fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಕೆಚ್ಚೆದೆಯ ಕಲಿಗಳ ನಾಡು

ಕೆಚ್ಚೆದೆಯ ಕಲಿಗಳ ಎಂಟೆದೆಯ ಬಂಟರ ನಾಡು
ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು
ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು
ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು – ಇದು ನಮ್ಮ ಕನ್ನಡನಾಡು
ಹಗೆಗಾರರನ್ನು ಹತ್ತಿಕ್ಕಿದ, ಒಳಿತಿಗಾಗಿ ಕಾಳಗವ ಮಾಡಿದ ನಾಡು
ಅರಿಮೆಯ ಗೂಡು, ಕಲಿಕೆಯ ಬೀಡು, ಚೆಲುವಿನ ನಾಡು
ಆನೆಗಳ ಬೀಡು, ಹಲಹಕ್ಕಿಗಳ ಗೂಡು, ಹುಲಿಯ ನಾಡು
ಕಲೆಗಳ ತವರೂರು, ಕುಣಿದಾಟ, ಜಾನಪದ ಸೊಗಡುಗಳ ನಾಡು – ಇದು ನಮ್ಮ ಕನ್ನಡನಾಡು
ಆಡಳಿತಕ್ಕೆ ಹೆಸರಾಗಿದ್ದ, ಬೇಡಿ ಬಂದವರಿಗೆ ಆಸರೆಯಿತ್ತ ನಾಡು
ರೈತ ಕುಂಬಾರ ಕಮ್ಮಾರ ಬಡಗಿಯಿಂದ ಅರಳಿದ ನಾಡು
ಪಲ್ಲವರು ಚೋಳರು ಬಡಗಣದವರನ್ನು ಹಿಮ್ಮೆಟ್ಟಿಸಿದ ನಾಡು
ನೆಲದ ಚೆಲುವನರಸಿ ಬರುವವರ, ಸುತ್ತಾಡುಗರ ನಲ್ಮೆಯ ನಾಡು – ಇದು ನಮ್ಮ ಕನ್ನಡನಾಡು
ಇಂದ – ಕಿರಣ್ ಮಲೆನಾಡು

ಕತ್ತಲು


ದಿನಮಣಿ ದಿನನಿತ್ಯ ದಿಗಂತದಲ್ಲಿ ಅಸ್ತಂಗತನಾದಾಗ ಆವರಿಸುವಂಥದ್ದು
ನಕ್ಷತ್ರ ವೀಕ್ಷಣೆಗೆ ಇದೇ ಬೇಕು
ಹೊತ್ತು ಸಾಗಿಸಬೇಕು, ಅದಕೆ ಕತ್ತಲೆ ಬೇಕು - ಕೆ.ಎಸ್.
ಇರುಳು ಹೊರಳಿದ್ದರ ಫಲ
ಶೃಂಗಾರ ಅರಳುವ ಸಮಯ
ಮರ್ಯಾದೆಯು 'ಮರ್ಯಾದೆ'ಯನ್ನು ಮೀರುವ ಹೊತ್ತು
ಕೆಲವರು ಕರಡಿಗೆ 'ಜಾಮೂನು' ತಿನ್ನಿಸಲು ಹೊರಡುವ ಸಮಯ
ಥಿಯೇಟರ್ನಲ್ಲಿ ಕತ್ತಲಿರುವ ಜಾಗಕ್ಕೆ ವಿಶೇಷ ಬೇಡಿಕೆ
ಬೆಳಕಿನ ಮಹತ್ವ ಹೆಚ್ಚಿದ್ದು ಇದರಿಂದಲೇ
ಅಂಧಕಾರದ ಅಂದ ನೋಡಲು ಕಣ್ಣು ಬೇಕಿಲ್ಲ
ಬೆಳಕಿನ ಅಭಾವ ಕತ್ತಲೆಯೋ ಅಥವಾ ಕತ್ತಲೆಯ ಅಭಾವ ಬೆಳಕೋ...
ಇದನ್ನು ನೋಡುವುದಕ್ಕೆ ಬೆಳಕು ಬೇಡ
ಒಂದರ್ಥದಲ್ಲಿ ಇದು ಸ್ವಯಂ ಪ್ರಕಾಶ
ಕ್ಯಾಮೆರಾ ಫಿಲ್ಮ್ಗಳಲ್ಲಿನ ಫೋಟೋಗಳು ಬೆಳಕಿಗೆ ಬರೋದು ಇದರಲ್ಲಿಯೇ

-ವಿಶ್ವನಾಥ ಸುಂಕಸಾಳ

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ (Mother.......My Mother)

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ

ನಾ ಅಮ್ಮ ಎಂದಾಗ ಏನು ಸಂತೋಷವು
ನಿನ್ನ ಕಂಡಾಗ ಮನಕೇನು ಆನಂದವು
ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..


ಹಾಲಿನ ಸುಧೆಯು ನಿನ್ನಯ ಮನಸು
ಜೇನಿನ ಸವಿಯು ನಿನ್ನ ಮಾತು..
ಪುಣ್ಯದ ಫಲವೊ
ದೇವರ ವರವೊ
ಸೇವೆಯ ಭಾಗ್ಯ ನನ್ನದಾಯ್ತು

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ತಾಯಿಯ ಮಮತೆ ಕಂಡ ದೇವನು
ಅಡಗಿದ ಎಲ್ಲೊ ಮರೆಯಾಗಿ
ತಾಯಿಯ ಶಾಂತಿಗೆ ಧರಣಿಯು ನಾಚಿ
ಮೌನದಿ ನಿಂತಳು ತಲೆಬಾಗಿ

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ಚಿತ್ರ : ಭಲೇಜೋಡಿ
ರಚನೆ: ಚಿ.ಉದಯಶಂಕರ್
ಸಂಗೀತ: ಆರ್. ರತ್ನ
ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್    ಕೃಪೆ -> 

ಮಕ್ಕಳ ಮನಸು

ಮಕ್ಕಳ ಮನಸು ಮಲ್ಲಿಗೆ
ಮಕ್ಕಳ ಮನಸು ಮಲ್ಲಿಗೆ ಹೂವಿನ
ಹಾಗೆ ಬಿಳುಪಾಗಿಹುದು
ಅರಳಿದ ಮಲ್ಲಿಗೆ ಹೂವಿನ ಹಾಗೆ
ಪರಿಮಳ ಸೂಸುತಲಿಹುದು
ನೋಡುವರ ಮರುಳು ಮಾಡುವ
ಮುಗ್ಧತೆ ಮೊಗದಲ್ಲಿಹುದು
ನೋಡುಗರಲಿ ಖುಷಿಯ ಹೆಚ್ಚಿಸೊ
ಉಲ್ಲಾಸದ ಚಿಲುಮೆ ನಗುವಲ್ಲಿಹುದು.
ಮಗುವಿನ ಮುಗ್ಧ ಮನಸು
ರಾಗದ್ವೇಷಗಳಿರದೆ ಶುಭ್ರವಾಗಿಹುದು
ಮಗುವು ಬೆಳೆಯುವ ಪರಿಸರ
ಮಾತ್ರ ಘನಘೋರವಾಗಿಹುದು
ಬಿಳಿಯ ಮನಸಿನಾ ಮೇಲೆ
ಚೆಲ್ಲಿದ ಬಣ್ಣ ಮೆತ್ತಿಕೊಳ್ಳುವುದು
ಯಾವ ಬಣ್ಣ ಚೆಲ್ಲುವಿರೋ ಅದೇ
ಬಣ್ಣವನ್ನು ಅವು ಪ್ರದರ್ಶಿಸುವುದು
ಬಣ್ಣ ಆಯ್ದುಕೊಳ್ಳುವ ಅವಕಾಶ
ಮಗುವ ಕೈಯಲಿಲ್ಲ
ಮಗುವನ್ನು ಹೇಗೆ ಬೆಳೆಸುವುದು
ಎಂದು ತಿಳಿಯಬೇಕು ಎಲ್ಲ.
ಭವ್ಯ ಭಾರತದ ಭವಿಷ್ಯವು
ಮಕ್ಕಳ ಕೈಯಲ್ಲಿಹುದು
ಮುಂದಿನ ಭಾರತದ ಅಡಿಪಾಯ
ಇಂದು ನಮ್ಮ ಕೈಯಲ್ಲಿಹುದು.
ಬೆಳೆಸಿರಿ ಮಕ್ಕಳನು ಹೂವಂತೆ
ಯಾವಾಗಲೂ ಖುಷಿಯಲಿ ನಗುವಂತೆ
ವಿದ್ಯೆ ಬುದ್ಧಿ ತಿಳಿವಳಿಕೆಯ ನೀಡಿ
ಬೆಳೆಸಿರಿ ಮಕ್ಕಳನು ಬಾಗುವ ಬಳ್ಳಿಯಂತೆ
ಮಹಾಂತೇಶ ಎಸ್. ಪಾಟೀಲ

ರಾಮಯಾಣದ ಸ್ವಾರಸ್ಯ ಸಂಗತಿಗಳು 9

ಅಪ್ಪನ ಮೇಲೇ ಯುದ್ಧ ಮಾಡು ಎಂದಿದ್ದ ಲಕ್ಷ್ಮಣ

       ರಾಮನಿಗೆ ಪಟ್ಟಾಭಿಷೇಕ ಮಾಡುವುದಿಲ್ಲವೆಂದೂ, ಅವನು ವನವಾಸಕ್ಕೆ ಹೋಗಬೇಕೆಂದೂ ದಶರಥ ಮಹಾರಾಜ ಹೇಳಿದಾಗ ಲಕ್ಷ್ಮಣ ಬಹಳ ಸಿಟ್ಟುಗೊಂಡಿದ್ದ. ಅಪ್ಪನ ಮೇಲೆ ಯುದ್ಧ ಮಾಡಿ, ಅವನನ್ನು ಸೋಲಿಸಿ ಸಿಂಹಾಸನ ಗೆಲ್ಲು ಎಂದು ಅಣ್ಣನಿಗೆ ಅವನು ಬಹಳ ಒತ್ತಾಯ ಮಾಡಿದ. ಆಲಕ್ಷ್ಮಣನಿಗೆ ಸಮಾಧಾನ ಮಾಡಿದ.             ಕೃಪೆ : ಕೆ.ಟಿ.ಆರ್

ಸಮಯ

ಸಮಯದ ವೇಗಕ್ಕೆ ಕುಪಿತನಾದವನು
..


ಗಡಿಯಾರವನ್ನು  ಹೊಡೆದು ಹಾಕಿದ;
ಆದರೂ
ಸಮಯ ನಿಲ್ಲಲಿಲ್ಲ ಎಂಬುದು ಈ ಸಮಯದ ಸತ್ಯ…