ಅಕ್ಕಮಹಾದೇವಿ
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಭರಾಮಯ್ಯನ ಸಮಾಧಿಸ್ಥಲ.
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
--- ಅಕ್ಕಮಹಾದೇವಿ
ಅಂಕಿತ ನಾಮ:
ಚೆನ್ನಮಲ್ಲಿಕಾರ್ಜುನ
ಕಾಲ : ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ : ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ :
ಕಾಲ : ಹನ್ನೆರಡನೆಯ ಶತಮಾನ
ದೊರಕಿರುವ ವಚನಗಳು: 434 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ : ನಿರ್ಮಲಶೆಟ್ಟಿ ಮತ್ತು ಸುಮತಿ
ಹುಟ್ಟಿದ ಸ್ಥಳ :
ಪರಿಚಯ:
ಹನ್ನೆರಡನೆಯ ಶತಮಾನದಲ್ಲಿದ್ದ ಅಕ್ಕಮಹಾದೇವಿ, ನಿರ್ಮಲಶೆಟ್ಟಿ ಮತ್ತು
ಸುಮತಿಯರ ಮಗಳು. ತಂದೆ ತಾಯಿಯರ ಹೆಸರು ಕವಿ ಕಲ್ಪನೆ ಇದ್ದೀತು ಅನ್ನುವುದು ಕೆಲವು
ವಿದ್ವಾಂಸರ ಅನುಮಾನ. ಹರಿಹರನ ಮಹದೇವಿಯಕ್ಕಗಳ ರಗಳೆಯ ಪ್ರಕಾರ ಊರಿನ ಮುಖ್ಯಸ್ಥ ಕೌಶಿಕ
ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿದ. ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ
ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು
ಹೊರಟುಬಿಡುತ್ತಾಳೆ. ಇನ್ನು ಕೆಲವು ಕಥನಪರಂಪರೆಗಳಲ್ಲಿ ಅಕ್ಕ ಎಳವೆಯಲ್ಲೇ
ಚನ್ನಮಲ್ಲಿಕಾರ್ಜುನನನ್ನು ವರಿಸಿದವಳು ಅನ್ನುವುದೂ ಉಂಟು. ಉರಕ್ಕೆ ಜವ್ವನಗಳು ಬಾರದ
ಮುನ್ನ ಎಂದು ಆರಂಭವಾಗುವ ಅಕ್ಕನ ವಚನ ನೋಡಿ. ಪರ್ಯಟನೆ ಮಾಡುತ್ತ ಮಹದೇವಿ ಕಲ್ಯಾಣಕ್ಕೆ
ಹೋದಳು, ಅಲ್ಲಿಂದ ಶ್ರೀಶೈಲದ ಕದಳಿಯಲ್ಲಿ ಐಕ್ಯಳಾದಳು ಎಂಬ ವಿವರಗಳಿವೆ. ಅಲ್ಲಮ ಮತ್ತು
ಅಕ್ಕಮಹಾದೇವಿ ಒಂದೇ ಪ್ರಾಂತದವರು, ಅವರ ಬದುಕಿನ ಕಥೆಗಳಲ್ಲೂ ವೈಚಾರಿಕ ನಿಲುವುಗಳಲ್ಲೂ
ಅನೇಕ ಸಾಮ್ಯಗಳಿವೆ. ಈಕೆಯ 434 ವಚನಗಳು ಮತ್ತು ಹಲವು ಹಾಡುಗಳು ದೊರೆತಿವೆ. ಯೋಗಾಂಗ
ತ್ರಿವಿಧಿ, ಸೃಷ್ಟಿಯ ವಚನ ಮತ್ತು ಮಂತ್ರಗೋಪ್ಯ ಮಹಾದೇವಿಯ ಇತರ ಕೃತಿಗಳು ಎಂದು
ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ
ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ. ಭಾವಗಳ ತೀವ್ರತೆ ಈಕೆಯ
ರಚನೆಗಳ ಮುಖ್ಯ ಲಕ್ಷಣ.
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣನ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಭರಾಮಯ್ಯನ ಸಮಾಧಿಸ್ಥಲ.
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯಾ.
--- ಅಕ್ಕಮಹಾದೇವಿ
ಬಹಳ different ಆದ ಬ್ಲಾಗಿಗೆ ಬಂದ ಸಂತಸವಾಯಿತು. ನನ್ನ ಬ್ಲಾಗಿಗೆ ಬಂದು ನನ್ನ ಕವನ ಓದಿದ್ದಾಕ್ಕಾಗಿ ಆನಂಟ ಧನ್ಯವಾದಗಳು.
ಪ್ರತ್ಯುತ್ತರಅಳಿಸಿತಾವು facebook ನಲ್ಲಿ ಇದ್ದೀರಾದರೆ. https://www.facebook.com/groups/kannada3K
ಗುಂಪಿಗೆ ಸದಸ್ಯರಾಗಿರಿ.
ok
ಅಳಿಸಿ