ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಹಾಸ್ಯ ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಾಸ್ಯ ಕಥೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಆಗಸ್ಟ್ 13, 2025

ಹೊಸ ವಗ್ಗರಣೆ ಗಾದೆ ಮಾತುಗಳು (ಹಾಸ್ಯಕ್ಕಾಗಿ ಮಾತ್ರ)

೧. ಏನಾದ್ರೂ ಮಾಡು; ಮೊದ್ಲು ಸ್ನಾನ ಮಾಡು
೨. 
ಜ್ಞಾನ ದೇಗುಲವಿದು, ಮೊಬೈಲ್ ಸ್ವಿಚ್ ಆಫ್ ಮಾಡಿ ಒಳಗೆ ಬನ್ನಿ.
೩. 
ಕಾಲು ಇದ್ದಷ್ಟು ಹಾಸಿಗೆ ಹಾಸಿಕೋ
೪. 
ಮನಸ್ಸೊಳಗೆ ಅನಾಚಾರ, ಮುಖದಲ್ಲಿ ಬೃಂದಾವನ..
೫. ಆಕಳು ಕಪ್ಪಾದರೆ ಸಗಣಿನೂ ಕಪ್ಪೇ..
೬. 
ಉಪ್ಪು ತಿಂದ ಮೇಲೆ ಬೀಪಿ ಬರಲೇಬೇಕು.
೭. 
ಕೈ ಕೆಸರಾದರೆ ನಾನೇನು ಮಾಡಲಿ ?
೮. 
ಗೆಳೆಯರ ಜಗಳ ಗುಂಡು(ಸಾರಾಯಿ) ಹಾಕುವ ತನಕ..
೯. ಇಬ್ಬರ ಜಗಳ, ಮೂರನೆಯವನಿಗೆ ಪೆಟ್ಟು.
೧೦. ಹಣ್ತಿಂದವ ತಪ್ಪಿಸಿಕೊಂಡ; ಮೂತಿ ಒರೆಸ್ಕಂಡವ ಸಿಕ್ಕಾಕ್ಕೊಂಡ
೧೧. 
ಕಬ್ಬು ಡೊಂಕಾದರೆ ತಿನ್ನೋದು ಬಿಡ್ತೇವ್ಯೇ ?
೧೨. 
ವೈದ್ಯ ಬಯಸಿದ್ದೂ ಡಯಾಬಿಟೀಸು, ರೋಗಿಗಾಗಿದ್ದೂ ಡಯಾಬಿಟೀಸು..

ಸೂಚನೆ ==> ಇವುಗಳನ್ನು ಓದಿ ನಕ್ಕರೆ ನೀವೆ ಜವಾಬ್ದಾರರು...👦😆

ಬುಧವಾರ, ಮೇ 22, 2024

ಈ ವಿಳಾಸ ನಂಗೆ ಗೊತ್ತಿಲ್ಲಾ.. @spn3187

ಹುಡುಗಿ 👧:- ಈ ವಿಳಾಸ ಎಲ್ಲಿ ಬರುತ್ತೆ ಅಂತಾ ಹೇಳ್ತೀರಾ ?

ಹುಡುಗ:- ಇಂಗೆ, ನೇರವಾಗಿ ಹೋಗಿ,
ಅಲ್ಲಿ 3 ರೋಡ್⛙⛙⛙ ಸಿಗುತ್ತೆ, 
3ನೇ ರೋಡಲ್ಲಿ ಹೋಗಿ
ಅಲ್ಲಿ 3 ಬಸ್🚌🚌🚌 ನಿಂತಿರುತ್ತೆ
3ನೇ ಬಸ್ ಹತ್ತಿ, 
3ನೇ ಸ್ಟಾಪಲ್ಲಿ ಇಳೀರಿ..
ಎದುರಿಗೆ 3 ಮನೆ🏠🏠🏠 ಕಾಣ್ಸುತ್ತೆ
3ನೇ ಮನೆಗೆ ಹೋಗಿ,
ಅಲ್ಲಿ 3 ಮಹಡಿ🏬ಇದೆ.
3ನೇ ಮಹಡಿಗೆ ಹೋಗಿ,
ಅಲ್ಲಿ 3 ರೂಮ್⛺⛺⛺ ಸಿಗುತ್ತೆ..
3ನೇ ರೂಮ್ ಗೆ ಹೋಗಿ, ಅಲ್ಲಿ
3 ಟೇಬಲ್ ಮೇಲೆ 3 ಬುಕ್📓📓📓 ಇದೆ
3ನೇ ಬುಕ್ ನ 3ನೇ ಪೇಜಲ್ಲಿ📄📄📄
3 ಫೋಟೋ👤👤👤 ಇದೆ.
ಆ 3ನೇ ಫೋಟೋ ನನ್ನ ದೇವರದು..

ಆ ಫೋಟೋ ಮೇಲೆ ಪ್ರಮಾಣ
🖐 ಮಾಡಿ ಹೇಳ್ತೀನಿ...
' ಈ ವಿಳಾಸ ನಂಗೆ ಗೊತ್ತಿಲ್ಲಾ... '

@ಸುದರ್ಶನ್ (ಶಿರಾ)

ನಿಮಗೆ 
S % ಬೇಜಾರ್ ಆದ್ರೆ,
P % ಕೋಪ ಇದ್ರೆ,
N % ಕಷ್ಟ ಇದ್ರೆ
31 % ಸಂತೋಷ ಇದ್ರೆ,
87 % ಭಯಾ ಇದ್ರೆ.....

ಈ ಎಲ್ಲಾ ಅಕ್ಷರಗಳನ್ನು ಸೇರಿಸಿ..spn3187.. .Google.. ನಲ್ಲಿ ಹುಡುಕಾಟ ಮಾಡಿದರೆ...
ಉತ್ತಮ ಮಾಹಿತಿಗಳು ಹಾಗೂ ಕನ್ನಡದ ತಾಣಗಳು ಸಿಗ್ತಾವೆ..

ಶನಿವಾರ, ಏಪ್ರಿಲ್ 01, 2017

ಇಂಗ್ಲಿಷ್ ಚಿತ್ರಗಳ ಹೆಸರನ್ನ ಕನ್ನಡಕ್ಕೆ ಅನುವಾದ (English to Kannada)

ನಗ್ಸುದು ನಮ್ಮ ಕೆಲ್ಸಾ, ನಗುದು ಬಿಡುದು ನಿಮ್ಮ ಕೆಲ್ಸಾ......
HOLLOW MAN                     ತೂತ್ ಮನಷಾ

DIE ANOTHER DAY          ಇನ್ನೊಂದ್ ದಿನಾ ಶಟದ್ ಹೊಗ್ಲೆ
GONE WITH THE WIND      ಘಾಳ್ಯಾಗ್ ಗೆವ್ವ್ ಅಂತ ಹೋತು
SUPERMAN                           ಅಗದೀ ಮಸ್ತ್ ಮನಷ್ಯಾ
SCORPION KING                  ಚೋಳ ರಾಜ್ಯಾ
THE MUMMY                       ಅವ್ವಾ……
THE MUMMY RETURNS    ಅವ್ವಾ ವಾಪಸ್ ಬಂದ್ಲು
MISSION IMPOSSIBLE       ಆಗಂಗಿಲ್ಲ
IRON MAN                            ಇಸ್ತ್ರೀ ಮನಷ್ಯಾ
THE GOD FATHER              ದೇವರ ಪಪ್ಪಾ
LORD OF RING                               ದೇವ್ರ ಉಂಗ್ರಾ
MR BEAN                                                    ಶ್ರೀ ಹುರುಳಿಕಾಯಿ
                                              ಕೃಪೆ : ಕನ್ನಡ ಲೋಕದಿಂದ

ಸೋಮವಾರ, ಅಕ್ಟೋಬರ್ 17, 2016

ಫೇಲ್ ಮಾಡಿ

ಶೋರ : ಸರ್, ನನ್ನ ಫೇಲ್ ಮಾಡಿ.... ನಿಮ್ಮ ಕಾಲು ಹಿಡೀತೀನಿ....

ಮೇಷ್ಟ್ರು : ಯಾಕೋ ? ಎಲ್ರೂ ಪಾಸ್ ಮಾಡಿ ಅಂದ್ರೆ ನೀನು ಫೇಲ್ ಮಾಡಿ ಅಂತೀಯಾ ?

ಶೋರ : ನಮ್ಮಪ್ಪ ಪಾಸ್ ಆದ್ರೆ ಕಾಲೇಜ್‍ಗೆ ಹಾಕ್ತೀನಿ, ಫೇಲ್ ಆದ್ರೆ ಮದುವೆ ಮಾಡ್ತೀನಿ ಅಂದಿದ್ದಾರೆ ಅದಕ್ಕೆ.....

ಮಂಗಳವಾರ, ಅಕ್ಟೋಬರ್ 04, 2016

A ದಿಂದಾ Z ವರೆಗಿ ಕತಿ ಓದರಿ..... (Kannada A to Z Story)

Aನೆಂದು ಬರೆಯಲಿ Bಡಿಸಲಾಗದ ನಿನ್ನ Cನಿಮಾದ Dಗ್ರಿಯ ದೊಡ್ಡ E ಸಿನಿಮಾದವರ F.ಆಯ್.ಆರ್ ಆದಾಗ Gಗದ ಜಿಗದ ಹೇಳಿ Hಚ್ಚೆನು ಮಾತ್ಯಾಡ್ದ Iಯ್ಯ ಇಲ್ಲಿ ಬಾ Jಓರಾಗಿ Kಳದೆ Lಲ್ಲಾರು Mನೆಗೆ ಹೋಗಿ Nನ್ನಿ ಹೊಡದು Oಪನ ಆಗಿ ಹೇಳಿ Pಪಿ ಮಾರಾಂವ Qಡಾ ಇದ್ದರು Rರಾಮ ಇರ್ತಾನ ಅಂತಾ S ಅಂದ್ರ ಇಲ್ಲೇ Tಕಾನಿ ಹಾಕಿ Uಟಾ ಮಾಡಿ Vಶ್ರಾಂತಿ ಮಾಡ್ತಾನ ಅಂತ Wಶಾ Xಆರ್ Yಯರ ತಗುಂಡ Z ಬರು ತನಕಾ ಹ್ಯಾಂಗ್ ಬೇಕ ಹಂಗ ಜಡದ ಹೋದಾ ರೀ ಅಂವಾ….. 
ರಚನೆ (ಕತಿ ಬರದಾಂವ): ಶಿವಕುಮಾರ.PN (ಇಂತಿ ನಿಮ್ಮಾಂವ ಕರುನಾಡ ಕನ್ನಡಿಗ)

ಭಾನುವಾರ, ನವೆಂಬರ್ 01, 2015

ಕನ್ನಡ ರಾಜ್ಯೋತ್ಸವ

            ಸಿದ್ಲಿಂಗು ಫೋನ್ ಬಂತು ಕಳ್ ಮಂಜನಿಗೆ...ಮಂಜು, ನನ್ನ ಆಫೀಸಲೊಬ್ಬ ಸೆಲ್ವ ಅಂತ ಇದ್ದಾನಲ್ಲ, ಅವರ ಊರಲ್ಲಿ ಕನ್ನಡ ರಾಜ್ಯೋತ್ಸವ ಮಾಡುತ್ತಾರಂತೆ. ಒಂದು ಕಿತ ನಮ್ಮೂರಿಗೆ ಬಂದಿದ್ದಾಗ ನಿಮ್ಮೆಲ್ಲರ ಕಾರ್ಯಕ್ರಮ ನೋಡಿ ಖುಸಿ ಆಗಿ ಈಗ ಅವರ ಊರಲ್ಲಿ ನೀವೆ ಕಾರ್ಯಕ್ರಮ ಕೊಡಬೇಕೆಂದು ಕೇಳಿದ್ದಾನೆ, ನೀವೆಲ್ಲಾ ಸೇರಿ ಏನಾರೂ ಮಾಡ್ರಲಾ ಅಂದ. ಆಯ್ತಣ್ಣೊ ಯಲ್ಲರೂ ಪ್ರಾಕ್ಟೀಸು ಮಾಡ್ತೀವಿ ಅಂತೇಳಿ ಯಲ್ಲರಿಗೂ ಹೇಳಿದ. ಈ ಕಿತ ಹೆಂಗಸರು ಸಹ ಮಾಡಲಿ ಅಂತ ಅವರು ಸಹ ಡ್ಯಾನ್ಸು, ಡೊಳ್ಳು ಕುಣಿತ, ವೀರಗಾಸೆ ಯಲ್ಲ ಪ್ರಾಕ್ಟೀಸು ಮಾಡಿರು.


             ರಾಜ್ಯೋತ್ಸವ ಡೇಟ್ ಪಿಕ್ಸ್ ಆಯ್ತು. ಕಳ್ ಮಂಜನಿಗೆ ಸಿದ್ಲಿಂಗು ಪೋನ್ ಬಂತು. ಸೆಲ್ವ ಅವರ ಊರು ಮೆಟ್ಟುಪಾಳ್ಯ ಅಂತ ತಮಿಳುನಾಡಲ್ಲಿ ಕನ್ಲಾ, ಚೆನ್ನೈನಿಂದ ೬೦ ಕಿಲೋಮೀಟರ್ . ಚೆನ್ನೈಗೆ ನೀವೆ ಟಿಕೇಟ್ ತಕ್ಕಂಡು ಹೋದ್ರೆ ಅಲ್ಲಿಂದ ಅವರು ಕರೆದುಕೊಂಡು ಹೋಗ್ತಾರೆ. ಆಮ್ಯಾಕೆ ಅಲ್ಲಿ ಟಿಕೇಟ್ ದುಡ್ಡು ಯಲ್ಲಾ ಕೊಡ್ತಾರಂತೆ. ಅಲ್ಲಿ ಊಟ ತಿಂಡಿ ರೂಮು ಯಲ್ಲಾ ಅವರೆ ನೋಡಿಕೊಂತಾರೆ. ಭಾನುವಾರ ಬೆಳ್ಳಿಗೆ ಕಾರ್ಯಕ್ರಮ. ಶನಿವಾರ ಬೆಳ್ಳಿಗೆ ೮ ಘಂಟೆಗೆ ಚೆನ್ನೈ ಬಸ್ ಸ್ಟಾಂಡಿನಿಂದ ನಿಮ್ಮನ್ನು ಕರೆದುಕೊಂಡು ಹೋಗ್ತಾರೆ. ಬಿಳಿ ಬಣ್ಣದ ಟಿಟಿ ಗಾಡಿ ಬತ್ತದೆ. ನೀವೆಲ್ಲಾ ಶುಕ್ರವಾರ ರಾತ್ರಿನೇ ಹೊರಟು ಬುಡ್ರಿ ಅಂದ ಸಿದ್ಲಿಂಗು.



             ಆಯ್ತಣ್ಣೊ ಅಂತ ಕಳ್ ಮಂಜ ಯಲ್ಲರಿಗೂ ಹೇಳಿದ. ಯಲ್ಲರ ಹತ್ತಿರ ನೋಡ್ರಲಾ ನಿಮ್ಮ ಕಾರ್ಯಕ್ರಮನಾ ಹೊರನಾಡಲ್ಲಿ ಮಾಡುಸ್ತ ಇದ್ದೀನಿ. ಖರ್ಚು ಸ್ಯಾನೆ ಬತ್ತದೆ. ಆಮ್ಯಾಕಿಂದ ನೀವು ಪೇಮಸ್ ಆಗ್ತೀರಾ...ಇನ್ನ ಹೆಚ್ಚು ಕಾರ್ಯಕ್ರಮ ಯಲ್ಲಾ ಸಿಗ್ತದೆ...ಈಗ ಖರ್ಚಿಗೆ ಅಂತ ನೀವೆಲ್ಲಾ ನಾಲಕು ಸಾವಿರ ಮತ್ತೆ ಡ್ರಸ್ಸಿಗೆ ಒಂದು ಸಾವಿರ ಯಲ್ಲ ಐದು ಸಾವಿರ ಆಯ್ತದೆ ಅಂತ ಹತ್ತು ಜನಗಳಿಂದ ಐವತ್ತು ಸಾವಿರ ಕಿತ್ತ. ಅದ್ರಾಗೆ ೮ ಜನ ಹೆಂಗಸರು ಇಬ್ಬರು ಗಂಡಸರು ಇದ್ದರು.



             ಪಕ್ಕದೂರಲ್ಲಿ ಜಲಗೇರಮ್ಮನ ದೇವಸ್ಥಾನ ಇತ್ತು. ಅಲ್ಲಿ ಹೋಗಿ ಪೂಜಾರಿಗೆ ಐನೂರು ರೂಪಾಯಿ ಕೊಟ್ಟು ಭಕ್ತಾದಿಗಳು ಅಮ್ಮನವರಿಗೆ ಉಡಿಸುವ ಸೀರೆ ಗಳಲ್ಲಿ ಒಂದೆ ತರಹದ ಏಂಟು ಹರಿಶಿಣ ಬಣ್ಣದ ಕೆಂಪು ಬಾರ್ಡರ್ ಸೀರೆ ತಕ್ಕಂಡು ಬಂದ. ಗಂಡಸರಿಗೆ ಒಂದೊಂದು ಹಳದಿ ಜುಬ್ಬ ಕೆಂಪು ಪೈಜಾಮ ತಂದು ಯಲ್ಲರಿಗೂ ಕೊಟ್ಟ. ಯಲ್ಲ ಸೇರಿ ಒಂದು ಸಾವಿರ ಆಯ್ತು. ಶುಕ್ರವಾರ ಯಲ್ಲರನ್ನು ಅದೇ ಡ್ರಸ್ ನಲ್ಲಿ ಬರಬೇಕು ಅಂತ ಹೇಳಿದ್ದ. ಯಲ್ಲರೂ ಬಸ್ ಹತ್ತಿದರು. ನಾವೆಲ್ಲಾ ಕರ್ನಾಟಕ ರಕ್ಷಣ ವೇದಿಕೆಯವರು ಚಳುವಳಿಗೆ ಹೊಂಟಿದ್ದೀವಿ ಅಂತೇಳಿ ಬಡ್ಡಿಮಗ ಬಸ್ಸಿನಲ್ಲೂ ಟಿಕೇಟ್ ತೆಗೆದುಕೊಳ್ಳಲಿಲ್ಲ.


             ಹೆಂಗೊ ಬೆಳ್ಳಿಗೆ ಏಳು ಘಂಟೆಗೆ ಚೆನ್ನೈ ತಲುಪಿರು. ಯಲ್ಲರೂ ಅಣ್ಣ ಹೊಟ್ಟೆ ಹಸಿವು ಅಂದರು. ತಡೀರಲಾ ಕಾರ್ಯಕರ್ತರು ಬತ್ತಾರೆ ಅಂತ ತಿಂಡಿನೂ ಕೊಡಿಸಲಿಲ್ಲ. ಅಮ್ಯಾಕೆ ಅವರೆ ಒಂದೊಂದು ದ್ವಾಸೆ ತಿಂದು ಕಳ್ ಮಂಜನಿಗೂ ಒಂದು ದ್ವಾಸೆ ಕೊಡಿಸಿದ್ರು. ಅಣ್ಣೊ ವಿಸರ್ಜನೆ ಅಂದ್ರು...ಕೈನಲ್ಲಿ ಕಲ್ಲು ಹಿಡಿದುಕೊಂಡ್ರೆ ತಡೆದುಕೊಳ್ಳಬಹುದು ಅಂತ ಐಡಿಯಾ ಬ್ಯಾರೆ ಕೊಟ್ಟ. ಕೊನೆಗೂ ಏಂಟಾಯಿತು. ಇವರಿಗೆ ತಮಿಳು ಭಾಸೆ ಬ್ಯಾರೆ ಬರಕ್ಕಿಲ್ಲ. ಒಂದು ಬಿಳಿ ಟಿಟಿ ಗಾಡಿ ಸ್ಲೋ ಮಾಡಿದ. ಇವರನ್ನೆ ನೋಡ್ತಾ ಇದ್ದ ಹೆಂಗೆ ಪೊಣೊ ಅಂದ... ಪೋಗ್ರಾಮ್, ಪೋಗ್ರಾಮ್ ಅಂದ. ವಾಂಗೊ ಅಂತ ಗಾಡಿಗೆ ಹತ್ತಿಸಿಕೊಂಡ ಯಲ್ಡು ಘಂಟೆ ಆದಮ್ಯಾಕೆ ಇಳಿಸಿದ.


             ಇಳಿದು ನೋಡುತ್ತಾರೆ. ದೊಡ್ಡ ದೇವಸ್ಥಾನ. ಎಲ್ಲ ಹಷಣ ಸೀರೆ ಉಟ್ಕೊಂಡಿರೊ ಜನ ಸುತ್ತ ಮುತ್ತ... ಐದು ಸಾವಿರ ರೂಪಾಯಿ ಕೇಳಿದ ಡ್ರೈವರ್. ಮಂಜ ಕೊಡಕಿಲ್ಲ ಅಂತ ಕ್ಯಾತೆ ತೆಗೆದ. ಹೆಂಗಸರೆಲ್ಲಾ ಹಳದಿ ಸೀರೆ ಗಂಡಸರು ಹಳದಿ ಜುಬ್ಬನಲ್ಲಿ ಇದ್ದಿದಕ್ಕೆ ಡ್ರೈವರ್ ಓಂ ಸಕ್ತಿ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದ. ಕೊನೆಗೆ ಮಾತಾಡೊಕೆ ಭಾಸೆ ಬರದೆ ಮಂಜ ದುಡ್ಡು ಕೊಟ್ಟ. ಬೋರ್ಡು ಓದೋಣ ಅಂದ್ರೆ ಯಲ್ಲ ಕಡೆ ಜಿಲೀಬಿ ಅಕ್ಷರ. ಕೊನೆಗೆ ಸಿದ್ಲಿಂಗುಗೆ ಫೋನ್ ಮಾಡಿ ಮೆಟ್ಟುಪಾಳ್ಯ ತಲುಪಿ ಕಾರ್ಯಕ್ರಮ ಮಾಡಿರು. ಊರಿಗೆ ಬತ್ತಿದ್ದಂಗೆ ಯಲ್ಲರೂ ಕಳ್ ಮಂಜನ್ನ ನಂಬಿ ಮೆಟ್ಟುಪಾಳ್ಯಕ್ಕೆ ಹೋದವಲ್ಲ ನಾವು ಮೆಟ್ ನಾಗೆ ಹೊಡ್ಕೊಬೇಕು ಅಂತ ಅವನಿಗೆ ನಾಲಕ್ಕು ಇಕ್ಕಿ ಮಿಕ್ಕ ಕಾಸ್ ಕಿತ್ಕೊಂಡರು

ಶನಿವಾರ, ಆಗಸ್ಟ್ 15, 2015

ಅಗಸ್ಟ 15 ಸ್ವತಂತ್ರ ದಿನ

       ಪ್ರತಿ ವರ್ಷದಂಗೆ ಈ ಕಿತನೂ ಸ್ವಸಂತ್ರ ದಿನ ಮಾಡಣ ಅಂತ ಸಾಸಕರ ಹತ್ರ ಹೋದ್ವಿ. ಸಾಸಕರು ಸ್ಯಾನೆ ಖುಸಿನಾಗಿದ್ರೂ ಮಖ ಯಾಕೊ ವಸಿ ಬಾಡಿತ್ತು. ನೋಡ್ರಲಾ ಈಗ ನಾನು ಸಾಸಕ ಅಲ್ಲ ಲೋಕಸಭಾ ಸದಸ್ಯ...ಡೆಲ್ಲಿಗೋಗಿ ಬಂದಿವ್ನಿ..ಹೋದ ಸಲಕಿಂತ ಜೋರಾಗಿ ಮಾಡಬೇಕು ಕನ್ರಲಾ ಅಂದರು. ಆಯ್ತಣ್ಣೊ ಅಂತ ಯಲ್ಲ ಒಪ್ಪಿಕೊಂಡ್ವಿ....ಸ್ಯಾನೆ ಜನ ಸೇರಿಸಬೇಕು ಕನ್ರಲಾ...ಟಿವಿನಾಗೆ ಬರಬೇಕು. ಹೋದ ಕಿತ ತರ 1234 ಬಾವುಟ ಕಟ್ಟದೆ ನಮ್ಮ ದೇಸದ ಬಾವುಟನೇ ಕಟ್ಟಬೇಕು...ದಾರ ಯಳಿತ್ತಿದ್ದಂಗೆ ಬಿಚ್ಚಿಕೊಬೇಕು ಬಾವುಟ ಅಂದರು. ಆಯ್ತಣ್ಣೊ ಕಿಸ್ನನ ಲಾಡಿ ತರನೇ ಕಟ್ಟುತ್ತೀವಿ ಅಂದ ಕಳ್ ಮಂಜ. ಹತ್ತು ಸಾವಿರ ಚೇರ್ ಹಾಕಿಸ್ರಲಾ ಮೈದಾನದಾಗೆ ಅಂದ್ರು..ಆಯ್ತಣ್ಣೊ ಅಂತ ಒಂದಷ್ಟು ಕಾಸು ಕಿತ್ಕೊಂಡು ಬಂದ್ವಿ....ಕಳ್ ಮಂಜ ಯಲ್ಲ ಅರೆಂಜ್ ಮೆಂಟ್ ಮಾಡ್ತೀನಿ ಅಂತ ವಹಿಸಿಕೊಂಡ. ಮೈದಾನ ದಾಗೆ ಶಾಮಿಯಾನ, ಮೈಕ್ ಸೆಟ್ಟು, ಹತ್ತು ಸಾವಿರ ಚೇರು, ಜನರಿಗೆ ತಿಂಡಿ ತೀರ್ಥ ಯಲ್ಲಾ ವ್ಯವಸ್ಥೆ ಆತು. 

       ಸ್ವಸಂತ್ರದ ದಿನ ಬಂದೇ ಬುಡ್ತು. ಜನ ಸಿಕ್ಕಾಪಟ್ಟೆ ಜಮಾಯಿಸಿದ್ರು. ವೇದಿಕೆ ಮ್ಯಾಗೆ ಗಣ್ಯ ವ್ಯಕ್ತಿಗಳು ಕುಂತಿದ್ದರು. ಸಾಸಕರು ಬಂದು ಬಾವುಟ ಹಾರಿಸಿದ್ರು. ಆದ್ರೆ ಯಾಕೊ ಚೇರ್ ಮ್ಯಾಗೆ ಕೂರಲೇ ಇಲ್ಲ....ಯಾಕಲಾ ಕೂರಕಿಲಾ ಈ ವಯ್ಯ ಅಂದ ಮಂಜ....ಬೇಗ ಹೋಗಬೇಕೆನೊ ಬುಡಲಾ ಅಂದ ಕಿಸ್ನ....ಹಾರ ಹಾಕಿದ್ದು ಆತು. ಭಾಷಣ ಕೊರೆದ್ರು....ಮೈಕ್ ತಕ್ಕಂಡು ಗಾಂಧೀಜಿ ಬಗ್ಗೆ ಮಾತಾಡದೆ ವಿವೇಕಾನಂದನ ಬಗೆ ಮಾತಾಡುತ್ತ ಇದ್ದರು....

   ಜನರಿಗೆ ಕಂಪ್ಯೂಜ್ ಆತು...ವಿವೇಕಾನಂದನೂ ಸ್ವಸಂತ್ರಕ್ಕೆ ಹೋರಾಡಿರಬಹುದು ಅಂಕಂಡರು...ಕೊನೆಗೆ ವಿವೇಕಾನಂದನ ಸಾಲು ಹೇಳಿ ನಿಲ್ಲಿಸಿದರು. ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ಯಾರು ಕೂರಬೇಡಿ ಅಂತ ಬಂದ ಜನರನ್ನೆಲ್ಲಾ ಎಬ್ಬಿಸಿದ್ದರು....ಲೇ ಯಾಕಲಾ ಈ ವಯ್ಯ ಯಲ್ಲರನ್ನ ಎಬ್ಬಿಸಿದ ಅಂದ ಕಿಸ್ನ....ಯಾರಿಗೂ ಎನೂ ಗೊತ್ತಾಗಲಿಲ್ಲ....ಸಾಸಕರು ನಿಂತೆ ಇದ್ದರು...ಸಾಸಕರು ಕಳ್ ಮಂಜನ ಕಿವಿನಲ್ಲಿ ಎನೊ ಪಿಸುಗುಟ್ಟಿದರು....ಅಮ್ಯಾಕೆ ಮಂಜ ಮೈಕ್ ತಕ್ಕಂಡು ಯಲ್ಲರಿಗೂ ಧನ್ಯವಾದ ಹೇಳಿ ಕಳುಹಿಸಿದ. ಸಾಸಕರು ಏನೂ ಹೇಳಿರಲಾ ಅಂದ ಕ್ವಾಟ್ಲೆ ಕಿಸ್ನ...

       ಲೇ ಆ ಮೂದೇವಿಗೆ ಪೈಲ್ಸ್ ಖಾಯಿಲೆ ಅಂತೆ ಕನಲಾ...ಬಿಳಿ ಬಟ್ಟೆ ಬ್ಯಾರೆ ಹಾಕಿದ್ರಲ್ಲ ಅದಕ್ಕೆ ವೇದಿಕೆ ಮ್ಯಾಗೆ ಆ ವಯ್ಯನೂ ಕೂರದೆ ಜನಗಳನ್ನು ಕೂರಕೆ ಬುಡದೆ ಎಬ್ಬಿಸಿದ. ಪೈಲ್ಸ್ ಜೊತೆಗೆ ಒಂದು ಕುರ ಬ್ಯಾರೆ ಆಗೈತಂತೆ ಸ್ಯಾನೆ ನೋವು ಕನ್ಲಾ ಮಂಜ ಅಂದರು......ಏನಾರೂ ಮಾಡಿ ತಡ್ಕಳಿ ಸಾ ಅಂದೆ ಕನ್ರಲಾ ಅಂದ ಕಳ್ ಮಂಜ....


 


1.. ಜಾಹೀರಾತು

2.ಜಾಹೀರಾತು