ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸಂದೇಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಂದೇಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಸೆಪ್ಟೆಂಬರ್ 26, 2025

"ಧೂಳ" ಎಂಬ ಕಣದ ಬೆಲೆ

ಕಾಲ ಕೆಳಗೆ ಇರುವ ಧೂಳನ್ನು ಕೇವಲವಾಗಿ ನೋಡಬೇಡಿ,
ಕಣ್ಣಲ್ಲಿ ಬಿದ್ದಾಗಲೇ ಗೊತ್ತಾಗುವುದು ಧೂಳಿನ ಬೆಲೆ,

ಹಾಗೆಯೇ
 
ಯಾರನ್ನು ಕೇವಲವಾಗಿ, ಕೀಳಾಗಿ ನೋಡಬೇಡಿ,
ಎಲ್ಲರಿಗೂ ಒಂದು ಗೌರವ ಬೆಲೆ ಇದ್ದೇ ಇರುತ್ತದೆ,
ಅದು ಗೊತ್ತಾಗುವುದು ಸಮಯ ಬಂದಾಗಲೇ.

ಬುಧವಾರ, ಡಿಸೆಂಬರ್ 25, 2024

ಓದು ಓದು ನೀ ಓದು ಭಾಗ - 2

ನಿನ್ನ ಮೇಲೆ ನಂಬಕೆ ಇಟ್ಟ ಶಿಕ್ಷಕರಿಗಾಗಿ ನೀ ಓದು 
ನಿನ್ನ ಕಾಲ ಮೇಲೆ ನಿಲ್ಲಲು ನೀ ಓದು
ಲೋಕವನ್ನು ಅರಿಯಲು ನೀ ಓದು
ಸಮಾಜವನ್ನು ತಿದ್ದುವ ಸಲುವಾಗಿ ನೀ ಓದು
ವಿದ್ಯೆ ಎಂದರೆ ಕೇವಲ ಅಕ್ಷರ ಜ್ಞಾನನಲ್ಲ
ಸಂಸ್ಕಾರವೂ ಹೌದು
ಸಂಸ್ಕೃತಿಯ ಹೌದು
ಆ ಸಂಸ್ಕೃತಿಯ ಉಳಿವಿಗಾಗಿ ನೀ ಓದು.

ಸೋಮವಾರ, ನವೆಂಬರ್ 25, 2024

ಓದು ಓದು ನೀ ಓದು ಭಾಗ - 1

ನಿನ್ನ ಹೆತ್ತವರ ಖುಷಿಗಾಗಿ ನೀ ಓದು

ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೀ ಓದು

ಬಡವರ ಬಾಳಲ್ಲಿ ಬೆಳಕಾಗಲು ನೀ ಓದು

ನಿನ್ನ ಅವಮಾನಿಸಿದವರಿಗಾಗಿ ನೀ ಓದು 

ಇನ್ನೊಬ್ಬರಿಗೆ ಮಾದರಿಯಾಗಲು ನೀ ಓದು

ಗುರುವಾರ, ಮಾರ್ಚ್ 31, 2022

ಸ್ನೇಹಿತರೆ ನಾಳೆ 1st APRIL

ಅದಕ್ಕಾಗಿ APRIL FOOL ಮಾಡುವ ಬದಲಾಗಿ ಒಂದು ಸಣ್ಣ ಗಿಡವನ್ನು ನೆಟ್ಟಿ APRIL COOL ಆಗಿ ಮಾಡಲು ಪ್ರಯತ್ನಿಸಿ, 
ಇದರಿಂದ ಮುಂಬರುವ ಕಾಲದಲ್ಲಿ ಆದಷ್ಟು ಬೇಸಿಗೆಯಿಂದ ಮುಕ್ತವಾಗಬಹುದು 
ಜಗತ್ತೇ COOL ಆಗಿ ಕಾಣಬಹುದು

ಕೃಪೆ: ಪರಮಾನಂದ


ಬುಧವಾರ, ಜುಲೈ 03, 2019

ಅವಕಾಶಗಳು

ಕೆಲವರಿಗೆ ಅವಕಾಶಗಳು ತಾವೇ ಅರಸಿ ಬರುತ್ತವೆ


ಮತ್ತೆ ಕೆಲವರು ಅವಕಾಶಕ್ಕಾಗಿ ಅಲೆದಾಡುತ್ತಾರೆ

ಇನ್ನೂ ಕೆಲವರು ಅಹಂಕಾರದಿಂದ ವತಿ೯ಸಿ

ಸಿಕ್ಕ ಅವಕಾಶದಿಂದ ವಂಚಿತರಾಗುತ್ತಾರೆ.

