ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಆಟದ ಮಹತ್ಚ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಆಟದ ಮಹತ್ಚ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮೇ 25, 2026

ಹತ್ತಿ ಕಟಗಿ, ಬತ್ತಿ ಕಟಗಿ... ಆಟದ ಮಹತ್ವ 2

ನಾವೂ ಚಿಕ್ಕವರಿದ್ದಾಗ,

ಹತ್ತಿ ಕಟಗಿ, ಬತ್ತಿ ಕಟಗಿ, 
ಬಾವನೋರ, ಬಸವನೋರ, 
ಕೈ ಕೈ ದೂಳಗೈ, ಪಂಚಂ ಪಗಡಂ, 
ನೆಲ್ಲಿ ಕಟಗಿ ಹನುಮ, ದಾಸರ ಬರಮ, 
ತಿಪ್ಪಿಮ್ಯಾಲೆ ಕೋಳಿ, ರಗತ್ತ ಬೋಳಿ.......

ಹೀಗೆ ಹುಚ್ಚರ ಹಾಗೇ ಏನೇನೋ ಆಟ ಆಡುತ್ತಾರೆ ಎಂದು ಇತರರು ಬೈಯುತ್ತಾ ನಗುತ್ತಿರುವಾಗ, 
ಅದಕ್ಕೆ ನನ್ನ ಅಮ್ಮ ಹೇಳಿದರು ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು ಅಂದಳು.
 
ಹತ್ತಿ ಕಟಗಿ - ಜೀವಂತವಾಗಿರುವ ಮನುಷ್ಯ, 
ಬತ್ತಿ ಕಟಗಿ -  ಸತ್ತಿರುವಂತಹ ಮನುಷ್ಯ ,
ಬಾವನೋರ - ಸತ್ತ ವ್ಯಕ್ತಿಯನ್ನು ಕೆಲ ಗಂಟೆಗಳವರೆಗೆ ಹೊರಗೆ ಇಟ್ಟರೆ ಬಾಯು(ಉಬ್ಬು)ವನು,
 ಬಸವನೋರ - ಸತ್ತ ವ್ಯಕ್ತಿಯನ್ನು ಕೆಲ ದಿನಗಳವರೆಗೆ ಹೊರಗೆ ಇಟ್ಟರೆ ಬಸಿಯುವನು,
ಕೈ ಕೈ ದೂಳಗೈ - ಸತ್ತ ವ್ಯಕ್ತಿಯನ್ನು ಅಂತ್ಯಸಂಸ್ಕಾರ ಮಾಡಲು ಹೋವವರು   ಮಣ್ಣು ಹಾಕಿದಾಗ ಕೈಗಳು ದೂಳಾಗುತ್ತದೆ,
ಪಂಚಂ ಪ(ತ)ಗಡಂ - ಕೆಲ ಹಿಂದೂ ಸಂಪ್ರದಾಯದಂತೆ ಪೂಜಾರಿಗಳು ಸತ್ತಿರುವ ಸ್ಥಳದಲ್ಲಿ ಕೆಲ ತಗಡನ್ನು ಬಡೆಯುತ್ತಾರೆ,
ನೆಲ್ಲಿ ಕಟಗಿ ಹನುಮ -  ಶವ ಸಂಸ್ಕಾರಕ್ಕೆ ಬಂದ ವ್ಯಕ್ತಿಗಳು ಸ್ವಲ್ಪ ಮಣ್ಣುನ್ನು ಹಾಕಿದ ನಂತರ ಅಲ್ಲಿರುವ 1 ನೇ ವ್ಯಕ್ತಿ (ತಗ್ಗು ತೋಡಿದ ವ್ಯಕ್ತಿ) ಮತ್ತು ,
ದಾಸರ ಬರಮ - 2 ನೇ ವ್ಯಕ್ತಿ (ತಗ್ಗು ತೋಡಿದ ವ್ಯಕ್ತಿ) ಗಳು ಪೂರ್ಣ ಮಣ್ಣನ್ನು ಮುಚ್ಚುತ್ತಾರೆ,
ತಿಪ್ಪಿಮ್ಯಾಲೆ ಕೋಳಿ - ಶವ ಯಾತ್ರೆ ತೆರಳುವಾಗ ದಾರಿಯುದ್ದಕ್ಕೂ ಚಲ್ಲಿದ ಕಾಳುಗಳನ್ನು ಕೋಳಿ ತಿನ್ನುತ್ತಾ ಬರುತ್ತದೆ,
ರಗತ್ತ ಬೋಳಿ  -  ನಂತರ ಸಮಾದಿಯ ಬಳಿಯಲ್ಲಿ ಬಂದು ಲಗಾಟಿ ಹೊಡೆಯುತ್ತಾ ಎಲ್ಲ ಕಾಳುಗಳನ್ನು ತಿನ್ನುತ್ತದೆ.

ಈ ರೀತಿ ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.

█▓▒░⯮ ಕೃಪೆ: 🙶ಸಾಮಾಜಿಕ ಮಾದ್ಯಮಗಳು 🙷 ░▒▓█

ಗುರುವಾರ, ಆಗಸ್ಟ್ 29, 2024

ಅವಲಕ್ಕಿ ಪವಲಕ್ಕಿ... ಆಟದ ಮಹತ್ವ 1

     ಪ್ರತಿ ವರ್ಷ ಆಗಸ್ಟ್ 29 ರಂದು , ಭಾರತವು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುತ್ತದೆ, ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಸ್ಮರಿಸುತ್ತದೆ, ಇದು ಇತಿಹಾಸದಲ್ಲಿ ಅತ್ಯುತ್ತಮವಾದ ಫೀಲ್ಡ್ ಹಾಕಿ ಆಟಗಾರ ಎಂದು ಪರಿಗಣಿಸಲಾಗಿದೆ.
ನಾವೂ ಚಿಕ್ಕವರಿದ್ದಾಗ,
ಅವಲಕ್ಕಿ ಪವಲಕ್ಕಿ
ಕಾಂಚಣ ಮಿಣ ಮಿಣ, 
ಡಾಮ್ ಡೂಮ್,
ಟಸ್ ಪುಸ್,
ಕೊಯ್ ಕೊಟಾರ್ ಅಂತಿದ್ವಿ.

ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ, ಅದಕ್ಕೆ ನನ್ನ ಅಮ್ಮ ಹೇಳಿದರು ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು. 

ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.

ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌.

ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ.

ಕಾಂಚನ – ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ.

ಮಿಣ ಮಿಣ – ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ.

ಡಾಮ್ ಡೂಮ್ – ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ.

ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು.

ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ. 

       ಹೇಗಿದೆ ? “ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು.
ಅಮ್ಮ ಮಾತು ಮುಂದುವರಿಸಿದರು.”

"ಅವಲಕ್ಕಿ, ಅಪಮಾನ ಮಾಡಬಾರದು ಹಂಚಿ ತಿನ್ನಬೇಕು. ಸುಧಾಮ ಗುರುಕುಲದಲ್ಲಿದ್ದಾಗ, ಒಬ್ಬನೇ ಕೂತು ಎಲ್ಲಾ ಅವಲಕ್ಕಿ ತಿಂದುಬಿಟ್ಟಿದ್ದಕ್ಕೇ ಆ ಪರಿ ದಾರಿದ್ರ್ಯ ಕಾಡಿತಂತೆ. ಮುಂದೆ ಕೃಷ್ಣನಿಗೆ ಆ ಅವಲಕ್ಕಿಯ ಋಣವನ್ನು ತೀರಿಸಿದಾಗ ಆ ದೋಷ ಪರಿಹಾರವಾಯಿತಂತೆ.” 

ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ.

ಶನಿವಾರ, ಆಗಸ್ಟ್ 29, 2015

ಬಾಲ್ಯದ ಆಟ ನೆನಪಿದೆಯಾ ? (50) - 1

ನಿಮಗೂ ಸಹ ಬಾಲ್ಯದ ನೆನಪುಗಳಿದ್ದರೆ ನಮ್ಮ ಜೊತೆ ಹಂಚಿಕೊಳ್ಳಿ, ಅದರ ಒಂದು ಬಾವಚಿತ್ರ ತೆಗೆದು ನಮ್ಮ Mail (spn3187blogspot@gmail.com) ಗೆ ಕಳುಹಿಸಿ.
ಪುಟ - 12 - 3 - 4 - 5
 
 
 
 
 
 
 
 
 
 


1.. ಜಾಹೀರಾತು

2.ಜಾಹೀರಾತು