ಹೆಚ್ಚಿನ ವಿವರಗಳಿಗೆ ಲಿಂಕ್ ಕ್ಲಿಕ್ ಮಾಡಿ
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಅಮ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಮ್ಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಭಾನುವಾರ, ಮೇ 10, 2026
ಶುಕ್ರವಾರ, ಜುಲೈ 26, 2024
ತಾಯಿ - ತಂದೆ
ತಾಯಿ-ತಂದೆಯರು ನಮಗೆ ಕಲಿಸುವ ಪಾಠಗಳೆಂದು ಕರೆಯಬಹುದು...
ಹೇಗೆಂದರೆ
ತಾಯಿಂದ ದಯೆಯನ್ನು ಕಲಿಸಿದರೆ, ತಂದೆಯು ದೈರ್ಯವನ್ನು ಕಲಿಸುತ್ತಾರೆ.
ಇನ್ನೂ ಹೆಚ್ಚಿನ ಬಗ್ಗೆ ತಿಳಿಯುವದಾದರೆ ಅವುಗಳು ಈ ಕೆಳಗಿನಂತೆ ವಿವರಿಸಬಹುದು....
ತಾಯಿ ತಂದೆಯ ಮೇಲೆ ಪ್ರೀತಿ ಇರುವವರು
ಓದಿ, ಶೇರ್ ಮಾಡುವ ಅಕ್ಷರಗಳು
ಕ್ರ.ಸಂ ತಾಯಿ ತಂದೆ 1 ದಯೆ ದೈರ್ಯ 2 ಒಲವು ಗೆಲುವು 3 ಕನಿಕರ ಕಾಳಜಿ 4 ಚೈತನ್ಯ ಸಾಮರ್ಥ್ಯ 5 ಆದರ್ಶ ಆಶ್ರಯ 6 ಸಂಸ್ಕಾರ ಸಂಪ್ರದಾಯ 7 ವ್ಯಕ್ತಿತ್ವ ಅಸಿತ್ತ್ವ 8 ಪ್ರಾಣ ತ್ರಾಣ 9 ಸೃಷ್ಠಿ ದೃಷ್ಟಿ 10 ಕಾಮಧೇನು ಕಲ್ಪವೃಕ್ಷ 11 ಕನಸು ನನಸು 12 ಆರೈಕೆ ಆತ್ಮೀಯ 13 ರಕ್ಷಕಿ ಶಿಕ್ಷಕ 14 ದೀಪ ದ್ವೀಪ 15 ಜನ್ಮ ಜೀವನ 16 ಸಾಕ್ಷರತೆ ಸಾಧನೆ 17 ಸ್ಫೂರ್ತಿ ಭರವಸೆ 18 ಅಡಿಪಾಯ ಮೇಲ್ಚಾವಣಿ 19 ಹೂವು ಪರಿಮಳ 20 ನಂಬಿಕೆ ವಿಶ್ವಾಸ 21 ಮಮತೆ ಹಣತೆ 22 ಗುಡಿ ಗೋಪುರ
" ನಮ್ಮ ತಾಯಿ ತಂದೆಗೆ ನನ್ನ 🙏ನಮನಗಳು "
ಬುಧವಾರ, ಮೇ 10, 2023
ಅಮ್ಮಂದಿರ ದಿನದ ಕಿರು ಮಾಹಿತಿ
`ಅಮ್ಮಂದಿರ ದಿನ'!
" ಅಮ್ಮಂದಿಂರ ದಿನ ಯಾಕೆ ಮತ್ತು ಎಂದಿನಿಂದ ಆಚರಣೆ ಮಾಡುತ್ತಿದ್ದೇವೆ ಗೋತ್ತಾ..?
ಮತ್ತೊಂದು `ಅಮ್ಮಂದಿರ ದಿನ'! ಎಲ್ಲೆಡೆ ಕಾರ್ಡ್ ಕೊಳ್ಳುವ, ಹೂವಿನಿಂದ ವಜ್ರದವರೆಗೂ ಶಕ್ತ್ಯಾನುಸಾರ ಕೊಡುಗೆ ನೀಡಿ ಇನ್ನೊಂದು `ಅಮ್ಮಂದಿರ ದಿನ'ದವರೆಗೆ ಅಮ್ಮನನ್ನು ಮರೆತುಬಿಡುವ ಸಂಭ್ರಮ!
ಅಮ್ಮ ಸತ್ತ ಮೇಲೆ ಶ್ರಾದ್ಧ ಮಾಡಿ ನೆನಪಿಸಿಕೊಳ್ಳುವ (ಹೆಣ್ಣು ಮಕ್ಕಳಿಗೆ ಅದೂ ಇಲ್ಲ!) ಅಥವಾ `ಬೂದಿ ಬುಧವಾರ'ದಂದೋ, `ಮಹಾಲಯ ಅಮಾವಾಸ್ಯೆ'ಯಂದೋ ಪಿತೃಗಳಿಗೆ ತರ್ಪಣ ನೀಡುವ ನಮ್ಮ ಸಂಪ್ರದಾಯಗಳನ್ನೂ ಮೀರಿ ಇಂದು ಬೆಳೆದು ನಿಂತಿರುವ `ಮದರ್ಸ್ ಡೇ' ಬಂದಿದ್ದಾದರೂ ಎಲ್ಲಿಂದ? ದೂರದ ಅಮೆರಿಕೆಯಿಂದ. ಪಾಶ್ಚಾತ್ಯ ಜಗತ್ತಿನಲ್ಲೂ ಇರಬಹುದಾದ ಮೌಲ್ಯಯುತ ಜೀವನ- ಆಚರಣೆಗಳನ್ನು ಭಾಗಶಃವಾಗಿ ಮಾತ್ರ ಸ್ವೀಕರಿಸುವ ನಮ್ಮ ಎಂದಿನ ಅಭ್ಯಾಸದಂತೆ `ಮದರ್ಸ್ ಡೇ'ಯ ಹಿನ್ನೆಲೆ, ಮೌಲ್ಯ ಯಾವುದನ್ನೂ ತಿಳಿಯದೆ ನಾವು ಆಚರಿಸುವ ಈ ದಿನ ಅರ್ಥಹೀನವೇ ಸರಿ.
1870ರಲ್ಲಿ ಜೂಲಿಯಾ ವಾರ್ಡ್ ಎಂಬ ಮಹಿಳೆ ಶಾಂತಿಗಾಗಿ ಈ ದಿನವನ್ನು ಆರಂಭಿಸಿದಳು. ನಾಗರಿಕ ಯುದ್ಧದ ಸಾವು ನೋವುಗಳನ್ನು ಕಂಡ ಜೂಲಿಯಾ, ಎಲ್ಲ ತಾಯಂದಿರಿಗೆ `ನಿಮ್ಮ ಮಕ್ಕಳು ಮತ್ತೊಂದು ತಾಯಿಯ ಮಕ್ಕಳನ್ನು ಕೊಲ್ಲುವ ಕ್ರೌರ್ಯದ ವಿರುದ್ಧ ದನಿಯೆತ್ತಿ' ಎಂದು ಕರೆ ನೀಡಿದಳು. ತಾಯ್ತನ ಮತ್ತು ಶಾಂತಿಯ ಸಂಕೇತವಾಗಿ ಜೂಲಿಯಾ `ಅಮ್ಮಂದಿರ ದಿನ'ವನ್ನು ಆರಂಭಿಸಿದಳು.
ಇಂದಿನ ಮಹಿಳೆಯರೇ ಏಳಿ
ಹೃದಯವಿರುವ ಮಹಿಳೆಯರೇ ಏಳಿ
ನಿಮ್ಮ ಕಣ್ಣೀರಿನಿಂದ ಗಟ್ಟಿಯಾಗಿ ಹೇಳಿ
ಬಿಡಲಾರೆವು ನಾವು ಯಾರನ್ನೂ
ನಮ್ಮ ಮಕ್ಕಳಿಗೆ ಕಲಿಸಿದ ಸಹನೆ- ಶಾಂತಿ- ಮಮತೆಗಳ
ಕಸಿದುಕೊಳ್ಳಲು, ಕಳೆದುಕೊಳ್ಳಲು
ಬಿಡಲಾರೆವು ನಾವು ಯಾರನ್ನೂ
ಬಿಡಲಾರೆವು ನಾವು
ಸಿದ್ಧಗೊಳ್ಳಲು ನಮ್ಮ ಮಕ್ಕಳು
ಬೇರೆ ತಾಯ ಮಕ್ಕಳನ್ನು ಕೊಲ್ಲಲು!
ಇದು ಜೂಲಿಯಾಳ ಕನಸಾಗಿತ್ತು. ಜೂಲಿಯಾ ಈ ಉದ್ದೇಶಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸಿದಾಕ್ಷಣ `ತಾಯಂದಿರ ದಿನ'ದ ಆಚರಣೆಯೂ ನಿಂತಿತು. ಈ ಆಚರಣೆಗೆ ಪುನಶ್ಚೇತನ ನೀಡಿದ ತಾಯಿ- ಮಗಳ ಜೋಡಿ ಆ್ಯನ್ನಾ ಆ್ಯನ್ನ್ ಮೇರಿ ಹಾಗೂ ಆ್ಯನ್ನಾ ರೀವ್ಸ್ ಜಾರ್ವಿಸ್.
ಆ್ಯನ್ನ್ ಮೇರಿ 1832ರಲ್ಲಿ ವರ್ಜೀನಿಯಾದಲ್ಲಿ ಹುಟ್ಟಿದವಳು. ಸಮಾಜ ಸೇವಕಿಯಾಗಿದ್ದ ಆಕೆ ಸಮಾಜದ ಸ್ವಚ್ಛತೆ- ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಳು. `ತಾಯಂದಿರ ದಿನ'ದ ಕ್ಲಬ್ ಸ್ಥಾಪಿಸಿ ಅದರಿಂದ ಹಣ ಕೂಡಿಸಿ, ಕ್ಷಯದಿಂದ ಬಳಲುತ್ತಿದ್ದ ಮಹಿಳೆಯರ ಔಷಧಿಗೆ ವ್ಯಯಿಸುತ್ತಿದ್ದಳು. ಅಮೆರಿಕದ ನಾಗರಿಕ ಯುದ್ಧದ ಸಮಯದಲ್ಲಿ ತನ್ನ ನಾಲ್ವರು ಮಕ್ಕಳನ್ನು ಕಳೆದುಕೊಂಡಳು. ಒಟ್ಟಿನಲ್ಲಿ ತನ್ನ 12 ಮಕ್ಕಳಲ್ಲಿ 8 ಮಕ್ಕಳನ್ನು ದೊಡ್ಡವರಾಗುವ ಮೊದಲೇ ಕಳೆದುಕೊಂಡಳು.
ಇಂತಹ ವೈಯಕ್ತಿಕ ದುರಂತಗಳ ನಡುವೆಯೂ ತನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸಲಿಲ್ಲ. ಅಂದರೆ `ತಾಯಂದಿರ ದಿನ' ತನ್ನ ತಾಯಿಗೆ ನೀಡುವ ಕೊಡುಗೆಗಿಂತ, ಬೇರೆ `ತಾಯಂದಿರಿಗಾಗಿ' ಮಾಡುವ ಸೇವೆಯಾಗಿತ್ತು!
ಆ್ಯನ್ನ್ ಮೇರಿ 1907ರ ಮೇ ತಿಂಗಳ ಎರಡನೇ ಭಾನುವಾರ ಮೃತಳಾದಳು. ಮಗಳು ರೀವ್ಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ್ದ ಎಲ್ಲರಿಗೂ ತಾಯಿಯ ಪ್ರೀತಿಯ ಹೂವು ಬಿಳಿ ಗುಲಾಬಿಯನ್ನು ನೀಡಿದಳು. ರೀವ್ಸ್‌ಗೆ `ತಾಯಿಯ ದಿನ' ಕುಟುಂಬದ, ತನ್ನ ತಾಯಿ ತನಗಾಗಿ ಮಾಡಿದ ಎಲ್ಲದರ ನೆನಪಿನ ಸಂಭ್ರಮದ ಸ್ಮರಣೆಯಾಗಿತ್ತು.
1912ರಲ್ಲಿ `ತಾಯಿ ದಿನ'ದ ಆಚರಣೆಗಾಗಿಯೇ ಆಕೆ ಸಂಸ್ಥೆಯೊಂದನ್ನು ಹುಟ್ಟು ಹಾಕಿದಳು. ಕ್ರಮೇಣ ಬಂಡವಾಳಶಾಹಿಗಳಿಂದ ಆವರಿಸಿಕೊಂಡ ಎಲ್ಲ ಆಚರಣೆಗಳಂತೆ `ತಾಯಂದಿರ ದಿನ'ದ ಮೇಲೂ ಗ್ರೀಟಿಂಗ್ ಕಾರ್ಡು- ಹೂಗೊಂಚಲು- ಕೊಡುಗೆಗಳ ದಾಳಿ ಆರಂಭವಾಯಿತು. ಪ್ರೀತಿ, ಕೃತಜ್ಞತಾ ಭಾವನೆಗಿಂತ ಹಣವೇ ಬಂಡವಾಳವಾಯಿತು. ರೀವ್ಸ್ ಹೇಳಿದ್ದ ಕೃತಜ್ಞತೆಯ, ಪ್ರಾಮಾಣಿಕ ಭಾವನೆಗಳ ಕೈಬರಹದ ಪತ್ರಕ್ಕಿಂತ ಎರಡು ಸಾಲುಗಳ, ಯಾರು ಬೇಕಾದರೂ ಬರೆದಿರಬಹುದಾದ ಬಣ್ಣದ ಕಾರ್ಡುಗಳೇ ಹೆಚ್ಚಾದವು.
ರೀವ್ಸ್ ಇದರ ವಿರುದ್ಧ ದನಿಯೆತ್ತಿ `ತಾಯಂದಿರ ದಿನ'ದ ಸಲುವಾಗಿ ಬಿಳಿ ಬಣ್ಣದ ಹೂವಿನ ಕುಂಡಗಳನ್ನು ಕೊಡುಗೆಯಾಗಿ ಹಂಚತೊಡಗಿದಳು. ಅರ್ಥಪೂರ್ಣವಾಗಿ ಆಚರಿಸಲಾಗದ, ವ್ಯಾಪಾರಿ ಸಂಸ್ಕೃತಿಯ `ತಾಯಂದಿರ ದಿನ'ದ ವಿರುದ್ಧ ರೀವ್ಸ್ ಬಲವಾಗಿ ಕೆಲಸ ಮಾಡಲಾರಂಭಿಸಿದಳು. ಇದರ ವಿರುದ್ಧದ ಹೋರಾಟ ಆಕೆಯ ಮಾನಸಿಕ ಸ್ವಾಸ್ಥ್ಯವನ್ನೇ ಕೆಡಿಸಿತು.
1944ರಲ್ಲಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಾದ ಆಕೆ, 4 ವರ್ಷಗಳ ನಂತರ ಕೊನೆಯುಸಿರೆಳೆದಳು. ಆಕೆಗಾಗ 84 ವರ್ಷ. ಹಣವಾಗಲೀ, ಮಕ್ಕಳಾಗಲೀ ಆಗ ಅವಳ ಬಳಿ ಇರಲಿಲ್ಲ. ಮಕ್ಕಳಿರದ `ತಾಯಿ' ಹೃದಯದ ರೀವ್ಸ್ `ತಾಯಂದಿರ ದಿನ'ವನ್ನು ಹುಟ್ಟು ಹಾಕಿದ್ದು, ಅದನ್ನು ಬೆಳೆಸಿದ್ದು, ಅದರ ಅರ್ಥಪೂರ್ಣ ಆಚರಣೆಗೆ ಶ್ರಮಿಸಿದ್ದು, ಅವು ನಮಗೆ ಕೊಡುವ ಸಂದೇಶಗಳು ಅನೇಕ.
`ತಾಯಂದಿರ ದಿನ' ಅಮ್ಮಂದಿರಿಗೆ ಸಂತಸದೊಂದಿಗೆ ದುಃಖ ತರುವ ದಿನವೂ ಆಗಬಹುದಷ್ಟೆ. ಮಕ್ಕಳಿಲ್ಲದ `ಮಾತೆ'ಯರಿಗೆ ತಮಗೆ ಮಕ್ಕಳಿಲ್ಲ ಎಂದು ನೆನಪಿಸುವ ದಿನ. ಮಕ್ಕಳನ್ನು ಕಳೆದುಕೊಂಡ ತಾಯಿಗೆ ತನ್ನ ಮಕ್ಕಳನ್ನು ನೆನೆಯುವ ನೋವು ಅಥವಾ ತಾಯಿಯನ್ನು ಕಳೆದುಕೊಂಡ ಮಗಳಿಗೆ ತನ್ನ ತಾಯಿಯನ್ನು ಸ್ಮರಿಸುವ ದುಃಖದ ದಿನ. ಹಾಗೆಯೇ ತಾಯಿ ಪ್ರೀತಿ ಸಿಗದ ಕಂದಮ್ಮಗಳಿಗೆ `ಪ್ರೀತಿ' ಎಂದರೇನೆಂಬುದೇ ಅರ್ಥವಾಗಿಲ್ಲ ಎಂಬುದನ್ನು ನೆನಪಿಸುವ ಕ್ಷಣವೂ ಹೌದು.
ಇವೆಲ್ಲದರ ಮಧ್ಯೆ ಭಾರತದ `ಅಮ್ಮ'ನಂತೂ ಅನಾರೋಗ್ಯ, ಅನಕ್ಷರತೆ, ಬಡತನ, ಅತ್ಯಾಚಾರಗಳ ನಡುವೆ ನಲುಗಿ ಹೋಗಿರುವವಳು. ಹೊರಗೆ ದುಡಿಯುತ್ತಿದ್ದರೂ, ಆರ್ಥಿಕ ಸ್ವಾತಂತ್ರ್ಯ ಇಲ್ಲದ, ಓದಿದ್ದರೂ ತನ್ನ ಅಭಿಪ್ರಾಯ ಹೇಳಲಾಗದ, ಸದಾ ಮಕ್ಕಳು- ಮನೆಯ ಬಗ್ಗೆ ಚಿಂತಿಸುವ `ಅಮ್ಮ'ನಿಗೆ ತನ್ನ ಆರೋಗ್ಯ, ಆಸೆ, ಆಕಾಂಕ್ಷೆಗಳ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ. 16ರ ವಯಸ್ಸಿಗೇ ಮಕ್ಕಳನ್ನು ಹೆರುವ ಹುಡುಗಿ `ಅಮ್ಮ', 50ಕ್ಕೆ ಮಕ್ಕಳಿಬ್ಬರನ್ನೂ ಅಮೆರಿಕಕ್ಕೆ ಕಳುಹಿಸಿ ಹಳ್ಳಿಯಲ್ಲಿ ನಲುಗುವ `ಅಮ್ಮ' ಅಥವಾ 60ಕ್ಕೆ ಸಾಮರ್ಥ್ಯ ಇರದಿದ್ದರೂ ಮೊಮ್ಮಕ್ಕಳನ್ನು ಮಕ್ಕಳಂತೆ ಕಷ್ಟಪಟ್ಟು ಬೆಳೆಸುವ `ಅಮ್ಮ'... ಹೀಗೆ ಅಮ್ಮಂದಿರ ಜವಾಬ್ದಾರಿ ವೈವಿಧ್ಯಮಯ!
" ಅಮ್ಮಂದಿಂರ ದಿನ ಯಾಕೆ ಮತ್ತು ಎಂದಿನಿಂದ ಆಚರಣೆ ಮಾಡುತ್ತಿದ್ದೇವೆ ಗೋತ್ತಾ..?
ಮತ್ತೊಂದು `ಅಮ್ಮಂದಿರ ದಿನ'! ಎಲ್ಲೆಡೆ ಕಾರ್ಡ್ ಕೊಳ್ಳುವ, ಹೂವಿನಿಂದ ವಜ್ರದವರೆಗೂ ಶಕ್ತ್ಯಾನುಸಾರ ಕೊಡುಗೆ ನೀಡಿ ಇನ್ನೊಂದು `ಅಮ್ಮಂದಿರ ದಿನ'ದವರೆಗೆ ಅಮ್ಮನನ್ನು ಮರೆತುಬಿಡುವ ಸಂಭ್ರಮ!
ಅಮ್ಮ ಸತ್ತ ಮೇಲೆ ಶ್ರಾದ್ಧ ಮಾಡಿ ನೆನಪಿಸಿಕೊಳ್ಳುವ (ಹೆಣ್ಣು ಮಕ್ಕಳಿಗೆ ಅದೂ ಇಲ್ಲ!) ಅಥವಾ `ಬೂದಿ ಬುಧವಾರ'ದಂದೋ, `ಮಹಾಲಯ ಅಮಾವಾಸ್ಯೆ'ಯಂದೋ ಪಿತೃಗಳಿಗೆ ತರ್ಪಣ ನೀಡುವ ನಮ್ಮ ಸಂಪ್ರದಾಯಗಳನ್ನೂ ಮೀರಿ ಇಂದು ಬೆಳೆದು ನಿಂತಿರುವ `ಮದರ್ಸ್ ಡೇ' ಬಂದಿದ್ದಾದರೂ ಎಲ್ಲಿಂದ? ದೂರದ ಅಮೆರಿಕೆಯಿಂದ. ಪಾಶ್ಚಾತ್ಯ ಜಗತ್ತಿನಲ್ಲೂ ಇರಬಹುದಾದ ಮೌಲ್ಯಯುತ ಜೀವನ- ಆಚರಣೆಗಳನ್ನು ಭಾಗಶಃವಾಗಿ ಮಾತ್ರ ಸ್ವೀಕರಿಸುವ ನಮ್ಮ ಎಂದಿನ ಅಭ್ಯಾಸದಂತೆ `ಮದರ್ಸ್ ಡೇ'ಯ ಹಿನ್ನೆಲೆ, ಮೌಲ್ಯ ಯಾವುದನ್ನೂ ತಿಳಿಯದೆ ನಾವು ಆಚರಿಸುವ ಈ ದಿನ ಅರ್ಥಹೀನವೇ ಸರಿ.
1870ರಲ್ಲಿ ಜೂಲಿಯಾ ವಾರ್ಡ್ ಎಂಬ ಮಹಿಳೆ ಶಾಂತಿಗಾಗಿ ಈ ದಿನವನ್ನು ಆರಂಭಿಸಿದಳು. ನಾಗರಿಕ ಯುದ್ಧದ ಸಾವು ನೋವುಗಳನ್ನು ಕಂಡ ಜೂಲಿಯಾ, ಎಲ್ಲ ತಾಯಂದಿರಿಗೆ `ನಿಮ್ಮ ಮಕ್ಕಳು ಮತ್ತೊಂದು ತಾಯಿಯ ಮಕ್ಕಳನ್ನು ಕೊಲ್ಲುವ ಕ್ರೌರ್ಯದ ವಿರುದ್ಧ ದನಿಯೆತ್ತಿ' ಎಂದು ಕರೆ ನೀಡಿದಳು. ತಾಯ್ತನ ಮತ್ತು ಶಾಂತಿಯ ಸಂಕೇತವಾಗಿ ಜೂಲಿಯಾ `ಅಮ್ಮಂದಿರ ದಿನ'ವನ್ನು ಆರಂಭಿಸಿದಳು.
ಇಂದಿನ ಮಹಿಳೆಯರೇ ಏಳಿ
ಹೃದಯವಿರುವ ಮಹಿಳೆಯರೇ ಏಳಿ
ನಿಮ್ಮ ಕಣ್ಣೀರಿನಿಂದ ಗಟ್ಟಿಯಾಗಿ ಹೇಳಿ
ಬಿಡಲಾರೆವು ನಾವು ಯಾರನ್ನೂ
ನಮ್ಮ ಮಕ್ಕಳಿಗೆ ಕಲಿಸಿದ ಸಹನೆ- ಶಾಂತಿ- ಮಮತೆಗಳ
ಕಸಿದುಕೊಳ್ಳಲು, ಕಳೆದುಕೊಳ್ಳಲು
ಬಿಡಲಾರೆವು ನಾವು ಯಾರನ್ನೂ
ಬಿಡಲಾರೆವು ನಾವು
ಸಿದ್ಧಗೊಳ್ಳಲು ನಮ್ಮ ಮಕ್ಕಳು
ಬೇರೆ ತಾಯ ಮಕ್ಕಳನ್ನು ಕೊಲ್ಲಲು!
ಇದು ಜೂಲಿಯಾಳ ಕನಸಾಗಿತ್ತು. ಜೂಲಿಯಾ ಈ ಉದ್ದೇಶಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸಿದಾಕ್ಷಣ `ತಾಯಂದಿರ ದಿನ'ದ ಆಚರಣೆಯೂ ನಿಂತಿತು. ಈ ಆಚರಣೆಗೆ ಪುನಶ್ಚೇತನ ನೀಡಿದ ತಾಯಿ- ಮಗಳ ಜೋಡಿ ಆ್ಯನ್ನಾ ಆ್ಯನ್ನ್ ಮೇರಿ ಹಾಗೂ ಆ್ಯನ್ನಾ ರೀವ್ಸ್ ಜಾರ್ವಿಸ್.
ಆ್ಯನ್ನ್ ಮೇರಿ 1832ರಲ್ಲಿ ವರ್ಜೀನಿಯಾದಲ್ಲಿ ಹುಟ್ಟಿದವಳು. ಸಮಾಜ ಸೇವಕಿಯಾಗಿದ್ದ ಆಕೆ ಸಮಾಜದ ಸ್ವಚ್ಛತೆ- ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಳು. `ತಾಯಂದಿರ ದಿನ'ದ ಕ್ಲಬ್ ಸ್ಥಾಪಿಸಿ ಅದರಿಂದ ಹಣ ಕೂಡಿಸಿ, ಕ್ಷಯದಿಂದ ಬಳಲುತ್ತಿದ್ದ ಮಹಿಳೆಯರ ಔಷಧಿಗೆ ವ್ಯಯಿಸುತ್ತಿದ್ದಳು. ಅಮೆರಿಕದ ನಾಗರಿಕ ಯುದ್ಧದ ಸಮಯದಲ್ಲಿ ತನ್ನ ನಾಲ್ವರು ಮಕ್ಕಳನ್ನು ಕಳೆದುಕೊಂಡಳು. ಒಟ್ಟಿನಲ್ಲಿ ತನ್ನ 12 ಮಕ್ಕಳಲ್ಲಿ 8 ಮಕ್ಕಳನ್ನು ದೊಡ್ಡವರಾಗುವ ಮೊದಲೇ ಕಳೆದುಕೊಂಡಳು.
ಇಂತಹ ವೈಯಕ್ತಿಕ ದುರಂತಗಳ ನಡುವೆಯೂ ತನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸಲಿಲ್ಲ. ಅಂದರೆ `ತಾಯಂದಿರ ದಿನ' ತನ್ನ ತಾಯಿಗೆ ನೀಡುವ ಕೊಡುಗೆಗಿಂತ, ಬೇರೆ `ತಾಯಂದಿರಿಗಾಗಿ' ಮಾಡುವ ಸೇವೆಯಾಗಿತ್ತು!
ಆ್ಯನ್ನ್ ಮೇರಿ 1907ರ ಮೇ ತಿಂಗಳ ಎರಡನೇ ಭಾನುವಾರ ಮೃತಳಾದಳು. ಮಗಳು ರೀವ್ಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ್ದ ಎಲ್ಲರಿಗೂ ತಾಯಿಯ ಪ್ರೀತಿಯ ಹೂವು ಬಿಳಿ ಗುಲಾಬಿಯನ್ನು ನೀಡಿದಳು. ರೀವ್ಸ್‌ಗೆ `ತಾಯಿಯ ದಿನ' ಕುಟುಂಬದ, ತನ್ನ ತಾಯಿ ತನಗಾಗಿ ಮಾಡಿದ ಎಲ್ಲದರ ನೆನಪಿನ ಸಂಭ್ರಮದ ಸ್ಮರಣೆಯಾಗಿತ್ತು.
1912ರಲ್ಲಿ `ತಾಯಿ ದಿನ'ದ ಆಚರಣೆಗಾಗಿಯೇ ಆಕೆ ಸಂಸ್ಥೆಯೊಂದನ್ನು ಹುಟ್ಟು ಹಾಕಿದಳು. ಕ್ರಮೇಣ ಬಂಡವಾಳಶಾಹಿಗಳಿಂದ ಆವರಿಸಿಕೊಂಡ ಎಲ್ಲ ಆಚರಣೆಗಳಂತೆ `ತಾಯಂದಿರ ದಿನ'ದ ಮೇಲೂ ಗ್ರೀಟಿಂಗ್ ಕಾರ್ಡು- ಹೂಗೊಂಚಲು- ಕೊಡುಗೆಗಳ ದಾಳಿ ಆರಂಭವಾಯಿತು. ಪ್ರೀತಿ, ಕೃತಜ್ಞತಾ ಭಾವನೆಗಿಂತ ಹಣವೇ ಬಂಡವಾಳವಾಯಿತು. ರೀವ್ಸ್ ಹೇಳಿದ್ದ ಕೃತಜ್ಞತೆಯ, ಪ್ರಾಮಾಣಿಕ ಭಾವನೆಗಳ ಕೈಬರಹದ ಪತ್ರಕ್ಕಿಂತ ಎರಡು ಸಾಲುಗಳ, ಯಾರು ಬೇಕಾದರೂ ಬರೆದಿರಬಹುದಾದ ಬಣ್ಣದ ಕಾರ್ಡುಗಳೇ ಹೆಚ್ಚಾದವು.
ರೀವ್ಸ್ ಇದರ ವಿರುದ್ಧ ದನಿಯೆತ್ತಿ `ತಾಯಂದಿರ ದಿನ'ದ ಸಲುವಾಗಿ ಬಿಳಿ ಬಣ್ಣದ ಹೂವಿನ ಕುಂಡಗಳನ್ನು ಕೊಡುಗೆಯಾಗಿ ಹಂಚತೊಡಗಿದಳು. ಅರ್ಥಪೂರ್ಣವಾಗಿ ಆಚರಿಸಲಾಗದ, ವ್ಯಾಪಾರಿ ಸಂಸ್ಕೃತಿಯ `ತಾಯಂದಿರ ದಿನ'ದ ವಿರುದ್ಧ ರೀವ್ಸ್ ಬಲವಾಗಿ ಕೆಲಸ ಮಾಡಲಾರಂಭಿಸಿದಳು. ಇದರ ವಿರುದ್ಧದ ಹೋರಾಟ ಆಕೆಯ ಮಾನಸಿಕ ಸ್ವಾಸ್ಥ್ಯವನ್ನೇ ಕೆಡಿಸಿತು.
1944ರಲ್ಲಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಾದ ಆಕೆ, 4 ವರ್ಷಗಳ ನಂತರ ಕೊನೆಯುಸಿರೆಳೆದಳು. ಆಕೆಗಾಗ 84 ವರ್ಷ. ಹಣವಾಗಲೀ, ಮಕ್ಕಳಾಗಲೀ ಆಗ ಅವಳ ಬಳಿ ಇರಲಿಲ್ಲ. ಮಕ್ಕಳಿರದ `ತಾಯಿ' ಹೃದಯದ ರೀವ್ಸ್ `ತಾಯಂದಿರ ದಿನ'ವನ್ನು ಹುಟ್ಟು ಹಾಕಿದ್ದು, ಅದನ್ನು ಬೆಳೆಸಿದ್ದು, ಅದರ ಅರ್ಥಪೂರ್ಣ ಆಚರಣೆಗೆ ಶ್ರಮಿಸಿದ್ದು, ಅವು ನಮಗೆ ಕೊಡುವ ಸಂದೇಶಗಳು ಅನೇಕ.
`ತಾಯಂದಿರ ದಿನ' ಅಮ್ಮಂದಿರಿಗೆ ಸಂತಸದೊಂದಿಗೆ ದುಃಖ ತರುವ ದಿನವೂ ಆಗಬಹುದಷ್ಟೆ. ಮಕ್ಕಳಿಲ್ಲದ `ಮಾತೆ'ಯರಿಗೆ ತಮಗೆ ಮಕ್ಕಳಿಲ್ಲ ಎಂದು ನೆನಪಿಸುವ ದಿನ. ಮಕ್ಕಳನ್ನು ಕಳೆದುಕೊಂಡ ತಾಯಿಗೆ ತನ್ನ ಮಕ್ಕಳನ್ನು ನೆನೆಯುವ ನೋವು ಅಥವಾ ತಾಯಿಯನ್ನು ಕಳೆದುಕೊಂಡ ಮಗಳಿಗೆ ತನ್ನ ತಾಯಿಯನ್ನು ಸ್ಮರಿಸುವ ದುಃಖದ ದಿನ. ಹಾಗೆಯೇ ತಾಯಿ ಪ್ರೀತಿ ಸಿಗದ ಕಂದಮ್ಮಗಳಿಗೆ `ಪ್ರೀತಿ' ಎಂದರೇನೆಂಬುದೇ ಅರ್ಥವಾಗಿಲ್ಲ ಎಂಬುದನ್ನು ನೆನಪಿಸುವ ಕ್ಷಣವೂ ಹೌದು.
ಇವೆಲ್ಲದರ ಮಧ್ಯೆ ಭಾರತದ `ಅಮ್ಮ'ನಂತೂ ಅನಾರೋಗ್ಯ, ಅನಕ್ಷರತೆ, ಬಡತನ, ಅತ್ಯಾಚಾರಗಳ ನಡುವೆ ನಲುಗಿ ಹೋಗಿರುವವಳು. ಹೊರಗೆ ದುಡಿಯುತ್ತಿದ್ದರೂ, ಆರ್ಥಿಕ ಸ್ವಾತಂತ್ರ್ಯ ಇಲ್ಲದ, ಓದಿದ್ದರೂ ತನ್ನ ಅಭಿಪ್ರಾಯ ಹೇಳಲಾಗದ, ಸದಾ ಮಕ್ಕಳು- ಮನೆಯ ಬಗ್ಗೆ ಚಿಂತಿಸುವ `ಅಮ್ಮ'ನಿಗೆ ತನ್ನ ಆರೋಗ್ಯ, ಆಸೆ, ಆಕಾಂಕ್ಷೆಗಳ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ. 16ರ ವಯಸ್ಸಿಗೇ ಮಕ್ಕಳನ್ನು ಹೆರುವ ಹುಡುಗಿ `ಅಮ್ಮ', 50ಕ್ಕೆ ಮಕ್ಕಳಿಬ್ಬರನ್ನೂ ಅಮೆರಿಕಕ್ಕೆ ಕಳುಹಿಸಿ ಹಳ್ಳಿಯಲ್ಲಿ ನಲುಗುವ `ಅಮ್ಮ' ಅಥವಾ 60ಕ್ಕೆ ಸಾಮರ್ಥ್ಯ ಇರದಿದ್ದರೂ ಮೊಮ್ಮಕ್ಕಳನ್ನು ಮಕ್ಕಳಂತೆ ಕಷ್ಟಪಟ್ಟು ಬೆಳೆಸುವ `ಅಮ್ಮ'... ಹೀಗೆ ಅಮ್ಮಂದಿರ ಜವಾಬ್ದಾರಿ ವೈವಿಧ್ಯಮಯ!
`ಅಮ್ಮಂದಿರ ದಿನ' ಅಮೆರಿಕದಿಂದ ಬಂದ ಅರ್ಥಪೂರ್ಣ ಆಚರಣೆ ಎಂದು ಬೀಗುತ್ತಿದ್ದ ನಮಗೆ ಅದೊಂದು `ಭ್ರಮೆ' ಎಂಬುದು ಅರಿವಾಗಬೇಕಿದೆ. `ಅಮ್ಮಂದಿರ ದಿನ'ವಾಗಲೀ, `ಶ್ರಾದ್ಧ'ವಾಗಲೀ `ಅಮ್ಮ'ನನ್ನು ನೆನೆಸುವ ಮತ್ಯಾವುದೇ ಆಚರಣೆಯಾಗಲೀ, ಪ್ರಾಯೋಗಿಕವಾಗಿ ಅದು ಸಂಕೇತಿಸುವ ಮೌಲ್ಯಗಳು `ರೂಢಿ'ಗಳಾಗಿ ಬದಲಾಗಬೇಕು. `ಅಮ್ಮ'ನಿಗೆ ಸಮಯ ಕೊಡದ, `ಅಮ್ಮ'ನ ಆರೋಗ್ಯದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ, ನಮ್ಮ `ಅಮ್ಮ'ನನ್ನು ನನ್ನ ಹೆಂಡತಿ/ ಅತ್ತಿಗೆ/ ಅಣ್ಣ- ತಮ್ಮ- ಅಕ್ಕ- ತಂಗಿ ನೋಡಿಕೊಳ್ಳಲಿ ಎನ್ನುವ ನಾವು ಬಹುತೇಕರು, ಇಂದು ಕೇವಲ `ಅಮ್ಮಂದಿರ ದಿನ'ದ ಭ್ರಮೆಯಲ್ಲಿ ಬದುಕುತ್ತಿದ್ದೇವೆ ಅನಿಸುತ್ತಿದೆ ಅಲ್ಲವೇ?
ಮಂಗಳವಾರ, ಮೇ 10, 2022
ಇದು ಅವ್ವನ ದಿನ (Mother's Day)
ಅವ್ವ, ಅಮ್ಮ ಅಂತ ಅಂದ್ರೆ ಯಾರಿಗೆ ತಾನೇ ಇಶ್ಟಾ ಇಲ್ಲಾ ಹೇಳಿ. ಎಲ್ಲರೂ ಅವ್ವನನ್ನು ಪೂಜಿಸುವವರೆ. ನಮ್ಮ ಅವ್ವಂದಿರು ಮಾಡಿರುವ ತ್ಯಾಗ, ಅವರ ಪ್ರೀತಿಗೆ, ಮಮತೆಗೆ ಬೆಲೆಯಿಲ್ಲ. ಈ ಸಾರಿಯ ಅವ್ವಂದಿರ ದಿನಕ್ಕೆ ನೂರು ವರುಶದ ಹುರುಶ. ಆದರೆ ಇಂತಹ ಅವ್ವಂದಿರ ದಿನಕ್ಕೆ ನೋವಿನ ಹಿನ್ನೆಲೆಯಿದೆ ಅಂದರೆ ನೀವು ನಂಬುತ್ತೀರಾ? ಇದಕ್ಕಾಗಿ ಅನ್ನಾ ಜಾರ‍್ವೀಸ್ ತನ್ನ ಸಂಪತ್ತನ್ನೆಲ್ಲಾ ಕಳೆದುಕೊಂಡಳು, ಒಂದು ಮುರುಕಲು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.
ಈ ಕತೆ ಶುರುವಾಗುವುದು 1850 ರ ಸಮಯದಲ್ಲಿ. ಪಡುವಣ ವರ‍್ಜೀನಿಯಾ ಮಹಿಳೆಯರ ಗುಂಪಿನ ಮುಂದಾಳಾದ ಆನ್ ರೀವ್ಸ್ ಜಾರ‍್ವೀಸ್, ಅನ್ನಾ ಜಾರ‍್ವೀಸ್ ಳ ತಾಯಿ ಅವ್ವಂದಿರ ದಿನದಂದು ರೋಗಗಳ ವಿರುದ್ದ ಹೋರಾಡಲು, ಹಾಲು ಅಶುದ್ದಿಯ ವಿರುದ್ದ, ಆರೋಗ್ಯದ ಚೊಕ್ಕಟತೆಯದ ಬಗ್ಗೆ ಹಾಗೂ ಕೂಸು ಮರಣದ (Infant Mortality) ಯ ಬಗ್ಗೆ ಅರಿವು ಮೂಡಿಸಲು ಶಿಬಿರಗಳನ್ನು ಏರ‍್ಪಾಡು ಮಾಡುತ್ತಿದ್ದಳು. ಇದರ ಜೊತೆಜೊತೆಗೆ ಈ ಗುಂಪು 1861-1865 ರ ಅಮೇರಿಕಾದ ಜನರ ಕಾಳಗದಲ್ಲಿ ಎರಡೂ ಪಂಗಡ ಗಾಯಾಳುಗಳನ್ನು ಆರಯ್ಕೆ ಮಾಡುತ್ತಿದ್ದರು.
ಕಾಳಗದ ನಂತರದ ದಿನಗಳಲ್ಲಿ ಜಾರ‍್ವೀಸ್ ಮತ್ತು ಬಳಗ ಅವ್ವಂದಿರ ಗೆಳೆತನದ ದಿನ ಹೊರಊಟ (Picnic) ಮತ್ತು ಇತರೇ ಕೆಲಸಗಳ ಮೂಲಕ ಎರಡೂ ಕಡೆಯ ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದರು. ಇದೇ ಸಮಯದಲ್ಲಿ ಆನ್ ಜಾರ‍್ವೀಸ್ ಅವ್ವಂದಿರ ಗೆಳೆತನದ ದಿನದ ಮೂಲಕ ಬೆಂಬಲಿಗರನ್ನು ಒಗ್ಗೂಡಿಸುವ ಕೆಲಸ ಮಾಡಿತ್ತಿದ್ದಳು. ಆದರೆ ಅನ್ನಾ ಜಾರ್‍ವೀಸ್ ಮಾಡಿದ ಕೆಲಸಗಳೇ ನಮ್ಮ ಇಂದಿನ ಅವ್ವಂದಿರ ದಿನಕ್ಕೆ ಕಾರಣ.
ಅವ್ವನ ದಿನ:
ಅನ್ನಾ ಜಾರ‍್ವೀಸ್ ಗೆ ತನ್ನದೇ ಆದ ಮಕ್ಕಳಿರಲಿಲ್ಲ. ಆದರೆ 1905 ರಲ್ಲಿ ತೀರಿಹೋದ ತನ್ನ ಅವ್ವನ ನೆನಪಿನಲ್ಲಿ 1908 ರಲ್ಲಿ ಮೊದಲ ಅವ್ವನ ದಿನವನ್ನು ಮಾಡಲಾಯಿತು. 1908 ರ ಮೇ ತಿಂಗಳಿನಲ್ಲಿ ಪಡುವಣ ವರ‍್ಜೀನಿಯಾದ ಗ್ರಾಪ್ಟನ್ ನಲ್ಲಿದ್ದ ಚರ‍್ಚ್ ಒಂದರಲ್ಲಿ ಕುಟುಂಬದ ಸದಸ್ಯರೆಲ್ಲ ಕೂಡಿ ಕಾರ‍್ಯಕ್ರಮವೊಂದನ್ನು ಮಾಡಿದರು. ಈಗ ಆ ಚರ‍್ಚ್ ಅನ್ನು “ಅಂತರಾಶ್ಟ್ರೀಯ ಅವ್ವನ ದಿನದ ಗುಡಿ” (International Mother’s Day Shrine) ಎಂದು ಕರೆಯಲಾಗುತ್ತದೆ. ಇದರ ಜೊತೆಜೊತೆಗೆ ಪಿಲಾಡೆಲ್ಪಿಯಾದ ಚರ‍್ಚ್ ಹಾಗೂ ಇನ್ನು ಅನೇಕ ನಗರಗಳಲ್ಲಿ ಈ ಹೆಸರಿನ ಚರ‍್ಚ್ ಗಳನ್ನು ನೋಡಬಹುದು.
ಹೆಚ್ಚಾಗಿ ಜಾರ‍್ವೀಸ್ ಅವರ ಪ್ರಯತ್ನದಿಂದಾಗಿ ಅಮೇರಿಕಾದ ಹೆಚ್ಚಿನ ನಗರಗಳಲ್ಲಿ ಹಾಗೂ ರಾಜ್ಯಗಳಲ್ಲಿ ಅವ್ವನ ದಿನ ಆಚರಣೆ ಜಾರಿಗೆ ಬಂತು. ಇದಾದ ನಂತರ ಅಂದಿನ ಅಮೇರಿಕಾದ ಅದ್ಯಕ್ಶರಾಗಿದ್ದ ವುಡ್ ರೋವ್ ವಿಲ್ಸನ್ ಮೇ ತಿಂಗಳ ಎರಡನೇ ಬಾನುವಾರವನ್ನು ಅವ್ವನ ದಿನ ಎಂದು 1914 ರಲ್ಲಿ ಆದೇಶ ಹೊರಡಿಸಿದರು. ಆದರೆ ಜಾರ‍್ವೀಸ್ ಅವರ ಕನಸು ಇದಾಗಿರಲಿಲ್ಲ. ಅವರ ಪ್ರಕಾರ “ಈ ದಿನ ನೀವು ನಿಮ್ಮ ಮನೆಗೆ ಹೋಗಿ ನಿಮ್ಮ ಅವ್ವನ ಜೊತೆ ಸಮಯವನ್ನು ಕಳೆದು, ಅವಳು ಮಾಡಿರುವ ತ್ಯಾಗಕ್ಕೆ ವಂದನೆಗಳನ್ನು ಹೇಳುವುದು ಆಗುತ್ತು”. ಅನ್ನಾ ಜಾರ‍್ವೀಸ್ ಬಗ್ಗೆ ಪಿ.ಎಚ್.ಡಿ ಮಾಡಿರುವ ಅಂಟೋಲಿನಿ ಈ ಕೆಳಗಿನ ಮಾತುಗಳನ್ನು ಹೇಳುತ್ತಾರೆ.
It wasn’t to celebrate all mothers. It was to celebrate the best mother you’ve ever known—your mother—as a son or a daughter.” That’s why Jarvis stressed the singular “Mother’s Day,” rather than the plural “Mothers’ Day.”
ಆದರೆ ಕೆಲವೇ ವರುಶಗಳಲ್ಲಿ ಜಾರ‍್ವೀಸ್ ಕಂಡಿದ್ದ ಕನಸು ಅವರ ಕಣ್ಣ ಮುಂದೆಯೇ ಸೋಲತೊಡಗಿತ್ತು.
ಸೋತ ಅವ್ವನ ದಿನ:
ಅನ್ನಾ ಜಾರ‍್ವೀಸ್ ಕಂಡಿದ್ದ ಕುಟುಂಬದವರು ಮಾತ್ರ ಆಚರಿಸಬೇಕಾಗಿದ್ದ ಅವ್ವನ ದಿನ ಮಾರುಕಟ್ಟೆಯ ಹಾದಿ ಹಿಡಿಯಿತು. ಅವ್ವನ ದಿನ ಅವ್ವಂದಿರ ದಿನವಾಗಿ ಬದಲಾಯಿತು. ಈ ದಿನ ಮಾರುಕಟ್ಟೆಗೆ ಬಂಗಾರದ ಗಣಿಯಾಗಿ ಪರಿಣಮಿಸಿತು. ಹೂವುಗಳನ್ನು ಕೊಳ್ಳುವುದು, ಕೊಡುವುದು, ಸಿಹಿ ತಿಂಡಿಗಳು ಮತ್ತು ಗ್ರೀಟಿಂಗ್ ಕಾರ‍್ಡ್ ಗಳನ್ನು ಕಳಿಸುವುದು. ಇವುಗಳು ಜಾರ‍್ವೀಸ್ ಅವರನ್ನು ಬೇಜಾರಿಗೆ ನೂಕಿದವು. ಆಗ ಅವರು ಮತ್ತು ಅವರ ಚಿಂತನೆಯನ್ನು ಒಪ್ಪುತ್ತಿದ್ದ ಕೆಲವರು ಹಿಂದೆ ಅವ್ವನ ದಿನ ಇದ್ದಂತಹ ರೀತಿ ಮರುಳಿಸಬೇಕು ಎಂದು ಅಣಿಗೊಳಿಸಿಕೊಂಡರು.
ಅನ್ನಾ ಜಾರ‍್ವೀಸ್ Mother’s Day International Association ಒಂದನ್ನು ಶುರು ಮಾಡಿ ಅದರ ಮೂಲಕ ಈ ದಿನದ ಬಗ್ಗೆ ಹಿಡಿದ ಪಡೆದುಕೊಳ್ಳಲು ಯತ್ನಿಸಿದರು. ಮಾರುಕಟ್ಟೆ ಹಾದಿ ಹಿಡಿದ ಈ ದಿನ ವಿರುದ್ದ ಪ್ರತಿಬಟನೆಗಳನ್ನು ಮಾಡಿದರು. ಕಾನೂನಿನ ಮೂಲಕ ಹೋರಾಟದ ಎಚ್ಚರಿಕೆಗಳನ್ನು ನೀಡಿದರು. ಇದಲ್ಲದೇ ಅವ್ವಂದಿರ ದಿನದಂದು ಚಂದಾ ಎತ್ತುತ್ತಿದ್ದ ಅಮೇರಿಕಾದ ಮೊದಲ ಮಹಿಳೆ ಎಲೆನಾರ್ ರೂಸೋವೆಲ್ಟ್ ಅವರ ವಿರುದ್ದ ಪ್ರತಿಬಟಿಸಿದರು. ಇವರ ಪ್ರತಿಬಟನೆ ಯಾವ ಮಟ್ಟಕ್ಕಿತ್ತೆಂದರೆ 1923 ರಲ್ಲಿ ಮಿಟಾಯಿ ಮಾಡುವವರ ಸಮ್ಮೇಳನದಲ್ಲಿ ನುಗ್ಗಿ ಗಲಾಟೆ ಮಾಡಿದರು. ಇದಾದ ನಂತರ 1925 ರಲ್ಲಿ ನಡೆಯುತ್ತಿದ್ದ ಅವ್ವಂದಿರ ದಿನ ಯುದ್ದದಲ್ಲಿ ತಮ್ಮವರನ್ನು ಕಳೆದುಕೊಂಡಿದ್ದ ಜನರು ಚಂದಾ ಎತ್ತಲು ನಡೆಸುತ್ತಿದ್ದ ಸಮ್ಮೇಳನಕ್ಕೆ ನುಗ್ಗಿ ಗಲಾಟೆ ಮಾಡಿ ಬಂದನಕ್ಕೊಳಗಾದರು.
ಅವ್ವಂದಿರ ದಿನವನ್ನು ತಾನದುಕೊಂಡ ರೀತಿಯಲ್ಲಿ ಕೇವಲ ಅವ್ವನ ನೆನಪಿಗೆ ಮಾತ್ರವಿರಬೇಕೆಂಬ ಹಂಬಲದಿಂದ 1940 ರ ಮೊದಲ ಕೆಲವು ವರುಶಗಳವರೆಗೂ ಜಾರ‍್ವೀಸ್ ಹೋರಾಡುತ್ತಾರೆ. 1948 ರಲ್ಲಿ ಜಾರ‍್ವೀಸ್ ತನ್ನ 84ನೇ ಇಳಿವಯಸ್ಸಿನಲ್ಲಿ ಪಿಲಾಡೆಲ್ಪಿಯಾದ ಮಾರ‍್ಶಲ್ ಸ್ಕ್ವೇರ್ ಎಂಬ ಮುರುಕಲು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ. ಇದರ ಬಗ್ಗೆ ಅಂಟೋಲಿನಿ “ಬುದ್ದಿ ಕಳೆದುಕೊಂಡ ಸ್ತಿತಿಯಲ್ಲಿ, ಒಂದು ಕಿಲುಬು ಕಾಸಿಲ್ಲದೆ ಸಣ್ಣ ಆಸ್ಪತ್ರೆಯೊಂದರಲ್ಲಿ ಸತ್ತ ಈ ಹೆಣ್ಣು ಮಗಳು, ಬೇಕಿದ್ದರೆ ಅವ್ವಂದಿರ ದಿನದ ಹೆಸರಿನಲ್ಲಿ ಬಹಳಶ್ಟು ದುಡ್ಡು ಮಾಡಬಹುದಾಗಿತ್ತು. ಆದರೆ ಇದರ ದುರುಪಯೋಗ ಪಡಿಸಿಕೊಂಡವರ ವಿರುದ್ದ ಹೋರಾಡಿ ತನ್ನ ಹಣ ಮತ್ತು ದೇಹದ ಶಕ್ತಿ ಎರಡನ್ನೂ ಕಳೆದುಕೊಂಡಳು” ಎಂದು ಹೇಳುತ್ತಾರೆ.
ಇವತ್ತಿನ ಅವ್ವಂದಿರ ದಿನ: ಬ್ರಂಚ್, ಹೂಗುಚ್ಚ, ಒಡವೆಗಳು
ಇವತ್ತು ಅವ್ವಂದಿರ ದಿನ ಮಾರುಕಟ್ಟೆಯ ಕೊಳ್ಳುಬಾಕ ಸ್ತಿತಿಯ ಮೇಲೆ ನಡೆಯುತ್ತಿದೆ. ನ್ಯಾಶನಲ್ ರಿಟೇಲ್ ಪೆಡರೇಶನ್ ಪ್ರಕಾರ ಈ ವರುಶ ಅಮೇರಿಕನ್ನರು ತಮ್ಮ ಅವ್ವಂದಿರ ಮೇಲೆ $162.94 ದುಡ್ಡನ್ನು ಕರ‍್ಚು ಮಾಡಿದ್ದಾರೆ. ಇದು ಕಳೆದ ವರುಶಕ್ಕಿಂತ ಕಡಿಮೆಯಿದೆ. ಹೋದ ವರುಶ ಇದು $168.94 ಇತ್ತು. ಒಟ್ಟು ಕರ‍್ಚು $19.9 ಬಿಲಿಯನ್ ದಾಟಲಿದೆ ಎಂದು ಅಂದಾಜಿಸಲಾಗಿದೆ. ಅಮೇರಿಕಾದ ನ್ಯಾಶನಲ್ ರೆಸ್ಟೂರ ಅಸೋಶಿಯೇಶನ್ ಪ್ರಕಾರ ಅವ್ವಂದಿರ ದಿನ ಅತಿ ಹೆಚ್ಚು ಜನರು ಹೊರಗೆ ಊಟ ಮಾಡಲು ಬಯಸುವ ರಜೆ ದಿನವಾಗಿದೆ. ಹಾಲ್ ಮಾರ‍್ಕ್ಸ್ ಕಾರ‍್ಡ್ 1920 ರಲ್ಲಿ ಮೊದಲ ಬಾರಿಗೆ ಅವ್ವಂದಿರ ದಿನದ ಚೀಟಿಗಳನ್ನು ಹೊರಬಿಟ್ಟಿತ್ತು. ಅದು ಹೇಳುವ ಪ್ರಕಾರ ಕ್ರಿಸ್ಮಸ್ ಮತ್ತು ವ್ಯಾಲಂಟಯ್ನ್ ದಿನದ ನಂತರ ಅವ್ವಂದಿರ ದಿನವೇ ಅತಿ ಹೆಚ್ಚಿ ಚೀಟಿಗಳು ಮಾರಾಟವಾಗುವ ದಿನ.
ಅವ್ವಂದಿರ ದಿನ ಪ್ರಪಂಚಕ್ಕೆ ಹರಡಿದೆ:
ಅನ್ನಾ ಜಾರ‍್ವೀಸ್ ಹುಟ್ಟುಹಾಕಿದೆ ರಜೆ ಇಂದು ಪ್ರಪಂಚದೆಲ್ಲೆಡೆ ಹರಡಿದೆ. ಇದನ್ನು ಹಲವಾರು ರೀತಿಗಳಲ್ಲಿ, ಉತ್ಸಾಹದಿಂದ ಮತ್ತು ಬೇರೆ ಬೇರೆ ದಿನಗಳಂದು ಆಚರಿಸಲಾಗುತ್ತಿದೆ. ಹೆಚ್ಚಾಗಿ ಮೇ ತಿಂಗಳ ಎರಡನೆಯ ಬಾನುವಾರದಂದು. ಅರಬ್ ದೇಶಗಳಲ್ಲಿ, ಅವ್ವಂದಿರ ದಿನವನ್ನು ಮಾರ‍್ಚ್ 21 ಕ್ಕೆ ಆಚರಿಸಲಾಗುತ್ತದೆ. ಪನಾಮಾ ದೇಶದಲ್ಲಿ ಡಿಸೆಂಬರ್ 8 ಕ್ಕೆ ಆಚರಿಸಲಾಗುತ್ತದೆ, ಇದೇ ದಿನ ಕ್ಯಾತೋಲಿಕ್ ಚರ‍್ಚ್ ಗಳು ವರ‍್ಜಿನ್ ಮೇರಿಯ ಹಬ್ಬವನ್ನು ಆಚರಿಸುತ್ತವೆ. ತಾಯ್ಲ್ಯಾಂಡ್ ನಲ್ಲಿ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಇದು ರಾಣಿ ಸಿರಿಕಿತ್ ಅವರ ಹುಟ್ಟಿದ ದಿನ. ಈ ರಾಣಿ 1956 ರಿಂದ ರಾಜ್ಯಬಾರ ವಹಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ತಾಯ್ ದೇಶದವರು ಇವರನ್ನು ತಮ್ಮ ತಾಯಿಯಂದು ತಿಳಿದುಕೊಂಡಿದ್ದಾರೆ.
ಬ್ರಿಟನ್ ನಲ್ಲಿ ನೂರಾರು ವರುಶಗಳಾದ ಹಳೆಯದಾದ ಮದರಿಂಗ್ ಸಂಡೆ ಆಚರಣೆಯಲ್ಲಿದೆ. ಅಂದು ಜನರು ಅವರ ಪ್ರದೇಶದ ಮುಕ್ಯ ಚರ‍್ಚ್ ಅತವಾ ತಾಯಿ ಚರ‍್ಚಿಗೆ ಹೋಗುತ್ತಾರೆ. ಈ ಮದರಿಂಗ್ ಸಂಡೆ ಚರ್‍ಚ್ ಗಳು ಹಲವಾರು ಕುಟುಂಬಗಳನ್ನು ಕೂಡಿಸಿರುವ ಇತಿಹಾಸವಿದೆ. ಇದು ನಂತರ ಬ್ರಿಟನ್ನಿನ ಅವ್ವಂದಿರ ದಿನವಾಗಿ ಮಾರ‍್ಪಟ್ಟಿದೆ.
ಮಂಗಳವಾರ, ಜೂನ್ 22, 2021
ಅಮ್ಮ ದೇವರು (Lord Mother)
ಅಮ್ಮ ಎನ್ನಲು ಬರುವಳು ತಾಯಿ,
ಕಂದಾ ಎನ್ನುತ ನನಗಾಗಿ..
ಅಮ್ಮ ಎನ್ನಲು ಕರುಣೆಯ ಕಡಲಿವಳು,
ಮುಕ್ಕೋಟಿ ದೇವರ ಪ್ರೀತಿಯ ಮಗಳಿವಳು,
ನನ್ನ ಮುದ್ದಿಸೋ ತಾಯಿ ಇವಳು..
ಅಮ್ಮ ಎನ್ನಲು ತ್ಯಾಗದ ಬಾನಿವಳು,
ಎಲ್ಲಾ ಕಷ್ಟವ ಸ್ವೀಕರಿಸಿ ಬರಿ
ಪ್ರೀತಿಯ ಹಂಚುವುದರಲ್ಲಿ ನಿಪುಣೆ ಇವಳು,
ನನ್ನ ಕ್ಷೇಮವ ಬಯಸುತ
ಅಮ್ಮ ಎನ್ನಲು ದುಃಖವ ಮರೆಮಾಚಿ,
ಕೇವಲ ಖುಷಿಯ ಧಾರೆ ಎರೆದು
ಅಮ್ಮ ಎಂದರೆ ಚೆಲವು,
ಬಲವು ಉಕ್ಕಿ ಹರಿಯುತಿಹುದು.
ನನ್ನನ್ನು ಹೆತ್ತು ಹೊತ್ತು ಸಾಕಿದವಳು,
ನನ್ನ ಜನ್ಮದಾತೆ ಇವಳು,
ನನಗೆ ಪ್ರಾಣ ಭಿಕ್ಷೆ ಕೊಟ್ಟು ಭೂಮಿಗೆ ತಂದವಳು,
ನನ್ನ ಪಾಲಿನ ದೇವರಿವಳು… ನನ್ನ ಪಾಲಿನ ದೇವರಿವಳು…
ಕಂದಾ ಎನ್ನುತ ನನಗಾಗಿ..
ಅಮ್ಮ ಎನ್ನಲು ಕರುಣೆಯ ಕಡಲಿವಳು,
ಮುಕ್ಕೋಟಿ ದೇವರ ಪ್ರೀತಿಯ ಮಗಳಿವಳು,
ನನ್ನ ಮುದ್ದಿಸೋ ತಾಯಿ ಇವಳು..
ಅಮ್ಮ ಎನ್ನಲು ತ್ಯಾಗದ ಬಾನಿವಳು,
ಎಲ್ಲಾ ಕಷ್ಟವ ಸ್ವೀಕರಿಸಿ ಬರಿ
ಪ್ರೀತಿಯ ಹರಿಸುವ ಸುಧೆ ಇವಳು..
ಪ್ರೀತಿಯ ಹಂಚುವುದರಲ್ಲಿ ನಿಪುಣೆ ಇವಳು,
ನನ್ನ ಕ್ಷೇಮವ ಬಯಸುತ
ತನ್ನ ಜೀವನ ತ್ಯಾಗವ ಮಾಡುವವಳು..
ಅಮ್ಮ ಎನ್ನಲು ದುಃಖವ ಮರೆಮಾಚಿ,
ಕೇವಲ ಖುಷಿಯ ಧಾರೆ ಎರೆದು
ಧೈರ್ಯವ ತುಂಬುವವಳು…
ಅಮ್ಮ ಎಂದರೆ ಚೆಲವು,
ಬಲವು ಉಕ್ಕಿ ಹರಿಯುತಿಹುದು.
ನನ್ನನ್ನು ಹೆತ್ತು ಹೊತ್ತು ಸಾಕಿದವಳು,
ನನ್ನ ಜನ್ಮದಾತೆ ಇವಳು,
ನನಗೆ ಪ್ರಾಣ ಭಿಕ್ಷೆ ಕೊಟ್ಟು ಭೂಮಿಗೆ ತಂದವಳು,
ನನ್ನ ಪಾಲಿನ ದೇವರಿವಳು… ನನ್ನ ಪಾಲಿನ ದೇವರಿವಳು…
Posted by ಜೀವನ್ ಮಹದೇವ
ಶನಿವಾರ, ಮೇ 22, 2021
ಶ್ರೇಷ್ಠ ತಾಯಿ
ಶ್ರೇಷ್ಠಳಲ್ಲವೆ ತಾಯಿ ಭೂ ತಾಯಿ..?
ಇವಳೊಡಲ ಅಗೆದು ಬಗೆದರೂ..
ನರನಾಡಿ ಹೀರಿದರೂ..
ನಾನು ಇದ್ದರುˌ ಸತ್ತರು ಭಾರವಲ್ಲ
ಇವಳಿಗೆ.! ಹೌದು ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ...!
ಶ್ರೇಷ್ಠಳಲ್ಲವೆ ತಾಯಿ ಗೋತಾಯಿ..?
ಮುಕ್ಕೋಟಿ ದೇವರಿಗೂ ಹಂಚಿಕೊಂಡ
ಮಹಾ ತಾಯಿ..!
ಕಡಿವ ಕಟುಕನಿಗೂ ಕರುಳ ಕರುವಿನಂತೆ
ಕಂಡ ಕರುಣಾಮಯಿ..!
ಹೌದುˌ ಇವಳು ನನ್ನ ತಾಯಿಗಿಂತ ಶ್ರೇಷ್ಠ ತಾಯಿ
ಕೃಪೆ: ಅni
ಸೋಮವಾರ, ಮೇ 10, 2021
ತಾಯಂದಿರ ದಿನದ ಶುಭಾಷಯಗಳು (Mothers Day)
ಶಾರದಾಂಬೆಯೂ ಕರುಣಿಸರಾಳಲು ನಿನ್ನ ವರ್ಣಿಸುವ ಪದವನ್ನು
ನೀನಿಲ್ಲದ ನನ್ನ ಬಾಳು ಊಹಿಸಲೂ ಅಸಾಧ್ಯ
ಎಂತಹ ಕರುಣೆ,
ಸಹನೆ ತಾಯಿ ನಿನ್ನದು
ನಿನ್ನ ಪ್ರೇಮಾಮೃತದಲ್ಲಿ ಮಿಂದು ಬೆಳೆದ ಈ ಮಗ/ಳು
ಇವತ್ತು ಮಾತ್ರ ತಾಯಂದಿರ ದಿನವೆಂದು ಶುಭಾಷಯ
ಹೇಳಿದರೆ ನೀ ಕೊಟ್ಟ ಪ್ರೀತಿಗೆ ನಾ ಬೆಲೆ ಕಟ್ಟಲಾದಿತೆ
ನನ್ನ ಕೊನೆಯುಸಿರು ಇರುವರೆಗೂ ನಾ ಬಯಸುವೆ ನಿನ್ನ ನಗುವ
ನನ್ನ ಬದುಕಿನ ಕೊನೆದಿನವು ಬರುವರೆಗೂ ನಾ ಹೇಳುವೆ
ನಿನಗೆ ತಾಯಂದಿರ ದಿನದ ಶುಭಾಷಯ
Posted by Shwetha Hoolimath
ಗುರುವಾರ, ಏಪ್ರಿಲ್ 22, 2021
ಕನಸನು ಹೊತ್ತು ಪ್ರಾಣವ ಕೊಟ್ಟು ತಾಯಿ
ಕನಸನು ಹೊತ್ತು ಪ್ರಾಣವ ಕೊಟ್ಟು
ನನ್ನ ಭೂಮಿಗೆ ತಂದೆ ನೀನು
ಬದುಕಲ್ಲಿ ಬರೀ ನೋವಲ್ಲಿ ಕಳೆದರೂ
ತೋರಗೊಡಲಿಲ್ಲ ಕಣ್ಣೀರು
ಎದೆಯ ನೋವು ಮುಚ್ಚಿಟ್ಟು ಕೊಂಡೆ
ಎದೆ ಹಾಲು ಕುಡಿಸಿ ಆನಂದ ಕಂಡೆ
ಬೆಟ್ಟ ದಷ್ಟು ಆಸೆಯ ಮರೆತು
ದಿಟ್ಟತನದಿ ಕಂದನ ಬೆಳೆಸಿದೆ
ನಡುಗಿದರು ಲೋಕದ ಜನತೆಗೆ
ಧೈರ್ಯ ವ ತುಂಬಿದೆ ಮಗುವಿಗೆ
ಸಾಟಿ ಯಾರು ನಿನಗೆ
ನಿನಗಿಂತ ಬೇರೆ ದೈವ ಬೇಕೆ
ಮರುಭೂಮಿ ಯಂಥ ಜೀವನ
ಆದರೂ ತೋರಿದೆ ನಂದನವನ
ನೆನೆಯುವುದು ಲೋಕ ಅಮ್ಮನ
ಉಸಿರಿರುವ ತನಕ ಪ್ರೀತಿಸುವೆ ಕಂದನ
=> ☆ ಸುರಭಿ
ಸೋಮವಾರ, ಮಾರ್ಚ್ 22, 2021
"ನನ್ನಪ್ಪ"
ಹೆಗಲಲ್ಲಿ ಹೊತ್ತು,
ಹಾದಿ ಬೀದಿಯಲ್ಲಿ ರಾಜನಂತೆ,
ಹೊತ್ತು ತಿರುಗಿದವನು. ಕಷ್ಟವ
ತಾನುಂಡು,ಸುಖದಲ್ಲಿ ಪೊರೆದವ, ನನ್ನಪ್ಪ.
