ಮಕ್ಕಳ ಮನಸು ಮಲ್ಲಿಗೆ
ಮಕ್ಕಳ ಮನಸು ಮಲ್ಲಿಗೆ ಹೂವಿನ
ಹಾಗೆ ಬಿಳುಪಾಗಿಹುದು
ಅರಳಿದ ಮಲ್ಲಿಗೆ ಹೂವಿನ ಹಾಗೆ
ಪರಿಮಳ ಸೂಸುತಲಿಹುದು
ನೋಡುವರ ಮರುಳು ಮಾಡುವ
ಮುಗ್ಧತೆ ಈ ಮೊಗದಲ್ಲಿಹುದು
ನೋಡುಗರಲಿ ಖುಷಿಯ ಹೆಚ್ಚಿಸೊ
ಉಲ್ಲಾಸದ ಚಿಲುಮೆ ಈ ನಗುವಲ್ಲಿಹುದು.
ಮಗುವಿನ ಮುಗ್ಧ ಮನಸು
ರಾಗದ್ವೇಷಗಳಿರದೆ ಶುಭ್ರವಾಗಿಹುದು
ಈ ಮಗುವು ಬೆಳೆಯುವ ಪರಿಸರ
ಮಾತ್ರ ಘನಘೋರವಾಗಿಹುದು
ಈ ಬಿಳಿಯ ಮನಸಿನಾ ಮೇಲೆ
ಚೆಲ್ಲಿದ ಬಣ್ಣ ಮೆತ್ತಿಕೊಳ್ಳುವುದು
ಯಾವ ಬಣ್ಣ ಚೆಲ್ಲುವಿರೋ ಅದೇ
ಬಣ್ಣವನ್ನು ಅವು ಪ್ರದರ್ಶಿಸುವುದು
ಬಣ್ಣ ಆಯ್ದುಕೊಳ್ಳುವ ಅವಕಾಶ
ಮಗುವ ಕೈಯಲಿಲ್ಲ
ಆ ಮಗುವನ್ನು ಹೇಗೆ ಬೆಳೆಸುವುದು
ಎಂದು ತಿಳಿಯಬೇಕು ಎಲ್ಲ.
ಭವ್ಯ ಭಾರತದ ಭವಿಷ್ಯವು
ಮಕ್ಕಳ ಕೈಯಲ್ಲಿಹುದು
ಮುಂದಿನ ಭಾರತದ ಅಡಿಪಾಯ
ಇಂದು ನಮ್ಮ ಕೈಯಲ್ಲಿಹುದು.
ಬೆಳೆಸಿರಿ ಮಕ್ಕಳನು ಹೂವಂತೆ
ಯಾವಾಗಲೂ ಖುಷಿಯಲಿ ನಗುವಂತೆ
ವಿದ್ಯೆ ಬುದ್ಧಿ ತಿಳಿವಳಿಕೆಯ ನೀಡಿ
ಬೆಳೆಸಿರಿ ಮಕ್ಕಳನು ಬಾಗುವ ಬಳ್ಳಿಯಂತೆ
ಮಹಾಂತೇಶ ಎಸ್. ಪಾಟೀಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.