ಸೋಮವಾರ, ಜೂನ್ 03, 2019

ಮನಸ್ಸ

"ನೋಡ್ ಗುರು,
ಮನಸ್ಸನ್ನು ಕಲ್ಲಿನ ಹಾಗೇ ಇಟ್ಕೊಬೇಡ,
..
ಜನ ಕೆತ್ತಿ ತಮಗೆ ಬೇಕಾದಂತ ಶಿಲೆ ಮಾಡ್ಬಿಡ್ತಾರೇ,
..
ಹೂವಿನ ಹಾಗಿರ್ಲಿ,
..
ತನ್ನಿಷ್ಟದಂತೆ ಅರಳುವ ಹಾಗೇ.....

ಶುಕ್ರವಾರ, ಮೇ 03, 2019

ಜೀವನ

ಬೇಕು ಎಂದಾಗ ಇರಲ್ಲ 


ಬೇಡ ಎಂದಾಗ ಹೋಗಲ್ಲ 

ಬಯಸುವಾಗ ಸಿಗಲ್ಲ 

ಸಿಗುವಾಗ ಬಯಸಲ್ಲ,

ಹತ್ತಿರ ಇದ್ದಾಗ ದೂರ ಮಾಡ್ತೀವಿ 

ದೂರ ಹೋದ್ಮೇಲೆ ಹತ್ತಿರ ಆಗೋಕೆ ನೋಡ್ತಿವಿ
..
ಇದುವೇ ಜೀವನ......

ಭಾನುವಾರ, ಮಾರ್ಚ್ 03, 2019

ನೋವು - ಸಂತೋಷ

ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ
         - ಕೆಲವೇ ನಿಮಿಷಗಳ ಕೆಲಸ....

ಒಬ್ಬರನ್ನು ಸಂತೋಷಪಡಿಸುವುದೆಂದರೆ ಗಿಡವನ್ನು ನೆಟ್ಟು, ಮರವಾಗಿ ಬೆಳೆಸಿದಂತೆ
         - ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....

ಬದುಕು ಆಶೀರ್ವಾದಗಳ ಸಂತೆ,ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು.
           .. "ಶಾಂತವಾಗಿ ಆಲೋಚಿಸಿ ನೋಡಿ"

ಭಾನುವಾರ, ಫೆಬ್ರವರಿ 03, 2019

ಧರ್ಮರಾಯ ಹೇಳಿದ್ದು

ಮಹಾಭಾರತದಲ್ಲಿ ಒಮ್ಮೆ ಧರ್ಮರಾಯ ಹೇಳಿದ್ದು

" ಎಲ್ಲರೂ ಸಾಯಲೇ ಬೇಕು, ಆದರೆ ಸಾವನ್ನು ಯಾರೂ ಬಯಸುವುದಿಲ್ಲ."

ಈ ಮಾತನ್ನೇ ಇಂದಿನ ಭಾರತದ ಪರಿಸ್ಥಿತಿಯಲ್ಲಿ ಹೀಗೆ ಹೇಳ ಬಹುದಲ್ಲವೇ...