ತುತ್ತು ತುತ್ತಿಗೆ ಪರದಾಡಿ,
ಅಮೃತವ ನನಗಿಕ್ಕಿ.
ನೋವಿನ ಭಾದೆ ಸರಿಸಿ,
ಎಲ್ಲರಂತೆ ಸಲಹಿದವ, ನನ್ನಪ್ಪ.
ಸಾಲವ ಲೆಕ್ಕಿಸದೆ,
ಧನಿಕರಿಗೆ ಹೊಲವಿಟ್ಟು,
ವಿದ್ಯಾಮೃತವನಿತ್ತು,
ಸಮಾಜದಲ್ಲೊಂದು ಮೂರ್ತಿ ಕಡೆದವ ನನ್ನಪ್ಪ.
ಜಾತಿ ಧರ್ಮದ ಸೋಗಿಲ್ಲದೆ,
ಪ್ರೀತಿ ವಿಶ್ವಾಸವ ಬಿತ್ತಿ,
ಕರುಣಾಮಯಿಯಾಗು,
ಎಂದರಸಿ ಬೆಳೆಸಿದವ, ನನ್ನಪ್ಪ.
ಸೊಗಳಾಡಿ ಮಾತನಾಡದ,
ದುಷ್ಟರ ಕಡುವೈರಿ.
ಕಷ್ಟದಲ್ಲೂ ಮರುಗಿದರು,
ಭ್ರಷ್ಟತೆಗೆ ಕೈ ಚಾಚದವ,
ನಿಷ್ಟುರ ನುಡಿಯುವ ನನ್ನಪ್ಪ.
ಮೌನದಲ್ಲಿ ಮಾತಾಗಿ,
ನೋವಿನಲ್ಲೂ ಮುಖ ಅರಳಿಸಿ,
ನಗುವ,ನಗು ಮೊಗದ ನಂದಾದೀಪ.
ಬಾಳಿಗೆ ಬೆಳಕಾದ ನನ್ನಿ ಆಶಾಕಿರಣ, ನನ್ನಪ್ಪ.
✍ ರಚನೆ:ಚೌಡ್ಲಾಪುರ ಸೂರಿ
ಸೋಮವಾರ, ಫೆಬ್ರವರಿ 22, 2021
ನನ್ನಜ್ಜಿ ಲೆಕ್ಕ (ನಮ್ಮ ಅಮ್ಮಮ್ಮ)
ನನ್ನಜ್ಜಿ ಕಾಲದ
ಬಾಯ್ ಲೆಕ್ಕ
ಗೋಡೆಗೆ ಗೀಟಾಕಿದರೆ ಒಂದು ಲೆಕ್ಕ
ಹುಂಡಾಕಿದರೆ ಇನ್ನೊಂದು ಲೆಕ್ಕ
ಸುಣ್ಣದುಂಡೇಲಿ
ಬರೀತಿದ್ದ ಲೆಕ್ಕ
ಇಲ್ಲಿ ಈಗ ಬರಿ
ಕಂಪ್ಯೂಟರ್ ಲೆಕ್ಕ.
ಹುಂಡಿಟ್ಟರೆ ಹಾಲ್ಲೆಕ್ಕ
ಗೀಟಾಕಿದರೆ ಬಾಳೆಕಾಯಿ ಲೆಕ್ಕ
ನಂಗೂ ಅಥ೯ ಆಗ್ತಿರಲಿಲ್ಲ
ಆ ಪಾಟಿ ಗಣಿತದ ಲೆಕ್ಕ
ಉಟ್ಟುಂಡು ಎಲೆ ಅಡಿಕೆ
ಮೆದ್ದ ಕೆಂಪನೆ ಬಾಯಲ್ಲಿ
ಬರಿ ಬಾಯಲೆಕ್ಕ ಹೇಳತಿದ್ರು
ಮಗ್ಗಿ ಗಿಗ್ಗಿ ಸೀದಾ ಉಲ್ಟಾ
ಹೇಗೆ ಬೇಕಾದರು ಉದುರುತ್ತಿತ್ತು
ಓದು ಬರಹ ಕಲಿತಿಲ್ಲ
ಪೆನ್ನು ಪುಸ್ತಕ ಕಂಡಿಲ್ಲ.
ನೆನಪಿಗೆ ಹಾಕುತ್ತಿದ್ದರು
ಸೆರಗಿಗೆ ಗಂಟು
ಒಂದಾಕಿದರೆ ಕೊಡೊ ಲೆಕ್ಕ
ಎರಡಾಕಿದರೆ ಇಸ್ಕೋಳ್ಳೊ ಲೆಕ್ಕ
ಬಡ್ಡಿ ಗಿಡ್ಡಿ ಏನಿಲ್ಲ ರೊಕ್ಕಕ್ಕೆ
ಕಷ್ಟಕ್ಕಾಗದ ರೊಕ್ಕ ಇಟ್ಕಂಡೇನು ಪ್ರಯೋಜನ
ಊಟಕ್ಕಿಲ್ಲದ ಉಪ್ಪಿನ ಕಾಯಿ..…ಸಮ
ಹೇಳಿ ಬಾಯಿ ಮುಚ್ಚಿಸುವ ತಾಕತ್ತಿತ್ತು
ಈಗೆಲ್ಲಿ ಕಾಣಲಿ ನನ್ನಜ್ಜಿ ನಿಯತ್ತು
ಬಹುಶಃ ಹಳ್ಳೀಲೂ
ಮಾಯವಾಗಿರಬೇಕು ಈ ಜಾಣೆಯ ಲೆಕ್ಕ.
ಕಾಲ ಕೆಟ್ಟಿಲ್ಲ ಕಾಲ ನಾವೇ ಕೆಡಿಸಿದ್ದು
ಲೋಕಾರೂಢಿ ಮಾತಾಡ್ತಿದ್ದ ನನ್ನಜ್ಜಿ
ಬೆಂಗಳೂರು ಗಲ್ಲಿ ಗಲ್ಲಿ ತಿರುಗಬೇಕು
ಅನ್ನೊ ಆಸೆ ಅವರಿಗೆ ಇರಲಿಲ್ಲ
ಕುದುರೆ ರೇಸು ನೋಡದೆ ಬಿಡಲಿಲ್ಲ
ಚಪ್ಪಲಿ ಮೆಟ್ಟದ ಕಾಲಲ್ಲಿ
ಊರಿಂದ ಊರಿಗೆ ಹೋಗತಿದ್ರು
ಯಕ್ಷಗಾನ, ಪ್ರಸಂಗದ ಗೀಳಿಟ್ಟಕಂಡು
ಅವರ ಉಮೇದಿಗೆ ಹೊಡಿಬೇಕ್ರಿ ಒಂದು ಸಲಾಮ್.
ಹದಿಮೂರಕ್ಕೆ ಮೂವತ್ತೆರಡವನ ವರಿಸಿ
ರಕ್ತ ಹೊಟ್ಬ್ಯಾನೆ ಬಂದು
ಹದಿನಾರಕ್ಕೆ ಗಂಡ ಸತ್ತು
ಬೋಳಿಸಿಬಿಟ್ಟರು ತಲೆ
ಬಳೆ ತೊಟ್ಟ ಕೈ
ರೂಪ ವಿಕಾರಗೊಳಿಸಿ
ಕೆಂಪು ಸೀರೆ ಸೆರಗು
ತಲೆ ಮೇಲಿಂದ ಮುಚ್ಕಂಡು
ಕಂಕಳಲ್ಲಿ ನನ್ನಪ್ಪನೆಂಬ ಕೂಸಿಟ್ಕಂಡು
ಯೌವನವನ್ನೇ ಮರೆತು.
ದಾಯಾದಿ ಅಡಿಯಾಳಾಗಿ
ಬಿಸಿಲಿಲ್ಲ ಬೆಂಕಿಯಿಲ್ಲ
ಜೀತಗೈದ ಅವರ ಬಾಳು
ಮಟ ಮಟ ಮಧ್ಯಾಹ್ನ
ಉರಿಬಿಸಿಲು ಲೆಕ್ಕಕ್ಕಿಲ್ಲ
ಕೊಟ್ಟಿಗೆ ಹಸು ಎಮ್ಮೆ ಮೇಯಿಸಿ
ಮೈ ತಡವಿ ಕಣ್ಣೀರಿಟ್ಟು
ತಮ್ಮ ನೋವ ಮರೀತಿದ್ರು .
ಕೊನೆವರೆಗೂ ನಮಗೆಲ್ಲ ಹರಸ್ತಿದ್ರು
ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು
ಬದುಕುವುದಕ್ಕೂ ಹೇಳಿಕೊಟ್ಟರು
ತಮ್ಮನುಭವದ ಲೆಕ್ಕ.
ಶುಕ್ರವಾರ, ಜನವರಿ 22, 2021
ಮಾತೃತ್ವ..
ನವ ಮಾಸ
ನೋವ ನುಂಗಿ
ಅನುಭವಿಸಿದ
ಹೆತ್ತೊಡಲು
ಹಸುಗೂಸ
ಮೈದಡವಿ
ಕೆಚ್ಚಲೆದೆಯ
ಹಾಲ ಕುಡಿಸಿ
ಅಪ್ಪುಗೆಯ ಬಿಸಿ
ಎದೆಗವಚಿ
ನನ್ನ ಕಂದಾ ಎಂದು
ಹೆಗಲಿಗೇರಿಸಿ
ಬೆನ್ನ ತಡವಿ
ಅನುಭವಿಸಿದ
ಕ್ಷಣ ಎಂದೂ
ಮರೆಯಲಾಗದ
ಜೀವನದ
ಸುಂದರ ನೆನಪು
ತನು ಪುಳಕಿತಗೊಳಿಸುವ
ಧನ್ಯತಾ ಭಾವ
ಪ್ರತಿ ಹೆಣ್ಣಿನ
ಮನಸು.
ಮಂಗಳವಾರ, ಡಿಸೆಂಬರ್ 22, 2020
ಅಮ್ಮಾ ನೀನಿಲ್ಲದ ಊರು...
ಅಮ್ಮಾ ನೀನಿಲ್ಲದ ಊರಲ್ಲಿ
ನನಗೇನು ಕೆಲಸ
ಅಲ್ಲಿ ತೊನೆದಾಡುವ ನೆನಪುಗಳಷ್ಟೇ
ಜೋತಾಡುತ್ತಿವೆ ನೀ ಹೆಜ್ಜೆಯಿಟ್ಟಲ್ಲೆಲ್ಲ
ಕೂತಲ್ಲಿ ಕೂರಲಾಗದೇ ಬಳಲುತ್ತೇನೆ
ಕಿವಿಯಲ್ಲಿ ನಿನ್ನ ಮಾತು ತರಂಗಗಳಂತೆ ಅಪ್ಪಳಿಸಿ
ಇನ್ನಷ್ಟು ಮತ್ತಷ್ಟು ಕೇಳಬೇಕೆನಿಸುತ್ತದೆ
ಹಾಗೆ ಹಾಗೆ ನಿನ್ನ ಮಡಿಲ ತುಂಬೆಲ್ಲ
ನನ್ನನ್ನೇ ನಾ ಹರಡಿಕೊಂಡು
ಕಿತ್ತೊಗೆಯಬೇಕು “ಇಲ್ಲಾ ” ಎನ್ನುವ ಈ ಶಬ್ದವನ್ನೇ.
ಆದರೆ ಸಾಧ್ಯವಾಗದ ಮಾತು
ನೀನು ಇಲ್ಲಾ ಎನ್ನುವ ಸತ್ಯದಷ್ಟೆ.
ನೀನೂ ಮಹಿಳೆ
ನಿನ್ನ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ
ನಾನೂ ಮಹಿಳೆ
ಆದರೂ ನಿನ್ನೆತ್ತರಕ್ಕೆ ನಾ ಏರಲಾರೆ
ಮಗಳು ನನ್ನ ಮಡಿಲ ತುಂಬಿದ್ದರೂ
ಗೊತ್ತು ನನಗೆ ಏಕೆಂದು!
ಆ ನಿನ್ನ ಮುಗ್ಧ ನಗು
ಎಲ್ಲರೂ ನನ್ನ ಮಕ್ಕಳೆಂದು ಕಾಣುವ ಬಗೆ
ನಿಸ್ವಾರ್ಥ ನಿನ್ನ ಬದುಕು
ಬೇಕು ಎನ್ನುವುದ ಬಿಟ್ಟು
ಸಾಕು ಸಿಕ್ಕಷ್ಟೇ
ಎಂದಂದುಕೊಂಡೇ ಬದುಕಿದವಳು
ಕೊನೆಗೊಂದು ದಿನ
ನಿರಾಳವಾಗಿ ಅಂಗಾತ ಮಲಗಿದವಳು
ಈ ಶುಭದಿನಕೆ
ನನ್ನ ಬದುಕಲ್ಲಿ ಸಾಕ್ಷಿಯಾದವಳು
ಭಾನುವಾರ, ನವೆಂಬರ್ 22, 2020
ಜೀವಜಲದಂತೆ ಅಮ್ಮ..
ಅಮ್ಮನಿಗಾಗಿ ನಾನಿಲ್ಲ
ಅಮ್ಮ ನನಗಿಲ್ಲ
ಅಮ್ಮಾ ಅನ್ನುವ ಕೂಗು
ಕೂಗಲು
ಅಮ್ಮನೇ ಇಲ್ಲ
ಆದರೂ
ನೆನಪು ಮಾಸುವುದಲ್ಲ
ಕದ ತಟ್ಟಿ
ಬಡಿದೆಬ್ಬಿಸುವ ಪರಿ
ಇನ್ನೂ ಬಿಟ್ಟಿಲ್ಲ
ಸದಾ ಮುಗುಳುನಗುವಮ್ಮ
ನಿನ್ನ ಕಂಗಳ ದೃಷ್ಟಿ
ಆ ನಿಲುವು
ಎದೆ ಬಾಗಿಲ ಬಿಟ್ಟು
ಸರಿದಿಲ್ಲವಲ್ಲ
ಮತ್ತೆ ನೀನಿಲ್ಲವೆಂದು
ಮತ್ಯಾಕೆ ನನಗೀ ತಾಕಲಾಟ?
ಕೇಳುವೆ ಆಗಾಗ
ನನ್ನ ನಾ
ಉಲಿಯುವೆ ಆಗ
ಅದು ಹಾಗೆ ಕಂದಾ
ಮನದ ಬಿಕ್ಕುಗಳಿಗೆ
ಏಕೈಕ ಮುಲಾಮು
ಎಟುಕುವುದೆಲ್ಲರಿಗೂ
ಗಳಿಗೆಗೊಮ್ಮೆ
ಬೇಕೆಂದಾಗಲೆಲ್ಲ
ದಾಹ ತೀರಿಸುವ
ಜೀವಜಲದಂತೆ
ಗುರುವಾರ, ಅಕ್ಟೋಬರ್ 22, 2020
ಅಮ್ಮಾ ನೀ ನನಗೆ ಬೇಕು..
ಅಮ್ಮಾ ನೀ ನನಗೆ ಬೇಕು
ಕತ್ತಿಡಿದು ಕುಯ್ದಷ್ಟು ಸಂಕಟ
ನೆನಪಾದಾಗ
ನಿನ್ನ ಕಳಕೊಂಡ ಕ್ಷಣ
ಇಂದಾದರೂ ಒಮ್ಮೆ ನೀ ಬರಬಾರದೆ!!
ಅಂದು ಮಸಣದ ಹಾದಿ
ಗುಂಟ ನಿನ್ನ ಶವ
ಕಳಿಸಲು ಜನರೊಟ್ಟಿಗೆ ಬಂದೆ
ಅಲ್ಲಿ ಬರೀ
ಸ್ಮಶಾನ ಮೌನ ಅಡಗಿತ್ತು.
ಚಿತೆ ಧಗಧಗನೆ ಉರಿದು
ಕೆನ್ನಾಲಿಗೆ ಕೆಂಪನೆ ನೆಗೆತ
ಆಕಾಶದಲ್ಲಿ
ನೀ ಲೀನವಾಗಿಬಿಟ್ಟೆ
ಸಂಕಟ ಭೂದಿ ಮುಚ್ಚಿದ ಕೆಂಡ.
ಕೈ ತೆರೆಯಂತೆ ಹಿಡಿದು
ದಾಟಿ ಮತ್ತೆ
ಹಿಂದೆ ತಿರುಗಿ ನೋಡಬೇಡಿ
ಅಣತಿಯಂತೆ ಬಂದೆ
ನೀನಿಲ್ಲದ ಆ ಮನೆಗೆ.
ದೇವರಿಲ್ಲದಾಲಯ ಭಣ ಭಣ
ಚಡಪಡಿಸಿದೆ
ಕಣ್ಣೀರು ಹಾಕಿತ್ತು ಶವಾಸನ
ಬಂದು ಹೋಗುವವರ ಸಾಂತ್ವನ
ಆದರೆ ಅದು ನೀನಲ್ಲವಲ್ಲವಮ್ಮಾ.
ಕಾಲ ಸರಿದರೂ
ಕಾವಲಾಗಿ ನಿಂತಿದೆ ನನ್ನೆದೆಯಲ್ಲಿ
ಮಮತೆ ವಾತ್ಸಲ್ಯ
ಮರೆಯಲೊಲ್ಲೆ ದೇಹ
ನಿನ್ನ ಹಾದಿ ಹಿಡಿಯುವವರೆಗೂ!
ಸಿಗದ ತಾರೆ ನೀನು
ಬಾನಲ್ಲಿ ಮಿಣ ಮಿಣ ಮಿಂಚುತ್ತ
ಸ್ವರ್ಗ ಸೇರಿದೆ ಉತ್ತರಾಯಣದಲ್ಲಿ
ಇದೊಂದೇ ಖುಷಿ
ಚಿರ ಮುತ್ತೈದೆ ನನ್ನಮ್ಮ.
ಮಂಗಳವಾರ, ಸೆಪ್ಟೆಂಬರ್ 22, 2020
ಅಮ್ಮ ಕೊಟ್ಟ ಉಡುಗೊರೆ..
ಕಾಯುವಿಕೆಯಲ್ಲಿ
ಅಮ್ಮನಿಗಿರುವ ತಾಳ್ಮೆ
ನನಗಂತೂ ಇರಲೇ ಇಲ್ಲ.
ಪ್ರತೀ ಶನಿವಾರ
ಕತ್ತಲಾವರಿಸುತ್ತಿದ್ದಂತೆ
ಹಾದಿ ಕಾಯುವ ಹೊತ್ತು.
ಜೀರುಂಡೆ ಸದ್ದಿನ
ಜಿಟಿ ಜಿಟಿ ಮಳೆಗಾಲವಿರಲಿ
ಚಳಿಗೆ ಸೆರಗೊದ್ದು
ಅತ್ತಿಂದಿತ್ತ ಇತ್ತಿಂದತ್ತ ಗಳಿಗೆಗೊಮ್ಮೆ
“ಇನ್ನೂ ಬಂಜಿಲ್ಲೆ ಎಂತಾ ಆತನ”
ಅಲವತ್ತುಕೊಂಡು ಆತಂಕದ
ಛಾಯೆ ವದನದ ತುಂಬ.
“ಎಂತಕ್ಕೆ ಇಷ್ಟೊತ್ತಾತು?
ಆಗಿಂದ ಕಾಯ್ತಾ ಇದ್ದಿ
ಈಗ ಬರ್ತೆ ಆಗ್ ಬರ್ತೆ ಹೇಳಿ”
ಅಮ್ಮನ ಕೈ ರುಚಿಯ ಅಡಿಗೆ
ಹಲಸಿನ ಹಣ್ಣಿನ ಕಡುಬಿನ ಘಮಲು
ಅಕ್ಕರೆಯಲಿ ನನಗೊಂದೇ
ಬಾಳೆಯಲಿ ಹರಿವಷ್ಟು ತುಪ್ಪ
“ಬಿಡಡಾ ಹ್ಯಾಂಗ್ ಸೊರಗೋಜೆ
ಮನಿಗೆ ಬಂದಾಗಾರು ಸರಿ ತಿನ್ನು ಮಗಾ
ನೌಕರಿ ನೌಕರಿ ಹೇಳಿ ಪ್ಯಾಟೆ ಸೇರ್ಕಂಜೆ”
ಮೆತ್ತನೆಯ ಹಾಸಿಗೆಯಲಿ ಪವಡಿಸಲು
ತಲೆ ಸವರಿ ಹೊದಿಕೆ ಸರಿ ಮಾಡಿ
ಮಗಳ ನಿದ್ದೆಗೆ ಭಂಗ ಬಾರದಂತೆ
ಮೆಲ್ಲಗೆ ಕದಲುವ ಅಮ್ಮ.
“ಇಲ್ನೋಡಿ ಕೂಸಿಗೆ
ಮದುವೆ ಮಾಡ್ತ್ರ ಇಲ್ಯ
ಪ್ಯಾಟೆ ಕೂಳ್ ತಿಂದು ಹ್ಯಾಂಗಾಜು ನೋಡಿ”
ನಿದ್ದೆ ಬಂದಂತೆ ನಟಿಸಿ
ಅಮ್ಮ ಅಪ್ಪ ಆಡುವ ನನ್ನ ಕುರಿತ ಮಾತು
ಒಳಗೊಳಗೆ ನನ್ನಮ್ಮನ ಬಗ್ಗೆ ಹೆಮ್ಮೆ
ಸರಿದ ಆ ದಿನಗಳೆಂದೂ ಬಾರದು.
” ಆಸ್ರಿಗಾತು ಬಾರೆ
ನಿಂಗೆ ಪ್ರೀತಿ ಹೇಳಿ ಬೆಲ್ಲ ಹಾಕಿ
ಮೊಗೆಕಾಯಿ ಶೀ^^ ದ್ವಾಸೆ ಮಾಡಿದ್ನೆ”
ಅದೆಷ್ಟು ಕಾಳಜಿ, ವಾತ್ಸಲ್ಯ, ಪ್ರೀತಿ,ಮಮತೆ
ಬದುಕಿಗೆ ಅಮ್ಮ ಕೊಟ್ಟ ಉಡುಗೊರೆ.
ಆದರೆ
ಈಗ ಕಾಯುವಿಕೆಯೆಂಬುದು
ನನಗೆ ದಿನ ನಿತ್ಯದ ಕಾಯ
ಅಮ್ಮನಿಲ್ಲದ ಆ ಮಧುರ ದಿನಗಳ
ನೆನಪ ಕಣ್ಣು ಮಂಜಾಗಿಸಿಕೊಂಡು.
ಶನಿವಾರ, ಆಗಸ್ಟ್ 22, 2020
ಅಮ್ಮನಾಗುವ ಪರಿ..
ಕನಸುಗಳು ಸುರುಳಿಯಂತೆ ಸುತ್ತಿಕೊಳ್ಳಲು ನಾಂದಿ
ತಿಂಗಳ ಹೊರಗು ಆಗದಿರೆ ಅವಳಿಗೆಲ್ಲಿಲ್ಲದ ನಲಿವು
ಬರುವ ಕಂದನ ಇನ್ನಿಲ್ಲದ ಕಲ್ಪನೆಯಲ್ಲೆ ನೆನೆನೆನೆದು.
ಒಳಗೊಳಗೆ ಹರ್ಷ ಮುಸಿ ಮುಸಿ ನಗು
ಕಣ್ಣಲ್ಲಿ ಮಿಂಚು ಕೊಂಚ ನಾಚಿಕೆ ಬಿನ್ನಾಣದ ಬೆಡಗು
ಮೊಳಕೆಯೊಡೆಯುತ್ತಿರುವ ಸಂಗತಿ ಗಂಡನಿಗೆ ಹೇಳಲು.
ಮೌನ ಗೌರಿಯ ಬಂಡವಾಳ ಅದಾಗೆ ತಿಳಿಯಲು
ಕೋಣೆಯಿಂದೀಚೆ ಬರದಷ್ಟು ಕ್ಲಿಷ್ಟ ಗಳಿಗೆ
ಅನುಭವದ ಸುಃಖ ಅನುಭವಿಸಿದವರಿಗಷ್ಟೇ ಗೊತ್ತು
ಒಂದೊಂದು ಕ್ಷಣ,ದಿನ,ತಿಂಗಳು ದೊಡ್ಡ ಪ್ರಾಜೆಕ್ಟು
ಸುಸ್ತು ಸಂಕಟ ಕಿರಿ ಕಿರಿ ದೇಹ ಸಖತ್ ಹೈರಾಣ
ಎಲ್ಲವನ್ನೂ ಸಹಿಸುವಳು ಬರುವ ಕಂದಮ್ಮನಿಗಾಗಿ.
ನವ ಮಾಸ ನವ ಯುಗದಂತೆ ನಗು ನಗುತ ಕಳೆದು
ಎಲ್ಲೆ ಮೀರಿದ ಅಸಾಧ್ಯ ನೋವಿನೊಡೆತವ ಮುಕ್ಕಿ ಮುಕ್ಕಿ
ಭುವಿಗೆ ತನ್ನುಧರದ ಛಾಯೆ ನೀಡುವಳು ತಾಯಿಯ ಪಟ್ಟ ಧರಿಸಿ.
ಕಂದನ ಆಕ್ರಂದನ ತನುಮನದಲ್ಲಿ ಖುಷಿಯ ರಿಂಗಣ
ತೆಕ್ಕೆಯಲಿರಿಸಿ ಲೊಚಗುಟ್ಟುವ ಬಾಯಿಗೆ ತನ್ನೆದೆಯನೊತ್ತಿ ಹರಿಸುವಳು ಅಮೃತ
ಮಾತೃತ್ವದ ಅಮಲಿನ ಸುಃಖ ನಖಶಿಕಾಂತ ಬೆರಗಲಿ.
ಕನಸು ಮನಸಿನಲ್ಲೂ ಕಂದನದೆ ಯೋಚನೆ ಕಣಕಣದಲೆಲ್ಲ
ಒಂದರೆಗಳಿಗೆ ಬಿಟ್ಟಿರಲಾಗದಷ್ಟು ಕಕ್ಕುಲತೆ ತನು ಮನದ ತುಂಬ
ಜೀವ ತೇದು ಬೆಳೆಸುವಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಯಾರಿಹರು ಸರಿಸಾಟಿ!
ತನ್ನೆತ್ತರಕೆ ಕಂದ ಬೆಳೆದು ನಿಂತರೂ ಇನ್ನೂ ಹಸು ಗೂಸು
ಕಂಡವರು ದೊಡ್ಡವರಾದರೆಂದರೆ ಹುಸಿ ಮುನಿಸು ತೋರುವಳು
ತನಗೆ ಮಾತ್ರ ವಯಸ್ಸಾಯಿತೆಂದು ಚಿಕ್ಕ ಮುಖ ಮಾಡಿ ಹಲುಭುವಳು ಕಾಲನ ಕರೆಗೆ.
ಮೊಳಕೆಯೊಡೆಯುವ ಮೊದಲೆ ಕನಸ ಕಟ್ಟುವ ಅಮ್ಮ
ನನಸಾದ ಕನಸ ಸೌದದಲಿ ಕಂದನ ಕೂಡಿಸಿ ಬೀಗುವ ಪರಿ
ನಿಸ್ವಾರ್ಥ ತೇಜೋಮಯಿಗೊಂದೇ ಸಾಧ್ಯ ಅವಳೆ ಅಮ್ಮನೆಂಬ ಅಣಿ ಮುತ್ತು
ಬುಧವಾರ, ಜುಲೈ 22, 2020
ಅಪ್ಪನೆಂಬ ಆಪ್ತ..
ಇತಿ ಮಿತಿಯಿಲ್ಲದ ಪ್ರೀತಿಯ ತೇರು ಎಂದರೆ ಹೆತ್ತವರು. ಅಲ್ಲಿ ನಾನು ನನ್ನದೆಂಬ ವಾಂಚೆ ತುಂಬಿ ತುಳುಕುವಷ್ಟು ಮೋಹ. ಈ ಮೋಹದ ಪಾಶಾ ಬಂಧನ ವರ್ಣಿಸಲಸಾಧ್ಯ. ಅಲ್ಲಿ ಸದಾ ನೆನಪಿಸಿಕೊಳ್ಳುವ, ನೆನೆನೆನೆದು ಆಗಾಗ ಪುಳಕಿತಗೊಳ್ಳುವ ಅಪ್ಪನೊಂದಿಗಿನ ದಿನಗಳು ಪ್ರತಿಯೊಬ್ಬರ ಜೀವನದಲ್ಲೂ ಅಮೂಲ್ಯ.
ಅದರಲ್ಲೂ ಹೆಣ್ಣು ಮಕ್ಕಳು ಅಪ್ಪನನ್ನು ಅಪ್ಪಿಕೊಳ್ಳುವುದು ಜಾಸ್ತಿ. ಆಗಾಗ ಬಯ್ಯುವ ಅಮ್ಮನಿಗಿಂತ ಅಪ್ಪನ ಕಂಡರೆ ಹೆಣ್ಣು ಮಕ್ಕಳಿಗೆ ಅಮಿತ ಪ್ರೀತಿ. ಅಪ್ಪನಿಗೂ ಅಷ್ಟೆ, ಮಗಳೂ ಅಂದರೆ ಆಯಿತು. ಅವಳೇನು ಮಾಡಿದರೂ ಚಿಕ್ಕಂದಿನಲ್ಲಿ ವಹಿಸಿಕೊಂಡು ಬರುವುದು ಅಪ್ಪ ಮಾತ್ರ. ಅದಕ್ಕೇ ಏನೊ ಮಗಳು ಏನು ಕೇಳುವುದಿದ್ದರೂ ಅಪ್ಪನ ಕೊರಳಿಗೆ ಹಾರವಾಗಿ ಅಪ್ಪಾ ಅದು ಕೊಡಸ್ತೀಯಾ? ಅಲ್ಲಿ ಕರ್ಕೊಂಡು ಹೋಗ್ತೀಯಾ? ಅಪ್ಪಾ ಅಂದರೆ ನನ್ನಪ್ಪಾ! ಎಷ್ಟು ಚಂದ ನನ್ನಪ್ಪಾ. ನಂಗೆ ಅಮ್ಮನಿಗಿಂತ ಅಪ್ಪಾ ಅಂದರೇನೆ ಬಲೂ ಇಷ್ಟ. ಈ ಅಮ್ಮ ಯಾವಾಗಲೂ ಬಯ್ತಾಳೆ, ರೇಗುತ್ತಾಳೆ. ಅದು ಕಲಿ ಇದು ಕಲಿ, ಅಲ್ಲಿ ಹೋಗಬೇಡಾ ಇಲ್ಲಿ ಹೋಗಬೇಡಾ, ಸದಾ ಕಾಟ ಕೊಡ್ತಾಳೆ ಹೀಗೆ ಹಲವಾರು ಕಂಪ್ಲೇಂಟು ಕಂಡವರ ಮುಂದೆ ಮಗಳಿಂದು.
ಇದಕ್ಕೆ ಸರಿಯಾಗಿ ಓದುವ ದಿನಗಳಲ್ಲಿ ಮಕ್ಕಳ ಪಾಠದಲ್ಲಿ ವಕ್ಕಣೆ ; Father is the head of the family. ಏನೊ ಮಾತಿಗೆ ಅಮ್ಮ ತಾನೆ ಮನೆ ನೋಡಿಕೊಳ್ಳುವುದು. ಅವಳು ಈ ಮನೆ head ಕಣೆ ಅಂದರೆ ಮಗಳು ಇಲ್ಲ father is the head of the family; ನಮ್ಮ ಮಿಸ್ ಹೇಳಿದ್ದಾರೆ.
ಅಂದರೆ ಶಾಲೆಯಲ್ಲಿ ಮಿಸ್ ಮನೆಯಲ್ಲಿ ಅಪ್ಪ, ಇದೇ ಮಗಳ ಪ್ರಪಂಚ. ಅಮ್ಮ ಅಡಿಗೆ ಮಾಡೋದಕ್ಕೆ ಮಾತ್ರ ಸೀಮಿತ. ಹೌದು ಮಕ್ಕಳಿಗೆ ಅಪ್ಪ ಅಂದರೆ ಅದೇನೊ ಭಯ,ಭಕ್ತಿ, ಪ್ರೀತಿ,a precious thing ಅನ್ನೊ ತರ ಅವರ ಭಾವನೆ. ಅಪ್ಪ ಹೊರಗಡೆ ಹೋಗುತ್ತಾನೆಂದರೆ ನೂರೆಂಟು ಪ್ರಶ್ನೆಗಳು. ಎಲ್ಲಿಗೆ ಹೋಗ್ತೀಯಾ? ಎಷ್ಟೊತ್ತಿಗೆ ಬರ್ತೀಯಾ? ನಾನೂ ನಿನ್ನ ಜೊತೆ ಬರ್ತೀನಿ. ಬೇಗ ಬರಬೇಕು. ನನಗೇನು ತರ್ತೀಯಾ? ಅಯ್ಯೋ! ಅದೆಷ್ಟು ಪ್ರಶ್ನೆಗಳ ಸುರಿಮಳೆ. ದೂರದಲ್ಲಿ ಅಪ್ಪ ಬರುವಾಗಲೇ ಗುರ್ತಿಸುವ ಅಪ್ಪನ ಬೈಕಿನ ಹಾರನ್, ಓ! ಅಪ್ಪ ಬಂದಾ ಅಂತ ಓಡಿ ಬಂದು ಗೇಟಿನ ಮುಂದೆ ಕಾಯುವ ಕ್ಷಣ, ಒಳಗೆ ಬರಲೂ ಬಿಡದೆ ಅಪ್ಪನ ಕೊರಳ ಸುತ್ತುವ ಎರಡೂ ಕೈಗಳು, ಇರೆ ಚಪ್ಪಲಿ ಬಿಚ್ಚತೀನಿ ತಾಳೆ. ಊಹೂಂ ಮೊದಲು ಮುದ್ದುಗರೆಯಬೇಕು, ಎತ್ತಿಕೊಳ್ಳುವ ವಯಸ್ಸಾದರೆ ಎತ್ತಿಕೊಂಡೆ ಒಳಗಡಿಯಿಡಬೇಕಾಂದಂತಹ ಪರಿಸ್ಥಿತಿ ನಿರ್ಮಾಣ ಮಾಡುವ ಮಗಳೆಂಬ ಅರಗಿಣಿ. ಇದು ಎಷ್ಟು ವಾಸ್ತವವೋ ಅಷ್ಟೆ ಖಟು ಸತ್ಯ ಅಪ್ಪನ ಇರುವಿಕೆ ಮಕ್ಕಳಿಗೆ.
ಬೇಡಿಕೆಗಳು ಏನೇ ಇದ್ದರೂ ಅಪ್ಪನನ್ನೇ ಕೇಳಬೇಕು, ತನ್ನ ಬೇಡಿಕೆಗಳನ್ನು ಈಡೇರಿಸುವ ವ್ಯಕ್ತಿ ಇವನೊಬ್ಬನೇ ಅನ್ನುವಷ್ಟು ಮಕ್ಕಳ ಪುಟ್ಟ ಮನಸ್ಸಿನಲ್ಲಿ ಗಟ್ಟಿ ನೆಲೆಯೂರುವುದು ಈ ಚಿಕ್ಕಂದಿನ ದಿನಗಳಲ್ಲಿ. ಮನೆ ಶಾಲೆ ಆಟ ಪಾಠ ಓದು ಇವುಗಳೊಂದಿಗೆ ದಿನ ಕಳೆದಂತೆ ಮಕ್ಕಳ ಮನಸ್ಸು ವಿಕಾಸವಾದಂತೆಲ್ಲ ಅಲ್ಲಿ ಸಣ್ಣದಾಗಿ ಒಂದು ಹುಡುಕಾಟ ಶುರು. ತನಗೆ ಬೇಕಾದಂತೆ ಅಪ್ಪ ಇದ್ದರೆ ಸರಿ. ಅದಿಲ್ಲವಾದರೆ ನಿಧಾನವಾಗಿ ಅಮ್ಮನತ್ತ ವಾಲುವ ಮಕ್ಕಳ ಮನಸ್ಸು ಅಮ್ಮನ ಮಡಿಲಲ್ಲಿ ತಮ್ಮ ದುಃಖ ಹಂಚಿಕೊಳ್ಳಲು ಶುರು ಮಾಡುತ್ತವೆ. ಹಂತ ಹಂತವಾಗಿ ತಮ್ಮ ಜವಾಬ್ದಾರಿ ಅರಿತು ಓ! ನನಗೆ ಅಪ್ಪಾ ಇಲ್ಲ, ನನ್ನ ಕೆಲಸ ನಾನೇ ಮಾಡಿಕೊಳ್ಳಬೇಕು,ಅಮ್ಮನಿಗೆ ತೊಂದರೆ ಕೊಡಬಾರದು ಹೀಗೆ ಹಲವಾರು ಹಂತಗಳಲ್ಲಿ ಬದಲಾಗುವ ಮಕ್ಕಳು ಕ್ರಮೇಣ ಒಂಟಿತನ, ದೈರ್ಯ ಎರಡನ್ನೂ ಮೈಗೂಡಿಸಿಕೊಳ್ಳಲು ಶುರು ಮಾಡುತ್ತವೆ. ಜವಾಬ್ದಾರಿ ಹೊರುವ ಅಪ್ಪನ ಸ್ಥಾನದಲ್ಲಿ ನಿಂತು ಅಮ್ಮನ ಹೊಣೆ ಹೊರುವಷ್ಟರ ಮಟ್ಟಿಗೆ ಬದಲಾಗಿಬಿಡುತ್ತವೆ ಬೆಳೆದಂತೆ.
ಎಲ್ಲಿಯವರೆಗೆ ಜವಾಬ್ದಾರಿ ಹೊರುವ ಅಪ್ಪ ಇರುತ್ತಾನೊ ಅಂತಹ ಮಕ್ಕಳಿಗೆ ಮನೆಯ ಯಾವ ಕೆಲಸದ ಕಡೆಯೂ ಗಮನವಿರುವುದಿಲ್ಲ, ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಅಮ್ಮ ಏನಾದರೂ ಹೇಳಿದರೆ ಯಾಕೆ ಅಪ್ಪ ಇಲ್ವಾ? ಅವರಿಗೆ ಹೇಳು ಮಾಡಿಕೊಂಡು ಬರುತ್ತಾರೆ. ತಮ್ಮ ಸ್ವಂತ ಕೆಲಸಕ್ಕೂ ಅಪ್ಪನ ಸಹಾಯ ಬೇಕು. ನಿರಾಳ ಮನಸ್ಸು ಅಪ್ಪನಿದ್ದರೆ.
ಇನ್ನು ವಯಸ್ಸಿಗೆ ಬಂದ ಮಕ್ಕಳ ಮದುವೆ ವಿಷಯದಲ್ಲಿ ಸಂಪೂರ್ಣ ಜವಾಬ್ದಾರಿ ಹೊರುವ ಈ ಅಪ್ಪ ಅಲೆದಲೆದು ತನ್ನ ಮಕ್ಕಳಿಗೆ ಯೋಗ್ಯ ಸಂಬಂಧ ಹುಡುಕಿ ಮದುವೆ ಮಾಡಿ ಸರಿಯಾದ ನೆಲೆ ಊರಲು ಅನುವು ಮಾಡಿಕೊಟ್ಟು ಅವರ ಸಂತೋಷದಲ್ಲಿ ತಾನೂ ತನ್ನ ಹೆಂಡತಿಯೊಂದಿಗೆ ಸುಃಖ ಕಾಣಲು ಕಾರಣಕರ್ತ ಈ ಅಪ್ಪನೆಂಬ ಅಭಿವ್ಯಕ್ತಿ. ಮಕ್ಕಳ ವಿಷಯದಲ್ಲಿ ಹೆತ್ತವರದು ನಿಸ್ವಾರ್ಥ ಸೇವೆ, ಕರ್ತವ್ಯ ಕೂಡಾ. ಆದರೆ ಅಪ್ಪನನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಅಯೋಮಯ. ಅಲ್ಲಿ ತಾಯಿ ತನ್ನ ಜವಾಬ್ದಾರಿ ಅದೆಷ್ಟು ಸಮರ್ಥವಾಗಿ ನಿಭಾಯಿಸಬಹುದು! ನಿಜಕ್ಕೂ ವಿಚಾರ ಮಾಡಬೇಕಾದ ಸಂಗತಿ. ಸದಾ ಒಂದಿಲ್ಲೊಂದು ಜೀವನದ ಕಷ್ಟ ನಷ್ಟಗಳಿಗೆ, ಬರುವ ಸಮಯ ಸಂದರ್ಭದಲ್ಲಿ ಧೈರ್ಯದಿಂದ ಮುನ್ನುಗ್ಗಿ ಮಕ್ಕಳಿಗೆ ರಕ್ಷಣೆ ಕೊಡುವ ಅಪ್ಪ ಸಮಾಜದಲ್ಲಿ ಗೌರವ ಸ್ಥಾನಕ್ಕೆ ಅಣಿಗೊಳಿಸುವ ಸಿಂಧು.
ಅಪ್ಯಾಯಮಾನವಾದ ಅಪ್ಪ ಎಲ್ಲ ಮಕ್ಕಳಿಗೂ ಬೇಕು. ಆದರೆ ಇಂತಹ ಸ್ಥಾನ ತುಂಬುವ ಅಪ್ಪ ಎಲ್ಲರಿಗೂ ಸಿಗಲು ಸಾಧ್ಯವೆ? ಸಿಕ್ಕರೂ ಅರ್ಧದಲ್ಲೆ ಕಳೆದುಕೊಳ್ಳುವ ಮಕ್ಕಳು ಅನೇಕ. ಆಗ ಅವರ ಮನಸ್ಥಿತಿ ಹೇಗಿರಬಹುದು? ಮುಗ್ಧ ಮನಸ್ಸು ಈ ಆಘಾತ ಹೇಗೆ ತಡೆದುಕೊಳ್ಳಬಹುದು? ಆ ಮಗು ಅದೆಷ್ಟು ಕನಸುಗಳನ್ನು ಅಪ್ಪನ ಸುತ್ತ ಹೆಣೆದುಕೊಂಡಿರುತ್ತೊ ಏನೊ ಪಾಪ! ಹೇಳಿಕೊಳ್ಳಲೂ ಆಗದೆ ದುಃಖವನ್ನು ತನ್ನೊಳಗೇ ಅದುಮಿ ಅದುಮಿ ಕಣ್ಣೀರಿಡುವ ನತದೃಷ್ಟ ಮಕ್ಕಳು ; ಅವುಗಳ ಬೇಗುದಿಗೆ ತಕ್ಕಂತೆ ಸಾಂತ್ವನ ಹೇಳಲಾಗದ ಅಮ್ಮನ ಸ್ಥಿತಿ. ಒಂದಿಲ್ಲೊಂದು ಸಂದರ್ಭದಲ್ಲಿ ಸದಾ ನೆನಪಿಸಿಕೊಂಡು ನನ್ನಪ್ಪಾ ಹಾಗೆ ಹೀಗೆ ಎಂದು ನೆನಪಿಸಿಕೊಂಡು ಹೆಮ್ಮೆ ಪಡುವುದು ದುಃಖ ಪಡುವುದು ನಡೆದೇ ಇರುತ್ತದೆ.
ನಿಜ ಈ ಅಪ್ಪನೆಂಬ ಅಪ್ಯಾಯಮಾನವಾದ ವ್ಯಕ್ತಿ ಎಲ್ಲರಿಗೂ ಬೇಕು. ಮನೆಯ ಜವಾಬ್ದಾರಿ ಹೊತ್ತು ಮಕ್ಕಳ ಜೀವನಕ್ಕೆ ಅಡಿಪಾಯವಾಗಿ ನಿಲ್ಲುವ ಅಪ್ಪ ಅವನ ಸ್ಥಾನ, ಅವನ ಪ್ರೀತಿ, ವಾತ್ಸಲ್ಯ ಬೇರೆ ಯಾರಿಂದಲೂ ಸಿಗಲು ಸಾಧ್ಯವೇ ಇಲ್ಲ. ಅಪ್ಪಾ ಅಂದರೆ ಅಪ್ಪನೆ.
ಈ ದಿನ ವಿಶ್ವ ಅಪ್ಪಂದಿರ ದಿನ. ಇಂತಹ ಪ್ರೀತಿ ಎಲ್ಲ ಮಕ್ಕಳಿಗೂ ಸದಾ ಸಿಗಲೆಂದು ಹಾರೈಸೋಣವೆ?
ಸೋಮವಾರ, ಜೂನ್ 22, 2020
" ಅಮ್ಮನ ಹೃದಯ " (Mother Heart)
ಸೃಷ್ಠಿಕರ್ತನಿಗಿಲ್ಲ ಭಾರತದಲ್ಲಿ ದೇವಾಲಯ
ಅಮ್ಮನ ಪೂಜಿಸಲು ಬೇಕೇ ನಿರ್ದಿಷ್ಟ ಸಮಯ
ಜೀವಕೆ ಜೀವ ನಿಡುವ ಕಲೆಯ
ತಪಸ್ಸು ಮಾಡಿ ನೀ ಪಡೆದೆಯ
ನವ ಮಾಸಗಳಿಗೆ ರಕ್ಷಣೆಯ ಸಂಸ್ಥೆಯ
ಗರ್ಬವೆಂಬ ಆಲಯದಲ್ಲಿ ಮಿಸಲಿಟ್ಟೆಯ
ಶಿಶು ಪ್ರಪಂಚವನ್ನು ನೋಡುವ ಸಮಯ
ನೀ ಪುನರಜನ್ಮ ವೆತ್ತೆಯ
ಎಲ್ಲ ತಾಯಂದಿರ ಹಿರಿಮೆಯ
ಜಗತ್ತಿನೆಲ್ಲೆಡೆ ಸಾರುವೆಯ
ಸುಖ ಸಂತೋಷ ವೆಂಬ ಹಕ್ಕಿಯ
ಅವಳ ಪಾಧಾರವಿನ್ದಕೆ ಅರ್ಪಿಸುವೆಯ
ನನ್ನ ಒಳಿತಿಗೆ ಬಚ್ಚಿಟ್ಟೆ ನಿನ್ನ ಭಾವನೆಯ
ಪ್ರೀತಿಂದ ಬಯಸುವೆ ನಿನ್ನ ಮಮತೆಯ
ಕರುಣಿಸು ನನಗೆ ನಿನ್ನ ಅಭಯ
ಶಿಕರಕ್ಕೆ ಸರಿಸಾಟಿ "ಅಮ್ಮನ ಹೃದಯ"
ಕೃಪೆ: ವಿನೋದ ಪ್ರಭು
ಶುಕ್ರವಾರ, ಮೇ 22, 2020
ಭಾನುವಾರ, ಮೇ 10, 2020
ತಾಯಂದಿರ ದಿನ (Mothers Day)
ತಾಯಿಯ ಡೇ ಅನೇಕ ಜನರು ವಿಶ್ವಾದ್ಯಂತ ತಾಯಿ ಮತ್ತು ತಾಯಿ ಅಂಕಿ ಕಡೆಗೆ ತಮ್ಮ ಮೆಚ್ಚುಗೆಯನ್ನು ತೋರಿಸಲು ಒಂದು ದಿನ. ಇದು ಒಂದು ವಾರ್ಷಿಕ ಘಟನೆಯಾಗಿದೆ ಆದರೆ ದೇಶವನ್ನು ಅವಲಂಬಿಸಿ ಕ್ಯಾಲೆಂಡರ್ ವಿವಿಧ ದಿನಾಂಕಗಳನ್ನು ನಡೆಯುತ್ತದೆ.
ಹೂಗಳು ಮತ್ತು ಇತರ ಉಡುಗೊರೆಗಳನ್ನು ತಾಯಿಯ ದಿನದಂದು ತಾಯಿ ನೀಡಲಾಗುತ್ತದೆ.
ಯಾವ ಜನರು ಮಾಡಬೇಕು?
ಅನೇಕ ಜನರು ತಮ್ಮ ತಾಯಿ ಮತ್ತು ತಾಯಿಯ ದಿನದಂದು ತಾಯಿ ಅಂಕಿ ಮರೆಯದಿರಿ. ತಾಯಿ ಅಂಕಿ stepmothers, ಸಂಬಂಧಿಕರು, ತಾಯಿ ಇನ್ ಕಾನೂನು, ರಕ್ಷಕನಾಗಿ (ಉದಾ. ಒಂದು ಸಾಕು ಪೋಷಕ), ಅಥವಾ ಒಂದು ಕುಟುಂಬ ಸ್ನೇಹಿತ ಒಳಗೊಂಡಿರಬಹುದು. ತಾಯಿಯ ದಿನ ಆಚರಿಸಲು ವಿವಿಧ ಬಗೆಗಳು. ಅವರು (ಆದರೆ ಸೀಮಿತವಾಗಿಲ್ಲ):
ಕಾರ್ಡ್ ನೀಡುವ, ಹೂಗಳು, ಅಥವಾ ಕೇಕ್.
ಕುಟುಂಬ ಸಭೆಗಳು ಅಥವಾ ಭೇಟಿ.
ಕುಟುಂಬ ಬೆಳಗಿನ ಉಪಹಾರ, brunches, ಉಪಾಹಾರದಲ್ಲಿ ಮತ್ತು ಔತಣಕೂಟದ ಮನೆಯಲ್ಲಿ, ಒಂದು ಕೆಫೆ ಅಥವಾ ರೆಸ್ಟೋರೆಂಟ್ ಎರಡೂ.
ವೈಯಕ್ತಿಕ ಫೋನ್ ಕರೆಗಳು, ವಿಶೇಷವಾಗಿ ತಮ್ಮ ತಾಯಿ ಮತ್ತು / ಅಥವಾ ತಾಯಿ ಅಂಕಿ ದೂರ ವಾಸಿಸುವ ಮಕ್ಕಳಿಂದ.
ತಾಯಿಯ ಡೇ ಕವನಗಳು ಮತ್ತು ಸಂದೇಶಗಳನ್ನು.
ಚಾಕೊಲೇಟ್, ಆಭರಣ, ಭಾಗಗಳು, ಉಡುಪು, ಹವ್ಯಾಸ ಉಪಕರಣ ಅಥವಾ ಉಪಕರಣಗಳು, ಕರಕುಶಲ ವಸ್ತುಗಳು, ಅಥವಾ ಉಡುಗೊರೆಯಾಗಿ ರಶೀದಿ ಉಡುಗೊರೆಗಳು.
ತಾಯಂದಿರು ಮತ್ತು ತಾಯಿ ಅಂಕಿ ಸಿನೆಮಾ ಒಂದು ದಿನ.
ತಾಯಿಯ ಡೇ ವಿವಿಧ ದೇಶಗಳ, ಗುಲಾಬಿ ಬಣ್ಣವನ್ನು ಜನಪ್ರಿಯ ತಾಯಿಯ ಡೇ ಪ್ರೆಸೆಂಟ್ಸ್ ಅಲ್ಲಿ ಚೀನಾ ಸೇರಿದಂತೆ ಆಚರಿಸಲಾಗುತ್ತದೆ. ಸಮೋವಾ ಕೆಲ ಗುಂಪುಗಳ ದೇಶದಾದ್ಯಂತ ವಿಸ್ತಾರವಾದ ಹಾಡು ಮತ್ತು ನೃತ್ಯ ಪ್ರದರ್ಶನಗಳು ಸಂಘಟಿಸಲು. ಅವರು ತಾಯಿ ಸಮೋವನ್ ಸಮಾಜಕ್ಕೆ ಮಾಡುವ ಕೊಡುಗೆಗಳನ್ನು ಆಚರಿಸುತ್ತಾರೆ.
ಪಬ್ಲಿಕ್ ಲೈಫ್
ತಾಯಿಯ ಡೇ ಆಚರಿಸಲಾಗುತ್ತದೆ ದೇಶಗಳಲ್ಲಿ ಅವಲಂಬಿಸಿ ವಿವಿಧ ದಿನಗಳಲ್ಲಿ ಬರುತ್ತದೆ. ಇದು ಹಲವಾರು ದೇಶಗಳಲ್ಲಿ ಮೇ ಎರಡನೇ ಭಾನುವಾರ ನಡೆದ ಇದೆ ಆಸ್ಟ್ರೇಲಿಯಾ , ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ . ಇದು ಈಸ್ಟರ್ ಭಾನುವಾರದ ಹಿಂದಿನ ನಿಖರವಾಗಿ ಮೂರು ವಾರಗಳ ನಡೆಯುತ್ತದೆ ಯುನೈಟೆಡ್ ಕಿಂಗ್ಡಮ್ . ಭಾನುವಾರ ಸಾಮಾನ್ಯವಾಗಿ ಈ ದೇಶಗಳಲ್ಲಿ ಅಲ್ಲದ ಶಾಲೆ ಮತ್ತು ಕೆಲಸ-ಮಾಡದ ದಿನಗಳಾಗಿವೆ.
ತಾಯಿಯ ಡೇ ಇಂತಹ ಕೋಸ್ಟಾ ರಿಕಾ (ಆಗಸ್ಟ್ 15, ಅದೇ ದಿನ ದೇಶಗಳಲ್ಲಿ ವಾರ್ಷಿಕ ಸಾರ್ವಜನಿಕ ರಜಾ ಅಸಂಪ್ಷನ್ ಡೇ ),
ಜಾರ್ಜಿಯಾ (ಮಾರ್ಚ್ 3),
ಸಮೋವಾ (ಎರಡನೇ ಸೋಮವಾರ ಮೇ)
ಮತ್ತು
ಥೈಲ್ಯಾಂಡ್ (ಆಗಸ್ಟ್ 12).
ಕೆಲವು ಜನರು ಚಿಕಿತ್ಸೆ ತಮ್ಮ ತಾಯಿ ತೆಗೆದುಕೊಳ್ಳುವಂತೆ ರೆಸ್ಟೋರೆಂಟ್ ಮತ್ತು ಕೆಫೆಗಳು ಸಾಮಾನ್ಯ ಹೆಚ್ಚು ಜನನಿಬಿಡ ಇರಬಹುದು.
ಹಿನ್ನೆಲೆ
ಆರಂಭಿಕ ತಾಯಿಯ ಡೇ ಆಚರಣೆಗಳು ಕೆಲವು ಮೂಲಗಳ ಪ್ರಕಾರ, ಪ್ರಾಚೀನ ಗ್ರೀಕ್ ನಾಗರಿಕತೆಯಲ್ಲಿ, ರಿಯಾ, ತಾಯಿಯ ದೇವತೆಗಳ ಗೌರವಿಸಲು ಮರಳುವುದಿಲ್ಲ ಆಚರಣೆಗಳು ರ ಮಾಡಬಹುದು. ನಂತರ, ತಾಯಿಯ ಭಾನುವಾರ ಯುನೈಟೆಡ್ ಕಿಂಗ್ಡಮ್ ಜನರು, ಅವರು ಬ್ಯಾಪ್ಟೈಜ್ ಮಾಡಲಾಯಿತು ಚರ್ಚ್ ಭೇಟಿ ಈಗ ಆಧುನಿಕ ಕಾಲದಲ್ಲಿ ಮಾತೃತ್ವ ಆಚರಿಸುತ್ತದೆ ಆದರೂ ಸಾಂಪ್ರದಾಯಿಕವಾಗಿ ಒಂದು ದಿನ.
ಯುನೈಟೆಡ್ ಸ್ಟೇಟ್ಸ್ ಸಂಪ್ರದಾಯ ಸ್ಥಾಪಿಸುವಲ್ಲಿ ಮುಖ್ಯವಾಗಿದ್ದ ಜೂಲಿಯಾ ವಾರ್ಡ್ ಹೋವೆ ಮತ್ತು ಅನ್ನಾ ಜಾರ್ವಿಸ್, - ತಾಯಿಯ ಡೇ ಆಧುನಿಕ ಮೂಲವು ಎರಡು ಮಹಿಳೆಯರಿಗೆ ಎನ್ನಬಹುದಾಗಿದೆ. 1870 ಸುಮಾರು, ತಾಯಿಯ ಡೇ ಪ್ರತಿ ವರ್ಷ ಆಚರಿಸಬೇಕೆಂದು ಜೂಲಿಯಾ ವಾರ್ಡ್ ಹೋವೆ ಕರೆಯಲಾಗುತ್ತದೆ. ಇದು ತನ್ನ ಪ್ರಾಯೋಜಕತ್ವವನ್ನು ಸುಮಾರು 10 ವರ್ಷಗಳ ಬೋಸ್ಟನ್ ನಡೆದ ಮುಂದುವರೆಯಿತು, ಆದರೆ ನಂತರ ನಿಂತುಹೋಯಿತು. ಇತರ ಮೂಲಗಳು ಜೂಲಿಯೆಟ್ ಕಾಲ್ಹಾನ್ ಬ್ಲೇಕೆಲಿಯಿಂದ 1800 ರ ಕೊನೆಯಲ್ಲಿ, ಅಲ್ಬಿಯನ್ ಮಿಚಿಗನ್ನ ತಾಯಿಯ ಡೇ ಚಾಲನೆ ಹೇಳುತ್ತಾರೆ. ತನ್ನ ಮಕ್ಕಳು ಪ್ರತಿ ವರ್ಷ ಅವರಿಗೆ ಈ ಗೌರವ ಹಣ ಮತ್ತು ತಮ್ಮ ತಾಯಿ ಗೌರವಿಸಲು ಇತರರು ಒತ್ತಾಯಿಸಿದರು.
1907 ರಲ್ಲಿ, ಅನ್ನಾ ಜಾರ್ವಿಸ್ ತಾಯಿ, ಆನ್ ಜಾರ್ವಿಸ್, ಗ್ರಾಫ್ಟನ್ ರಲ್ಲಿ ಪಶ್ಚಿಮ ವರ್ಜೀನಿಯಾದ ಮೆಮೊರಿ ಖಾಸಗಿ ತಾಯಿಯ ದಿನಾಚರಣೆಯ ನಡೆಯಿತು. 1908 ರಲ್ಲಿ, ಅವರು 407 ಮಕ್ಕಳು ಮತ್ತು ಅವರ ತಾಯಂದಿರು ಆಕರ್ಷಿಸಿತು ಚರ್ಚ್ ಸೇವೆ ವ್ಯವಸ್ಥೆ ಪ್ರಮುಖ ಪಾತ್ರ. ಎ ಮದರ್ಸ್ ಡೇ ಇಂಟರ್ನ್ಯಾಷನಲ್ ಅಸೋಸಿಯೇಷನ್ ಇತರ ದೇಶಗಳಲ್ಲಿ ರಜಾ ಉತ್ತೇಜಿಸಲು 1912 ರಲ್ಲಿ ಸ್ಥಾಪಿಸಲಾಯಿತು. ತಾಯಿಯ ಡೇ ನಂತರ ಹೆಚ್ಚು ಜನಪ್ರಿಯ ಬೆಳೆದಿದೆ.
ಅನೇಕ ಜನರು ತಾಯಿಯ ಡೇ ಈಗ ಹೆಚ್ಚಾಗಿ ಕಾರ್ಡ್ ಕಂಪನಿಗಳು, ಹೂವಿನ ಅಂಗಡಿಗಳು, ಆಭರಣ ಮಳಿಗೆಗಳು, ಉಡುಗೊರೆ ಅಂಗಡಿಗಳು, ರೆಸ್ಟೋರೆಂಟ್, ಹೋಟೆಲ್, ಮತ್ತು ಈ ಕಾರ್ಯಕ್ರಮಕ್ಕಾಗಿ ಪ್ರಚಾರಗಳು ಮತ್ತು ವಿಶೇಷ ವ್ಯವಹರಿಸುತ್ತದೆ ಜಾಹೀರಾತು ಮಳಿಗೆಗಳಲ್ಲಿ ಜೊತೆ ವಾಣಿಜ್ಯೀಕರಣಗೊಂಡಿದೆ ಎಂದು ನಂಬುತ್ತಾರೆ. ಅಣ್ಣಾ ಜಾರ್ವಿಸ್, ತನ್ನ ಜೀವಿತಾವಧಿಯಲ್ಲಿ ಯಶಸ್ವಿಯಾಗಲಿಲ್ಲ ಮೊಕದ್ದಮೆ ತಾಯಿಯ ಡೇ ಅತಿ ವಾಣಿಜ್ಯೋದ್ಯಮ ನಿಲ್ಲಿಸಲು ಸಲ್ಲಿಸಿದರು.
ಚಿಹ್ನೆಗಳು
ತಾಯಿಯ ದಿನದಂದು ತಾಯಿ ಮತ್ತು ತಾಯಿ ಅಂಕಿ ಒಂದು ಮೆಚ್ಚುಗೆ ತೋರಿಸಲು ವಿವಿಧ ಬಗೆಗಳು. ಅವರು ದಿನ ಅಧಿಕೃತ ಸಂಕೇತವಾಗಿ ಅಣ್ಣಾ ಜಾರ್ವಿಸ್ ಕೇಳಿದಾಗ ಬಿಳಿ ಗುಲಾಬಿ ಬಣ್ಣವನ್ನು, ಮಾತ್ರವಲ್ಲದೆ ಇಂಟರ್ನ್ಯಾಷನಲ್ ತಾಯಿಯ ಡೇ ಶ್ರೈನ್ ಸೇರಿವೆ. ಈ ದೇವಾಲಯವನ್ನು ಮಾತೃತ್ವದ ಸಂರಕ್ಷಣೆ ಸಮರ್ಪಿಸಲಾಗಿದೆ. ರಚನೆ ಯುನೈಟೆಡ್ ಸ್ಟೇಟ್ಸ್ ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ಪಟ್ಟಿಯಲ್ಲಿ ಕೂಡಾ ಸೇರ್ಪಡೆಗೊಂಡಿದೆ. ಇದು ಗ್ರಾಫ್ಟನ್ ಒಂದು ಸಂಗ್ರಹಾಲಯ ಪಶ್ಚಿಮ ವರ್ಜಿನಿಯಾ ಒಟ್ಟಿಗೆ ಇದೆ, ಮತ್ತು ಉಳಿಸಿಕೊಳ್ಳಲು ಪ್ರಚಾರ ಮತ್ತು ಮಾತೃತ್ವದ ಆತ್ಮ ಬೆಳೆಸುವ ಗುರಿ ಇದೆ.
Name
Language
ತಾಯಂದಿರ ದಿನ
Kannada
माँ के दिन
Hindi
Mother's Day
English
Fete Des Meres
French
Muttertag
German
Día de las Madres
Spanish
Morsdag
Norwegian
Moederdag
Dutch
Ziua Mamei
Romanian
Morsdag
Norwegian (nynorsk)
ಗಮನಿಸಿ: ಈ ಲೇಖನ ತಾಯಿಯ ದಿನದಂದು ಒಂದು ಸಾಮಾನ್ಯ ಅವಲೋಕನ ಒದಗಿಸುತ್ತದೆ ಮತ್ತು ವಿವಿಧ ಪದ್ಧತಿಗಳು, ಸಂಪ್ರದಾಯಗಳು, ಸಂಕೇತಗಳು, ಮತ್ತು ದಿನ ಆಚರಿಸುತ್ತದೆ ಪ್ರತಿಯೊಂದು ದೇಶದ ಅಭ್ಯಾಸಗಳ ಪ್ರತಿ ವಿವರ ನೀಡುವುದಿಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
