fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಮೇ 31, 2018

ನಾನೊಬ್ಬ ಕನ್ನಡಾಭಿಮಾನಿ

ನಾನೊಬ್ಬ ಕನ್ನಡಾಭಿಮಾನಿ

ಹಾಗೆಂದ ಮಾತ್ರಕ್ಕೆ
ನಾನೇನು ಅನ್ಯ ಭಾಷಾ ವಿರೋಧಿಯಲ್ಲ
ಆದರೂ ಸ್ನೇಹಿತರೆಲ್ಲ ಕೇಳುತ್ತಾರೆ
ನೀವ್ಯಾಕೆ ಅನ್ಯ ಭಾಷೆ
ಬಳಸುವುದಿಲ್ಲ ಎಂದು;
ಆದರೆ ನನ್ನ ಉತ್ತರ ಬಲ್ಲಿರಾ?
ಬಳಸುತ್ತೇನೆ ಆದರೆ ಮಿತವಾಗಿ ;
ಸಮಯೋಚಿತವಾಗಿ
ಈ ಕನ್ನಡಾಭಿಮಾನಿಯ
ಉತ್ತರ ಸರಿ ಅಲ್ಲವೇ?      
                                                        -- Shivakumar

ಗುರುವಾರ, ಮೇ 24, 2018

ಜ್ಞಾನಪೀಠ

ಕನ್ನಡವು 'ಶ್ರೀಮಂತ' ಸಾಹಿತಿಗಳನ್ನು ಪಡೆದಿದೆ ಎನ್ನಲು, ನಮ್ಮವರು ಪಡೆದಿರುವ ಜ್ಞಾನಪೀಠದ ಸಂಖ್ಯೆಯೇ ಸಾಕ್ಷಿ
ರಾಜಕಾರಣದಲ್ಲಿ ಜ್ಞಾನವಿರುವವನಿಗೇ ಪೀಠ ಒಲಿಯಬೇಕೆಂದಿಲ್ಲ. ಪೀಠವೂ ಹಾಗೆಯೇ
ಆದಷ್ಟು ಬೇಗ ಒಂದಿಷ್ಟು ಪುಸ್ತಕಗಳನ್ನು ಬರೆದೊಗೆದರೆ, ನಿಮಗೂ ದೊರೆಯಬಹುದು
ನಾಟಕ ಬರೆದು ನಾಟಕವಾಡುವವರು ಬೇಗ ಪಡೆಯಬಹುದಾದದ್ದು
ಇಂಗ್ಲಿಷಿನಲ್ಲಿ ಸ್ಫುಟವಾಗಿ ಮಾತನಾಡುವವರ ಕನ್ನಡ ಸೇವೆಗೆ ಒಲಿಯುವ ಪ್ರಶಸ್ತಿ
ಅನೇಕ ಸಜ್ಜನ ಸಾಹಿತಿಗಳಿಗೆ ದೊರಕದೇ ಇರುವುದರಿಂದ ಅವರ ಹೆಸರು ಇನ್ನೂ ನಿಷ್ಕಳಂಕವಾಗಿದೆ
ಒಮ್ಮೆ ಇದು ದೊರೆತರೆ ನೀವು ಬಾಯಿಗೆ ಬಂದಂತೆ ಅಧಿಕೃತವಾಗಿ ಮಾತನಾಡುವ ಅವಕಾಶ ಪಡೆದುಕೊಳ್ಳಬಹುದು.
ಇದೊಂಥರ 'ಜಾಣ'ಪೀಠ
ಪುಸ್ತಕ ಗೀಚಿದರೆ ಸಾಲದು, ಬಾಚಿಕೊಳ್ಳುವ ಸಾಮರ್ಥ್ಯವೂ ಅಪೇಕ್ಷಿತವೇ
ಪೀಠ ಏರಿದ ಮೇಲೆ ಜ್ಞಾನವೆಲ್ಲ ಪೀಠದ ಕೆಳಗೆ...
ಲಾಬಿ ಮಾಡಿವರಿಗೆ ಲಾಭವಿದೆ
ಗಿಮಿಕ್ ಮಾಡಿದರೆ ಕಮಕ್ ಕಿಮಕ್ ಎನ್ನದೇ ಬರುವ ಗುಣವಿದೆ ಇದಕ್ಕೆ
ಸಮಗ್ರ ಸಾಹಿತ್ಯಕ್ಕೆ ದೊರೆಯುವಂಥದ್ದು, ಅಗ್ರ ಸಾಹಿತ್ಯಕ್ಕಲ್ಲ
ತೊಂಭತ್ತರ ದಶಕದವರೆಗೆ ಜ್ಞಾನವಂತರಿಗೇ ನೀಡಲಾಗುತ್ತಿತ್ತಂತೆ...
ಇದು ಒಮ್ಮೆ ದೊರೆತರೆ ಬರೆಯುವುದು ನಿಂತು ಹೋಗುವುದು.

