fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಕೂಡಲಸಂಗಮೇಶ್ವರ


ವಚನಕಾರ
ಕೂಡಲಸಂಗಮೇಶ್ವರ 
ಅಂಕಿತ ನಾಮ
ಕೂಡಲಾದಿ ಚೆನ್ನಸಂಗಮದೇವ
ಕಾಲ

ದೊರಕಿರುವ ವಚನಗಳು
198 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ಅಯ್ಯಾ, ಜೀವಾತ್ಮ ಭೇದವಾದಮಂ ಪೇಳ್ವೆನಯ್ಯಾ :
ಜೀವ ಬೇರೆ, ಆತ್ಮ ಬೇರೆ ಎಂದು ಹೇಳುವ[ವು] ಹಲವು ಶಾಸ್ತ್ರ ;
ಜೀವಾತ್ಮ ಐಕ್ಯ ಹೇ[ಳುವವು] ಹಲವು ಶಾಸ್ತ್ರ.
ಅ[ದು] ಎಂತೆಂದಡೆ:
ಸರ್ವ ಚೇತನದಲ್ಲಿಯು ಉಂಟು ಎಂದು ಹೇಳುವವು ಜೀವವು,
ಶಿವಶಾಸ್ತ್ರ ಇದಕ್ಕೆ ಸಾಕ್ಷಿ :
ಅಣೋರಣೀಯಾ[ನ್] ಮಹತೋ ಮಹೀಯಾ[ನ್]
ಎಂದು ಶ್ರುತಿಯುಂಟಾಗಿ, ಇದಂ ತಿಳಿದು, ಭೇದವಾದಿಗಳು
ಸರ್ವಜೀವರಲ್ಲಿಯು ಆತ್ಮವುಂಟಾದಡೆಯು
ಪಶುಜೀವಜಂತುಗಳಿಗೆ ನಮಸ್ಕಾರವ ಮಾಡಬಾರದೆ ? ಎಂದು
ಹೇಳುವ ಮಾಯಾವಾದಿಗಳು ನೀವು ಕೇಳಿ ;
ಅದು ಎಂತೆಂದಡೆ :
ಎಲಾ ಎಲಾ, ಉಚ್ಫಿಷ್ಟದಲ್ಲಿಯು ಅರ್ಕನ ಪ್ರಭೆ ಬಿದ್ದು ರಸ ಬತ್ತುವದು.
ಅದರ ರಸಾಸ್ವಾದವು ಅರ್ಕಂಗೆ ಮುಟ್ಟುವುದೆ ?
ಎಲಾ ಎಲಾ, ಸಿಲಹದಲ್ಲಿಯು ಸೂರ್ಯಪ್ರಭೆಯುಂಟು.
ಅಲ್ಲಿ ವಹ್ನಿಯು ಪುಟ್ಟುವು]ದೆ?]
ಇದರಂತೆ, ಸರ್ವ ಜೀವಜಂತುಗಳಲ್ಲಿ
ಮಾಯಾವಾದಿಗಳಲ್ಲಿ
ಆತ್ಮಪರೀಕ್ಷೆಯಿಲ್ಲದವರಲ್ಲಿ
[ದು]ಷ್ಟ ದುರ್ಜನರಲ್ಲಿ
ಶಿವಭಕ್ತರಾಗಿ ಲಿಂಗವ ಧರಿಸಿ
ದೇವರಾದರು ಸರಿಯೆ,
[ಬ್ರಾ]ಹ್ಮರಾಗಿ ಯಜ್ಞೋಪವೀತವ
ಹಾಕಿಕೊಂಡಿದ್ದರು ಸರಿಯೆ,
ಯತಿಗಳಾಗಿ ಮಂಡೆ ಬೋಳಿಸಿಕೊಂಡಿದ್ದರು ಸರಿಯೆ,
ಮಾರ್ಗ ತಪ್ಪಿ ನಡೆವ ಜೀವಜಂತುಗಳಲ್ಲಿ
ಸಿಲಹ ಉಚ್ಫಿಷ್ಟದ ಮೇಲೆ ಸೂರ್ಯನ ಪ್ರಭೆ ಬಿದ್ದಂತೆ
ಆತ್ಮ ಇದ್ದ ಕಾರಣ ಇವರಿಗೆ ಕೈಮುಗಿಯಲಾಗದು ಕಾಣಿರಯ್ಯಾ !
ಇ[ವ]ರೊಳಗೆ ಶಿವಯೋಗಿಗಳು ದಾರೆಂದು ಕೇಳುವ
ಮಾಯಾವಾದಿ ಕೇಳಲಾ.
ಅದು ಎಂತೆಂದಡೆ:
ಸೂರ್ಯನ ಪ್ರಕಾಶಕ್ಕೆ ಬಿಲದ್ವಾರವ ಸಿಲಹಂ ಪಿಡಿಯೆ
ಅರ್ಕನ ಪ್ರಕಾಶಕ್ಕೆ ವಹ್ನಿ ಪುಟ್ಟೆ
ಸರ್ವಕಾಷ*ವನು ಸುಡುವದು ಕಾಣೆಲಾ.
ಶಿವಾತ್ಮ ಐಕ್ಯವ ಮಾಡಿದಾ ಶಿವಯೋಗಿಗಳಲ್ಲಿ
ಸರ್ವಕರ್ಮೇಂದ್ರಿಯ ಈ ತೆರದಲ್ಲಿ ಸುಟ್ಟ ಕಾರಣ
ನಿರ್ಮಳಕಾಯರಾದರು.
ಇಂತಪ್ಪ ಜೀವಾತ್ಮವ ಐಕ್ಯವ ಮಾಡಿದ ಶಿವಯೋಗಿಗಳಲ್ಲಿ
ನಮಸ್ಕರಿಸಬಹುದು.
ಇಂತಾ ಜೀವಾತ್ಮ ವೇದವ ತಿಳಿಯದೆ
'ನಾ ಬ್ರಾಹ್ಮಣ' 'ನಾ ಶಿವಭಕ್ತ'ನೆಂದು ಹೇಳಿಕೊಂಡು ತಿರುಗುವ
ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ
ಕೂಡಲಾದಿ ಚನ್ನಸಂಗಮದೇವಾ

ವಿಶ್ವ ಪುಸ್ತಕ ದಿನ

     ವಿಶ್ವ ಪುಸ್ತಕ ದಿನವನ್ನು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಅಥವಾ ಅಂತಾರಾಷ್ಟ್ರೀಯ ಪುಸ್ತಕ ದಿನ ಎಂಬ ಹೆಸರುಗಳಿಂದ ಪ್ರತಿ ವರ್ಷ ಏಪ್ರಿಲ್‌ 23ರಂದು ಆಚರಿಸಲಾಗುತ್ತದೆ. ಈ ವಾರ್ಷಿಕ ಕಾರ್ಯಕ್ರಮವನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ (ಯುನೆಸ್ಕೊ) ಆಯೋಜಿಸುತ್ತದೆ. ಮೊದಲ ಬಾರಿಗೆ ವಿಶ್ವ ಪುಸ್ತಕ ದಿನವನ್ನಾಗಿ ಏಪ್ರಿಲ್‌ 23, 1995 ರಂದು ಆಚರಿಸಲಾಯಿತು.
=================
ಏಪ್ರಿಲ್‌ 23 ರಂದು ಯಾಕೆ ?
==================
       ಆರಂಭದಲ್ಲಿ ವೆಲೆನ್ಸಿಯಾದ ಬರಹಗಾರ ವಿಸೆಂಟ್‌ ಕ್ಲವೆಲ್‌ ಆಂಡ್ರ್ಯೂ ಅವರ ಜನ್ಮದಿನವಾದ ಅಕ್ಟೋಬರ್‌ 7ರಂದು ಪುಸ್ತಕ ದಿನವನ್ನು ಆಚರಿಸಲಾಯಿತು. ಬಳಿಕ ಅವರು ಮರಣ ಹೊಂದಿದ ದಿನವಾದ ಏಪ್ರಿಲ್‌ 23 ಅನ್ನು ವಿಶ್ವ ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಲಾಯಿತು.
    1995ರಲ್ಲಿ ಯುನೆಸ್ಕೊ ಸಹ ಏಪ್ರಿಲ್‌ 23 ಅನ್ನು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಯ್ಕೆ ಮಾಡಿತು. ಏಪ್ರಿಲ್‌ 23 ವಿಲಿಯಂ ಷೇಕ್ಸ್‌ಪಿಯರ ಮತ್ತು ಇಕಾಗಾಸಿಲಸ್ಕೊ ಡೆ ಲಾ ವೆಗಾ ಅವರು ಮರಣ ಹೊಂದಿದ ದಿನವಾಗಿದೆ. ಜೊತೆಗೆ, ಸಾಕಷ್ಟು ಬರಹಗಾರರ ಜನ್ಮದಿನವೂ ಹೌದು. ಹೀಗಾಗಿ ಯುನೆಸ್ಕೊ ಏಪ್ರಿಲ್‌ 23 ಅನ್ನು ಪುಸ್ತಕ ದಿನವನ್ನಾಗಿ ಆಯ್ಕೆ ಮಾಡಿತ್ತು.
======
ಉದ್ದೇಶ:
==============
    ಜನರಲ್ಲಿ ಓದುವ, ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಇದನ್ನು ರಾಷ್ಟ್ರೀಯ ಹಬ್ಬದ ರೀತಿಯಲ್ಲಿ ಆಚರಿಸುತ್ತವೆ. ಶಾಲಾ ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಏರ್ಪಡಿಸಿ ಬಹುಮಾನದ ರೂಪದಲ್ಲಿ ಉಚಿತವಾಗಿ ಪುಸ್ತಕಗಳನ್ನು ನೀಡಲಾಗುತ್ತದೆ.
========
ಪುಸ್ತಕದಿಂದ ಪ್ರಯೋಜನ: 
================
    ಒಬ್ಬ ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸಲು ಮತ್ತು ಆತನ ಮನೋವಿಕಾಸಕ್ಕೆ ಪುಸ್ತಕಗಳು ನೆರವಾಗುತ್ತವೆ. ಪುಸ್ತಕಗಳು ನಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದೊಂದು ಪುಸ್ತಕವೂ ತನ್ನದೇ ಆದ ಪ್ರಪಂಚವನ್ನು, ನಮಗೆ ಪರಿಚಯವಿಲ್ಲದ ಜೀವನವನ್ನು ನಮಗೆ ಪರಿಚಯಿಸುತ್ತವೆ. ಒಂದು ಪ್ರದೇಶದ ಸಂಸ್ಕೃತಿ, ಜನಜೀವನವನ್ನು, ಆ ಭಾಷೆಯ ಮೂಲಕ ಬೆಳೆಸಲು ಪುಸ್ತಕಗಳು ಸಹಾಯ ಮಾಡುತ್ತವೆ. ಭೂಮಿಯ ಮೇಲೆ ಮಾನವನ ಅಸ್ತಿತ್ವವನ್ನು ತಿಳಿದುಕೊಳ್ಳಲು ಪುಸ್ತಕಗಳು ನೆರವಾಗುತ್ತವೆ. ಪ್ರತಿಯೊಂದು ಪುಸ್ತಕವು ಹಲವು ತಲೆಮಾರುಗಳನ್ನು ದಾಟಿ ಹೋಗುತ್ತವೆ. ನಮ್ಮ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯವನ್ನು ಪುಸ್ತಕಗಳು ಮಾಡುತ್ತವೆ.
★•••┈••✦✦•••••★

ವಿಶ್ವ ಭೂ ದಿನ ಏಪ್ರಿಲ್ 22

ಜಗತ್ತಿನಾದ್ಯಂತ ಏಪ್ರಿಲ್ 22 ರಂದು ಭೂಮಿಯ ದಿನ ಆಚರಿಸಲಾಗುತ್ತಿದೆ. ಪರಿಸರ ರಕ್ಷಣೆಯ ಜಾಗೃತಿ ಮೂಡಿಸುವ ವಿಶೇಷ ಡೂಡಲ್ ಗೂಗಲ್ ಅರ್ಥ್ ಡೇ ಆಚರಿಸುತ್ತಿದೆ. 
(ಪ್ರತಿ ಲಿಂಕ್-ನ್ನು ಕೂತುಹಲದಿಂದ ನೋಡಿ ⇓)

 2012


ತಾಯಿ ಅವಳು (That's the MOTHER)

ತಾಯಿಯ ಆ ರೂಪ
ಮಮತೆಯ ಪ್ರತಿರೂಪ 
ಅವಳ ಜನ್ಮವು ಅಪರೂಪ
ಮನಸದು ರಾತ್ರಿಯ ಕೈದೀಪ...

ರುಧಿರ ಖಂಡಕ್ಕೆ ರೂಪವ ಕೊಡುವ ಅಮರ ಶಿಲ್ಪಿಯವಳು 
ಮಾಂಸದ ಮುದ್ದೆಗೆ ಜೀವ ನೀಡುವ ಬ್ರಹ್ಮನ ತದ್ರೂಪಿಯವಳು
ನವಮಾಸಗಳು ಹೊತ್ತು ಹೆತ್ತು ಜನ್ಮವ ಕೊಟ್ಟವಳು 
ತನ್ನಯ ಜೀವವನೆ ತೇಯ್ದು ನಮಗೆ ಪ್ರಾಣವ ನೀಡಿದಳು...೧

ತನ್ನ ದೇಹದ ಸಾರವನೆಲ್ಲ ಹಾಲಾಗಿ ಉಣಿಸಿದಳು 
ಕರುಣೆ ಪ್ರೀತಿಯೆಂಬ ಊಟವ ಹಾಕಿ ನಮ್ಮನು ಬೆಳೆಸಿದಳು 
ತಾನು ಕರಗುತ್ತ ಬೆಳಕ ನೀಡುವ ಅಮೃತ ಮೂರ್ತಿಯವಳು 
ಆದ್ದರಿಂದಲೇ "ಅಮ್ಮ" ಎಂದೆಂದು ಬತ್ತದಂತ ಸ್ಪೂರ್ತಿ ಚಿಲುಮೆಯಾದಳು ...೨

ಅಪರೂಪ ಮಾಣಿಕ್ಯ 
ಬಾಳಿನ ಸೌಭಾಗ್ಯ 
ಅಮ್ಮ ನೆಂದು ಮರೆಯದಿರು 
ಕಣ್ಣಿಗೆ ರೆಪ್ಪೆ ಯಂತೆ ಕಾಪಾಡುತಿರು ....೩

ಅಮ್ಮ , माँ , అమ్మ, Mother , அம்மா, അമ്മ
ಕೃಪೆ:  **

ಗೂಗಲ ಪುಟದ ವಿಚಿತ್ರಗಳು (Google teapot Pages) 8

ನಾನು ಟೀ ಪಾಟ್
ವಿನಂತಿಸಿದ ಘಟಕದ ದೇಹವು ಚಿಕ್ಕದಾಗಿದೆ ಮತ್ತು stout.
ನನಗೆ ಸಲಹೆ ನೀಡಿ ಮತ್ತು ನನ್ನನ್ನು ಸುರಿಯಿರಿ.
 spn3187 teapot page

ಮಗ ಅಥವಾ ಮಗಳು ಯಾರು ಶ್ರೇಷ್ಠ ?

ಮಗ ಮಗಳು
ರಾಗ ಅನುರಾಗ
ಬುದ್ದಿ ಸಮೃಧ್ಧಿ
ಸಾಹಿತ್ಯ ಸಂಗೀತ
ಪ್ರೀತಿ ವಾತ್ಸಲ್ಯ
ಧಣಿ ಧ್ವನಿ
ಮನೆತನ ಮರ್ಯಾದೆ
ಚೇತನ ಸಾಂತ್ವನ
ಗಣ್ಯ ಧನ್ಯ
ಧೈರ್ಯ ಐಶ್ವರ್ಯ
ಸಿಹಿ ಮಧುರ
ಝೇಂಕಾರ ಮಮಕಾರ
ಇಂಪು ತಂಪು
ಸೊಬಗು ಸೌಂದರ್ಯ
ದೃಷ್ಟಿ ಸೃಷ್ಟಿ
ಕಿಮ್ಮತ್ತು ಕಿಸ್ಮತ್ತು
ಹೃದಯ ಮಿಡಿತ
ಕಣ್ಣು ಬೆಳಕು
ಮೃದಂಗ ಅಂತರಂಗ
ಆತ್ಮ ಆತ್ಮಸಾಕ್ಷಿ
ಸ್ವರ್ಗ ಮೋಕ್ಷ
ಕೃಷ್ಣ ಯಶೋಧೆ
ವಾರಸ್ದಾರ ಹರ್ಷಧಾರ
ಸಂಸ್ಕಾರ ಸಂಸ್ಕೃತಿ
ಜೀವಜಲ ಜೀವನದಿ
ಮಗ ತಾಯಿ
ಮದುವೆಯವರೆಗೆ ಕೊನೆಯವರೆಗೆ


ಹೆಣ್ಣು ಹೆತ್ತೊಡಲ ಹೆಮ್ಮೆಯಾಗಲಿ, ಅದುವೇ ನನ್ನ ಕಳಕಳಿ.

(ಕನ್ನಡ ಕಂದನ ಕನ್ನಡದ ತಾಣ ಅದುವೇ https://t.me/spn3187 & https://spn3187.blogspot.in ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ)


ಕೊರೋನಾ ಜಾಗೃತಿ


ಕೊರೋನಾವನ್ನು ಅಲಕ್ಷ ಮಾಡದಿರಿ, ನಿಮ್ಮ ಒಂದು ನಿರ್ಲಕ್ಷ, ಹಲವು ಜೀವಗಳಿಗೆ ಕುತ್ತು.... 
(ನಿಮ್ಮ ಮನೆಯವರು ಕೂಡ ಕೊರೋನಾ ತುತ್ತಾಗಬಹುದು )

ಮನೆಯಲ್ಲಿಯೇ ಇರು,
ನೀವೂ ಬದುಕಿ,
ನಿಮ್ಮವರನ್ನು ಬದುಕಿಸಿ....

A-Z ಜೀವನ

A ನಿದು ಪ್ರಪಂಚದಲ್ಲಿ
B ಹೇವಿಯರ್ ಸರಿಯಿಲ್ಲ
C ರಿವಂತರಿಗೆ ಸೆನ್ಸ್ ಯಿಲ್ಲ
D ಗ್ರೀ ಮಾಡಿದರೂ ಪ್ರಯೋಜನವಿಲ್ಲ


Engineering ಮಾಡೋನಾಂದ್ರೆ
Future ಇಲ್ಲ
G ವನದಲ್ಲಿ ಜಿಗುಪ್ಸೆಯಾಗಿದೆ
H ಆಗಿರುವ ಜನಸಂಖ್ಯೆಯಲ್ಲಿ


I ಯೋ ಅನ್ನೋರಿಲ್ಲ
Jail ಗೆ ಹೋಗೋಣಾಂದ್ರೆ
K D ಗಳ ಸಾಮ್ರಾಜ್ಯ
L ಹೋದ್ರು ಬೇಜಾರು


Money ಇಲ್ಲ ಅಂದ್ರೆ
N ನ್ನಂತವರಿಗೆ ಜಾಗವಿಲ್ಲ
O ಬ್ಬನೆ ಇರೋಣಂದ್ರೆ ಬೇಜಾರ್
Picture ಗೆ ಹೋಗಾಣಾಂದ್ರೆ


Q ನಲ್ಲಿ ನಿಲ್ಕಕ್ಕಾಗಲ್ಲ
R ಮಿಗೆ ಸೇರೋಣಾಂದ್ರೆ
S ಕೇಪ್ ಅಗೋಕಾಗಲ್ಲ
TV ನೋಡೋಣಾಂದ್ರೆ


Useless ಅಂತಾರೆ
V ಚಿತ್ರವಾದ
World ನಲ್ಲಿ
X ಪಿರಿಯೆನ್ಸಯಿಲ್ಲ


Y man?ಅನ್ನೊರಿಲ್ಲ
Zoo ನಲ್ಲಿರುವ ಪ್ರಾಣಿಯಂತಿರುವ ಮನುಷ್ಯ .....?

ಮನಸು ಕದ್ದೆ / ನಾಯಿಯ ಪ್ಲೇಟ್ ಕದ್ದೆ

ನೀನು ನನ್ನ ಮನಸು ಕದ್ದೆ, ನಾನು ಸುಮ್ಮನಿದ್ದೆ ವ್ಹಾ ವ್ಹಾ
..
ನೀನು ನನ್ನ ಕನಸು ಕದ್ದೆ, ನಾನು ಸುಮ್ಮನಿದ್ದೆ ವ್ಹಾ ವ್ಹಾ
..
ನೀನು ನನ್ನ ನಿದ್ದೆ ಕದ್ದೆ, ಆಗಲೂ ನಾನು ಸುಮ್ಮನಿದ್ದೆ
..
ಕೊನೆಗೆ ನೀನು ನನ್ನ ನಾಯಿಯ ಪ್ಲೇಟ್ ಕದ್ದೆ,
ನಾನು ಸುಮ್ಮನಿದ್ದರೂ ನಾಯಿ ಸುಮ್ಮನೆ ಬಿಡುವುದಿಲ್ಲ..
...
                          ಮರ್ಯಾದೆಯಿಂದ ತಂದುಕೊಡು...