ಬದುಕಿಗೆ ದಾರಿದೀಪ ಆದವಳು
ಕಂಬನಿ ಇಟ್ಟಾಗ ಕಣ್ಣೀರ ಒರೆಸಿದವಳು
ಕಷ್ಟ ಬಂದಾಗ ಹೆಗಲಿಗೆ ಹೆಗಲಾದವಳು
ಸೋತಾಗ ಸಂತ್ವಾನ ಹೇಳಿದವಳು ||
ತಪ್ಪು ಮಾಡಿದಾಗ ತಿದ್ದಿ ಹೇಳಿದವಳು
ತಪ್ಪು ಹೆಜ್ಜೆ ಇಟ್ಟಾಗ ಕೈ ಹಿಡಿದು ನಡೆಸಿದವಳು
ಕೆಲಸ ಸಿಕ್ಕಾಗ ಹೆಮ್ಮೆ ಪಟ್ಟವಳು
ಜೀವನಕ್ಕೆ ಹೊಸ ಹುರುಪು ತಂದವಳು ||
ನೊಂದಾಗ ಮನದಲ್ಲೇ ಮರುಗಿದವಳು
ಪ್ರತಿ ಹೆಜ್ಜೆಗೆ ಸ್ಫೂರ್ತಿಯಾದವಳು
ಕನಸಿನ ಗೋಪುರಕ್ಕೆ ಜೀವಗಂಗೆ ಇವಳು
ಸಾರ್ಥಕ ಬದುಕಿನ ನಿಧರ್ಶನ ಇವಳು ||
ಇವಳೇ ಮಮತಾಮಯಿ ''ಅಮ್ಮ''
ಕೃಪೆ - ಜ್ಯೋತಿ ಭಟ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.