ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ವಿಚಿತ್ರವಾದರು ಸತ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿಚಿತ್ರವಾದರು ಸತ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಡಿಸೆಂಬರ್ 31, 2025

ಅಂದು - ಇಂದು ( 25 ವರ್ಷಗಳ ಹಿಂದೆ )


ಅಂದುಇಂದು
1. ಎಲ್ಲರೂ ಮಕ್ಕಳನ್ನು ಹೊಂದಬೇಕೆಂದು ಬಯಸಿದ್ದರು.ಅನೇಕ ಜನರು ಮಕ್ಕಳನ್ನು ಹೊಂದಲು ಹೆದರುತ್ತಾರೆ.
2. ಮಕ್ಕಳು ತಮ್ಮ ಹೆತ್ತವರನ್ನು ಗೌರವಿಸಿದರು.ಈಗ ಪೋಷಕರು ತಮ್ಮ ಮಕ್ಕಳನ್ನು ಗೌರವಿಸಬೇಕು.
3. ನಾವು ಎಲ್ಲಾ ನೆರೆಹೊರೆಯವರನ್ನು ತಿಳಿದುಕೊಂಡೆವು.ಈಗ ನಾವು ನಮ್ಮ ನೆರೆಹೊರೆಯವರಿಗೆ ಅಪರಿಚಿತರು.
4. ಇಡೀ ಕುಟುಂಬವನ್ನು ಪೋಷಿಸಲು ಒಬ್ಬ ವ್ಯಕ್ತಿ ಮಾತ್ರ ಕೆಲಸ ಮಾಡುತ್ತಿದ್ದ.
ಈಗ ಎಲ್ಲರೂ ಒಂದು ಮಗುವನ್ನು ಬೆಂಬಲಿಸಲು ಕೆಲಸ ಮಾಡಬೇಕು.
5. ಶ್ರೀಮಂತರು ಬಡವರಂತೆ ನಟಿಸಿದರು.ಈಗ ಬಡವರು ಶ್ರೀಮಂತರಂತೆ ನಟಿಸುತ್ತಿದ್ದಾರೆ.
6. ಎಲ್ಲರೂ ಸಂತೋಷವಾಗಿ ಕಾಣಲು ಕೊಬ್ಬು ಇರಬೇಕೆಂದು ಬಯಸಿದ್ದರು.ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆರೋಗ್ಯವಾಗಿರಲು ಆಹಾರ ಕ್ರಮದಲ್ಲಿರುತ್ತಾರೆ.
7. ಜನರು ಕಷ್ಟಪಟ್ಟು ಕೆಲಸ ಮಾಡಲು ಶಕ್ತಿಯ ಅಗತ್ಯವಿರುವುದರಿಂದ ಬಹಳಷ್ಟು ತಿನ್ನಬೇಕಾಯಿತು.ಈಗ ನಾವು ಕೊಲೆಸ್ಟ್ರಾಲ್ ಭಯದಿಂದ ಕೊಬ್ಬಿನ ಆಹಾರವನ್ನು ತಿನ್ನಲು ಹೆದರುತ್ತಿದ್ದೇವೆ.
8. ಗ್ರಾಮಸ್ಥರು ಉದ್ಯೋಗ ಹುಡುಕಲು ನಗರಕ್ಕೆ ಸೇರುತ್ತಿದ್ದರು.ಈಗ ಪಟ್ಟಣದ ಜನರು ಶಾಂತಿಯನ್ನು ಕಂಡುಕೊಳ್ಳಲು ಒತ್ತಡದಿಂದ ಪಲಾಯನ ಮಾಡುತ್ತಿದ್ದಾರೆ.
9. ಮದುವೆ ಸುಲಭ ಆದರೆ ವಿಚ್ಚೆದನ ಕಷ್ಟವಾಗಿತ್ತು.ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಕಷ್ಟ ಆದರೆ ವಿಚ್ಚೆದನ ತುಂಬಾ ಸುಲಭ.
10. ಜನರು ಪುಸ್ತಕಗಳನ್ನು ಅಧ್ಯಯನ ಮಾಡಲು ಮತ್ತು ಓದಲು ಇಷ್ಟಪಟ್ಟರು.ಈಗ ಜನರು ಸಾಮಾಜಿಕ Appಗಳನ್ನು ನವೀಕರಿಸಲು ಹಾಗೂ  ಸಂದೇಶಗಳನ್ನು ಓದಲು ಇಷ್ಟಪಡುತ್ತಾರೆ.