* ನೀರು ಎಲ್ಲರಿಗೂ ಬೇಕು ಆದರೆ ನೀರನ್ನು ರಕ್ಷಿಸ ಬಯಸುವುದಿಲ್ಲ.
* ನೆರಳು ಎಲ್ಲರಿಗೂ ಬೇಕು ಆದರೆ ಮರಗಳನ್ನು ಬೆಳೆಸಲು ಬಯಸುವುದಿಲ್ಲ.
* ಆಹಾರ ಎಲ್ಲರಿಗೂ ಬೇಕು ಆದರೆ ವ್ಯವಸಾಯ ಮಾಡಲು ಬಯಸುವುದಿಲ್ಲ.
* ಸೊಸೆ / ಪತ್ನಿ ಎಲ್ಲರಿಗೂ ಬೇಕು ಆದರೆ ಮಗಳನ್ನು ಬಯಸುವುದಿಲ್ಲ.
* ಹಾಲು ಎಲ್ಲರಿಗೂ ಬೇಕು ಆದರೆ ಹಸುಗಳ ಸಂರಕ್ಷಣೆ ಮಾಡ ಬಯಸುವುದಿಲ್ಲ.
* ಅಧಿಕಾರ ಎಲ್ಲರಿಗೂ ಬೇಕು ಆದರೆ ಕಾರ್ಯ ಮಾಡ ಬಯಸುವುದಿಲ್ಲ.
* ಸರ್ಕಾರಿ ನೌಕರಿ ಎಲ್ಲರಿಗೂ ಬೇಕು ಆದರೆ ಸರ್ಕಾರಿ ಶಾಲೆಗೆ ಪ್ರವೇಶ ಬಯಸುವುದಿಲ್ಲ............
ಏನಂತೀರ....ನೀವು.....?

ಸೋಮವಾರ, ಡಿಸೆಂಬರ್ 03, 2018

ಅಮ್ಮ - ಅಕ್ಕ - ತಾತ - ಅಜ್ಜಿ - ಅಣ್ಣ - ಶಾಲೆ - ಅಪ್ಪ - ಸ್ನೇಹಿತ - ಉದ್ಯೋಗ - ಸಂಸಾರ

ಅಮ್ಮನನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಂಡು ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಟ್ಟು ಮನೆಯೊಳಗಿನ ಸರಿದಾಡುವ ವಸ್ತುಗಳನ್ನು ನೋಡುತ್ತಿದ್ದಾಗ ಈ ಜಗತ್ತು ಕುತೂಹಲದಿಂದ ಕಂಡದ್ದೇ ಬೇರೆ.

ಅಕ್ಕನ ಕಂಕುಳಲ್ಲಿ ಕುಳಿತು ಮನೆಯ ಹಜಾರ - ವರಾಂಡಗಳಲ್ಲಿ ಸುತ್ತಾಡುವಾಗ ನನ್ನ ಮನಸ್ಸಿನೊಳಗೆ ಹರಿದಾಡಿದ ಲೋಕವೇ ಬೇರೆ.

ತಾತನ ಹೆಗಲ ಮೇಲೆ ಕೂತು ಅಂಗಡಿ - ಆಟದ ಮೈದಾನ - ಬೀದಿಗಳಲ್ಲಿ ಸುತ್ತಾಡುವಾಗ ನನ್ನೊಳಗೆ ಮೂಡುತ್ತಿದ್ದ ಭಾವನೆಗಳೇ ಬೇರೆ.

ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುತ್ತಾ ನಿದ್ರೆಗೆ ಜಾರುವಾಗ ಮನದಲ್ಲಿ ಆಗುತ್ತಿದ್ದ ತಾಕಲಾಟಗಳೇ ಬೇರೆ.

ಅಣ್ಣನ ಕೈ ಹಿಡಿದು ಹೆಗಲಿಗೆ ಬ್ಯಾಗು ನೇತಾಕಿಕೊಂಡು ಶಾಲೆಗೆ ಹೋದಾಗ ನಾನು ಕಂಡ ಜಗತ್ತೇ ಬೇರೆ.

ಒಂದರಿಂದ ಹತ್ತರವರೆಗೆ ಶಾಲೆಯಲ್ಲಿ ಸ್ನೇಹಿತರು - ಟೀಚರ್ ಗಳು - ಆಟಗಳು - ಪಿಕ್ ನಿಕ್ ಗಳು - ಸಾಂಸ್ಕೃತಿಕ ಕಾರ್ಯಕ್ರಮಗಳು - ಗಲಾಟೆಗಳು - ಪರೀಕ್ಷೆಗಳು - ಓ - ಆಗ ಕಂಡ ಪ್ರಪಂಚವೇ ಬೇರೆ.

ಅಪ್ಪನ ಜೊತೆ ಗಾಡಿಯಲ್ಲಿ ಕುಳಿತು ನಗರದ ಕಾಲೇಜಿಗೆ ಹೋಗಿ ಸೇರಿದಾಗ ನಾನು ಕಂಡ ದುನಿಯಾನೇ ಬೇರೆ.

ಸ್ನೇಹಿತರ ಜೊತೆ ಕಾಲೇಜಿನಲ್ಲಿ - ಸಿನಿಮಾ ಥಿಯೇಟರುಗಳಲ್ಲಿ - ಹೋಟೆಲುಗಳಲ್ಲಿ ಮಜಾ ಉಡಾಯಿಸುವಾಗ ಕಂಡ ಜಗತ್ತೇ ಬೇರೆ.

ಉದ್ಯೋಗ ದೊರೆತಾಗ ಒಂಟಿಯಾಗಿಯೇ ಹೋಗಿ ಸೇರಿ ಅಲ್ಲಿ ಸಹಪಾಠಿಗಳ ಜೊತೆ ಬೆರೆತಾಗ ನಾನು ಕಂಡ ಲೋಕವೇ ಬೇರೆ.

ನಾನು ಮೆಚ್ಚಿದವರೊಂದಿಗೆ ಅಪ್ಪ - ಅಮ್ಮ ಮದುವೆ ಮಾಡಿಕೊಟ್ಟಾಗ ನಾನು ಅನುಭವಿಸಿದ ಸಂಭ್ರಮವೇ ಬೇರೆ.

ನನ್ನೊಂದಿಗೆ ಜೊತೆಯಾದವರೊಂದಿಗೆ ಸಂಸಾರ ಮಾಡುವಾಗ ನಾನು ಕಂಡ ಲೋಕವೇ ಬೇರೆ.

ಮತ್ತೆ ಈಗ ನನ್ನ ಮಗು ನನ್ನ ಮಡಿಲಲ್ಲಿ ಮಲಗಿ ನನ್ನ ಎದೆ ಹಾಲು ಕುಡಿಯುತ್ತಾ ಪಿಳಪಿಳನೇ ಕಣ್ಣುಬಿಟ್ಡು ನನ್ನನ್ನೇ ನೋಡುತ್ತಿರುವಾಗ ನನ್ನಲ್ಲಿ ಮೂಡುತ್ತಿರುವ ಭಾವನೆಗಳೇ ಬೇರೆ.

ಎಷ್ಟೊಂದು ಸುಂದರ ಈ ಬದುಕಿನ ಪಯಣ.
ಕಾಲನ ಅಂಗಳದಲ್ಲಿ ಎಷ್ಟೊಂದು ಅದ್ಭುತ - ಆಶ್ಚರ್ಯ - ವಿಸ್ಮಯ.
ಬದುಕು ಸಾರ್ಥಕತೆ ಕಂಡ ಈ ನೆನಪಿನ ಪಯಣದಲಿ

ನಿಮ್ಮೊಂದಿಗೆ, 
.............................

ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನ೦ದ. ಹೆಚ್.ಕೆ

ಶನಿವಾರ, ನವೆಂಬರ್ 03, 2018

ಪೋಟೋ ಸೂಪರ್ (Photooo...SUPERrrrrrr)

ತುಂಬ_ಜನ_photo_ಹಾಕಿದ್ರೆ Mass ಆಗಿರುತ್ತೆ ....

ಸ್ವಲ್ಪ_ಜನ_photo_ಹಾಕಿದ್ರೆ Class ಆಗಿರುತ್ತೆ ....

ಕೆಲವೊಬ್ರೂ_photo_ಹಾಕಿದ್ರೆ Sappe ಆಗಿರುತ್ತೆ ....

ಇನ್_ಕೆಲವೊಬ್ರೂ_photo_ಹಾಕಿದ್ರೆ_Comedy ಆಗಿರುತ್ತೆ 

Nanu_Photooo_ಹಾಕಿದ್ರೆ_SUPERrrrrr ಆಗಿರುತ್ತೆ..


ಮಂಗಳವಾರ, ಜುಲೈ 03, 2018

ಈ ಸಮಯದ ಸತ್ಯ…

ಸಮಯದ ವೇಗಕ್ಕೆ ಕುಪಿತನಾದವನು
..

ಗಡಿಯಾರವನ್ನು  ಹೊಡೆದು ಹಾಕಿದ;
ಆದರೂ
ಸಮಯ ನಿಲ್ಲಲಿಲ್ಲ ಎಂಬುದು ಈ ಸಮಯದ ಸತ್ಯ…

ಭಾನುವಾರ, ಜೂನ್ 03, 2018

ನಮ್ಮೂರು - ನಮ್ಮೋರು

ಎಲ್ಲಿ ಜೀವನ ನಡೆಯುವುದೋ
ಅದೇ ನಮ್ಮೂರು...

.. ..

ಯಾರು ಸ್ನೇಹದಿ ಬರುವರೋ
ಅವರೆ ನಮ್ಮೋರು...
                                            ==> ಶಂಕರನಾಗ್

ಗುರುವಾರ, ಮೇ 03, 2018

ಉರಕೋಳ್ಳೊರಿಗೆ

ನಮ್ಮನ್ನ ನೋಡಿ ಉರಕೋಳ್ಳೊರಿಗೆ 
..

ದೇವರು ಒಳ್ಳೆದ್ ಮಾಡಿಲಿ....
..
ಉರಕೊಳ್ಳೊರು ಯಾವತ್ತು ನಮ್ಮ level ಗ ಬರಲ್ಲ 
..
ಅವರು ಉರಕೊoಡಷ್ಟು
..
ಇನ್ನೂ ನಮ್ಮ Level ಹೆಚ್ಚು ಆಗುತ್ತೆ....

ಮಂಗಳವಾರ, ಏಪ್ರಿಲ್ 03, 2018

ಸ್ನೇಹ

''ಕನಸನ್ನ ಕದೇಯೋಕಾಗಲ್ಲ "
..
''ನೆನಪನ್ನ ಬಚ್ಚಿಡೋಕೆ ಆಗಲ್ಲ ''
..
''ಹೇಳಿ ಕೇಳಿ ಸ್ನೇಹ ಹುಟ್ಟೋಲ್ಲ '
..
"ನಂಬಿಕೆ ಅನ್ನೋ ಆಯಸ್ಸು ಮುಗಿಯೋವರೆಗೂ ಸ್ನೇಹಕ್ಕೆ ಸಾವಿಲ್ಲ .

ಶನಿವಾರ, ಮಾರ್ಚ್ 03, 2018

" ಸ್ನೇಹಿತ / ತೆ "

ಲೈಫನಲ್ಲಿ ಸ್ನೇಹ ಇರಲಿ 

ಸ್ನೇಹದಲ್ಲಿ ಸಹನೆ ಇರಲಿ 

ಸಹನೆಯಲ್ಲಿ ಕರುಣೆ ಇರಲಿ 

ಕರುಣೆಯಲಿ ಮನಸಿರಲಿ 

ನಿಮ್ಮ ಮುದ್ದಾದ ಮನಸಿನಲಿ ಈ "ಸ್ನೇಹಿತ/ತೆ" ನೆನಪಿರಲಿ .

ಮಂಗಳವಾರ, ಫೆಬ್ರವರಿ 06, 2018

"ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ....

ನಾಮಕರಣಕ್ಕೆ "ಡ" ಕಾರದ ಹೆಣ್ಣಿನ ಹೆಸರುಗಳಿದ್ದರೆ ಹೇಳಿ...  ಬೇಗ ಹೇಳಿ….

ನಿಮ್ಮ ಉತ್ತರ

ಈ ತಾಣಕ್ಕೆ ಕಮೆಂಟ್ 
ಅಥವಾ
8951734903 ಗೆ 
ಸಂದೇಶ / ವಾಟ್ಸ್ಯಾಪ್ 
ಅಥವಾ 
ಟೆಲಿಗ್ರಾಮ https://t.me/spn3187 ಗೆ ಉತ್ತರ 
ಅಥವಾ
E-mail
..
spn3187@gmail.com

1.. ಜಾಹೀರಾತು

2.ಜಾಹೀರಾತು