fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಅಕ್ಟೋಬರ್ 14, 2014

ಶಿಲಾವೈಭವದಿಂದ ಮನಸೆಳೆವ ಪಟ್ಟದಕಲ್ಲು

ದ್ರಾವಿಡ, ನಾಗರಶೈಲಿಯ ದೇವಾಲಯಗಳ ಅನುಪಮ ಸೌಂದರ್ಯ...
ಕೃಪೆ*ಟಿ.ಎಂ.ಸತೀಶ್  
Pattadakallu temple    ಬಾದಾಮಿಯ ಚಾಳುಕ್ಯರ ಕಲಾರಾಧನೆಗೆ ಸಾಕ್ಷಿಯಾಗಿ ನಿಂತಿರುವ ಶಿಲ್ಪಕಲಾ ಶ್ರೀಮಂತಿಕೆಯ ನಗರಿ ಪಟ್ಟದಕಲ್ಲು. ಬಾದಾಮಿಯಿಂದ ಕೇವಲ 22 ಕಿ.ಮೀ. ದೂರದಲ್ಲಿರುವ ಪಟ್ಟದಕಲ್ಲು ವಿಶ್ವ ಪರಂಪರೆಯ ತಾಣವೂ ಹೌದು.
  ಮಲಪ್ರಭ ನದಿಯ ದಂಡೆಯಲ್ಲಿರುವ ಈ ತಾಣ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿಯ ಸ್ಥಳವಾಗಿತ್ತು ಎಂದು ಸಂಶೋಧನೆಗಳಿಂದ ಸ್ಥಿರಪಟ್ಟಿದೆ. ಬಹು ಪುರಾತನವಾದ ಈ ಊರು ಶಿಲಾಯುಗದೊಂದಿಗೂ ತನ್ನ ನಂಟು ಇಟ್ಟುಕೊಂಡಿದೆ. ಇಲ್ಲಿ ಹಳೆಯ ಶಿಲಾಯುಗದ ಶಿಲಾಯುಧಗಳೂ, ಕಲ್ಗೋರಿಗಳೂ ದೊರೆತಿದ್ದು ಪ್ರಾಗೈತಿಹಾಸಿಕ ಸಂಶೋಧನೆಗೆ ಆಕರ ಸ್ಥಳವಾಗಿದೆ.
Pattada Kalluಈ ಪ್ರದೇಶ ಸಂಪೂರ್ಣವಾಗಿ ಕೆಂಪು ಶಿಲೆಗಳಿಂದ ಕೂಡಿರುವ ಕಾರಣ ಇದಕ್ಕೆ ಕಿಸುವೊಳಲ್ ಎಂದು ಹೆಸರಿತ್ತು. ಚಾಳುಕ್ಯರು ಇಲ್ಲಿ ತಮ್ಮ ಪಟ್ಟಬಂಧ ಮಹೋತ್ಸವ ಆಚರಿಸಿಕೊಂಡಿದ್ದರಿಂದ ಇದಕ್ಕೆ ಪಟ್ಟದ ಕಿಸುವೊಳಲ್ ಎಂದು ಹೆಸರಾಯ್ತು ಇದು ಶಾಸನಗಳಲ್ಲೂ ದಾಖಲಾಗಿದೆ. ಕಾಲಾನಂತರ ಇದು ಪಟ್ಟದ ಕಲ್ಲು ಎಂದು ಖ್ಯಾತವಾಯ್ತು. ಇಲ್ಲಿ ಮಲಪ್ರಭೆ ಉತ್ತರ ಮುಖವಾಗಿ ಹರಿಯುವ ಕಾರಣ ಇದು ಒಂದು ಪವಿತ್ರ ಕ್ಷೇತ್ರ ಎನಿಸಿದೆ. ಇದಕ್ಕೆ ದಕ್ಷಿಣ ಕಾಶಿ ಎಂಬ ಹೆಸರೂ ಇದೆ. ಚಾಳುಕ್ಯರ ಕಾಲದಲ್ಲಿ ಇಲ್ಲಿ ಭವ್ಯ ಶಿಲಾವೈಭವದ ದೇವಾಲಯಗಳು ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಇದೊಂದು ಪಾರಂಪರಿಕ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
Pattadakallu templeಇತಿಹಾಸ ಅಧ್ಯಯನಿಗಳಿಗೆ ಸಂಶೋಧನಾ ಸ್ಥಳವಾಗಿ, ಯಾತ್ರಿಕರಿಗೆ ಪುಣ್ಯಕ್ಷೇತ್ರವಾಗಿ, ಪ್ರವಾಸಿಗರಿಗೆ ಪ್ರವಾಸಿ ತಾಣವಾಗಿ ಇಂದಿಗೂ ಪಟ್ಟದಕಲ್ಲು ತನ್ನ ಮಹತ್ವ ಉಳಿಸಿಕೊಂಡಿದೆ. ಇಲ್ಲಿ ಒಂಬತ್ತು ಶೈವ ದೇಗುಲ, ಒಂದು ಜಿನಾಲಯ ಇದೆ. ಈ ದೇಗುಲಗಳ ಪೈಕಿ ರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ ಅತ್ಯಂತ ಸುಂದರವಾಗಿದ್ದು, ವಿಶಾಲವಾಗಿದೆ. ಬಾದಾಮಿಯ ಚಾಳುಕ್ಯರ ಕಾಲದ ದೇವಾಲಯಗಳ ಪೈಕಿ ಇದು ಅತ್ಯಂತ ದೊಡ್ಡದು ಎಂದು ಹೇಳಲಾಗುತ್ತದೆ. ಇಲ್ಲಿನ ಭಿತ್ತಿಗಳಲ್ಲಿ (ಗೋಡೆ) ಪುರಾಣದ ಕತೆಗಳನ್ನಾಧರಿಸಿದ ಸುಂದರ ಶಿಲ್ಪಕಲಾ ಕೆತ್ತನೆಗಳಿವೆ. ರಾಣಿ ತ್ರೈಲೋಕ್ಯ ಮಹಾದೇವಿ ಕಟ್ಟಿಸಿದ ಮಲ್ಲಿಕಾರ್ಜುನ ದೇವಾಲಯ ಇದೇ ಆವರಣದಲ್ಲಿದ್ದು ಅದೂ ಸಹ ಶಿಲ್ಪಕಲಾಶ್ರೀಮಂತಿಕೆಯಿಂದ ಕೂಡಿದೆ. ಆದರೆ ಹಲವು ಶಿಲ್ಪಗಳು ಭಗ್ನಗೊಂಡಿವೆ. ಗಳಗನಾಥ ದೇವಾಲಯ ನೋಡಲು ಸುಂದರವಾಗಿದ್ದು, ಇಲ್ಲಿನ ದಕ್ಷಿಣ ಭಾಗದಲ್ಲಿರುವ ಮಂಟಪದಲ್ಲಿ ಭಗ್ನವಾಗಿರುವ ಎಂಟು ಕೈಗಳುಳ್ಳ ಅಂಧಕಾಸುರಾಂತಕ (ಶಿವ)ನ ಮೂರ್ತಿಯಿದೆ. ಇಷ್ಟು ಸುಂದರವಾದ ಮೂರ್ತಿ ಭಗ್ನವಾಗಿರುವುದನ್ನು ಕಂಡಾಗ ಮನ ಕಲಕುತ್ತದೆ. ಗರ್ಭಗುಡಿಯ ವಿಭಾಗಗಳ ಪಟ್ಟಿಕೆಗಳಲ್ಲಿ ಕುಸ್ತಿಯಾಟ, ಗಂಡಭೇರುಂಡ, ಕೋತಿ ಮರಕ್ಕೆ ಸಿಕ್ಕಿಸಿದ ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಂಡ ಪ್ರಸಂಗವನ್ನೂ ಕೆತ್ತಲಾಗಿದೆ. ಸಂಗಮೇಶ್ವರ, ಪಾಪನಾಥ ದೇವಾಲಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ದೇಗುಲಗಳಲ್ಲಿರುವ ವಾಸ್ತು ಶಿಲ್ಪ , ಛಾವಣಿಯ ಒಳ ಶಿಲ್ಪಗಳು ಮನಸೂರೆಗೊಳ್ಳುತ್ತದೆ.
Pattadakallu         8ನೇ ಶತಮಾನದ ಜಂಭುಲಿಂಗ, ಕಾಡಸಿದ್ಧೇಶ್ವರ ದೇವಾಲಯಗಳು ಇಲ್ಲಿನ ಪ್ರಮುಖ ದೇವಾಲಯಗಳಾಗಿವೆ. ಕ್ರಿ.ಶ.696-733ರ  ಅವಧಿಯಲ್ಲಿ ದೊರೆ ವಿಜಯಾದಿತ್ಯನ ಕಾಲದಲ್ಲಿ ಸಂಗಮೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಪಂಪಾನಾಥ ದೇವಾಲಯದಲ್ಲಿ ಕಲಾತ್ಮಕವಾದ 16 ಕಂಬಗಳ ಸಭಾಂಗಣವಿದ್ದು ಇದು ಈ ಕ್ಷೇತ್ರದ ಅತ್ಯಂತ ಪ್ರಮುಖ ತಾಣವಾಗಿದೆ.
 
         ದ್ರಾವಿಡ, ನಾಗರಶೈಲಿಯ ದೇವಾಲಯಗಳನ್ನು ಹಾಗೂ ಅವುಗಳಲ್ಲಿರುವ ಅನುಪಮ ಸೌಂದರ್ಯವನ್ನು ಒಂದೇ ಸ್ಥಳದಲ್ಲೇ ಕಾಣಬೇಕೆಂದರೆ, ಕರ್ನಾಟಕದಲ್ಲಿ ವಾಸ್ತುಶಿಲ್ಪ ಬೆಳೆದ ಬಗೆಯ ಬಗ್ಗೆ ಅಧ್ಯಯನ ಮಾಡಬೇಕಾದರೆ ಪಟ್ಟದಕಲ್ಲಿಗೇ ಹೋಗಬೇಕು. ಬೆಂಗಳೂರಿನಿಂದ 480, ಬಾಗಲಕೋಟೆಯಿಂದ 40 ಹಾಗೂ ಬಿಜಾಪುರದಿಂದ ಪಟ್ಟದ ಕಲ್ಲಿಗೆ 134 ಕಿಲೋ ಮೀಟರ್. 
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು