fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ನಮ್ಮ ಕನ್ನಡ ಜಗತ್ತಿಗೆ ಸುಸ್ವಾಗತ (WelCome to Our Kannada World)

ಕನ್ನಡದ ಕಂದ ’ ನ ತಾಣಕ್ಕೆ ಆತ್ಮೀಯ ಸುಸ್ವಾಗತ

    ಸಾಮಾಜಿಕ ಜೀವನದಲ್ಲಿನ ವಿವಿಧ ಸಾಂಸ್ಕೃತಿಕ ಸದಭಿರುಚಿಗಳತ್ತ ಆತ್ಮೀಯವಾದ ‘ ಕನ್ನಡ ’ಕ್ಕೆ ಆಸ್ಪದ ನೀಡುವುದು ಈ ತಾಣದ ಆಶಯ. ನಮ್ಮ ಸಾಮಾಜಿಕ ಜೀವನದಲ್ಲಿ ಕಂಡು ಬರುವ ಹಲವು ಪ್ರಸಿದ್ಧ ಘಟನೆಗಳು, ವ್ಯಕ್ತಿತ್ವಗಳು, ಸಾಧನೆಗಳು, ಕಲಾವಂತಿಕೆಗಳು, ನೈಪುಣ್ಯತೆಗಳು, ಸಜ್ಜನಿಕೆಗಳು ಇತ್ಯಾದಿ ಇತ್ಯಾದಿಗಳು ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಗಮನಕ್ಕೆ ಬಂದಿರುತ್ತವೆ. ಇಂತಹ ಅಂಶಗಳು ಕಾಲಾನುಕ್ರಮದಲ್ಲಿ ನಮ್ಮ ಆಂತರ್ಯದಲ್ಲಿ ಸುಪ್ತವಾಗಿ ಅಡಗಿಕೊಂಡಿದ್ದು, ಅವುಗಳ ಬಗ್ಗೆ ಮಾಧ್ಯಮಗಳ ಮೂಲಕವೋ, ಇತರರೊಂದಿಗೆ ಒಂದಿನಿತು ಮೆಲುಕು ಹಾಕುವಂತಹ ಸಂದರ್ಭಗಳೋ ಬಂದಾಗ ನಮಗೆ ಮುದ ನೀಡುತ್ತಿರುತ್ತವೆ.
    ಇಂದಿನ ಬದುಕು ಸೃಷ್ಟಿಸುತ್ತಿರುವ ಯಾಂತ್ರಿಕತೆ, ವ್ಯಾವಹಾರಿಕತೆಯ ಮಾಧ್ಯಮ ಪ್ರಸರಣಗಳಲ್ಲಿರುವ ಏಕತಾನತೆ, ವಿಭಿನ್ನ ಸಂಸ್ಕೃತಿ, ಪರಿಸರ, ಮನೋಭಾವಗಳೊಡನೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ - ಮುಂತಾದವುಗಳಿಂದ ಇಂದಿನ ದೈನಂದಿನ ಬದುಕು, ನಮ್ಮಲ್ಲಿ ಅಂತರಂಗಿಕವಾಗಿ ಹುದುಗಿಕೊಂಡಿರುವ ಸುಪ್ತತೆಗಳಿಗೆ ಆತ್ಮೀಯ ಸ್ಪರ್ಶಗಳೇ ದೊರಕದಂತಹ ಅನಾಥ ಪ್ರಜ್ಞೆಗಳನ್ನು ಹುಟ್ಟುಹಾಕಿಬಿಡುತ್ತಿವೆ. ಈ ನಿಟ್ಟಿನಲ್ಲಿ ಅಂತರ್ಜಾಲ ಸಂಪರ್ಕಗಳು ಇಂದಿನ ಯುಗದಲ್ಲಿ ಒಂದಿಷ್ಟು ಆಶಾದಾಯಕ ಸಾಧ್ಯತೆಗಳನ್ನು ನಮ್ಮ ಮುಂದೆ ತೆರೆದಿಟ್ಟಿವೆ. ಬದುಕು ತರುವ ಹತ್ತು ಹಲವು ನಿಟ್ಟಿನ ಯಾಂತ್ರಿಕತೆ, ಅಶಿಸ್ತು, ಬೇಡದ ಜಂಜಾಟ ತಲೆನೋವುಗಳಿಗೆ ಅಂತರ್ಜಾಲ ಸಂಪರ್ಕಗಳೂ ಹೆಚ್ಚು ಹೆಚ್ಚು ಉಪಯೋಗಿಸಲ್ಪಡುತ್ತಿವೆ ಎಂಬುದು ನಿಜವಾದರೂ, ಈ ವ್ಯವಸ್ಥೆಯನ್ನು ಸದುಪಯೋಗಕ್ಕೆ ಬಳಸಿಕೊಂಡಲ್ಲಿ ಅದು ನಮ್ಮ ಬದುಕಿಗೆ ಒಂದಿಷ್ಟು ಉತ್ತಮ ಚಿಂತನ ಮಂಥನದ ಹವೆಯನ್ನೂ, ಉತ್ಸಾಹವನ್ನೂ, ಇವು ನಮ್ಮ ಬದುಕಿಗೆ ನೀಡಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ. ಇಂಥಹ ಒಂದು ಆಶಯ ಇಲ್ಲಿನ ‘ ಕನ್ನಡದ ಕಂದ ’ ನ ತಾಣ ದಲ್ಲಿದೆ.
    ಈ ‘ ಕನ್ನಡದ ಕಂದ ’ ನ ತಾಣದಲ್ಲಿ ಸಾಹಿತ್ಯ, ಸಿನಿಮಾ, ಸಂಗೀತ, ನಾಟಕ, ನೃತ್ಯ, ಕಲೆ, ಕ್ರೀಡೆ, ಆಧ್ಯಾತ್ಮ ಹೀಗೆ ಹಲವು ವಿಚಾರಗಳ ಹರವು ಇದೆ. ಇಲ್ಲಿನ ‘ ಕನ್ನಡದ ಕಂದ ’ ನ ತಾಣ ಜೂನ್ ೧0, ೨೦೧೨ ರ ವರ್ಷದಿಂದ ನಮ್ಮ ‘ ಕನ್ನಡದ ಕಂದ ’ ಪುಟದಲ್ಲಿ ಒಂದೊಂದಾಗಿ ರೂಪುಗೊಂಡದ್ದಾಗಿವೆ. ಮಾಧ್ಯಮದಲ್ಲಿ ಹಳೆಯ ಸಲ್ಲಾಪಗಳನ್ನು ಹುಡುಕುವುದಕ್ಕೆ ಇರುವ ಮಿತಿಗಳ ಹಿನ್ನೆಲೆಯಲ್ಲಿ ಇಂಥಹ ಒಂದು ತಾಣದ ನಿರ್ಮಾಣದ ಅವಶ್ಯಕತೆಯನ್ನು ಇದ್ದುದರಿಂದ ಈ ತಾಣ ನಿರ್ಮಾಣ ಮಾಡಿದೆ. ನಿಮಗೆ ಬೇಕಾದ ಹಲವಾರು ಮಾಹಿತಿ ಪಡೆಯಲು ಬೇರೆ ಬೇರೆ ತಾಣಕ್ಕೆ ಹೋಗಿ ಪಡೆಯಬೇಕು ಮತ್ತೆ ಅದೇ ಬೆಕೆಂದರೆ ನೀವು ಅದರ ಹೆಸರನ್ನು ನೆನಿಡಬೇಕು, ಆ ಎಲ್ಲ ತಾಣಗಳ ಹೆಸರು ನೆನಪಿಗೆ ಬಾರದೆ ಇದ್ದರೆ, ಆ ಸಂಗತಿ ಸರಿಯಾಗಿ ಸಿಗುವದಿಲ್ಲ, ಅದಕ್ಕೆ ಈ ತಾಣಕ್ಕೆ ಬಂದು ನೋಡಿ, ಎಲ್ಲ ಮಾಹಿತಿಯೂ ಒಂದೇ ಸೂರಿನಡಿ ಸಿಗುತಿದ್ದರೆ, ಎಂತ ಮಜ, ಅದಕ್ಕೆ ಈ ತಾಣ. ಇದರಲ್ಲಿನ ಮಾಹಿತಿಗಳು ನಿಂತ ನೀರಾಗದೆ ಸಕ್ರಿಯವಾಗಿರುತ್ತದೆ ಎಂಬ ನಂಬಿಕೆಯಿದೆ. ತಮ್ಮ ಸಹಕಾರ, ಪ್ರೋತ್ಸಾಹ, ಬೆಂಬಲ, ಭಾಗವಹಿಕೆ, ಸದುಪಯೋಗ ಇವೆಲ್ಲವುಗಳಿಂದ ಈ ‘ಕನ್ನಡದ ಕಂದ’ ನ ತಾಣವನ್ನು ಶಕ್ತಿಯುತವಾಗಿ ಮಾಡುವುದು ನಿಮ್ಮ ಕೈಯಲ್ಲಿದೆ.

ಕನ್ನಡ ಕಂದನ ಕನ್ನಡದ ತಾಣಗಳು ವಿಳಾಸಗಳ ಮೂಲಕ ತಲುಪಬಹುದಾಗಿದೆ


ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು
ಅದಕ್ಕೆ
ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು