ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

3ರ ಮಹತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
3ರ ಮಹತ್ವ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 16, 2023

ಮದುವೆಯ ಆ ಮೂರು ಗಂಟು

     ಸಂಪ್ರದಾಯದ ಮದುವೆಯ ಸಂದರ್ಭದಲ್ಲಿ ತಾಳಿ ಕಟ್ಟುವ ಸಂಪ್ರದಾಯ ಬಹಳ ವಿಶೇಷ. ಮದುವೆ ಸಂದರ್ಭದಲ್ಲಿ ವರ ವಧುವಿನ ಕೊರಳಿಗೆ ತಾಳಿ ಕಟ್ಟುವ ಶಾಸ್ತ್ರವಿರುತ್ತದೆ. ತಾಳಿಯನ್ನು ಮದು ಮಗಳಿಗೆ ಕಟ್ಟುವ ಮುನ್ನ, ಅದನ್ನು 3 (ಮೂರು) ಅಥವಾ 5(ಐದು) ಮುತ್ತೈದೆಯರು ಮುಟ್ಟಿ ಹರಸುತ್ತಾರೆ. 'ಮದುಮಗಳು ಈ ತಾಳಿಯನ್ನು ಕಟ್ಟಿಸಿಕೊಂಡು, ನೂರ್ಕಾಲ ಸುಖವಾಗಿ ಬಾಳಲಿ, ನೆಮ್ಮದಿಯಿಂದ ಸಂಸಾರ ನಡೆಸಲಿ, ಹಲವು ಮಕ್ಕಳ ತಾಯಾಗಿ, ಯಶಸ್ವಿ ಗೃಹಿಣಿಯಾಗಿ ಜೀವನ ನಡೆಸಲಿ' ಎಂಬ ಆ ಮುತ್ತೈದೆಯರ ಹರಕೆಯಾಗಿರುತ್ತದೆ.
     ವರ ವಧುವಿನ ಕೊರಳಿಗೆ ತಾಳಿ ಕಟ್ಟುತ್ತಾನೋ ಆವಾಗ ಅವರಿಬ್ಬರು ಗಂಡ ಹೆಂಡತಿಯಾಗುತ್ತಾರೆ. ವರ ವಧುವಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ. ಎಲ್ಲರೂ ಅವರನ್ನು ಆಶೀರ್ವದಿಸುತ್ತಾರೆ. ಹಾಗಾದರೆ ವರನು 1) ಧರ್ಮೇಚ, 2) ಅರ್ಥೇಚ, 3) ಕಾಮೇಚ ಎಂದು ಹೇಳಿ ವಧುವಿನ ಕೊರಳಿಗೆ ಕಟ್ಟುವ ತಾಳಿಗೆ ಮೂರು ಗಂಟು ಹಾಕುತ್ತಾನೆ. ಆ ಮೂರು ಗಂಟಿನ ಅರ್ಥವನ್ನು ತಿಳಿಯೋಣ ಬನ್ನಿ.

ಧರ್ಮೇಚ: ಅಂದರೆ ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ . ಯಾವತ್ತೂ ನಾನು ಧರ್ಮಬದ್ಧವಾಗಿ, ನನ್ನ ಮಡದಿಯನ್ನು ನೋಡಿಕೊಳ್ಳುತ್ತೇನೆ. ಅವಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆ.

ಅರ್ಥೇಚ: ಅಂದರೆ ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ. ನನ್ನ ಮಡದಿಗೆ ಯಾವುದರಲ್ಲೂ ಕೊರತೆ ಬರದಂತೆ, ಪ್ರತಿಯೊಂದು ಧನಕನಕದ ಸವಿಯನ್ನು ಆಕೆಯೊಂದಿಗೆ ಜೊತೆಯಾಗಿ ಸವಿಯುತ್ತೇನೆ. ಅವಳನ್ನು ಖುಷಿಯಾಗಿಟ್ಟುಕೊಳ್ಳುತ್ತೇನೆ.

ಕಾಮೇಚ: ಅಂದರೆ ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ತೀರಿಸಿಕೊಳ್ಳುತ್ತೇನೆ. ಈ ಮೂರನೇ ಗಂಟಿನ ಅರ್ಥವನ್ನು ಪ್ರತಿಯೊಬ್ಬರು ಸರಿಯಾಗಿ ಅರ್ಥೈಸಿಕೊಳ್ಳಲೇಬೇಕು. ಗಂಡು ಹೆಣ್ಣು ಎಂದ ಮೇಲೆ ಬಯಕೆಗಳು ಸಹಳ ಅಲ್ಲವೇ? ಆ ಬಯಕೆಗಳ ಈಡೇರುವಿಕೆ ಗಂಡ ಹೆಂಡತಿ ಇಬ್ಬರೂ ಒಬ್ಬರಿಗೊಬ್ಬರು ಸಂತೋಷದಿಂದ, ಪ್ರೀತಿ ಪ್ರೇಮದಿಂದ ಒಟ್ಟಿಗೆ ಈಡೇರಿಸಿಕೊಂಡು ಕಾಮೇಚ ಎನ್ನುವ ಮೂರನೇ ಗಂಟಿನ ಮಹತ್ವವನ್ನು ಕಾಪಾಡಬೇಕು.

ಮಂಗಳವಾರ, ಜನವರಿ 01, 2019

ಬದುಕಿನಲ್ಲಿ ಮೂರ(3)ಕ್ಷರದ ಮಹತ್ವ

ಮಗು
"ಜನನ" ಎ೦ಬ ಮೂರಕ್ಷರದಿ೦ದ ಬಾಹ್ಯ
"ಪ್ರಪ೦ಚ" ಎ೦ಬ ಮೂರಕ್ಷರಕ್ಕೆ ಕಾಲಿಡುತ್ತಾನೆ.
..
ಅಲ್ಲಿ ತಾಯಿಯ
"ಅರೈಕೆ" ಎ೦ಬ ಮೂರಕ್ಷರದಿ೦ದ ಆರು ವರ್ಷಗಳನ್ನು ಕಳೆದು
"ಕಲಿಕೆ" ಎ೦ಬ ಮೂರಕ್ಷರ ಕಲಿಯಲು ಶಾಲೆಯ ಮೆಟ್ಟಿಲೇರುತ್ತಾನೆ.
..
ಅಲ್ಲಿ
"ಶಿಕ್ಷಕ" ಮೂರಕ್ಷರದವ
"ಬೋಧನೆ" ಎ೦ಬ ಮೂರಕ್ಷರ ಮಾಡಿ
"ವಿನಯ" ಎ೦ಬ ಮೂರಕ್ಷರ ಕಲಿಸುತ್ತಾನೆ,
..
ನ೦ತರ
"ವ್ಯಾಸ೦ಗ" ಎ೦ಬ ಮೂರಕ್ಷರವನ್ನು ಮು೦ದುವರೆಸಿ
"ಸಾಧನೆ" ಎ೦ಬ ಮೂರಕ್ಷರವನ್ನು ಮನದಲ್ಲಿಟ್ಟುಕೊ೦ಡು,
"ಶೋಧನೆ" ಎ೦ಬ ಮೂರಕ್ಷರದಿ೦ದ
"ಸಹನೆ" ಎ೦ಬ ಮೂರಕ್ಷರದ ಸಹಯೋಗದೊ೦ದಿಗೆ
"ನೌಕರಿ" ಎ೦ಬ ಮೂರಕ್ಷರವನ್ನು ತನ್ನ ಅದೃಷ್ಟದಿ೦ದ ಪಡೆಯುತ್ತಾನೆ.
..
ನ೦ತರ
"ಯೌವನ" ಎ೦ಬ ಮೂರಕ್ಷರಕ್ಕೆ ಸೋತು
"ಮದುವೆ" ಎ೦ಬ ಮೂರಕ್ಷರದ ಮೋಹ ಪಾಶಕ್ಕೆ ಬಲಿಯಾಗಿ
"ಸ೦ಗಾತಿ" ಎ೦ಬ ಮೂರಕ್ಷರದ ಜೊತೆ
"ಒಲುಮೆ" ಎ೦ಬ ಮೂರಕ್ಷರದಿ೦ದ
"ಮಕ್ಕಳು" ಎ೦ಬ ಮೂರಕ್ಷರ ಪಡೆದು 
"ಸ೦ಸಾರ" ಎ೦ಬ ಮೂರಕ್ಷರ ಸಾಗಿಸಲು
"ದುಡಿಮೆ" ಎ೦ಬ ಮೂರಕ್ಷರಕ್ಕೆ ಕಟ್ಟಿಬೀಳುತ್ತಾನೆ.
..
ನ೦ತರ
"ಜೀವನ" ಎ೦ಬ ಮೂರಕ್ಷರದ ಪಯಣ ಸಾಗುತ್ತಾ ಸಾಗುತ್ತಾ
"ವೃಧ್ಯಾಪ್ಯ" ಎ೦ಬ ಮೂರಕ್ಷರವು ಆವರಿಸಿದಾಗ
"ಖಾಯಿಲೆ" ಎ೦ಬ ಮೂರಕ್ಷರದಿ೦ದ
"ಆರೋಗ್ಯ" ಎ೦ಬ ಮೂರಕ್ಷರ ಕು೦ಠಿತವಾಗಿ
"ನೆಮ್ಮದಿ" ಎ೦ಬ ಮೂರಕ್ಷರವನ್ನು ಕಳೆದುಕೊ೦ಡು ಕೊನೆಗೊ೦ದು ದಿನ
"ಮರಣ" ಎ೦ಬ ಮೂರಕ್ಷರದಿ೦ದ ಮೋಕ್ಷಗೊಳ್ಳುತ್ತಾನೆ.

ಶನಿವಾರ, ಡಿಸೆಂಬರ್ 15, 2018

3 ರ ಮಹತ್ವ

    ೧.    ಈ ಮೂವರನ್ನು ಆದಾರದಿಂದ ಕಾಣಿರಿ  --   ತಂದೆ,  ತಾಯಿ,  ಗುರು.

        ೨.   ಈ ಮೂವರನ್ನು ನೆನಪಿನಲ್ಲಿಡಿ        --   ಬ್ರಹ್ಮ,  ವಿಷ್ಣು,  ಮಹೇಶ್ವರ.

            ೩.   ಈ ಮೂವರನ್ನು ಗೌರವಿಸಿರಿ.       --  ವೃದ್ಧಾಪ್ಯ,  ಧರ್ಮ,  ಕಾನೂನು.

                ೪.   ಈ ಮೂವರನ್ನು ಹೊಗಳು.       --  ಗುಣ,  ಸಂಗೀತ,  ಬುದ್ಧಿಶಕ್ತಿ.

                    ೫.   ಈ ಮೂವರಿಗೆ  ಚೇಷ್ಟೆ ಮಾಡದಿರಿ.   --  ಹುಚ್ಚ,  ಮೊರ್ಖ,  ಮುದುಕ.

                        ೬.   ಈ ಮೂವರನ್ನು ದಕ್ಷತೆ ಇಡು.      --  ಶಬ್ದ,  ನಡುವಳಿಕೆ,  ನೀತಿ.

                            ೭.   ಈ ಮೂರನ್ನು ನಿಯಮದಿಂದ ಮಾಡಿರಿ.-- ಭಜನೆ,  ಭೋಜನ,  ವ್ಯಾಯಾಮ.

                                ೮.   ಈ ಮೂರನ್ನು ತಪ್ಪಿಸು.  --  ಕುಡಿಯುವದು,  ಸೇದುವದು, ಜೂಜಾಡುವದು.

                                    ೯.   ಈ ಮೂರನ್ನು ಕೈ ಬಿಡಬೇಕು.         --  ವಚನ,  ಗೆಳತನ,  ಪ್ರೀತಿ.

                                        ೧೦.  ಈ ಮೂರನ್ನು ಲಕ್ಷಗೊಡು.          --  ಪದ,  ನಡತೆ,  ನಡವಳಿಕೆ.

                                            ೧೧.  ಈ ಮೂರಕ್ಕೆ ಅಂಜುತ್ತಿರು.           --  ಸುಳ್ಳು,  ನಿಂದನೆ,  ಕಳ್ಳತನ.

                                                ೧೨.  ಈ ಮೂರ ಕಾಲಕ್ಕೆ ಹೊಂದಿನಡೆ. --  ಚಳಿಗಾಲ,  ಬೆಸಿಗೆಗಾಲ,  ಮಳೆಗಾಲ.

                                                    ೧೩.  ಈ ಮೂರನ್ನು ನಿಂತ್ರಿಸು.         --  ನಾಲಿಗೆ,  ಸಿಟ್ಟು,  ನಿಂದನೆ.

                                                        ೧೪.  ಈ ಮೂರನ್ನು ಪ್ರೀತಿಸು.       --   ಪ್ರಮಾಣಿಕತೆ,  ಸತ್ಯೆ,  ಪಾವಿತ್ರೆ.

                                                            ೧೫.  ಈ ಮೂರನ್ನು ತಡೆಯಿರಿ.    --  ಸೋಮಾರಿತನ,  ಸುಳ್ಳು,  ಆಸೆಬುರುಕತನ.

                                                                ೧೬.  ಈ ಮೂರನ್ನು ವೃದ್ಧಿಸಿಕೋ.  --  ಸಹಾನುಭೂತಿ,  ಆನಂದ,  ಸಮಾಧಾನ.

                                                                    ೧೭.  ಈ ಮೂರನ್ನು ನಿನ್ನ ವಶದಲ್ಲಿಡು.   --  ಇಂದ್ರಿಯ,  ಮನಸ್ಸು,  ಕ್ರೋಧ.

                                                                        ೧೮.  ಈ ಮೂರನ್ನು ವಿಚಾರದಲ್ಲಿಟ್ಟುಕೋ.-- ಸತ್ವಗುಣ, ರಜೋಗುಣ, ತಮೋಗುಣ.

                                                                            ೧೯.  ಈ ಮೂರನ್ನು ತಿಳಿದುಕೋ.    --  ವರ್ತಮಾನ,  ಭೂತ,  ಭವಿಷ್ಯತ 

                                                                                ೨೦. ಈ ಮೂರನ್ನು ವಾತ್ಸಲ್ಯದಿಂದ ನಡೆ. -- ದೇವಾಲಯ, ನ್ಯಾಯಾಲಯ, ಆತ್ಮಾಲಯ.
                                                                                                 ಸಂಗ್ರಹ: ಶ್ರೀ ವಿದ್ಯಾನಂದ.

                                                                                  1.. ಜಾಹೀರಾತು

                                                                                  2.ಜಾಹೀರಾತು