ನಾವೂ ಚಿಕ್ಕವರಿದ್ದಾಗ,
ಹತ್ತಿ ಕಟಗಿ, ಬತ್ತಿ ಕಟಗಿ,
ಬಾವನೋರ, ಬಸವನೋರ,
ಕೈ ಕೈ ದೂಳಗೈ, ಪಂಚಂ ಪಗಡಂ,
ನೆಲ್ಲಿ ಕಟಗಿ ಹನುಮ, ದಾಸರ ಬರಮ,
ತಿಪ್ಪಿಮ್ಯಾಲೆ ಕೋಳಿ, ರಗತ್ತ ಬೋಳಿ.......
ಹೀಗೆ ಹುಚ್ಚರ ಹಾಗೇ ಏನೇನೋ ಆಟ ಆಡುತ್ತಾರೆ ಎಂದು ಇತರರು ಬೈಯುತ್ತಾ ನಗುತ್ತಿರುವಾಗ,
ಅದಕ್ಕೆ ನನ್ನ ಅಮ್ಮ ಹೇಳಿದರು ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು ಅಂದಳು.
ಹತ್ತಿ ಕಟಗಿ - ಜೀವಂತವಾಗಿರುವ ಮನುಷ್ಯ,
ಬತ್ತಿ ಕಟಗಿ - ಸತ್ತಿರುವಂತಹ ಮನುಷ್ಯ ,
ಬಾವನೋರ - ಸತ್ತ ವ್ಯಕ್ತಿಯನ್ನು ಕೆಲ ಗಂಟೆಗಳವರೆಗೆ ಹೊರಗೆ ಇಟ್ಟರೆ ಬಾಯು(ಉಬ್ಬು)ವನು,
ಬಸವನೋರ - ಸತ್ತ ವ್ಯಕ್ತಿಯನ್ನು ಕೆಲ ದಿನಗಳವರೆಗೆ ಹೊರಗೆ ಇಟ್ಟರೆ ಬಸಿಯುವನು,
ಕೈ ಕೈ ದೂಳಗೈ - ಸತ್ತ ವ್ಯಕ್ತಿಯನ್ನು ಅಂತ್ಯಸಂಸ್ಕಾರ ಮಾಡಲು ಹೋವವರು ಮಣ್ಣು ಹಾಕಿದಾಗ ಕೈಗಳು ದೂಳಾಗುತ್ತದೆ,
ಪಂಚಂ ಪ(ತ)ಗಡಂ - ಕೆಲ ಹಿಂದೂ ಸಂಪ್ರದಾಯದಂತೆ ಪೂಜಾರಿಗಳು ಸತ್ತಿರುವ ಸ್ಥಳದಲ್ಲಿ ಕೆಲ ತಗಡನ್ನು ಬಡೆಯುತ್ತಾರೆ,
ನೆಲ್ಲಿ ಕಟಗಿ ಹನುಮ - ಶವ ಸಂಸ್ಕಾರಕ್ಕೆ ಬಂದ ವ್ಯಕ್ತಿಗಳು ಸ್ವಲ್ಪ ಮಣ್ಣುನ್ನು ಹಾಕಿದ ನಂತರ ಅಲ್ಲಿರುವ 1 ನೇ ವ್ಯಕ್ತಿ (ತಗ್ಗು ತೋಡಿದ ವ್ಯಕ್ತಿ) ಮತ್ತು ,
ದಾಸರ ಬರಮ - 2 ನೇ ವ್ಯಕ್ತಿ (ತಗ್ಗು ತೋಡಿದ ವ್ಯಕ್ತಿ) ಗಳು ಪೂರ್ಣ ಮಣ್ಣನ್ನು ಮುಚ್ಚುತ್ತಾರೆ,
ತಿಪ್ಪಿಮ್ಯಾಲೆ ಕೋಳಿ - ಶವ ಯಾತ್ರೆ ತೆರಳುವಾಗ ದಾರಿಯುದ್ದಕ್ಕೂ ಚಲ್ಲಿದ ಕಾಳುಗಳನ್ನು ಕೋಳಿ ತಿನ್ನುತ್ತಾ ಬರುತ್ತದೆ,
ರಗತ್ತ ಬೋಳಿ - ನಂತರ ಸಮಾದಿಯ ಬಳಿಯಲ್ಲಿ ಬಂದು ಲಗಾಟಿ ಹೊಡೆಯುತ್ತಾ ಎಲ್ಲ ಕಾಳುಗಳನ್ನು ತಿನ್ನುತ್ತದೆ.
ಈ ರೀತಿ ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.
█▓▒░⯮ ಕೃಪೆ: 🙶ಸಾಮಾಜಿಕ ಮಾದ್ಯಮಗಳು 🙷 ░▒▓█
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.