fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಅಕ್ಕಮ್ಮ -2

 ಅನ್ಯದೈವ ಭವಿನಾಸ್ತಿಯಾದಲ್ಲಿ,
ಪಾದತೀರ್ಥಪ್ರಸಾದವಿಲ್ಲದೆ ಬಾಯಿದೆರೆದಲ್ಲಿ,
ಲಿಂಗಕ್ಕೆ ಕೊಡದೆ ಕೊಂಡಲ್ಲಿ,
ಆ ವ್ರತಕ್ಕೆ ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗ ದೂರಸ್ಥನಾಗಿಪ್ಪನು
                                                                                   --------> ಅಕ್ಕಮ್ಮ

ಅಕ್ಕಮ್ಮ -1

ತರಕಾರಿ ಗಟ್ಟಿ ಬಜೆಬೇಕಾಗುವ ಸಾಮಗ್ರಿಗಳು
  • ಸಣ್ಣಗೆ ಹೆಚ್ಚಿದ ಬೆಂಡೇಕಾಯಿ/ಅಲಸಂದೆ ನಾಲ್ಕು ಲೋಟ 
  • ಹೆಚ್ಚಿದ ಹಸಿಮೆಣಸಿನಕಾಯಿ ನಾಲ್ಕು 
  • ಎರಡು ಚಿಟಿಕೆ ಇಂಗು 
  • ಕಡಲೆಹಿಟ್ಟು ಎರಡು/ಮೂರು ಲೋಟ 
  • ರುಚಿಗೆ ಉಪ್ಪು 
  • ಕರಿಯಲು ಎಣ್ಣೆ 
ಮಾಡುವ ವಿಧಾನ 
              ಹೆಚ್ಚಿದ ತರಕಾರಿ, ಹಸಿಮೆಣಸನ್ನು ಉಪ್ಪಿನೊಂದಿಗೆ ಕಲಸಿಟ್ಟುಕೊಳ್ಳಿ. ಇಂಗು ಬೆರೆಸಿ ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಉದುರಿಸಿ ನೀರಾಗದಂತೆ ಕಲಸಿ. ಬಾಣಲೆಯಲ್ಲಿ ಬಿಸಿಯಾದ ಎಣ್ಣೆಗೆ ಹಿಟ್ಟು-ತರಕಾರಿ ಮಿಶ್ರಣವನ್ನು ನಿಂಬೇಗಾತ್ರ ಬಿಡಿಬಿಡಿಯಾಗಿ ಎಣ್ಣೆಗೆ ಬಿಡಿ ಕೆಂಪಗಾದ ನಂತರ ತೆಗೆದು, ಆರಿಸಿ ಉಣಬಡಿಸಿ.

*** ಬೆಂಡೆ/ಅಲಸಂದೆ ಬದಲು ಹೀರೇಕಾಯಿ/ಬಾಳೇಕಾಯಿ ಸಿಪ್ಪೆ ಉಪಯೋಗಿಸಿ ಗಟ್ಟಿಬಜೆ ಮಾಡಬಹುದು

ಶಿಲಾವೈಭವದಿಂದ ಮನಸೆಳೆವ ಪಟ್ಟದಕಲ್ಲು

ದ್ರಾವಿಡ, ನಾಗರಶೈಲಿಯ ದೇವಾಲಯಗಳ ಅನುಪಮ ಸೌಂದರ್ಯ...
ಕೃಪೆ*ಟಿ.ಎಂ.ಸತೀಶ್  
Pattadakallu temple    ಬಾದಾಮಿಯ ಚಾಳುಕ್ಯರ ಕಲಾರಾಧನೆಗೆ ಸಾಕ್ಷಿಯಾಗಿ ನಿಂತಿರುವ ಶಿಲ್ಪಕಲಾ ಶ್ರೀಮಂತಿಕೆಯ ನಗರಿ ಪಟ್ಟದಕಲ್ಲು. ಬಾದಾಮಿಯಿಂದ ಕೇವಲ 22 ಕಿ.ಮೀ. ದೂರದಲ್ಲಿರುವ ಪಟ್ಟದಕಲ್ಲು ವಿಶ್ವ ಪರಂಪರೆಯ ತಾಣವೂ ಹೌದು.
  ಮಲಪ್ರಭ ನದಿಯ ದಂಡೆಯಲ್ಲಿರುವ ಈ ತಾಣ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿಯ ಸ್ಥಳವಾಗಿತ್ತು ಎಂದು ಸಂಶೋಧನೆಗಳಿಂದ ಸ್ಥಿರಪಟ್ಟಿದೆ. ಬಹು ಪುರಾತನವಾದ ಈ ಊರು ಶಿಲಾಯುಗದೊಂದಿಗೂ ತನ್ನ ನಂಟು ಇಟ್ಟುಕೊಂಡಿದೆ. ಇಲ್ಲಿ ಹಳೆಯ ಶಿಲಾಯುಗದ ಶಿಲಾಯುಧಗಳೂ, ಕಲ್ಗೋರಿಗಳೂ ದೊರೆತಿದ್ದು ಪ್ರಾಗೈತಿಹಾಸಿಕ ಸಂಶೋಧನೆಗೆ ಆಕರ ಸ್ಥಳವಾಗಿದೆ.
Pattada Kalluಈ ಪ್ರದೇಶ ಸಂಪೂರ್ಣವಾಗಿ ಕೆಂಪು ಶಿಲೆಗಳಿಂದ ಕೂಡಿರುವ ಕಾರಣ ಇದಕ್ಕೆ ಕಿಸುವೊಳಲ್ ಎಂದು ಹೆಸರಿತ್ತು. ಚಾಳುಕ್ಯರು ಇಲ್ಲಿ ತಮ್ಮ ಪಟ್ಟಬಂಧ ಮಹೋತ್ಸವ ಆಚರಿಸಿಕೊಂಡಿದ್ದರಿಂದ ಇದಕ್ಕೆ ಪಟ್ಟದ ಕಿಸುವೊಳಲ್ ಎಂದು ಹೆಸರಾಯ್ತು ಇದು ಶಾಸನಗಳಲ್ಲೂ ದಾಖಲಾಗಿದೆ. ಕಾಲಾನಂತರ ಇದು ಪಟ್ಟದ ಕಲ್ಲು ಎಂದು ಖ್ಯಾತವಾಯ್ತು. ಇಲ್ಲಿ ಮಲಪ್ರಭೆ ಉತ್ತರ ಮುಖವಾಗಿ ಹರಿಯುವ ಕಾರಣ ಇದು ಒಂದು ಪವಿತ್ರ ಕ್ಷೇತ್ರ ಎನಿಸಿದೆ. ಇದಕ್ಕೆ ದಕ್ಷಿಣ ಕಾಶಿ ಎಂಬ ಹೆಸರೂ ಇದೆ. ಚಾಳುಕ್ಯರ ಕಾಲದಲ್ಲಿ ಇಲ್ಲಿ ಭವ್ಯ ಶಿಲಾವೈಭವದ ದೇವಾಲಯಗಳು ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಇದೊಂದು ಪಾರಂಪರಿಕ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
Pattadakallu templeಇತಿಹಾಸ ಅಧ್ಯಯನಿಗಳಿಗೆ ಸಂಶೋಧನಾ ಸ್ಥಳವಾಗಿ, ಯಾತ್ರಿಕರಿಗೆ ಪುಣ್ಯಕ್ಷೇತ್ರವಾಗಿ, ಪ್ರವಾಸಿಗರಿಗೆ ಪ್ರವಾಸಿ ತಾಣವಾಗಿ ಇಂದಿಗೂ ಪಟ್ಟದಕಲ್ಲು ತನ್ನ ಮಹತ್ವ ಉಳಿಸಿಕೊಂಡಿದೆ. ಇಲ್ಲಿ ಒಂಬತ್ತು ಶೈವ ದೇಗುಲ, ಒಂದು ಜಿನಾಲಯ ಇದೆ. ಈ ದೇಗುಲಗಳ ಪೈಕಿ ರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ ಅತ್ಯಂತ ಸುಂದರವಾಗಿದ್ದು, ವಿಶಾಲವಾಗಿದೆ. ಬಾದಾಮಿಯ ಚಾಳುಕ್ಯರ ಕಾಲದ ದೇವಾಲಯಗಳ ಪೈಕಿ ಇದು ಅತ್ಯಂತ ದೊಡ್ಡದು ಎಂದು ಹೇಳಲಾಗುತ್ತದೆ. ಇಲ್ಲಿನ ಭಿತ್ತಿಗಳಲ್ಲಿ (ಗೋಡೆ) ಪುರಾಣದ ಕತೆಗಳನ್ನಾಧರಿಸಿದ ಸುಂದರ ಶಿಲ್ಪಕಲಾ ಕೆತ್ತನೆಗಳಿವೆ. ರಾಣಿ ತ್ರೈಲೋಕ್ಯ ಮಹಾದೇವಿ ಕಟ್ಟಿಸಿದ ಮಲ್ಲಿಕಾರ್ಜುನ ದೇವಾಲಯ ಇದೇ ಆವರಣದಲ್ಲಿದ್ದು ಅದೂ ಸಹ ಶಿಲ್ಪಕಲಾಶ್ರೀಮಂತಿಕೆಯಿಂದ ಕೂಡಿದೆ. ಆದರೆ ಹಲವು ಶಿಲ್ಪಗಳು ಭಗ್ನಗೊಂಡಿವೆ. ಗಳಗನಾಥ ದೇವಾಲಯ ನೋಡಲು ಸುಂದರವಾಗಿದ್ದು, ಇಲ್ಲಿನ ದಕ್ಷಿಣ ಭಾಗದಲ್ಲಿರುವ ಮಂಟಪದಲ್ಲಿ ಭಗ್ನವಾಗಿರುವ ಎಂಟು ಕೈಗಳುಳ್ಳ ಅಂಧಕಾಸುರಾಂತಕ (ಶಿವ)ನ ಮೂರ್ತಿಯಿದೆ. ಇಷ್ಟು ಸುಂದರವಾದ ಮೂರ್ತಿ ಭಗ್ನವಾಗಿರುವುದನ್ನು ಕಂಡಾಗ ಮನ ಕಲಕುತ್ತದೆ. ಗರ್ಭಗುಡಿಯ ವಿಭಾಗಗಳ ಪಟ್ಟಿಕೆಗಳಲ್ಲಿ ಕುಸ್ತಿಯಾಟ, ಗಂಡಭೇರುಂಡ, ಕೋತಿ ಮರಕ್ಕೆ ಸಿಕ್ಕಿಸಿದ ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಂಡ ಪ್ರಸಂಗವನ್ನೂ ಕೆತ್ತಲಾಗಿದೆ. ಸಂಗಮೇಶ್ವರ, ಪಾಪನಾಥ ದೇವಾಲಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ದೇಗುಲಗಳಲ್ಲಿರುವ ವಾಸ್ತು ಶಿಲ್ಪ , ಛಾವಣಿಯ ಒಳ ಶಿಲ್ಪಗಳು ಮನಸೂರೆಗೊಳ್ಳುತ್ತದೆ.
Pattadakallu         8ನೇ ಶತಮಾನದ ಜಂಭುಲಿಂಗ, ಕಾಡಸಿದ್ಧೇಶ್ವರ ದೇವಾಲಯಗಳು ಇಲ್ಲಿನ ಪ್ರಮುಖ ದೇವಾಲಯಗಳಾಗಿವೆ. ಕ್ರಿ.ಶ.696-733ರ  ಅವಧಿಯಲ್ಲಿ ದೊರೆ ವಿಜಯಾದಿತ್ಯನ ಕಾಲದಲ್ಲಿ ಸಂಗಮೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಪಂಪಾನಾಥ ದೇವಾಲಯದಲ್ಲಿ ಕಲಾತ್ಮಕವಾದ 16 ಕಂಬಗಳ ಸಭಾಂಗಣವಿದ್ದು ಇದು ಈ ಕ್ಷೇತ್ರದ ಅತ್ಯಂತ ಪ್ರಮುಖ ತಾಣವಾಗಿದೆ.
 
         ದ್ರಾವಿಡ, ನಾಗರಶೈಲಿಯ ದೇವಾಲಯಗಳನ್ನು ಹಾಗೂ ಅವುಗಳಲ್ಲಿರುವ ಅನುಪಮ ಸೌಂದರ್ಯವನ್ನು ಒಂದೇ ಸ್ಥಳದಲ್ಲೇ ಕಾಣಬೇಕೆಂದರೆ, ಕರ್ನಾಟಕದಲ್ಲಿ ವಾಸ್ತುಶಿಲ್ಪ ಬೆಳೆದ ಬಗೆಯ ಬಗ್ಗೆ ಅಧ್ಯಯನ ಮಾಡಬೇಕಾದರೆ ಪಟ್ಟದಕಲ್ಲಿಗೇ ಹೋಗಬೇಕು. ಬೆಂಗಳೂರಿನಿಂದ 480, ಬಾಗಲಕೋಟೆಯಿಂದ 40 ಹಾಗೂ ಬಿಜಾಪುರದಿಂದ ಪಟ್ಟದ ಕಲ್ಲಿಗೆ 134 ಕಿಲೋ ಮೀಟರ್. 
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಎಲ್ ಅಲಿ


ಕೆ.ಪಿ.ಪಿ.ತೇಜಸ್ವಿ


ನುಡಿಮುತ್ತು 16

ಆತ್ಮವಿಶ್ವಾಸ ಕಡಿಮೆಯಾಗುತ್ತಾ ಹೋದಂತೆ ಮುಖವಾಡಗಳ ಅಗತ್ಯ ಹೆಚ್ಚುತ್ತಾ ಹೋಗುತ್ತದೆ.ಕಡು ಬಡತನವೆಂದರೆ ಒಂಟಿತನ ಮತ್ತು ಪ್ರೀತಿಗೆ ಅನರ್ಹನೆಂಬ ಭಾವನೆ...
— ಮದರ್ ತೆರೆಸಾ


ಯೌವ್ವನ, ಧನ, ಅಧಿಕಾರ, ಅವಿವೇಕ - ಇವು ಒಂದೊಂದೇ ಅನರ್ಥಕಾರಿ. ಇನ್ನು ನಾಲ್ಕೂ ಇರುವಲ್ಲಿ ಕೇಳುವುದೇನು!

ಕನ್ನಡದ ಗಾದೆ ಮಾತು

ಬೇ ರೆಯವರ  ಮಕ್ಕಳನ್ನು  ಬಾವಿಗೆ ತಳ್ಳಿ ಆಳ ನೋಡುವದೆಂದರೆ ಇದೆನಾ?


ಟಾಪ್ - 3 ಸೆಪ್ಟಂಬರ- 2014


 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಸೆಪ್ಟಂಬರ- 2014
ಪ್ರಕಟನೆಗಳ ವೀಕ್ಷಣೆ ಟಾಪ್ 3 

  ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3
ಭಾರತ
ಅಮೇರಿಕಾ ಸಂಯುಕ್ತ ಸಂಸ್ಥಾನ
ಸ್ಪೇನ್

ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್ 3

 Firefox
Chrome
Internet Explorer

ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3  

Windows
Android
Nokia
 ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1,268
 

ಹೊಸ ಯುಗದ ಕಾರ್


ಅಕ್ಟೋಬರ್ ಜ್ಞಾನ 4

೧. ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಯಾರನ್ನು ಕರೆಯುತ್ತಾರೆ?
೨. ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್ ಸಂಪರ್ಕ ಪಡೆದ ನಗರ ಯಾವುದು?
೩. ’ಮಾಲ್ಗುಡಿ ಡೇಸ್’ ಕೃತಿ ಬರೆದವರು ಯಾರು?
. ಏಷ್ಯಾದಲ್ಲೇ ಹೆಚ್ಚು ಕಬ್ಬಿಣ ನಿಕ್ಷೇಪವುಳ್ಳ ಕರ್ನಾಟಕದ ಸ್ಥಳ ಯಾವುದು?
೫. ಬಿ.ಡಿ.ಜತ್ತಿಯವರು ಯಾವ ರಾಜ್ಯದ ರಾಜ್ಯಪಾಲರಾಗಿದ್ದರು?
೬. ಕರ್ನಾಟಕದಲ್ಲಿ ಕೇಂದ್ರೀಯ ಆಹಾರ ಸಮಶೋಧನಾ ಸಂಸ್ಥೆ ಎಲ್ಲಿದೆ?
೭. ದುಡಿತವೇ ನನ್ನ ದೇವರು ಇದು ಯಾರ ಆತ್ಮಕಥೆ?
೮. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು?
೯. ಪಟ್ಟದ ಕಲ್ಲುವಿನಲ್ಲಿನ ದೇವಾಲಯಗಳನ್ನು ಯಾವ ರಾಜ್ಯವಂಶದವರು ಕಾಲದಲ್ಲಿ ಕಟ್ಟಲಾಯಿತು?
೧೦. ಭಾರತದ ಪ್ರಥಮ ದಂಡನಾಯಕರಗಿದ್ದ ಕರ್ನಾಟಕದ ವ್ಯಕ್ತಿ ಯಾರು?
೧೧. ಶರಪಂಜರ ಕನ್ನಡ ಚಲನಚಿತ್ರ ಇದು ಯಾವ ಕಾದಂಬರಿಯನ್ನಾಧರಿಸಿ ತೆಗೆದ ಚಿತ್ರವಾಗಿದೆ?
೧೨. ಕರ್ನಾಟಕದ ಅತ್ಯಂತ ದೊಡ್ಡ ಕೆರೆ ಯಾವುದು?
೧೩. ಯಾವ ಖನಿಜವನ್ನು ಕಪ್ಪು ವಜ್ರ ಎನ್ನುವರು?
೧೪. ಕರ್ನಾಟಕದ ಏಕೀಕರಣ ಸಭೆಯ ಮೊದಲ ಅಧ್ಯಕ್ಷರು ಯಾರು?
೧೫. ಪಾಮ್ ಎಣ್ಣೆ ಯಾವುದರಿಂದ ಆಗುತ್ತದೆ?
೧೬. ಶಾರದಾ ಹಾನಗಲ್ ಯಾವ ಕ್ಷೇತ್ರದಲ್ಲಿ ಸುಪರಿಚಿತರು?
೧೭. ಕನ್ನಡ ವಿಶ್ವವಿದ್ಯಾನಿಲಯ ಎಲ್ಲಿ ಸ್ಥಾಪನೆಗೊಂಡಿದೆ?
೧೮. ಭಾರತದ ಹಾಕಿ ತಂಡದ ನಾಯಕರಾಗಿದ್ದ ಮೊದಲ ಕನ್ನಡಿಗ ಯಾರು?
೧೯. ’ಪಿಸು ಮಾತಿನ ಗ್ಯಾಲರಿ’ ಕರ್ನಾಟಕದಲ್ಲಿ ಇರುವ ತಾಣ ಯಾವುದು?
೨೦. ಕನ್ನಡ ಇಂಗ್ಲೀಷ್ ನಿಘಂಟನ್ನು ಮೊದಲು ರಚಿಸಿದವರು ಯಾರು?
೨೧. ಕರ್ನಾಟಕದಲ್ಲಿ ಮೂರುಬಾರಿ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಸೇವೆಸಲ್ಲಿಸಿದ ಮಹಾನ್ ವ್ಯಕ್ತಿ ಯಾರು?
೨೨. ಕರ್ನಾಟಕದ ಅತೀ ಚಿಕ್ಕ ಜಿಲ್ಲೆ ಯಾವುದು?
೨೩. ಕೆ.ಆರ್.ಎಸ್.ನಲ್ಲಿ ಬೃಂದಾವನವನ್ನು ನಿರ್ಮಿಸಿದವರು ಯಾರು?
೨೪. ತಲಕಾಡಿನಲ್ಲಿರುವ ಪಂಚಲಿಂಗಗಳು ಯಾವುವು?
೨೫. ರಾಷ್ಟ್ರ ಪ್ರಶಸ್ತಿಗಳಿಸಿದ ಕನ್ನಡದ ಮೊದಲ ಚಿತ್ರ ಯಾವುದು?
೨೬. ಕನ್ನಡ ರತ್ನತ್ರಯರು ಯಾರು?
೨೭. ಕರ್ನಾಟಕದಲ್ಲಿ ರಾಜೀವ್ ಗಾಂಧಿ ಉದ್ಯಾನವನ ಎಲ್ಲಿದೆ?
೨೮. ಟೇಬಲ್ ಟೆನ್ನಿಸ್ ಮೇಜಿನ ಉದ್ದವೆಷ್ಟು?
೨೯. ಪಿಲಿಕುಳ ನಿಸರ್ಗಧಾಮ ಎಲ್ಲಿದೆ?


ಉತ್ತರಗಳು

ಕನ್ನಡವ್ವ

ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಕನ್ನಡ ರಾಜ್ಯೋತ್ಸವದ 50 ಗೀತೆಗಳು