ಹೆಗಲಲ್ಲಿ ಹೊತ್ತು,
ಹಾದಿ ಬೀದಿಯಲ್ಲಿ ರಾಜನಂತೆ,
ಹೊತ್ತು ತಿರುಗಿದವನು. ಕಷ್ಟವ
ತಾನುಂಡು,ಸುಖದಲ್ಲಿ ಪೊರೆದವ, ನನ್ನಪ್ಪ.
ತುತ್ತು ತುತ್ತಿಗೆ ಪರದಾಡಿ,
ಅಮೃತವ ನನಗಿಕ್ಕಿ.
ನೋವಿನ ಭಾದೆ ಸರಿಸಿ,
ಎಲ್ಲರಂತೆ ಸಲಹಿದವ, ನನ್ನಪ್ಪ.
ಸಾಲವ ಲೆಕ್ಕಿಸದೆ,
ಧನಿಕರಿಗೆ ಹೊಲವಿಟ್ಟು,
ವಿದ್ಯಾಮೃತವನಿತ್ತು,
ಸಮಾಜದಲ್ಲೊಂದು ಮೂರ್ತಿ ಕಡೆದವ ನನ್ನಪ್ಪ.
ಜಾತಿ ಧರ್ಮದ ಸೋಗಿಲ್ಲದೆ,
ಪ್ರೀತಿ ವಿಶ್ವಾಸವ ಬಿತ್ತಿ,
ಕರುಣಾಮಯಿಯಾಗು,
ಎಂದರಸಿ ಬೆಳೆಸಿದವ, ನನ್ನಪ್ಪ.
ಸೊಗಳಾಡಿ ಮಾತನಾಡದ,
ದುಷ್ಟರ ಕಡುವೈರಿ.
ಕಷ್ಟದಲ್ಲೂ ಮರುಗಿದರು,
ಭ್ರಷ್ಟತೆಗೆ ಕೈ ಚಾಚದವ,
ನಿಷ್ಟುರ ನುಡಿಯುವ ನನ್ನಪ್ಪ.
ಮೌನದಲ್ಲಿ ಮಾತಾಗಿ,
ನೋವಿನಲ್ಲೂ ಮುಖ ಅರಳಿಸಿ,
ನಗುವ,ನಗು ಮೊಗದ ನಂದಾದೀಪ.
ಬಾಳಿಗೆ ಬೆಳಕಾದ ನನ್ನಿ ಆಶಾಕಿರಣ, ನನ್ನಪ್ಪ.
✍ ರಚನೆ:ಚೌಡ್ಲಾಪುರ ಸೂರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.