ಕಪ್ಪು ಬಣ್ಣದ ಕಾಳಿಂಗನ
ಕಾಲಲ್ಲಿ ಮೆಟ್ಟಿದವನು
ಕಿಡಿ ಕಾರುವ ದೃಷ್ಠಿಗೆ ಬೀಳದೆ
ಕೀಟಲೇ ಮಾಡುತ್ತಾ ನೆತ್ತಿಮೇಲೆ
ಕುಣಿದು ನಲಿಯುತ್ತಲಿದ್ದ
ಕೂಗಿ ಕರೆದರು ಶ್ರೀ
ಕೃಷ್ಣನಿಗೆ ಕೇಳಲಿಲ್ಲ
ಕೆ೦ಪು ಕಣ್ಣು ಬಿಟ್ಟು ಬುಸುಗುಟ್ಟುವ ಕಾಳಿಂಗ ನೋಡಿ
ಕೇಶವನಿಗೆ ಆನಂದ ತನ್ನ
ಕೈಲಿ ಸಾಯುವವನ ಹೆಸರಿದೆ ಎಂದ ಅವನ
ಕೊಳಲಿನ ನಾದಕ್ಕೆ ಮಾರು ಹೋಗದವರಿಲ್ಲ
ಕೋಪ ಬಂದ ಕೃಷ್ಣನ ಕಂಡವರಿಲ್ಲ
ಕೌತುಕ ತೋರಿದ ಜಗಕ್ಕೆಲ್ಲ ನೂರು ತಪ್ಪು ಮನ್ನಿಸಿ
ಕಂಸ ಕೊಂದ ಜಗದೋದ್ದಾರಕ ಶ್ರೀಕೃಷ್ಣ
█▓▒▒░░░⮊ ಕೃಪೆ: 🙶 ರಾಜೇಶ್ವರಿಶ್ರೀಧರ್ (ಚಿತ್ರದುರ್ಗ) 🙷 ⮈░░░▒▒▓█
ಎಲ್ಲರಿಗೂ ಶ್ರೀ ಕೃಷ್ಣ ಜಯಂತಿಯ ಶುಭಾಷಯಗಳು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.