ಇಂದಿನ ಜೀವನಕ್ಕೆ ಮೇಲಿನವು ಕಷ್ಟಕರ ಸಂಗತಿಯಾಗಿದೆ ಎಂದು ನಾವು ಅರಿತುಕೊಂಡೆವು.

ಬುಧವಾರ, ಮಾರ್ಚ್ 08, 2023

ಝಾನ್ಸಿ ರಾಣಿ ಲಕ್ಷ್ಮೀ ಭಾಯಿ

ಹೆಣ್ಣು ತನ್ನ ತಂದೆಯ ಮನೆಯಲ್ಲಿ
ಇರುವಷ್ಟು ದಿನ "ರಾಣಿ" ಹಾಗೆ ಇರುತ್ತಾಳೆ

ಮದುವೆಯಾಗಿ ಗಂಡನ ಮನೆಗೆ ಬಂದಾಗ
"ಲಕ್ಷ್ಮೀ" ಅನಿಸಿಕೊಳ್ಳುತ್ತಾಳೆ

ಗಂಡನ ಮನೆಯಲ್ಲಿ ಕೆಲಸದವಳಾಗಿ ಕೆಲಸ
ಮಾಡ್ತಾ "ಭಾಯಿ" ಆಗಿ ಬಿಡುತ್ತಾಳೆ

ನಂತರ ಜೀವನ ಪೂರ್ತಿ ಗಂಡನ ಜೊತೆ
ಯುದ್ಧ ಮಾಡ್ತಾ ''ಝಾನ್ಸಿ ರಾಣಿ ಲಕ್ಷ್ಮೀ ಭಾಯಿ" ಆಗ್ತಾಳೆ...
(ಒಮ್ಮೆ ನಕ್ಬಿಡಿ)

ಮಂಗಳವಾರ, ನವೆಂಬರ್ 15, 2022

ಯಾರು ಹೆಚ್ಚು ಹುಡುಗ / ಹುಡುಗಿ ?

  • Facebook,
  • whatsapp,
  • Twitter,
  • Telegram,
  • G-mail,
  • Yahoo mail,
  • Apple,
  • IMO,
  • Benz,
  • BMW,
  • Microsoft,
  • TV,
  • Radio, 
  • Computer,
  • Phone,
  • Electricity....

                     ಎಲ್ಲವನೂ ಕಂಡುಹಿಡಿದವರು ಹುಡುಗರೇ..

         ಈ ಹುಡುಗಿಯರು 91, 92, 93, 94, 95, 96, 97, 98, 99 % ವರೆಗೂ ಅಂಕಗಳನ್ನು(marks) ತಗೊಂಡ ಏನು  ಮಾಡ್ತಾರೆ ?
(ಹಾಸ್ಯಕ್ಕೆ ಯಾರು ನೋಂದಕೊಳ್ಳಬೇಡಿ...)

ಸೋಮವಾರ, ಸೆಪ್ಟೆಂಬರ್ 20, 2021

ಬಾಳೆ ಗಣಪ


ನಾವು ಗಣೇಶ ಚತುರ್ಥಿಯ ಸಲುವಾಗಿ ವಿವಿಧ, ವಿಚಿತ್ರ, ವಿಶೇಷ ರೀತಿಯ ಗಣಪ ಮೂರ್ತಿಯನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತೇವೆ. ಹಾಗೇಯೇ ಪ್ರಕೃತಿಯು ಕೂಡ ನಮಗೆ ವಿಶೇಷ ರೀತಿಯ ಗಣಪನನ್ನು ಸುಷ್ಠಿಸುತ್ತದೆ. ಅವುಗಳನ್ನು ನಾವು ಹುಡುಕಬೇಕಷ್ಠೆ. ಅದರ ಒಂದು ಉದಾಹರಣೆ ಈ ರೀತಿಯಾಗಿದೆ. 


ಬುಧವಾರ, ಮಾರ್ಚ್ 28, 2018

ಬಂಡಿ - ಕುದುರೆ - ಆನೆ - ದುಷ್ಟ ಮನುಷ್ಯ


ಒಂದು ಬಂಡಿಯಿಂದ ಐದು ಗಜ ದೂರವಿರಬೇಕು,
ಕುದುರೆಯಿಂದ ಹತ್ತು ಗಜ
ಮತ್ತು
ಆನೆಯಿಂದ ನೂರು ಗಜ ದೂರವಿರಬೇಕು,
ಆದರೆ
ಒಬ್ಬ ದುಷ್ಟ ಮನುಷ್ಯನಿಂದ ಎಷ್ಟು ದೂರವಿರಬೇಕು ಎನ್ನುವುದನ್ನು ಅಳೆಯಲು ಸಾಧ್ಯವೇ ಇಲ್ಲ.

ಬುಧವಾರ, ಫೆಬ್ರವರಿ 28, 2018

ಭಾನುವಾರ, ಜನವರಿ 28, 2018

ತಿರುಕ - ರಾಜಕಾರಣಿ


ಒಬ್ಬ ತಿರುಕ ಹತ್ತು ಮನೆ ತಿರುಗಿ ಅನ್ನ ಸಂಗ್ರಹಿಸುತ್ತಾನೆ,
ಅದರಂತೆ
ಒಬ್ಬ ರಾಜಕಾರಣಿ ಹತ್ತು ಮನೆ ತಿರುಗಿ ಅಧಿಕಾರ ಸಂಗ್ರಹಿಸುತ್ತಾನೆ

ಮಂಗಳವಾರ, ನವೆಂಬರ್ 28, 2017

ಧರ್ಮ - ಅಧರ್ಮ


ಧರ್ಮ ಮತ್ತು ಅಧರ್ಮದ
ಯುದ್ದದಲ್ಲಿ ಮೊದಲಿಗೆ
ಅಧರ್ಮಕ್ಕೆ ಜಯ ಕಂಡರೂ
ಕೊನೆಯಲ್ಲಿ ಧರ್ಮವೇ ಗೆಲ್ಲುವುದು.

ಶನಿವಾರ, ಅಕ್ಟೋಬರ್ 28, 2017

ಕುಟುಂಬ - ಸಮಾಜ

ಒಂದು ಕುಟುಂಬಕ್ಕೆ
ಗಂಡ, ಹೆಂಡತಿ, ಮಕ್ಕಳು
ಎಂಬುದು ಎಷ್ಟು ಮುಖ್ಯವೋ.
ಅದೇ ರೀತಿ ಒಂದು ಸಮಾಜಕ್ಕೆ
ನ್ಯಾಯ, ನೀತಿ, ಆದರ್ಶವೆಂಬುದು ಅಷ್ಟೇ ಮುಖ್ಯ.

ಗುರುವಾರ, ಸೆಪ್ಟೆಂಬರ್ 28, 2017

ಗದ್ದಲ - ಮೌನ

ಲೋಕವೆಲ್ಲಾ ಸದ್ದು ಗದ್ದಲಗಳಿಂದ ಸಂಭ್ರಮಪಟ್ಟು ಕುಣಿದಾಡಿದರೂ
ನನ್ನ ಮನಸ್ಸು ಮಾತ್ರ ಮೌನವನ್ನೇ ಪ್ರೀತಿಸುತ್ತದೆ.

ಸೋಮವಾರ, ಆಗಸ್ಟ್ 28, 2017

ಕಂದನ ಕಾಮಿಡಿ ಪಂಚ್

ಜಗತ್ತಿನ ಏಕೈಕ ಕಾಗದ ರಹಿತ ಹೊತ್ತಿಗೆ (ಬುಕ್) - ಫೇಸ್ ಬುಕ್
ಜಗತ್ತಿನ ಅತಿದೊಡ್ಡ ಗೇಟ್‍                             - ಕೋಲ್ಗೇಟ್
ಅತಿದೊಡ್ಡ ಬಾಮ್‍                                    - ಝಂಡೂಬಾಮ್
ವಿಶ್ವದ ಅತಿ ಭಯಂಕರ ಸಿಟಿ                           - ಇಲ್ಟ್ರೆಕಿಸಿಟಿ
ಅತಿ ಹೆಚ್ಚು ಮಾರಕವಾದ ಬನ್                      - ಕಾರ್ಬನ್
ನವರಸಗಳಿಂತ ಭಿನ್ನವಾದ ರಸ                     - ಪಾದರಸ
ದಾನಗಳ್ಲಿ ಹೆಚ್ಚು ಫಲದಾಯಕ                    - ಮತದಾನ

ಅತಿ ಹೆಚ್ಚು ಉಷ್ಣಹೊಂದಿರುವ ಟಿವಿ             - ಸನ್ ಟಿವಿ 

ಶುಕ್ರವಾರ, ಜುಲೈ 28, 2017

ಪ್ರಾಣಿ ಲೋಕದ ವೈಚಿತ್ರ್ಯಗಳು 2

  • ೧.   ಇಲಿ, ನಕ್ಷತ್ರ ಮೀನುಗಳು ಹಾಗೂ ಹಲ್ಲಿಗಳ ಬಾಲಗಳು ತುಂಡಾದರೆ ಮತ್ತೆ ಬೆಳೆಯಬಲ್ಲವು.
  • ೨.   ಗೋಲ್ಡನ್ ಪಾಯ್ಸನ್ ಡಾರ್ಟ್ ಫ್ರಾಗ್ ಎಂಬ ಕಪ್ಪೆ ೧೫೦೦ ಜನರನ್ನು ತನ್ನ  ವಿಷದಿಂದ ಕೊಲ್ಲಬಲ್ಲದು.
  • ೩.   ಸ್ಟೆಗೋಸಾರಸ್ ಸು. ೯ ಮೀಟರ್ ಉದ್ದವಾಗಿರುವ ಸರೀಸೃಪ
  • ೪.   ಮೊಲಗಳಿಗೆ ಸಿಹಿ ಎಂದರೆ ಬಲುಪ್ರೀಯ.
  • ೫.   ಕೋಳಿಗಳ ಎಡಕಾಲಿನಲ್ಲಿ ಹೆಚ್ಚು ಮಾಂಸವಿರುತ್ತದೆ.ಕಾರಣ ಸ್ನಾಯುಗಳು ಹೆಚ್ಚಾಗಿರುತ್ತದೆ.
  • ೬.   ಅಕ್ವೇರಿಯಂಗಳಲ್ಲಿ ಇರುವ ಗೋಲ್ಡ್ ಫಿಶ್ ಒಳ್ಳೆಯ ಬೆಳಕಿಲ್ಲದೇ ಇದ್ದರೆ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ.
  • ೭.   ಇಲಿಯ ವೀರ್ಯಾಣುಗಳು ಆನೆಯ ವೀರ್ಯಾಣುವಿಗಿಂತ ಹೆಚ್ಚು.

ಬುಧವಾರ, ಜೂನ್ 28, 2017

ಪ್ರಾಣಿ ಲೋಕದ ವೈಚಿತ್ರ್ಯಗಳು 1

  • ನೀಲಿ ತಿಮಿಂಗಿಲದ ಮರಿಗಳು ಹುಟ್ಟಿನಲ್ಲೇ ಸು.೭ ಟನ್/ ೭೦೦೦ ಕಿ.ಗ್ರಾ. ಭಾರ ಇರುತ್ತದೆ.
  • ಹಾವುಗಳು ತಮ್ಮ ರೆಪ್ಪೆಗಳ ಮೂಲಕವೂ ನೋಡಬಲ್ಲವು.
  • ಆನೆಗಳು ದಿನದ ೨೩ ಗಂಟೆಗಳ ಕಾಲ ತಿನ್ನುವುದರಲ್ಲಿಯೇ ಕಳೆಯುತ್ತದೆ.
  • ಗಿಡುಗಗಳು ಕೆಲವೊಮ್ಮ ಹಾರಲು ಸಾಧ್ಯವಾಗದಷ್ಟು ಆಹಾರವನ್ನು ಸೇವಿಸುತ್ತದೆ.
  • ಬ್ಲೂಬಾಟಲ್ ಪ್ಲೆöÊಸ್ ಎಂದು ಕರೆಯುವ ನೋಣಗಳು ೭ ಕಿ.ಮೀ.ವರೆಗಿನ ವಾಸನೆಯನ್ನು ಗ್ರಹಿಸಬಲ್ಲವು.
  • ಆರ್ಕ್ಟಿಕ್ ಕಲಡ ಕಾಗೆಗಳು ಅತಿ ದೂರದ ವಲಸೆಗೆ ಹೆಸರುವಾಸಿ, ಇವು ಸು.೩೨,೦೦೦ ಕಿ.ಮೀ. ವಲಸೆ ಹೋಗಬಲ್ಲವು.

                      ಶನಿವಾರ, ಡಿಸೆಂಬರ್ 31, 2016

                      ಅಂತಿಮ ನಮನ (Last Se-lute)

                      ಸಾವಿರದ ಸರದಾರ
                      ನಾನೆಂದು ಮೆರೆಯುತ್ತ
                      ಕೈ ಹಿಡಿದ ನೇತಾರರ
                      ಗೊಂಬೆಯಂತೆ ಆಡಿಸುತ್ತ
                      ಕೈಗೆಟುಕದವರನ್ನು
                      ನಿರ್ದಯದಿ ಕಾಡುತ್ತ
                      ಬೆನ್ನು ಹತ್ತಿದವರನೆಲ್ಲ
                      ಅಡ್ಡ ದಾರಿ ಹಿಡಿಸುತ್ತ
                      ಕಾಳಧನಿಕರ ಮನೆಯಲಿ
                      ಕಸದಂತೆ ಕೊಳೆಯುತ್ತ
                      ದಂಧೆಕೋರರ ಜೊತೆಗೆ
                      ತಕಥೈ ಎಂದು ಕುಣಿಯುತ್ತ
                      ಬಡವರ ಬಳಿ ಬರಲು
                      ಹಿಂದೇಟು ಹಾಕುತ್ತ
                      ಹಮ್ಮು ಬಿಮ್ಮಿನಲಿ
                      ರಾರಾಜಿಸುತ್ತಿದ್ದ
                      ಹಳೆಯ ನೋಟಿಗೆ
                      (ಅ)ಭಾವಪೂರ್ಣ ಶ್ರದ್ಧಾಂಜಲಿ

                      ಕೃಪೆ -ಹೊ.ರಾ.ಪ
                      ರುದ್ರಪಟ್ಟಣ,ಅರಕಲಗೂಡು ತಾಲ್ಲೂಕು (ಪ್ರಜಾವಾಣಿ)

                      ಸೋಮವಾರ, ಡಿಸೆಂಬರ್ 28, 2015

                      ಗಾಡವಾದ ಪ್ರೀತಿ

                      ಒಮ್ಮೊಮ್ಮೆ ಅತಿ ಗಾಡವಾದ ಪ್ರೀತಿಯು ಸಹ 
                       ಬರ ಬರುತ್ತ ಬಣ್ಣ ಕಳೆದುಕೊಂಡು ಸ್ವಾರ್ಥಕ್ಕೆ ಗುರಿಯಾಗಿ,  
                      ಕಲಹಕ್ಕೆ ಕಿಡಿಯಾಗಿ,  
                      ದ್ವೇಶಕ್ಕೆ ಅಡಿಯಾಗಿ
                        ಪ್ರೀತಿಯೇ ಅಸೂಯೆಯೆಂಬ ಕತ್ತಿಯಂತಾಗಿ  
                      ಅವನನ್ನಿವಳು ಇವನನ್ನವಳು ಹಿಂಬಾಲಿಸಿ 
                       ಕಾಡಿಸಿ ಕೊನೆಗೆ ಅಲ್ಲೊಂದು ಅಂತ್ಯವನ್ನಾಗಿಸುವಂತೆ ಮಾಡಿಬಿಡುತ್ತದೆ.

                      ಶನಿವಾರ, ನವೆಂಬರ್ 28, 2015

                      ಸಂತಸ

                      ಮನುಷ್ಯನಿಗೆ ಅತಿ ಹೆಚ್ಚು ಖುಷಿಯಾದಲ್ಲಿ ಅವನು ಪಕ್ಷಿಗಳ ಜೊತೆ,  
                      ಪ್ರಾಣಿಗಳ ಜೊತೆ
                       ಬೆಟ್ಟ ಗುಡ್ಡಗಳ ಜೊತೆಯೂ  
                      ತನ್ನ ಸಂತಸವನ್ನು ಹಂಚಿಕೊಳ್ಳಲು ತವಕಿಸುತ್ತಾನೆ.

                      ಶುಕ್ರವಾರ, ಸೆಪ್ಟೆಂಬರ್ 11, 2015

                      ಶುಕ್ರವಾರ, ಆಗಸ್ಟ್ 28, 2015

                      1.. ಜಾಹೀರಾತು

                      2.ಜಾಹೀರಾತು