-ವಿಶ್ವನಾಥ ಸುಂಕಸಾಳ

ಬುಧವಾರ, ಮೇ 23, 2018

ನಿಪಾ ವೈರಸ್ ಎಂದರೇನು..?

ನಿಪಾ ವೈರಸ್ ಎನ್ನುವುದು ಮೊದಲ ಬಾರಿಗೆ ಹಂದಿ ಸಾಕುವ ರೈತರಲ್ಲಿ ಮಲೇಶಿಯಾದಲ್ಲಿ ಕಂಡು ಬಂತು

ಆತಂಕಕಾರಿಯಾದ ರೋಗವೇ ?

ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅಲ್ಲದೇ ಇದಕ್ಕೆ ಯಾವುದೇ ರೀತಿಯಾದ ಸೂಕ್ತ ಔಷಧೋಪಚಾರಗಳೂ ಇಲ್ಲ.

ಯಾರು ಹೆಚ್ಚು ಎಚ್ಚರಿಕೆಯಿಂದ ಇರಬೇಕು, ಹೇಗೆ ಹರಡುತ್ತದೆ ?

ಹಂದಿ ತಿನ್ನುವವರು ಹಾಗೂ ಹಂದಿಗಳೊಂದಿಗೆ ಕೆಲಸ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು

ಬಾವಲಿಗಳಿಂದಲೂ ಈ ರೋಗ ಹರಡುತ್ತದೆ. ಬಾವಲಿಗಳು ತಿಂದ ಹಣ್ಣನ್ನು ಸೇವಿಸುವುದು ಕೂಡ ರೋಗಕ್ಕೆ ಕಾರಣವಾಗಬಹುದು
ಯಾರು ನಿಪಾ ವೈರಸ್ ಗೆ ತುತ್ತಾದವರು ಎಚ್ಚರಿಕೆ ವಹಿಸುವುದು ಅತ್ಯಗತ್ಯ

 ನಿಪಾ ವೈರಸ್ ತಗುಲಿದಾಗ ಕಾಣಿಸುವ ಲಕ್ಷಣಗಳೇನು..?

ಇದ್ದಕ್ಕಿದ್ದಂತೆ ಜ್ವರ ಬರುವುದು. ತಲೆನೋವು, ಮಾಂಸಖಂಡಗಳ ನೋವು, ತಲೆ ಸುತ್ತುವಿಕೆ. ವಾಂತಿ, ಬಳಿಕ ಅತಿಯಾದ ಸುಸ್ತು, ರೋಗಿ ಕೋಮಾಗೂ ತೆರಳಬಹುದು

ಚಿಕಿತ್ಸೆ ಹೇಗೆ..?

ಅತ್ಯಂತ ಸೂಕ್ಷ್ಮವಾಗಿ ರೋಗಿಯನ್ನು ನೋಡಿಕೊಳ್ಳಬೇಕು. ರೋಗಿಗಳಿಗೆ ಮಾನಸಿಕವಾಗಿ ಧೈರ್ಯವನ್ನು ತುಂಬಬೇಕು. ಮುನ್ನೆಚ್ಚರಿಕೆಯೇ ಇದಕ್ಕೆ ಮುಖ್ಯ ಔಷಧ.

ಹೇಗೆ ತಡೆಯುವುದು..?

ಹಂದಿ ಹಾಗೂ ಹಂದಿಗಳಿಂದ ದೂರವಿರುವುದು. ಸ್ವಚ್ಛತೆ ಕಾಪಾಡಿಕೊಳ್ಳುವುದು. ಕೈಗಳನ್ನು ಆಗಾಗ ತೊಳೆಯುತ್ತಿರುವುದು

ಸ್ವಚ್ಛವಾದ ಮನೆಯಲ್ಲೇ ತಯಾರಿಸಿ ಆಹಾರ ಸೇವನೆ. ಖಚ್ಚಾ ಹಣ್ಣುಗಳ ಸೇವನೆ ತಡೆಯುವುದು. 

ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್ ಧರಿಸುವುದು

ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. 

ಭಾನುವಾರ, ಮೇ 20, 2018

ಗಡಿಯಾರದ ಸಡಗರ



ಕೋಳಿ ಕೂಗಿತೇಳು ಕಂದ!
ಸೂರ್ಯ ಪೂರ್ವದಲಿ ಬಂದ

ಹೆಚ್ಚು ಮಲಗಲೇನು ಚಂದ?
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಹಲ್ಲನುಜ್ಜಿ ತಿಂಡಿ ತಿಂದು
ಪಾಠವೋದಿ ಬಳಿಕ ಮಿಂದು
ಊಟಮಾಡಿ ಶಾಲೆಗೆಂದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಶಾಲೆ ಮುಗಿದ ಬಳಿಕ ಓಟ
ಸಂಜೆವರೆಗೆ ಆಟ ಪಾಟ
ಮನೆಗೆ ಬಂದು ಸ್ತೋತ್ರಪಾಠ
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ರಾತ್ರೆ ದೇವಗಡ್ಡ ಬಿದ್ದು
ಊಟಮಾಡಿ ನಿದ್ರಿಸಿದ್ದು
ನಾಳೆ ತಿರುಗಿ ಬೇಗನೆದ್ದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!
-ಜಿ. ಪಿ. ರಾಜರತ್ನಂ

ಗುರುವಾರ, ಮೇ 10, 2018

ಅಮ್ಮಂದಿರ ದಿನ (Mothers Day)

`ಅಮ್ಮಂದಿರ ದಿನ' " ಅಮ್ಮಂದಿಂರ ದಿನ ಯಾಕೆ ಮತ್ತು ಎಂದಿನಿಂದ ಆಚರಣೆ ಮಾಡುತ್ತಿದ್ದೇವೆ ಗೋತ್ತಾ..?
ಮತ್ತೊಂದು `ಅಮ್ಮಂದಿರ ದಿನ'! ಎಲ್ಲೆಡೆ ಕಾರ್ಡ್ ಕೊಳ್ಳುವ, ಹೂವಿನಿಂದ ವಜ್ರದವರೆಗೂ ಶಕ್ತ್ಯಾನುಸಾರ ಕೊಡುಗೆ ನೀಡಿ ಇನ್ನೊಂದು `ಅಮ್ಮಂದಿರ ದಿನ'ದವರೆಗೆ ಅಮ್ಮನನ್ನು ಮರೆತುಬಿಡುವ ಸಂಭ್ರಮ!
ಅಮ್ಮ ಸತ್ತ ಮೇಲೆ ಶ್ರಾದ್ಧ ಮಾಡಿ ನೆನಪಿಸಿಕೊಳ್ಳುವ (ಹೆಣ್ಣು ಮಕ್ಕಳಿಗೆ ಅದೂ ಇಲ್ಲ!) ಅಥವಾ `ಬೂದಿ ಬುಧವಾರ'ದಂದೋ, `ಮಹಾಲಯ ಅಮಾವಾಸ್ಯೆ'ಯಂದೋ ಪಿತೃಗಳಿಗೆ ತರ್ಪಣ ನೀಡುವ ನಮ್ಮ ಸಂಪ್ರದಾಯಗಳನ್ನೂ ಮೀರಿ ಇಂದು ಬೆಳೆದು ನಿಂತಿರುವ `ಮದರ್ಸ್‌ ಡೇ' ಬಂದಿದ್ದಾದರೂ ಎಲ್ಲಿಂದ? ದೂರದ ಅಮೆರಿಕೆಯಿಂದ. ಪಾಶ್ಚಾತ್ಯ ಜಗತ್ತಿನಲ್ಲೂ ಇರಬಹುದಾದ ಮೌಲ್ಯಯುತ ಜೀವನ- ಆಚರಣೆಗಳನ್ನು ಭಾಗಶಃವಾಗಿ ಮಾತ್ರ ಸ್ವೀಕರಿಸುವ ನಮ್ಮ ಎಂದಿನ ಅಭ್ಯಾಸದಂತೆ `ಮದರ್ಸ್‌ ಡೇ'ಯ ಹಿನ್ನೆಲೆ, ಮೌಲ್ಯ ಯಾವುದನ್ನೂ ತಿಳಿಯದೆ ನಾವು ಆಚರಿಸುವ ಈ ದಿನ ಅರ್ಥಹೀನವೇ ಸರಿ.
1870ರಲ್ಲಿ ಜೂಲಿಯಾ ವಾರ್ಡ್ ಎಂಬ ಮಹಿಳೆ ಶಾಂತಿಗಾಗಿ ಈ ದಿನವನ್ನು ಆರಂಭಿಸಿದಳು. ನಾಗರಿಕ ಯುದ್ಧದ ಸಾವು ನೋವುಗಳನ್ನು ಕಂಡ ಜೂಲಿಯಾ, ಎಲ್ಲ ತಾಯಂದಿರಿಗೆ `ನಿಮ್ಮ ಮಕ್ಕಳು ಮತ್ತೊಂದು ತಾಯಿಯ ಮಕ್ಕಳನ್ನು ಕೊಲ್ಲುವ ಕ್ರೌರ್ಯದ ವಿರುದ್ಧ ದನಿಯೆತ್ತಿ' ಎಂದು ಕರೆ ನೀಡಿದಳು. ತಾಯ್ತನ ಮತ್ತು ಶಾಂತಿಯ ಸಂಕೇತವಾಗಿ ಜೂಲಿಯಾ `ಅಮ್ಮಂದಿರ ದಿನ'ವನ್ನು ಆರಂಭಿಸಿದಳು.
ಇಂದಿನ ಮಹಿಳೆಯರೇ ಏಳಿ
ಹೃದಯವಿರುವ ಮಹಿಳೆಯರೇ ಏಳಿ
ನಿಮ್ಮ ಕಣ್ಣೀರಿನಿಂದ ಗಟ್ಟಿಯಾಗಿ ಹೇಳಿ
ಬಿಡಲಾರೆವು ನಾವು ಯಾರನ್ನೂ
ನಮ್ಮ ಮಕ್ಕಳಿಗೆ ಕಲಿಸಿದ ಸಹನೆ- ಶಾಂತಿ- ಮಮತೆಗಳ
ಕಸಿದುಕೊಳ್ಳಲು, ಕಳೆದುಕೊಳ್ಳಲು
ಬಿಡಲಾರೆವು ನಾವು ಯಾರನ್ನೂ
ಬಿಡಲಾರೆವು ನಾವು
ಸಿದ್ಧಗೊಳ್ಳಲು ನಮ್ಮ ಮಕ್ಕಳು
ಬೇರೆ ತಾಯ ಮಕ್ಕಳನ್ನು ಕೊಲ್ಲಲು!
ಇದು ಜೂಲಿಯಾಳ ಕನಸಾಗಿತ್ತು. ಜೂಲಿಯಾ ಈ ಉದ್ದೇಶಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸಿದಾಕ್ಷಣ `ತಾಯಂದಿರ ದಿನ'ದ ಆಚರಣೆಯೂ ನಿಂತಿತು. ಈ ಆಚರಣೆಗೆ ಪುನಶ್ಚೇತನ ನೀಡಿದ ತಾಯಿ- ಮಗಳ ಜೋಡಿ ಆ್ಯನ್ನಾ ಆ್ಯನ್ನ್ ಮೇರಿ ಹಾಗೂ ಆ್ಯನ್ನಾ ರೀವ್ಸ್ ಜಾರ್ವಿಸ್.
ಆ್ಯನ್ನ್ ಮೇರಿ 1832ರಲ್ಲಿ ವರ್ಜೀನಿಯಾದಲ್ಲಿ ಹುಟ್ಟಿದವಳು. ಸಮಾಜ ಸೇವಕಿಯಾಗಿದ್ದ ಆಕೆ ಸಮಾಜದ ಸ್ವಚ್ಛತೆ- ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಳು. `ತಾಯಂದಿರ ದಿನ'ದ ಕ್ಲಬ್ ಸ್ಥಾಪಿಸಿ ಅದರಿಂದ ಹಣ ಕೂಡಿಸಿ, ಕ್ಷಯದಿಂದ ಬಳಲುತ್ತಿದ್ದ ಮಹಿಳೆಯರ ಔಷಧಿಗೆ ವ್ಯಯಿಸುತ್ತಿದ್ದಳು. ಅಮೆರಿಕದ ನಾಗರಿಕ ಯುದ್ಧದ ಸಮಯದಲ್ಲಿ ತನ್ನ ನಾಲ್ವರು ಮಕ್ಕಳನ್ನು ಕಳೆದುಕೊಂಡಳು. ಒಟ್ಟಿನಲ್ಲಿ ತನ್ನ 12 ಮಕ್ಕಳಲ್ಲಿ 8 ಮಕ್ಕಳನ್ನು ದೊಡ್ಡವರಾಗುವ ಮೊದಲೇ ಕಳೆದುಕೊಂಡಳು.
ಇಂತಹ ವೈಯಕ್ತಿಕ ದುರಂತಗಳ ನಡುವೆಯೂ ತನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸಲಿಲ್ಲ. ಅಂದರೆ `ತಾಯಂದಿರ ದಿನ' ತನ್ನ ತಾಯಿಗೆ ನೀಡುವ ಕೊಡುಗೆಗಿಂತ, ಬೇರೆ `ತಾಯಂದಿರಿಗಾಗಿ' ಮಾಡುವ ಸೇವೆಯಾಗಿತ್ತು!
ಆ್ಯನ್ನ್ ಮೇರಿ 1907ರ ಮೇ ತಿಂಗಳ ಎರಡನೇ ಭಾನುವಾರ ಮೃತಳಾದಳು. ಮಗಳು ರೀವ್ಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ್ದ ಎಲ್ಲರಿಗೂ ತಾಯಿಯ ಪ್ರೀತಿಯ ಹೂವು ಬಿಳಿ ಗುಲಾಬಿಯನ್ನು ನೀಡಿದಳು. ರೀವ್ಸ್‌ಗೆ `ತಾಯಿಯ ದಿನ' ಕುಟುಂಬದ, ತನ್ನ ತಾಯಿ ತನಗಾಗಿ ಮಾಡಿದ ಎಲ್ಲದರ ನೆನಪಿನ ಸಂಭ್ರಮದ ಸ್ಮರಣೆಯಾಗಿತ್ತು.
