fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಜೂನ್ 23, 2014

ಕುವೆಂಪುರವರ ಜೀವನ


  
                   ಕುಪ್ಪಳ್ಳಿ ವೆಂಕಟಪ್ಪ ಗೌಡ ಪುಟ್ಟಪ್ಪ
Kuvempu.jpg                                      
   ಕಾವ್ಯನಾಮ(ಗಳು): ಕುವೆಂಪು
ಜನನ: ಡಿಸೆಂಬರ್ ೨೯, ೧೯೦೪
ಜನನ ಸ್ಥಳ: ಕುಪ್ಪಳ್ಳಿ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ನಿಧನ: ನವೆಂಬರ್ ೧೧, ೧೯೯೪
ಮೈಸೂರು
ವೃತ್ತಿ: ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ರಾಷ್ಟ್ರೀಯತೆ: ಭಾರತೀಯ
ಬರವಣಿಗೆಯ ಕಾಲ: (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಸಾಹಿತ್ಯದ ವಿಧ(ಗಳು): ಕಥೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮ ಚರಿತ್ರೆ, ಜೀವನ ಚರಿತ್ರೆ, ಮಹಾಕಾವ್ಯ, ವೈಚಾರಿಕ ಸಾಹಿತ್ಯ
ವಿಷಯಗಳು: ಕರ್ನಾಟಕ, ರಾಮಾಯಣ, ಜೀವನ, ಶಿವಮೊಗ್ಗ
ಸಾಹಿತ್ಯ ಶೈಲಿ: ಬಂಡಾಯ, ನವೋದಯ
ಪ್ರಥಮ ಕೃತಿ: (ಮೊದಲ ಪ್ರಕಟಿತ ಕೃತಿ/ಗಳು)
ಪ್ರಭಾವಗಳು: ಕಾರ್ಲ್ ಮಾರ್ಕ್ಸ್, ಕುಮಾರವ್ಯಾಸ, ವರ್ಡ್ಸ್ ವರ್ತ್,ರಾಮಕೃಷ್ಣ ಪರಮಹಂಸ                                                                                                              ಹಸ್ತಾಕ್ಷರ:

128px-Kuvempu sign.jpg                                                                                             ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದಪ್ರ ಪ್ರಥಮ ವ್ಯಕ್ತಿ. 'ವಿಶ್ವ ಮಾನವ' ಪರಿಕಲ್ಪನೆಯನ್ನೂ ಸಾಹಿತ್ಯದ ಮೂಲಕ ಸಮಾಜಕ್ಕೆ ತಲುಪಿಸಿದವರು. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ. ಕುವೆಂಪುರವರ ವೊದಲ ಕಾವ್ಯನಾಮ-"ಕಿಶೋರ ಚಂದ್ರವಾಣಿ" -ನಂತರ ಅವರು ಕುವೆಂಪು ಕಾವ್ಯನಾಮ ಬಳಸಿ ಬರೆಯ ತೊಡಗಿದರು.
ಡಿಸೆಂಬರ್ ೨೯, ೧೯೦೪, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಪರಪುಟ್ಟ ಹಕ್ಕಿಯಂತೆ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪ ಕುಲಪತಿಯಾಗಿ ನಿವೃತ್ತರಾದರು. ಇವರು ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ "ಉದಯರವಿ"ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು(ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

ಪ್ರಶಸ್ತಿ ಪುರಸ್ಕಾರಗಳು


ಕುಪ್ಪಳಿಯಲ್ಲಿ ಕುವೆಂಪು ಮನೆ (ಈಗ ವಸ್ತು ಸಂಗ್ರಹಾಲಯವಾಗಿದೆ)
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - (ಶ್ರೀರಾಮಾಯಣ ದರ್ಶನಂ) (೧೯೫೫)
  • ಪದ್ಮಭೂಷಣ (೧೯೫೮)
  • ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್.
  • 'ರಾಷ್ಟ್ರಕವಿ' ಪುರಸ್ಕಾರ (೧೯೬೪)
  • ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೬)
  • ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ) (೧೯೬೮)
  • ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. (೧೯೬೯)
  • ಪದ್ಮವಿಭೂಷಣ (೧೯೮೯)
  • ಕರ್ನಾಟಕ ರತ್ನ (೧೯೯೨)
  • ಪಂಪ ಪ್ರಶಸ್ತಿ(೧೯೮೮)                                                                                                    

    ಕೃತಿಗಳು

    ಕಾವ್ಯ
  • ಅಮಲನ ಕಥೆ (ಶಿಶುಸಾಹಿತ್ಯ) (೧೯೨೪)
  • ಬೊಮ್ಮನಹಳ್ಳಿಯ ಕಿಂದರಿಜೋಗಿ (ಶಿಶುಸಾಹಿತ್ಯ) (೧೯೨೬)
  • ಹಾಳೂರು (೧೯೨೬)
  • ಕೊಳಲು (೧೯೩೦)
  • ಪಾಂಚಜನ್ಯ (೧೯೩೩)
  • ಕಲಾಸುಂದರಿ (೧೯೩೪)
  • ನವಿಲು (೧೯೩೪)
  • ಚಿತ್ರಾಂಗದಾ (೧೯೩೬) (ಖಂಡಕಾವ್ಯ)
  • ಕಥನ ಕವನಗಳು (೧೯೩೬)
  • ಕೋಗಿಲೆ ಮತ್ತು ಸೋವಿಯಟ್ ರಷ್ಯಾ (೧೯೪೪)
  • ಕೃತ್ತಿಕೆ (೧೯೪೬)
  • ಅಗ್ನಿಹಂಸ (೧೯೪೬)
  • ಪಕ್ಷಿಕಾಶಿ (೧೯೪೬)
  • ಕಿಂಕಿಣಿ (೧೯೪೬)
  • ಪ್ರೇಮಕಾಶ್ಮೀರ (೧೯೪೬)
  • ಷೋಡಶಿ (೧೯೪೭)
  • ನನ್ನ ಮನೆ (೧೯೪೭)
  • ಮರಿವಿಜ್ಞಾನಿ (೧೯೪೭) (ಶಿಶುಸಾಹಿತ್ಯ)
  • ಮೇಘಪುರ (೧೯೪೭) (ಶಿಶುಸಾಹಿತ್ಯ)
  • ಶ್ರೀ ರಾಮಾಯಣ ದರ್ಶನ೦ (೧೯೪೯) (ಮಹಾಕಾವ್ಯ)
  • ಜೇನಾಗುವ (೧೯೫೨)
  • ಚಂದ್ರಮಂಚಕೆ ಬಾ, ಚಕೋರಿ! (೧೯೫೪)
  • ಇಕ್ಷು ಗಂಗೋತ್ರಿ (೧೯೫೭)
  • ಅನಿಕೇತನ (೧೯೬೩)
  • ಅನುತ್ತರಾ (೧೯೬೩)
  • ಮಂತ್ರಾಕ್ಷತೆ (೧೯೬೬)
  • ಕದರಡಕೆ (೧೯೬೭)
  • ಪ್ರೇತಕ್ಯೂ (೧೯೬೭)
  • ಕುಟೀಚಕ (೧೯೬೭)
  • ಹೊನ್ನ ಹೊತ್ತಾರೆ (೧೯೭೬)
  • ಸಮುದ್ರಲಂಘನ (೧೯೮೧)
  • ಕೊನೆಯ ತೆನೆ ಮತ್ತು ವಿಶ್ವಮಾನವ ಗೀತೆ (೧೯೮೧)
ಇಂಗ್ಲಿಷ್ ಕವನಸಂಕಲನ
  • ಬಿಗಿನರ್'ಸ್ ಮ್ಯೂಸ್ (೧೯೨೨)
  • ಅಲಿಯನ್ ಹಾರ್ಪ್ (೧೯೭೩)
ನಾಟಕ:
ಕಾದಂಬರಿ:
ಕಥಾ ಸಂಕಲನ:
  • ಸಂನ್ಯಾಸಿ ಮತ್ತು ಇತರ ಕಥೆಗಳು (೧೯೩೬)
  • ನನ್ನ ದೇವರು ಮತ್ತು ಇತರೆ ಕಥೆಗಳು (೧೯೪೦)
ಲಲಿತ ಪ್ರಬಂಧ
ಗದ್ಯ/ವಿಚಾರ/ವಿಮರ್ಶೆ/ಪ್ರಬಂಧ:
ಭಾಷಣ
ಆತ್ಮ ಚರಿತ್ರೆ
ಜೀವನ ಚರಿತ್ರೆ:
  • ಶ್ರೀ ರಾಮಕೃಷ್ಣ ಪರಮಹಂಸ (೧೯೩೪)
  • ಸ್ವಾಮಿ ವಿವೇಕಾನಂದ (೧೯೩೪)
ರಾಮಕೃಷ್ಣ-ವಿವೇಕಾನಂದ ಸಾಹಿತ್ಯ
ವೇದಾಂತ ಸಾಹಿತ್ಯ
ಇತರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.