fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಮಾರ್ಚ್ 11, 2017

ಆ ಹೆಣ್ಣು ಮಗುವಿನ ಕೂಗು...

ಇಂದು ವಿಶ್ವ ಮಹಿಳಾ ದಿನ - ಎಲ್ಲ ಮಹಿಳೆಯರಿಗೆ ಮಹಿಳಾ ದಿನದ ಶುಭಾಶಯಗಳನ್ನು ಹೇಳುತ್ತ, 
ಕೆಲವು ಮಗುವಿನ ಕೂಗು... 
ಹೀಗೆ ಹೇಳುತ್ತಿವೇ ಅವು ಹಿಗಿವೇ...........................................................

ಅಪ್ಪಾ ಹೆಣ್ಣು ಮಗುವಾಗಿ ಹುಟ್ಟಿರುವುದೇ ನಾನು ಮಾಡಿರುವ ತಪ್ಪಾ....?
ನನಗೆ ಬದುಕಬೇಕೆಂಬ ಆಶೆಯಿದೆ, ನಿಮ್ಮ ಮಡಿಲಲ್ಲಿ ಮಲಗಬೇಕೆಂಬ ಬಯಕೆಯಿದೆ, ಆದರೆ ನೀವು ನಾನು ಹೆಣ್ಣು ಎಂಬ ಕಾರಣಕ್ಕೆ ಹೀಗೆ ಕಾಡಿನಲ್ಲಿ ಬಿಟ್ಟು ಹೋಗುತ್ತೀರಾ ಅಂದುಕೊಂಡಿರಲಿಲ್ಲ.

ಅಪ್ಪ ನಿಮ್ಮನ್ನು ಹೆತ್ತ ತಾಯಿ ಹೆಣ್ಣಾಲ್ಲವೇ.....?
ಅಪ್ಪ ನೀನು ಮದುವೆಯಾದ ಅರ್ಧಾಂಗಿ ಹೆಣ್ಣಾಲ್ಲವೇ.....?
ಅಪ್ಪ ನೀನು ಪ್ರತಿ ವರ್ಷ ರಾಖಿ ಹುಣ್ಣಿಮೆಯ ದಿನ ರಾಖಿ ಕಟ್ಟುವ ನಿನ್ನ ಸಹೋದರಿ ಹೆಣ್ಣಾಲ್ಲವೇ.....?
ಅಪ್ಪ ನಿನಗೆ ಕಾಯಿಲೆ ಬಂದಾಗ ಚಿಕಿತ್ಸೆಗಾಗಿ ಹೋದಾಗ ಅಲ್ಲಿರುವ ನರ್ಸ್ ಹೆಣ್ಣಾಲ್ಲವೇ.....?
ಅಪ್ಪ ನೀನು ಕಲಿತ ವಿದ್ಯೆಯ ವಿದ್ಯಾ ದೇವತೆ ಸರಸ್ವತಿ ಹೆಣ್ಣಾಲ್ಲವೇ....?
ಅಪ್ಪ ನೀನು ಪ್ರತಿ ದಿನ ಕಷ್ಟ ಪಡುತ್ತಿರುವ ಹಣ ಲಕ್ಷ್ಮಿ ಹೆಣ್ಣಾಲ್ಲವೇ....?
ಅಪ್ಪ ಇಷ್ಟೊಂದು ಹೆಣ್ಣುಗಳಿಗೆ ನಿಮ್ಮ ಜೀವನದಲ್ಲಿ ಸ್ಥಾನ ಇರಬೇಕಾದರೆ ನನ್ನ ಯಾಕೆ ಕೊಲೆ ಮಾಡಿದ್ದೀರಿ...? 

ದೇವರು ಮೊಸಮಾಡಿದ ಅಪ್ಪ, ನಿನಗೆ ಮನುಷ್ಯ ಜನ್ಮ ನೀಡಿ ಭೂಮಿಗೆ ಕಳುಹಿಸುತ್ತಿದ್ದಿನಿ ಎಂದು ಹೇಳಿದ ಆದರೆ....
ಆದರೆ ಹೀಗೆ ಹುಟ್ಟಿದರೆ ನಿಮ್ಮ ತಂದೆಗೆ ಅವಮಾನ ಎಂದು ಹೇಳಲಿಲ್ಲ....
"ಪ್ರಾಮಿಸ್ ಯು" ಅಪ್ಪಾ ನೀವು ತಲೆ ಎತ್ತಿ ಹೆಮ್ಮೆಪಡುವಂತಹ ಕೆಲಸ ಮಾಡುತ್ತೀನಿ...
'" ಐ ಲವ್ ಯು" ಅಪ್ಪಾ.....
ಒಂದು ಸಾರಿ ನನ್ನ ನೋಡಲು ಬಾ ಪ್ಲೀಸ್.....
ನನ್ನ ಈ ನಿರ್ಜೀವ ದೇಹ ಕೂಡ ನನ್ನ ಅಪ್ಪ ಬೇಕು.... ನನ್ನ ಅಪ್ಪ ಬೇಕು.... ಎಂದು ಪರಿತಪಿಸುತ್ತಿದೆ.
ಒಂದು ಸಾರಿ ನನ್ನ ನೋಡಲು ಬಾ ಅಪ್ಪಾ ಪ್ಲೀಸ್.....

ಇಂತಹ ತಾಯಿ ತಂದೆಯರಲ್ಲಿ ಬದಲಾವಣೆ ತರಲು ಈ ಲೇಖನವನ್ನು ಸಾದ್ಯವಾದಷ್ಟು ಜನರಿಗೆ ಹಂಚಿಕೊಳ್ಳಿ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು