ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ವಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 26, 2020

ಕೋಲ ಶಾಂತಯ್ಯ

ವಚನಕಾರ
ಕೋಲ ಶಾಂತಯ್ಯ 
ಅಂಕಿತ ನಾಮ
ಪುಣ್ಯಾರಣೈದಹನ ಭೀಮೇಶ್ವರಲಿಂಗ ನಿರಂಗಸಂಗ
ಕಾಲ

ದೊರಕಿರುವ ವಚನಗಳು
103 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು
ಸುಖಪಟ್ಟಣವ ಕಂಡೆ.
ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ.
ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ.
ತಳವಾರ ತಿರುಗುವುದಕ್ಕೆ ಕಣ್ಣಿಲ್ಲ.
ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು.
ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ.
ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ.
ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ.
ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ?
ಬಂಟರು ಸತ್ತರು, ಅರಸು ನಷ್ಟವಾದ.
ಆ ಉಭಯದ ಬೇಧವ ನಾನರಿಯೆ, ನೀ ಹೇಳು.
ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.

ಮಂಗಳವಾರ, ಮೇ 26, 2020

ಕೊಟಾರದ ಸೋಮಣ್ಣ + ಕೊಟ್ಟಣದ ಸೋಮಮ್ಮ + ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ



ವಚನಕಾರ
ಕೊಟಾರದ ಸೋಮಣ್ಣ 
ಅಂಕಿತ ನಾಮ
ಬಸವಣ್ಣಪ್ರಿಯ ನಿ:ಕಳಂಕ ಸೋಮೇಶ್ವರ 
ಕಾಲ

ದೊರಕಿರುವ ವಚನಗಳು
1 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ವಚನಕಾರ
ಕೊಟ್ಟಣದ ಸೋಮಮ್ಮ 
ಅಂಕಿತ ನಾಮ
ನಿರ್ಲಜ್ಜೇಶ್ವರ 
ಕಾಲ

ದೊರಕಿರುವ ವಚನಗಳು
1 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ವಚನಕಾರ
ಕೊಂಡೆಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ 
ಅಂಕಿತ ನಾಮ
ಅಗಜೀಶ್ವರ ಲಿಂಗ 
ಕಾಲ

ದೊರಕಿರುವ ವಚನಗಳು
1 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ



ಭಾನುವಾರ, ಏಪ್ರಿಲ್ 26, 2020

ಕೂಡಲಸಂಗಮೇಶ್ವರ


ವಚನಕಾರ
ಕೂಡಲಸಂಗಮೇಶ್ವರ 
ಅಂಕಿತ ನಾಮ
ಕೂಡಲಾದಿ ಚೆನ್ನಸಂಗಮದೇವ
ಕಾಲ

ದೊರಕಿರುವ ವಚನಗಳು
198 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ಅಯ್ಯಾ, ಜೀವಾತ್ಮ ಭೇದವಾದಮಂ ಪೇಳ್ವೆನಯ್ಯಾ :
ಜೀವ ಬೇರೆ, ಆತ್ಮ ಬೇರೆ ಎಂದು ಹೇಳುವ[ವು] ಹಲವು ಶಾಸ್ತ್ರ ;
ಜೀವಾತ್ಮ ಐಕ್ಯ ಹೇ[ಳುವವು] ಹಲವು ಶಾಸ್ತ್ರ.
ಅ[ದು] ಎಂತೆಂದಡೆ:
ಸರ್ವ ಚೇತನದಲ್ಲಿಯು ಉಂಟು ಎಂದು ಹೇಳುವವು ಜೀವವು,
ಶಿವಶಾಸ್ತ್ರ ಇದಕ್ಕೆ ಸಾಕ್ಷಿ :
ಅಣೋರಣೀಯಾ[ನ್] ಮಹತೋ ಮಹೀಯಾ[ನ್]
ಎಂದು ಶ್ರುತಿಯುಂಟಾಗಿ, ಇದಂ ತಿಳಿದು, ಭೇದವಾದಿಗಳು
ಸರ್ವಜೀವರಲ್ಲಿಯು ಆತ್ಮವುಂಟಾದಡೆಯು
ಪಶುಜೀವಜಂತುಗಳಿಗೆ ನಮಸ್ಕಾರವ ಮಾಡಬಾರದೆ ? ಎಂದು
ಹೇಳುವ ಮಾಯಾವಾದಿಗಳು ನೀವು ಕೇಳಿ ;
ಅದು ಎಂತೆಂದಡೆ :
ಎಲಾ ಎಲಾ, ಉಚ್ಫಿಷ್ಟದಲ್ಲಿಯು ಅರ್ಕನ ಪ್ರಭೆ ಬಿದ್ದು ರಸ ಬತ್ತುವದು.
ಅದರ ರಸಾಸ್ವಾದವು ಅರ್ಕಂಗೆ ಮುಟ್ಟುವುದೆ ?
ಎಲಾ ಎಲಾ, ಸಿಲಹದಲ್ಲಿಯು ಸೂರ್ಯಪ್ರಭೆಯುಂಟು.
ಅಲ್ಲಿ ವಹ್ನಿಯು ಪುಟ್ಟುವು]ದೆ?]
ಇದರಂತೆ, ಸರ್ವ ಜೀವಜಂತುಗಳಲ್ಲಿ
ಮಾಯಾವಾದಿಗಳಲ್ಲಿ
ಆತ್ಮಪರೀಕ್ಷೆಯಿಲ್ಲದವರಲ್ಲಿ
[ದು]ಷ್ಟ ದುರ್ಜನರಲ್ಲಿ
ಶಿವಭಕ್ತರಾಗಿ ಲಿಂಗವ ಧರಿಸಿ
ದೇವರಾದರು ಸರಿಯೆ,
[ಬ್ರಾ]ಹ್ಮರಾಗಿ ಯಜ್ಞೋಪವೀತವ
ಹಾಕಿಕೊಂಡಿದ್ದರು ಸರಿಯೆ,
ಯತಿಗಳಾಗಿ ಮಂಡೆ ಬೋಳಿಸಿಕೊಂಡಿದ್ದರು ಸರಿಯೆ,
ಮಾರ್ಗ ತಪ್ಪಿ ನಡೆವ ಜೀವಜಂತುಗಳಲ್ಲಿ
ಸಿಲಹ ಉಚ್ಫಿಷ್ಟದ ಮೇಲೆ ಸೂರ್ಯನ ಪ್ರಭೆ ಬಿದ್ದಂತೆ
ಆತ್ಮ ಇದ್ದ ಕಾರಣ ಇವರಿಗೆ ಕೈಮುಗಿಯಲಾಗದು ಕಾಣಿರಯ್ಯಾ !
ಇ[ವ]ರೊಳಗೆ ಶಿವಯೋಗಿಗಳು ದಾರೆಂದು ಕೇಳುವ
ಮಾಯಾವಾದಿ ಕೇಳಲಾ.
ಅದು ಎಂತೆಂದಡೆ:
ಸೂರ್ಯನ ಪ್ರಕಾಶಕ್ಕೆ ಬಿಲದ್ವಾರವ ಸಿಲಹಂ ಪಿಡಿಯೆ
ಅರ್ಕನ ಪ್ರಕಾಶಕ್ಕೆ ವಹ್ನಿ ಪುಟ್ಟೆ
ಸರ್ವಕಾಷ*ವನು ಸುಡುವದು ಕಾಣೆಲಾ.
ಶಿವಾತ್ಮ ಐಕ್ಯವ ಮಾಡಿದಾ ಶಿವಯೋಗಿಗಳಲ್ಲಿ
ಸರ್ವಕರ್ಮೇಂದ್ರಿಯ ಈ ತೆರದಲ್ಲಿ ಸುಟ್ಟ ಕಾರಣ
ನಿರ್ಮಳಕಾಯರಾದರು.
ಇಂತಪ್ಪ ಜೀವಾತ್ಮವ ಐಕ್ಯವ ಮಾಡಿದ ಶಿವಯೋಗಿಗಳಲ್ಲಿ
ನಮಸ್ಕರಿಸಬಹುದು.
ಇಂತಾ ಜೀವಾತ್ಮ ವೇದವ ತಿಳಿಯದೆ
'ನಾ ಬ್ರಾಹ್ಮಣ' 'ನಾ ಶಿವಭಕ್ತ'ನೆಂದು ಹೇಳಿಕೊಂಡು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ

ಗುರುವಾರ, ಮಾರ್ಚ್ 26, 2020

ಕೂಗಿನ ಮಾರಯ್ಯ



ವಚನಕಾರ

ಅಂಕಿತ ನಾಮ

ಕಾಲ

ದೊರಕಿರುವ ವಚನಗಳು

(ಆಧಾರ: ಸಮಗ್ರ ವಚನ ಸಂಪುಟ)

ತಂದೆ/ತಾಯಿ
ಕೂಗಿನ ಮಾರಯ್ಯ

ಮಹಾಮಹಿಮ ಮಾರೇಶ್ವರ 



11 
ಹುಟ್ಟಿದ ಸ್ಥಳ

ಪರಿಚಯ


ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೇ?
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ?
ಮೃತ್ತಿಕೆಯ ಹರುಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ:
ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜನಿವಾಸದಂತೆ
ಆಯದ ಘಾಯದಂತೆ, ಸುಘಾಯದ ಸುಖದಂತೆ
ಇಂತೀ ಭಾವರಹಿತವಾದ ಭಾವಜ್ಞನ ತೇರ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ

ಬುಧವಾರ, ಫೆಬ್ರವರಿ 26, 2020

ಕುಷ್ಟಗಿ ಕರಿಬಸವೇಶ್ವರ



ವಚನಕಾರ
ಕುಷ್ಟಗಿ ಕರಿಬಸವೇಶ್ವರ
ಅಂಕಿತ ನಾಮ
ಘನಲಿಂಗಗುರುಚೆನ್ನಬಸವೇಶ್ವರ ಸಾಕ್ಷಿಯಾಗಿ 
ಕಾಲ

ದೊರಕಿರುವ ವಚನಗಳು
99 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ

ಅಂದಿನಕಾಲದ ಹನುಮ ಲಂಕೆಯ ಹಾರಿದನೆಂದು
ಇಂದಿನಕಾಲದ ಕಪಿ ಕಟ್ಟೆಯ ಹಾರುವಂತೆ,
ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು
ತೊತ್ತು ತಿಪ್ಪೆಯನೇರುವಂತೆ,
ಕೊಮಾರ ಕುದುರೆಯನೇರಿದನೆಂದು
ಕೋಡಗ ಕುನ್ನಿಯನೇರುವಂತೆ,
ಆನೆ ಮದಸೊಕ್ಕಿ ಸೋಮಬೀದಿಯ ಸೂರೆಮಾಡಿತೆಂದು
ಆಡು ಮದಸೊಕ್ಕಿ ಬೇಡಗೇರಿಯ ಹೊಕ್ಕು ಕೊರಳ ಮುರಿಸಿಕೊಂಬಂತೆ,
ಉರದಮೇಲಣ ಗಂಡನ ಬಿಟ್ಟು
ಪರವೂರ ಮಿಂಡನ ಕೊಂಡಾಡುವ ಮಿಂಡಿನಾರಿಯಂತೆ
ಕಂಡಕಂಡುದ ಪೂಜಿಸುವ ಭಂಡಮುಂಡೆ
ಮೂಕೊರೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.

ಭಾನುವಾರ, ಜನವರಿ 26, 2020

ಕುರಂಗ ಲಿಂಗ + ಕುರಂಗೇಶ್ವರ ಲಿಂಗ



ವಚನಕಾರ
ಕುರಂಗ ಲಿಂಗ 
ಅಂಕಿತ ನಾಮ
ಕುರಂಗ ಲಿಂಗ 
ಕಾಲ
ದೊರಕಿರುವ ವಚನಗಳು
2 (ಆಧಾರಸಮಗ್ರ ವಚನ ಸಂಪುಟ
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯ

ವಚನಕಾರ
ಕುರಂಗೇಶ್ವರ ಲಿಂಗ 
ಅಂಕಿತ ನಾಮ
ಕುರುಂಗ ಲಿಂಗ 
ಕಾಲ
ದೊರಕಿರುವ ವಚನಗಳು
2 (ಆಧಾರಸಮಗ್ರ ವಚನ ಸಂಪುಟ
ತಂದೆ/ತಾಯಿ
ಹುಟ್ಟಿದ ಸ್ಥಳ
ಪರಿಚಯ


1.. ಜಾಹೀರಾತು

2.ಜಾಹೀರಾತು