fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಕಲಕೇತಯ್ಯ

ವಚನಕಾರ
ಕಲಕೇತಯ್ಯ
ಅಂಕಿತ ನಾಮ
ಮೇಖಲೇಶ್ವರ ಲಿಂಗ
ಕಾಲ

ದೊರಕಿರುವ ವಚನಗಳು
11 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯ


ಅಕ್ಕನ ಗಂಡ ಭಾವಾಂತೆಗೆ ತಂದೆ 
ಮುಪ್ಪಟ್ಟಿಯ ಬಣ್ಣವ ಬಿಳಿದುದಲು 
ಕಡೆಯಲ್ಲಿ ಕಪೋತ ಕೆಂಪು ಹುಟ್ಟಿತ್ತು. 
ಆ ಬಣ್ಣವ ತೊಳೆದಡೆ ಬಿಳಿದನೊಡಗೂಡುವವಾಗಿ 
ಅರಿವು ಮರವೆಯೆಂಬ ಕಡೆದಡಿಯ ಬಣ್ಣದಡಿ 
ಹರಿಯಲಾಗಿ ಬಿಳಿಯರಿವೆಯಾಯಿತ್ತು. 
ನಿನ್ನ ಉಡಿ ತುಂಬಿ ಉಟ್ಟುಕೊ ಎಂದು ತಂದೆ 
ಮೇಖಲೇಶ್ವರಲಿಂಗವನರಿಯ ಹೇಳಿ 

ಪ್ರತಿಫಲ

 • ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಿಂದುಂಟಾಗುವ ಫಲ
 • ಕಲ್ಲು ಹೊಡೆದಿದ್ದ ಕೈ ಪ್ರತಿಯಾಗಿ ಉದುರಿದ ಹಣ್ಣು
 • ಮಾಡಿದ್ದುಣ್ಣುವ ಮಹರಾಯರ ಮಹತ್ಕಾರ್ಯಗಳ ಫಲ
 • ಗೋಡೆಗೆ ಬಡಿದ ಚೆಂಡು
 • ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೇ ಕರ್ಮ ಮಾಡು ಎಂದು ಕೃಷ್ಣ ಅರ್ಜುನನಿಗೆ ಹೇಳಿರುವುದರಿಂದ ನಾವಿದಕ್ಕೆ ತಲೆಕೆಡಿಸಿಕೊಂಡಿಲ್ಲ
 • ಕಲಿಯುಗದಲ್ಲಿ ಪ್ರವೃತ್ತಿಯ ಪ್ರೇರಕವೇ ಇದು
 • ಪ್ರತಿಫಲಾಪೇಕ್ಷೆಯಿಲ್ಲದೇ ಯಾರಾದರೂ ಉಪಕಾರ ಮಾಡಿದರೆ ಅದು ಅಕಸ್ಮಾತ್ತಾಗಿ ಆಗಿರುವ ಸಂಭವವೂ ಇದೆ
 • ಇದರ ಲಭ್ಯತೆಯನ್ನನುಸರಿಸಿ ಕಾರ್ಯ ಮಾಡಬೇಕೋ ಬೇಡವೋ ಎಂಬುದರ ನಿರ್ಣಯವಾಗುತ್ತದೆ.
 • ಎಷ್ಟು ಸಿಗುತ್ತೆ ? ಎಂದರೆ ಇದೇ ಅರ್ಥ
 • ಕೆಲಸ ಮಾಡದಿದ್ದರೂ ಫಲ ಸಿಗುತ್ತೆ ಸರ್ಕಾರಿ ಅಧಿಕಾರಿಗಳಿಗೆ
 • ದೇವರಿಗೆ ನೈವೇದ್ಯ ಮಾಡಿದ್ದರ ಫಲವೆಂದರೆ, ಅದನ್ನು ನಾವು ಮತ್ತೆ ನೈವೇದ್ಯ ಮಾಡುವುದೇ
 • ಪ್ರತಿಫಲಕ್ಕಾಗಿ ಕಾಯುತ್ತಾ 'ಕುಳಿತುಕೊಳ್ಳುವುದಕ್ಕಿಂತ' ಕಾಯುತ್ತಾ ಮಲಗುವುದು ಹೆಚ್ಚು ವಾಸಿ
 • ಲಕ್ಷಗಟ್ಟಲೆ ದಾನ ಕೊಟ್ಟವಗೆ ಸನ್ಮಾನ ಮಾಡುವುದೇ ಅತನಿಗೆ ಪ್ರತಿಫಲ
         • ⇝-ವಿಶ್ವನಾಥ ಸುಂಕಸಾಳ

ಅಮ್ಮನ ಪ್ರೀತಿ..

ಬ್ರಹ್ಮನ ಸೃಷ್ಠಿಯಲಿ
ಎಲ್ಲವೂ ಸಹಜ ಸುಂದರ..!
ಅದಕ್ಕಿಂದಿಗೂ,ಅಮ್ಮನೇ 
ಜಗದ ಪ್ರೇಮಮಂದಿರ...!!
                                                                      ಕೃಪೆ: ಸಿದ್ದು ಗುಂಡ

ಗೂಗಲ ಗುರುತ್ವಾಕರ್ಷಣೆ ಪುಟ (Google Gravity Pages) 1

ಸರಳವಾಗಿ ಹೇಳುವುದಾದರೆ, ಇದು ಗೂಗಲ್‌ನ ಇಂಟರ್ಫೇಸ್‌ಗೆ "ತುಂಬಿದ" ಭೂ-ಬೌಂಡ್ ಭೌತಶಾಸ್ತ್ರವಾಗಿದೆ: "ಗುರುತ್ವಾಕರ್ಷಣೆಯೊಂದಿಗೆ", ಇಂಟರ್ಫೇಸ್‌ನಲ್ಲಿ ನೀವು ಸಾಮಾನ್ಯವಾಗಿ ಕಂಡುಕೊಳ್ಳುವ ದೃಶ್ಯ ಅಂಶಗಳು, ಉದಾಹರಣೆಗೆ ಸರ್ಚ್ ಬಾರ್, “ನಾನು ಅದೃಷ್ಟವಂತನಾಗಿರುತ್ತೇನೆ” ಬಟನ್, ಮತ್ತು ಎಲ್ಲವೂ ಬ್ರೌಸರ್ನ ಕೆಳಭಾಗದಲ್ಲಿ ಇಟ್ಟಿಗೆಗಳ ರಾಶಿಯಂತೆ ಕೆಳಗೆ ಬೀಳುತ್ತದೆ. ನೀವು "ಗೋಡೆಗಳಲ್ಲಿ" ಹುಡುಕಾಟ ಫಲಿತಾಂಶಗಳನ್ನು "ಎತ್ತಿಕೊಳ್ಳಬಹುದು" ಮತ್ತು "ಎಸೆಯಬಹುದು" ಅಥವಾ ಅವರೊಂದಿಗೆ ಗೊಂದಲಕ್ಕೀಡಾಗಬಹುದು. ಇದನ್ನು Google ನಲ್ಲಿ ಇನ್ನು ಮುಂದೆ ಕಾರ್ಯಗತಗೊಳಿಸಲಾಗುವುದಿಲ್ಲ, ಆದರೆ ಕೆಳಗಿನ ಲಿಂಕ್ ಮೂಲಕ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೀವು ಇನ್ನೂ ನೋಡಬಹುದು.
click image 
funny google gravity trick
ಗೂಗಲ ವಿಸ್ಮಯ


ಕಂಪ್ಯೂಟರ್ನಲ್ಲಿ - ವಿವಿಧ ಕೀಲಿಮಣೆ ವಿನ್ಯಾಸಗಳು

ಕಂಪ್ಯೂಟರ್ನಲ್ಲಿ ಕನ್ನಡ ಟೈಪ್ ಮಾಡಲು "ವಿವಿಧ ಕೀಲಿಮಣೆ ವಿನ್ಯಾಸಗಳು"
                                                                   ಡಾ.ಎ.ಸತ್ಯನಾರಾಯಣ
      ಟೆಪಿಂಗ್ ಕೆಲಸಕ್ಕೆ ಸೀಮಿತಗೊಳಿಸಿ ಕಂಪ್ಯೂಟರ್ನ್ನು ಇಂದಿಗೂ ಕೇವಲ 'ಆಧುನಿಕ ಟೈಪ್ರೈಟರ್' ನಂತೆ (ಗ್ಲೋರಿ ಫೈಡ್ಟೈಪ್ರೈಟರ್) ಬಳಸಲಾಗುತ್ತಿದೆ ಎಂಬುದು ಅತಿಶಯೋಕ್ತಿ ಯಲ್ಲ. ಇಂಗ್ಲಿಷ್ ಭಾಷೆಗೆ ಕ್ವೆರ್ಟಿ (QWERTY)ಕೀಲಿಮಣೆ (ಕೀ-ಬೋರ್ಡ್) ವಿನ್ಯಾಸವು ಏಕೈಕ ಸ್ಟಾಂಡರ್ಡ್ ವಿನ್ಯಾಸವಾಗಿ ಬಳಕೆಗೆ ಬಂದು ದಶಕಗಳೇ ಸಂದಿವೆ. ಇಂಗ್ಲಿಷೇತರ ಭಾಷೆಯ ಕಂಪ್ಯೂಟರ್ ಟೈಪಿಂಗ್ಗಾಗಿ ವಿವಿಧ ಕಾಲಘಟ್ಟದಲ್ಲಿ, ವಿವಿಧ ರೀತಿಯ ಬಳಕೆಕಾರರಿಗೆ ಅಗತ್ಯವಿದ್ದ, ವಿವಿಧ ವಿನ್ಯಾಸದ ಕೀಲಿಮ ಣೆಗಳನ್ನು ರೂಪಿಸಿ ತಂತ್ರಾಂಶಗಳಲ್ಲಿ ಅಳವಡಿಸುತ್ತಾ ಬರಲಾಗಿದೆ. ಕೇವಲ 26 ಅಕ್ಷರಗಳು ಇರುವ ಇಂಗ್ಲಿಷ್ನ ಪಠ್ಯವನ್ನು ಕಂಪ್ಯೂಟರ್ಗೆ ಊಡಿಸಲು ಕ್ವೆರ್ಟಿ (Qwerty)ಕೀಲಿಮಣೆ ಬಹಳ ಜನಪ್ರಿಯವಾಗಿದೆ. ಶಿಫ್ಟ್ಸಹಿತ ಮತ್ತು ಶಿಫ್ಟ್ರಹಿತ ಬಳಕೆಯಿಂದ 52 ಸಾಧ್ಯತೆಗಳು ದೊರೆಯುತ್ತವೆ. ಇದರಿಂದ ಇಂಗ್ಲಿಷ್ನ ಕ್ಯಾಪಿಟಲ್ ಮತ್ತು ಸ್ಮಾಲ್ ಲೆಟರ್ಗಳ ಪಠ್ಯ ಮೂಡಿಸಲು ಸಾಧ್ಯವಾಗಿದೆ.


        ಇಂಗ್ಲಿಷ್ಗಿಂತ ಹೆಚ್ಚಿನ ಸಂಖ್ಯೆಯ ಮೂಲ ಅಕ್ಷರಗಳು, ಒತ್ತಕ್ಷರಗಳು ಮತ್ತು ಗುಣಿತಾಕ್ಷರಗಳಿರುವ ಭಾರತೀಯ ಭಾಷೆಗಳನ್ನೂ ಸಹ ಕಂಪ್ಯೂಟರ್ಗೆ ಊಡಿಸುವಲ್ಲಿ ಇದೇ ಕೀಲಿಮಣೆಯು ಬಳಕೆಯಲ್ಲಿರುವುದು ಆಶ್ಚರ್ಯದ ವಿಷಯ ವೇನಲ್ಲ. ಸ್ವರಗಳು ಮತ್ತು ವ್ಯಂಜನಗಳು ತಾವಾಗಿಯೇ ಸೇರ್ಪಡೆ ಗೊಂಡು ಗುಣಿತಾಕ್ಷರವಾಗುವಂತೆ ಸಂಯೋಜನಾ ತಂತ್ರವನ್ನು ರೂಪಿಸಿ ಭಾರತೀಯ ಭಾಷಾ ಲಿಪಿಯ ಪಠ್ಯವನ್ನು ಕಂಪ್ಯೂಟರಿನಲ್ಲಿ ಮೂಡಿಸುವ ಕೀಲಿಮಣೆ ವಿನ್ಯಾಸವನ್ನು ರೂಪಿಸಲಾಗಿದೆ. ಹೀಗಾಗಿ, ಇಂಗ್ಲಿಷ್ನ ಸಾಂಪ್ರದಾಯಿಕ ಕ್ವೆರ್ಟಿ ಕೀಲಿಮಣೆಯೇ ಇಂದಿಗೂ ಭಾರತೀಯ ಭಾಷೆಗಳ ಲಿಪಿ ಮೂಡಿಕೆಗೆ ಬಳಕೆಯಲ್ಲಿದೆ. ಶಿಫ್ಟ್ ಕೀಲಿಯಂತಹ ಕಾಂಬಿನೇಷನ್ ಕೀಲಿಗಳನ್ನು ಬಳಸಿ ಟೈಪಿಂಗ್ ಕಲಿಯುವಾಗ ಬಳಕೆದಾರನ ನೆನಪಿನ ಶಕ್ತಿಗೆ ಸ್ವಲ್ಪ ಒತ್ತಡ ಇರುವುದು ಸಹಜ. ಇದನ್ನು ತಪ್ಪಿಸಲು ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿದ ಕಾರಣ ಕಾಲ ಕ್ರಮೇಣ ವಿವಿಧ ಕೀಲಿಮಣೆ ವಿನ್ಯಾಸಗಳು ರೂಪುಗೊಂಡು ಬಳಕೆಗೆ ಬಂದಿವೆ.

          ಕನ್ನಡದ ಮಾತುಗಳನ್ನು ಲಿಪಿಯನ್ನಾಗಿಸಿ ನೀಡುವ ತಂತ್ರಜ್ಞಾನವು ಆವಿಷ್ಕಾರಗೊಂಡು ಬಳಕೆಯಲ್ಲಿರುವಾಗ ಕೀಲಿಮಣೆ ವಿನ್ಯಾಸಗಳ ಕುರಿತು ಬರೆಯುವುದು ಕ್ಲೀಷೆಯಾಗುವುದಿಲ್ಲ. ಅಗಾಧವಾದ ಪಠ್ಯವನ್ನು ಡಿಜಿಟೈಸ್ ಮಾಡಲು ಇಂದಿಗೂ ಕೀಲಿಮಣೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಕಂಪ್ಯೂಟರ್ ತಂತ್ರಾಂಶಗಳಲ್ಲಿ ಕನ್ನಡ ಲಿಪಿಯನ್ನು ಯಶಸ್ವಿಯಾಗಿ ಬಳಸಲು ಕಾಲಕಾಲಕ್ಕೆ ಆವಿಷ್ಕಾರಗೊಂಡ ವೈವಿಧ್ಯಮಯ ಕೀಲಿಮಣೆ ವಿನ್ಯಾಸಗಳು ಸಹಕಾರಿಯಾಗಿವೆ. ಟೈಪಿಂಗ್ಗಾಗಿ ಹಲವು ಕೀಲಿಮಣೆ ವಿನ್ಯಾಸಗಳಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನು ತಂತ್ರಾಂಶಗಳು ಹೊಂದಿರುತ್ತವೆ. ತನಗೆ ಅಗತ್ಯ ಕಂಡ ಅಥವಾ ತಾನು ಈ ಮೊದಲೇ ಕಲಿತಿರುವ ವಿನ್ಯಾಸವನ್ನು ಆಯ್ದುಕೊಂಡು ಬಳಕೆದಾರನು ಟೈಪಿಂಗ್ ಮಾಡಬಹುದು. ವೈವಿಧ್ಯಮಯ ಕೀಲಿಮಣೆಗಳ ವಿನ್ಯಾಸಗಳು ಇರುವ ಕಾರಣ ಹೊಸದಾಗಿ ಕನ್ನಡ ಕಂಪ್ಯೂಟರ್ ಟೈಪಿಂಗ್ ಕಲಿಯುವವರಿಗೆ ಗೊಂದಲ ಉಂಟಾಗುವುದು ಸಹಜ. ಯಾವ ವಿನ್ಯಾಸವನ್ನು ತಾನು ಕಲಿಯಬೇಕು? ಕಲಿಯಲು ಸುಲಭವಾದ ವಿನ್ಯಾಸ ಯಾವುದು? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

       ಈ ಹಿಂದೆ, ಒಂದು ತಂತ್ರಾಂಶದಲ್ಲಿ ಲಭ್ಯವಿದ್ದ ಕೀಲಿಮಣೆ ವಿನ್ಯಾಸ ಮತ್ತೊಂದರಲ್ಲಿ ಬಳಕೆಗೆ ದೊರೆಯುತ್ತಿರಲಿಲ್ಲ. ಕಾಲಕಾಲಕ್ಕೆ ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಬೇರೆಬೇರೆ ವಿನ್ಯಾಸಗಳನ್ನು ಎಲ್ಲ ತಂತ್ರಾಂಶ ತಯಾರಕರು ನೀಡಿದ್ದರಿಂದ ಅನೇಕ ವಿನ್ಯಾಸಗಳಿಗೆ ಕಾರಣವಾಗಿದೆ. ಇಂತಹ 'ಅನೇಕತೆ'ಗಳಿಗೆ ಕೊನೆಯಿಲ್ಲದಂತಾದಾಗ, ಬಳಕೆದಾರರೇ ತಮ್ಮ ಇಚ್ಛೆಯಂತೆ (ಕಸೆಕೃುಿಸಬಲ್) ತಮ್ಮದೇ ವಿನ್ಯಾಸವನ್ನು ರೂಪಿಸಿಕೊಳ್ಳಬಹುದಾದ ಸೌಲಭ್ಯವನ್ನು ತಂತ್ರಾಂಶ ತಯಾರಕರು ಕೊಟ್ಟಿರುವುದೂ ಉಂಟು! ಕನ್ನಡಕ್ಕೊಂದು ಏಕರೂಪ (ಸ್ಟಾಂಡರ್ಡ್) ಕೀಲಿಮಣೆ ನಿಗದಿಯಾಗುವವರೆಗೂ ಅನೇಕ ಗೊಂದಲಗಳು ಮುಂದುವರಿದಿದ್ದವು. ಎಲ್ಲ ಗೊಂದಲಗಳ ನಿವಾರಣೆಗೆ ಕನ್ನಡಕ್ಕೆ ಒಂದು ಏಕರೂಪ ಕೀಲಿಮಣೆ ವಿನ್ಯಾಸವನ್ನು ಸರಕಾರವು 1998ರಲ್ಲಿಯೇ ಅನುಮೋದಿಸಿದೆ. ಅದೇ ಕೆ.ಪಿ.ರಾವ್ ವಿರಚಿತ ಫೊನೆಟಿಕ್ ಕೀಲಿಮಣೆ ವಿನ್ಯಾಸ. ಮೊತ್ತಮೊದಲ ಬಾರಿಗೆ ನುಡಿ ತಂತ್ರಾಂಶದಲ್ಲಿ ಅಧಿಕೃತವಾದ ಈ ಒಂದೇ ವಿನ್ಯಾಸವನ್ನು ಅಳವಡಿಸಿ ನೀಡಲಾಗಿದೆ.

          ಕನ್ನಡ ಕಂಪ್ಯೂಟರ್ ಲಿಪಿತಂತ್ರಜ್ಞಾನದ ವಿವಿಧ ಕಾಲಘಟ್ಟಗಳಲ್ಲಿ ಬೆರಳಚ್ಚುಯಂತ್ರದ (ಟೈಪ್ರೈಟರ್) ವಿನ್ಯಾಸ ಮತ್ತು ಇನ್ಸ್ಕ್ರಿಪ್ಟ್ (ಇಂಡಿಯನ್ ಸ್ಕ್ರಿಪ್ಟ್) ವಿನ್ಯಾಸ ಮತ್ತು ಕೆ.ಪಿ.ರಾವ್ (ಕರ್ನಾಟಕ ಸರಕಾರದಿಂದ ಅಂಗೀಕೃತ) ವಿನ್ಯಾಸಗಳು ಇವೇ ಕೆಲವೇ ವಿನ್ಯಾಸಗಳು ಬಳಕೆಯಲ್ಲಿದ್ದವು. ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಕನ್ನಡ ಲಿಪಿತಂತ್ರಾಂಶಗಳು ಹೆಚ್ಚಿದಂತೆಲ್ಲಾ ಒಂದೊಂದು ಲಿಪಿತಂತ್ರಾಂಶದಲ್ಲಿ ಪ್ರತಿಯೊಬ್ಬ ತಯಾರಕರೂ 'ಬಳಕೆಯ ಆಯ್ಕೆ'ಗಾಗಿ ವಿವಿಧ ರೀತಿಯ ವಿನ್ಯಾಸಗಳನ್ನು ನೀಡಲು ಆರಂಭಿಸಿದರು. ಇಂಗ್ಲಿಷ್ ಲಿಪಿಯನ್ನೇ ಬಳಸಿ ಬೆರಳಚ್ಚಿಸುವ ಮೂಲಕ ಕನ್ನಡದ ಪಠ್ಯವನ್ನು ಮೂಡಿಸುವ ಟ್ರಾನ್ಸ್ಲಿಟರೇಷನ್ ಕೀಲಿಮಣೆಯನ್ನೇ ಮುಖ್ಯವಾಗಿ ಪ್ರತಿಯೊಬ್ಬರೂ ಅಳವಡಿಸಿ ನೀಡಲಾರಂಭಿಸಿದರು. ಬಹುತೇಕರಿಗೆ ಕನ್ನಡವನ್ನು ಇಂಗ್ಲಿಷ್ ಮೂಲಕ ಟೈಪಿಸುವ ಅನಿವಾರ್ಯತೆ ಎದುರಾಯಿತು. ಕನ್ನಡ ಭಾಷಾಲಿಪಿ ಜ್ಞಾನ ಇಲ್ಲದವರಿಗೆ ಇಂದಿಗೂ ಇಂತಹ ವಿನ್ಯಾಸವೇ ಅಪ್ಯಾಯಮಾನವಾಗಿ ಕಾಣುತ್ತದೆ. ಆದರೆ, ಕನ್ನಡ ಭಾಷಿಕರಿಗೆ ಇಂಗ್ಲಿಷ್ ಆಲೋಚನೆಯ ಮೂಲಕ ಕನ್ನಡವನ್ನು ಟೈಪಿಸುವುದು ಕಿರಿಕಿರಿಯ ವಿಷಯವೇ ಸರಿ. ಕನ್ನಡವನ್ನು ಕನ್ನಡದಲ್ಲಿಯೇ ಆಲೋಚಿಸಿ ಟೈಪಿಸುವ ತರ್ಕಬದ್ಧ ವಿಧಾನಗಳಿರುವ, ಸರಳವಾದ ಕೀಲಿಮಣೆ ವಿನ್ಯಾಸದ ಅಗತ್ಯವಿತ್ತು. ನಾಡೋಜ ಡಾ.ಕೆ.ಪಿ.ರಾವ್ ಅದನ್ನು ಎಂಬತ್ತರ ದಶಕದಲ್ಲಿಯೇ ಸಾಧಿಸಿ ತೋರಿಸಿದ್ದರು.

      ಸಾಂಪ್ರದಾಯಿಕ ಬೆರಳಚ್ಚುಯಂತ್ರದಲ್ಲಿ ಅಕ್ಷರಭಾಗಗಳನ್ನು ನೆನಪಿಟ್ಟುಕೊಂಡು ಪ್ರತೀ ಅಕ್ಷರಭಾಗ ಮೂಡಿಸಲು ಒಂದೊಂದು ಕೀಲಿಯನ್ನು ಮೂಡಿಸುವ ಕ್ರಮವನ್ನೇ ಕಂಪ್ಯೂಟರ್ಗೂ ಸಹ ಅಳವಡಿಸಿರುವುದನ್ನು ಬೆರಳಚ್ಚುಯಂತ್ರದ ವಿನ್ಯಾಸ (ಟೈಪ್ರೈಟರ್ ಲೇಔಟ್) ಎಂದು ಕರೆಯಲಾಗಿದೆ. ಉದಾಹರಣೆಗೆ, 'ಯೋ' ಎಂಬುದನ್ನು ಟೈಪಿಸಲು ಸೊನ್ನೆ, ಕೊಂಬು, ತಲೆಕಟ್ಟು, ಏತ್ವ, ಮತ್ತೊಂದು ಕೊಂಬು, ಇಳಿ ಹಾಗೂ ದೀರ್ಘ ಹೀಗೆ ಅಕ್ಷರಭಾಗಗಳನ್ನು ಕ್ರಮವಾಗಿ ಬೆರಳಚ್ಚಿಸಿ ಒಂದು ಪೂರ್ಣಾಕ್ಷರವನ್ನು ಮೂಡಿಸುವ ಕ್ರಮ. ಬೆರಳಚ್ಚಿಸಿದಾಗ 'ಕ' ಎಂದೂ, ್ಞ್ಞ ಒತ್ತಿದಾಗ 'ನ್ನ' ಎಂದೂ, ಒತ್ತಿದಾಗ 'ಡ' ಎಂದು ಅಕ್ಷರ ಮೂಡಿಸುವ, ಒಟ್ಟಾರೆ ಓಚ್ಞ್ಞ ಎಂದು ಬೆರಳಚ್ಚಿಸಿದರೆ ಅದು 'ಕನ್ನಡ' ಎಂದು ಮೂಡುವ ವಿನ್ಯಾಸವನ್ನು ಇಂಗ್ಲಿಷ್ ಲಿಪ್ಯಂತರಣ ವಿನ್ಯಾಸ (ಟ್ರಾನ್ಸ್ಲಿಟರೇಷನ್ ಲೇಔಟ್) ಎನ್ನಲಾಗಿದೆ. ಕೀಲಿಮಣೆಯಲ್ಲಿ, ಎಡಗೈ ಬೆರಳುಗಳನ್ನು ಬಳಸುವ ಸ್ಥಾನಗಳಲ್ಲಿ ಸ್ವರಗಳನ್ನು ಹಾಗೂ ಬಲಗೈ ಬೆರಳುಗಳನ್ನು ಬಳಸುವ ಸ್ಥಾನಗಳಲ್ಲಿ ವ್ಯಂಜನಗಳನ್ನು ನಿಗದಿಪಡಿಸಿರುವ ವಿನ್ಯಾಸವನ್ನು 'ಇನ್ಸ್ಕ್ರಿಪ್ಟ್ (ಇಂಡಿಯನ್ ಸ್ಕ್ರಿಪ್ಟ್) ವಿನ್ಯಾಸ ಎಂದು ಕರೆಯಲಾಗಿದೆ. ಎಲ್ಲಾ ಭಾರತೀಯಭಾಷೆಗಳಿಗಾಗಿ ಏಕರೂಪದ ಕೀಲಿಮಣೆ ವಿನ್ಯಾಸವನ್ನು ನಿಗದಿಪಡಿ ಸುವಾಗ ಈ ವಿನ್ಯಾಸವನ್ನು ಕನ್ನಡಕ್ಕೂ ಸಹ ನಿಗದಿಪಡಿಸಲಾಯಿತು. ಇಂದಿಗೂ ಹಲವು ತಂತ್ರಾಂಶಗಳಲ್ಲಿ ಈ ವಿನ್ಯಾಸವನ್ನು ಅಳವಡಿಸಿ ನೀಡಲಾಗುತ್ತಿದೆ. ಈ ವಿನ್ಯಾಸ ಹೆಚ್ಚು ಬಳಕೆಯಲ್ಲಿಲ್ಲ.

      ಮ್ಯಾನುವಲ್ ಟೈಪ್ರೈಟರ್ ಬಳಸುತ್ತಿದ್ದ ಟೈಪಿಸ್ಟ್ಗಳೇ ಕನ್ನಡವನ್ನು ಟೈಪ್ಮಾಡಬೇಕಾದ ಕಾರಣದಿಂದ ಮೊದಲಿಗೆ ಟೈಪ್ರೈಟರ್ ವಿನ್ಯಾಸವು ಬಳಕೆಗೆ ಬಂತು. ನಂತರದಲ್ಲಿ ಟ್ರಾನ್ಸ್ ಲಿಟರೇಷನ್ ವಿನ್ಯಾಸವು ಬಳಕೆಗೆ ಬಂತು. ಆ ನಂತರದಲ್ಲಿ ಧ್ವನ್ಯಾತ್ಮಕ, ಅಂದರೆ, ಫೊನೆಟಿಕ್ ವಿನ್ಯಾಸ ಬಂತು. ತದನಂತರ ಇನ್ಸ್ಕ್ರಿಪ್ಟ್ ವಿನ್ಯಾಸ ಬಳಕೆಗೆ ಬಂತು.

         ಇಂಗ್ಲಿಷ್ನ 26 ಕೀಲಿಗಳನ್ನೇ ಬಳಸಿ, ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ, ಇಂಗ್ಲಿಷ್ ಕೀಲಿಯ ಸ್ಥಾನದಲ್ಲಿಯೇ ಇರುವ ಕನ್ನಡದ ಮೂಲಾಕ್ಷರದ ಕೀಲಿಗಳನ್ನಷ್ಟೇ ಬಳಸಿ ತರ್ಕಬದ್ಧವಾಗಿ ಕನ್ನಡವನ್ನು ಟೈಪಿಸಬಹುದಾದ ವಿನ್ಯಾಸ ಎಂದರೆ ಅದು ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸ. ('ನುಡಿ ವಿನ್ಯಾಸ'). ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಹೊಸದಾಗಿ ಕನ್ನಡ ಟೈಪಿಂಗ್ ಕಲಿಯುವವರಿಗೆ ಕೆ.ಪಿ.ರಾವ್ ವಿನ್ಯಾಸ ಸೂಕ್ತವಾಗಿದೆ.

ಡಾ. ವಿಷ್ಣುವರ್ಧನ್ (ಜನನ : ಮರಣ)


ಜನನ: ಸೆಪ್ಟೆಂಬರ್ ೧೮ ೧೯೫೦                             ಮರಣ :ಡಿಸೆಂಬರ್ ೩೦ ೨೦೦೯

   
ಜನನ
ಸಂಪತ್ ಕುಮಾರ (ವಿಷ್ಣುವರ್ಧನ್)
18 ಸಪ್ಟೆಂಬರ್ 1950 
ಮೈಸೂರು

ನಿಧನ
30 ಡಿಸೆಂಬರ್ 2009 (ವಯಸ್ಸು 59)
ಮೈಸೂರು

ರಾಷ್ಟ್ರೀಯತೆಭಾರತೀಯ
ವೃತ್ತಿನಟ, ಹಾಡುಗಾರ, ನಿರ್ಮಾಪಕ, ಕಥೆಗಾರ
ವರ್ಷಗಳು ಸಕ್ರಿಯ1972–2009
ಬಾಳ ಸಂಗಾತಿಭಾರತಿ ವಿಷ್ಣುವರ್ಧನ್ (1975)

ಸಂಬಂಧಿಕರುಅನಿರುಧ್ ಅಳಿಯ

☛ ವ್ಯಕ್ತಿ ಹೇಳೊ ಸ್ವಾರಿ(Sorry)ಗೂ, ವೈದ್ಯ ಹೇಳೊ ಸ್ವಾರಿ(Sorry)ಗೂ ಏನು ವ್ಯತ್ಯಾಸ ?


  ವ್ಯಕ್ತಿ ಹೇಳೊ ಸ್ವಾರಿ(Sorry)ಯಿಂದ ಸಿಟ್ಟು ಮಾಯ,

  ವೈದ್ಯ ಹೇಳೊ ಸ್ವಾರಿ(Sorry)ಯಿಂದ ವ್ಯಕ್ತಿಯೇ ಮಾಯ .

ಗಣಪತಿಯ 32 ಅವತಾರಗಳು 1/2

ಗಣಪತಿಯ ಬಗೆ ಬಗೆಯ ಅವತಾರಗಳಿವೆ ಒಟ್ಟಾರೆಯಾಗಿ ಹೇಳಬೇಕೆಂದರೆ, 32 ಬಗೆಯ ಅವತಾರಗಳಲ್ಲಿ ಗಣಪತಿಯು ಕಾಣಿಸಿಕೊಂಡಿದ್ದಾನೆ. ಇವುಗಳಲ್ಲಿ ಕೆಲವು ಗಣಪತಿಯ ಜೀವನದ ವಿವಿಧ ಕಾಲ ಘಟ್ಟಗಳನ್ನು ಪ್ರತಿನಿಧಿಸಿದರೆ, ಇನ್ನೂ ಕೆಲವು ಲೋಕ ಕಲ್ಯಾಣಾರ್ಥವಾಗಿ ತಳೆದ ಅವತಾರಗಳಾಗಿವೆ.

1.ಬಾಲ ಗಣಪತಿ
ಬಾಲ ಗಣಪತಿ ಹೆಸರೆ ಸೂಚಿಸುವಂತೆ, ಗಣಪತಿಯ ಎಳೆಯ ಮಗುವಿನ ರೂಪ. ಇದರಲ್ಲಿ ಸ್ವಾಮಿಯು ತನ್ನ ಬಾಲ್ಯದ ಸುಂದರವಾದ ಮತ್ತು ಮುದ್ದಾದ ರೂಪವಾಗಿದೆ.

2.ತರುಣ ಗಣಪತಿ
ತರುಣ ಗಣಪತಿಯು ಗಣಪತಿಯ ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಇದು 8 ಕೈಗಳು ಮತ್ತು ಮುರಿದ ದಂತವನ್ನು ಹೊಂದಿರುತ್ತದೆ.

3.ಭಕ್ತಿ ಗಣಪತಿ
ಭಕ್ತಿ ಗಣಪತಿ ಎಂಬುದು ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುವ ಗಣಪತಿಯ ಅವತಾರವಾಗಿದೆ. ಈ ಗಣೇಶನ ಕೈಯಲ್ಲಿ ಬಾಳೆಹಣ್ಣು ಮತ್ತು ತೆಂಗಿನ ಕಾಯಿ ಇರುತ್ತದೆ.

4.ವೀರ ಗಣಪತಿ
ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು ಹಿಡಿದ 16 ಕೈಗಳು ಇರುತ್ತವೆ. ಗಣಪತಿಯ ಈ " ವೀರ" ಅವತಾರವು ಯುದ್ಧಕ್ಕೆ ಸನ್ನದ್ಧವಾಗಿರುವ ರೀತಿಯಲ್ಲಿ ಕಾಣಿಸುತ್ತದೆ.

5.ಶಕ್ತಿ ಗಣಪತಿ
ಶಕ್ತಿ ಗಣಪತಿಯ ಅವತಾರದಲ್ಲಿ ಗಣಪತಿಯ ತೊಡೆಯ ಮೇಲೆ ಸ್ವಾಮಿಯ ಒಬ್ಬ ಪತ್ನಿಯು ಹೂಮಾಲೆಯನ್ನು ಹಿಡಿದು ಕುಳಿತಿರುತ್ತಾಳೆ. ಈತನು ಕುಟುಂಬವನ್ನು ಕಾಪಾಡುವ ದೇವರು ಎಂದು ಪೂಜಿಸಲಾಗುತ್ತದೆ.

6.ದ್ವಿಜ ಗಣಪತಿ
"ದ್ವಿಜ" ಎಂದರೆ ಎರಡು ಬಾರಿ ಜನಿಸಿದವನು ಎಂದರ್ಥ. ಗಣೇಶನು ನಿಜವಾಗಿಯೂ ಎರಡು ಬಾರಿ ಜನಿಸಿದವನು. ಮೊದಲು ಜನಿಸಿ, ನಂತರ ಕೊಲ್ಲಲ್ಪಟ್ಟು ಆ ಮೇಲೆ ಪುನಃ ಜೀವವನ್ನು ಪಡೆದವನು. ಈ ಅವತಾರದಲ್ಲಿ ಗಣಪತಿಗೆ 4 ತಲೆಗಳು ಇವೆ.

7.ಸಿದ್ಧಿ ಗಣಪತಿ
ಸಿದ್ಧಿ ಗಣಪತಿಯನು ಯಶಸ್ಸು ಮತ್ತು ಸಂಪತ್ತಿನ ಸಲುವಾಗಿ ಪೂಜಿಸಲಾಗುತ್ತದೆ. ಈ ಗಣಪತಿಯ ಮೂರ್ತಿಯು ಹಳದಿ ಬಣ್ಣದಲ್ಲಿರುತ್ತದೆ.

8.ಉಚ್ಚಿಷ್ಟ ಗಣಪತಿ
ಈ ಗಣಪತಿಯು ಸಹ ಹಲವು ಕೈಗಳಿಂದ ಸುಂದರವಾಗಿ ಕಾಣುತ್ತಾನೆ. ತಿಳಿ ನೀಲಿ ಬಣ್ಣದ ಈ ಗಣಪತಿಯು 6 ಕೈಗಳನ್ನು ಹೊಂದಿದ್ದು, ಕೈಯಲ್ಲಿ ವೀಣೆಯಂತಹ ಸಂಗೀತ ವಾದ್ಯಗಳನ್ನು ಹಿಡಿದಿರುತ್ತಾನೆ.

9.ವಿಘ್ನ ಗಣಪತಿ
ಗಣಪತಿಯನ್ನು "ವಿಘ್ನೇಶ್ವರ, ವಿಘ್ನನಾಶಕ" ಎಂದು ಸಹ ಕರೆಯುತ್ತಾರೆ. ಚಿನ್ನದ ಬಣ್ಣದ ಈ ಗಣಪತಿಯ ವಿಗ್ರಹವು ನಿಮಗೆ ಎದುರಾಗುವ ಎಲ್ಲಾ ಕಂಟಕಗಳನ್ನು ನಿವಾರಿಸುತ್ತಾನೆ.

10.ಕ್ಷಿಪ್ರ ಗಣಪತಿ
ಕೆಂಪು ವರ್ಣದ ಈ ಗಣಪತಿಯು ಹೆಸರೇ ಸೂಚಿಸುವಂತೆ ಕಾರ್ಯಗಳನ್ನು ಕ್ಷಿಪ್ರವಾಗಿ ಸಿದ್ಧಿಸಿಕೊಳ್ಳಲು ನೆರವಾಗುತ್ತಾನೆ.

11.ಹೇರಂಬ ಗಣಪತಿ
ಹೇರಂಬ ಗಣಪತಿಯು ದೀನರನ್ನು ಉದ್ಧಾರ ಮಾಡಲು ಅವತರಿಸಿದ ಗಣಪತಿಯಾಗಿದ್ದಾನೆ. ಈತನಿಗೆ 5 ತಲೆಗಳು ಇದ್ದು, ನೆಗೆಯಲು ಸಿದ್ಧವಾಗಿರುವ ಸಿಂಹದ ವಾಹನವನ್ನು ಏರಿರುವ ಅವತಾರ ಇದಾಗಿದೆ.

12.ಲಕ್ಷ್ಮೀ ಗಣಪತಿ
ಲಕ್ಷ್ಮೀ ಮತ್ತು ಗಣಪತಿಯನ್ನು ಸಹೋದರ -ಸಹೋದರಿಯರಂತೆ ಕಾಣಲಾಗುತ್ತದೆ. ಚಿನ್ನದ ಬಣ್ಣದ ಈ ಗಣಪತಿಯನ್ನು ಹಣ ಮತ್ತು ಐಶ್ವರ್ಯಗಳ ಸಂಕೇತವಾಗಿ ಪೂಜಿಸಲಾಗುತ್ತದೆ.

13.ಮಹಾ ಗಣಪತಿ
"ಮಹಾ" ಎಂಬ ಮಾತೇ "ಶ್ರೇಷ್ಟ" ಎಂಬುದನ್ನು ಸೂಚಿಸುತ್ತದೆ. ಕೆಂಪು ಬಣ್ಣದಲ್ಲಿರುವ ಈ ಗಣಪತಿಯು, ತನ್ನ ಶಕ್ತಿಯ ಜೊತೆಯಲ್ಲಿ ಕುಳಿತಿರುತ್ತಾನೆ.

14.ವಿಜಯ ಗಣಪತಿ
ವಿಜಯ ಗಣಪತಿಯು ಹೆಸರೇ ಸೂಚಿಸುವಂತೆ "ವಿಜಯ"ದ ಸಂಕೇತ. ಈತನಿಗೆ ನಾಲ್ಕು ಕೈಗಳು ಇದ್ದು, ಮೂಷಿಕ ವಾಹನನಾಗಿ ಕಾಣಿಸುತ್ತಾನೆ.

15.ನೃತ್ಯ ಗಣಪತಿ
ಗಣಪತಿಯು ತನ್ನ ಅಗಾಧ ದೇಹದ ಹೊರತಾಗಿಯೂ ನೃತ್ಯವನ್ನು ಮಾಡುವ ಭಂಗಿಯಲ್ಲಿ ಇಲ್ಲಿ ಕಾಣಿಕೊಳ್ಳುತ್ತಾನೆ. ನೃತ್ಯ ಮಾಡುವ ಗಣಪತಿಯ ಅಂದಕ್ಕೆ ಬೆರಗಾಗದೆ ಇರುವವರು ಯಾರಿದ್ದಾರೆ?

16.ಊರ್ಧ್ವ ಗಣಪತಿ
ಊರ್ಧ್ವ ಗಣಪತಿ ಎಂದರೆ" ಉದ್ದವಾಗಿ ಇರುವ ಗಣಪತಿ" ಎಂದರ್ಥ. ಈ ಗಣಪತಿಯು ಪ್ರಮುಖವಾಗಿ ಹಿಡುವಳಿಯನ್ನು ಹರಸುವ ಗಣಪತಿಯಂತೆ ಕಾಣುತ್ತಾನೆ. ಈತನ ಕೈಯಲ್ಲಿ ಭತ್ತ, ನೈದಿಲೆ, ಕಬ್ಬಿನ ಜಲ್ಲೆಗಳನ್ನು ನಾವು ಕಾಣಬಹುದು.

17.ಏಕಾಕ್ಷರ ಗಣಪತಿ
"ಏಕಾಕ್ಷರ ಗಣಪತಿ"ಯು ಹೆಸರೇ ಸೂಚಿಸುವಂತೆ "ಒಂದೆ ಅಕ್ಷರದ "ಗಣಪತಿಯಾಗಿರುತ್ತಾನೆ. ಈತನು ಕೆಂಪು ಬಣ್ಣದಲ್ಲಿದ್ದು, ಮೂಷಿಕ ವಾಹನನಾಗಿ ನಮಗೆ ಕಾಣಿಸುತ್ತಾನೆ.

18.ವರದ ಗಣಪತಿ
ನಿಮಗೆ ಯಾವುದಾದರು ಒಂದು ವರ ಬೇಕೆ? ಹಾಗಾದರೆ ನೀವು ವರದ ಗಣಪತಿಯನ್ನು ಪೂಜಿಸಿ. ಈತನಿಗೆ "ಮೂರನೆ ಕಣ್ಣು" ಇದೆ. ಇದು ಜ್ಞಾನವನ್ನು ಪ್ರತಿನಿಧಿಸುತ್ತದೆ.

19.ತ್ರಯಾಕ್ಷರ ಗಣಪತಿ
ಈ ಗಣಪತಿಯು ಮೂರು ಅಕ್ಷರದ ಗಣಪತಿಯಾಗಿದ್ದು, ಕೈಯಲ್ಲಿ ತನ್ನ ಪ್ರೀತಿಯ ತಿನಿಸಾದ ಮೋದಕವನ್ನು ಹಿಡಿದು ತಿನ್ನುತ್ತಿರುವುದನ್ನು ಕಾಣಬಹುದು.

20.ಕ್ಷಿಪ್ರ ಪ್ರಸಾದ ಗಣಪತಿ
ಈ ಗಣಪತಿಯು ನಿಮ್ಮ ಕೋರಿಕೆಯನ್ನು ಅತಿ ಶೀಘ್ರದಲ್ಲಿಯೇ ಪೂರೈಸುವನೆಂದು ಭಾವಿಸಲಾಗಿದೆ.

21.ಹರಿದ್ರ ಗಣಪತಿ
ಹರಿದ್ರ ಗಣಪತಿಯು ಸುಂದರವಾದ ಚಿನ್ನದ ಬಣ್ಣವನ್ನು ಹೊಂದಿದ್ದು, ಹಳದಿ ಬಣ್ಣದ ರಾಜ ಠೀವಿಯಿಂದ ಕೂಡಿದ ವಸ್ತ್ರವನ್ನು ಧರಿಸಿರುತ್ತಾನೆ.

22.ಏಕದಂತ ಗಣಪತಿ
ಈ ಗಣಪತಿಯು ಒಂದೇ ಒಂದು ದಂತವನ್ನು ಮಾತ್ರ ಹೊಂದಿದ್ದು, ನೀಲಿಬಣ್ಣದಿಂದ ಕೂಡಿರುತ್ತಾನೆ.

23.ಸೃಷ್ಟಿ ಗಣಪತಿ
ಗಣಪತಿಯ ಈ ಸಣ್ಣರೂಪವು ಮೂಷಿಕ ವಾಹನವಾಗಿದ್ದು, ಒಳ್ಳೆಯ ಮೂಡ್‍ನಲ್ಲಿ ಕಾಣಿಸಿಕೊಳ್ಳುತ್ತಾನೆ.

24.ಉದ್ಧಂಡ ಗಣಪತಿ
ಉದ್ಧಂಡ ಗಣಪತಿಯು ವಿಶ್ವದಲ್ಲಿ 'ಧರ್ಮವನ್ನು ಪರಿಪಾಲಿಸುತ್ತಾನೆ" . ಈ ಗಣಪತಿಯು 10 ಕೈಗಳನ್ನು ಹೊಂದಿದ್ದು, ವಿಶ್ವದಲ್ಲಿರುವ ಎಲ್ಲಾ 10 ಒಳ್ಳೆಯ ಅಂಶಗಳನ್ನು ಪ್ರತಿನಿಧಿಸುತ್ತಾನೆ.

25.ಋಣಮೋಚನ ಗಣಪತಿ
ಈ ಗಣಪತಿಯು ಮಾನವ ಕುಲವನ್ನು ಕೀಳರಿಮೆ ಮತ್ತು ಸಾಲಗಳಿಂದ ಮುಕ್ತಗೊಳಿಸುತ್ತಾನೆ. ಗಣಪತಿಯ ಈ ಅವತಾರವು ಬೂದು ಬಣ್ಣದಿಂದ ಕೂಡಿರುತ್ತದೆ.

26.ದುಂಧಿ ಗಣಪತಿ
ದುಂಧಿ ಗಣಪತಿಯು ಕೆಂಪು ವರ್ಣದಲ್ಲಿದ್ದು, ಕೈಗಳಲ್ಲಿ ರುದ್ರಾಕ್ಷದ ಮಾಲೆಯನ್ನು ಹೊಂದಿರುತ್ತಾನೆ.

27.ದ್ವಿಮುಖ ಗಣಪತಿ
ದ್ವಿಮುಖ ಗಣಪತಿಯು ಹೆಸರೇ ಸೂಚಿಸುವಂತೆ, ಎರಡು ತಲೆಗಳನ್ನು ಹೊಂದಿದ್ದು, ಎರಡು ಕಡೆಗೆ ಮುಖ ಮಾಡಿರುತ್ತಾನೆ. ಈತನ ಬಣ್ಣ ನೀಲಿ.

28.ತ್ರಿಮುಖ ಗಣಪತಿ
ತ್ರಿಮುಖ ಗಣಪತಿಯು ಮೂರು ಮುಖಗಳನ್ನು ಹೊಂದಿದ್ದು, ಚಿನ್ನದ ಕಮಲದ ಹೂವಿನ ಮೇಲೆ ಆಸೀನನಾಗಿರುತ್ತಾನೆ.

29.ಸಿಂಹ ಗಣಪತಿ
ಸಿಂಹ ಗಣಪತಿಯು ತಾನು ಕುಳಿತ ಸಿಂಹದಿಂದಾಗಿ ಈ ಹೆಸರು ಪಡೆದಿರುತ್ತಾನೆ.

30.ಯೋಗ ಗಣಪತಿ
ಯೋಗ ಗಣಪತಿಯು ಪದ್ಮಾಸನದಲ್ಲಿ ಕುಳಿತಿರುತ್ತಾನೆ ಮತ್ತು ಧ್ಯಾನ ಯೋಗ ನಿರತನಂತೆ ಕಾಣುತ್ತಾನೆ.

31.ದುರ್ಗಾ ಗಣಪತಿ
ದುರ್ಗಾ ಗಣಪತಿಯು ಗಣಪತಿಯ ಒಂದು ಅವತಾರವಾಗಿದ್ದು, ಈ ಅವತಾರದಲ್ಲಿ ಈತ ತನ್ನ ಮಾತೆಯಾದ ದುರ್ಗಾ ದೇವಿಯಿಂದ ಶಕ್ತಿಗಳನ್ನು ಸಂಪಾದಿಸಿರುತ್ತಾನೆ.

32.ಸಂಕಷ್ಟ ಹರ ಗಣಪತಿ
ಗಣಪತಿಯ ಈ ಅದ್ಭುತ ಅವತಾರವು ಮಾನವ ಕುಲದ ಸಂಕಷ್ಟಗಳನ್ನು ನಿವಾರಿಸುತ್ತದೆ. 

 2/2 

* 💐 * ಸರ್ವೇ ಜನಃ ಸುಖಿನೋ ಭವಂತು * 💐 *