fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

೬೪ ಕಲೆಗಳು

೧. ಗೀತಾ (ಹಾಡುಗಾರಿಕೆ)

೨. ವಾದ್ಯ (ವಾದ್ಯಗಳನ್ನು ನುಡಿಸುವುದು)


೩. ನೃತ್ಯ (ನರ್ತಿಸುವುದು)


೪. ಆಲೇಖ್ಯ (ಚಿತ್ರಗಳನ್ನು ರಚಿಸುವುದು)


೫. ವಿಶೇಷಕಚ್ಛೇದ್ಯ (ಹಣೆಯ ಮೇಲೆ ತೊಡಲು ಆಗುವಂತೆ ವಿವಿಧಾಕೃತಿಗಳಲ್ಲಿ ಎಲೆಗಳನ್ನು ಬಿಡಿಸುವುದು)


೬. ತಂಡುಲ-ಕುಸುಮ-ಬಲಿವಿಕಾರ (ಪೂಜೆಗಾಗಿ ಅಕ್ಕಿ ಮತ್ತು ಹೂಗಳನ್ನು ಜೋಡಿಸುವುದು)


೭. ಪುಷ್ಪಾಸ್ತರಣ (ಮನೆಯನ್ನು ಹೂಗಳಿಂದ ಅಲಂಕರಿಸುವುದು)


೮. ದಶನವಸನಾಂಗರಾಗ (ಹಲ್ಲುಗಳಿಗೂ, ಬಟ್ಟೆಗಳಿಗೂ ಮತ್ತು ಶರೀರಕ್ಕೂ ಬಣ್ಣಗಳನ್ನು ಹಚ್ಚುವುದು)


೯. ಮಣಿಭೂಮಿಕಾಕರ್ಮ (ರತ್ನಜಡಿತವಾದ ನೆಲಗಟ್ಟು ಮಾಡುವುದು; ಮೊಸಾಯಿಕ್ ಕೆಲಸ, ‘ಗೊಂಬೆಗಳನ್ನು ಮಾಡುವುದು’ ಎಂದೂ ಅರ್ಥೈಸಿದೆ.)


೧೦. ಶಯನರಚನ (ಹಾಸಿಗೆಗಳನ್ನು ಮಾಡುವುದು)


೧೧. ಉದಕವಾದ್ಯ (ಮುರಜ ಮೊದಲಾದುದರ ದನಿಯಾಗುವಂತೆ ನೀರಿನ ಮೇಲೆ ಬಾರಿಸುವುದು)


೧೨. ಉದಕಾಘಾತ (ಜಲಕ್ರೀಡೆಯಲ್ಲಿ ನೀರನ್ನು ಬೊಗಸೆಗಳಲ್ಲಿ ತುಂಬಿ ಇತರರಿಗೆ ಬಲವಾಗಿ ಎರಚುವುದು)


೧೩. ಚಿತ್ರಾಯೋಗ (ಮದ್ದು ಮೂಲಿಕೆಗಳಿಂದ, ಔಷಧಗಳಿಂದ ಮಂತ್ರಗಳಿಂದ ಬೇರೆಯವರು ಕೃಶಕಾಯರೂ, ಅಕಾಲಿಕವಾಗಿ, ತಲೆ ನರೆತವರೂ ಹುಚ್ಚರೂ ಮುಂತಾಗಿ ಆಗುವಂತೆ ಮಾಡುವುದು)


೧೪. ಮಾಲ್ಯಗ್ರಥನವಿಕಲ್ಪ (ಹಲವು ರೀತಿಗಳಲ್ಲಿ ಹೂವಿನ ಹಾರಗಳನ್ನು ಕಟ್ಟುವುದು)


೧೫. ಶೇಖರಕಾಪೀಡಯೋಜನ (ಉಚಿತವಾದ ಸ್ಥಳಗಳಲ್ಲಿ ಶಿರೋಭೂಷಣವಾಗಿ ಶೇಖರಕ ಮತ್ತು  ಆಪೀಡಕ ಎಂಬೆರಡು ರೀತಿಯ ಆಭರಣಗಳನ್ನು ಧರಿಸುವುದು)


೧೬. ನೇಪಥ್ಯಪ್ರಯೋಗ (ತಾನು ವಸ್ತ್ರಾಲಂಕಾರ ಮಾಡಿಕೊಳ್ಳುವುದು ಅಥವಾ ಇತರರಿಗೆ ಮಾಡುವುದು)


೧೭. ಕರ್ಣಪತ್ರಭಂಗ (ದಂತ ಮೊದಲಾದವುಗಳಿಂದ ಕರ್ಣಾಭರಣಗಳನ್ನು ಮಾಡುವುದು)


೧೮. ಗಂಧಯುಕ್ತಿ (ಪರಿಮಳದ್ರವ್ಯಗಳ ತಯಾರಿಕೆ)


೧೯. ಭೂಷಣಯೋಜನ (ಆಭರಣಗಳನ್ನು ಮಾಡುವುದು)


೨೦. ಐಂದ್ರಜಾಲಯೋಗ (ಇಂದ್ರಜಾಲದ ವಿಧಾನಗಳು, ಎಂದರೆ ಭ್ರಮಾಸೃಷ್ಟಿಯನ್ನು ನಿರ್ಮಿಸುವುದು, ದೇವತೆಗಳು, ಸರ್ಪಗಳು, ಸೈನ್ಯಗಳು ಇತ್ಯಾದಿ)


೨೧. ಕೌಚುಮಾರಯೋಗ  (ದೃಢದೇಹಿಯೂ ವೀರ್‍ಯವಂತನೂ ಆಗಲು ಸಾಧ್ಯವಾಗುವಂತಹ ಕುಚುಮಾರನ ಚಿಕಿತ್ಸಾ ನಿರ್ದೇಶನ)


೨೨. ಹಸ್ತಲಾಘವ (ಎಲ್ಲ ಕೆಲಸಗಳಲ್ಲಿಯೂ ಕೈಗಳ ಎಂದರೆ ಹಸ್ತಗಳ ಚುರುಕು ; ‘ವ್ಯಕ್ತಿಗಳ ಎದುರಿನಲ್ಲಿಯೇ ಪದಾರ್ಥಗಳನ್ನು ಕದಿಯುವುದು’ ಎಂದೂ ಅರ್ಥೈಸಿದ್ದಾರೆ)


೨೩. ವಿಚಿತ್ರ ಶಾಕಯೂಷ ಭಕ್ಷವಿಕಾರಕ್ರಿಯಾ (ಬಗೆ ಬಗೆಯ ಕಾಯಿಪಲ್ಯದ ತಯಾರಿಕೆಯನ್ನೂ ಸಾರು ಹುಳಿ ಇತ್ಯಾದಿಗಳನ್ನೂ ಭಕ್ಷ್ಯಗಳನ್ನೂ ತಯಾರಿಸುವುದು)


೨೪. ಪಾನಕರಸರಾಗಾಸವಯೋಜನ (ಪಾನಕ ರಸ ಮೊದಲಾದ ಪೇಯಗಳನ್ನು ಸಿದ್ಧ ಮಾಡುವುದು)


೨೫. ಸೂಚಿವಾನಕರ್ಮ (ಹೊಲಿಯುವುದು, ನೇಯುವುದು, ಕಸೂತಿ ಹಾಕುವುದು)


೨೬. ಸೂತ್ರಕ್ರೀಡಾ (ದಾರಗಳಿಂದ ಆಡುವುದು, ಎಂದರೆ ಬೆರಳುಗಳಲ್ಲಿ ದಾರವೊಂದನ್ನು ಹಿಡಿದು ಅದರಿಂದ ಮನೆ, ದೇವಾಲಯ ಇತ್ಯಾದಿ ಸ್ಥೂಲ ರೇಖಾಕೃತಿಗಳನ್ನು ರಚಿಸುವುದು; ‘ದಾರಗಳನ್ನೆಳೆಯುವುದರಿಂದ ಆಕೃತಿಗಳು ಚಲಿಸುವಂತೆ ಮಾಡುವುದು’ ಎಂದೂ ಅರ್ಥೈಸಿದ್ದಾರೆ)


೨೭. ವೀಣಾ ಡಮರುಕ ವಾದ್ಯ (ವೀಣೆ ಡಮರುಗ ಮೊದಲಾದ ವಾದ್ಯಗಳನ್ನು ನುಡಿಸುವುದು)


೨೮. ಪ್ರಹೇಲಿಕಾ (ಒಗಟುಗಳು)


೨೯. ಪ್ರತಿಮಾಲಾ (ಒಂದು ಆಟ: ಒಬ್ಬನು ಒಂದು ಶ್ಲೋಕವನ್ನು ಹೇಳುತ್ತಾನೆ, ಇನ್ನೊಬ್ಬನು ಅದರ ಅಂತ್ಯಾಕ್ಷರದಿಂದ ಮೊದಲು ಮಾಡಿ ಇನ್ನೊಂದು ಶ್ಲೋಕವನ್ನು ಹೇಳುತ್ತಾನೆ. ಹೀಗೆಯೇ ಮುಂದುವರಿಯುತ್ತದೆ. ಇದನ್ನು ‘ಅಂತ್ಯಾಕ್ಷರಿ’ ಎನ್ನುತ್ತಾರೆ)


೩೦. ದುರ್ವಾಚಯೋಗ (ಇನ್ನೊಂದು ಆಟ: ಪ್ರತಿಯೊಬ್ಬ ಸ್ಪರ್ಧಿಯೂ ಪರುಷಾಕ್ಷರಘಟಿತವಾದ ಶ್ಲೋಕಗಳನ್ನು ಹೇಳುವುದು)
೩೧. ಪುಸ್ತಕವಚನ (ಪುಸ್ತಕಗಳನ್ನು ಓದುವುದು)


೩೨. ನಾಟಕಾಖ್ಯಾಯಿಕಾದರ್ಶನ (ನಾಟಕಗಳ ಮತ್ತು ಅಖ್ಯಾಯಿಗಳ ಜ್ಞಾನ)


೩೩. ಕಾವ್ಯ ಸಮಸ್ಯಾಪೂರಣ (ಕವಿತೆಯ ರಚನೆ: ಶ್ಲೋಕದ ಕೊನೆಯ ಪಾದವು ಮೊದಲೆ ಕೊಡಲಾಗಿದ್ದು, ಅದರ ಮೊದಲು ಮೂರು ಪಾದಗಳೂ ಕೂಡಿ ಸಮಂಜಸ ಅರ್ಥ ಬರುವಂತೆ ಆಮೇಲೆ ಸೇರಿಸುವುದು)


೩೪. ಪಟ್ಟಿಕಾವೇತ್ರವಾನವಿಕಲ್ಪ (ಬೆತ್ತ ಮತ್ತು ಬಿದಿರುಗಳಿಂದ ಮಂಚಗಳು, ಆಸನಗಳು ಮುಂತಾದ ಬೇರೆ ಬೇರೆ ವಸ್ತುಗಳನ್ನು ಮಾಡುವುದು)


೩೫. ತಕ್ಷಕರ್ಮಗಳು (ಚಿನ್ನ,ಉಕ್ಕು, ಮರ ಮೊದಲಾದವುಗಳಲ್ಲಿ ಕೆತ್ತನೆ ಕೆಲಸ ಮಾಡುವುದು)


೩೬. ತಕ್ಷ (ಮರಗೆಲಸ)


೩೭. ವಾಸ್ತುವಿದ್ಯಾ (ಗೃಹ ನಿರ್ಮಾಣವಿಜ್ಞಾನ)


೩೮. ರೂಪ್ಯ ರತ್ನಪರೀಕ್ಷಾ (ನಾಣ್ಯಗಳು ಮತ್ತು ರತ್ನಗಳ ಪರೀಕ್ಷೆ)


೩೯. ಧಾತುವಾದ (ಖನಿಜಗಳ ಮಿಶ್ರಣ, ಶುದ್ಧೀಕರಣ ಇತ್ಯಾದಿ)


೪೦. ಮಣಿರಾಗಾಕರಜ್ಞಾನ (ಹರಳುಗಳು ಮತ್ತು ರತ್ನಗಳಿಗೆ ಬಣ್ಣ ಹಾಕುವ ವಿಧಾನಗಳ ತಿಳುವಳಿಕೆ ಮತ್ತು ಗಣಿಗಳ ಸ್ಥಲಪರಿಜ್ಞಾನ ಮತ್ತು ಕಾರ್ಯಪರಿಜ್ಞಾನ)


೪೧. ವೃಕ್ಷಾಯುರ್ವೇದಯೋಗ (ಸಸ್ಯಗಳಿಗೆ, ಮರಗಳಿಗೆ ರೋಗವಿಲ್ಲದೆ ಸೊಂಪಾಗಿರುವಂತೆಯೂ, ವಿಶೇಷವಾಗಿ ಅವನ್ನು ಚಿಕ್ಕದು ಅಥವಾ ಎತ್ತರವಾಗಿ ಮಾಡಲು ಸಾಧ್ಯವಾಗುವಂತೆಯೂ ಔಷಧಗಳನ್ನು ಬಳಸುವುದು ಮುಂತಾದ ವಿಧಾನಗಳ ತಿಳುವಳಿಕೆ)


೪೨. ಮೇಷ ಕುಕ್ಕುಟ ಲಾವಕ ಯುದ್ಧನಿಧಿ (ಟಗರು,ಹುಂಜ ಮತ್ತು ಲಾವಗೆಗಳು ಯುದ್ಧ ಮಾಡುವಂತೆ ಮಾಡುವುದು)


೪೩. ಶುಕಸಾರಿಕಾಪ್ರಲಾಪನಾ (ಗಂಡು-ಹೆಣ್ಣು ಗಿಳಿಗಳು ಮಾತನಾಡುವಂತೆ ಕಲಿಸುವುದು)


೪೪. ಉತ್ಸಾದನ-ಸಂವಾಹನ-ಕೇಶಮರ್ಧನ (ಹಸ್ತಪಾದಗಳಿಂದ ತಲೆ ಮತ್ತು ಶರೀರವನ್ನು ತಿಕ್ಕುವ ಎಂದರೆ ಮರ್ದಿಸುವ ಕೌಶಲ)


೪೫. ಅಕ್ಷರಮುಷ್ಟಿಕಾಕಥನ (ಅಕ್ಷರಶ್ರೇಣಿಗಳಿಂದ ಅರ್ಥವನ್ನರಿಯುವುದು ಉದಾ: ‘ಮೇವೃಮಿಕಸಿಂಕತು ವೃಧಮಕುಂಮೀ’ ಎಂಬ ಅಕ್ಷರ ಶ್ರೇಣಿಯು ಮೇಷಾದಿ ದ್ವಾದಶ ರಾಶಿಗಳನ್ನು ಸೂಚಿಸುತ್ತದೆ)


೪೬. ಮ್ಲೇಚ್ಛಿತ ವಿಕಲ್ಪ (ಗೂಢಲಿಪಿ ಭಾಷಾಭೇದಗಳು, ಎಂದರೆ ನಿರ್ದಿಷ್ಟ ವ್ಯಕ್ತಿಗಲ್ಲದೆ ಬೇರೆ ಯಾರಿಗೂ ತಿಳಿಯಲಾಗದ ಭಾಷೆಗಳ ತಿಳುವಳಿಕೆ)


೪೭. ದೇಶಭಾಷಾವಿಜ್ಞಾನ (ನಿಖಿಲ ದೇಶಿಯಭಾಷಾ ಪಾಂಡಿತ್ಯ)


೪೮. ಪುಷ್ಪಶಕಟಿಕಾ (ಪುಷ್ಪಗಳ ಗಾಡಿ, ಎಂದರೆ ಪ್ರೇಮಪತ್ರಗಳನ್ನಿಟ್ಟು ಕಳುಹಿಸಲು ಹೂಗಳಿಂದ ಗಾಡಿಗಳು, ಕುದುರೆಗಳು, ಆನೆಗಳು, ಪಲ್ಲಕ್ಕಿಗಳು ಇತ್ಯಾದಿಗಳನ್ನು ಮಾಡುವುದು)


೪೯. ನಿಮಿತ್ತಜ್ಞಾನ (ಶುಭ ಮತ್ತು ಅಶುಭಶಕುನಗಳ ಜ್ಞಾನ)


೫೦. ಯಂತ್ರಮಾತೃಕಾ (ಸಂಚಾರಕಾರ್ಯಕ್ಕಾಗಿ, ಜಲ ಮತ್ತು ಯದ್ಧೋದ್ಯೋಗಗಳಿಗಾಗಿ ಯಂತ್ರ ನಿರ್ಮಾಣ ಮಾಡುವುದು)


೫೧. ಧಾರಣಮಾತೃಕಾ (ವಿಷಯಗಳನ್ನು ನೆನಪಿಟ್ಟುಕೊಳ್ಳುವುದು, ‘ಕೈಗಳಲ್ಲಿ ವಸ್ತ್ರ ಮತ್ತು ಇತರ ಪದಾರ್ಥಗಳನ್ನು ಹಿಡಿದುಕೊಳ್ಳುವುದು’ ಎಂದು ಅರ್ಥೈಸಿದ್ದಾರೆ)


೫೨. ಸಂಪಾಠ್ಯ (ಒಂದು ಆಟ: ಒಬ್ಬನು ಒಂದು ಶ್ಲೋಕವನ್ನು ಹೇಳುತ್ತಾನೆ. ಅದನ್ನು ಮತ್ತೊಬ್ಬನು ತನಗೆ ಅಪರಿಚಿತವಾಗಿದ್ದರೂ ಮತ್ತೊಮ್ಮೆ ಯಥಾರೀತಿ ಹೇಳಿ ಒಪ್ಪಿಸಬೇಕು)


೫೩. ಮಾನಸೀ (ಒಂದು ಆಟ: ಅನುಸ್ವಾರ ವಿಸರ್ಗಗಳನ್ನು ಯಥಾವತ್ತಾಗಿ ಬರೆದು,ಉಳಿದ ಅಕ್ಷರಗಳೆಡೆಯಲ್ಲಿ ಕೇವಲ ಅವುಗಳ ತಲೆಕಟ್ಟು, ಕೊಂಬು ಇತ್ಯಾದಿ ಚಿಹ್ನೆಗಳನ್ನು ತೋರಿಸಿ ಒಬ್ಬನು ಒಂದು ಶ್ಲೋಕವನ್ನು ಬರೆಯುತ್ತಾನೆ. ಇನ್ನೊಬ್ಬ ಆಟಗಾರ ಆ ಚಿಹ್ನೆಗಳಿರುವೆಡೆಯಲ್ಲಿ ಉಚಿತವಾದ ಅಕ್ಷರಗಳನ್ನು ಪೂರ್ತಿಯಾಗಿ ಬರೆಯಬೇಕು)


೫೪. ಕಾವ್ಯಕ್ರಿಯಾ (ಕಾವ್ಯರಚನೆ)


೫೫. ಅಭಿಧಾನಕೋಶ-ಛಂದೋವಿಜ್ಞಾನ (ಶಬ್ದಕೋಶ ಮತ್ತು ಛಂದಶ್ಯಾಸ್ತ್ರಗಳ ಜ್ಞಾನ)


೫೬. ಕ್ರಿಯಾಕಲ್ಪ (ಕಾವ್ಯ ಮತ್ತು ಅಲಂಕಾರ)


೫೭. ಛಲಿತಕಯೋಗ (ವಂಚನೆಯ ವಿಧಾನ, ಎಂದರೆ ವ್ಯಕ್ತಿಯ ಆಕೃತಿ ಮತ್ತು ಸ್ವರವನ್ನು ಗುರುತುಹಿಡಿಯಲಾಗದಂತೆ ಅಥವಾ ಗುರುತಿಸಲಾಗದೆ ಮತ್ತೊಬ್ಬನ ಕಡೆಗೆ ಮುಂದುವರಿಯುವಂತೆ ಮರೆ ಮಾಡುವುದು)


೫೮. ವಸ್ತ್ರಗೋಪನ (ವಸ್ತ್ರಗಳನ್ನು ತೊಡುವುದರಲ್ಲಿ ಭ್ರಮೋತ್ಸಾದನೆ; ತುಂಡು ಬಟ್ಟೆಯನ್ನು
 ತೊಟ್ಟರೂ ತುಂಡು ಬಟ್ಟೆಯೆಂದು ಕಾಣದಂತೆ ಮಾಡುವುದು ಇತ್ಯಾದಿ)

೫೯. ದ್ಯೂತವಿಶೇಷ (ಜೂಜಿನ ಹಲವು ವಿಧಗಳು)

೬೦. ಆಕರ್ಷಕ್ರೀಡಾ (ಪಗಡೆಯಿಂದಾಡುವ ಒಂದು ಜೂಜು)


೬೧. ಬಾಲಕ್ರೀಡಾ (ಮಕ್ಕಳಿಗಾಗಿ ಚೆಂಡು, ಗೊಂಬೆ, ಇತ್ಯಾದಿ ಆಟಗಳು)


೬೨. ವೈನಯಿಕೀಯವಿದ್ಯಾ (ವ್ಯಕ್ತಿಯನ್ನು ವಿದ್ಯಾವಂತನನ್ನಾಗಿ ಮಾಡುವ ವಿಜ್ಞಾನ ವಿಷಯಗಳ ಮತ್ತು ಕಲೆಯ ತಿಳುವಳಿಕೆ)


೬೩. ವೈಜಯಿಕೀಯವಿದ್ಯಾ (ಜಯವನ್ನು ಗಳಿಸಕೊಡುವ ವಿದ್ಯೆಗಳ ತಿಳುವಳಿಕೆ)


೬೪. ವ್ಯಾಯಾಮಿಕೀವಿದ್ಯಾ (ವ್ಯಾಯಾಮ ಅಥವ ಅಂಗಸಾಧನೆಯ ವಿದ್ಯೆಗಳ ತಿಳುವಳಿಕೆ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.