fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಜೂನ್ 26, 2020

ಕೋಲ ಶಾಂತಯ್ಯ

ವಚನಕಾರ
ಕೋಲ ಶಾಂತಯ್ಯ 
ಅಂಕಿತ ನಾಮ
ಪುಣ್ಯಾರಣೈದಹನ ಭೀಮೇಶ್ವರಲಿಂಗ ನಿರಂಗಸಂಗ
ಕಾಲ

ದೊರಕಿರುವ ವಚನಗಳು
103 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು
ಸುಖಪಟ್ಟಣವ ಕಂಡೆ.
ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ.
ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ.
ತಳವಾರ ತಿರುಗುವುದಕ್ಕೆ ಕಣ್ಣಿಲ್ಲ.
ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು.
ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ.
ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ.
ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ.
ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ?
ಬಂಟರು ಸತ್ತರು, ಅರಸು ನಷ್ಟವಾದ.
ಆ ಉಭಯದ ಬೇಧವ ನಾನರಿಯೆ, ನೀ ಹೇಳು.
ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.

ಸೋಮವಾರ, ಜೂನ್ 22, 2020

" ಅಮ್ಮನ ಹೃದಯ " (Mother Heart)

ಸೃಷ್ಠಿಕರ್ತನಿಗಿಲ್ಲ ಭಾರತದಲ್ಲಿ ದೇವಾಲಯ
ಅಮ್ಮನ ಪೂಜಿಸಲು ಬೇಕೇ ನಿರ್ದಿಷ್ಟ ಸಮಯ

ಜೀವಕೆ ಜೀವ ನಿಡುವ ಕಲೆಯ
ತಪಸ್ಸು ಮಾಡಿ ನೀ ಪಡೆದೆಯ

ನವ ಮಾಸಗಳಿಗೆ ರಕ್ಷಣೆಯ ಸಂಸ್ಥೆಯ
ಗರ್ಬವೆಂಬ ಆಲಯದಲ್ಲಿ ಮಿಸಲಿಟ್ಟೆಯ
ಶಿಶು ಪ್ರಪಂಚವನ್ನು ನೋಡುವ ಸಮಯ
ನೀ ಪುನರಜನ್ಮ ವೆತ್ತೆಯ

ಎಲ್ಲ ತಾಯಂದಿರ ಹಿರಿಮೆಯ
ಜಗತ್ತಿನೆಲ್ಲೆಡೆ ಸಾರುವೆಯ
ಸುಖ ಸಂತೋಷ ವೆಂಬ ಹಕ್ಕಿಯ
ಅವಳ ಪಾಧಾರವಿನ್ದಕೆ ಅರ್ಪಿಸುವೆಯ 

ನನ್ನ ಒಳಿತಿಗೆ ಬಚ್ಚಿಟ್ಟೆ ನಿನ್ನ ಭಾವನೆಯ
ಪ್ರೀತಿಂದ ಬಯಸುವೆ ನಿನ್ನ ಮಮತೆಯ
ಕರುಣಿಸು ನನಗೆ ನಿನ್ನ ಅಭಯ
ಶಿಕರಕ್ಕೆ ಸರಿಸಾಟಿ "ಅಮ್ಮನ ಹೃದಯ" 

                                                                                   ಕೃಪೆ:  ವಿನೋದ ಪ್ರಭು

ಗುರುವಾರ, ಜೂನ್ 18, 2020

ಸೋಮವಾರ, ಜೂನ್ 15, 2020

ಅ-ಅಃ & ಕ-ಕ್ಷ ನಮ್ಮ ಜೀವನ

ಮ್ಮನ ಮಡಿಲಿಂದ

... ಎಂದು ಅಳುತ್ತಾ

ಲ್ಲಿಗೆ

ಸಬೇಕು

ಪಕಾರಿಯಾಗಿ

ರಿಗೆ

ಣಿಯಾಗಲು

ಷ್ಟೇ ಏಗಿದರೂ

ದಂಕಿ ಸಂಬಳಕ್ಕೆ

ಗ್ಗಟ್ಟಿನಿಂದ

ಟದ ಜೀವನದಲ್ಲಿ

ಡು ಗಚ್ಚಿ

ಅಂದದ ಬದುಕಿಕಾಗಿ

ಅಃ ಹರ್ನಿಶಿ

ಷ್ಟ ಪಟ್ಟು
ಗದಂತೆ ಹಾರಿ, ಮೃಗದಂತೆ
ಟ್ಟಿಯಾಗಿ
ರ್ಜಿಸಲು ಆಗದೆ
ಸ್ವರದಂತೆ ಏಕಾಂಗಿಯಾಗಿ

ಲಿಸಲು ಕಷ್ಟ ಪಡುತ್ತಾ
ತ್ರಿಯಂತೆ ಬಿಸಿಲಿಗೆ ಒಡ್ಡಿಕೊಳ್ಳುತ್ತಾ
ಗತ್ತಿನಲ್ಲಿ
ರಿಯಂತೆ
(ನ್ಯಾ)ಸಾಗುತ್ತಾ (ಚೌಕಟ್ಟು)

ಗರಿನ ಚರ್ಮದಂತೆ
ಕ್ಕತನಕ್ಕೆ ಒಳಗಾಗುತ್ತಾ
ಮರುಗದ ಶಬ್ಧಕ್ಕೆ
ವಡವ ಗುಡುತ್ತಾ ಹ
ಕ್ಕೆ
ಕಾರ ಇಲ್ಲದೇ ಬರಿದೇ

ತ್ತರಿಸುತ್ತಾ..
ರಥರನೆ ನಡುಗುತ್ತಾ..
ನಕ್ಕಿಂತ ಕೀಳಾಗಿ

ನಕ್ಕೆ ಆಳಾಗಿ ಕಿರು
ಗುವಿನಾ ನೆಮ್ಮದಿಗೆ ಹಂಬಲಿಸುತ್ತಾ

ರಿಸರಕ್ಕೆ
ಲವಾಗದೇ (ಪೂರಕವಾಗದೇ)
ರಿದೇ
ಭಂ
ನುಷ್ಯನಾಗಿ

ಮನಿಗೆ ತನ್ನನ್ನು
ಕ್ಷಿಸು ಎಂದು ಸಾವಿಗೆ
ಜ್ಜೆಗೆಟ್ಟು
ರ ಬಯಸುತ್ತಾ ಕೊನೆಗೆ
ವವಾಗಲು
ಮಯ ಕಾಯುತ್ತಾ
ಗಲಿರು
ಲ್ಲೂ
ಕ್ಷಣ ಬದುಕಿ ಸಾಯುವ ನಮ್ಮ ಜೀವನ...

ಬುಧವಾರ, ಜೂನ್ 10, 2020

ತಾಣದ 8 ನೇ ವರ್ಷದ ಪಯಣ

ಇಂದಿಗೆ ನಾನು ಜಗತ್ತಿಗೆ ಬಂದು 8 ವರ್ಷಗಳು ಪೂರ್ಣವಾದವುಅಂದರೆ ತಾಣ ಉದಯಿಸಿ 8 ವರ್ಷಗಳಾಯಿತು 8 ವರ್ಷದ ನಂಟಿನಲ್ಲಿ ಪ್ರಸ್ತುತವಾಗಿ ಪ್ರಕಟವಾದ 
ಲೇಖನಗಳ ಸಂಖ್ಯೆ: 1199 ಇದ್ದು ಹಾಗೂ 
ಒಟ್ಟು ಪುಟಗಳ ವೀಕ್ಷಣೆ ಸಂಖ್ಯೆ: 2,26,432+ 
 ತಾಣ ಪ್ರಾರಭವಾದಾಗ ಪ್ರಕಟಿಸಿದ ಮೊದಲ ಲೇಖನದ ಲಿಂಕ್ 
ಬುದ್ಧನ ಮಾರ್ಗ ಮತ್ತು  ಪ್ರಸ್ತುತ ಲೇಖನ 1199 ನೇ ಪೋಸ್ಟ


      ಸಾಮಾನ್ಯವಾಗಿ ನೀವು ಬುದ್ದ ಚಿತ್ರ ನೋಡಿ ಅಷ್ಟು ಸರಿಯಾಗಿ ಚಿತ್ರವನ್ನು ಚಿತ್ರಿಸಿಲ್ಲ ಎಂದು ಕರೆದರೂ, ನನಗೆ ಬೇಜಾರಿಲ್ಲ ಆದರೆ ನೀವು ಚಿತ್ರ ತೆಗೆಯಲು ಸಾದ್ಯವೇ ಎಂದು ನಾನು ನಿಮ್ಮನ್ನ ಪ್ರಶ್ನಿಸುತ್ತೇನೆ. ಕಾರಣ ನಾನು ಚಿತ್ರವನ್ನು 10 ನೇ ತರಗತಿಯಲ್ಲಿದ್ದಾಗ ಚಿತ್ರಿಸಿದ್ದು, ಆಗ ಸಮಯದಲ್ಲಿ (10 ನೇ ತರಗತಿ) ಎಲ್ಲರೂ ಓದಿನ ಕಡೆ ಗಮನವನ್ನು ಕೊಡುತ್ತಿದ್ದರೆನಾನು ಪ್ರೌಡ ಶಾಲೆಗೆ ಬಂದಾಗ ಅಲ್ಲಿ ಚಿತ್ರಕಲೆ ಎಂಬ ಒಂದು ವಿಷಯವಿತ್ತು. ವಿಷಯದಲ್ಲಿ ನಾನು ಹೆಚ್ಚು ಆಸಕ್ತಿ ಹೊಂದುತ್ತಾ, 10 ನೇ ತರಗತಿ ತಲುಪಿದಾಗ ಪೆನ್ಸಿಲ್ ಬಳಸದೇ ನೇರವಾದಿ ಪೆನ್ನಿನ ಮೂಲಕ ಚಿತ್ರವನ್ನು ಬಿಡಿಸುವ ನಿರ್ಧಾರ ಮಾಡಿ ಕೆಲವು ಚಿತ್ರಗಳನ್ನು ಬಿಡಿಸಿದೆನು.  ಸಂಧರ್ಭದಲ್ಲಿ ಮೂಡಿಬಂದ ಚಿತ್ರವೇ  ಗೌತಮ ಬುದ್ದನ ಚಿತ್ರ.ನಾನು ಬುದ್ಧನ ಚಿತ್ರ ಚಿತ್ರಿಸುವ ಕಡೆ ಗಮನ ಕೊಟ್ಟು ನನಗೆ ಸುಂದರ ಕಾಣುವಂತೆ ಚಿತ್ರಿಸಿದ್ದೇನೆ.
ಹಾಗೆಯೇ ನಾನು ಕಾಲದಲ್ಲಿ ಚಿತ್ರಿಸಿದ ಕೆಲವು ಚಿತ್ರಗಳನ್ನು ನನ್ನ ಟೆಲಿಗ್ರಾಮನ ''ನಮ್ಮ ಕನ್ನಡ ನಾಡು'' ಗುಂಪಿನಲ್ಲಿ ಪ್ರಕಟಿಸಿದ್ದೇನೆನಿಮಗೆ ಚಿತ್ರ ನೋಡಬೆಕೆನ್ನುವ ಹೆಚ್ಚಿನ ಆಸಕ್ತಿ ಇದ್ದರೆ ಕೆಳಗಿನ ಲಿಂಕನ್ನು ನೋಡಿ... 
ಹಾಗೂ

ಧನ್ಯವಾದಗಳು....
ಇಂತಿ ನಿಮ್ಮ ಶಿವಕುಮಾರ



ಮಂಗಳವಾರ, ಜೂನ್ 09, 2020

ವಿಶ್ವವಿದ್ಯಾಲಯ


ಸಾಮಾಜಿಕ ತಾಣ

      ಸ್ನೇಹಿತರೊಂದಿಗೆ ಮತ್ತು ಬಂಧುವರ್ಗದವರೊಂದಿಗೆ ಸಂಪರ್ಕ ಸಾಧಿಸಲು ಅವರನ್ನು ಮುಖತಃ ಭೇಟಿಯಾಗುವುದು ಅಥವಾ ಅವರೊಂದಿಗೆ ಪತ್ರ ವ್ಯವಹಾರ ಇಟ್ಟುಕೊಳ್ಳುವುದು ಹಿಂದೊಮ್ಮೆ ಅನಿವಾರ್ಯವಾಗಿತ್ತು. ಎಲೆಕ್ಟ್ರಾನಿಕ್ ಸಂಪರ್ಕ ಸಾಧನಗಳು ಲಭ್ಯವಾದ ನಂತರ ಇ-ಮೇಲ್ ("ಮಿಂಚೆ", ಎಲೆಕ್ಟ್ರಾನಿಕ್ ಮೇಲ್) ಜನಪ್ರಿಯವಾಯಿತು. ತದನಂತರ ಸಾಮಾಜಿಕ ತಾಣಗಳು (ಸೋಷಿಯಲ್ ನೆಟ್‍ವರ್ಕಿಂಗ್) ಎಂಬ ಪರಿಕಲ್ಪನೆ ಹುಟ್ಟಿತು. ಉದಾಹರಣೆ: ಫೇಸ್‍ಬುಕ್, ಗೂಗಲ್+, ವಾಟ್ಸಪ್ ಮೊದಲಾದ ತಾಣಗಳು ಜನಪ್ರಿಯವಾದವು. ಈ ತಾಣಗಳನ್ನು ಬಳಸಲು ಖಾತೆ (ಅಕೌಂಟ್) ಅಗತ್ಯ; ಇಂಥ ಅಕೌಂಟ್ ಪಡೆಯಲು ಕೆಲವು ನಿಯಮಾವಳಿಗಳು ಇರುತ್ತವೆ. ಉದಾಹರಣೆಗೆ ಹದಿಮೂರು ವರ್ಷಕ್ಕೆ ಮೇಲ್ಪಟ್ಟವರಾಗಿರಬೇಕು, ಇತ್ಯಾದಿ. ಈ ತಾಣಗಳು ಅನೇಕ ಭಾಷೆಗಳಲ್ಲಿ ಲಭ್ಯವಾಗಿರುವುದರಿಂದ ಜಗತ್ತಿನಲ್ಲಿ ಅನೇಕ ದೇಶಗಳಲ್ಲಿ ಜನಪ್ರಿಯವಾಗಿವೆ. ಒಂದು ತಾಣದಲ್ಲಿ ನೀವು ಖಾತೆ ತೆರೆದರೆ ಅದೇ ತಾಣದಲ್ಲಿ ಖಾತೆಯನ್ನು ಹೊಂದಿದ ನಿಮ್ಮ ಮಿತ್ರರಿಗೆ ಅಥವಾ ಬಂಧುಗಳಿಗೆ ಸಂದೇಶ ಕಳಿಸಿ ಸಂಪರ್ಕ ಸಾಧಿಸಬಹುದು. ಸಾಮಾಜಿಕ ತಾಣಗಳನ್ನು ಬಳಸಲು ಯಾವುದೇ ಶುಲ್ಕ ಬೇಡ - ಏಕೆಂದರೆ ನೀವು ಕಲಿಸುವ ಸಂದೇಶಗಳನ್ನು ಗಮನಿಸಿ ನಿಮ್ಮ ಇಷ್ಟಗಳನ್ನು ಅರ್ಥ ಮಾಡಿಕೊಂಡು ಸೂಕ್ತವಾದ ಜಾಹೀರಾತುಗಳನ್ನು ನಿಮ್ಮ ತೆರೆಯ ಮೇಲೆ ಬಿಂಬಿಸುವ ತಂತ್ರಜ್ಞಾನ ಇಂದು ಲಭ್ಯ. ಜಾಹೀರಾತುಗಳ ಮೂಲಕ ಸಾಮಾಜಿಕ ತಾಣಗಳು ಗಳಿಸುತ್ತವೆ.

ಅನುಕೂಲಗಳು:

  • ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನಿಮ್ಮ ಮಿತ್ರರಿಗೆ ತಿಳಿಸುವುದು - ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಹೊರಟಿದ್ದರೆ ಅದನ್ನು ನಿಮ್ಮ ಸ್ಟೇಟಸ್‍ನಲ್ಲಿ ಹಾಕಬಹುದು (ಸ್ಥಿತಿ). ಇದನ್ನು ಗಮನಿಸಿದ ಮಿತ್ರರು ಪ್ರತಿಕ್ರಿಯೆ ನೀಡಬಹುದು. ಉದಾಹರಣೆಗೆ ದೇಹಲಿಯಲ್ಲಿರುವ ನಿಮ್ಮ ಮಿತ್ರರು "ನಮ್ಮ ಮನೆಗೆ ಬನ್ನಿ" ಎಂದು ನಿಮ್ಮನ್ನು ಸಂಪರ್ಕಿಸಬಹುದು. ಇದೇ ರೀತಿ ನೀವು ಮನೆ ಬದಲಾಯಿಸಿದರೆ, ಉದ್ಯೋಗ ಬದಲಾಯಿಸಿದರೆ, ಮದುವೆಯಾದರೆ, ಮಕ್ಕಳಾದರೆ ನಿಮ್ಮ ಮಿತ್ರರಿಗೆ/ಬಂಧುಗಳಿಗೆ ತಿಳಿಸಬಹುದು.
  • ನಿಮ್ಮ ಬಂಧುಗಳ ಜನ್ಮದಿನ ಮೊದಲಾದವನ್ನು ಕುರಿತು ಸಾಮಾಜಿಕ ತಾಣವು ನಿಮ್ಮನ್ನು ನೆನಪಿಸುವುದು.
  • ಕಾರ್ಯಕ್ರಮಗಳಿಗೆ ಬನ್ನಿ ಎಂದು ನಿಮ್ಮ ಮಿತ್ರರಿಗೆ ಸಂದೇಶ ಕಲಿಸಲು ಅನುಕೂಲ ಕಲ್ಪಿಸಲಾಗಿದೆ. "ಈವೆಂಟ್" (ಕಾರ್ಯಕ್ರಮ) ಸೃಷ್ಟಿಸಿ ಅದಕ್ಕೆ ಆಹ್ವಾನ ಕಳಿಸಿದರೆ ಅದನ್ನು ನಿಮ್ಮ ಮಿತ್ರರು ಸ್ವೀಕರಿಸಬಹುದು ಅಥವಾ "ಬರಲಾಗುವುದಿಲ್ಲ" ಎಂದು ತಿಳಿಸಬಹುದು.
  • ಸ್ಟೇಟಸ್ ಮೂಲಕ ಸಮಾಜದ ಆಗುಹೋಗುಗಳಿಗೆ ನಿಮ್ಮ ಪ್ರತಿಕ್ರಿಯೆ, ನಗೆಹನಿ, ಕವಿತೆ ಇತ್ಯಾದಿ ಹಂಚಿಕೊಳ್ಳಬಹುದು.
  • ಚಿತ್ರಗಳನ್ನು, ಆಡಿಯೋ-ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳಬಹುದು.

ಅನಾನುಕೂಲಗಳು:


  • ಸಾಮಾಜಿಕ ತಾಣದ ಬಳಕೆ ಒಂದು ಗೀಳಾಗಿ ಪರಿಣಮಿಸುವುದು, ಸಮಯ ಹಾಳಾಗುವುದು
  • ಸಾಮಾಜಿಕ ತಾಣದ ಕೃತಕ ವಿಶ್ವದಲ್ಲಿ ಬದುಕುತ್ತಾ ನಿಜಜೀವನವನ್ನು ನಿರ್ಲಕ್ಷಿಸುವುದು
  • ಸಂಬಂಧಗಳಲ್ಲಿ ಏರುಪೇರಾಗುವುದು ಉದಾ. ಗಂಡ-ಹೆಂಡಿರಲ್ಲಿ ಸಾಮಾಜಿಕ ತಾಣಗಳ ಬಳಕೆಯಿಂದ ಇರುಸು-ಮುರುಸು ಉಂಟಾಗುವುದು
  • ಅಪರಾಧ ಕಾರ್ಯಗಳಿಗೆ ಸಾಮಾಜಿಕ ತಾಣಗಳನ್ನು ಬಳಸುವುದು - ಉದಾ. ಅಸಭ್ಯ ಚಿತ್ರಗಳನ್ನು ಹಂಚುವುದು, ಹೆಣ್ಣುಮಕ್ಕಳನ್ನು ಪೀಡಿಸುವುದು, ಮಕ್ಕಳನ್ನು/ದುರ್ಬಲರನ್ನು ಪೀಡಿಸುವುದು, ಮಾದಕದ್ರವ್ಯಗಳ ಮಾರಾಟ, ಇತ್ಯಾದಿ
  • ರಾಜಕಾರಣ ಪ್ರಚಾರಕ್ಕಾಗಿ ಸಾಮಾಜಿಕ ತಾಣಗಳ ಬಳಕೆ
  • ಜನರ ಸ್ಥಿತಿಗತಿಗಳನ್ನು ಗಮನಿಸುತ್ತಾ ಸಮಾಜ ಯಾವ ಕಡೆ ಸಾಗುತ್ತಿದೆ (ಟ್ರೆಂಡ್ಸ್) ಎಂಬುದನ್ನು ತಂತ್ರಾಂಶದ ಮೂಲಕ ಅಳೆಯುವುದು ಮತ್ತು ಅದನ್ನು ನಿಯಂತ್ರಿಸಲು ಪ್ರಯತ್ನಿಸುವುದು                     ಕೃಪೆ: ವಿಕಿಪೀಡಿಯ

ಬುಧವಾರ, ಜೂನ್ 03, 2020

ಹೊಸ ಸ್ಯಾರಿ / ಪೂರ್ತಿ ಸ್ಯಾಲರಿ

ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ

ನನ್ನ ಹೆಂಡತಿಗೆ ಬೇಕು ವಾರಕ್ಕೆ ಮೂರು ಹೊಸ ಸ್ಯಾರಿ
..
ಒಂದೇ ವಾರದಲ್ಲಿ ಕರಗಿತು ನನ್ನ ಪೂರ್ತಿ ಸ್ಯಾಲರಿ

                                                                - Vರಂಗಯ್ಯ

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು