fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಏಪ್ರಿಲ್ 27, 2019

ಬರಲಿದೆ 20 ಮುಖಬೆಲೆ ಹೊಸ ನೋಟು


ಭಾರತೀಯ ರಿರ್ಸವ್ಬ್ಯಾಂಕ್ (ಆರ್ಬಿಐ) ಗಾಂಧಿ ಸರಣಿಯ ಹೊಸ ರೂ 20  ಮುಖಬೆಲೆ ನೋಟುಗಳನ್ನು  ಹೊರತರುವುದಾಗಿ ಹೇಳಿದೆ. ನೋಟುಗಳು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ಅವರ ಸಹಿಯನ್ನು ಒಳಗೊಂಡಿರಲಿದೆ.
ಹಸಿರು ಮಿಶ್ರಿತ ಹಳದಿ ಬಣ್ಣದ ರೂ 20 ಮುಖಬೆಲೆಯ ಹೊಸ ನೋಟಿನ ಹಿಂಬದಿಯಲ್ಲಿ ಎಲ್ಲೋರಾ ಗುಹೆಯ ಚಿತ್ರವಿದ್ದುಇದು ದೇಶದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿದೆ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಚಾಲ್ತಿಯಲ್ಲಿರುವ ಹಿಂದಿನ ಎಲ್ಲಾ ಸರಣಿಯ ರೂ 20 ನೋಟುಗಳು ಬಳಕೆಯಲ್ಲಿರಲಿವೆ ಎಂದು ಆರ್ಬಿಐ ಸ್ಪಷ್ಟಪಡಿಸಿದೆ.
·         ಹೊಸ ನೋಟುಗಳು ಭಿನ್ನ ವಿನ್ಯಾಸ ಹಾಗೂ ಗೆರೆಗಳನ್ನು ಒಳಗೊಂಡಿದೆ

·         ನೋಟು 63ಮಿ.ಮೀ x 129ಮಿ.ಮೀ ಅಳತೆಯಲ್ಲಿರಲಿದೆ ಎಂದು ವಿವರಿಸಿದೆ

·         ಬಲ ಭಾಗದಲ್ಲಿ ಅಶೋಕ ಕಂಭದ ಲಾಂಛನ ಬಳಸಲಾಗಿದ್ದು ರೂ 20 ಎಂದು ಕಾಣುವಂತೆ ವಾಟರ್ಮಾರ್ಕ್ ಹೊಂದಿರಲಿದೆ.

·         ಮಧ್ಯಭಾಗದಲ್ಲಿ ಮಹಾತ್ಮ ಗಾಂಧಿ ಚಿತ್ರಸಣ್ಣ ಅಕ್ಷರಗಳಲ್ಲಿ ಆರ್ಬಿಐ, ಭಾರತ್‌, ಇಂಡಿಯಾ, 20, ಆರ್ಬಿಐ ಗವರ್ನರ್ಸಹಿ,..

·         ಹಲವು ಗುರುತುಗಳನ್ನು ಒಳಗೊಂಡಿದೆ

ಶುಕ್ರವಾರ, ಏಪ್ರಿಲ್ 26, 2019

ಉಪ್ಪರಗುಡಿಯ ಸೋಮಿದೇವಯ್ಯ

ವಚನಕಾರ
ಉಪ್ಪರಗುಡಿಯ ಸೋಮಿದೇವಯ್ಯ 
ಅಂಕಿತ ನಾಮ
ಗಾರುಡೇಶ್ವರಲಿಂಗ
ಕಾಲ
1160 
ದೊರಕಿರುವ ವಚನಗಳು
11 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ
-
ಹುಟ್ಟಿದ ಸ್ಥಳ
-
ಪರಿಚಯ
ಕಾಲ ಸು. 1160. 11 ವಚನಗಳು ದೊರೆತಿವೆ. ಕಾಯ ಮತ್ತು ಆತ್ಮ, ಕ್ರಿಯೆ ಮತ್ತು ಜ್ಞಾನ ಇವುಗಳ ಸಂಬಂಧವನ್ನು ವಿವೇಚಿಸಿದ್ದಾನೆ.

