fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಮೇ 31, 2014

ತೆಂಗಿನ ಕಾಯಿ ಹಾಲಿನ ಭಾತ್


ಬೇಕಾಗುವ ಸಾಮಗ್ರಿಗಳು
  •  ಅಕ್ಕಿ1ಪಾವು 
  • ತೆಂಗಿನಕಾಯಿ 1(ಅಥವಾ 1ಟಿನ್ coconut cream) 
  • ಮೆಣಸಿನಪುಡಿ 2ಚಮಚ 
  • ಗೋಡಂಬಿ 100ಗ್ರಾಂ 
  • ಒಣದ್ರಾಕ್ಷಿ 100ಗ್ರಾಂ 
  • ಉಪ್ಪು 1-2 ಚಮಚ 
  • ತುಪ್ಪ 2ಚಮಚ 
  • ಒಗ್ಗರಣೆಗೆ-ಎಣ್ಣೆ 40ಗ್ರಾಂ,
  • ಅರಿಶಿನ 1ಚಿಟಿಕೆ,
  • ಇಂಗು 1ಚಿಟಿಕೆ, 
  • ಸಾಸಿವೆ 1ಚಮಚ,
  • ಕರಿಬೇವು 2ಎಳಸು 
  • ಕೊತ್ತಂಬರಿ ಸೊಪ್ಪು 1ಕಂತೆ 
ಮಾಡುವ ವಿಧಾನ 
ಅಕ್ಕಿಯನ್ನು ತೊಳೆದು ಉದುರುದುರಾಗಿ (ತುಪ್ಪ ಬೆರೆಸಿ) ಅನ್ನ ಮಾಡಿಕೊಳ್ಳಿ, ತಣ್ಣಗಾಗಲು ಬಿಡಿ ತೆಂಗಿನ ಕಾಯನ್ನು ತುರಿದು ರುಬ್ಬಿ ಹಾಲನ್ನು ತೆಗೆದುಕೊಳ್ಳಿ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಒಗ್ಗರಣೆ ಮಾಡಿಕೊಳ್ಳಿ ನಂತರ ಅದಕ್ಕೆ ಗೋಡಂಬಿ ದ್ರಾಕ್ಷಿ ಹಾಲು ಹಾಕಿ ಎರಡು ನಿಮಿಷ ಕುದಿಸಿ ಅನ್ನವನ್ನು ಬಾಣಲೆಗೆ ಹಾಕಿ,ಮೆಣಸಿನಪುಡಿ ಬೆರೆಸಿ, ಮೊಗಚುವ ಕೈಯಿಂದ ಐದು ನಿಮಿಷ ಬಾಡಿಸಿ ಒಲೆ ಆರಿಸಿ ಮುಚ್ಚಿಡಿ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸಿಂಪಡಿಸಿ ಉಣಬಡಿಸಿ.

ಶುಕ್ರವಾರ, ಮೇ 30, 2014

ಅಡಚಣೆ

ಜೂನ 15 ರ ವರೆಗೆ ಸರಿಯಾದ  ಮತ್ತು ಪೂರ್ಣ ಪ್ರಮಾಣದ  ಅಪಡೇಟ್ ಆಗುವದಿಲ್ಲ.
     
( ವೀಕ್ಷಕರು ಸಹಕರಿಸಬೇಕಾಗಿ ವಿನಂತಿಸುತ್ತೆನೆ )          ಇಂತಿ ಕರುನಾಡ ಕನ್ನಡಿಗ.

ಶುಕ್ರವಾರ, ಮೇ 23, 2014

ದಿಲ್ ಕುಶ್ ಪಲಾವ್



ಬೇಕಾಗುವ ಸಾಮಗ್ರಿಗಳು 
  • ಬಾಸುಮತಿ ಅಕ್ಕಿ 2 ಪಾವು,
  •  ಕಿತ್ತಳೆ ಹಣ್ಣಿನ ರಸ 2 ಬಟ್ಟಲು ,
  • ತುಪ್ಪ 1 ಬಟ್ಟಲು ,
  • ಚಕ್ಕೆ 5ತುಂಡು ,
  • ಲವಂಗ 5 ,
  • ಈರುಳ್ಳಿ3 ,
  • ಖಾರದ ಪುಡಿ 3ಚಮಚ ,
  • ಸೇಬು 1 ,
  • ಪೈನಾಪಲ್3 ಬಿಲ್ಲೆ ,
  • ಹಸಿರು ದ್ರಾಕ್ಷಿ (ಬೀಜವಿಲ್ಲದ್ದು)15 ,
  • ಗೋಡಂಬಿ 8 ,
  • ಪಿಸ್ತಾ 1ಚಮಚ ,
  • ಉಪ್ಪು 2 ಚಮಚ ,
ಮಾಡುವ ವಿಧಾನ 
ಅಕ್ಕಿಯನ್ನು 10 ನಿಮಿಷ ನೀರಿನಲ್ಲಿ ನೆನೆಸಿಡಿ. ಬಾಣಲೆಯಲ್ಲಿ ತುಪ್ಪ ಹಾಕಿ ಕಾದ ನಂತರ ಈರುಳ್ಳಿ ಹುರಿದು ಕೆಂಪಗಾದ ಮೇಲೆ ಚಕ್ಕೆ,ಏಲಕ್ಕಿ,ಲವಂಗ ಬೆರೆಸಿ ಮೆಣಸಿನ ಪುಡಿ ಮತ್ತು ನೀರು ಬಸಿದ ಅಕ್ಕಿಯನ್ನು ಬಾಣಲೆಗೆ ಹಾಕಿ ಹುರಿದು ಕುಕ್ಕರ್ನಲ್ಲಿ ಆರು ಲೋಟ ನೀರು ಮತ್ತು ಕಿತ್ತಳೆ ರಸ ಹಾಕಿ ಕುದಿಸಿ. ಬಾಣಲೆಯಲ್ಲಿ ಹುರಿದ ಪದಾರ್ಥವನ್ನು ಕುಕ್ಕರ್ಗೆ ಹಾಕಿ ಉಪ್ಪು ಸೇರಿಸಿ ಮುಚ್ಚಿಡಿ,1-2 ಬಾರಿ ಕೂಗಿಸಿ ಕುಕ್ಕರ್ ಆರಿದ ಮೇಲೆಹೆಚ್ಚಿದ ಹಣ್ಣುಗಳನ್ನು ಬೆರೆಸಿ 5 ನಿಮಿಷ ಸಣ್ಣ ಉರಿಯಲ್ಲಿ ಬೆರೆಸಿ  ಗೋಡಂಬಿ ಪಿಸ್ತಾ ಗಳಿಂದ ಅಲಂಕರಿಸಿ ಬಡಿಸಿ.

ಹೊಸ ಸಂಶೋಧನೆ 6


ಗುರುವಾರ, ಮೇ 22, 2014

4 ಯೋಗಾಸನ

ಆಸನಗಳಲ್ಲಿ 4 ಆಸನಗಳು ಇಲ್ಲಿ ಹೇಳಲಾಗಿ
1. ಉರ್ದ್ವ ದನುರ್ವಾಸನ,
2. ಪಿಂಚ ಮಯೂರಾಸನ,
3. ಸರ್ವಾಂಗಾಸನ,
4. ಹಾಲಾಸನ.

ಮಂಗಳವಾರ, ಮೇ 20, 2014

ಜಿಬ್ರಾದಲ್ಲಿ ಅಡಗಿದ ಸಿಂಹ

^
ಇಲ್ಲಿ ಜಿಬ್ರಾಗಳ ಮದ್ಯ ಒಂದು ಸಿಂಹ ಅಡಗಿದೆ.

ನಗೆ ಟಾನಿಕ್ 11

ಟೀಚರ್: ಕಾಲಗಳನ್ನು ಹೆಸರಿಸಿ ?
ಮರಿಕೋಲ್ಯ: ಭೂತಕಾಲ, ವರ್ತಮಾನಕಾಲ,
                            ಭವಿಷ್ಯತ್‌ಕಾಲ, ಎಸ್‌ಟಿಡಿ ಕಾಲ,
                            ಐಎಸ್‌ಡಿ ಕಾಲ, ಲೋಕಲ್  ಕಾಲ,
                            ಮಿಸ್ಡ್ ಕಾಲ, ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ................
ಟೀಚರ್   : ಸಾಕು ನಿಲ್ಸೋ...

ಭಾನುವಾರ, ಮೇ 18, 2014

ಗುಬ್ಬಚ್ಚಿ ಅಂದರೇನಮ್ಮ


ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ

ಮುದ್ದಾಗಿಯೇ ಕಾಣುವ ಹಕ್ಕಿಗಳು
ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ
ಎಲ್ಲಿಯೋ ಹೋಗಿಬಿಟ್ಟವು.

ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು
ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು
ಪ್ರೀತಿ ಸ್ಪರ್ಷಿವಿಲ್ಲದ ಮೋಡ
ತುಂಬ ಮೌನ, ಜಡ ಹೆಳವನವತಾರ
ಎಲ್ಲಿಗೋ ಹೋಗಿಬಿಡಬೇಕೆನ್ನುವ
ನಿರಾಸೆಯಿರಬೇಕವಕೆ ನೋಡು ನೋಡುತ್ತಿದ್ದಂತೆಯೇ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು

ಹುಲ್ಲಿನೆಸಳಿಲ್ಲ ಗೂಡಿಗೆ
ಗಿಡಪೊಟರೆ ಏನೆಲ್ಲ ಬುಲ್‌ಡೋಜರಿಸಿದ್ದಾಯಿತು
ಮುಗಿಲೆತ್ತರೆತ್ತರಕೆ ಏರುವ ಮನೆಗಳು
ರೆಕ್ಕೆ ಮುದುರಿ ಉಲಿ‌ಅಡಗಿತೇನೊ
ಹಿತ್ತಲಿಗೆ ಕೇರಿ ತೂರಿದ ಕಾಳುಗಳೂ ಕಾಣಿಸದೆ
ಪಾಪ ! ಅವು ಎಲ್ಲಿಗೋ ಹೋಗಿಬಿಟ್ಟವು

ಗುಬ್ಬಚ್ಚಿ ಅಂದರೇನಮ್ಮ ಹಾರುತ್ತವೆ ಹೇಗೆ -
ಬಾ ಕಂದ ತೋರಿಸುವೆನು -
ಕೆಂಪನೆಯ ಆಕಾಶದಂಚಿನಲಿ
ಸೂರ್ಯ ಇಳಿಯುವ ಹೊತ್ತು
ಹಕ್ಕಿ ಮರಳಿ ಮನೆಗೆ ಹೋಗಲೇಬೇಕು

ಸೂರ್ಯ ಮುಳುಗಿದ ಹಕ್ಕಿಗಳು ಕಾಣಲಿಲ್ಲ
ಪಾಪ ! ಅವು ಎಲ್ಲಿಯೋ ಹೋಗಿಬಿಟ್ಟವು
ಏನೆಂದು ಹೇಳುವುದು ಕಂದನಿಗೆ
ಅದು ಹೇಗೆಂದು ತಿಳಿಸುವುದು

ತಂದಿದ್ದೇವೆ
ರಸೆಲ್ ಮಾರುಕಟ್ಟೆಯ
ರೆಕ್ಕೆ ಕಿತ್ತಿಸಿಕೊಂಡ ಗುಬ್ಬಚ್ಚಿಗಳ
ಆಕಾಶದಲ್ಲಿ ಹಾರಲೂ ಇಲ್ಲ
ನೆಲದೆದೆಗೆ ಕುಣಿದು ಕುಪ್ಪಳಿಸಲೂ ಇಲ್ಲ
ಪಾಪ ! ಇವು ಎಲ್ಲಿ ಹೋಗಬೇಕಿನ್ನು
ಕಾಪಾಡುವುದೊಂದೇ ಕೊನೆ ಹಾವು ಬೆಕ್ಕಿನಿಂದ

ಪಂಜರ ಹಾಕದೆ ಮನೆಯೊಳಗೆ ಬಿಟ್ಟಿದೆ
ಪುಟ್ಟನೊಡನೆ ಪುಟಾಣಿಗಳಾಗಿ
ಮನೆತುಂಬ ಮನತುಂಬ ಅಷ್ಟಿಷ್ಟು
ಹಾರಾಡಿ ಕುಪ್ಪಳಿಸಿ ಆಗೀಗ
ಏನೇನೋ ಹೇಳುತಿವೆ

ಆಯತ.....

ಪ್ರತಿ ಕ್ಷಣವೂ ಬದಲಾಗುತ್ತಿರು ಈ ಆಯತ.....

ಬುಧವಾರ, ಮೇ 14, 2014

ಆತುರವೋ ?

ಮನುಷ್ಯನಿಗೆ ಈಗ ಎಷ್ಟು ಆತುರವೋ ?

ನಗೆ ಟಾನಿಕ್ 10

ಆಗ ಕಷ್ಟಪಟ್ಟು ಕೊಂಡೆ ಮೊಬೈಲ್ ಪ್ರೇಯಸಿಗಾಗಿ,
ಈಗ ಇಷ್ಟಪಟ್ಟು ಬಿಟ್ಟಿದ್ದೇನೆ ಮೊಬೈಲ್ ಪ್ರೈವೆಸಿಗಾಗಿ .

ಭಾನುವಾರ, ಮೇ 11, 2014

ಅಮ್ಮ ಎಂಬ ಪದವ....

ಅಮ್ಮ ಎಂಬ ಪದವ......................................................................................................


ಅವ್ವಾ… ಅವ್ವಾ…
ಅರಿಯೇವು ನಾವು
ನಿನ್ನಯ ನಾಮದ
ಎರಡಕ್ಷರದಲ್ಲಿರುವ
ಅಗೋಚರ ಅದ್ಭುತ ಶಕ್ತಿಯನು
ನಿನ್ನಯ ಪ್ರೀತಿಗೆ
ನಿನ್ನೊಲವಿನ ಕರುಣೆಗೆ
ಸರಿ ಸಮಾನ ಶಕ್ತಿಯು
ಇರದು ಈ ಜಗದಲಿ
ಅವ್ವಾ, ಎಂದರೇ…
ಅವ್ವಾ ನೀ ಬಳಿಯಿದ್ದರೇ…
ಮಧುರ ಶಕ್ತಿಯಾವರಿಸುವದು
ನಿನ್ನೊಲವಿನಲಿ ದೀನನಾಗಿಸುವದು
ಅವ್ವಾ ನೀ ಮಹಾಶಕ್ತಿಮಾತೆ
ಆದಿಶಕ್ತಿ… ನೀ ಅವತಾರಿಣಿ
ಅರಿಯದ ಜೀವಕ್ಕೆ ಅಪಾರ
ನಿಧಿಯಾಗಿರುವಿ
ನಿನ್ನ ಆ ಒಲವಿನ ಧಾರೆಗೆ
ಕಹಿಯಾದರೇನು…
ಸಿಹಿಯಾದರೇನು…
ಭೇದವನೆಣಿಸದ ಕಾಮಧೇನು.
********************************************************* ಕಿಶೋರ್‍ ಚಂದ್ರ 

ಶನಿವಾರ, ಮೇ 10, 2014

ತಾಯಿಗೆ ಶುಭಾಶಯಗಳು

ನನ್ನ ಪ್ರೀತಿಯ ಅಮ್ಮ

ಚಿಜ್ ಪಲಾವ್

ಹೊಸ ಸಂಶೋಧನೆ 4


ಶುಕ್ರವಾರ, ಮೇ 09, 2014

ನವೀಕರಣ 2014



ದಿನಾಂಕ
ವಿಷಯ
ದಿನಾಂಕ
ವಿಷಯ
1
ಟಾಪ್ 3
16
ಹಚ್ಚೆ ಮಾತು
2
ಸಾಮಾನ್ಯ ಜ್ಞಾ
17
ನಗೆ ಟಾನಿಕ್
3
ಸಂದೇಶ
18
ಪ್ರಾಣಿ - ಪಕ್ಷಿ
4
ಚಿತ್ರ-ವಿಚಿತ್ರ
19
ಹಾಸ್ಯ ಕಥೆ
5
ಕೈಯಲ್ಲಿ ಆರೋಗ್ಯ
20
ಮಕ್ಕಳ ಹಾಡು
6
ಪ್ರಯೋಗ ಶಾಲೆ
21
ಅಡುಗೆ-ಮನೆ
7
ಸಂಶೋಧನೆ
22
ಅಮ್ಮ
8
ಕ್ಷಣ
23
ಜೀವನ ಚರಿತ್ರೆ
9
ನಿಮಗೆ ಗೋತ್ತೆ ?
24
ಪದದ ಸುತ್ತ
10
ನುಡಿಮುತ್ತುಗಳು
25
ಪರಿಸರ ತಿಳಿ
11
ಸಾಧಕರ ಸಾಲು
26
ವಚನ
12
ಸರಳ ಯೋಗಾಸನ
27
ಸರಳ ಕಲೆ
13
ಕನ್ನಡ ಚಿತ್ರಗಳ ಪಟ್ಟಿ
28
ವಿಚಿತ್ರ ಸತ್ಯ
14
ಪ್ರವಾಸಿ ತಾಣ
29
ಪದ ಬಂದ
15
ವ್ಯತ್ಯಾಸ ತಿಳಿಸಿ
30
ಚುಕ್ಕಿ ಸೇರಿಸು{ರಂಗೋಲಿ}


31
ಕನ್ನಡ ಗೀತೆ

ಮಂಗಳವಾರ, ಮೇ 06, 2014

ಟಿವಿ ಚಾನಲ್ 10

ಟಿವಿ ಚಾನಲ್ 9

ನುಡಿಮುತ್ತು 12



ಟಾಪ್ - 3 (ಎಪ್ರೀಲ್-2014)

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಎಪ್ರೀಲ್ - 2014

ಪ್ರಕಟನೆಗಳ ವೀಕ್ಷಣೆ ಟಾಪ್ 3 
1. ಸರಳ ಯೋಗಾಸನಗಳು
    ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
1. ಭಾರತ
2. ಅಮೇರಿಕಾ ಸಂಯುಕ್ತ ಸಂಸ್ಥಾನ
3. ಇಂಡೋನೇಶಿಯಾ


ಬ್ರೌಸರ್‌ಗಳ ಪ್ರಕಾರ ವೀಕ್ಷಣೆ ಟಾಪ್ 3

1. FireFox
2. Chrome
3. Internet Explorer

ಆಪರೇಟಿಂಗ್ ಸಿಸ್ಟಮ್‌ಗಳ ವೀಕ್ಷಣೆ ಟಾಪ್ 3  

1. Windows
2.  Macintosh
3. Android
     ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1883