fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ನಾ ಆಡುವ ನುಡಿಯು ಕನ್ನಡ

ಕನ್ನಡ ಕನ್ನಡ ಕನ್ನಡ
ನಮ್ಮಯ ಭಾಷೆಯು ಕನ್ನಡ|
ಎಕ್ಕಡ ಎನ್ನಡ ಏತಕೆ 
ಆಡಲು ಸಾಲದೇ ಕನ್ನಡ ||ಪಲ್ಲವಿ||

ನಾ ಆಡುವ ನುಡಿಯು ಕನ್ನಡ
ನಾ ಹಾಡುವ ಹಾಡು ಕನ್ನಡ|
ನಾ ಬಾಳುವ ನಾಡು ಕನ್ನಡ
ನಾ ಉಸಿರಾಡುವ ಗಾಳಿಯು ಕನ್ನಡ||೧||

ಕನ್ನಡವೆನೆ ಕುಣಿದಾಡುವೆನು
ಕನ್ನಡವೆನೆ ಕೂಗಾಡುವೆನು|
ಕನ್ನಡ ನಾಡಲ್ಲೆ ಮೆರೆಯುವೆನು
ಕನ್ನಡ ಮಣ್ಣಲ್ಲೆ ಮಡಿಯುವೆನು||೨||

ನಮ್ಮಯ ತಾಯಿಯು ಕನ್ನಡ
ನಮ್ಮಯ ನುಡಿಯು ಕನ್ನಡ|
ನಮ್ಮಯ ನಾಡೇ ಕನ್ನಡ
ನಮ್ಮಯ ನೆಲೆಯೆ ಕನ್ನಡ||೩||

ಕುವೆಂಪು ಬರೆದ ಕನ್ನಡ
ರಾಜಣ್ಣ ಹಾಡಿದ ಕನ್ನಡ|
ಕರುನಾಡಿನ ಜನ ನುಡಿದ ಕನ್ನಡ
ನಮ್ಮಯ ಬದುಕೆ ಕನ್ನಡ||೪||

ಜನಮನ ತಣಿಸಿದ ಕನ್ನಡ
ತನುಮನ ಬಣ್ಣಿಸಿದ ಕನ್ನಡ|
ಶಾಸ್ತ್ರೀಯಪಟ್ಟ ಧರಿಸಿದ ಕನ್ನಡ
ಧರೆ ಏರಿದ ಭಾಷೆಯು ಕನ್ನಡ||೫||

ದೊರೆಗಳು ಆಳಿದ ಕನ್ನಡ
ಕವಿಗಳು ಹೊಗಳಿದ ಕನ್ನಡ|
ರವಿ ಸೂಸಿದ ಕಿರಣವೆ ಕನ್ನಡ
ಕನ್ನಡ ಕಸ್ತೂರಿ ಕನ್ನಡ||೬||

ಬೆಳದಿಂಗಳು ಉಣಿಸಿದ ಕನ್ನಡ
ಕಾವೇರಿ ತಣಿಸಿದ ಕನ್ನಡ|
ಶ್ರೀಗಂಧ ಸುಗಂಧ ಕನ್ನಡ
ಕರುನಾಡೇ ಕೂಗಿದ ಕನ್ನಡ||೭||

ವಿಜಯನಗರ ಐಸಿರಿಯ ಕನ್ನಡ
ಹಚ್ಚ ಹಸಿರಿನ ಕನ್ನಡ|
ಶಿಲ್ಪಕಲೆಗಳ ಕನ್ನಡ
ನಮ್ಮಯ ಹೆಮ್ಮೆಯ ಕನ್ನಡ||೮||

ಕೋಗಿಲೆ ಹಾಡಿದ ಹಾಡು ಕನ್ನಡ
ನವಿಲು ಮಾಡಿದ ನರ್ತನೆ ಕನ್ನಡ|
ನಾ ಮೆಟ್ಟುವ ನೆಲವೇ ಕನ್ನಡ
ನಾ ಹುಟ್ಟುವ ಮಡಿಲೇ ಕನ್ನಡ||೯||
ಕೃಪೆ : ==> ಪ್ರಸನ್ನK

ಅಮ್ಮನಾಗುವ ಪರಿ..

ಕನಸುಗಳು ಸುರುಳಿಯಂತೆ ಸುತ್ತಿಕೊಳ್ಳಲು ನಾಂದಿ
ತಿಂಗಳ ಹೊರಗು ಆಗದಿರೆ ಅವಳಿಗೆಲ್ಲಿಲ್ಲದ ನಲಿವು
ಬರುವ ಕಂದನ ಇನ್ನಿಲ್ಲದ ಕಲ್ಪನೆಯಲ್ಲೆ ನೆನೆನೆನೆದು.

ಒಳಗೊಳಗೆ ಹರ್ಷ ಮುಸಿ ಮುಸಿ ನಗು
ಕಣ್ಣಲ್ಲಿ ಮಿಂಚು ಕೊಂಚ ನಾಚಿಕೆ ಬಿನ್ನಾಣದ ಬೆಡಗು
ಮೊಳಕೆಯೊಡೆಯುತ್ತಿರುವ ಸಂಗತಿ ಗಂಡನಿಗೆ ಹೇಳಲು.

ಮೌನ ಗೌರಿಯ ಬಂಡವಾಳ ಅದಾಗೆ ತಿಳಿಯಲು
ಕೋಣೆಯಿಂದೀಚೆ ಬರದಷ್ಟು ಕ್ಲಿಷ್ಟ ಗಳಿಗೆ
ಅನುಭವದ ಸುಃಖ ಅನುಭವಿಸಿದವರಿಗಷ್ಟೇ ಗೊತ್ತು

ಒಂದೊಂದು ಕ್ಷಣ,ದಿನ,ತಿಂಗಳು ದೊಡ್ಡ ಪ್ರಾಜೆಕ್ಟು
ಸುಸ್ತು ಸಂಕಟ ಕಿರಿ ಕಿರಿ ದೇಹ ಸಖತ್ ಹೈರಾಣ
ಎಲ್ಲವನ್ನೂ ಸಹಿಸುವಳು ಬರುವ ಕಂದಮ್ಮನಿಗಾಗಿ.

ನವ ಮಾಸ ನವ ಯುಗದಂತೆ ನಗು ನಗುತ ಕಳೆದು
ಎಲ್ಲೆ ಮೀರಿದ ಅಸಾಧ್ಯ ನೋವಿನೊಡೆತವ ಮುಕ್ಕಿ ಮುಕ್ಕಿ
ಭುವಿಗೆ ತನ್ನುಧರದ ಛಾಯೆ ನೀಡುವಳು ತಾಯಿಯ ಪಟ್ಟ ಧರಿಸಿ.

ಕಂದನ ಆಕ್ರಂದನ ತನುಮನದಲ್ಲಿ ಖುಷಿಯ ರಿಂಗಣ
ತೆಕ್ಕೆಯಲಿರಿಸಿ ಲೊಚಗುಟ್ಟುವ ಬಾಯಿಗೆ ತನ್ನೆದೆಯನೊತ್ತಿ ಹರಿಸುವಳು ಅಮೃತ
ಮಾತೃತ್ವದ ಅಮಲಿನ ಸುಃಖ ನಖಶಿಕಾಂತ ಬೆರಗಲಿ.

ಕನಸು ಮನಸಿನಲ್ಲೂ ಕಂದನದೆ ಯೋಚನೆ ಕಣಕಣದಲೆಲ್ಲ
ಒಂದರೆಗಳಿಗೆ ಬಿಟ್ಟಿರಲಾಗದಷ್ಟು ಕಕ್ಕುಲತೆ ತನು ಮನದ ತುಂಬ
ಜೀವ ತೇದು ಬೆಳೆಸುವಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಯಾರಿಹರು ಸರಿಸಾಟಿ!

ತನ್ನೆತ್ತರಕೆ ಕಂದ ಬೆಳೆದು ನಿಂತರೂ ಇನ್ನೂ ಹಸು ಗೂಸು
ಕಂಡವರು ದೊಡ್ಡವರಾದರೆಂದರೆ ಹುಸಿ ಮುನಿಸು ತೋರುವಳು
ತನಗೆ ಮಾತ್ರ ವಯಸ್ಸಾಯಿತೆಂದು ಚಿಕ್ಕ ಮುಖ ಮಾಡಿ ಹಲುಭುವಳು ಕಾಲನ ಕರೆಗೆ.

ಮೊಳಕೆಯೊಡೆಯುವ ಮೊದಲೆ ಕನಸ ಕಟ್ಟುವ ಅಮ್ಮ
ನನಸಾದ ಕನಸ ಸೌದದಲಿ ಕಂದನ ಕೂಡಿಸಿ ಬೀಗುವ ಪರಿ
ನಿಸ್ವಾರ್ಥ ತೇಜೋಮಯಿಗೊಂದೇ ಸಾಧ್ಯ ಅವಳೆ ಅಮ್ಮನೆಂಬ ಅಣಿ ಮುತ್ತು

ಗಣೇಶನಿಗಿರುವ ವಿವಿಧ ಹೆಸರುಗಳು

         ಗಣೇಶನಿಗೆ ಇತರ ಹಿಂದೂ ದೇವತೆಗಳಂತೆಯೇ ಅನೇಕ ಹೆಸರುಗಳಿವೆ. ಸಹಸ್ರನಾಮದ ಮೂಲಕ ಗಣೇಶನನ್ನು ಸಾವಿರಾರು ಹೆಸರುಗಳಿಂದ ಪೂಜಿಸಲಾಗುತ್ತದೆ. ಪ್ರತಿ ಹೆಸರು ಬೇರೆ ಬೇರೆ ಅರ್ಥವನ್ನು ಹೊಂದಿದೆ. ಗಣೇಶ, ಗಣಪತಿ, ವಿನಾಯಕ ಎಂಬುದರ ಜೊತೆಗೆ ಗಣೇಶನಿಗಿರುವ ಇತರ ಹೆಸರುಗಳಲ್ಲಿ ಕೆಲವು ಈ ಕೆಳಗಿನಂತಿವೆ..
 1. ಅಮೇಯ (अमेय) - ಅಂತ್ಯವಿಲ್ಲದವನು.
 2. ಅನಂಗಪೂಜಿತ (आनंगपूजीता) - ಆಕಾರವಿಲ್ಲದವನು.
 3. ಓಂಕಾರ (ॐ कार) - ಓಂ ಆಕಾರದಲ್ಲಿರುವ ಶರೀರವುಳ್ಳವನು.
 4. ಬಾಲಚಂದ್ರ (बालचंदृ) - ಚಂದ್ರನನ್ನು ತಲೆಯಲ್ಲಿ ಧರಿಸಿದವನು.
 5. ಚಿಂತಾಮಣಿ (चिंतामणि) - ಚಿಂತೆಗಳನ್ನು ನಾಶಮಾಡುವವನು.
 6. ಗಜಕರ್ಣ (गजकर्ण) - ಆನೆಯ ಕಿವಿಯಂತೆ ಕಿವಿಯನ್ನು ಹೊಂದಿದವನು.
 7. ಗಜಾನನ (गजानन्) - ಆನೆಯ ತಲೆಹೊಂದಿದವನು.
 8. ಗಜವದನ (गजवदन्) - ಆನೆಯಂತೆ ಮುಖವುಳ್ಳವನು.
 9. ಗಜಾಧ್ಯಕ್ಷ (गणध्यक्शमा) - ಗಣಗಳ ಗುಂಪಿಗೆ ನಾಯಕನಾದವನು.
 10. ಗಣಪತಿ (गणपती) - ಗಣಗಳ ಒಡೆಯನಾದವನು.
 11. ಗಣನಾಯಕ ( गणनायक्) - ಗಣಗಳ ನಾಯಕ.
 12. ಏಕದಂತ (एकदंत) - ಒಂದೇ ದಂತವನ್ನು ಹೊಂದಿದವನು.
 13. ಲಂಬೋದರ (लंबोदर) - ದೊಡ್ಡ ಹೊಟ್ಟೆಯನ್ನು ಹೊಂದಿದವನು.
 14. ಮೂಷಿಕ ವಾಹನ (मूषिक वाहन) - ಇಲಿಯನ್ನು ವಾಹನವಾಗಿಸಿಕೊಂಡವನು.
 15. ಶೂರ್ಪಕರ್ಣ (शूर्पकर्ण) - ಅಗಲವಾದ ಕಿವಿಯುಳ್ಳವನು.
 16. ಸುಮುಖ (सुमुख) - ಸುಂದರವಾದ ಮುಖವುಳ್ಳವನು.
 17. ವಕ್ರತುಂಡ (वक्रतुंड) - ಮುರಿದ ದಂತವುಳ್ಳವನು (ಡೊಂಕಾದ ಸೊಂಡಿಲು ಉಳ್ಳವನು).
 18. ವಿಘ್ನಹರ್ತ (विघ्नहर्त) - ತೊಂದರೆಗಳನ್ನು ನಿವಾರಿಸುವವನು.
 19. ವಿಘ್ನ ವಿನಾಶಕ (विघ्न विनाशक) - ವಿಘ್ನಗಳನ್ನು ನಾಶಮಾಡುವವನು.
 20. ವಿಘ್ನೇಶ ಅಥವಾ ವಿಘ್ನೇಶ್ವರ ( विग्णेशवर) - ವಿಘ್ನಗಳನ್ನು ನಿವಾರಿಸುವವನು.
 21. ವಿಕಟ ( विकट) - ವಿಲಕ್ಷಣ ರೂಪವನ್ನು ಹೊಂದಿದವನು.
 22. ವಿನಾಯಕ (विनायक) - ವಿಘ್ನಗಳನ್ನು ನಿವಾರಿಸುವವನು.
 23. ವಿಶ್ವಧರ ( विश्वधर)     ಅಥವಾ ಜಗದೋದ್ಧಾರ ( जगदॊद्धार) - ಜಗತ್ತನ್ನು ಪಾಲಿಸುವವನು.
 24. ವಿಶ್ವವಂತ ( विश्ववंत)   ಅಥವಾ ಜಗನ್ನಾಥ ( जगन्नाथ) - ಜಗತ್ತಿಗೆ ಒಡೆಯ ಬೆನಕ.
 25. ಶ್ರೀ ಸಿದ್ಧಿ ವಿನಾಯಕ - ಅಪೇಕ್ಷೆಗಳನ್ನು ಈಡೇರಿಸುವವನು.

           ಆಕೃತಿಯಲ್ಲಿ ಚಿಕ್ಕದಾಗಿರುವ ಗಣಪತಿಯ ವಿಗ್ರಹವನ್ನು ಬಾಲ ಗಣಪತಿ, ಬಾಲ ಗಣೇಶ ಎಂದೂ ಕರೆಯಲಾಗುತ್ತದೆ.

                                             2/2

ಗೂಗಲ ಪುಟದ ವಿಚಿತ್ರಗಳು (Google TooSmall Mode Pages) 12

ಪುಟ ಲೋಡ್ ಆದ ನಂತರ, ಲೋಗೋ, ಸರ್ಚ್ ಬಾರ್, “ಸರ್ಚ್” ಮತ್ತು “ನಾನು ಅತಿಯಾದ ಭಾವನೆ” ಗುಂಡಿಗಳು, ಅವುಗಳು ಪುಟದಿಂದ ತೇಲುತ್ತಿರುವವರೆಗೂ ಅಥವಾ ನೀವು ಹುಡುಕಾಟವನ್ನು ಟೈಪ್ ಮಾಡಿ ಅಲ್ಲಿಗೆ ಬೀಟಿಂಗ್ ಅನ್ನು ಪಡೆಯುವವರೆಗೆ ಖುಗ್ಗುತ್ತವೆ.

 spn3187


ಶ್ರೀ ಕೃಷ್ಣನ ಇತರ ಹೆಸರುಗಳು

      ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

 • ಅಚ್ಯುತ: ಚ್ಯುತಿಯಿಲ್ಲದವ, ಯಾವುದೇ ದೋಷ ಇಲ್ಲದವನು. 
 • ಅಸುರಾರಿ : ರಾಕ್ಷಸರಿಗೆ ಸದಾಕಾಲ ಶತ್ರುವಾಗಿದ್ದವನು. 
 • ವಾಸುದೇವ : ವಸುದೇವನ ಮಗ 
 • ನಂದಗೋಪಾಲ: ನಂದ ಗೋಪನ ಮಗನಾಗಿದ್ದವನು 
 • ಕಾಲದೇವ: ಯಮನನ್ನು ಮೀರಿಸಿದವ. 
 • ಗಿರಿಧರ: ಗೋವರ್ಧನ ಗಿರಿಯನ್ನು ತನ್ನ ಕಿರುಬೆರಳಲ್ಲೇ ಎತ್ತಿದವ 
 • ಕೊಲ್ಲ: ಎಮ್ಮೆಗಳನ್ನು ಪಾಲಿಸಿ, ಕಾಪಾಡುವವನು. 
 • ವೇಣುಗೋಪಾಲ : ಕೊಳಲನ್ನು ನುಡಿಸುವವನು. 
 • ಚಕ್ರಧಾರಿ: ಚಕ್ರಾಯುಧವನ್ನು ಧರಿಸಿದವನು 
 • ದ್ವಾರಕಾಧೀಶ/ದ್ವಾರಕಾನಾಥ: ದ್ವಾರಕಾನಗರಕ್ಕೆ ಒಡೆಯನಾದವನು 
 • ಜಗನ್ನಾಥ: ಜಗತ್ತಿಗೆ ನಾಯಕನಾದವನು 
 • ಜನಾರ್ದನ: ಎಲ್ಲರಿಗೂ ವರವನ್ನು ಕೊಡುವನು 
 • ಪರಬ್ರಹ್ಮ: ಬ್ರಹ್ಮನ ತಂದೆ (ವಿಷ್ಣು) 
 • ಪಾರ್ಥ ಸಾರಥಿ: ಅರ್ಜುನನ ಸಾರಥಿ 
 • ಮಧುಸೂದನ: ಮಧು ಎಂಬ ರಾಕ್ಷಸನನ್ನು ನಾಶ ಮಾಡಿದವನು. 
 • ಮುಕುಂದ: ಮುಕ್ತಿಯನ್ನು ಕೊಡುವವನು 
 • ಯೋಗೇಶ್ವರ: ಯೋಗಿಗಳಿಗೆಲ್ಲಾ ಸ್ವಾಮಿಯಾದವನು 
 • ಶ್ಯಾಮಸುಂದರ: ಕಪ್ಪು ವರ್ಣದವನು 
 • ಹೃಷೀಕೇಶ: ಹೃಷಿಕಗಳನ್ನು(ಇಂದ್ರಿಯ) ಹಿಡಿದಿಟ್ಟವನು 
 • ಪುರುಷೋತ್ತಮ : ಪುರುಷರಲ್ಲೇ ಅತ್ಯುತ್ತಮನಾದವನು 
 • ನವನೀತ : ತಾಜಾ ಬೆಣ್ಣೆಯನ್ನು ತಿಂದವನು 
 • ಸುದರ್ಶನ : ಸುದರ್ಶನ ಚಕ್ರ ಹೊಂದಿದವ 
 • ಮುರಳಿ : ಕೊಳಲನ್ನು ಹೊಂದಿದವ 
 • ಘನಶ್ಯಾಮ: ವೃಷ್ಣನ ಮೈಬಣ್ಣ ಮೋಡದಂತೆ ಕಪ್ಪು
 • ಮಾಧವ: ವಸಂತ ಋತು ತರುವವ, ಮಾ =ಲಕ್ಷ್ಮಿ -ಧವ =ಒಡೆಯ (?)
 • ಪತಿತ ಪಾವನ: (?) ಪಾಪಿಗಳನ್ನು ಉದ್ದರಿಸುವವನು
 • ಜನಾರ್ಧನ
 • ಮುರಾರಿ
 • ದಾಮೋದರ
 • ಪಾಂಡುರಂಗ
 • ಕೇಶವ
 • ವಿಠಲ
 • ಶ್ರೀರಂಗನಾಥ

ಟೆಲೊಪೋನ್ - ಗ್ರಾಹಂ ಬೆಲ್

ವಿಕಿಪೀಡಿಯ (Wiki pedia)

ವಿಕಿಪೀಡಿಯ ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ. ಇದು ಪ್ರಸ್ತುತ ವಿಕಿಮೀಡ ಫೌ಼ಂಡೇಷನ್ ಎಂಬ ಅಮೆರಿಕದ ಸ್ಯಾನ್‌ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.
ಸೈಟ್ ಪ್ರಕಾರ: Online encyclopedia
ಲಭ್ಯವಿರುವ ಭಾಷೆ: 287 editions
ರಚಿಸಿದವರು: ಜಿಮ್ಮಿ ವೇಲ್ಸ್, ಲ್ಯಾರಿ ಸ್ಯಾಂಗರ್
ಬಹುಮಾನಗಳು: Princess of Asturias Award for International Cooperation,Free Software Award for Projects of Social Benefit

ನವರತ್ನಗಳು

· ಹವಳ - ಸಾಗರದ ಆಳದಲ್ಲಿ ಕಂಡುಬರುವ ಹವಳಗಳು ಮನುಷ್ಯರಂತೆ ಸಂಘಜೀವಿಗಳು. ಹವಳಗಳ ಮೂಲರೂಪ ಹುಳಗಳು  ಕಟ್ಟಿದ ಗೂಡುಗಳು. 

· ವಜ್ರ - ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು.
· ಪಚ್ಚೆ- ಪಚ್ಚೆಯು ಒಂದು ಅಪರೂಪದ ಮತ್ತು ದುಬಾರಿ ಬೆಲೆಯ ಹರಳಿನ ಕಲ್ಲು
· ನೀಲ -

ಗುಲಾಬಿ / ಜಿಲೇಬಿ

ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ

ಚಾಲಾಕಿ ಚೆಂದುಳ್ಳಿ ಚೆಲುವೆ ಅವಳು ಒಂದು ಕೆಂಪು ಗುಲಾಬಿ
**
ನನ್ನದೆಲ್ಲವ ದೋಚಿಕೊಂಡು ಕೊನೆಗೆ ಕೊಟ್ಟಳು ಕೈಗೆ ಒಂದು ಜಿಲೇಬಿ

- Vರಂಗಯ್ಯ