1912ರಲ್ಲಿ `ತಾಯಿ ದಿನ'ದ ಆಚರಣೆಗಾಗಿಯೇ ಆಕೆ ಸಂಸ್ಥೆಯೊಂದನ್ನು ಹುಟ್ಟು ಹಾಕಿದಳು. ಕ್ರಮೇಣ ಬಂಡವಾಳಶಾಹಿಗಳಿಂದ ಆವರಿಸಿಕೊಂಡ ಎಲ್ಲ ಆಚರಣೆಗಳಂತೆ `ತಾಯಂದಿರ ದಿನ'ದ ಮೇಲೂ ಗ್ರೀಟಿಂಗ್ ಕಾರ್ಡು- ಹೂಗೊಂಚಲು- ಕೊಡುಗೆಗಳ ದಾಳಿ ಆರಂಭವಾಯಿತು. ಪ್ರೀತಿ, ಕೃತಜ್ಞತಾ ಭಾವನೆಗಿಂತ ಹಣವೇ ಬಂಡವಾಳವಾಯಿತು. ರೀವ್ಸ್ ಹೇಳಿದ್ದ ಕೃತಜ್ಞತೆಯ, ಪ್ರಾಮಾಣಿಕ ಭಾವನೆಗಳ ಕೈಬರಹದ ಪತ್ರಕ್ಕಿಂತ ಎರಡು ಸಾಲುಗಳ, ಯಾರು ಬೇಕಾದರೂ ಬರೆದಿರಬಹುದಾದ ಬಣ್ಣದ ಕಾರ್ಡುಗಳೇ ಹೆಚ್ಚಾದವು.
ರೀವ್ಸ್ ಇದರ ವಿರುದ್ಧ ದನಿಯೆತ್ತಿ `ತಾಯಂದಿರ ದಿನ'ದ ಸಲುವಾಗಿ ಬಿಳಿ ಬಣ್ಣದ ಹೂವಿನ ಕುಂಡಗಳನ್ನು ಕೊಡುಗೆಯಾಗಿ ಹಂಚತೊಡಗಿದಳು. ಅರ್ಥಪೂರ್ಣವಾಗಿ ಆಚರಿಸಲಾಗದ, ವ್ಯಾಪಾರಿ ಸಂಸ್ಕೃತಿಯ `ತಾಯಂದಿರ ದಿನ'ದ ವಿರುದ್ಧ ರೀವ್ಸ್ ಬಲವಾಗಿ ಕೆಲಸ ಮಾಡಲಾರಂಭಿಸಿದಳು. ಇದರ ವಿರುದ್ಧದ ಹೋರಾಟ ಆಕೆಯ ಮಾನಸಿಕ ಸ್ವಾಸ್ಥ್ಯವನ್ನೇ ಕೆಡಿಸಿತು.
1944ರಲ್ಲಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಾದ ಆಕೆ, 4 ವರ್ಷಗಳ ನಂತರ ಕೊನೆಯುಸಿರೆಳೆದಳು. ಆಕೆಗಾಗ 84 ವರ್ಷ. ಹಣವಾಗಲೀ, ಮಕ್ಕಳಾಗಲೀ ಆಗ ಅವಳ ಬಳಿ ಇರಲಿಲ್ಲ. ಮಕ್ಕಳಿರದ `ತಾಯಿ' ಹೃದಯದ ರೀವ್ಸ್ `ತಾಯಂದಿರ ದಿನ'ವನ್ನು ಹುಟ್ಟು ಹಾಕಿದ್ದು, ಅದನ್ನು ಬೆಳೆಸಿದ್ದು, ಅದರ ಅರ್ಥಪೂರ್ಣ ಆಚರಣೆಗೆ ಶ್ರಮಿಸಿದ್ದು, ಅವು ನಮಗೆ ಕೊಡುವ ಸಂದೇಶಗಳು ಅನೇಕ.
`ತಾಯಂದಿರ ದಿನ' ಅಮ್ಮಂದಿರಿಗೆ ಸಂತಸದೊಂದಿಗೆ ದುಃಖ ತರುವ ದಿನವೂ ಆಗಬಹುದಷ್ಟೆ. ಮಕ್ಕಳಿಲ್ಲದ `ಮಾತೆ'ಯರಿಗೆ ತಮಗೆ ಮಕ್ಕಳಿಲ್ಲ ಎಂದು ನೆನಪಿಸುವ ದಿನ. ಮಕ್ಕಳನ್ನು ಕಳೆದುಕೊಂಡ ತಾಯಿಗೆ ತನ್ನ ಮಕ್ಕಳನ್ನು ನೆನೆಯುವ ನೋವು ಅಥವಾ ತಾಯಿಯನ್ನು ಕಳೆದುಕೊಂಡ ಮಗಳಿಗೆ ತನ್ನ ತಾಯಿಯನ್ನು ಸ್ಮರಿಸುವ ದುಃಖದ ದಿನ. ಹಾಗೆಯೇ ತಾಯಿ ಪ್ರೀತಿ ಸಿಗದ ಕಂದಮ್ಮಗಳಿಗೆ `ಪ್ರೀತಿ' ಎಂದರೇನೆಂಬುದೇ ಅರ್ಥವಾಗಿಲ್ಲ ಎಂಬುದನ್ನು ನೆನಪಿಸುವ ಕ್ಷಣವೂ ಹೌದು.
ಇವೆಲ್ಲದರ ಮಧ್ಯೆ ಭಾರತದ `ಅಮ್ಮ'ನಂತೂ ಅನಾರೋಗ್ಯ, ಅನಕ್ಷರತೆ, ಬಡತನ, ಅತ್ಯಾಚಾರಗಳ ನಡುವೆ ನಲುಗಿ ಹೋಗಿರುವವಳು. ಹೊರಗೆ ದುಡಿಯುತ್ತಿದ್ದರೂ, ಆರ್ಥಿಕ ಸ್ವಾತಂತ್ರ್ಯ ಇಲ್ಲದ, ಓದಿದ್ದರೂ ತನ್ನ ಅಭಿಪ್ರಾಯ ಹೇಳಲಾಗದ, ಸದಾ ಮಕ್ಕಳು- ಮನೆಯ ಬಗ್ಗೆ ಚಿಂತಿಸುವ `ಅಮ್ಮ'ನಿಗೆ ತನ್ನ ಆರೋಗ್ಯ, ಆಸೆ, ಆಕಾಂಕ್ಷೆಗಳ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ. 16ರ ವಯಸ್ಸಿಗೇ ಮಕ್ಕಳನ್ನು ಹೆರುವ ಹುಡುಗಿ `ಅಮ್ಮ', 50ಕ್ಕೆ ಮಕ್ಕಳಿಬ್ಬರನ್ನೂ ಅಮೆರಿಕಕ್ಕೆ ಕಳುಹಿಸಿ ಹಳ್ಳಿಯಲ್ಲಿ ನಲುಗುವ `ಅಮ್ಮ' ಅಥವಾ 60ಕ್ಕೆ ಸಾಮರ್ಥ್ಯ ಇರದಿದ್ದರೂ ಮೊಮ್ಮಕ್ಕಳನ್ನು ಮಕ್ಕಳಂತೆ ಕಷ್ಟಪಟ್ಟು ಬೆಳೆಸುವ `ಅಮ್ಮ'... ಹೀಗೆ ಅಮ್ಮಂದಿರ ಜವಾಬ್ದಾರಿ ವೈವಿಧ್ಯಮಯ!
`ಅಮ್ಮಂದಿರ ದಿನ' ಅಮೆರಿಕದಿಂದ ಬಂದ ಅರ್ಥಪೂರ್ಣ ಆಚರಣೆ ಎಂದು ಬೀಗುತ್ತಿದ್ದ ನಮಗೆ ಅದೊಂದು `ಭ್ರಮೆ' ಎಂಬುದು ಅರಿವಾಗಬೇಕಿದೆ. `ಅಮ್ಮಂದಿರ ದಿನ'ವಾಗಲೀ, `ಶ್ರಾದ್ಧ'ವಾಗಲೀ `ಅಮ್ಮ'ನನ್ನು ನೆನೆಸುವ ಮತ್ಯಾವುದೇ ಆಚರಣೆಯಾಗಲೀ, ಪ್ರಾಯೋಗಿಕವಾಗಿ ಅದು ಸಂಕೇತಿಸುವ ಮೌಲ್ಯಗಳು `ರೂಢಿ'ಗಳಾಗಿ ಬದಲಾಗಬೇಕು. `ಅಮ್ಮ'ನಿಗೆ ಸಮಯ ಕೊಡದ, `ಅಮ್ಮ'ನ ಆರೋಗ್ಯದ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ, ನಮ್ಮ `ಅಮ್ಮ'ನನ್ನು ನನ್ನ ಹೆಂಡತಿ/ ಅತ್ತಿಗೆ/ ಅಣ್ಣ- ತಮ್ಮ- ಅಕ್ಕ- ತಂಗಿ ನೋಡಿಕೊಳ್ಳಲಿ ಎನ್ನುವ ನಾವು ಬಹುತೇಕರು, ಇಂದು ಕೇವಲ `ಅಮ್ಮಂದಿರ ದಿನ'ದ ಭ್ರಮೆಯಲ್ಲಿ ಬದುಕುತ್ತಿದ್ದೇವೆ ಅನಿಸುತ್ತಿದೆ ಅಲ್ಲವೇ?

ಬುಧವಾರ, ಮೇ 09, 2018

ರಾಮಯಾಣದ ಸ್ವಾರಸ್ಯ ಸಂಗತಿಗಳು 7

ಲಂಕೆ ನಿಜವಾಗಿ ರಾವಣನದ್ದಲ್ಲ

       ಲಂಕೆಗೆ ರಾವಣನ ಲಂಕೆ ಎಂದೇ ಕರೆಯಲಾಗುತ್ತದೆ. ಆದರೆ ಅದು ಮೂಲತಃ ಕುಬೇರನದು. ಲಂಕೆ ಸಂಪೂರ್ಣ ಚಿನ್ನದಿಂದ ನಿರ್ಮಿತವಾಗಿತ್ತು. ಜಗತ್ತಿನ ನಂ.1 ಶ್ರೀಮಂತ ಕುಬೇರ ಅದನ್ನು ನಿರ್ಮಿಸಿ ಆಳುತ್ತಿದ್ದ. ಅವನ ತಮ್ಮ ರಾವಣ. ಅವನಿಗೆ ತಾನೇ ಲಂಕೆಯ ಅಧಿಪತಿಯಾಗಬೇಕು ಎಂಬ ಆಸೆ ಹುಟ್ಟಿತು. ಕುಬೇರ ಅಷ್ಟೇನೂ ಪರಾಕ್ರಮಿಯಲ್ಲ. ಆದರೆ ರಾವಣ ಭಯಂಕರ ಶಕ್ತಿವಂತ. ಅಣ್ಣನನ್ನೇ ಸೋಲಿಸಿ ಲಂಕೆಯನ್ನು ಗೆದ್ದು ತಾನು ಆಳತೊಡಗಿದ.          ಕೃಪೆ : ಕೆ.ಟಿ.ಆರ್

ಗುರುವಾರ, ಮೇ 03, 2018

ಉರಕೋಳ್ಳೊರಿಗೆ

ನಮ್ಮನ್ನ ನೋಡಿ ಉರಕೋಳ್ಳೊರಿಗೆ 
..

ದೇವರು ಒಳ್ಳೆದ್ ಮಾಡಿಲಿ....
..
ಉರಕೊಳ್ಳೊರು ಯಾವತ್ತು ನಮ್ಮ level ಗ ಬರಲ್ಲ 
..
ಅವರು ಉರಕೊoಡಷ್ಟು
..
ಇನ್ನೂ ನಮ್ಮ Level ಹೆಚ್ಚು ಆಗುತ್ತೆ....