fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಉಳಿಯುಮೇಶ್ವರ ಚಿಕ್ಕಣ್ಣ

ಅಂಕಿತ ನಾಮಉಳಿಯುಮೇಶ್ವರ 
ಕಾಲ
ದೊರಕಿರುವ ವಚನಗಳು12 (ಆಧಾರಸಮಗ್ರ ವಚನ ಸಂಪುಟ) 
ತಂದೆ/ತಾಯಿ
ಹುಟ್ಟಿದ ಸ್ಥಳರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದೇವರಗುಡಿ ಗ್ರಾಮ 
ಪರಿಚಯರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದೇವರಗುಡಿ ಗ್ರಾಮಕ್ಕೆ ಸೇರಿದವನುಕಲ್ಲೇದೇವರಪುರದ ಕ್ರಿಶ 1279 ಶಾಸನದಲ್ಲಿ ಬರುವ ಚಿಕ್ಕ ಎಂಬ ಹೆಸರು ಈತನದೇ ಇರಬಹುದು ಎಂಬ ಊಹೆ ಇದೆದೇವರಗುಡಿಯ ಶಾಸನಗಳಿಂದ ಈತ ಕಾಳಾಮುಖ ಶೈವ ಆಚಾರ್ಯನೆಂದು ತಿಳಿಯುತ್ತದೆಈತನ 12 ವಚನಗಳು ದೊರೆತಿವೆ.


ಅಸ್ಥಿಚರ್ಮಮಾಂಸರಕ್ತಖಂಡದ ಚೀಲ
ಬಾ[ತೆ]ಗೆಟ್ಟೊಡಲ ನಾನೆಂತು ಸಲಹುವೆನಯ್ಯಾ?
ಹುರುಳಿಲ್ಲದಿಹ ಸಂಸಾರ
ಎಂದಿಂಗೆ ನಾನಿದ ಹೊತ್ತು ತೊಳಲುವುದೆ ಬಿಡುವೆನಯ್ಯಾ?
ಎಂದಿಂಗೆ ನಾನಿದರ ಸಂಶಯವನಳಿವೆನಯ್ಯಾ?
ಎಡಹಿ ಕೊಡ ನೀರೊಳಗೆ ಒಡೆದಂತೆ
ಎನ್ನೊಡಲೊಡೆದು ನಿಮ್ಮೊಳೆಂದು ನೆರೆವೆನೊ ಉಳಿಯುಮೇಶ್ವರಾ.

ತಾಯಿಯ ಆ ರೂಪತಾಯಿಯ ರೂಪ

ಮಮತೆಯ ಪ್ರತಿರೂಪ

ಅವಳ ಜನ್ಮವು ಅಪರೂಪ
ಮನಸದು ರಾತ್ರಿಯ ಕೈದೀಪ...

ರುಧಿರ ಖಂಡಕ್ಕೆ ರೂಪವ ಕೊಡುವ ಅಮರ ಶಿಲ್ಪಿಯವಳು
ಮಾಂಸದ ಮುದ್ದೆಗೆ ಜೀವ ನೀಡುವ ಬ್ರಹ್ಮನ ತದ್ರೂಪಿಯವಳು
ನವಮಾಸಗಳು ಹೊತ್ತು ಹೆತ್ತು ಜನ್ಮವ ಕೊಟ್ಟವಳು
ತನ್ನಯ ಜೀವವನೆ ತೇಯ್ದು ನಮಗೆ ಪ್ರಾಣವ ನೀಡಿದಳು...


ತನ್ನ ದೇಹದ ಸಾರವನೆಲ್ಲ ಹಾಲಾಗಿ ಉಣಿಸಿದಳು
ಕರುಣೆ ಪ್ರೀತಿಯೆಂಬ ಊಟವ ಹಾಕಿ ನಮ್ಮನು ಬೆಳೆಸಿದಳು
ತಾನು ಕರಗುತ್ತ ಬೆಳಕ ನೀಡುವ ಅಮೃತ ಮೂರ್ತಿಯವಳು
ಆದ್ದರಿಂದಲೇ "ಅಮ್ಮ" ಎಂದೆಂದು ಬತ್ತದಂತ ಸ್ಪೂರ್ತಿ ಚಿಲುಮೆಯಾದಳು ...


ಅಪರೂಪ ಮಾಣಿಕ್ಯ
ಬಾಳಿನ ಸೌಭಾಗ್ಯ
ಅಮ್ಮ ನೆಂದು ಮರೆಯದಿರು
ಕಣ್ಣಿಗೆ ರೆಪ್ಪೆ ಯಂತೆ ಕಾಪಾಡುತಿರು ....

ಅಮ್ಮ , माँ , అమ్మ, Mother , அம்மா, അമ്മ 

ಮೇ ೧೦, ತಾಯಂದಿರ ದಿನ

ಜನೇವರಿ-2017 ತಿಂಗಳ ಟಾಪ್ - 3

ನಮ್ಮ ಜಾಲತಾಣದ ಜನೇವರಿ ತಿಂಗಳ
ಟಾಪ್ - 3 ವೀಕ್ಷಣೆಯ ವಿವರ

ಕಳೆದ ತಿಂಗಳ ಪ್ರಕಟನೆಗಳ ಟಾಪ್ 3 ವೀಕ್ಷಣೆಗಳು

ಕಳೆದ ತಿಂಗಳ ರಾಷ್ಟ್ರಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ರಷ್ಯಾ
ಕಳೆದ ತಿಂಗಳ ಬ್ರೌಸರ್ಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

Chrome

Firefox

UC Browser

ಕಳೆದ ತಿಂಗಳ ಆಪರೇಟಿಂಗ್ ಸಿಸ್ಟಮ್ಗಳ ಟಾಪ್ 3 ವೀಕ್ಷಣೆಗಳು

Windows

Android

Macintosh

ಕಳೆದ ತಿಂಗಳ ಆಪರೇಟಿಂಗ್ ಸಿಸ್ಟಮ್ಗಳ ಪ್ರಕಾರ ಟಾಪ್ 3 ವೀಕ್ಷಣೆಗಳು

Windows 7


Windows 8

Windows 8.1

ತಾಣ ಪ್ರಾರಂಭದ ವರ್ಷದಿಂದ ಇಂದಿನವರೆಗಿನ ಪೋಸ್ಟಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಮಾಡಿದ ಟಾಪ್ 3 ಪುಟಗಳು

ಹಿಮಾಲಯದ ಮರ್ಮೋಟ್ಕುವೆಂಪುರವರ ಜೀವನTET 2015 (ಟಿ.ಇ.ಟಿ ಪರೀಕ್ಷೆ 2015)

ಟಾಪ್ 3 ವೀಕ್ಷಣೆಯ ತಿಂಗಳುಗಳು
ಅಗಸ್ಟ 2015 - 6,250
ಜುಲೈ 2015 - 5,780
ನವೆಂಬರ್ 2016 - 3,697
ಟಾಪ್ 3 ವೀಕ್ಷಣೆಯ ದಿನಗಳು
26 ಅಗಸ್ಟ 2015 - 592
25 ಅಗಸ್ಟ 2015 - 539
15 ಜುಲೈ 2015 - 532
ಒಂದೇ ಸಮಯದಲ್ಲಿ ಬಹಳ ವೀಕ್ಷಕರು ವೀಕ್ಷಿಸಿದವರ ಟಾಪ್ 3 
ಅಕ್ಟೋಬರ್ 2016 - 35
ಅಗಸ್ಟ್ 2016 - 17
ಅಕ್ಟೋಬರ್ 2016 - 09
ಕಳೆದ ತಿಂಗಳ ಪುಟವೀಕ್ಷಣೆಗಳು
3,425+
ಪ್ರಸ್ತುತ G+ ನ ಒಟ್ಟು ಸದಸ್ಯರುಗಳ ಸಂಖ್ಯೆ
+ 82
ಪ್ರಸ್ತುತ ಒಟ್ಟು ವೀಕ್ಷಣೆಯ ದೇಶಗಳ ಸಂಖ್ಯೆ
+ 84

ಜಾರ ಬಂಡಿ ಆಟಜಾರ ಬಂಡಿ ಆಟ

ಜಾರಿ ಬೀಳೊ ಆಟ

ಜಾರಿ ಬಿದ್ದ ರಾಮಣ್ಣ

ಹಲ್ಲು ಮುರಿದು ಚೂರಾಗಿ

ಕಣ್ಣಲ್ ಬಂತು ನೀರು

ಆಡುತ್ತಿದ್ದ ಮಕ್ಕಳು

ಅವನ ನಗಿಸಿ ನಕ್ಕರು

ಹ್ಹ ಹ್ಹ ಹ್ಹ ...

ಶರಣ ಬಸವೇಶ್ವರ ದೇವಾಲಯ

ಕನ್ನಡರತ್ನ.ಕಾಂ, ದೇವಾಲಯಗಳ ಮಾಹಿತಿ, ಕರ್ನಾಟಕದ ದೇವಾಲಯಗಳು, kannadaratna.com,  ourtemples.in, gulbarga sharanabasaveswara templeಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರ ಗುಲ್ಬರ್ಗಾ ಜಿಲ್ಲೆ. ಈ ಜಿಲ್ಲೆಯ ಪ್ರಮುಖ ನಗರ ಗುಲ್ಬರ್ಗಾ. ಬಿರು ಬಿಸಿಲಿಗೆ ಹೆಸರಾದ ಜಿಲ್ಲೆಯಲ್ಲಿ ಕೃಷ್ಣ, ಭೀಮಾ, ಅಮರ್ಜಾ, ಕಾಗಿಣಾ, ಮುಲ್ಲಾಮರಿ, ಬೆಣ್ಣೆತೊರೆ ನದಿಗಳು ಹರಿಯುತ್ತವೆ. ಈ ನಾಡಿಗೆ ಕಲಬುರ್ಗಿ ಎಂಬ ಹೆಸರೂ ಇದೆ. ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಯಾದವರು, ಹೊಯ್ಸಳರು ಆಳಿದ ಈ ನಾಡನ್ನು ದೆಹಲಿಯ ದೊರೆ ಮಹಮ್ಮದ್ ಬಿನ್ ತುಘಲಕ್ ವಾರಂಗಲ್ ನಲ್ಲಿ ಆಳುತ್ತಿದ್ದ ಕಾಕತೀಯರನ್ನು ಸೋಲಿಸಿ ತನ್ನ ಕೈವಶಪಡಿಸಿಕೊಂಡನೆಂದು ಇತಿಹಾಸ ಸಾರುತ್ತದೆ. ಇಲ್ಲಿ ಧ್ವಂಸಗೊಂಡಿರುವ ಕೋಟೆ ಕೊತ್ತಲಗಳು, ನಿರ್ವಹಣೆ ಇಲ್ಲದೆ ಹಾಳಾಗಿರುವ ಸ್ಮಾರಕಗಳು ಕರಾಳ ಕುರುಹುಗಳಾಗಿ ಇತಿಹಾಸದ ಕಥೆ ಹೇಳುತ್ತವೆ. ರಕ್ತ ಸಿಕ್ತ ಇತಿಹಾಸದ ಗುಲ್ಬರ್ಗಾ ಬಹುಮನಿ ರಾಜ್ಯ ಸ್ಥಾಪನೆಯಾದಾಗ ಮತ್ತೆ ರಾಜಧಾನಿಯಾಯಿತು. ನಂತರ ಹೈದ್ರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿತು.
ಒಂದು ಕಾಲದಲ್ಲಿ ವೈಭವದಿಂದ ಮೆರೆದ ಗುಲ್ಬರ್ಗಾ ಇಂದು ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಎಂಬುದು ಮಾತ್ರ ವಿಷಾದದ ಸಂಗತಿ. ನೈರ್ಮಲ್ಯ ಎಂಬ ಪದದ ಪರಿಚಯ ಬಹುಶಃ ಇಲ್ಲಿನ ಸರ್ಕಾರಿ ಅಧಿಕಾರಿಗಳಿಗೆ ಇದ್ದಂತೆಯೇ ಇಲ್ಲ ಎಂಬುದನ್ನು ಊರು ನೋಡಿದವರಿಗೆ ಅನ್ನಿಸದಿರದು. ಆದರೆ, ಇತ್ತೀಚೆಗೆ ಅಭಿವೃದ್ಧಿ ಕಂಡಿರುವ ಶರಣ ಬಸವೇಶ್ವರ ಕೆರೆ ಇದಕ್ಕೆ ಅಪವಾದವಾಗಿದೆ.
ಸ್ಥಳೀಯರ, ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ಇಲ್ಲಿ ಉಳಿದಿರುವ ಐತಿಹಾಸಿಕ ಕಟ್ಟಡಗಳ ಪೈಕಿ ಶರಣ ಬಸವೇಶ್ವರ ದೇವಾಲಯವೂ ಒಂದು.  ಹಲವು ಹೋರಾಟಗಳ ನೆಲವಾದ ಗುಲ್ಬರ್ಗಾ ಧರ್ಮ ಕರ್ಮಗಳ ನೆಲೆವೀಡೂ ಹೌದು. ಇಲ್ಲಿರುವ ಶ್ರೀ ಶರಣ ಬಸವೇಶ್ವರ ದೇವಸ್ಥಾನ ಪವಿತ್ರ ತಾಣ.
ಜೇವರ್ಗಿ ತಾಲೂಕಿನ ಅರಳಗುಂಡಿಯ ಶರಣ ಬಸವೇಶ್ವರರು (1746-1822) ವೀರಶೈವ ಧರ್ಮ ಪ್ರಚಾರ ಮಾಡುತ್ತಾ ಗುಲ್ಬರ್ಗಕ್ಕೆ ಬಂದು ನೆಲೆಸಿದರು. ಬಸವೇಶ್ವರರು ಲಿಂಗೈಕ್ಯರಾದ ಬಳಿಕ ಅವರ ಸಮಾಧಿಗೆ ಗೋಪುರ ನಿರ್ಮಿಸಲಾಯಿತು. ಅದುವೇ ಇಂದು ಶರಣ ಬಸವೇಶ್ವರ ದೇವಾಲಯವಾಗಿದೆ.
ದೇವಾಲಯದಲ್ಲಿ  ಗದ್ದುಗೆಯ ಮೇಲೆ ಶರಣ ಬಸವೇಶ್ವರರ ನೆಚ್ಚಿನ ಶಿಷ್ಯ ಆದಿ ದೊಡ್ಡಪ್ಪ ಮತ್ತು ಶರಣ ಬಸವೇಶ್ವರರ (ಗುರು-ಶಿಷ್ಯರ) ಬೆಳ್ಳಿಯ ಜೋಡಿ ಮುಖವಾಡಗಳನ್ನು ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಅಪ್ಪನ ಕೆರೆ ಇದ್ದು, ಇದನ್ನು ಈಗ ವಿಹಾರ ತಾಣವಾಗಿ ಮಾರ್ಪಡಿಸಲಾಗಿದೆ.  1927ರಲ್ಲಿ ಮಹಾತ್ಮಾ ಗಾಂಧಿಜಿ ಇಲ್ಲಿಗೆ ಭೇಟಿ ನೀಡಿದ್ದರು. ಶರಣ ಬಸವೇಶ್ವರ ಜಾತ್ರೆಯ ವೇಳೆ ಸಹಸ್ರಾರು ಭಕ್ತರು ಸೇರಿ, ಶರಣಬಸವೇಶ್ವರ ತೇರು ಎಳೆಯುತ್ತಾರೆ.
ಜೈನ ಬಸದಿಗಳು, ಬೌದ್ಧ ವಿಹಾರ, ಚರ್ಚ್, ದೇವಾಲಯ, ದರ್ಗಾ, ಗುರುದ್ವಾರಗಳನ್ನು ಒಳಗೊಂಡ ಗುಲ್ಬರ್ಗಾ ಜಿಲ್ಲೆ ಕೋಮು ಸ್ವಾಹಾರ್ದದ ನಾಡೆಂದೇ ಖ್ಯಾತವಾಗಿದೆ.  ಖ್ವಾಜಾ ಬಂದೇ ನವಾಜ್ ದರ್ಗಾ, ಶ್ವೇತಾಂಬರ ಜೈನ ಮಂದಿರ, ಮಹಾವೀರ ಬಸದಿ, ಆದಿ ತೀರ್ಥಂಕರ ಬಸದಿ,  ನೋಡಲೇ ಬೇಕಾದ ತಾಣಗಳು.

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ನುಡಿಮುತ್ತು 43"ಜೀವನದಲ್ಲಿ ಎಂದೂ ಯಾರಿಂದಲೂ ಸಹಾಯದ ಅಪೇಕ್ಷೆಯನ್ನ ಇಡಬಾರದು. ಯಾಕೆಂದರೆ ನಾವು ಕಷ್ಟದಲ್ಲಿ ಇದ್ದಾಗ ಯಾರಾದರೂ ಸಹಾಯ ಮಾಡದಿದ್ದರೆ ಅದಕ್ಕಿಂತ ದೊಡ್ಡ ಯಾತನೆ ಬೇರೊಂದಿಲ್ಲ."
 

"ದೇವರಲ್ಲಿ ಎಂದಿಗೂ ಕೇವಲ ಸ್ವಂತದ ಏಳಿಗೆಯಾಗಲಿ ಅಂತ ಬೇಡಿಕೊಳ್ಳದೆ ಹತ್ತು ಜನರ ಏಳಿಗೆಯಾಗಲಿ ಅಂತ ಬೇಡಿಕೊಳ್ಳಿ. ದೇವರ ಕೊಡುವ ವರಕ್ಕಿಂತ ಹತ್ತು ಜನರನ್ನ ಉದ್ಧಾರ ಮಾಡಿದ ಪುಣ್ಯ ಎಷ್ಟೋ ದೊಡ್ಡದು"
 

"
ಮನುಷ್ಯನಿಗೆ ಯಾವಾಗ ಒಂದು ವಸ್ತು ಸುಲಭವಾಗಿ ಸಿಗುವ ಹಾಗೆ ಇರುತ್ತೋ ಆಗ ಅದರ ಬೆಲೆ ಗೊತ್ತಿರುವುದಿಲ್ಲ, ಆದರೆ ಯಾವಾಗ ವಸ್ತುವಿನ ಬೆಲೆ ತಿಳಿಯುತ್ತದೋ ಆಗ ಅದು ಸುಲಭವಾಗಿ ಸಿಗುವುದಿಲ್ಲ."
ಸರಸ್ವತಿಯೇ, ನಿನ್ನ ಬಳಿ ವಿದ್ಯೆಯೆಂಬ ಅಪರೂಪದ ಭಂಡಾರವೊಂದಿದೆ.
ಬೇರೆಲ್ಲ ಸಂಪತ್ತುಗಳೂ ಹಂಚಿಕೊಂಡಷ್ಟೂ ಕ್ಷೀಣಿಸುತ್ತವೆ.
ಆದರೆ (ನಿನ್ನ ಬಳಿಯಿರುವ) ವಿದ್ಯೆಯೆಂಬ ಸಂಪತ್ತು ಮಾತ್ರ
ಹಂಚಿಕೊಂಡಷ್ಟೂ ವೃದ್ಧಿಸುತ್ತದೆ ಮತ್ತು ಗೋಪ್ಯವಾಗಿಟ್ಟಷ್ಟೂ ಕ್ಷೀಣಿಸುತ್ತದೆ!
- ಸಂಸ್ಕೃತ ಸುಭಾಷಿತ
ಕಾದ ಕಾವಲಿಯ ಮೇಲೆ ಬಿದ್ದ ನೀರ ಹನಿಯೊಂದು ಆವಿಯಾಗಿ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ.
ಕಮಲದೆಲೆಯ ಮೇಲೆ ಬಿದ್ದ ಅದೇ ನೀರ ಹನಿಯು ಸೂರ್ಯನ ಬೆಳಕಿನಲ್ಲಿ ಮುತ್ತಿನಂತೆ ಕಂಗೊಳಿಸುತ್ತದೆ.
ಸ್ವಾತಿ ನಕ್ಷತ್ರದಲ್ಲಿ ಕಪ್ಪೆಚಿಪ್ಪನ್ನು ಪ್ರವೇಶಿಸಿದ ಅದೇ ನೀರ ಹನಿಯು ಅನರ್ಘ್ಯವಾದ ಮುತ್ತೇ ಆಗುತ್ತದೆ.
ಹೀಗೆ ಉತ್ತಮ, ಮಧ್ಯಮ ಮತ್ತು ಅಧಮವೆಂಬ ಮೂರು ಗುಣಗಳೂ ಸಹವಾಸದಿಂದ ಉಂಟಾಗುತ್ತವೆ!
- ಭರ್ತೃಹರಿಯ ನೀತಿಶತಕ 

ಕಾಗೆ ಕಪ್ಪು. ಕೋಗಿಲೆ ಕೂಡಾ ಕಪ್ಪು. ಹಾಗಾದರೆ ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ ತಿಳಿಯುವುದು ಹೇಗೆ?
ಬಹಳ ಸುಲಭ; ವಸಂತಮಾಸ ಬಂದೊಡನೆ ಕಾಗೆ ಕಾಗೆಯೇ, ಕೋಗಿಲೆ ಕೋಗಿಲೆಯೇ!
(
ವಸಂತಮಾಸದಲ್ಲಿ ಮಾವು ಚಿಗುರುವುದರಿಂದ ಕೋಗಿಲೆ ಇಂಪಾದ ದನಿಯಲ್ಲಿ ಹಾಡುತ್ತದೆ. ಕಾಗೆಗದು ಅಸಾಧ್ಯ ಎಂಬರ್ಥದಲ್ಲಿ)
- ಸಂಸ್ಕೃತ ಸುಭಾಷಿತ

ಲಕ್ಷ್ಮಣ, ಲಂಕೆಯು ಸುವರ್ಣಮಯ ರಾಜ್ಯವೇ ಆದರೂ ಅದು ನನ್ನನ್ನು ಆಕರ್ಷಿಸುತ್ತಿಲ್ಲ.
(
ಏಕೆಂದರೆ) ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಕೂಡಾ ಮಿಗಿಲಾದುವು!
- ವಾಲ್ಮೀಕಿ ರಾಮಾಯಣ (ರಾಮನು ರಾವಣನನ್ನು ಸಂಹರಿಸಿದ ಬಳಿಕ ಲಕ್ಷ್ಮಣನಿಗೆ ಹೇಳುವ ಮಾತು)

ಹೇಗೆ ಹಾಲು, ಮೊಸರುಗಳಿಗಿಂತ ತಡವಾಗಿ ಹುಟ್ಟಿದರೂ ತುಪ್ಪವು ಹಾಲು, ಮೊಸರುಗಳಿಗಿಂತ ಶ್ರೇಷ್ಠ ಎನಿಸಿಕೊಳ್ಳುವುದೋ,
ಹಾಗೆಯೇ ಹಿರಿತನವೆನ್ನುವುದು ಉತ್ತಮ ಗುಣಗಳಿಂದಾಗಿ ಲಭ್ಯವಾಗುವುದೇ ಹೊರತು ಕೇವಲ ವಯಸ್ಸಿನಿಂದಲ್ಲ.
- ಸಂಸ್ಕೃತ ಸುಭಾಷಿತ
ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ?!
- ಸ್ವಾಮಿ ವಿವೇಕಾನಂದ

ಒಂದು ಆದರ್ಶವನ್ನು, ಗುರಿಯನ್ನು ಕೈಗೆತ್ತಿಕೊಳ್ಳಿ. ಕೇವಲ ಗುರಿಯ ಬಗ್ಗೆ ಮಾತ್ರ ಯೋಚಿಸಿ, ಚಿಂತಿಸಿ. ನಿಮ್ಮ ಬದುಕನ್ನೇ ಅದಕ್ಕಾಗಿ ಮುಡಿಪಾಗಿಡಿ. ಗುರಿಯು ನಿಮ್ಮ ಬುದ್ಧಿ, ಮನಸ್ಸು, ಇಂದ್ರಿಯಗಳು, ನರ-ನಾಡಿಗಳನ್ನೆಲ್ಲ ವ್ಯಾಪಿಸಲಿ. ಬೇರೆಲ್ಲ ಆಲೋಚನೆಗಳನ್ನು ಬದಿಗಿಡಿ. ಇದೇ ಯಶಸ್ಸಿನ ಏಕಮಾತ್ರ ಸೂತ್ರ!
- ಸ್ವಾಮಿ ವಿವೇಕಾನಂದ
                                                                       ಕೃಪೆ : ಮಾ.ಕೃ.ಮಂಜು