ಮರಣದ ಮೊದಲ ಭಾಗ
18.  ಸ್ವರ್ಗಾರೋಹಣ ಪರ್ವ: ಪಾಂಡವರ ಸ್ವರ್ಗಾರೋಹಣ..

ಮಂಗಳವಾರ, ಅಕ್ಟೋಬರ್ 04, 2022

ನವರಾತ್ರಿಗಳು ಯಾಕೆ ಇದ್ದಾವೆ?

       ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕೂ ಮತ್ತು ಇಂದಿನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳು ನಮಗೆ ಕಂಡುಬರುತ್ತವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂಬ ಎರಡು ನವರಾತ್ರಿಗಳನ್ನು ನಾವು ಆಚರಿಸುತ್ತೇವೆ.

        ಈ ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತ ಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು (ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.

ಸೋಮವಾರ, ಅಕ್ಟೋಬರ್ 03, 2022

ಕಸರತ್ತು / ಆಪತ್ತು

ಅಮ್ಮ ಕೊಟ್ಟ ತುತ್ತು ದೇಹಕ್ಕೆ ಕಸರತ್ತು || ವ್ಹಾ.. ವ್ಹಾ.. ||
ಅಮ್ಮ ಕೊಟ್ಟ ತುತ್ತು ದೇಹಕ್ಕೆ ಕಸರತ್ತು || ವ್ಹಾ.. ವ್ಹಾ.. ||
..
ಹುಡುಗಿ ಕೊಟ್ಟ ಮುತ್ತು ಜೀವಕ್ಕೆ ಆಪತ್ತು..

ಶನಿವಾರ, ಅಕ್ಟೋಬರ್ 01, 2022

ಅಕ್ಟೋಬರ್ ತಿಂಗಳ ಮಹತ್ವದ ದಿನಗಳು

ಅಕ್ಟೋಬರ್ ೧: ವಿಶ್ವ ವೃದ್ಧರ ದಿನ, ವನ್ಯಜೀವಿ ಸಪ್ತಾಹ ದಿನ, ವಿಶ್ವ ಸಂಗೀತ ದಿನ, ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತ ದಾನ ದಿನ.

ಅಕ್ಟೋಬರ್ ೨ : ವಿಶ್ವ ಸಸ್ಯಾಹಾರಿಗಳ ದಿನ, ಗಾಂಧೀಜಿಯವರ ಜನ್ಮದಿನಾಚರಣೆ, 
ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ. 

ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿ ದೇಶದ ಪುನರೇಕೀಕರಣ, ವಿಶ್ವ ಪ್ರಾಕೃತಿಕ ದಿನ.

ಅಕ್ಟೋಬರ್ ೪ : ೧೯೫೭ರಲ್ಲಿ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲ ಕೃತಕ ಉಪಗ್ರಹವಾಯಿತು, ವಿಶ್ವ ಪ್ರಾಣಿದಯಾ / ಪ್ರಾಣಿ ಕ್ಷೇಮಾಭಿವೃದ್ಧಿ ದಿನ.

ಅಕ್ಟೋಬರ್ ೫ : ವಿಶ್ವ ಹವ್ಯಾಸ ದಿನ.

ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್‌ನ ಸೇನೆ ಇಸ್ರೇಲ್ದೇಶವನ್ನು ಪ್ರವೇಶಿಸಿ ಯೊಮ್ ಕಿಪ್ಪೂರ್ ಯುದ್ಧಪ್ರಾರಂಭವಾಯಿತು. 

ಅಕ್ಟೋಬರ್ ೮ : ವಾಯುಪಡೆ ದಿನ.

ಅಕ್ಟೋಬರ್ ೯ : ವಿಶ್ವ ಅಂಚೆ ದಿನ. 

ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಮ ಕಾರಂತರ ಜನನ, ವಿಶ್ವ ಮರಣದಂಡನೆ ವಿರೋಧಿ ದಿನ.

ಅಕ್ಟೋಬರ್ ೧೨ : ೧೪೯೨ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.

ಅಕ್ಟೋಬರ್ ೧೪ : ವಿಶ್ವ ಗುಣಮಟ್ಟ ದಿನ.

ಅಕ್ಟೋಬರ್ ೧೬ : ವಿಶ್ವ ಆಹಾರ ದಿನ.

ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಶ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಯ ಸ್ಥಾಪನೆ.

ಅಕ್ಟೋಬರ್ ೧೯ :‍ ನೊಬೆಲ್ ಪ್ರಶಸ್ತಿ ವಿಜೇತ ಡಾ. ಸುಬ್ರಮಣ್ಯಂ ಚಂದ್ರಶೇಖರ್ (1910-1995) ಅವರ ಜನ್ಮದಿನ.

ಅಕ್ಟೋಬರ್ ೨೧ : ಪೋಲೀಸ್ ಹುತಾತ್ಮರ ದಿನ.

ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ (ವಿಶ್ವಸಂಸ್ಥೆ)ಯ ಸ್ಥಾಪನೆ. 

ಅಕ್ಟೋಬರ್ ೨೯ : ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿ ಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.

ಅಕ್ಟೋಬರ್ ೩೦ : ವಿಶ್ವ ಉಳಿತಾಯ / ಮಿತವ್ಯಯ ದಿನ.

ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ, ೧೯೮೪ರಲ್ಲಿ ಇಂದಿರಾ ಗಾಂಧಿಯ ಹತ್ಯೆ.

ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

ಶುಕ್ರವಾರ, ಸೆಪ್ಟೆಂಬರ್ 09, 2022

ನಮ್ಮ ನಂಬಿಕೆಗಳು 21

೨೧) ಉತ್ತರಕ್ಕೆ ತಲೆ ಇಟ್ಟು ಏಕೆ ಮಲಗ ಬಾರದು? ಇದರ ಹಿಂದೆ ಒಂದು ಕಟ್ಟು ಕತೆಯಿದೆ, ಅದೇನೆಂದರೆ ಉತ್ತರಕ್ಕೆ ತಲೆ ಇಟ್ಟು
     ಮಲಗುವುದರಿಂದ ದೆವ್ವ ಅಥವಾ ಭೂತಗಳನ್ನು ಆಹ್ವಾನ ನೀಡಿದಂತೆ ಎಂಬುದು. ಆದರೆ ವಿಜ್ಞಾನವು ಹೇಳುವುದೇನೆಂದರೆ ಮಾನವ ದೇಹಕ್ಕೆ ತನ್ನದೇ ಆದ ಕಾಂತ ಕ್ಷೇತ್ರವು ಇರುತ್ತದೆ (ಇದನ್ನು ಹೃದಯದ ಕಾಂತ ಅಥವಾ ಮ್ಯಾಗ್ನೆಟಿಕ್ ಕ್ಷೇತ್ರ ಎಂದು ಸಹ ಕರೆಯುತ್ತಾರೆ. ಏಕೆಂದರೆ ರಕ್ತ ಪರಿಚಲನೆಯ ಕಾರಣವಾಗಿ) ಮತ್ತು ಭೂಮಿಯೇ ಒಂದು ದೊಡ್ಡ ಸೂಜಿಗಲ್ಲು ಅಥವಾ ಮ್ಯಾಗ್ನೆಟ್. ಯಾವಾಗ ನಾವು ಉತ್ತರಕ್ಕೆ ತಲೆ ಇಟ್ಟು ಮಲಗುತ್ತೇವೆಯೋ, ಆಗ ನಮ್ಮ ದೇಹದಲ್ಲಿನ ಕಾಂತ ಕ್ಷೇತ್ರವು ಸಮತೋಲನವನ್ನು ಕಳೆದು ಕೊಳ್ಳುತ್ತದೆ. ಇದರಿಂದ ಮುಂದೆ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಈ ಕಾಂತ ಕ್ಷೇತ್ರದ ಸಮತೋಲನವನ್ನು ಕಾಯ್ದು ಕೊಳ್ಳುವುದು ಅತ್ಯಗತ್ಯ. ಇದರ ಜೊತೆಗೆ ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ಕಬ್ಬಿಣಾಂಶವಿರುತ್ತದೆ. ನಾವು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದರಿಂದ ಆ ಕಾಂತ ಕ್ಷೇತ್ರದಿಂದ ಆಕರ್ಷಣೆಯಾಗುವ ನಮ್ಮ ದೇಹದ ಕಬ್ಬಿಣಾಂಶವು ತಲೆಯಲ್ಲಿ ಶೇಖರಗೊಳ್ಳುತ್ತದೆ. ಇದರಿಂದ ತಲೆನೋವು , ಅಲ್ಜೀಮರ್ ಕಾಯಿಲೆ, ಪ್ರಜ್ಞಾ ಶೂನ್ಯತೆ ( ಅರಿವಿನ ಕೊರತೆ), ಪಾರ್ಕಿನ್‍ಸನ್ ಕಾಯಿಲೆ ಮತ್ತು ಮೆದುಳಿನ ಕಾರ್ಯ ಕ್ಷೀಣಿಸುವ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಗುರುವಾರ, ಸೆಪ್ಟೆಂಬರ್ 01, 2022

ಸೆಪ್ಟಂಬರ್ ತಿಂಗಳ ಮಹತ್ವದ ದಿನಗಳು

ಸೆಪ್ಟೆಂಬರ್ ೫ : ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ.
ಸೆಪ್ಟೆಂಬರ್ ೬ : ೧೫೨೨ರಲ್ಲಿ ಫೆರ್ಡಿನೆಂಡ್ ಮೆಗಲನ್ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.
ಸೆಪ್ಟೆಂಬರ್ ೮ : 1) ಯೇಸುಕ್ರಿಸ್ತನ ತಾಯಿ ಮರಿಯಾ ಮಾತೆಯ ಜನನೋತ್ಸವ.
                      2) ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬ.
' ಪೂರ್ಣಚಂದ್ರ ತೇಜಸ್ವಿ'
ಸೆಪ್ಟೆಂಬರ್ ೧೧ :೨೦೦೧ರಲ್ಲಿಅಮೇರಿಕ ದೇಶದನ್ಯೂ ಯಾರ್ಕ್ ನಗರದವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಗಳ ಮೇಲೆ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ 
.
ಸೆಪ್ಟೆಂಬರ್ ೧೪ : ೧೯೫೯ರಲ್ಲಿ ಸೋವಿಯೆಟ್ ಒಕ್ಕೂಟ ಉಡಾವಣೆ ಮಾಡಿದ ಲೂನ ೨ ಗಗನನೌಕೆ ಚಂದ್ರನನ್ನು ತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು.
ಸೆಪ್ಟೆಂಬರ್ ೧೫ : ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ ಎಂಜಿನಿಯರುಗಳ ದಿನಾಚರಣೆ
ಸೆಪ್ಟೆಂಬರ್ ೨೩ : ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ೧೯೬೫ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಕದನ ವಿರಾಮ.
ಸೆಪ್ಟೆಂಬರ್ ೨೮ : ಭಾರತದ ಸ್ವಾತಂತ್ರ್ಯ ಹೋರಾಟಗಾರಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನ.
ಸೆಪ್ಟೆಂಬರ್ ೩೦ : 1) ಯಹೂದಿ ಧರ್ಮದಲ್ಲಿ ರೋಷ್ ಹಶಾನ್ನ ಹಬ್ಬ. 
                        2)  ವಿಶ್ವ ಹೃದಯ ದಿನ
ಕೃಪೆ: ಕನ್ನಡದ ವಿಕಿಪೀಡಿಯ 
(ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

ಬುಧವಾರ, ಆಗಸ್ಟ್ 31, 2022

ವಿನಾಯಕ


🙂🚥═𝕤𝕡𝕟𝟛𝟙𝟠𝟟═🚥🙂

ನನ್ನಲಿ ಕನ್ನಡ
ನಿನ್ನಲ್ಲಿ ಕನ್ನಡ
ಅವರಲ್ಲಿ ಕನ್ನಡ
ಇವರಲ್ಲಿ ಕನ್ನಡ

ಕೃಪೆ: ಎಚ್.ವ್ಹಿ.ಈಟಿ

ಮಂಗಳವಾರ, ಆಗಸ್ಟ್ 30, 2022

ಏಕೀಕೃತ ಪಾವತಿ ವ್ಯವಸ್ಥೆ (Unified Payments Interface)

ಆನ್ಲೈನ್ನಲ್ಲಿ ನಡೆಯುವಂತಹ ಹಣದ ವ್ಯವಹಾರಗಳನ್ನು ಮತ್ತಷ್ಟು ಸುಲಭ ಮಾಡುವ ಉದ್ದೇಶದಿಂದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. 

ಏಕೀಕೃತ ಪಾವತಿ ವ್ಯವಸ್ಥೆ (Unified Payments Interface) 


ಪರಿಚಯಿಸಲಾದ ದಿನಾಂಕ: ಏಪ್ರಿಲ್ 11, 2016; 3 ವರ್ಷಗಳ ಹಿಂದೆ

ಮಾಲೀಕರು: ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ

ಮಾರುಕಟ್ಟೆ: ಭಾರತ

ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಎನ್ನುವುದು ಬಹು ಬ್ಯಾಂಕ್ ಖಾತೆಗಳನ್ನು ಒಂದೇ ಮೊಬೈಲ್ ಅಪ್ಲಿಕೇಶನ್‌ಗೆ (ಯಾವುದೇ ಭಾಗವಹಿಸುವ ಬ್ಯಾಂಕ್‌ನ) ಪವರ್ ಮಾಡುವ ವ್ಯವಸ್ಥೆಯಾಗಿದ್ದು, ಹಲವಾರು ಬ್ಯಾಂಕಿಂಗ್ ವೈಶಿಷ್ಟ್ಯಗಳನ್ನು ವಿಲೀನಗೊಳಿಸುವುದು, ತಡೆರಹಿತ ನಿಧಿ ರೂಟಿಂಗ್ ಮತ್ತು ವ್ಯಾಪಾರಿ ಪಾವತಿಗಳನ್ನು ಒಂದು ಹುಡ್‌ಗೆ ಸೇರಿಸುತ್ತದೆ. ಇದು "ಪೀರ್ ಟು ಪೀರ್" ಸಂಗ್ರಹಣೆ ವಿನಂತಿಯನ್ನು ಸಹ ಪೂರೈಸುತ್ತದೆ, ಅದನ್ನು ಅವಶ್ಯಕತೆ ಮತ್ತು ಅನುಕೂಲಕ್ಕೆ ಅನುಗುಣವಾಗಿ ನಿಗದಿಪಡಿಸಬಹುದು ಮತ್ತು ಪಾವತಿಸಬಹುದು.

ಮೇಲಿನ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು, NPCI 21 ಸದಸ್ಯ ಬ್ಯಾಂಕ್‌ಗಳೊಂದಿಗೆ ಪ್ರಾಯೋಗಿಕ ಉಡಾವಣೆ ನಡೆಸಿತು. ಮುಂಬೈನಲ್ಲಿ RBI ಗವರ್ನರ್ ಡಾ. ರಘುರಾಮ್ ಜಿ ರಾಜನ್ ಅವರು ಏಪ್ರಿಲ್ 11, 2016 ರಂದು ಪ್ರಾಯೋಗಿಕ ಉಡಾವಣೆ ಮಾಡಿದರು. ಬ್ಯಾಂಕ್‌ಗಳು ತಮ್ಮ UPI ಸಕ್ರಿಯಗೊಳಿಸಿದ ಅಪ್ಲಿಕೇಶನ್‌ಗಳನ್ನು 25 ಆಗಸ್ಟ್, 2016 ರಿಂದ Google Play ಸ್ಟೋರ್‌ನಲ್ಲಿ ಅಪ್‌ಲೋಡ್ ಮಾಡಲು ಪ್ರಾರಂಭಿಸಿವೆ.

ಇದು ಹೇಗೆ ಅನನ್ಯವಾಗಿದೆ?
  • 24*7 ಮತ್ತು 365 ದಿನಗಳಲ್ಲಿ ಗಡಿಯಾರದ ಸುತ್ತ ಮೊಬೈಲ್ ಸಾಧನದ ಮೂಲಕ ತಕ್ಷಣದ ಹಣ ವರ್ಗಾವಣೆ.
  • ವಿವಿಧ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಲು ಒಂದೇ ಮೊಬೈಲ್ ಅಪ್ಲಿಕೇಶನ್.
  • ಏಕ ಕ್ಲಿಕ್ 2 ಅಂಶದ ದೃಢೀಕರಣ - ನಿಯಂತ್ರಕ ಮಾರ್ಗಸೂಚಿಗಳೊಂದಿಗೆ ಜೋಡಿಸಲಾಗಿದೆ, ಆದರೂ ತಡೆರಹಿತ ಏಕ ಕ್ಲಿಕ್ ಪಾವತಿಯ ಪ್ರಬಲ ವೈಶಿಷ್ಟ್ಯವನ್ನು ಒದಗಿಸುತ್ತದೆ.
  • ಪುಲ್ ಮತ್ತು ಪುಶ್‌ಗಾಗಿ ಗ್ರಾಹಕರ ವರ್ಚುವಲ್ ವಿಳಾಸವು ಹೆಚ್ಚುತ್ತಿರುವ ಭದ್ರತೆಯನ್ನು ಒದಗಿಸುತ್ತದೆ ಗ್ರಾಹಕರು ಕಾರ್ಡ್ ಸಂಖ್ಯೆ, ಖಾತೆ ಸಂಖ್ಯೆ ಮುಂತಾದ ವಿವರಗಳನ್ನು ನಮೂದಿಸುವ ಅಗತ್ಯವಿಲ್ಲ; IFSC ಇತ್ಯಾದಿ.
  • QR ಕೋಡ್
  • ಕ್ಯಾಶ್ ಆನ್ ಡೆಲಿವರಿ ಜಗಳಕ್ಕೆ ಉತ್ತಮ ಉತ್ತರ, ಎಟಿಎಂಗೆ ಓಡುವುದು ಅಥವಾ ನಿಖರವಾದ ಮೊತ್ತವನ್ನು ಸಲ್ಲಿಸುವುದು.
  • ಏಕ ಅಪ್ಲಿಕೇಶನ್ ಅಥವಾ ಇನ್-ಆಪ್ ಪಾವತಿಗಳೊಂದಿಗೆ ವ್ಯಾಪಾರಿ ಪಾವತಿ.
  • ಯುಟಿಲಿಟಿ ಬಿಲ್ ಪಾವತಿಗಳು, ಕೌಂಟರ್ ಪಾವತಿಗಳ ಮೂಲಕ, QR ಕೋಡ್ (ಸ್ಕ್ಯಾನ್ ಮತ್ತು ಪಾವತಿ) ಆಧಾರಿತ ಪಾವತಿಗಳು.
  • ದೇಣಿಗೆಗಳು, ಸಂಗ್ರಹಣೆಗಳು, ವಿತರಣೆಗಳು ಸ್ಕೇಲೆಬಲ್.
  • ಮೊಬೈಲ್ ಅಪ್ಲಿಕೇಶನ್‌ನಿಂದ ನೇರವಾಗಿ ದೂರನ್ನು ಎತ್ತುವುದು.
UPI ನಲ್ಲಿ ಭಾಗವಹಿಸುವವರು
  1. ಪಾವತಿದಾರ PSP
  2. ಪಾವತಿದಾರ PSP
  3. ರಿಮಿಟರ್ ಬ್ಯಾಂಕ್
  4. ಫಲಾನುಭವಿ ಬ್ಯಾಂಕ್
  5. NPCI
  6. ಬ್ಯಾಂಕ್ ಖಾತೆದಾರರು
  7. ವ್ಯಾಪಾರಿಗಳು
  • ನೋಂದಣಿಗೆ ಕ್ರಮಗಳು:

  1. ಆಪ್ ಸ್ಟೋರ್/ಬ್ಯಾಂಕ್‌ಗಳ ವೆಬ್‌ಸೈಟ್‌ನಿಂದ ಬಳಕೆದಾರರು UPI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುತ್ತಾರೆ
  2. ಹೆಸರು, ವರ್ಚುವಲ್ ಐಡಿ (ಪಾವತಿ ವಿಳಾಸ), ಪಾಸ್‌ವರ್ಡ್ ಮುಂತಾದ ವಿವರಗಳನ್ನು ನಮೂದಿಸುವ ಮೂಲಕ ಬಳಕೆದಾರರು ಅವನ/ಅವಳ ಪ್ರೊಫೈಲ್ ಅನ್ನು ರಚಿಸುತ್ತಾರೆ.
  3. ಬಳಕೆದಾರರು “ಸೇರಿಸು/ಲಿಂಕ್/ಬ್ಯಾಂಕ್ ಖಾತೆಯನ್ನು ನಿರ್ವಹಿಸು” ಆಯ್ಕೆಗೆ ಹೋಗುತ್ತಾರೆ ಮತ್ತು ಬ್ಯಾಂಕ್ ಮತ್ತು ಖಾತೆ ಸಂಖ್ಯೆಯನ್ನು ವರ್ಚುವಲ್ ಐಡಿಯೊಂದಿಗೆ ಲಿಂಕ್ ಮಾಡುತ್ತಾರೆ

UPI ಅನ್ನು ರಚಿಸಲಾಗುತ್ತಿದೆ - ಪಿನ್:

  1. ಬಳಕೆದಾರನು ಅವನು/ಅವಳು ವಹಿವಾಟನ್ನು ಪ್ರಾರಂಭಿಸಲು ಬಯಸುವ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡುತ್ತಾನೆ
  2. ಬಳಕೆದಾರರು ಆಯ್ಕೆಗಳಲ್ಲಿ ಒಂದನ್ನು ಕ್ಲಿಕ್ ಮಾಡುತ್ತಾರೆ -
  • UPI ಪಿನ್ ಬದಲಾಯಿಸಿ

  1. ಬಳಕೆದಾರರು ಅವನ/ಅವಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಿತರಕರ ಬ್ಯಾಂಕ್‌ನಿಂದ OTP ಅನ್ನು ಸ್ವೀಕರಿಸುತ್ತಾರೆ
  2. ಬಳಕೆದಾರರು ಈಗ ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕದ ಕೊನೆಯ 6 ಅಂಕೆಗಳನ್ನು ನಮೂದಿಸುತ್ತಾರೆ
  3. ಬಳಕೆದಾರರು OTP ಅನ್ನು ನಮೂದಿಸುತ್ತಾರೆ ಮತ್ತು ಅವರ ಆದ್ಯತೆಯ ಸಂಖ್ಯಾ UPI ಪಿನ್ (ಅವರು ಹೊಂದಿಸಲು ಬಯಸುವ UPI ಪಿನ್) ಅನ್ನು ನಮೂದಿಸುತ್ತಾರೆ ಮತ್ತು ಸಲ್ಲಿಸು ಕ್ಲಿಕ್ ಮಾಡಿ
  4. ಸಲ್ಲಿಸು ಕ್ಲಿಕ್ ಮಾಡಿದ ನಂತರ, ಗ್ರಾಹಕರು ಅಧಿಸೂಚನೆಯನ್ನು ಪಡೆಯುತ್ತಾರೆ (ಯಶಸ್ವಿ ಅಥವಾ ನಿರಾಕರಣೆ)
  5. ಬಳಕೆದಾರನು ತನ್ನ ಹಳೆಯ UPI ಪಿನ್ ಅನ್ನು ನಮೂದಿಸುತ್ತಾನೆ ಮತ್ತು ಹೊಸ UPI ಪಿನ್ ಅನ್ನು ಆದ್ಯತೆ ನೀಡುತ್ತಾನೆ (ಅವನು ಹೊಂದಿಸಲು ಬಯಸುವ UPI ಪಿನ್) ಮತ್ತು ಸಲ್ಲಿಸು ಕ್ಲಿಕ್ ಮಾಡಿ
  6. ಸಲ್ಲಿಸು ಕ್ಲಿಕ್ ಮಾಡಿದ ನಂತರ, ಗ್ರಾಹಕರು ಅಧಿಸೂಚನೆಯನ್ನು ಪಡೆಯುತ್ತಾರೆ (ಯಶಸ್ವಿ ಅಥವಾ ವೈಫಲ್ಯ)
    UPI ವಹಿವಾಟು ನಡೆಸುವುದು:

    ಉತ್ಪನ್ನ
  • A. ಹಣಕಾಸಿನ ವಹಿವಾಟುಗಳು
  • UPI ಕೆಳಗಿನ ಹಣಕಾಸಿನ ವಹಿವಾಟುಗಳನ್ನು ಬೆಂಬಲಿಸುತ್ತದೆ.

    ಪಾವತಿ ವಿನಂತಿ: ಪಾವತಿ ವಿನಂತಿಯು ಒಂದು ವ್ಯವಹಾರವಾಗಿದ್ದು, ಪ್ರಾರಂಭಿಕ ಗ್ರಾಹಕರು ಉದ್ದೇಶಿತ ಫಲಾನುಭವಿಗೆ ಹಣವನ್ನು ತಳ್ಳುತ್ತಿದ್ದಾರೆ. ಪಾವತಿ ವಿಳಾಸಗಳು ಮೊಬೈಲ್ ಸಂಖ್ಯೆ ಮತ್ತು MMID, ಖಾತೆ ಸಂಖ್ಯೆ ಮತ್ತು IFSC ಮತ್ತು ವರ್ಚುವಲ್ ಐಡಿಯನ್ನು ಒಳಗೊಂಡಿವೆ
    ವಿನಂತಿಯನ್ನು ಸಂಗ್ರಹಿಸಿ: ಗ್ರಾಹಕರು ವರ್ಚುವಲ್ ಐಡಿಯನ್ನು ಬಳಸಿಕೊಂಡು ಉದ್ದೇಶಿತ ರವಾನೆದಾರರಿಂದ ಹಣವನ್ನು ಎಳೆಯುವ ವಹಿವಾಟು ಸಂಗ್ರಹ ವಿನಂತಿಯಾಗಿದೆ.

    ಬಿ. ಹಣಕಾಸು-ಅಲ್ಲದ ವಹಿವಾಟುಗಳು
  • ಯಾವುದೇ PSP ಅಪ್ಲಿಕೇಶನ್‌ನಲ್ಲಿ ಕೆಳಗಿನ ರೀತಿಯ ಹಣಕಾಸಿನೇತರ ವಹಿವಾಟುಗಳನ್ನು UPI ಬೆಂಬಲಿಸುತ್ತದೆ.
  1. ಮೊಬೈಲ್ ಬ್ಯಾಂಕಿಂಗ್ ನೋಂದಣಿ*
  2. ಒನ್ ಟೈಮ್ ಪಾಸ್‌ವರ್ಡ್ (OTP) ರಚಿಸಿ
  3. ಪಿನ್ ಹೊಂದಿಸಿ/ಬದಲಾಯಿಸಿ
  4. ವಹಿವಾಟಿನ ಸ್ಥಿತಿಯನ್ನು ಪರಿಶೀಲಿಸಿ
  5. ವಿವಾದವನ್ನು ಹುಟ್ಟುಹಾಕಿ/ಪ್ರಶ್ನೆಯನ್ನು ರೈಸ್ ಮಾಡಿ
* SMS ಎಚ್ಚರಿಕೆಗಳು/ಮೊಬೈಲ್ ಎಚ್ಚರಿಕೆಗಳಿಗಾಗಿ ವಿತರಕರ ಬ್ಯಾಂಕ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು (ನೋಂದಣಿ ಮಾಡಿಕೊಳ್ಳಬೇಕಾದ) ನೋಂದಾಯಿಸಿದ್ದರೆ ಮಾತ್ರ ಮೊಬೈಲ್ ಬ್ಯಾಂಕಿಂಗ್ ನೋಂದಣಿ ಸಾಧ್ಯ.

UPI ಅನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರವೇಶಿಸಬಹುದು. Android / iOS - ಅಪ್ಲಿಕೇಶನ್‌ಗಳನ್ನು Android 4.2.2 ಮತ್ತು ಮೇಲಿನ/iOS 8.1 ಮತ್ತು ಮೇಲಿನ ಪ್ಲಾಟ್‌ಫಾರ್ಮ್‌ಗಳಲ್ಲಿ ಸದಸ್ಯರು ಅಭಿವೃದ್ಧಿಪಡಿಸಿದ್ದಾರೆ.
    ಉದಾ: ಈಗ ನಿಮ್ಮ ಜಂಗಮವಾಣಿ ಸಂಖ್ಯೆಯೇ ನಿಮ್ಮ ಯು.ಪಿ.ಐಡಿ ******03@ಖಾತೆಯ ಹೆಸರು.

    SBI Bank     :  ******03@oksbi
    Post office    :  ******03@postbank
    Kotak Bank ******03@kotak
    Paytm           ******03@paytm
    Phone Pay    :  ******03@upi
    Google Pay  ******03@upi
    Bhim Pay     : ******03@upi
    Mobikwik     ******03@ikwik                       ...ಮುಂತಾದವು.........

    1.. ಜಾಹೀರಾತು

    2.ಜಾಹೀರಾತು

    ಪದ ಪುಸ್ತಕ

    ಹುಡುಕಾಟ ಫಲಿತಾಂಶಗಳು

    ಕನ್ನಡದ ತಾಣ ಅನುಸರಿಸುವವರು