- ಸುಗಂಧವನ್ನೂ, ದುರ್ಘಂಧವನ್ನೂ ಒಯ್ಯುವ ವಾಹನ
ಎಲ್ಲರಿಗೂ ಇದೆಂದರೆ ಪ್ರಾಣ
ಕೆಲವು ತರಕಾರಿಗಳು ಗಾಳಿಯನ್ನು ಹೆಚ್ಚು ಹೊರಸೂಸುತ್ತವೆ, ಹೊಟ್ಟೆ ಸೇರಿದ ಮೇಲೆ
ಪರ್ವತಾರೋಹಿಗಳಿಗೆ ಈ airನದ್ದೇ ಸಮಸ್ಯೆ
ಹೊಗೆಯ ನಂತರದ ಸ್ಥಾನ ಇದರದ್ದು ವಾಯುಮಂಡಲದಲ್ಲಿ
ಶುದ್ಧ ಗಾಳಿ ಸಿಗದಿದ್ದರೆ ಗೋಳಿಡುವುದೇ ಬಾಳು
ಚಿಪ್ಸ್ ಪ್ಯಾಕೆಟ್ನಲ್ಲಿ ಚಿಪ್ಸ್ಗಿಂತ ಹೆಚ್ಚಿರುವ ವಸ್ತು
ಫ್ಯಾನ್ ತಿರುಗಿದಾಗ ಬೀಸುವಂಥದ್ದು
ಕುಡುಕ ತೂರಾಡಲು ಜೋರಾಗಿ ಬೀಸುವ ಗಾಳಿಯೇ ಕಾರಣ
ಋತುವಿಗೆ ತಕ್ಕಂತೆ ಬದಲಾಗುವುದೇ ಮಾರುತ
ಆಯುವನ್ನು ನಿರ್ಧರಿಸುವ ವಾಯು
ಪಂಚ ವಿಧ ವಾಯುಗಳಲ್ಲಿ ಅಪಾನವಾಯು ಭಾರಿ ಡೇಂಜರ್
ತೂರಿಕೊಳ್ಳುವ ಸ್ವಭಾವದವರಿಗೆ ತೂರಿಸಲೊಂದು ನೆಪ
ಗಾಲಿಯೊಳಗೆ ತುಂಬಿರುವಂಥದ್ದು
ಕೆಲವರು ಗಾಳಿಯನ್ನು ಒಳ ತೆಗೆದುಕೊಂಡು ಹೊಗೆಯನ್ನು ಹೊರಬಿಡುತ್ತಾರೆ
ವಾಯುಪುತ್ರನಿಗೆ ಸಮುದ್ರೋಲ್ಲಂಘನ ಮಾಡಲು ಜಾಂಬವಂತ ಹಾಕಿದ್ದು ಇದನ್ನೇ
ಗಾಳಿ ಹಾಕುವುದು ಮತ್ತು ಗಾಳಿ ತೆಗೆಯುವುದಕ್ಕೆ ವಿಶೇಶಾರ್ಥವಿದೆ
-ವಿಶ್ವನಾಥ ಸುಂಕಸಾಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.