fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಇಳಿದು ಬಾ ತಾಯಿ

 
ಕವಿ : - ವರಕವಿ ಡಾ.ದ.ರಾ.ಬೇಂದ್ರೆ ( ಅಂಬಿಕಾತನಯದತ್ತ )
ಸಂಗೀತ / ಗಾಯನ – ಪಿ.ಕಾಳಿಂಗ ರಾವ್

ಇಳಿದು ಬಾ ।।
ಹರನ ಜಡೆಯಿಂದ
ಹರಿಯ ಅಡಿಯಿಂದ
ಋಷಿಯ ತೊಡೆಯಿಂದ
ನುಸುಳಿ ಬಾ
ದೇವದೇವರನು ತಣಿಸಿ ಬಾ
ದಿಗ್ದಿಗಂತದಲಿ ಹಣಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ನಿನಗೆ ಪೊಡಮಡುವೆ
ನಿನ್ನನುಡುತೊಡುವೆ
ಏಕೆ ಎಡೆತಡೆವೆ
ಸುರಿದು ಬಾ
ಸ್ವರ್ಗ ತೊರೆದು ಬಾ
ಬಯಲ ಜರೆದು ಬಾ
ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ
ಉದ್ಬುದ್ಧ ಶುದ್ಧ ನೀರೇ
ಎಚ್ಚತ್ತು ಎದ್ದ ಆಕಾಶದುದ್ದ
ಧರೆಗಿಳಿಯಲಿದ್ದ ಧೀರೇ
ಸಿರಿವಾರಿಜಾತ ವರಪಾರಿಜಾತ
ತಾರಾ-ಕುಸುಮದಿಂದೆ।।

ವೃಂದಾರವಂದ್ಯೆ ಮಂದಾರಗಂಧೆ
ನೀನೆ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ ಅನ್ಯೆ
ಸಚ್ಚಿದಾನಂದ ಕನ್ಯೆ ।।

ಬಂದಾರ ಬಾರೆ, ಒಂದಾರೆ ಸಾರೆ
ಕಣ್ಧಾರೆ ತಡೆವರೇನೇ ।।
ಅವತಾರವೆಂದೆ ಎಂದಾರೆ ತಾಯಿ
ಈ ಅಧ:ಪಾತವನ್ನೇ ।।

ಹರಕೆ ಸಂದಂತೆ
ಮಮತೆ ಮಿಂದಂತೆ
ತುಂಬಿ ಬಂದಂತೆ
ದುಮ್‌ದುಮ್ ಎಂದಂತೆ
ದುಡುಕಿ ಬಾ ।।

ನಿನ್ನ ಕಂದನ್ನ ಹುಡುಕಿ ಬಾ ।।
ಹುಡುಕಿ ಬಾ ತಾಯಿ
ದುಡುಕಿ ಬಾ.
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ
ಇಳಿದು ಬಾ.।।

ಶಂಭು-ಶಿವ-ಹರನ ಚಿತ್ತೆ ಬಾ
ದತ್ತ ನರಹರಿಯ ಮುತ್ತೆ ಬಾ
ಅಂಬಿಕಾತನಯನತ್ತೆ ಬಾ
ಬಾರೆ ಬಾ ತಾಯಿ ಇಳಿದು ಬಾ
ಇಳಿದು ಬಾ.।।

ಕನ್ನಡ ಗೀತೆಯ QR ಕೋಡ

ಹಂಪಿಯ ಗುಡಿಇಇಇಇಇ,
ಕಲ್ಲಿನ ನುಡಿಇಇಇಇಇ,
ಕನ್ನಡದ ಗುಡಿಇಇಇಇ,
ಇತಿಹಾಸ ಹೇಳಲೆಂದೆ ಇರುವ ಗುಡಿಇಇಇ...
ಕನ್ನಡ ಗೀತೆ QR ಕೋಡ ಸ್ಕ್ಯಾನ್ ಮಾಡಿ ಹಾಡು ಕೇಳಿ

ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ

ಅಂಕಿತ ನಾಮಶುದ್ಧಸಿದ್ಧಪ್ರಸಿದ್ಧ ಕುರುಂಗೇಶ್ವರಲಿಂಗ 
ಕಾಲ೧೧೬೦ 
ದೊರಕಿರುವ ವಚನಗಳು11 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯಕಾಲಸು. 1160. ಮುತ್ತಣ್ಣ ಎಂಬ ಹೆಸರೂ ಇವನಿಗಿದೆರಾತ್ರಿಯ ಹೊತ್ತಿನಲ್ಲಿ ಪ್ರಹರಿ ಕೆಲಸ ಮಾಡುತ್ತಿದ್ದಈತನ 11 ವಚನಗಳು ದೊರೆತಿವೆತನ್ನ ಕಸುಬಿನ ವಿವರಗಳನ್ನು ರೂಪಕಗಳನ್ನಾಗಿ ಬಳಸಿಕೊಂಡಿದ್ದಾನೆ.


ಅಂಗವಿಕಾರ ಸಾಕೇಳಿಬಹುವಿಡಂಗದ ಪ್ರಕೃತಿಯ ಮರದೇಳಿ.
ನಿಮ್ಮ ಭಕ್ತಿಮುಕ್ತಿಯ ಲಿಂಗದ ಕೂಟವ ನೆನೆದೇಳಿ.
ನಿಮ್ಮ ಗುರುವಾಜ್ಞೆಯ
ನಿಮ್ಮ ವಿರಕ್ತಿ ಅರಿವಿನ ಸಾವಧಾನವನರಿದೇಳಿ.
ಸಾರಿದೆಎವೆ ಹಳಚಿದಡಿಲ್ಲ,
ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

ಅಮ್ಮನ ನೆನಪು ಕಾಡುತ್ತಿದೆ...ಎಂಥಾ ಚೆಂದ ನನ್ನ ಅಮ್ಮ
ನೀವು ಇವಳ ಬಲ್ಲಿರೆ...
ಇವಳ ಮಾತು ಇವಳ ಮಮತೆ
ಮಧುರ ನೆನಪ ಚೆಲ್ಲಿರೆ...

ನಾನಿಹೆನು ಬಲುದೂರ
ಮರಳಿಬರಲು ಕಾತರ...
ಅಮ್ಮ ನಿನಗೆ ಹೇಳಲೇನು
ಮನದಲೆಷ್ಟು ಬೇಸರ...

ಅಮ್ಮ ನಿನ್ನ ಮಾತೇ ಮುತ್ತು
ನನ್ನ ಮನದ ತುಂಬೆಲ್ಲಾ...
ಕಾಡಿದೆ ನಿನ್ನ ಕೈತುತ್ತು
ನೀ ತುಂಬಿರುವೆ ಮನದಲೆಲ್ಲಾ...

ಅಮ್ಮ ನಿನ್ನ ನೆನಪು ನನ್ನ
ಪದೇ ಪದೇ ಕಾಡಿದೆ...
ಕಣ್ಣಂಚಿನಲಿ ಜಿನುಗುತಿದೆ
ನೆನಪ ಬಿಂದು ನಿನ್ನದೇ...
                                                                                                         Posted by Prashanth Urala. G

ಕುದುರೆ ಸವಾರಿಚಡ್ಡಿ ಗಿಡ್ಡಿ ಹಾಕಿಕೊಂಡು
 
ಕುದುರೆ ಮೇಲೆ ಕುಳಿತುಕೊಂಡು
 
ಲಗಾಮು ಹಿಡಿದುಕೊಂಡು
 
ಹೈ! ಹೈ! ಹೈ!


ಲಂಗ ಗಿಂಗ ಹಾಕಿಕೊಂಡು
 
ಕುದುರೆ ಮೇಲೆ ಕುಳಿತುಕೊಂಡು
 
ಅಣ್ಣನ ಸೊಂಟ ಹಿಡಿದುಕೊಂಡು
 
ಹೈ! ಹೈ! ಹೈ!


ಕಂದು ಬಣ್ಣ ನಮ್ಮ ಕುದುರೆ
 
ಗಾಳಿ ಹಾಗೆ ಓಡೊ ಕುದುರೆ
 
ನಮ್ಮ ಕುದುರೆ! ನಮ್ಮ ಕುದುರೆ!

ಹೈ! ಹೈ! ಹೈ!


ಕುದುರೆ ಮೇಲೆ ಕುಳಿತುಕೊಂಡು
 
ಅದರ ಬೆನ್ನ ತಟಕೊಂಡು
 
ಅಲ್ಲಿ ಇಲ್ಲಿ ಸುತ್ತಿಕೊಂಡು
 
ಹೈ! ಹೈ! ಹೈ!


ಕುದುರೆ ಮೇಲೆ ಕುಳಿತುಕೊಂಡು
 
ಹಳ್ಳ ಗಿಳ್ಳ ಹಾರಿಕೊಂಡು
 
ಮನೆಗೆ ಬಂದು ಸೇರಿಕೊಂಡು
 
ಹೈ! ಹೈ! ಹೈ!


ಕುದುರೆ ಮೈಯ ಸವರಿ ತಟ್ಟಿ
 
ಹುರುಳಿ ಗಿರಳಿ ತಂದು ಕೊಟ್ಟು
 
ಸಾಕುವೆವು ನಮ್ಮ ತಟ್ಟು
 
ಹೈ! ಹೈ! ಹೈ!


--
ಜೆ. ಪಿ. ರಾಜರತ್ನಂ ಅವರಕಡ್ಲೆಪುರಿಸಂಕಲನದಿಂದ.