ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶನಿವಾರ, ಮೇ 17, 2014

ವೆಜಿಟೆಬಲ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು
  • ಅಕ್ಕಿ 2 ಪಾವು
  • ಈರುಳ್ಳಿ 4
  • ಆಲೂಗಡ್ಡೆ 3
  • ಹಸಿ ಬಟಾಣಿ 1 ಬಟ್ಟಲು
  • ಕ್ಯಾರೆಟ್ 100 ಗ್ರಾಂ
  • ಹುರುಳಿ ಕಾಯಿ 100 ಗ್ರಾಂ
  • ಹೂಕೋಸು 100 ಗ್ರಾಂ
  • ಟೊಮೋಟೊ 3
  • ಒಣ ದ್ರಾಕ್ಷಿ 10
  • ಗೋಡಂಬಿ 10
  • ಜೀರಿಗೆ 1 ಚಮಚ
  • ಲವಂಗ 2
  • ತುಪ್ಪ 100 ಗ್ರಾಂ
  • ಉಪ್ಪು 2 ಚಮಚ
  • ಮೆಣಸು ಕಾಳು ಅರ್ಧ ಚಮಚ
ಮಸಾಲೆಗೆ: ಬೆಳ್ಳುಳ್ಳಿ 4 ಎಳಸು, ಈರುಳ್ಳಿ 1, ಶುಂಟಿ 2 ಗೋಲಿ ಗಾತ್ರ, ಜೀರಿಗೆ 2 ಚಮಚ, ಒಣ ಮೆಣಸಿನ ಕಾಯಿ 4, ಕೊತ್ತಂಬರಿ ಸೊಪ್ಪು ಅರ್ಧ ಕಂತೆ

ಮಾಡುವ ವಿಧಾನ
  • ಮೊದಲುಮಸಾಲೆ ಸಾಮಗ್ರಿಗಳನ್ನು ರುಬ್ಬಿಕೊಳ್ಳಿ
  • ಈರುಳ್ಳಿಯನ್ನು ಸಣ್ಣದಾಗಿ, ತೆಳ್ಳಗೆ ಸೀಳಿಡಿ, ಆಲೂಗಡ್ಡೆಯನ್ನು ಹೋಳು ಮಾಡಿಡಿ
  • ತುಪ್ಪವನ್ನು ದಪ್ಪ ತಳದ ಪಾತ್ರೆಗೆ ಹಾಕಿ, ತುಪ್ಪ ಕಾದ ಮೇಲೆ ಲವಂಗ, ಏಲಕ್ಕಿ, ಮೆಣಸು ಕಾಳು ಸೇರಿಸಿ ಒಗ್ಗರಣೆ ಹಾಕಿ
  • ನಂತರ ಹೆಚ್ಚಿದ ಈರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ
  • ಐದು ನಿಮಿಷದ ನಂತರ ಹೆಚ್ಚಿದ ಟೊಮೋಟೊ, ತೊಳೆದ ಅಕ್ಕಿ,ಎರಡು ಲೋಟ ನೀರು, ರುಬ್ಬಿದ ಮಸಾಲೆ, ತರಕಾರಿಗಳನ್ನು ಹಾಕಿ ಬೇಯಿಸಿ
  • ಅನ್ನ ಬೆಂದ ತಕ್ಷಣ ಗೋಡಂಬಿ ದ್ರಾಕ್ಷಿ ಸ್ವಲ್ಪ ತುಪ್ಪದಲ್ಲಿ ಹುರಿದು ಅಲಂಕರಿಸಿ ಬಿಸಿಯಲ್ಲೇ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು