fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಕನ್ನಡ ಬಳಸಿ ಕನ್ನಡ ಉಳಿಸಿ


        ಕನ್ನಡ ರಾಜ್ಯ ಉದಯವಾಗಿ ಹಲವು ವರ್ಷಗಳೇ ಕಳೆದರೂ ಕೂಡ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಭದ್ರವಾದ ನೆಲೆಯಿಲ್ಲದಾಗಿರುವುದು ಸೋಚನೀಯ ಸ್ಥಿತಿಯಾಗಿದೆ. ಕನ್ನಡ ನಾಡು ಉದಯವಾಗಲು ಸಾವಿರಾರು ಮಹಾನೀಯರ ಹೋರಾಟ ವ್ಯರ್ಥವಾಗುತ್ತಿದೆ ಅನಿಸುತ್ತದೆ. ಏಕೆಂದರೆ ಇದುವರೆಗೂ ಕನ್ನಡ ಭಾಷೆ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಜಾರಿಯಾಗಿಲ್ಲ. ಕೇವಲ ಹಳ್ಳಿಗಳಲ್ಲಿ ಮಾತ್ರ ಕನ್ನಡ ಬಳಸುವವರನ್ನು ಕಾಣಬಹುದಾಗಿದೆ. ನಗರಗಳನ್ನು ನೋಡುವುದಾದರೆ ಅನ್ಯ ಭಾಷೆಗಳ ದರ್ಬಾರಿನಲ್ಲಿ ಕನ್ನಡ ತನ್ನ ಮೂಲ ನೆಲೆಯನ್ನು ಕಳೆದುಕೊಂಡಿದೆ. ಉದಾಹರಣೆಗೆ ರಾಜಧಾನಿ ಬೆಂಗಳೂರನ್ನೇ ನೋಡುವುದಾದರೆ ಶೇ.50ಕ್ಕೂ ಹೆಚ್ಚಿನ ಜನರು ಅನ್ಯ ಭಾಷಿಗರ ನೆಲೆಯಾಗಿದೆ. ಮುಂದೊಂದು ದಿನ ಬೆಂಗಳೂರು ಬೇರೆ ಭಾಷಿಗರ ತಾಣವಾಗಿ ಮಾರ್ಪಟ್ಟು ಕನ್ನಡ ಭಾಷಿಗರು ಬೆಂಗಳೂರಿನಲ್ಲಿ ನೆಲೆ ಕಳೆದುಕೊಳ್ಳಬೇಕಾಗಿ ಬರಬಹುದರಲ್ಲಿ ಯಾವುದೇ ಅನುಮಾನವಿಲ್ಲ.       ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಜನರನ್ನು ಭಾಗವಹಿಸಿವಂತೆ ಮಾಡುವಲ್ಲಿ ಕವಿಗಳ ಪಾತ್ರ ತುಂಬಾ ದೊಡ್ಡದು. ಕವಿಗಳು ತಮ್ಮ ಕವಿತೆಗಳ ಮೂಖಾಂತರ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದದು ಈಗ ಇತಿಹಾಸ. ಈಗ ಅಂತಹದೇ ಪರಿಸ್ಥಿತಿ ಎದುರಾಗಿದೆ. ಕವಿಗಳು ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸಬೇಕಾಗಿದೆ. ಈ ಹಿಂದಿನ ಕವಿಗಳ ಕವಿಗಳು ಈಗಲೂ ಪ್ರಸ್ತುತವಾಗಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಕಾಣಬಹುದು.
ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ!ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ ಗರ್ಜಿಸುವುದ ಕಲಿತು ಸಿಂಹವಾಗಿ!ಮೇಲಿನ ರಾಷ್ಟ್ರಕವಿ ಕುವೆಂಪುರವರ ಕವಿತೆ ಈಗ ತುಂಬಾ ಪ್ರಸ್ತುತವಾಗಿದೆ. ಕನ್ನಡದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆಗೆ ಕೊನೆಯಿಲ್ಲದಾಗಿದೆ. ಇಂಥ ಪ್ರಕರಣ ಎಷ್ಟೋ ಇವೆ. ಉದಾ: ಕೇರಳದಲ್ಲಿರುವ ಕಾಸರಗೂಡು ಪ್ರದೇಶ ಅಪ್ಪಟ ಕನ್ನಡ ನೆಲೆಗೆ ರಕ್ಷಣೆ ಇಲ್ಲದಾಗಿದೆ.
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಬದುಕು ಬಲಹಿನ ನಿಧಿಯು ಸದಭಿಮಾನದ ಗೂಡುಈ ಕಾವ್ಯವನ್ನು ಏಕೀಕರಣದಲ್ಲಿ ಹುಯಿಲಗೊಳ ನಾರಾಯಣರಾವ್ ಅವರು ಕನ್ನಡ ರಾಜ್ಯದ ಉದಯವಾಗಲೀ ಎಂಬ ಆಶಯದಿಂದ ಬರೆದರು. 56ವರ್ಷಗಳು ಕಳೆದರೂ ಸದಭಿಮಾನದ ಗೂಡಾಗಿ ನಿರ್ಮಾಣವಾಗಿಲ್ಲ. ಇಂಥ ಕವಿತೆಗಳು ಇಂದಿಗೂ ಕನ್ನಡಿಗರಲ್ಲಿ ಜಾಗೃತಿಯ ಕಹಳೆ ಮೊಳಗಿಸಲು ಸಹಕಾರಿಯಾಗಿವೆ.
ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲಕನ್ನಡವೇ ಎನ್ನುಸಿರು ಹೆತ್ತೆನ್ನ ತಾಯಿಕನ್ನಡವೇ ಧನ ಧಾನ್ಯ ಕನ್ನಡವೇ ಮನೆ ಮಾನ್ಯಕನ್ನಡವೇ ಎನಗಾಯ್ತು ಕಣ್ಣು ಕಿವಿ ಬಾಯಿಬೆನಗಲ್ ರಾಮರಾವ್ ರ ಈ ಕವಿತೆಯಲ್ಲಿ ಕನ್ನಡವೆಂದರೇ ಕೇವಲ ನುಡಿಯಲ್ಲ. ಪ್ರತಿಯೊಬ್ಬ ಕನ್ನಡಿಗರ ಜೀವನ ಹಾಗೂ ಉಸಿರಾಗಬೇಕಿದೆ.
ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪಒಲವೆತ್ತಿ ತೋರುವಾ ದೀಪಹಚ್ಚೇವು ಕನ್ನಡದ ದೀಪಡಿ.ಎಸ್.ಕರ್ಕಿಯವರ ಸಾಲುಗಳಂತೆ ಕನ್ನಡದ ದೀಪ ಎಲ್ಲರ ಮನಗಳಲ್ಲಿ ಬೆಳಗಲಿ ಎಂಬುದು ನನ್ನ ಅಭಿಲಾಷೆ.
     ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಈ ಚೆನ್ನವೀರ ಕಣವಿಯವರ ಮಾತುಗಳಂತೆ ಕೇವಲ ಕರ್ನಾಟಕ ಎಂಬ ರಾಜ್ಯ  ಇದ್ದರೆ ಸಾಲುದು ಕರ್ನಾಟಕ ರಾಜ್ಯದಲ್ಲಿ ಬದುಕುವ ಎಲ್ಲರ ಉಸಿರು, ಜೀವನ ಕನ್ನಡವಾಗಬೇಕು. ಕನ್ನಡದ ಹೋರಾಟಕ್ಕೆ ಕುವೆಂಪುರವರ ಈ ಕೆಳಕಂಡ ಸಾಲುಗಳು ಸದಾ  ಸ್ಪೂರ್ತಿದಾಯಕವಾಗಿರುತ್ತವೆ. ಕನ್ನಡಕ್ಕಾಗಿ ಕೈ ಎತ್ತು ಅದು ಕಲ್ಪವೃಕ್ಷವಾಗುತ್ತದೆಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕುಅದೇ ಗೋವರ್ಧನಗಿರಿಯಾಗುತ್ತದೆ.
ಕನ್ನಡ ನುಡಿ ನದಿಯಂತೆ ಸದಾ ಹರಿಯುತ್ತಿರಲಿ. ಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಉಳಿಸಿ.                                                          - ಮಂಜುನಾಥ್

ಕದಿರಕಾಯಕದ ಕಾಳವ್ವೆ + ಕದಿರರೆಮ್ಮವ್ವೆ

ವಚನಕಾರ
ಕದಿರಕಾಯಕದ ಕಾಳವ್ವೆ 
ಅಂಕಿತ ನಾಮ
ಗುಮ್ಮೇಶ್ವರ 
ಕಾಲ

ದೊರಕಿರುವ ವಚನಗಳು
1 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ವಚನಕಾರ
ಕದಿರರೆಮ್ಮವ್ವೆ
ಅಂಕಿತ ನಾಮ
ಕದಿರ ರೆಮ್ಮಿಯೊಡೆಯ ಗುಮ್ಮೇಶ್ವರ 
ಕಾಲ
1160 
ದೊರಕಿರುವ ವಚನಗಳು
4 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ
ಕಾಲ ಸು. 1160. ರೆಬ್ಬವ್ವೆ ಎಂಬ ಹೆಸರೂ ಈಕೆಗೆ ಇದೆ. ಈಕೆ ಕದಿರ ರೇಮಯ್ಯನ ಹೆಂಡತಿ ಇರಬಹುದು ಎಂದುಕವಿಚರಿತೆಊಹೆ ಮಾಡಿದೆ. ರಾಟೆಯಿಂದ ನೂಲು ತೆಗೆಯುವ ಕಸುಬಿನವಳು. ಈಕೆಯ 4 ವಚನಗಳು ದೊರೆತಿವೆ. ಬೆಡಗಿನ ವಚನಗಳಂತೆ ಇರುವ ಮೂರು ರಚನೆಗಳಿಗೆ ಸಿದ್ಧಬಸವರಾಜನು ಟೀಕೆ ಬರೆದಿದ್ದಾನೆ. ತನ್ನ ವೃತ್ತಿಗೆ ಸಂಬಂಧಿಸಿದ ಪಾರಿಭಾಷಿಕಗಳ ಬಳಕೆ ಈಕೆಯ ರಚನೆಗಳಲ್ಲಿ ಕಾಣುತ್ತದೆ.

ಕನಿಕರ


  •  ಸಿ೦ಪ ಲ್ಲಾ ಗಿ ಹೇಳಬೇಕೆ೦ದರೆ ಇದು ಸಿ೦ಪಥಿ

  •  "ಪಾಪಪ್ರಜ್ಞೆ' ಅಥಾ೯ತ್ ಅಯ್ಯೋ ಪಾಪ ಎನ್ನುವ ಪ್ರಜ್ಞೆ

  • ಕೈ ಹಿಡಿದು ನಡೆಸೆನ್ನನು ಎ೦ದವರಿಗೆ ಕೈ ಕೊಡದೇ 'ಕರ' ಪಿಡಿವ ಬುದ್ಧಿ

  •  ದಯನೀಯ ಸ್ಥಿತಿಗೆ ತಲುಪಿದ ದೀನನ ಬಗೆಗಿನ ದಯೆ

  • ಕರುಳು 'ಚುರಕ…' ಎನ್ನಲು ಇದೇ ಕಾರಣ


ಕೃಪೆ: ವಿಶ್ವನಾಥ ಸು೦ಕಸಾಳ 

'ಅಮ್ಮ' ನೀ ನನ್ನ ಹಡೆದಮ್ಮ

'ಅಮ್ಮ' ನೀ ನನ್ನ ಹಡೆದಮ್ಮ
ಅಹುದು ನೀ ನನ್ನ
ನವಮಾಸಗಳು ಹೊತ್ತು ಹೆತ್ತು
ಸಾಕಿ ಸಲಹಿದ ಮಾತೆ !

ನವಮಾಸಗಳು ನಾ ನಿನ್ನ
ಗರ್ಭದಲ್ಲಿ ಹುದುಗಿ
ನಿನ್ನದೇ ತದ್ರೂಪು ಪಡೆದು
ಈ ಜಗಕ್ಕೆ ಅಡಿ ಇಟ್ಟೆ ನಮ್ಮ!

ನಾನೂ ಅಂಬೆಗಾಲಿಟ್ಟು ನಡೆಯುತ್ತಿದ್ದರೆ
ನೀ ನನ್ನ ಬಾಲ ಲೀಲೆಗಳನ್ನು ಕಂಡು
ಅದೆಷ್ಟು ಆನಂದ ಪಟ್ಟೆಯಮ್ಮ?

ನೀನೆನ್ನ ಪ್ರಥಮ ಗುರುವಾಗಿ
ಅಕ್ಷರಾಭ್ಯಾಸ ಕಲಿಸಿದೆ
ವಿದ್ಯೆ ಬುದ್ದಿಯನ್ನು ನೀಡಿ
ನನ್ನನ್ನು ಪದವೀಧರೆಯಾಗಿ ಮಾಡಿ
ನಾನೂ ಸರೀಕರೆದುರು ಘನತೆ-ಗೌರವದಿಂದ
ಬಾಳುವಂತೆ ಮಾಡಿ; ನಿನ್ನ ಈ ದೇಶಕ್ಕೆ
ನೀನು ಒಬ್ಬಳು ಸತ್ಪ್ರಜೆಯನ್ನು
ಉಡುಗೊರೆಯಾಗಿ ಕೊಟ್ಟೆಯಮ್ಮ!

ಹೇ ಮಾತೆ ಮುಂದಿನ ಜನ್ಮವೇನಾದರೂ
ನಾನು ಮತ್ತೆ ಜನ್ಮವೆತ್ತಿದ ಪಕ್ಷದಲ್ಲಿ
ಮತ್ತೆ ನಾನು ನಿನ್ನ ಮಗಳಾಗಿ ಜನಿಸಿ
ನಿನ್ನ ಪ್ರೀತಿಯ ಹೊಳೆಯಲ್ಲಿ
ಮೀಯುವಂತಾಗಬೇಕು
ಎಂಬುದೇ ನನ್ನ ಆಶಯವಮ್ಮ 
ಕೃಪೆ : ಉಮಾ ಪ್ರಕಾಶ

ಅಮ್ಮ ಎಂಬ ಎರಡಕ್ಷರದ ಹಿರಿಮೆ... (Mothers Day)

Posted by ekanasu ಈ ಕನಸು ಅವಾರ್ಡ್
             ಜಗತ್ತಿನಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮ ಎನ್ನುತ್ತಾರೆ, ಮಗುವನ್ನು ಒಂಭತ್ತು ತಿಂಗಳು ಹೊತ್ತು ಹೆತ್ತು, ಮಡಿಲಲ್ಲಿ ಹಾಕಿಕೊಂಡು ಸಾಕಿ ಸಲಹಿ ಕಾಪಾಡುವಳು ಹೆತ್ತ ತಾಯಿ. ಅಮ್ಮ ಎಂಬ ಶಬ್ದವನ್ನು ಬಾಯ್ತುಂಬಾ ಕರೆಯೋದೆ ಒಂದು ಹರುಷ ನಮ್ಮೆಲ್ಲರ ಪಾಲಿಗೆ ಅವಳೇ ದೈವವಾಗಿದ್ದಾಳೆ, ತಾಯಿಗಿಂತ ಮಿಗಿಲಾದುದು ಯಾವುದೂ ಇಲ್ಲ. ತಾಯಿ ಮಗುವಿಗೆ ತೋರಿಸುವ ಮಮತೆಯು ನಿಷ್ಕಲ್ಮಶವಾಗಿರುತ್ತದೆ, ನಿರ್ಮಲವಾಗಿರುತ್ತದೆ. ಆ ತಾಯಿಯ ಮಮತೆ ಪಡೆಯುವ ಮಗುವೇ ಧನ್ಯ. ತಾಯಿ ಮಗುವಿಗೆ ತೋರಿಸುವ ಪ್ರೀತಿ, ವಿಶ್ವಾಸವನ್ನು ಎಷ್ಟು ಬಣ್ಣಿಸಿದರೂ ಸಾಲದು. ಅಳುವ ಕಂದನನ್ನು ಅಪ್ಪಿಕೊಂಡು ತನ್ನ ಮಡಿಲಲ್ಲಿ ಹಾಕಿಕೊಂಡು ಅಮೃತಕ್ಕಿಂತ ಮಿಗಿಲಾದ ಆ ತಾಯಿಯ ಎದೆಹಾಲು ಉಣಿಸುವದರ ಮೂಲಕ ಆ ಮಗುವಿಗೆ ಸಮಾಧಾನ ಮಾಡುತ್ತಾಳೆ.

               ತಾಯಿಯ ಎದೆ ಹಾಲು ಬಹಳ ಶ್ರೇಷ್ಠವಾದದು ಎದೆ ಹಾಲು ಕುಡಿದ ಮಕ್ಕಳು ಯಾವುದೇ ನ್ಯೂನ್ಯತೆ ಇಲ್ಲದೆ ದಷ್ಟ ಪುಷ್ಟವಾಗಿ ಬೆಳೆಯುತ್ತಾರೆ, ಹಾಲನ್ನು ಕುಡಿಯದೇ ಇರುವಂತಹ ಮಕ್ಕಳು ಅನಾರೋಗ್ಯದಿಂದ ಬಳಲುವುದನ್ನು ಕಾಣುತ್ತೇವೆ. ಇದರಿಂದ ಕಣ್ಣಿನ ಸಮಸ್ಯೆ, ಜ್ಞಾಪಕ ಶಕ್ತಿ, ಮೆದುಳಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

                 ಹುಟ್ಟಿದ ಮಗು ಮೂರು ವರ್ಷಗಳ ವರೆಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಲ್ಲಿಯೇ ನಿದ್ರಿಸಬೇಕು, ಇಲ್ಲವಾದರೆ ಮಗು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾದೀತು ಎಂದು ಹೊಸ ಸಂಶೋಧನೆಯೊಂದು ಇತ್ತೀಚೆಗೆ ಹೇಳಿದೆ. ದಕ್ಷಿಣ ಆಫ್ರಿಕಾದ ಕೇಪ್ಟೌನ್ ವಿಶ್ವವಿದ್ಯಾಲಯದ ಡಾ.ನೀಲ್ಸ್ ಬ್ರಿಜ್ಮನ್ ನೇತೃತ್ವದ ಸಂಶೋಧಕರ ತಂಡ ಈ ಬಗ್ಗೆ ಅಧ್ಯಯನ ನಡೆಸಿ, ತಾಯಿಯ ಜೊತೆ ಮಗು ನಿದ್ರಿಸದಿದ್ದರೆ ಮಗುವಿನ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಲಿದೆ ಎಂದು ಹೇಳಿದೆ. ಅಮ್ಮನ ಹಿತವಾದ ಸಾಮೀಪ್ಯದಲ್ಲಿ ನಿದ್ರಿಸಿದರೆ ಮಗುವಿನ ಮೆದುಳು ಬೆಳವಣಿಗೆ ಹೊಂದುತ್ತದೆ.

             ಒಂದು ವೇಳೆ ತಾಯಿಯಿಂದ ಬೇರ್ಪಟ್ಟು ನಿದ್ರಿಸಿದರೆ ಮೆದುಳಿನಲ್ಲಿ ದೋಷ ಕಾಣಿಸಿಕೊಳ್ಳಲಿದೆ. ಅಲ್ಲದೇ ವರ್ತನೆಯಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ಸಂಶೋಧಕರು ತಿಳಿಸಿರುವ ವಿಚಾರವನ್ನು ಕನ್ನಡ ದಿನ ಪತ್ರಿಕೆಯೊಂದು ಇತ್ತೀಚೆಗೆ ಪ್ರಕಟಿಸಿತ್ತು. ಈ ವಿಷಯದಿಂದ ತಾಯಿ ಮಗುವಿನ ಸಂಬಂಧ ಎಷ್ಟೊಂದು ಮಹತ್ವದ್ದು ಎಂದು ತಿಳಿದು ಬರುತ್ತದೆ. ತಾಯಿ ಮತ್ತು ಮಗುವಿನ ಸಂಬಂಧ ಬಹಳ ಅನ್ಯೋನ್ಯವಾದುದು. ಮಾತೃ ಪ್ರೇಮ ಮಕ್ಕಳಿಗೆ ದೊರೆತರೆ ಅವರು ಲವಲವಿಕೆಯಿಂದ ಬೆಳೆಯುತ್ತಾರೆ . ತಾಯಿ ಪ್ರೀತಿ ಎಲ್ಲರಿಗೂ ದೊರೆಯುವದಿಲ್ಲ. ಪ್ರೀತಿ ಕಳೆದುಕೊಂಡ ಮಕ್ಕಳ ನೋವನ್ನು ಹೇಳಲಾಗದು ಯಾಕೆಂದರೆ ದಾಹ ಆದಾಗಲೇ ನೀರಿನ ಮಹತ್ವ ತಿಳಿಯುವಂತೆ, ತಾಯಿ ಇಲ್ಲವಾದಾಗ ಅವಳ ಪ್ರೀತಿಯ ಮಹಿಮೆ ಗೊತ್ತಾಗುವದು.

      ಮಕ್ಕಳು ಚಿಕ್ಕವರಿದ್ದಾಗಲೇ ಅವರನ್ನು ಬೆಳೆಸಿ ಸರಿ ದಾರಿಗೆ ತರುವವಳು ಈ ಮಹಾತಾಯಿ. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅಂತರ ಮಹಾವಿದ್ಯಾಲಯ ಯುವಜನೋತ್ಸವ 2011ರ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಾಯಿ ಮಗುವಿಗೆ ಹಾಲುಣಿಸುವ ಹಾಗೂ ಮಮತೆ ತೋರಿಸುವ ಸುಂದರ ಕಲಾಕೃತಿಯನ್ನು ರಚಿಸಿ ಎಲ್ಲರ ಗಮನ ಸೆಳೆದರು. ಒಂದೊಂದು ಕಲಾಕೃತಿಯನ್ನು ನೋಡಿದ ಪ್ರತಿಯೊಬ್ಬರಿಗೂ ತಾಯಿಯ ಮಮತೆಯ ಬಗ್ಗೆ ಪ್ರೀತಿ ಹುಟ್ಟುತ್ತದೆ.

           ಈ ಅದಮ್ಯ, ಅಗೋಚರವಾದ ಅಮ್ಮನ ಪ್ರೀತಿ ಮುಂದೆ ಎಲ್ಲವೂ ತೃಣಕ್ಕೆ ಸಮಾನವಾಗುತ್ತದೆ. ಅಮ್ಮ ಎಂದರೆ ಸಿಗುವ ತೃಪ್ತಿ, ಮಕ್ಕಳಲ್ಲಿ ಚಿಮ್ಮುವ ಉತ್ಸಾಹ, ಉಲ್ಲಾಸ ಅವರ ಬೆಳವಣಿಗೆಗೆ ಪೂರಕವಾಗುತ್ತದೆ. ಮಕ್ಕಳಿಗೆ ತಾಯಿಯೇ ಬಾಳಿನ ಬೆಳಕಾಗಿ, ಅವರ ಜೀವನದ ಜ್ಯೋತಿಯನ್ನು ಬೆಳಗುತ್ತಾಳೆ ಅವಳಿಲ್ಲದೇ ಎಲ್ಲವೂ ಶೂನ್ಯ.

          ಇಂದಿನ ದಿನಗಳಲ್ಲಿ ಕಾಲ ಬದಲಾದಂತೆ ಎಲ್ಲವೂ ಬದಲಾವಣೆಯಾಗುವದನ್ನು ನಾವು ಕಾಣುತ್ತೇವೆ. ಈ ಹೈಬ್ರಿಡ್ ಕಾಲದಲ್ಲಿ ಎಲ್ಲವೂ ದೊರೆಯುತ್ತದೆ, ಆದರೆ ಮಕ್ಕಳಿಗೆ ತಾಯಿ ಪ್ರೀತಿ ಸಿಗುವದೇ ಕಷ್ಟವಾಗಿದೆ. ಇಂದಿನ ಒತ್ತಡ ಜೀವನದಲ್ಲಿ ತಂದೆ, ತಾಯಿ ಹಣ ಗಳಿಸಿಲೆಂದು ಇರುವ ಸಮಯವನ್ನೇ ಅದರಲ್ಲಿ ಕಳೆಯುತ್ತಿದ್ದಾರೆ. ತಾವು ಹೆತ್ತ ಮಕ್ಕಳ ಬಗ್ಗೆ ಸ್ವಲ್ಪನು ಚಿಂತೆ ಇಲ್ಲದೆ ಅವರನ್ನು ಕಾನ್ವೆಂಟ್ ಸ್ಕೂಲಿಗೆ ಸೇರಿಸಿ ತಮ್ಮ ಜವಾಬ್ದಾರಿ ಕಳೆಯಿತೆಂದು ಸುಮ್ಮನಾಗಿ ಬಿಡುತ್ತಾರೆ.

          ಆದರೆ ತಂದೆ, ತಾಯಿಯನ್ನು ಕಾಣಬೇಕೆಂಬ ಮಕ್ಕಳ ಆಸೆ ಹಾಗೆ ಕಮರಿ ಹೋಗುತ್ತದೆ. ಮಕ್ಕಳ ಮನಸ್ಸು ಸೂಕ್ಷ್ಮ ಸಂವೇದನೆಯಿಂದ ಕೂಡಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳದೆ ಅವರು ಮಕ್ಕಳಿಗೆ ಬೇಸರ ಉಂಟು ಮಾಡುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಉಂಟಾಗುತ್ತದೆ ಎಂದು ತಿಳಿದರೂ ಸಹ ಅವರು ಮತ್ತೆ ಅದೇ ರೀತಿ ಮಾಡುವದು ವಿಷಾದದ ಸಂಗತಿ.

           ಈಗತಾನೇ ಭೂಮಿಗೆ ಕಾಲಿಟ್ಟ ಏನು ಅರಿಯದಿರುವ ಹಸುಳೆ ಶಿಶುವನ್ನು ಹೆತ್ತ ಎಷ್ಟೋ ತಾಯಂದಿರು ಅವರನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದ ಕೆಲಸವಾಗಿದೆ. ಈ ರೀತಿಯ ಘಟನೆಗಳು ಅಮಾನವೀಯ ಕೃತ್ಯಗಳಾಗಿವೆ. ಮಾನವೀಯ ಮೌಲ್ಯ ಹೊಂದಿದ ಯಾವುದೇ ವ್ಯಕ್ತಿ ಇಂಥಹ ಘಟನೆಗೆ ಆಸ್ಪದ ಕೊಡಬಾರದು.

             ಮಕ್ಕಳು ದೇವರು ಸಮಾನ ಎನ್ನುತ್ತಾರೆ. ಅವರನ್ನು ಕಾಪಾಡುವದು ಅವರವರ ಕರ್ತವ್ಯವಾಗಿದೆ. ಅದೇ ರೀತಿ ಯಾವ ತಾಯಿಯು ಕೆಟ್ಟವರಿರುವದಿಲ್ಲ ಆದರೆ ಸಮಯ, ಸಂದರ್ಭಗಳು ಮನುಷ್ಯನನ್ನು ಆಟ ಆಡಿಸುತ್ತವೆ. ಜೀವನದಲ್ಲಿ ನಂಬಿಕೆ ಮುಖ್ಯ, ನಂಬಿಕೆಯಿಂದಲೇ ಜೀವನ ನಡೆಸಬೇಕು. ಗಾಳಿಯೂ ನಿನ್ನದೇ, ದೀಪವೂ ನಿನ್ನದೇ ಆರದಿರಲಿ ಬದುಕು. ಒಬ್ಬನು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ ಬಾಳುವದು ಜೀವನದ ನಿಯಮ. ನೋಡಲು ದೇವರಿಲ್ಲ, ಆ ದೇವರನ್ನೇ ತಾಯಿಯಲ್ಲಿ ಕಾಣಬೇಕು.
ಅಮರೇಶ ನಾಯಕ, ಜಾಲಹಳ್ಳಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ 
ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ(ಕಲಬುರಗಿ).

ಜೀವನ

ಬೇಕು ಎಂದಾಗ ಇರಲ್ಲ 


ಬೇಡ ಎಂದಾಗ ಹೋಗಲ್ಲ 

ಬಯಸುವಾಗ ಸಿಗಲ್ಲ 

ಸಿಗುವಾಗ ಬಯಸಲ್ಲ,

ಹತ್ತಿರ ಇದ್ದಾಗ ದೂರ ಮಾಡ್ತೀವಿ 

ದೂರ ಹೋದ್ಮೇಲೆ ಹತ್ತಿರ ಆಗೋಕೆ ನೋಡ್ತಿವಿ
..
ಇದುವೇ ಜೀವನ......