ಬುಧವಾರ, ಮೇ 24, 2017

ಬೆವರು


ಯಾವುದೇ ಕಾರ್ಯ ಯಶಸ್ವಿಯಾಗಲು 99 ಪ್ರತಿಶತ ಬೆವರು, ಮತ್ತು 1 ಪ್ರತಿಶತ ದೇವರು
ಬೆವರು ಸುರಿಸಿ ದುಡಿದವಗೆ ಸ್ನಾನದ ಮಹತ್ವ ತಿಳಿದಿರುತ್ತದೆ
.ಸಿ. ರೂಮಿನಲ್ಲಿ ಕೆಲಸ ಮಾಡುವವರಿಗೆ ಕರೆಂಟ್ ಹೋದಾಗ ಮಾತ್ರ ಬೆವರು ಸುರಿಸಿ ದುಡಿವ ಅವಕಾಶ
ಲಲನಾ ಮಣಿಗಳು ಬೆವರು ಸುರಿಯದಂತೆ ಛಿಜಢಿಛ್ಠಜ ಆಗಿರುತ್ತಾರೆ
ಹಗಲು ಬೆವರು ಸುರಿಸಿ ದುಡಿ, ರಾತ್ರಿ ಬೆವರೇಜ್ ಕುಡಿ
ಫೀವರ್ ಜಾಸ್ತಿಯಾದಾಗಲೂ ಮೈಯ್ಯಿಂದ ಹೋಗೋದು ಇದೇ
ವೇದಿಕೆ ಮೇಲೆ ಭಾಷಣ ಮಾಡುವಾಗ ಚಳಿಗಾಲದಲ್ಲೂ ಉಕ್ಕುವ ನೆರೆ
ಬೆವರು ಸುರಿಸಿ ದುಡಿವ ಗಂಡನನ್ನು ಎಲ್ಲರೂ ಇಷ್ಟಪಡುತ್ತಾರೆ, ಆದರೆ ಸ್ನಾನ ಮಾಡಿ ಬಂದ ನಂತರವಷ್ಟೇ
ಉಪ್ಪು ತಿಂದ ಮೈಯ್ಯಿಂದ ಸುರಿಯುವ ಉಪ್ಪುಪ್ಪು ದ್ರವ
ದುಡಿವವಗೆ ಬೆವರೇ ದೇವರು
ಎವರೇಜು ಜನರ ಪ್ರತಿ ದಿನದ ಸಂಗಾತಿ
ನಿಮ್ಮನ್ನು ಆರ್ದ್ರವಾಗಿಡುವ ವಿಷಯ
ಸೋಪ್ ಕಂಪೆನಿಯ ಬ್ಯುಸಿನೆಸ್ ಫ್ರೆಂಡ್ಲಿ

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: