fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ನನ್ನ ಭಾರತ (My India)

ನೋಡು ಬಾ ನೋಡು ಬಾ
ನನ್ನ ಭಾರತ
ಹಾಡು ಬಾ ಹಾಡು ಬಾ
ಸುಪ್ರಭಾತಾ...

ಅದೋ ನೋಡು ಬಾನಿನಲ್ಲಿ ನಮ್ಮ ಬಾವುಟ
ಕೇಸರಿ ಬೀಳಿ ಹಸಿರ ರಂಗಿನಲ್ಲಿ
ಹಾರಾಡುತಿದೆ ಪಟಪಟ
ರೀನಾ ರೀಮಾ ರಿಹಾನಾ
ಎಲ್ಲ ಬನ್ನಿರೆ
ಪ್ರೀತಿ ಸ್ನೇಹ ಸೌಹಾರ್ದನಾ
ಬಹಳ ತನ್ನಿರೆ...
ಪರಿಸರವ ಕಾಪಾಡುವ
ಮಾಡೋಣ ಸ್ವಚ್ಛ ಭಾರತ
ಪವಿತ್ರ ಭೂಮಿ ಎನುತ
ಹಾಡೋಣ ನಲಿಯುತ
ಖನಿಜ ಸಂಪತ್ತುಗಳ
ತವರು ಭಾರತ
ಸತ್ಯ ಶಾಂತಿ ಧರ್ಮಗಳ
ಉಸಿರು ಭಾರತ
ಜೈ ಭಾರತ ಜೈ ಭಾರತ
ಎಂದು ಮೆರೆಯುವಾ
ಭಾರತ ಭಾಗ್ಯ ವಿಧಾತ
ಎಂದು ನಮಿಸುವಾ...

ಕೃಪೆ -> ರಾಧಾ ಪ್ರಕಾಶ್‌

ಎಲೆಗಾರ ಕಾಮಣ್ಣ

ಅಂಕಿತ ನಾಮಆತುರೇಶ್ವರ ಲಿಂಗ 
ಕಾಲ೧೪೦೦ 
ದೊರಕಿರುವ ವಚನಗಳು1 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ
ಪರಿಚಯಕಾಲ: 1400. 
ಎಲೆ ಮಾರುವ ವೃತ್ತಿಯವನುಈತನ ಒಂದು ವಚನ ದೊರೆತಿದೆ.

ಬೆವರು


ಯಾವುದೇ ಕಾರ್ಯ ಯಶಸ್ವಿಯಾಗಲು 99 ಪ್ರತಿಶತ ಬೆವರು, ಮತ್ತು 1 ಪ್ರತಿಶತ ದೇವರು
ಬೆವರು ಸುರಿಸಿ ದುಡಿದವಗೆ ಸ್ನಾನದ ಮಹತ್ವ ತಿಳಿದಿರುತ್ತದೆ
.ಸಿ. ರೂಮಿನಲ್ಲಿ ಕೆಲಸ ಮಾಡುವವರಿಗೆ ಕರೆಂಟ್ ಹೋದಾಗ ಮಾತ್ರ ಬೆವರು ಸುರಿಸಿ ದುಡಿವ ಅವಕಾಶ
ಲಲನಾ ಮಣಿಗಳು ಬೆವರು ಸುರಿಯದಂತೆ ಛಿಜಢಿಛ್ಠಜ ಆಗಿರುತ್ತಾರೆ
ಹಗಲು ಬೆವರು ಸುರಿಸಿ ದುಡಿ, ರಾತ್ರಿ ಬೆವರೇಜ್ ಕುಡಿ
ಫೀವರ್ ಜಾಸ್ತಿಯಾದಾಗಲೂ ಮೈಯ್ಯಿಂದ ಹೋಗೋದು ಇದೇ
ವೇದಿಕೆ ಮೇಲೆ ಭಾಷಣ ಮಾಡುವಾಗ ಚಳಿಗಾಲದಲ್ಲೂ ಉಕ್ಕುವ ನೆರೆ
ಬೆವರು ಸುರಿಸಿ ದುಡಿವ ಗಂಡನನ್ನು ಎಲ್ಲರೂ ಇಷ್ಟಪಡುತ್ತಾರೆ, ಆದರೆ ಸ್ನಾನ ಮಾಡಿ ಬಂದ ನಂತರವಷ್ಟೇ
ಉಪ್ಪು ತಿಂದ ಮೈಯ್ಯಿಂದ ಸುರಿಯುವ ಉಪ್ಪುಪ್ಪು ದ್ರವ
ದುಡಿವವಗೆ ಬೆವರೇ ದೇವರು
ಎವರೇಜು ಜನರ ಪ್ರತಿ ದಿನದ ಸಂಗಾತಿ
ನಿಮ್ಮನ್ನು ಆರ್ದ್ರವಾಗಿಡುವ ವಿಷಯ
ಸೋಪ್ ಕಂಪೆನಿಯ ಬ್ಯುಸಿನೆಸ್ ಫ್ರೆಂಡ್ಲಿ

-ವಿಶ್ವನಾಥ ಸುಂಕಸಾಳ

ಗುಬ್ಬಿ ಮರಿ

ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?

ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ

ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ

--ಜಯಶಂಕರ್

ಅಮ್ಮಂದಿರ ದಿನ


ಅಮ್ಮಂದಿರ ದಿನ

        ನಾಳೆ ಭಾನುವಾರ ಅಮ್ಮಂದಿರ ದಿನ. ಹೌದು ಅಮ್ಮನಿಗೆ ನಮ್ಮೆಲ್ಲರ ಜೀವನದಲ್ಲಿ ಒಂದು ವಿಶೇಷ ಸ್ಥಾನ. ಒಂದು ಸಣ್ಣ ನೋವಾದರೂ ನಾವು ಅಮ್ಮ ಎಂದೇ ಕೂಗುವುದು.. ಅಮ್ಮ ಎಂಬ ಪದದಲ್ಲೇ ಎಷ್ಟೋ ಅರ್ಥ ಎಷ್ಟೋ ಭಾವನೆಗಳು ತುಂಬಿವೆ.. ಅಮ್ಮಂದಿರ ದಿನ ಎಂದಾಗ ಅಮ್ಮನ ಬಗ್ಗೆ ಏನಾದ್ರೂ ಬರೀಬೇಕು ಅನಿಸ್ತು.. ಅಮ್ಮನ ಬಗ್ಗೆ ದೊಡ್ಡ ದೊಡ್ಡ ಪದಗಳನ್ನೆಲ್ಲ ಉಪಯೋಗಿಸಿ ಎಷ್ಟೋ ಜನ ರೀತಾರೆ.. ಬರೆದಿದ್ದಾರೆ.. ನಂಗೆ ಹಾಗೇನೂ ಬರೆಯಲು ನೆನಪಾಗುತ್ತಿಲ್ಲ. ಆದರೆ ಒಂದು ಘಟನೆ ಹೇಗೆ "ಅಮ್ಮ" ಎಂಬ ಶಬ್ದದ ಬಗ್ಗೆ "ಅಮ್ಮ" ಎಂಬ ಜೀವದ ಬಗ್ಗೆ ನನ್ನ ಕಣ್ತೆರೆಸಿತು ಅನ್ನುವುದನ್ನು ಬರೆಯಲೇಬೇಕು ಅಂತ ಅನಿಸಿತು.        ಸುಮಾರು ವರ್ಷಗಳ ಹಿಂದೆ.. ಆವಾಗ ನಾನು ಬರೀ ಇನ್ನಿಲ್ಲದ ಕಾರಣಕ್ಕೆ ಅಮ್ಮ ನೊಂದಿಗೆ ಜಗಳವಾಡುತ್ತಿದ್ದೆ. ಬರೀ ಅಮ್ಮನ ಮಾತಿಗೆ ಎದುರಾಡುವುದು.. ಸಿಡುಕುವುದೇ ಸಾಮಾನ್ಯವಾಗಿತ್ತು. ಅದೊಂದು ವಯಸ್ಸೇ ಹಾಗೆನೋ ಅಮ್ಮ ಹೇಳುವುದೆಲ್ಲ ತಪ್ಪು ಅಂತನೇ ಅನಿಸ್ತಿತ್ತು. ಅವತ್ತು ಒಂದಿನ ಹಾಗೇ ಆಯ್ತು ಅಮ್ಮ ನೊಂದಿಗೆ ಚೆನ್ನಾಗಿ ಜಗಳವಾಡಿ ಮುಖ ಊದಿಸಿಕೊಂಡು ಕುಳಿತಿದ್ದೆ. ಅವತ್ತು ನನ್ನ ಅಜ್ಜಿ(ಅಮ್ಮನ ಅಮ್ಮ) ಮನೇಲಿದ್ದರು. ಬಾ ಇಲ್ಲಿ ಏನೋ ಹೇಳಬೇಕು ಅಂತ ಕರೆದರು. ಗೊತ್ತಾಯ್ತು ನಂಗೆ ಅಮ್ಮನ ಹತ್ರ ಜಗಳ ಆದಿದೆನಲ್ಲ ಅದಕ್ಕೆ ಏನೋ ಹೇಳಕ್ಕೆ ಕರೆದರು ಅಂತ ಅವರು ಯಾವತ್ತು ಬಯ್ಯುತ್ತಿರಲಿಲ್ಲ. ಮನಸ್ಸಿಗೆ ನಾಟುವ 2 ತಿಳುವಳಿಕೆ ಮಾತು ಹೇಳುತ್ತಿದ್ದರು. ಅವತ್ತು ಹಾಗೇ ಕೇಳಿದರು ನನ್ನ "ಅಮ್ಮ ಅಂದ್ರೆ ಏನು ಅಂತ ಗೊತ್ತಾ ನಿಂಗೆ?" ಏನು ಹೇಳಬೇಕೋ ಗೊತ್ತಾಗಲಿಲ್ಲ ನನಗೆ.. ನನಗೆ ಗೊತ್ತು ಅಮ್ಮ ಅಂದ್ರೆ ಏನು ಅಂತ ನಿಂಗೆ ಹೇಳಲಿಕ್ಕೆ ಬರುವುದಿಲ್ಲ ಅಂತ ನನ್ನ ಕೇಳು ಹೇಳ್ತೀನಿ. ಭೂಮಿ ಮೇಲೆ ಕಣ್ಣು ಬಿಟ್ಟ ದಿನದಿಂದ ಅಮ್ಮ ನನ್ನು ನೋಡಿಲ್ಲ.. ಅಮ್ಮ ಅಂತ ಅಮ್ಮನನ್ನು ಒಂದು ಸಲವೂ ಕರೆದಿಲ್ಲ. ಅಮ್ಮನ ಮಡಿಲಲ್ಲಿ ಒಂದಿನನೂ ಮಲಗಿಲ್ಲ.. ಅದಕ್ಕೆ ನನಗೆ ಅಮ್ಮನ ಮಹತ್ವ ಗೊತ್ತು.. ನಿಂಗೆ ಗೊತ್ತಿಲ್ಲ ಅಂತ ಅಂದ್ರು. ಅಜ್ಜಿ ಅವರ ಬಾಲ್ಯದ ದಿನಗಳಲ್ಲಿ ಪಟ್ಟ ಕಷ್ಟಗಳನ್ನು ಒಮ್ಮೆ ಯಾವಾಗಲೋ ಅವರ ಬಾಯಲ್ಲೇ ಕೇಳಿದ್ದು ನೆನಪಾಯಿತು. ಅವರ ಮಾತುಗಳು ಮನಸ್ಸಿನ ಮೇಲೆ ಹೇಗೆ ಪರಿಣಾಮ ಮಾಡಿತು ಅಂದ್ರೆ ನಾನು ಅಮ್ಮನ ಜೊತೆ ಅಷ್ಟು ದಿನ ನಡೆದುಕೊಂಡಿದ್ದೆಲ್ಲ ನೆನಪಿಸಿಕೊಂಡು ಸುಮಾರು ಹೊತ್ತು ಜೋರಾಗಿ ಅತ್ತೆ. ಆವಾಗಲೆ ನಿರ್ಧಾರ ಮಾಡಿದೆ ಇನ್ನೆಂದೂ ಅಮ್ಮಂಗೆ ನೋವಾಗುವ ಹಾಗೆ ನಡೆದುಕೊಳ್ಳಬಾರದು ಅಂತ...
         ಅಮ್ಮ ಯಾವಾಗಲೂ ಹೇಳಿಕೊಡ್ತಿದ್ಲು ನಮಗೆ " ನಮ್ಮಿಂದ ಇನ್ನೊಬ್ಬರನ್ನು ಸಂತೋಷಪಡಿಸಲು ಸಾಧ್ಯವಿಲ್ಲದಿದ್ದರೂ ತೊಂದರೆಯಿಲ್ಲ ಆದರೆ ನಮ್ಮಿಂದ ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳುವುದು ನಮ್ಮ ಕಯ್ಯಲ್ಲೇ ಇದೆ ನಾವು ಹಾಗೇ ಇರಬೇಕು ಕೂಡ " ಅಂತ ಅದನ್ನೇ ನಾನು ಪಾಲಿಸುತ್ತಿದ್ದೇನೆ ಇವತ್ತಿಗೂ. ಅಮ್ಮನ ವಿಷ್ಯದಲ್ಲಿ ಕೂಡ. ಅವತ್ತಿನಿಂದ ಅಮ್ಮ ನೊಂದಿಗೆ ಒಂದೊಂದು ಮಾತು ಆಡುವಾಗಲೂ ಯೋಚಿಸುತ್ತೇನೆ ಅಮ್ಮನಿಗೆ ಏನಾದ್ರೂ ಬೇಜಾರಾಗಬಹುದ ಹೀಗೆ ಹೇಳಿದರೆ ಅಂತ.. ಒಂದೊಂದು ಸಲ ಹಾಗೆ ಅನ್ನಿಸಿದರೆ ಅಮ್ಮನನನ್ನು ಸಮಾಧಾನಿಸುತ್ತೇನೆ ಹೋಗಿ ..ನಾನು ಹಾಗಲ್ಲ ಹೇಳಿದ್ದು ಹೀಗೆ ಹೀಗೆ ಅಂತ.. ಅಮ್ಮ ಖುಷಿಯಾಗಿರೋದನ್ನ ನೋಡೋದೇ ಖುಷಿ. ಅಷ್ಟೆಲ್ಲಾ ಹೇಳಿ ನನ್ನ ಕಣ್ಣು ತೆರೆಸಿದ ಅಜ್ಜಿ ನಮ್ಮನ್ನು ಬಿಟ್ಟು ಹೋಗಿ 5-6 ವರ್ಷಗಳೇ ಆಯಿತು.. ಆದರೂ ಅವರಂದು ಆಡಿದ ಮಾತುಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೇ ಇವೆ. ಅಮ್ಮ ಇಂದಿಗೂ ಅವರನ್ನು (ಅಮ್ಮನ ಅಮ್ಮ) ನೆನೆಸಿಕೊಂಡು ಕಣ್ಣೀರು ಹಾಕಿದ್ದನ್ನು ಎಷ್ಟೋ ಸಲ ನೋಡಿದ್ದೇನೆ. ಅಮ್ಮ ಅಂದರೇ ಹಾಗೆ. ನಮ್ಮ ನೋವಿಗೆ ಕಣ್ಣೀರಿದುವವಳು ನಮ್ಮ ಖುಷಿಯಲ್ಲೇ ಖುಷಿ ಕಾಣುವವಳು. ಅದಕ್ಕೆ ಅಮ್ಮಂದಿರ ದಿನಕ್ಕೆ ಅಂತ ಬರವಣಿಗೆ ಅಮ್ಮನಿಗೆ ಒಂದು ಪ್ರೀತಿಯ ಕಾಣಿಕೆ.

ಮುಗಿಸುವ ಮುನ್ನ,
 ಅಮ್ಮನಿಗೆ ಅಂತ ಬರೆದ ಒಂದು ಪದ್ಯ ಇವತ್ತು ಯಾಕೋ ನೆನಪಾಗುತ್ತಿದೆ. ಇದೂ ಅಮ್ಮನಿಗಾಗಿ

ಅಮ್ಮ ನಿನ್ನ ಹೊಗಳಲು
ಯಾವ ಪದವ ಹುಡುಕಲಿ?
ಅಮ್ಮ ನಿನ್ನ ಮಮತೆ ಪ್ರೀತಿಯ
ಹೇಗೆ ತಾನೆ ಮರೆಯಲಿ?

ಅಮ್ಮ ನಿನ್ನ ಮಡಿಲದು
ಪ್ರೀತಿ ಸುಧೆಯ ಕಡಲು.
ಅಮ್ಮ ನಿನ್ನ ಮಡಿಲದು
ಸ್ವರ್ಗಕಿಂತ ಮಿಗಿಲು.

ಅಮ್ಮ ನಿನ್ನ ನುಡಿಗಳು
ಹಾಲು ಜೇನ ಸಂಗಮ.
ಅಮ್ಮ ನಿನ್ನ ಮೊಗವದು
ಹುಣ್ಣಿಮೆಯ ಚಂದ್ರಮ.

ಅಮ್ಮ ನೀನು ಸನಿಹವಿರಲು
ಗವನ್ನೇ ಮರೆವೆನು.
ಅಮ್ಮ ನಿನ್ನ ಜೊತೆಯಿರಲು
ಗವನ್ನೇ ಗೆಲ್ಲುವೆನು.

ಮುಂದಿನಾ ಜನುಮವಿರಲು
ನಿನ್ನ ಕಂದನಾಗೇ ಬರುವೆನು.
ಮತ್ತೆ ನಿನ್ನ ಜೊತೆಯಿರಲು
ಹರುಷದಲ್ಲಿ ಕುಣಿವೆನು.
                ಕವಿ ಕನ್ನಡಿಗ ವಿಜಯ್ ಜಿ. ಹೆಮ್ಮರಗಾಲ

ಗೂಬೆ / ಕಾಗೆ + ಊಟ

1. ಗೂಬೆ/ ಕಾಗೆ ಹೊಕ್ಕರೆ ಮನೆಯಲ್ಲಿ ಸಾವು ಸಂಭವಿಸುತ್ತಂತೆ ?
 - ಇಂಥಾ ಮೂಢನಂಬಿಕೆಗಳ ಬಗ್ಗೆ ಇಲ್ಲಿ ಬರೆಯುವ ಅವಶ್ಯಕತೆಯಿಲ್ಲ. ಆದರೂ ಇಂಥದೊಂದು ನಂಬಿಕೆ ನಮ್ಮ ಜನರಲ್ಲಿ ಇನ್ನೂ ಇದೆ.

2. ಊಟದಲ್ಲಿ ಹಲ್ಲಿ ಬಿದ್ದರೆ ?
 - ಆ ಊಟ ಮಾಡಿದರೆ ಸಾಯುವುದಿಲ್ಲ. ಸಿನಿಮಾದಲ್ಲಷ್ಟೆ ಸಾವು.

ಕೃಪೆ : ಕೆ.ಟಿ.ಆರ್

ಎಪ್ರೀಲ ತಿಂಗಳ ಟಾಪ್ - 3 ವೀಕ್ಷಣೆ

ನಾನು ಕನ್ನಡದ ಕಂದ, ಕನ್ನಡಕ್ಕಾ ತೆರೆದಿದ್ದೇನೆ ಕನ್ನಡದ ತಾಣ, ಅದುವೇ www.spn3187.blogspot.in, ಹಾಗೆಯೇ ಕನ್ನಡದ ಟೆಲಿಗ್ರಾಮ ಗುಂಪು https://t.me/joinchat/AAAAAEDPKsqF5ygl2NqaRA ಬನ್ನಿ ಜೊತೆಗೂಡಿ ಕನ್ನಡವನ್ನು ಬೆಳೆಸೋಣ ಕನ್ನಡವನ್ನು ಉಳಿಸೋಣ, ಕನ್ನಡವೇ ಸತ್ಯ, ಕನ್ನಡವನ್ನುಮಾತನಾಡೋಣ ನಿತ್ಯ ನಿತ್ಯ..... ಕನ್ನಡದ ಗುಂಪನ್ನು ಬೆಳೆಸಲು ನಿಮ್ಮ ಕೈ ಜೋಡಿಸಿ, ಈ ಲಿಂಕ್-ನ್ನು ನಿಮ್ಮ ಪರಿಚಯವಿರುವ ಎಲ್ಲರಿಗೂ ಹಂಚಿ (Share)
..
ನಮ್ಮ ಜಾಲತಾಣದ ಎಪ್ರೀಲ ತಿಂಗಳ
ಟಾಪ್ - 3 ವೀಕ್ಷಣೆಯ ವಿವರ

ಕಳೆದ ತಿಂಗಳ ಪ್ರಕಟನೆಗಳ ಟಾಪ್ 3 ವೀಕ್ಷಣೆಗಳು

ಕಳೆದ ತಿಂಗಳ ರಾಷ್ಟ್ರಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಜರ್ಮನಿ
ಕಳೆದ ತಿಂಗಳ ಬ್ರೌಸರ್ಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

Chrome

Firefox

UC Browser

ಕಳೆದ ತಿಂಗಳ ಆಪರೇಟಿಂಗ್ ಸಿಸ್ಟಮ್ಗಳ ಟಾಪ್ 3 ವೀಕ್ಷಣೆಗಳು

Android

Windows

Linux

ಕಳೆದ ತಿಂಗಳ ಆಪರೇಟಿಂಗ್ ಸಿಸ್ಟಮ್ಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

Windows 7


Windows 8.1

Windows 8

ತಾಣ ಪ್ರಾರಂಭದ ವರ್ಷದಿಂದ ಇಂದಿನವರೆಗಿನ ಪೋಸ್ಟಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಿದ ಟಾಪ್ 3 ಪುಟಗಳು

ಟಾಪ್ 3 ವೀಕ್ಷಣೆಯ ತಿಂಗಳುಗಳು
ಅಗಸ್ಟ 2015 - 6,250
ಜುಲೈ 2015 - 5,780
ನವೆಂಬರ್ 2016 - 3,697
ಟಾಪ್ 3 ವೀಕ್ಷಣೆಯ ದಿನಗಳು
26 ಅಗಸ್ಟ 2015 - 592
25 ಅಗಸ್ಟ 2015 - 539
15 ಜುಲೈ 2015 - 532
ಒಂದೇ ಸಮಯದಲ್ಲಿ ಬಹಳ ವೀಕ್ಷಕರು ವೀಕ್ಷಿಸಿದವರ ಟಾಪ್ 3 
ಅಕ್ಟೋಬರ್ 2016 - 35
ಅಗಸ್ಟ್ 2016 - 17
ಅಕ್ಟೋಬರ್ 2016 - 09
ಕಳೆದ ತಿಂಗಳ ಪುಟವೀಕ್ಷಣೆಗಳು
2,646+
ಪ್ರಸ್ತುತ G+ ನ ಒಟ್ಟು ಸದಸ್ಯರುಗಳ ಸಂಖ್ಯೆ
+ 84
ಪ್ರಸ್ತುತ ಒಟ್ಟು ವೀಕ್ಷಣೆಯ ದೇಶಗಳ ಸಂಖ್ಯೆ
+ 87