fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಸೋಮವಾರ, ಡಿಸೆಂಬರ್ 31, 2018

ನಾಡಿನೊಳಗೆ ನಾಡು ನಮ್ಮ ಕನ್ನಡ ನಾಡು

ನಾಡಿನೊಳಗೆ ನಾಡು ನಮ್ಮ ಕನ್ನಡ ನಾಡು
ಅಂದದ ನಾಡು, ಶ್ರೀಗಂದದ ಬೀಡು,
ಏಕತೆ ಭಾವೈಕ್ಯತೆಯಿಂದ ಕೂಡಿದ ನಾಡು,
ನಮ್ಮ ಚಲುವ ಕನ್ನಡ ನಾಡು..

ಜಾತಿ ಮತಗಳೆಂಬ ಬೇಧವಿಲ್ಲದ ನಾಡು,
ಮೇಲು ಕೀಳೆಂಬ ಭಾವವಿಲ್ಲದ ಬೀಡು,
ನೀತಿ ನಿಯಮ, ಕಲೆ ಸಂಸ್ಕೃತಿಯು,
ನೆಲೆಸಿರುವ ಏಕೈಕ ನಾಡು ಈ ಕರುನಾಡು..

ಹಸಿರು ಸಹ್ಯಾದ್ರಿಯಿಂದ ಕೂಡಿದ ನಾಡು,
ವೀರಧಿರರಾಳಿದ, ವರ ಸಾಧು ಸಂತರ,
ಸಂಗೀತ, ಸಾಹಿತ್ಯ, ಕಲೆ ಚಿತ್ರಕಲೆಯ,
ನೆಲೆಬೀಡು ಈ ನಮ್ಮ ಕರುನಾಡು..

ಒಮ್ಮೆಯಾದರೂ ನೋಡು ನಮ್ಮ ನಾಡು,
ಅಂದ ಚಂದದ ನಮ್ಮ ಕನ್ನಡ ನಾಡು...

ಕೃಪೆ - ಜ್ಯೋತಿ ಭಟ್

ಭಾನುವಾರ, ಡಿಸೆಂಬರ್ 30, 2018

ಡಾ|| ವಿಷ್ಣುವರ್ಧನ್ ರವರ ಸ್ಮರಣಾರ್ಥ (2018)

ಕನ್ನಡದ ಉಳಿವಿಗೆ ಹೋರಾಟಗಳು ಬೇಕಿಲ್ಲ...,
ಕರುನಾಡಿನಲ್ಲಿರುವವರು ಕನ್ನಡ ಮಾತನಾಡಿದರೆ ಸಾಕು.... 
                                                                                                           ==> ಡಾ|| ವಿಷ್ಣುವರ್ಧನ 

ಡಾ|| ವಿಷ್ಣುವರ್ಧನ ರವರ ನೆನಪಿಗಾಗಿ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯವರು ಸನ್ 2013 ರಲ್ಲಿ ರೂ.5 ಮುಖಬೆಲೆಯುಳ್ಳ ಅಂಚೆಯನ್ನು ಬಿಡುಗಡೆಗೊಳಿಸಿದ್ದಾರೆ.

ಸೋಮವಾರ, ಡಿಸೆಂಬರ್ 24, 2018

ಪ್ರತಿಫಲ

ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಿಂದುಂಟಾಗುವ ಫಲ
ಕಲ್ಲು ಹೊಡೆದಿದ್ದ ಕೈ ಪ್ರತಿಯಾಗಿ ಉದುರಿದ ಹಣ್ಣು
ಮಾಡಿದ್ದುಣ್ಣುವ ಮಹರಾಯರ ಮಹತ್ಕಾರ್ಯಗಳ ಫಲ
ಗೋಡೆಗೆ ಬಡಿದ ಚೆಂಡು
ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೇ ಕರ್ಮ ಮಾಡು ಎಂದು ಕೃಷ್ಣ ಅರ್ಜುನನಿಗೆ ಹೇಳಿರುವುದರಿಂದ ನಾವಿದಕ್ಕೆ ತಲೆಕೆಡಿಸಿಕೊಂಡಿಲ್ಲ
ಕಲಿಯುಗದಲ್ಲಿ ಪ್ರವೃತ್ತಿಯ ಪ್ರೇರಕವೇ ಇದು
ಪ್ರತಿಫಲಾಪೇಕ್ಷೆಯಿಲ್ಲದೇ ಯಾರಾದರೂ ಉಪಕಾರ ಮಾಡಿದರೆ ಅದು ಅಕಸ್ಮಾತ್ತಾಗಿ ಆಗಿರುವ ಸಂಭವವೂ ಇದೆ
ಇದರ ಲಭ್ಯತೆಯನ್ನನುಸರಿಸಿ ಕಾರ್ಯ ಮಾಡಬೇಕೋ ಬೇಡವೋ ಎಂಬುದರ ನಿರ್ಣಯವಾಗುತ್ತದೆ.
ಎಷ್ಟು ಸಿಗುತ್ತೆ ? ಎಂದರೆ ಇದೇ ಅರ್ಥ
ಕೆಲಸ ಮಾಡದಿದ್ದರೂ ಫಲ ಸಿಗುತ್ತೆ ಸರ್ಕಾರಿ ಅಧಿಕಾರಿಗಳಿಗೆ
ದೇವರಿಗೆ ನೈವೇದ್ಯ ಮಾಡಿದ್ದರ ಫಲವೆಂದರೆ, ಅದನ್ನು ನಾವು ಮತ್ತೆ ನೈವೇದ್ಯ ಮಾಡುವುದೇ
ಪ್ರತಿಫಲಕ್ಕಾಗಿ ಕಾಯುತ್ತಾ 'ಕುಳಿತುಕೊಳ್ಳುವುದಕ್ಕಿಂತ' ಕಾಯುತ್ತಾ ಮಲಗುವುದು ಹೆಚ್ಚು ವಾಸಿ
ಲಕ್ಷಗಟ್ಟಲೆ ದಾನ ಕೊಟ್ಟವಗೆ ಸನ್ಮಾನ ಮಾಡುವುದೇ ಅತನಿಗೆ ಪ್ರತಿಫಲ

-ವಿಶ್ವನಾಥ ಸುಂಕಸಾಳ

ಶನಿವಾರ, ಡಿಸೆಂಬರ್ 22, 2018

ನೆನಪಿದೆ ಅಮ್ಮ

ಇನ್ನೂ ನೆನಪಿದೆ ಅಮ್ಮ,
ನಿನ್ನುದರ ಸೀಳಿ ನಾ ಹೊರಬಂದಾಗ,
ಸಿಕ್ಕ ಮರುಹುಟ್ಟಿನಲೂ,
ನನ್ನ ನೋಡುವ ನಿನ್ನ ಕಾತರ.
ಇನ್ನೂ ನೆನಪಿದೆ ಅಮ್ಮ,
ನಿನ್ನೆದೆಯ ನಾ ಚೀಪುವಾಗ,
ನಾನೊದ್ದ ಕಾಲಿನ ನೋವಿಗೆ,
ನಿನ್ನ ತುಟಿಯಲ್ಲಿ ಮಿನುಗಿದ ನಗು.
ಇನ್ನೂ ನೆನಪಿದೆ ಅಮ್ಮ,
ಮೊಸರನ್ನವನಿಕ್ಕುತ ನೀ ತೋರಿದ,
ಮಾಳಿಗೆಯ ಅಚ್ಚರಿಯ ಚಂದಿರ,
ಎಣಿಸಿದ ನಕ್ಷತ್ರ.
ಇನ್ನೂ ನೆನಪಿದೆ ಅಮ್ಮ,
ನಾ ನಿನ್ನ ತೊದಲು ಕರೆದಾಗ,
ಬಳಿ ಓಡಿ ಬಂದು,
ನೀನಪ್ಪಿದ ಬಿಸಿ ಸ್ಪರ್ಶ.
ಇನ್ನೂ ನೆನಪಿದೆ ಅಮ್ಮ,
ಅಪ್ಪ ಬರೆದ ಬೆನ್ನ ಬಾಸುಂಡೆಗಳ,
ಮೇಲೆ ನೀ ಹಚ್ಚಿದ,
ಕಣ್ಣೀರ ಲೇಪನ.
ಇನ್ನೂ ನೆನಪಿದೆ ಅಮ್ಮ, 
ಯಶಸ್ಸಿನುತ್ತುಂಗವನೇರಲು,
ನೀ ಗುಂಡಿಗೆಯಲ್ಲಿ ಬಿತ್ತಿದ,
ಉತ್ಸಾಹದ ಚಿಲುಮೆ.
ಇನ್ನೂ ನೆನಪಿದೆ ಅಮ್ಮ,
ನಾನವಳ ಕೈ ಹಿಡಿದಾಗ,
ನಿನ್ನ ಕಣ್ಣಂಚಿನಲಿ,
ಜಿನುಗಿದ ಆ ಮುತ್ತು ಹನಿ.
ಇನ್ನೂ ನೆನಪಿದೆ ಅಮ್ಮ, 
ಇದ್ದಕಿದ್ದಂತೆ ನೀನೆದ್ದು,
ಹೊರಟು ನಿಂತಾಗ,
ಬೆಂಬಿಡದೆ ಕಾಡಿದ ಅಸಾಧ್ಯ ಯಾತನೆ.
--- ಇಂದ--ಸಂತು ಆಯ್ ಎಮ್

ಗುರುವಾರ, ಡಿಸೆಂಬರ್ 20, 2018

ಮಕ್ಕಳಾಟ..

ಬಿತ್ತೊಂದು ಮಳೆ
ನೆತ್ತಿ ತಣ್ಣಗಾಗಲಿಲ್ಲ
ಕತ್ತೆತ್ತುವ ಭರದಲ್ಲಿ
ಕತ್ತು ಉಳುಕಿತಲ್ಲ||

ಬಾರೊ ಬಾರೊ
ಮಳೆರಾಯ
ಮಕ್ಕಳ ಹಾಡಿಗೆ
ಕುಣಿಯಲಾಗಲಿಲ್ಲ||

ಚೌಕಾ ಬಾರಾ
ಕವಡೆ ಕಾಯಿ
ಕುಲು ಕುಲುಕಿ
ಹಾಕಲಾಗಲಿಲ್ಲ||

ಚಿನ್ನಿ ದಾಂಡು
ಗಿರ ಗಿರ ಗಿಲ್ಲಿ
ಹೊಡೆಯುವ ಹಳೆ ಆಟ
ಹೇಳಿಕೊಡಲಾಗಲಿಲ್ಲ||

ಚನ್ನೆಮಣೆಯ
ಅಟ್ಟದಿ ತೆಗೆದು
ಮಕ್ಕಳೊಟ್ಟಿಗೆ ಕುಳಿತು
ಆಡಿಸಲಾಗಲಿಲ್ಲ||

ಕಣ್ಣಾ ಮುಚ್ಚೆ
ಕಾಡೆ ಗೂಡೆ….
ಅಡಗುವ ಆಟ
ತಿಳಿಸಿಕೊಡಲಾಗಲಿಲ್ಲ||

ತಿರುಗುವ ಮಕ್ಕಳ
ಒಟ್ಟಿಗೆ ಸೇರಿಸಿ
ಚಂದಮಾಮಾ ಕಥೆ
ಹೇಳಲಾಗಲಿಲ್ಲವಲ್ಲ||

ಕಜ್ಜಾಯದಡುಗೆ
ಕೈ ತುತ್ತ ನೀಡಿ
ಒಟ್ಟಿಗೆ ಕುಳಿತ
ಬೆಳದಿಂಗಳೂಟವಿಲ್ಲ||

ಮಕ್ಕಳ ಕರೆದು
ಹೇಳಿದರಂದರು
ಇವೆಲ್ಲ ಓಲ್ಡ ಜಮಾನಾ
ಹೋಗಜ್ಜಿ||

ನಮಗೇನಿದ್ದರು
ಟೀವೀನೇ ಬೇಕು
ಮೊಬೈಲು ಬೇಕು
ನಿನ್ನಾಟ ಯಾರಿಗೆ ಬೇಕು||

ರುಚಿಕಟ್ಟಾದ
ಪಿಜ್ಜಾ ಬರಗರ್
ಸಾಕು ಹೊಟೇಲಿನ
ಮಂದ ದೀಪ||

ಬೈ ಬೈ ಅಜ್ಜಿ
ಹೊರಡುವೆವೀಗ
ಬಾಗಿಲು ತೆಗಿ ಬರುವೆವು
ರಾತ್ರಿ ಹನ್ನೆರಡರೊಳಗೆ ||
From - Sandhyadeepa…

ಶನಿವಾರ, ಡಿಸೆಂಬರ್ 15, 2018

3 ರ ಮಹತ್ವ

    ೧.    ಈ ಮೂವರನ್ನು ಆದಾರದಿಂದ ಕಾಣಿರಿ  --   ತಂದೆ,  ತಾಯಿ,  ಗುರು.

        ೨.   ಈ ಮೂವರನ್ನು ನೆನಪಿನಲ್ಲಿಡಿ        --   ಬ್ರಹ್ಮ,  ವಿಷ್ಣು,  ಮಹೇಶ್ವರ.

            ೩.   ಈ ಮೂವರನ್ನು ಗೌರವಿಸಿರಿ.       --  ವೃದ್ಧಾಪ್ಯ,  ಧರ್ಮ,  ಕಾನೂನು.

                ೪.   ಈ ಮೂವರನ್ನು ಹೊಗಳು.       --  ಗುಣ,  ಸಂಗೀತ,  ಬುದ್ಧಿಶಕ್ತಿ.

                    ೫.   ಈ ಮೂವರಿಗೆ  ಚೇಷ್ಟೆ ಮಾಡದಿರಿ.   --  ಹುಚ್ಚ,  ಮೊರ್ಖ,  ಮುದುಕ.

                        ೬.   ಈ ಮೂವರನ್ನು ದಕ್ಷತೆ ಇಡು.      --  ಶಬ್ದ,  ನಡುವಳಿಕೆ,  ನೀತಿ.

                            ೭.   ಈ ಮೂರನ್ನು ನಿಯಮದಿಂದ ಮಾಡಿರಿ.-- ಭಜನೆ,  ಭೋಜನ,  ವ್ಯಾಯಾಮ.

                                ೮.   ಈ ಮೂರನ್ನು ತಪ್ಪಿಸು.  --  ಕುಡಿಯುವದು,  ಸೇದುವದು, ಜೂಜಾಡುವದು.

                                    ೯.   ಈ ಮೂರನ್ನು ಕೈ ಬಿಡಬೇಕು.         --  ವಚನ,  ಗೆಳತನ,  ಪ್ರೀತಿ.

                                        ೧೦.  ಈ ಮೂರನ್ನು ಲಕ್ಷಗೊಡು.          --  ಪದ,  ನಡತೆ,  ನಡವಳಿಕೆ.

                                            ೧೧.  ಈ ಮೂರಕ್ಕೆ ಅಂಜುತ್ತಿರು.           --  ಸುಳ್ಳು,  ನಿಂದನೆ,  ಕಳ್ಳತನ.

                                                ೧೨.  ಈ ಮೂರ ಕಾಲಕ್ಕೆ ಹೊಂದಿನಡೆ. --  ಚಳಿಗಾಲ,  ಬೆಸಿಗೆಗಾಲ,  ಮಳೆಗಾಲ.

                                                    ೧೩.  ಈ ಮೂರನ್ನು ನಿಂತ್ರಿಸು.         --  ನಾಲಿಗೆ,  ಸಿಟ್ಟು,  ನಿಂದನೆ.

                                                        ೧೪.  ಈ ಮೂರನ್ನು ಪ್ರೀತಿಸು.       --   ಪ್ರಮಾಣಿಕತೆ,  ಸತ್ಯೆ,  ಪಾವಿತ್ರೆ.

                                                            ೧೫.  ಈ ಮೂರನ್ನು ತಡೆಯಿರಿ.    --  ಸೋಮಾರಿತನ,  ಸುಳ್ಳು,  ಆಸೆಬುರುಕತನ.

                                                                ೧೬.  ಈ ಮೂರನ್ನು ವೃದ್ಧಿಸಿಕೋ.  --  ಸಹಾನುಭೂತಿ,  ಆನಂದ,  ಸಮಾಧಾನ.

                                                                    ೧೭.  ಈ ಮೂರನ್ನು ನಿನ್ನ ವಶದಲ್ಲಿಡು.   --  ಇಂದ್ರಿಯ,  ಮನಸ್ಸು,  ಕ್ರೋಧ.

                                                                        ೧೮.  ಈ ಮೂರನ್ನು ವಿಚಾರದಲ್ಲಿಟ್ಟುಕೋ.-- ಸತ್ವಗುಣ, ರಜೋಗುಣ, ತಮೋಗುಣ.

                                                                            ೧೯.  ಈ ಮೂರನ್ನು ತಿಳಿದುಕೋ.    --  ವರ್ತಮಾನ,  ಭೂತ,  ಭವಿಷ್ಯತ 

                                                                                ೨೦. ಈ ಮೂರನ್ನು ವಾತ್ಸಲ್ಯದಿಂದ ನಡೆ. -- ದೇವಾಲಯ, ನ್ಯಾಯಾಲಯ, ಆತ್ಮಾಲಯ.
                                                                                                 ಸಂಗ್ರಹ: ಶ್ರೀ ವಿದ್ಯಾನಂದ.

                                                                                  ಸೋಮವಾರ, ಡಿಸೆಂಬರ್ 03, 2018

                                                                                  ಕಮ್ಮಿ / ಮಮ್ಮಿ

                                                                                  ದೊರದಿ0ದ ನೋಡಿದರೆ ಅವಳ ವಯಸ್ಸು ಕಮ್ಮಿ || ವಾಹ್ ವಾಹ್ ||
                                                                                  ದೊರದಿ0ದ ನೋಡಿದರೆ ಅವಳ ವಯಸ್ಸು ಕಮ್ಮಿ || ವಾಹ್ ವಾಹ್ ||
                                                                                   * * 
                                                                                  ಸಮೀಪ ಹೋಗಿ ನೋಡಿದಾಗ ಗೋತ್ತಾಯಿತು ಅವಳು 3 ಮಕ್ಕಳ ಮಮ್ಮಿ...

                                                                                  ಅಮ್ಮ - ಅಕ್ಕ - ತಾತ - ಅಜ್ಜಿ - ಅಣ್ಣ - ಶಾಲೆ - ಅಪ್ಪ - ಸ್ನೇಹಿತ - ಉದ್ಯೋಗ - ಸಂಸಾರ

                                                                                  ಅಮ್ಮನನ್ನು ಎರಡೂ ಕೈಗಳಲ್ಲಿ ಬಾಚಿ ತಬ್ಬಿಕೊಂಡು ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಟ್ಟು ಮನೆಯೊಳಗಿನ ಸರಿದಾಡುವ ವಸ್ತುಗಳನ್ನು ನೋಡುತ್ತಿದ್ದಾಗ ಈ ಜಗತ್ತು ಕುತೂಹಲದಿಂದ ಕಂಡದ್ದೇ ಬೇರೆ.

                                                                                  ಅಕ್ಕನ ಕಂಕುಳಲ್ಲಿ ಕುಳಿತು ಮನೆಯ ಹಜಾರ - ವರಾಂಡಗಳಲ್ಲಿ ಸುತ್ತಾಡುವಾಗ ನನ್ನ ಮನಸ್ಸಿನೊಳಗೆ ಹರಿದಾಡಿದ ಲೋಕವೇ ಬೇರೆ.

                                                                                  ತಾತನ ಹೆಗಲ ಮೇಲೆ ಕೂತು ಅಂಗಡಿ - ಆಟದ ಮೈದಾನ - ಬೀದಿಗಳಲ್ಲಿ ಸುತ್ತಾಡುವಾಗ ನನ್ನೊಳಗೆ ಮೂಡುತ್ತಿದ್ದ ಭಾವನೆಗಳೇ ಬೇರೆ.

                                                                                  ಅಜ್ಜಿಯ ಮಡಿಲಲ್ಲಿ ಮಲಗಿ ಕಥೆ ಕೇಳುತ್ತಾ ನಿದ್ರೆಗೆ ಜಾರುವಾಗ ಮನದಲ್ಲಿ ಆಗುತ್ತಿದ್ದ ತಾಕಲಾಟಗಳೇ ಬೇರೆ.

                                                                                  ಅಣ್ಣನ ಕೈ ಹಿಡಿದು ಹೆಗಲಿಗೆ ಬ್ಯಾಗು ನೇತಾಕಿಕೊಂಡು ಶಾಲೆಗೆ ಹೋದಾಗ ನಾನು ಕಂಡ ಜಗತ್ತೇ ಬೇರೆ.

                                                                                  ಒಂದರಿಂದ ಹತ್ತರವರೆಗೆ ಶಾಲೆಯಲ್ಲಿ ಸ್ನೇಹಿತರು - ಟೀಚರ್ ಗಳು - ಆಟಗಳು - ಪಿಕ್ ನಿಕ್ ಗಳು - ಸಾಂಸ್ಕೃತಿಕ ಕಾರ್ಯಕ್ರಮಗಳು - ಗಲಾಟೆಗಳು - ಪರೀಕ್ಷೆಗಳು - ಓ - ಆಗ ಕಂಡ ಪ್ರಪಂಚವೇ ಬೇರೆ.

                                                                                  ಅಪ್ಪನ ಜೊತೆ ಗಾಡಿಯಲ್ಲಿ ಕುಳಿತು ನಗರದ ಕಾಲೇಜಿಗೆ ಹೋಗಿ ಸೇರಿದಾಗ ನಾನು ಕಂಡ ದುನಿಯಾನೇ ಬೇರೆ.

                                                                                  ಸ್ನೇಹಿತರ ಜೊತೆ ಕಾಲೇಜಿನಲ್ಲಿ - ಸಿನಿಮಾ ಥಿಯೇಟರುಗಳಲ್ಲಿ - ಹೋಟೆಲುಗಳಲ್ಲಿ ಮಜಾ ಉಡಾಯಿಸುವಾಗ ಕಂಡ ಜಗತ್ತೇ ಬೇರೆ.

                                                                                  ಉದ್ಯೋಗ ದೊರೆತಾಗ ಒಂಟಿಯಾಗಿಯೇ ಹೋಗಿ ಸೇರಿ ಅಲ್ಲಿ ಸಹಪಾಠಿಗಳ ಜೊತೆ ಬೆರೆತಾಗ ನಾನು ಕಂಡ ಲೋಕವೇ ಬೇರೆ.

                                                                                  ನಾನು ಮೆಚ್ಚಿದವರೊಂದಿಗೆ ಅಪ್ಪ - ಅಮ್ಮ ಮದುವೆ ಮಾಡಿಕೊಟ್ಟಾಗ ನಾನು ಅನುಭವಿಸಿದ ಸಂಭ್ರಮವೇ ಬೇರೆ.

                                                                                  ನನ್ನೊಂದಿಗೆ ಜೊತೆಯಾದವರೊಂದಿಗೆ ಸಂಸಾರ ಮಾಡುವಾಗ ನಾನು ಕಂಡ ಲೋಕವೇ ಬೇರೆ.

                                                                                  ಮತ್ತೆ ಈಗ ನನ್ನ ಮಗು ನನ್ನ ಮಡಿಲಲ್ಲಿ ಮಲಗಿ ನನ್ನ ಎದೆ ಹಾಲು ಕುಡಿಯುತ್ತಾ ಪಿಳಪಿಳನೇ ಕಣ್ಣುಬಿಟ್ಡು ನನ್ನನ್ನೇ ನೋಡುತ್ತಿರುವಾಗ ನನ್ನಲ್ಲಿ ಮೂಡುತ್ತಿರುವ ಭಾವನೆಗಳೇ ಬೇರೆ.

                                                                                  ಎಷ್ಟೊಂದು ಸುಂದರ ಈ ಬದುಕಿನ ಪಯಣ.
                                                                                  ಕಾಲನ ಅಂಗಳದಲ್ಲಿ ಎಷ್ಟೊಂದು ಅದ್ಭುತ - ಆಶ್ಚರ್ಯ - ವಿಸ್ಮಯ.
                                                                                  ಬದುಕು ಸಾರ್ಥಕತೆ ಕಂಡ ಈ ನೆನಪಿನ ಪಯಣದಲಿ

                                                                                  ನಿಮ್ಮೊಂದಿಗೆ, 
                                                                                  .............................

                                                                                  ಪ್ರಬುಧ್ಧ ಮನಸ್ಸು ಪ್ರಬುಧ್ಧ ಸಮಾಜ.

                                                                                  ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
                                                                                  ಮನಸ್ಸುಗಳ ಅಂತರಂಗದ ಚಳವಳಿ.

                                                                                  ವಿವೇಕಾನ೦ದ. ಹೆಚ್.ಕೆ

                                                                                  1.. ಜಾಹೀರಾತು

                                                                                  2.ಜಾಹೀರಾತು

                                                                                  ಪದ ಪುಸ್ತಕ

                                                                                  ಹುಡುಕಾಟ ಫಲಿತಾಂಶಗಳು

                                                                                  ಕನ್ನಡದ ತಾಣ ಅನುಸರಿಸುವವರು