ಸೋಮವಾರ, ಏಪ್ರಿಲ್ 22, 2019

ಬದುಕಿಗೆ ದಾರಿದೀಪ ಆದವಳು - ಅಮ್ಮ

ಬದುಕಿಗೆ ದಾರಿದೀಪ ಆದವಳು
ಕಂಬನಿ ಇಟ್ಟಾಗ ಕಣ್ಣೀರ ಒರೆಸಿದವಳು
ಕಷ್ಟ ಬಂದಾಗ ಹೆಗಲಿಗೆ ಹೆಗಲಾದವಳು
ಸೋತಾಗ ಸಂತ್ವಾನ ಹೇಳಿದವಳು ||

ತಪ್ಪು ಮಾಡಿದಾಗ ತಿದ್ದಿ ಹೇಳಿದವಳು
ತಪ್ಪು ಹೆಜ್ಜೆ ಇಟ್ಟಾಗ ಕೈ ಹಿಡಿದು ನಡೆಸಿದವಳು
ಕೆಲಸ ಸಿಕ್ಕಾಗ ಹೆಮ್ಮೆ ಪಟ್ಟವಳು 
ಜೀವನಕ್ಕೆ ಹೊಸ ಹುರುಪು ತಂದವಳು ||

ನೊಂದಾಗ ಮನದಲ್ಲೇ ಮರುಗಿದವಳು 
ಪ್ರತಿ ಹೆಜ್ಜೆಗೆ ಸ್ಫೂರ್ತಿಯಾದವಳು
ಕನಸಿನ ಗೋಪುರಕ್ಕೆ ಜೀವಗಂಗೆ ಇವಳು 
ಸಾರ್ಥಕ ಬದುಕಿನ ನಿಧರ್ಶನ ಇವಳು ||

ಇವಳೇ ಮಮತಾಮಯಿ ''ಅಮ್ಮ''
ಕೃಪೆ - ಜ್ಯೋತಿ ಭಟ್

ಗುರುವಾರ, ಏಪ್ರಿಲ್ 18, 2019

ಮತಗಟ್ಟೆಯಲ್ಲಿ ಮತದಾನದ ಪ್ರಕ್ರಿಯೆ


ಮತಗಟ್ಟೆಯಲ್ಲಿ ಮತದಾನದ ಪ್ರಕ್ರಿಯೆ ಹೀಗಿರುತ್ತೆ

ಮತಗಟ್ಟೆ ಅಧಿಕಾರಿ 1: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮತ್ತು ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ

ಮತಗಟ್ಟೆ ಅಧಿಕಾರಿ 2: ನಿಗದಿತ ಬೆರಳಿಗೆ ಶಾಯಿಯ ಗುರುತನ್ನು ಹಾಕುತ್ತಾರೆ. ಮತದಾನದ ಚೀಟಿ ನೀಡಿ ನಿಮ್ಮ ಸಹಿ ಪಡೆದುಕೊಳ್ಳುತ್ತಾರೆ

ಮತಗಟ್ಟೆ ಅಧಿಕಾರಿ 3: ಮತದಾನದ ಚೀಟಿ ಪಡೆದು ನಿಮ್ಮ ಬೆರಳನ್ನು ಪರಿಶೀಲಿಸುತ್ತಾರೆ


ಅಂಗೈಯಲ್ಲಿ ಸಮಗ್ರ ಮಾಹಿತಿ

       ಚುನಾವಣೆ, ಮತದಾನ, ಮತಗಟ್ಟೆ ಇತ್ಯಾದಿ ಮಾಹಿತಿಗಳಿಗಾಗಿ ಮತದಾರರು ಪಡುತ್ತಿದ್ದ ಸಾಹಸವನ್ನು ಮನಗಂಡು ಕರ್ನಾಟಕ ಚುನಾವಣಾ ಆಯೋಗ ಚುನಾವಣಾ ಆ್ಯಪ್ ಅಭಿವೃದ್ಧಿಪಡಿಸಿದೆ. ಮೊಬೈಲ್ನಲ್ಲಿರುವ ಗೂಗಲ್ಪ್ಲೇ ಸ್ಟೋರ್ಮತ್ತು ಆ್ಯಪ್ಸ್ಟೋರ್ನಲ್ಲಿ ಆ್ಯಪ್ಡೌನ್ಲೋಡ್ಮಾಡಿಕೊಂಡರೆ ಸಾಕು. ಒಂದೆ ಕಿಂಡಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನಿಮ್ಮ ಅಂಗೈಯಲ್ಲಿಯೇ ದೊರೆಯಲಿದೆ

ಅಕ್ರಮಗಳ ಮೇಲೆ ಹದ್ದಿನ ಕಣ್ಣು
        ಚುನಾವಣೆ ಮತ್ತು ಮತದಾನದ ವೇಳೆ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಾಕ್ಷಿ ಸಮೇತ ದೂರು ನೀಡಲು ಚುನಾವಣಾ ಆಯೋಗ ಸಿವಿಜಿಲ್ ಆ್ಯಪ್  ಅಭಿವೃದ್ಧಿಪಡಿಸಿದೆಚುನಾವಣಾ ಮಾದರಿ ನೀತಿ, ಸಂಹಿತೆ ಉಲ್ಲಂಘಿಸಿ ಮದ್ಯ, ಮಾದಕ ವಸ್ತು ಮತ್ತು ಹಣ ವಿತರಣೆ, ಶಸ್ತ್ರಾಸ್ತ್ರ ಪ್ರದರ್ಶನ, ಮತದಾರರಿಗೆ ಉಡುಗೊರೆ ಆಮಿಷ, ಬೆದರಿಕೆ, ನಕಲಿ ಸುದ್ದಿ, ಕೋಮುದ್ವೇಷದ ಭಾಷಣ, ಪಕ್ಷ ಮತ್ತು ಅಭ್ಯರ್ಥಿಗಳಿಂದ ಮತದಾರರ ಸಾಗಣೆ ಕಂಡು ಬಂದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದು ಸಿವಿಜಿಲ್ಗೆ ಅಪ್ಲೋಡ್ಮಾಡಬಹುದುಚಿತ್ರ, ವಿಡಿಯೊ ಮತ್ತು ಲಿಖಿತ ದೂರು ನೀಡಲು ಸಿವಿಜಿಲ್ಆ್ಯಪ್ನಲ್ಲಿ ಅವಕಾಶ ಇದೆ. ದೂರು ನೀಡಿದವರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು.



ಸೋಮವಾರ, ಏಪ್ರಿಲ್ 15, 2019

ದ್ವಿತೀಯ ಪಿಯು ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟ


ಇಂದು 12 ಗಂಟೆಗೆ ವೆಬ್ಸೈಟ್ನಲ್ಲಿ  
ದ್ವಿತೀಯ ಪಿಯು ಫಲಿತಾಂಶ




ಸುದ್ದಿಗೋಷ್ಠಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದರು.

ಮಾರ್ಚ್‌ 1 ರಿಂದ 18 ರವರೆಗೆ ಪರೀಕ್ಷೆ ನಡಿದತ್ತು.

6,71,000 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,16,587 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ 61.73 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಮಾಣ ಶೇ + 2.17 ಜಾಸ್ತಿ ಆಗಿದೆ. 

ಬಾಲಕಿಯರು ಶೇ 68.24 
ಮತ್ತು 
ಬಾಲಕರು ಶೇ 55.29 ರ 
ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.


(ಮಧ್ಯಾಹ್ನ 12 ಕ್ಕೆ ಇಲಾಖೆ ವೆಬ್ಸೈಟ್ರಲ್ಲಿ ಫಲಿತಾಂಶವನ್ನು ಅಪ್ಲೋಡ್ಮಾಡಲಾಗುವುದು ಎಂದು ಇಲಾಖೆಯ ನಿರ್ದೇಶಕಿ: ಶಿಖಾ ತಿಳಿಸಿದ್ದಾರೆ. ನಾಳೆ (ಮಂಗಳವಾರ) ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.)

ಬುಧವಾರ, ಏಪ್ರಿಲ್ 03, 2019

ಕಳೆದೋಯ್ತು / ಉರುದೋಯ್ತು

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ, ರಾತ್ರೀನೇ ಕಳೆದೋಯ್ತು.. 

ರಾತ್ರಿಯೆಲ್ಲಾ ಎಸ್ಸೆಮ್ಮೆಸ್ಸ್ ಮಾಡ್ತಿದ್ದೆ, ರಾತ್ರೀನೇ ಕಳೆದೋಯ್ತು..  
...
ಬೆಳಿಗ್ಗೆ ಎದ್ದು ಬ್ಯಾಲೆನ್ಸ್ ನೋಡಿದೆ, ಹೊಟ್ಟೆ ಎಲ್ಲಾ ಉರುದೋಯ್ತು... 

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು