fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಡಿಸೆಂಬರ್ 31, 2022

══> ನಮ್ಮ ಕನ್ನಡ <══

🙂🚥═𝕤𝕡𝕟𝟛𝟙𝟠𝟟═🚥🙂

ಹೇಳಿ ಹೇಳಿ ಕನ್ನಡ
ಹಾಡಿ ಹಾಡಿ ಕನ್ನಡ
ಬಲು ಸರಳ ಕನ್ನಡ
ಕಲಿಯಬೇಕು ನೀ ಕನ್ನಡ

ನಮ್ಮ ನಾಡು ಕನ್ನಡ
ನಮ್ಮ ಭಾಷೆ ಕನ್ನಡ
ನಮ್ಮ ಉಸಿರು ಕನ್ನಡ
ನಮ್ಮ ಹೆಸರೂ ಕನ್ನಡ

ಹಾಲು ಜೇನು ಕನ್ನಡ
ಒಳ್ಳೆ ರುಚಿ ಕನ್ನಡ
ಬಲು ಸರಳ ಕನ್ನಡ
ಕಲಿಯಬೇಕು ನೀ ಕನ್ನಡ

ಗಂಧದ ಗುಡಿ ಕನ್ನಡ
ಅಂದದ ಬೀಡು ಕನ್ನಡ
ಚೆಲುವ ನಾಡು ಕನ್ನಡ
ಸಮೃದ್ಧಿ ನಾಡು ಕನ್ನಡ

ನನ್ನಲಿ ಕನ್ನಡ
ನಿನ್ನಲ್ಲಿ ಕನ್ನಡ
ಅವರಲ್ಲಿ ಕನ್ನಡ
ಇವರಲ್ಲಿ ಕನ್ನಡ

ಕೋಗಿಲೆ ಧ್ವನಿ ಕನ್ನಡ
ಸಾಹಿತ್ಯ ಊರು ಕನ್ನಡ
ಕವಿ ಪುಂಗವ ಕನ್ನಡ
ಕಾವ್ಯ ಕುಸುಮ ಕನ್ನಡ

ಕೃಪೆ: ಎಚ್.ವ್ಹಿ.ಈಟಿ (ಶಿಕ್ಷಕರು), 
ಸಾ.ನರೇಗಲ್ಲ

ಭಾನುವಾರ, ಡಿಸೆಂಬರ್ 18, 2022

ಗೂಗಲ ಕಪ್ಪು ಬಿಳುಪು ಪುಟದ (Google Black & White Pages) 29


Google ನಲ್ಲಿ ಟೈಪ್ ಮಾಡಿ: "logo black" ಮತ್ತು ಎಂಟರ್ ಒತ್ತಿರಿ.  ನಂತರ ಗೂಗಲ್ ಹುಡುಕಾಟ ಫಲಿತಾಂಶಗಳ ಪುಟದ ಸಾಂಪ್ರದಾಯಿಕ ಕಪ್ಪು ಮತ್ತು ಬಿಳಿ ನೋಟವನ್ನು ನೋಡುತ್ತೀರಿ.  ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡಿನೋಡಿ....

ಗುರುವಾರ, ಡಿಸೆಂಬರ್ 15, 2022

ಅ-ಅಃ ವರನ ಅರ್ಹತೆ

ಮದುವೆ ವಯಸ್ಸಿಗೆ ಬಂದ ಮಗಳನ್ನು ತಂದೆ ಕೇಳುತ್ತಾನೆ

ತಂದೆ   : ವರ ಹೇಗಿರಬೇಕು?
ಮಗಳು :  ದಿಂದ ಅಃ ವರಗೆ ಅರ್ಹತೆ ಇರಬೇಕು.
ತಂದೆ   : ಅಂದರೆ ?
ಮಗಳು :  ರೀತಿ ಹೇಳಿದಳು.

ಸೂಚನೆ: (ಅಃ=ಅಹ), (=ರೂ)

ಪ್ಪ ಅಮ್ಮ ಇರಬಾರದು.

ಸ್ತಿಗೆ ನಾವೆ ಮುಖಂಡರಾಗಬೇಕು.

ಚು ಮಿಂಚು ಶ್ರೀರಾಮಚಂದ್ರನಂತಿರಬೇಕು.

ಶನಂತೆ ಒಪ್ಪಿಗೆ ಕೊಡಬೇಕು.

ನ್ನತ ಸ್ಥಾನ ಪಡೆದಿರಬೇಕು.

ರಿಗೆ ರಾಜನಂತಿರಬೇಕು.

ಷಿವರ್ಯರ ದರ್ಶನ ಪಡೆಯುತ್ತಿರಬೇಕು.

ಪಾಯಿಗಳು ಒಲಿದು ಬರುತ್ತಿರಬೇಕು.

ತ್ತರ ಇರಬೇಕು.

ಕೈಕ ಪುತ್ರನಾಗಿರಬೇಕು.

ಶ್ವರ್ಯವಂತನಾಗಿರಬೇಕು.

ಒಂಟಿಯಾಗಿರಬೇಕು.

 ಅಂದರೆ ಓಡಿಬರಬೇಕು.

ಷಧಾಲಯಕ್ಕೆ ಹೋಗಬಾರದು.

ಅಂ ಚೆಂದ ಇರಬೇಕು.

ಅಃ ಅಹಂಕಾರ ಇರಲಾರದ ಮದುಮಗನು ಬೇಕೆಂದು ಹೇಳಿದಳು.

ಶುಕ್ರವಾರ, ಡಿಸೆಂಬರ್ 09, 2022

ಈ 7 ಸ್ತ್ರೀಯರನ್ನು ಪುರುಷ ಯಾವತ್ತೂ ಮರೆಯಲ್ಲ (ಮರೆಯಬಾರದು )

      ಹೆಣ್ಣಿನ ಬಗ್ಗೆ ವಿವರಿಸುವುದು ತುಂಬಾ ಕಷ್ಟದ ವಿಷಯ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅನ್ನುತ್ತಾರೆ. ಒಬ್ಬ ವ್ಯಕ್ತಿಯ ನಾಶಕ್ಕೂ ಹೆಣ್ಣೆ ಕಾರಣ ಕರ್ತಳಾಗಿರುತ್ತಾಳೆ. ಒಮ್ಮೆ ಅಬಲೆ ಅನಿಸಿದರೂ, ಮತ್ತೊಮ್ಮೆ ವಿಶ್ವವನ್ನು ನಿಯಂತ್ರಿಸುವ ಶಕ್ತಿ ಹೆಣ್ಣಗಿದೆ ಎಂದು ಅನಿಸುತ್ತದೆಯಲ್ಲವೇ? ಒಬ್ಬ ಪುರುಷನಿಗೆ ತನ್ನ ಬಾಳಿನಲ್ಲಿ ಉತ್ತಮ ಸ್ತ್ರೀಯರು ದೊರಕಿದರೆ ಅವನೇ ಅದೃಷ್ಟ ಶಾಲಿ. ಆ ಸ್ತ್ರೀಯರಲ್ಲಿ ಅವನ ತಾಯಿ ಹಾಗೂ ಕೈ ಹಿಡಿದವಳು ಪುರುಷನ ಜೀವನದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಮಗನನ್ನು ಉತ್ತಮ ಹಾದಿಯಲ್ಲಿ ಬೆಳೆಸುವಲ್ಲಿ ತಾಯಿಯ ಮಾತ್ರ ಮಹತ್ವವಾದರೆ, ಅವನನ್ನು ಉತ್ತಮನಾಗಿಯೇ ಉಳಿಸಿಕೊಳ್ಳುವಲ್ಲಿ ಹೆಂಡತಿಯ ಪಾತ್ರ ಪ್ರಮುಖವಾಗಿರುತ್ತದೆ. ಮಾರ್ಚ್ 8. ಅಂತರಾಷ್ಟ್ರೀಯ ಮಹಿಳೆಯರ ದಿನ. ಮಹಿಳೆಯರ ದಿನದ ವಿಶೇಷವಾಗಿ ಪ್ರತೀಯೊಬ್ಬ ಪುರುಷನ ಜೀವನದಲ್ಲಿ ಬರುವ 7 ಪ್ರಮುಖ ಸ್ತ್ರೀಯರ ಬ್ಗಗೆ ಹೇಳಲಾಗಿದೆ

1) ಅಮ್ಮ:-ಅಮ್ಮನ ಪಾತ್ರವನ್ನು ಬೇರೆ ಯಾರಿಗೂ ತುಂಬಲು ಸಾಧ್ಯವಿಲ್ಲ. ನಾವು ಬೆಳೆದ ಒಂದೊಂದು ಹಂತದಲ್ಲಿ ಅಮ್ಮನ ಶ್ರಮವಿರುತ್ತದೆ, ತ್ಯಾಗವಿರುತ್ತದೆ. ಅದರಲ್ಲೂ ಸಾಮಾನ್ಯವಾಗಿ ಗಂಡು ಮಕ್ಕಳು ಅಪ್ಪನಿಗಿಂತ ಹೆಚ್ಚಾಗಿ ಅಮ್ಮನನ್ನು ಹಚ್ಚಿಕೊಂಡಿರುತ್ತಾರೆ.

2) ಅಕ್ಕ-ತಂಗಿ :-ಅಕ್ಕ-ತಂಗಿ ಇವರ ಜೊತೆ ಕಳೆದ ಯಾವುದೇ ನೆನಪನ್ನು ಮರೆಯಲು ಸಾಧ್ಯವಿಲ್ಲ. ಸ್ವಂತ ಅಕ್ಕ-ತಂಗಿ ಇಲ್ಲದಿದ್ದರೂ ಚಿಕ್ಕಪ್ಪನ-ದೊಡ್ಡಪ್ಪನ ಮಕ್ಕಳನ್ನು ಅಕ್ಕ -ತಂಗಿ ಎಂದು ಕರೆಯುತ್ತಾ ಅವರ ಜೊತೆ ಆಟ ಆಡಿ ಕಳೆದ ಕ್ಷಣಗಳು ನೆನಪಿನಲ್ಲಿ ಇದ್ದೇ ಇರುತ್ತದೆ.

3) ಅಜ್ಜಿ :-ಪ್ರೀತಿಯ ಅಜ್ಜಿಯನ್ನು ಮರೆಯಲು ಯಾರಿಗೆ ತಾನೇ ಸಾಧ್ಯ? ತನ್ನ ಬಾಲ್ಯದ ಬಗ್ಗೆ ನೆನೆಸುವಾಗ ಪ್ರತಿಯೊಬ್ಬರಿಗೂ ಅಜ್ಜಿ ನೆನೆಪಿಗೆ ಬಂದೇ ಬರುತ್ತಾಳೆ.

4) ಟೀಚರ್ :-ಯಾವುದೇ ಪುರುಷನನ್ನು ಕೇಳಿ ನೋಡಿ, ಅವರ ನೆನೆಪಿನಲ್ಲಿ ಒಂದಾದರೂ ಅವರ ಪ್ರೀತಿಯ ಟೀಚರ್ ನ ನೆನಪು ಇದ್ದೇ ಇರುತ್ತದೆ.

5) ಮೊದಲ ಪ್ರೇಮ :-ಪುರುಷ ತಾನು ಮೊದಲು ಇಷ್ಟಪಟ್ಟ ಹುಡುಗಿಯನ್ನು ತಮ್ಮ ಜೀವನದ ಕೊನೆಯವರೆಗೂ ನೆನೆಪಿನಲ್ಲಿಟ್ಟು ಕೊಳ್ಳುತ್ತಾರೆ. ಒಂದು ವೇಳೆ ತಾನು ಪ್ರೀತಿಸಿದ ಹುಡುಗಿ ಬಾಳಿನಲ್ಲಿ ದೊರಕದೇ ಹೋದರೆ ಅಥವಾ ಅವಳು ಮೋಸ ಮಾಡಿ ಹೋದರೂ ಕೂಡ ಅವಳನ್ನು ಅವನು ಯಾವತ್ತಿಗೂ ಮರೆಯುವುದಿಲ್ಲ.

6) ಹೆಂಡತಿ :-ಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯನರಿವ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಒಳ್ಳೆಯ ಹೆಂಡತಿ ಸಿಕ್ಕಿದರೆ ಜೀವನದಲ್ಲಿ ಎಂತಹ ಕಷ್ಟವನ್ನು ಎದುರಿಸುವ ಸಾಮರ್ಥ್ಯ ಪುರುಷನಿಗೆ ಬರುತ್ತದೆ.

7) ಮಗಳು :-ಪ್ರತಿಯೊಬ್ಬ ಉತ್ತಮ ತಂದೆಯೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಾನೆ. ಎಂತಹ ತ್ಯಾಗಕ್ಕೂ ಸಿದ್ಧನಿರುತ್ತಾನೆ. ಅಪ್ಪ-ಅಮ್ಮನ ಮರ್ಯಾದೆಗೆ ಕುಂದು ಬರದಂತೆ ನನ್ನ ಮಗಳು ನಡೆದುಕೊಳ್ಳಬೇಕೆನ್ನುವುದೇ ಪ್ರತಿಯೊಬ್ಬ ಹೆತ್ತವರ ಆಶಯ.
ಕೃಪೆ: ಮಾ.ಕೃ. ಮಂಜು:

ಶನಿವಾರ, ಡಿಸೆಂಬರ್ 03, 2022

ಶಾಲಿನಿ / ಮೋಹಿನಿ

ರಾತ್ರಿ ದೂರದಲ್ಲಿ ಕಂಡಳು ಸುಂದರವಾದ ಶಾಲಿನಿ || ವ್ಹಾ.. ವ್ಹಾ ||

ರಾತ್ರಿ ದೂರದಲ್ಲಿ ಕಂಡಳು ಸುಂದರವಾದ ಶಾಲಿನಿ || ವ್ಹಾ.. ವ್ಹಾ ||
..

ಆದ್ರ ಅವಳ ಹತ್ತಿರ ಹೋಗಿ ನೋಡಿದಾಗ ಅವಳು ಮೋಹಿನಿ...

ಗುರುವಾರ, ಡಿಸೆಂಬರ್ 01, 2022

ಡಿಸೆಂಬರ್ ತಿಂಗಳ ಮಹತ್ವದ ದಿನಗಳು


ಡಿಸೆಂಬರ್ ೨ : ಭಾರತ ದೇಶವು, ಇಡೀ ಹಜ್ ಪ್ರಕ್ರಿಯೆಯನ್ನು ಡಿಜಿಟಲ್ ರೂಪದಲ್ಲಿಯೇ ಮಾಡಿದ ವಿಶ್ವದ ಮೊದಲ ದೇಶವೆಂದೆನಿಸಿತು.

ಡಿಸೆಂಬರ್ ೪ : ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಚ್.ಎಸ್.ವೆಂಕಟೇಶಮೂರ್ತಿ ಆಯ್ಕೆ
ಡಿಸೆಂಬರ್ ೧೧ : ಶಸ್ತ್ರಾಸ್ತ್ರ (ತಿದ್ದುಪಡಿ) ಮಸೂದೆ 2019 ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಅಕ್ರಮವಾಗಿ ಯಾರಾದರೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೆ, ಅವರಿಗೆ ಜೀವಾವಧಿ ಶಿಕ್ಷೆಯನ್ನುನೀಡುತ್ತದೆ. 

ಡಿಸೆಂಬರ್ ೧೩ :ಯುನೈಟೆಡ್ ಕಿಂಗ್ಡಮ್ ನ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಮರು ಆಯ್ಕೆ
ಡಿಸೆಂಬರ್ ೧೭: ಭೂತಾನ್ದಲ್ಲಿ ರಾಷ್ಟ್ರೀಯ ದಿನಾಚರಣೆ.  

೧೮೧೯ - ಸಿಮೋನ್ ಬೊಲೀವಾರ್ಅನು ಗ್ರಾನ್ ಕೊಲಂಬಿಯ ಪ್ರದೇಶದಸ್ವಾತಂತ್ರ್ಯವನ್ನು ಘೋಷಿಸಿದ. 
೧೯೦೩ - ವ್ರೈಟ್ ಸಹೋದರರು ತಮ್ಮ ಮೊದಲ ವಿಮಾನಯಾನವನ್ನು (ಚಿತ್ರಿತ) ಮಾಡಿದರು. 

೧೯೬೧ - ಭಾರತದ ಸೇನೆಯು ಆಪರೇಶನ್ ವಿಜಯದಲ್ಲಿ ಗೋವರಾಜ್ಯವನ್ನು ಪೋರ್ಚುಗಲ್ನಿಂದ ಕಸಿದುಕೊಂಡಿತು. 

೧೯೬೭ - ಆಸ್ಟ್ರೇಲಿಯದ ಪ್ರಧಾನಮಂತ್ರಿ ಹರಾಲ್ಡ್ ಹೊಲ್ಟ್ಸಮುದ್ರದಲ್ಲಿ ಈಜುವಾಗ ಮರೆಯಾದನು. 

ಜನನಗಳು  : ಅಲೆಗ್ಜಾಂಡರ್ ಅಗಾಸಿಜ್; 
ಮರಣಗಳು : ಸಿಮೊನ್ ಬೊಲಿವಾರ್.


ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)


1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು