fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಮಾರ್ಚ್ 31, 2018

ಕನ್ನಡವೇ ಎಮ್ಮಯ ಸೊಲ್ ನುಡಿಯು

ಕನ್ನಡ ಕನ್ನಡ ಪೇಳುವೆನು
ಕನ್ನಡವೇ ಎನ್ನಯ ಸೊಲ್ ನುಡಿಯು
ಕನ್ನಡವೇ ಎಮ್ಮಯ ಪಡೆನುಡಿಯು

ಕನ್ನಡ ಕನ್ನಡವೆಂದೊಡೆ
ಪುರಜನ ಹಿಗ್ಗುವರು
ಕನ್ನಡಮ್ಮನ ಸೇವೆಗಯ್ವೊಲ್
ಶಿರಬಾಗಿ ನಡೆವರು

ನೊಸಲಲಿ ತೀಡಿದ ಬರಹವು ಕನ್ನಡ
ಜಿಹ್ವೆಯು ನುಲಿಯುವ ಸಿರಿಗನ್ನಡ
ನಯನದ ಕಾಂತಿಯು ಕನ್ನಡ
ಕರಣದ ಇಂಪದು ಸವಿಗನ್ನಡ

ಜ್ನಾನದೀವಿಗೆ ಕನ್ನಡ
ಕರುನಾಡ ಜ್ಯೋತಿಯು ಕನ್ನಡ
ಸಾತ್ವಿಕ ಜಗದೊಳು
ತನುಮನವೂ ಕನ್ನಡ

ಇತಿಹಾಸ ಶಾಸನದಿ
ಹಲ್ಮಿಡಿಯ ವೈಬವ
ಕಾವೇರಿಯಿಂದಲಿ ಗೋದಾವರಿಯೆಡೆಗೆ
ಪಸರಿಸಿದ್ದ ಕನ್ನಡ
ಹಂಪಿಯ ರತದಲಿ ಮೆರೆದ ಕನ್ನಡ
ಬೇಲೂರ ಶಿಲ್ಪದಿ ತೀಡಿದ ಕನ್ನಡ

ರತ್ನಾತ್ರಯರಲಿ ನಲಿದಾಡಿದ ಕನ್ನಡ
ಕುಮಾರವ್ಯಾಸನು ಕುಣಿದಾಡಿಸಿದ ಕನ್ನಡ
ರಾಜವಂಶದಿ ಪೌರುಶವ ಹುಟ್ಟಿಸಿದ ಕನ್ನಡ
ಶತ್ರುಗಳ ರುಂಡವ ಅಟ್ಟಾಡಿಸಿದ ಕನ್ನಡ

ಕನ್ನಡವೇ ಎಮ್ಮಯ ಸೊಲ್ ನುಡಿಯು
ಕನ್ನಡ ಎಂಬುದೆ ಎಮ್ಮಯ ದಿವ್ಯಮಂತ್ರವು 

ಇಂದ : ಕೌಸಲ್ಯ

ಬುಧವಾರ, ಮಾರ್ಚ್ 28, 2018

ಬಂಡಿ - ಕುದುರೆ - ಆನೆ - ದುಷ್ಟ ಮನುಷ್ಯ


ಒಂದು ಬಂಡಿಯಿಂದ ಐದು ಗಜ ದೂರವಿರಬೇಕು,
ಕುದುರೆಯಿಂದ ಹತ್ತು ಗಜ
ಮತ್ತು
ಆನೆಯಿಂದ ನೂರು ಗಜ ದೂರವಿರಬೇಕು,
ಆದರೆ
ಒಬ್ಬ ದುಷ್ಟ ಮನುಷ್ಯನಿಂದ ಎಷ್ಟು ದೂರವಿರಬೇಕು ಎನ್ನುವುದನ್ನು ಅಳೆಯಲು ಸಾಧ್ಯವೇ ಇಲ್ಲ.

ಶನಿವಾರ, ಮಾರ್ಚ್ 24, 2018

ಊರು

ಹೇಳ್ಕೊಳೋಕ್ ಒಂದು ಊರು ಅಂತ ಇರಬೇಕು. ಅದು ಕೊಳಕ್ ಆಗಿದ್ರೂ ಪರ್ವಾಗಿಲ್ಲ.
ನಗರೀಕರಣದಿಂದಾಗಿ ಕಳೆದು ಹೋಗುತ್ತಿರುವ ಸಾಂಸ್ಕೃತಿಕ ಕೇಂದ್ರಗಳು
ರಜೆಯಲ್ಲಿ ಭೇಟಿ ಕೊಡಬಹುದಾದ ಆಧುನೀಕರಣ ಪ್ರವಾಸೀ ತಾಣ
ಕೇರಿಕೇರಿಗಳ ಸಂಗಮ
ಅಜ್ಜಿ ಕತೆ ಶುರುವಾಗೋದೇ ಇದರಿಂದ, ಒಂದಲ್ಲ ಒಂದೂರಿನಲ್ಲಿ...
ತೊಡೆ ಭೀಮ ಮುರಿದ ದುರ್ಯೋಧನನ ಅಂಗ
ಊರನ್ನೇ ವಶವಾಗಿಸಿಕೊಳ್ಳಬಲ್ಲಂಥ ಊರ್ವಶಿಯರ ಸೌಂದರ್ಯದ ಖನಿ ಭಾಗ
ಊರಿನ ಶಾಂತಿ ನಗರದಿಂದಾಗಿ ಹಾಳಾಗುತ್ತಿದೆ. ಇದಕ್ಕೆ ಊರು-ಭಂಗ ಎನ್ನಬಹುದು
ನಮ್ಮೂರೇ ನಮಗೆ ಚೆಂದ; ರಜೆಯಲ್ಲಿ
ಊರಿಗೆ ಬಂದವನು ಬಾರಿಗೆ ಬಾರದಿಹನೇ...
ಊರು ಬಿಟ್ಟವ ಉದ್ಧಾರವಾಗುತ್ತಾನೆ... ಮೂರು ಬಿಟ್ಟವ ದೊಡ್ಡವನಾಗುತ್ತಾನೆ
ಊರಿನಲ್ಲಿ ತಳವೂರುವ ಮೊದಲು ಊರೂರು ಅಲೆಯಬೇಕು

-ವಿಶ್ವನಾಥ ಸುಂಕಸಾಳ

ಗುರುವಾರ, ಮಾರ್ಚ್ 22, 2018

ಅಮ್ಮ ಖುಷಿಪಟ್ಟ ದಿನ (Laughed the Mother)



ನಾ ಹುಟ್ಟಿದ ಮೇಲೆ ತಾನೆ 
ನೀ ನಿನಗಾಗಿ ಬದುಕೋದ ಮರೆತದ್ದು..
ನನ್ನಲ್ಲೆ ನಿನ್ನ ಬದುಕ ಕಾಣತೊಡಗಿದ್ದು
ಎಂತಹ ಅನುಬಂದವಿದು 
ಸೃಷ್ಟಿ ಕರ್ತನ ನಿಷ್ಕಲ್ಮಶ ಸಂಬಂದವಿದು..

ನಾ ಗರ್ಭದಲ್ಲಿರುವಾಗಲೇ 
ನನ್ನ ಮೇಲೆ ಕಟ್ಟತೊಡಗಿದ 
ಕನಸುಗಳನೆಲ್ಲ ಎಲ್ಲರೊಡನೆ ವಿವರಿಸುತ್ತಿದ್ದೆ..
ಅಂದೆ ನಿನ್ನೆಲ್ಲಾ ಕನಸು ನಾನಗತೊಡಗಿದೆ..



ಅತ್ತರೆ ಹಸಿವೆಂದು 
ಮೊದಲು ಎದೆಹಾಲ ಉಣಿಸಿ..
ನನ್ನ ಖುಶಿಗೆಂದು ಅಪ್ಪನಿಂದ 
ಏನೆಲ್ಲಾ ಆಟಾಸಾಮಾನ ತರಸಿ..
ನನ್ನ ನಗುವ ನೀ ನೋಡುತ್ತಿದ್ದೆ..



ತುತ್ತು ತಿನ್ನಲು ಹಟತೊಟ್ಟರೆ 
ಮುತ್ತು ನೀಡುತ, ಅಪ್ಪನನ್ನೇ ಆನೆ ಮಾಡಿ 
ನನ್ನ ಅಂಬಾರಿಯಂತೆ ಕೂರಿಸಿ 
ಏನೆಲ್ಲಾ ಆಟ ಆಡಿಸಿ 
ಚಂದಮಾಮನ ಕೊಡಿಸೋ ಆಸೆ ತೋರಿಸಿ 
ನನ್ನ ಕಿಲ ಕಿಲ ನಗುವಲಿ 
ಆ ನಗುವ ನಡುವಲಿ ತುತ್ತು ತಿನ್ನಿಸಿ 
ಏನೆಲ್ಲಾ ಸಂತಸವ ಕಾಣುತ್ತಿದ್ದೆ..



ನೀನು ನಿನಗೋಸ್ಕರ 
ಅಂದಿನಿಂದ ಖುಷಿಪಟ್ಟ ದಿನ 
ನಾ ನೋಡಲೇ ಇಲ್ಲವಲ್ಲ 
ಕಾರಣ ನಿನಗೆ ನಾನೇ ಎಲ್ಲ ಅಲ್ಲ..
ನನ್ನ ಕಣ್ಣಲೊಂದು ಹನಿ ಬಿದ್ದರೆ 
ಅಂದು ಮರುಗಿದವಳು ನೀನೆ 
ಇಂದಿಗೂ ಎಲ್ಲಿದ್ದರು ಕನಳುವಳು ನೀನೆ..
ನಿನ್ನ ಋಣ ಹೇಗೆ ತೀರಿಸಲಿ 
ಮರು ಜನ್ಮದಲ್ಲಾದರೂ ನನಗೆ 
ಕರುಣಿಸು ನಿನ್ನ ಸ್ಥಾನವ...



ಕೃಪೆ : ಜಗನ್ನಾಥ ಆರ್.ಏನ್

ಶುಕ್ರವಾರ, ಮಾರ್ಚ್ 09, 2018

ರಾಮಯಾಣದ ಸ್ವಾರಸ್ಯ ಸಂಗತಿಗಳು 5

ರಾಮಾಯಣದ ಪ್ರಕಾರ ದೇವರು ಕೇವಲ 33

        ಹಿಂದೂಗಳ ನಂಬಿಕೆಯಂತೆ ಮುಕ್ಕೋಟಿ (ಮೂರು ಕೋಟಿ) ದೇವರು, ಮೂವತ್ತಮೂರು ಕೋಟಿ ದೇವರು ಎಂದೆಲ್ಲ ಹೇಳಲಾಗುತ್ತದೆ. ಸರಿಯಾಗಿ ಕುಳಿತು ಲೆಕ್ಕ ಹಾಕಿದರೆ ಲಕ್ಷಾಂತರ ದೇವರಂತೂ ಸಿಕ್ಕೇ ಸಿಗುತ್ತಾರೆ. ಆದರೆ ರಾಮಾಯಣದ ಪ್ರಕಾರ ದೇವರು ಹಾಗೂ ದೇವತೆಗಳಿರುವುದು 33 ಮಾತ್ರ. ರಾಮಾಯಣದ ಅರಣ್ಯಕಾಂಡದಲ್ಲಿ ಇದರ ಉಲ್ಲೇಖವಿದೆ.             ಕೃಪೆ : ಕೆ.ಟಿ.ಆರ್

ಗುರುವಾರ, ಮಾರ್ಚ್ 08, 2018

ಅಂತಾರಾಷ್ಟ್ರೀಯ ಮಹಿಳಾ ದಿನ ಮಾರ್ಚ 8

        ಅಂತಾರಾಷ್ಟ್ರೀಯ ಮಹಿಳಾ ದಿನ ಹೆಣ್ಣುಮಗಳ ಶಕ್ತಿ ಸಾಮರ್ಥ್ಯ, ತ್ಯಾಗ ಬಲಿದಾನಗಳ ಬಗ್ಗೆ ಹಾಡಿ ಹೊಗಳಲು ಮತ್ತೊಂದು ವಿಶೇಷ ದಿನ. ದಿನಗಳ ಆಚರಣೆ ಅರ್ಥಹೀನ ನಾವು ಅದರ ಹಿಂದಿನ ಅರ್ಥ ಹುಡುಕಿ ಮಹಿಳೆಗಾಗಿ ಸಮಾನತೆಯ ಪ್ರಬಂಧ ಸೃಷ್ಟಿಸಲು ಅಸಮರ್ಥರಾದಾಗ. ಆಧುನಿಕ ಯುಗದಲ್ಲಿ ಮಹಿಳೆ ಬಹಳಷ್ಟನ್ನು ಸಾಧಿಸಿದ್ದರೂ ಪ್ರಪಂಚದ ಹಲವು ಭಾಗಗಳಲ್ಲಿ ಈಗಲೂ ಆಕೆ ಕಗ್ಗತ್ತಿಲಿನಲ್ಲಿ ತಡಕಾಡುತ್ತಿದ್ದಾಳೆ. ಬಿರುದು ಬಾವಲಿ, ಸಮ್ಮಾನ ಸಂಪತ್ತಿಗಾಗಿ ಅಲ್ಲ, ದೇವರು ಹೆಣ್ಣು ಗಂಡು ಎನ್ನುವ ಬೇಧವಿಲ್ಲದೆ ಕೊಡಮಾಡಿದ ಸ್ವಾತಂತ್ರ್ಯಕ್ಕಾಗಿ.



ಬಣ್ಣದ ಮಾನವ ಪಂಜರ + ಸಮಯ




ಶನಿವಾರ, ಮಾರ್ಚ್ 03, 2018

" ಸ್ನೇಹಿತ / ತೆ "

ಲೈಫನಲ್ಲಿ ಸ್ನೇಹ ಇರಲಿ 

ಸ್ನೇಹದಲ್ಲಿ ಸಹನೆ ಇರಲಿ 

ಸಹನೆಯಲ್ಲಿ ಕರುಣೆ ಇರಲಿ 

ಕರುಣೆಯಲಿ ಮನಸಿರಲಿ 

ನಿಮ್ಮ ಮುದ್ದಾದ ಮನಸಿನಲಿ ಈ "ಸ್ನೇಹಿತ/ತೆ" ನೆನಪಿರಲಿ .

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು