ಪ್ರತಿ ವರ್ಷದಂಗೆ ಈ ಕಿತನೂ ಸ್ವಸಂತ್ರ ದಿನ ಮಾಡಣ ಅಂತ ಸಾಸಕರ ಹತ್ರ ಹೋದ್ವಿ. ಸಾಸಕರು ಸ್ಯಾನೆ ಖುಸಿನಾಗಿದ್ರೂ ಮಖ ಯಾಕೊ ವಸಿ ಬಾಡಿತ್ತು. ನೋಡ್ರಲಾ ಈಗ ನಾನು ಸಾಸಕ ಅಲ್ಲ ಲೋಕಸಭಾ ಸದಸ್ಯ...ಡೆಲ್ಲಿಗೋಗಿ ಬಂದಿವ್ನಿ..ಹೋದ ಸಲಕಿಂತ ಜೋರಾಗಿ ಮಾಡಬೇಕು ಕನ್ರಲಾ ಅಂದರು. ಆಯ್ತಣ್ಣೊ ಅಂತ ಯಲ್ಲ ಒಪ್ಪಿಕೊಂಡ್ವಿ....ಸ್ಯಾನೆ ಜನ ಸೇರಿಸಬೇಕು ಕನ್ರಲಾ...ಟಿವಿನಾಗೆ ಬರಬೇಕು. ಹೋದ ಕಿತ ತರ 1234 ಬಾವುಟ ಕಟ್ಟದೆ ನಮ್ಮ ದೇಸದ ಬಾವುಟನೇ ಕಟ್ಟಬೇಕು...ದಾರ ಯಳಿತ್ತಿದ್ದಂಗೆ ಬಿಚ್ಚಿಕೊಬೇಕು ಬಾವುಟ ಅಂದರು. ಆಯ್ತಣ್ಣೊ ಕಿಸ್ನನ ಲಾಡಿ ತರನೇ ಕಟ್ಟುತ್ತೀವಿ ಅಂದ ಕಳ್ ಮಂಜ. ಹತ್ತು ಸಾವಿರ ಚೇರ್ ಹಾಕಿಸ್ರಲಾ ಮೈದಾನದಾಗೆ ಅಂದ್ರು..ಆಯ್ತಣ್ಣೊ ಅಂತ ಒಂದಷ್ಟು ಕಾಸು ಕಿತ್ಕೊಂಡು ಬಂದ್ವಿ....ಕಳ್ ಮಂಜ ಯಲ್ಲ ಅರೆಂಜ್ ಮೆಂಟ್ ಮಾಡ್ತೀನಿ ಅಂತ ವಹಿಸಿಕೊಂಡ. ಮೈದಾನ ದಾಗೆ ಶಾಮಿಯಾನ, ಮೈಕ್ ಸೆಟ್ಟು, ಹತ್ತು ಸಾವಿರ ಚೇರು, ಜನರಿಗೆ ತಿಂಡಿ ತೀರ್ಥ ಯಲ್ಲಾ ವ್ಯವಸ್ಥೆ ಆತು.
ಸ್ವಸಂತ್ರದ ದಿನ ಬಂದೇ ಬುಡ್ತು. ಜನ ಸಿಕ್ಕಾಪಟ್ಟೆ ಜಮಾಯಿಸಿದ್ರು. ವೇದಿಕೆ ಮ್ಯಾಗೆ ಗಣ್ಯ ವ್ಯಕ್ತಿಗಳು ಕುಂತಿದ್ದರು. ಸಾಸಕರು ಬಂದು ಬಾವುಟ ಹಾರಿಸಿದ್ರು. ಆದ್ರೆ ಯಾಕೊ ಚೇರ್ ಮ್ಯಾಗೆ ಕೂರಲೇ ಇಲ್ಲ....ಯಾಕಲಾ ಕೂರಕಿಲಾ ಈ ವಯ್ಯ ಅಂದ ಮಂಜ....ಬೇಗ ಹೋಗಬೇಕೆನೊ ಬುಡಲಾ ಅಂದ ಕಿಸ್ನ....ಹಾರ ಹಾಕಿದ್ದು ಆತು. ಭಾಷಣ ಕೊರೆದ್ರು....ಮೈಕ್ ತಕ್ಕಂಡು ಗಾಂಧೀಜಿ ಬಗ್ಗೆ ಮಾತಾಡದೆ ವಿವೇಕಾನಂದನ ಬಗೆ ಮಾತಾಡುತ್ತ ಇದ್ದರು....
ಜನರಿಗೆ ಕಂಪ್ಯೂಜ್ ಆತು...ವಿವೇಕಾನಂದನೂ ಸ್ವಸಂತ್ರಕ್ಕೆ ಹೋರಾಡಿರಬಹುದು ಅಂಕಂಡರು...ಕೊನೆಗೆ ವಿವೇಕಾನಂದನ ಸಾಲು ಹೇಳಿ ನಿಲ್ಲಿಸಿದರು. ಏಳಿ ಏದ್ದೇಳಿ ಗುರಿ ಮುಟ್ಟುವ ತನಕ ಯಾರು ಕೂರಬೇಡಿ ಅಂತ ಬಂದ ಜನರನ್ನೆಲ್ಲಾ ಎಬ್ಬಿಸಿದ್ದರು....ಲೇ ಯಾಕಲಾ ಈ ವಯ್ಯ ಯಲ್ಲರನ್ನ ಎಬ್ಬಿಸಿದ ಅಂದ ಕಿಸ್ನ....ಯಾರಿಗೂ ಎನೂ ಗೊತ್ತಾಗಲಿಲ್ಲ....ಸಾಸಕರು ನಿಂತೆ ಇದ್ದರು...ಸಾಸಕರು ಕಳ್ ಮಂಜನ ಕಿವಿನಲ್ಲಿ ಎನೊ ಪಿಸುಗುಟ್ಟಿದರು....ಅಮ್ಯಾಕೆ ಮಂಜ ಮೈಕ್ ತಕ್ಕಂಡು ಯಲ್ಲರಿಗೂ ಧನ್ಯವಾದ ಹೇಳಿ ಕಳುಹಿಸಿದ. ಸಾಸಕರು ಏನೂ ಹೇಳಿರಲಾ ಅಂದ ಕ್ವಾಟ್ಲೆ ಕಿಸ್ನ...
ಲೇ ಆ ಮೂದೇವಿಗೆ ಪೈಲ್ಸ್ ಖಾಯಿಲೆ ಅಂತೆ ಕನಲಾ...ಬಿಳಿ ಬಟ್ಟೆ ಬ್ಯಾರೆ ಹಾಕಿದ್ರಲ್ಲ ಅದಕ್ಕೆ ವೇದಿಕೆ ಮ್ಯಾಗೆ ಆ ವಯ್ಯನೂ ಕೂರದೆ ಜನಗಳನ್ನು ಕೂರಕೆ ಬುಡದೆ ಎಬ್ಬಿಸಿದ. ಪೈಲ್ಸ್ ಜೊತೆಗೆ ಒಂದು ಕುರ ಬ್ಯಾರೆ ಆಗೈತಂತೆ ಸ್ಯಾನೆ ನೋವು ಕನ್ಲಾ ಮಂಜ ಅಂದರು......ಏನಾರೂ ಮಾಡಿ ತಡ್ಕಳಿ ಸಾ ಅಂದೆ ಕನ್ರಲಾ ಅಂದ ಕಳ್ ಮಂಜ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.