ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 27, 2025

ವಿನಂತಿ... (ಕವನ)

ಇಲ್ಲಿ ನಾನೂ
ಎನ್ನುವುದು ಗೌಣ.

ನಮ್ಮ ಬರಹಕ್ಕೆ
ನೀಡಿ ಸನ್ಮಾನ.

ಬರಹದೆದೆಯ ಮೇಲೆ
ಏಕೆ ನ/ನಿಮ್ಮ ಗತ್ತು ಗಮ್ಮತ್ತು.

ಒಮ್ಮೆ ಓದಿ ಹಾಕಿರಿ
ತಮ್ಮ ಅಭಿಪ್ರಾಯ.

ಸುಃಖಾ ಸುಮ್ಮನೆ
ಬೇಡ ಹೊಗಳಿಕೆಯ ಶರಾ.

ಇರಲಿ ಬರಹಕ್ಕೊಂದು
ನಿಜವಾದ ಅಭಿಪ್ರಾಯ.

ಓದುಗರು ನೀವು
ಬರೆಯುವವರು ನಾವು.

ಬರಹ ಮುಕುಟಕೆ
ಓದುಗರೇ ಕಳಶಪ್ರಾಯ.....    
                                                    @ಅನಾಮದೇಯ

ಭಾನುವಾರ, ಮೇ 25, 2025

ಇವುಗಳೆರಡು ನಮ್ಮೊಟ್ಟಿಗೆ ಇರಲಿ @spn3187

ಕನಸು - ನನಸುಗಳೆರಡು
ನಮ್ಮೊಟ್ಟಿಗೆ ಇರಲಿ

ಪ್ರೀತಿ - ಪ್ರೇಮಗಳೆರಡೂ
ನಮ್ಮೊಟ್ಟಿಗೆ ಇರಲಿ 

ಸುಖ - ಸಂತೋಷಗಳೆರಡು 
ನಮ್ಮೊಟ್ಟಿಗೆ ಇರಲಿ

ಪ್ರೀತಿ - ಸ್ನೇಹಗಳೆರಡು 
ನಮ್ಮೊಟ್ಟಿಗೆ ಇರಲಿ

ಬಂಧು - ಬಂಧವರೆಲ್ಲರೂ
ನಮ್ಮೊಟ್ಟಿಗೆ ಇರಲಿ

ಕಷ್ಟ - ಸುಖಗಳೆರಡು
ನಮ್ಮೊಟ್ಟಿಗೆ ಇರಲಿ

ನೋವು - ನಲಿವುಗಳೆರಡು 
ನಮ್ಮೊಟ್ಟಿಗೆ ಇರಲಿ

ಭರವಸೆ - ಆತ್ಮವಿಶ್ವಾಸಗಳೆರಡು 
ನಮ್ಮೊಟ್ಟಿಗೆ ಇರಲಿ

ಅವಳಿ - ಜವಳಿಗಳೊಂದಿಗೆ ಸಮರಸದ ಬದುಕು 
ನಮ್ಮೊಟ್ಟಿಗೆ ಇರಲಿ...... 

                                                          @- ಉಮಾ ಪ್ರಕಾಶ

ಮಂಗಳವಾರ, ನವೆಂಬರ್ 28, 2023

ನಮ್ಮ ಉತ್ತರ ಕರ್ನಾಟಕ ಭಾಷೆಯಲ್ಲಿ ಹನಿ-ಗವನ

ಬದುಕು ನಾಕು ದಿನದ ಸಂತಿ
ಯಾಕ ಮಾಡತಿ ನೀ ಚಿಂತಿ

ಸಂಸಾರದಾಗ ಸಿಕ್ಕೊಂಡ ಕುಂತಿ
ವಿಷಯ ವಿಷ ತಿಳಿದ ಸಂಗತಿ

ನಟ್ಟ ನಡು ನೀರಾಗ ಬಂದ ನಿಂತಿ
ಏಳೊ ಹುಚ್ಚಾ ಇದೆಲ್ಲಾ ಭ್ರಾಂತಿ 

ಮಾಡು ಮನ್ಸನ್ಯಾಗ ಜ್ಞಾನ ಕ್ರಾಂತಿ
ಹೊಳೆವೆ ನೀನಾಗ ತೇಜ ಕಾಂತಿ

ನಿನ್ನೊಳಗ ನೀ ಹುಡುಕು ಶಾಂತಿ
ಬೆಳಗುವದಾಗ ಅಧ್ಯಾತ್ಮ ಜ್ಯೋತಿ

█▓▒▒░░░⮊⯮ ಕೃಪೆ: 🙶 ಅನ್ನಪೂರ್ಣ ಸಕ್ರೋಜಿ🙷 ⮈░░░▒▒▓█

ಶುಕ್ರವಾರ, ಅಕ್ಟೋಬರ್ 28, 2022

ಉಪ್ಪಿನ ಋಣ ಕವನ ತಿಳಿಯಿರಿ

🧂𝕤═𝕡═𝕟═𝟛═𝟙═𝟠═𝟟🧂(8/8)
ಕೃಪೆ:  ಡಾ. ಅಶೋಕಕುಮಾರ
ಮನಸಿನಲ್ಲಿದ್ದರೆ ಸ್ವಾರ್ಥಗುಣ
ತೃಣಕ್ಕೆ ಸಮಾನ ನೀ ಗಳಿಸಿದ ಹಣ
ನಿಸ್ವಾರ್ಥಗುಣಕ್ಕೆ ಮೆಚ್ಚುವುದು ದೇವಗಣ.

ಪೂರ್ಣ ಕವಿತೆಗಾಗಿ  https://t.me/spn3187/41605

ಭಾನುವಾರ, ಅಕ್ಟೋಬರ್ 11, 2015

ಬೇಕು ಕಾರಣ

ಬರುವಾಗ ಕಾರಣ ಹೇಳಲಿಲ್ಲ
ಹೋಗುವಾಗ ಕಾರಣ ಕೇಳಲಿಲ್ಲ
ತುಂಬಾ ಕಾಡುತಿಹುದು ಕಾರಣಗಳು
ಉತ್ತರವಿಲ್ಲದೆ

*********ಸ್ಫೂರ್ತಿ ಗೌಡ

ಮಂಗಳವಾರ, ಆಗಸ್ಟ್ 11, 2015

ರೈತರಿಗೆ ಮನವಿ

ರೈತ ಬಾಂಧವರೇ, ಅಣ್ಣ ತಮ್ಮಂದಿರೇ, 
ಭಾರತದ ಬೆನ್ನೆಲೆಲು ನೀವು, 
ನೇಣಿಗೆ ಕೊರಳ ನೀಡದಿರಿ, 
ಓ ನಮ್ಮ ಅನ್ನದಾತರೇ, 
ಓ ನಮ್ಮ ರೈತರೇ

ಭೂತಾಯ ನಮಿಸಿ, ಬೆವರನ್ನು ಸುರಿಸಿ, 
ನೀರನ್ನು ಹರಿಸಿ, ಬೆಳೆಯನ್ನು ಬೆಳೆಸಿ, 
ಹಸಿವನ್ನು ನೀಗಿಸಿದ ಅನ್ನದಾತರೇ, 
ಸಾವಿಗೆ ಶರಣಾಗದಿರಿ, 
ಓ ನಮ್ಮ ರೈತರೇ,

ಈ ಮಣ್ಣಲ್ಲೇ ಹುಟ್ಟಿ, ಈ ಮಣ್ಣಲ್ಲೇ ಬೆಳೆದು, 
ಮನುಕುಲಕೆ ಅನ್ನವ ನೀಡಿದ, 
ಅನ್ನದಾತರೇ, ಬದುಕ ಕೊನೆಗಾಣಿಸದಿರಿ, 
ಓ ನಮ್ಮ ರೈತರೇ,

ಬಿಸಿಲಲ್ಲಿ ಬೆಂದು, ಮಳೆಯಲ್ಲಿ ನೆಂದು, 
ಕೆಸರಲ್ಲಿ ಮಿಂದು, ಬೆಳೆಯನ್ನು ತಂದು, 
ನಮ್ಮೊಂದಿಗೆ ಬೆರೆತು, ಕಷ್ಟ ಮರೆತು, 
ಸುಗ್ಗಿ ಹಾಡು ಹಾಡಿ, ಹುಗ್ಗಿ ಊಟ ಮಾಡಿ 
ನಲಿಯೋಣ ಅನ್ನದಾತರೇ, 
ಓ ನಮ್ಮ ರೈತರೇ

ಕೃಪೆ @ಮಂಗಳಾ ಕಬ್ಬರ, ಹುಬ್ಬಳ್ಳಿ

ಗುರುವಾರ, ಜುಲೈ 30, 2015

"ಎಪಿಜೆ ಅಬ್ದುಲ್ ಕಲಾಂ" ನಿಮಗೊಂದು ನನ್ನ ಸಲಾಂ

ಗಗನಕ್ಕೇರಿತು ಭಾರತದ ವರ್ಚಸ್ಸು
ಇದಕ್ಕೆ ಕಾರಣ ನಿಮ್ಮಲಿದ್ದ ತೇಜಸ್ಸು

ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಜ್ಞಾನದ ಬೋಧನೆಯಲಿ ನಿಮ್ಮಲಿ ಕಂಡೆ ಶ್ರದ್ದೆ
ನಿಮ್ಮ ಪ್ರಶಂಸೆಗಳನ್ನೂ ಕೇಳಿ ನಾ ಜಾರಿ ಬಿದ್ದೆ

ಶಿಕ್ಷಕ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ವಿಜ್ಞಾನ ಕ್ಷೇತ್ರದಲ್ಲಿ ನೀವು ಮಹಾಓಜ
ನಿಮ್ಮನು ಯುವಜನತೆ ಅನುಸರಿಸುವುದು ಸಹಜ

ವೈದ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಆಯಿತು ನಿಮ್ಮ ಸಹಾಯದಿಂದ ಉಪಗ್ರಹಗಳ ಉಡಾವಣೆ
ಅಂತರಿಕ್ಷದಲ್ಲಿ ಈಗಿದೆ ನಮ್ಮ ಉಪಗ್ರಹಗಳ ಒಂದು ದೊಡ್ಡ ಬಡಾವಣೆ

ಕ್ಷಿಪಣಿ ಮನುಷ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಕಲ್ಪವೃಕ್ಷ ದಂತೆ ನಿಮ್ಮ ಮನ
ಅಕ್ಟೋಬರ್ ೧೫ ವಿಶ್ವ ವಿದ್ಯಾರ್ಥಿ ದಿನ

ಸಾಮಾನ್ಯ ಮನುಷ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ಅನುಮಾನವಿಲ್ಲದೆ ಎಲ್ಲರು ಸೂಚಿಸಿದರು ಸಮ್ಮತಿ
ಏಕೆಂದರೆ ನೀವು ಭಾರತ ಕಂಡ ವಿಶಿಷ್ಟವಾದ ರಾಷ್ಟ್ರಪತಿ

ಜನರ ರಾಷ್ಟ್ರಾಧ್ಯಕ್ಷ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

ನಿಮ್ಮಂತವರು ಜನಿಸುವುದೇ ಒಮ್ಮೊಮ್ಮೆ
ಹಾಗಾಗಿ ಮರಳಿ ಬನ್ನಿ ಮತ್ತೊಮ್ಮೆ

ದೇವತಾ ಮನುಷ್ಯ ಎಪಿಜೆ ಅಬ್ದುಲ್ ಕಲಾಂ
ನಿಮಗೊಂದು ನನ್ನ ಸಲಾಂ

@ನಮ್ಮ ಮಿತ್ರ ವಿನೋದ ಪ್ರಭು

ಶುಕ್ರವಾರ, ಆಗಸ್ಟ್ 15, 2014

ನಾವು ನಮ್ಮ ಜನ

ಸ್ವಾತಂತ್ರ ಬಂದು ಅರವತ್ತೆಳು ನಮಗೆ ಈ ನಮ್ ದೇಶಕೆ 
ನೀರು, ಆಹಾರ, ಸೂರು ಇಲ್ಲ ಕೋಟಿ ಕೋಟಿ ಬಡ ಜೀವಕ. !!ಪ!!

ನಮ್ಮ ತಾಯಿ ಭರತ ಮಾತೆಯು ಶಾಂತಿ ಸ್ವರೂಪಿಣಿ ಭಾರತಾಂಬೆಯು 
ಹಿಂದೂ, ಕ್ರೈಸ್ತ, ಮುಸಲ್ಮಾನರು ಸಾಮರಸ್ಯದಿ ಬದುಕುವರು 
ಜಾತಿ ಹೆಸರಲಿ ನೀತಿಗೇಡಿಗಳು ಸಾಮರಸ್ಯವ ಕದಡಿದರು 
ಭಾವೈಕ್ಯ ಗೂಡಿಗೆ ಕಲ್ಲು ಹೊಡೆದರು ಧರ್ಮದ ನೆಲೆಯಲ್ಲಿ ದೇಶ ಒಡೆದರು 
ಕಿಚ್ಚು ಹಚ್ಚಿದರು ಹೊತ್ತಿ ಉರಿಸಿದರು ಸಾವಿರ ಸಾವಿರ ಜೀವನ ಕೊಂದರು !!ಪ!!

ತಿಂಗಳಿಗೊಮ್ಮೆ ಬೆಲೆಗಳ ಏರಿಕೆ ತಿನ್ನುವ ಅನ್ನವು ಕಲಬೆರಕೆ 
ಅಗ್ಗದ ದರದಲಿ ಆಹಾರಧಾನ್ಯವು ಮೈಬಗ್ಗಿಸಿ ದುಡಿಯದ ಜೀವನವು 
ಊರಿಗೊಂದು ಸಮಾವೇಶ ಬಾಡಿಗೆ ಜನಗಳ ಜಯಘೋಷ 
ಎಂಜಲು ಕಾಸಿಗೆ ಓಟು ಮಾರುವರು ಹೆಂಡ-ಸಾರಾಯಿಗೆ ದಾಸರಾಗುವರು 
ಹೀಗಿದೆ ನೋಡಿ ನಮ್ ದೇಶ ಗಂಟೆಗೆ ಒಂದು ಹಗಲುವೇಷ !!ಪ!!

ನೆಹರು ಗಾಂಧೀಜಿ ಅಣ್ಣಾ ಅಟಲ್‌ಜೀ ದೇಶ ಕೋಶಕೆಲ್ಲ ಏಕರು 
ನೋಡಿರೀಗ ದೇಶ ಕೋಶವೆಲ್ಲ ತುಂಬಿ ತುಳುಕುವರು ಭ್ರಷ್ಟರು 
ಪ್ರಜಾಪ್ರಭುತ್ವದ ಕತ್ತು ಹಿಸುಕಿದರು ಭ್ರಷ್ಟಾಚಾರವ ಕಟ್ಟಿ ಬೆಳೆಸುವರು 
ಭಯೋತ್ಪಾದಕರು ನುಸುಳಿ ಬಂದರೂ... ಗಡಿಯಲಿ ಯೋಧರ ಕತ್ತು ಸೀಳಿದರೂ... 
ಕೈಕಟ್ಟಿ ಕುಳಿತಿದೆ ನಮ್ಮಜನ ದೇಶನಾಳುವ ರಾಜಕಾರಣ !!ಪ!!

ಕರೆಂಟು, ಬೀಜ, ಗೊಬ್ಬರ ಬೇಕು ಬೆಳೆಗೆ ಬೆಲೆಯು ಸಿಕ್ಕರೆ ಸಾಕು 
ಸ್ವಾವಲಂಬಿ ಜೀವನಕೆ ಸಾಲಮನ್ನ ಏತಕೆ ಬೇಕು? 
ದುರಾಭಿಮಾನವ ನೀಗಿಸಿ ದೇಶಾಭಿಮಾನವ ಬೆಳೆಸೋಣ 
ಸ್ವಾಭಿಮಾನವ ಮೈಗೂಡಿಸಿ ಸಾಮರಸ್ಯದಿ ಬದುಕೋಣ 
ಭ್ರಷ್ಟಾಚಾರವ ತೊಲಗಿಸಿ ಭವಿಷ್ಯ ಭಾರತ ಕಟ್ಟೋಣ !!ಪ!!
                                                                                                                   ----> ಕೆ.ಆರ್,ಹಿರೆಹಳ್ಳಿ

ಗುರುವಾರ, ಫೆಬ್ರವರಿ 27, 2014

ಫೆಬ್ರವರಿಗೆ 28ಟೇ ದಿನಗಳು

ಈಗ ಶಾರ್ಪನರಿನ ಗಿರಣಿಗೊಡ್ಡಿದ ಪೆನ್ಸಿಲ್
ಸರಸರನೆ ಕೆತ್ತಬೇಕು. ಹೊರಬಂದ ಸುರುಳಿಯ
ಕೈಯಲ್ಲಿ ಹಿಡಿದು ಮೈಮರೆಯುವ ಹಾಗಿಲ್ಲ.
ಸೀಸದ ಚೂಪಿನ ಸ್ಪರ್ಶಕ್ಕೆಂದೇ ಕಾಯುತ್ತಿರುವ
ಬಿಳಿಹಾಳೆಯ ಕೆನ್ನೆಗೆ ಮೋಸ ಮಾಡುವುದು ಸಲ್ಲ.

ಈಗ ಆಮೆಯೂ ಬೇಗ ಬೇಗ ನಡೆಯಬೇಕು
ರಸ್ತೆ ಮೇಲೆ ಹಾಸಿದ ಅವರೆಯ ಕಾಳಿನ ಸಿಪ್ಪೆಯ
ಅಂದ ನೋಡುತ್ತ ನಿಂತರೆ ಕೆಟ್ಟಂತೆಯೇ ಕೆಲಸ
ಹಾಗೆಲ್ಲ ಕೈ ಮಾಡಿದ್ದಕ್ಕೆಲ್ಲ ನಿಲ್ಲಿಸುವುದಿಲ್ಲ ಬಸ್ಸು
ಅಲ್ಲೂ ಭಾರೀ ಪೈಪೋಟಿ; ಎರಡು ಟಿಕೀಟು
ಗೆದ್ದರೆ ಜಾಸ್ತಿ, ಅದೇ ಪರಮ ಆಸ್ತಿ.

ಅಂಜೂರದ ಹಣ್ಣನ್ನು ಬಿಡಿಸಿದಾಗ ಹುಳುವೊಂದು ಸಿಕ್ಕರೆ
ನಾನು ತಿನ್ನದೇ ಬಿಟ್ಟುಬಿಡುವುದಕ್ಕೆ ಹುಳು ಬದುಕಿಕೊಳ್ಳಲಿ
ಎಂಬ ಸಹಾನುಭೂತಿಯೇ ಕಾರಣ ಎಂದರೆ,
ಸ್ಥಿತಿಯ ನಿಶ್ಚಲತೆಯನ್ನು ಕಲಕಲೂ ಹಿಂಜರಿಯುವವನಿಗೆ
ಅಲೆಮಾರಿಯಾಗುವ ಕನಸೇಕೆ ಎಂದು ಪ್ರಶ್ನಿಸುತ್ತೀ ನೀನು.
ಉಲ್ಕೆಯೊಂದು ಜಾರಿ ಬೀಳುವಾಗ ಕಣ್ಮುಚ್ಚಿ ನಿಲ್ಲುವ
ನಾಸ್ತಿಕನನ್ನು ತೋರಿಸಿ ಮುಗುಳ್ನಗುತ್ತೇನೆ ನಾನು.

ನಿನ್ನ ಸ್ಥಾನದಲ್ಲಿ ನಾನು - ನನ್ನ ಸ್ಥಾನದಲ್ಲಿ ನೀನು
ನಿಂತು ನೋಡಬೇಕು ಎನ್ನುವುದೆಲ್ಲ ಬಾಯಿಮಾತಾಯ್ತು.
ನಿನ್ನಿಷ್ಟದ ಬದನೆಯ ಎಣ್ಣೆಗಾಯಿ ನನಗೆ ಅಲರ್ಜಿ
ನನ್ನಿಷ್ಟದ ಅರಿಶಿಣ ಕೊಂಬಿನ ತಂಬುಳಿ ನಿನಗೆ ಸೇರದು
ಸ್ಥಾನಮಾನಗಳ ಕತೆಯೆಲ್ಲ ಆಮೇಲೆ, ಮೊದಲು ಇವತ್ತಿನ
ಅಡುಗೆಗೆ ಏನು ಎಂಬುದಾಗಬೇಕು ನಿಷ್ಕರ್ಷೆ.

ತಿರುಮಲೇಶರು ಹೇಳಿದ್ದು, ಅಬೀಡ್ಸಿನಲ್ಲಿ ರಸ್ತೆಯನ್ನು
ದಾಟುವುದು ಕಷ್ಟ ಎಂದೇ ಹೊರತು
ವಾಹನಗಳಗುಂಟ ಬಿರಬಿರನೆ ನಡೆಯುವುದೇನಲ್ಲ
ಹೀಗೆ ನಡುರಸ್ತೆಯಲ್ಲಿ ವಾದ ಮಾಡುತ್ತ ನಿಂತರೆ ಹೇಗೆ?
ಫೆಬ್ರವರಿಗೆ ಇಪ್ಪತ್ತೆಂಟೇ ದಿನಗಳು
ಸಿಕ್ಕ ತರಕಾರಿ ಕೊಂಡು ನಡೆಯೋಣ ಬೇಗ ಮನೆಗೆ
ಉಳಿದರೆ ಸಮಯ, ಇದ್ದೇ ಇದೆ ಮಾತು-ಕತೆ-ಕಲಾಪ
ಎಂದಿಗೂ ಮುಗಿಯದ ನಮ್ಮಿಬ್ಬರ ವ್ಯರ್ಥಾಲಾಪ.

[ಫೆಬ್ರವರಿ 2012ರ  'ಮುಗುಳು' ಪತ್ರಿಕೆಯಲ್ಲಿ ಪ್ರಕಟಿತ]

1.. ಜಾಹೀರಾತು

2.ಜಾಹೀರಾತು