ಮತಗಟ್ಟೆಯಲ್ಲಿ ಮತದಾನದ ಪ್ರಕ್ರಿಯೆ ಹೀಗಿರುತ್ತೆ
ಮತಗಟ್ಟೆ ಅಧಿಕಾರಿ 1: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮತ್ತು ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ.
ಮತಗಟ್ಟೆ ಅಧಿಕಾರಿ 2: ನಿಗದಿತ ಬೆರಳಿಗೆ ಶಾಯಿಯ ಗುರುತನ್ನು ಹಾಕುತ್ತಾರೆ. ಮತದಾನದ ಚೀಟಿ ನೀಡಿ ನಿಮ್ಮ ಸಹಿ ಪಡೆದುಕೊಳ್ಳುತ್ತಾರೆ.
ಮತಗಟ್ಟೆ ಅಧಿಕಾರಿ 3: ಮತದಾನದ ಚೀಟಿ ಪಡೆದು ನಿಮ್ಮ ಬೆರಳನ್ನು ಪರಿಶೀಲಿಸುತ್ತಾರೆ.
ಅಂಗೈಯಲ್ಲಿ ಸಮಗ್ರ ಮಾಹಿತಿ
ಚುನಾವಣೆ, ಮತದಾನ, ಮತಗಟ್ಟೆ ಇತ್ಯಾದಿ
ಮಾಹಿತಿಗಳಿಗಾಗಿ ಮತದಾರರು ಪಡುತ್ತಿದ್ದ ಸಾಹಸವನ್ನು
ಮನಗಂಡು ಕರ್ನಾಟಕ ಚುನಾವಣಾ ಆಯೋಗ
ಚುನಾವಣಾ ಆ್ಯಪ್ ಅಭಿವೃದ್ಧಿಪಡಿಸಿದೆ. ಮೊಬೈಲ್ನಲ್ಲಿರುವ ಗೂಗಲ್ ಪ್ಲೇ ಸ್ಟೋರ್
ಮತ್ತು ಆ್ಯಪ್ ಸ್ಟೋರ್ನಲ್ಲಿ
ಆ್ಯಪ್ ಡೌನ್ಲೋಡ್ ಮಾಡಿಕೊಂಡರೆ
ಸಾಕು. ಒಂದೆ ಕಿಂಡಿಯಲ್ಲಿ ಚುನಾವಣೆಗೆ
ಸಂಬಂಧಿಸಿದ ಸಮಗ್ರ ಮಾಹಿತಿ ನಿಮ್ಮ
ಅಂಗೈಯಲ್ಲಿಯೇ ದೊರೆಯಲಿದೆ.
ಅಕ್ರಮಗಳ ಮೇಲೆ ಹದ್ದಿನ ಕಣ್ಣು
ಚುನಾವಣೆ ಮತ್ತು ಮತದಾನದ ವೇಳೆ
ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು
ಸಾಕ್ಷಿ ಸಮೇತ ದೂರು ನೀಡಲು
ಚುನಾವಣಾ ಆಯೋಗ ಸಿವಿಜಿಲ್ ಆ್ಯಪ್
ಅಭಿವೃದ್ಧಿಪಡಿಸಿದೆ. ಚುನಾವಣಾ ಮಾದರಿ ನೀತಿ, ಸಂಹಿತೆ
ಉಲ್ಲಂಘಿಸಿ ಮದ್ಯ, ಮಾದಕ ವಸ್ತು
ಮತ್ತು ಹಣ ವಿತರಣೆ, ಶಸ್ತ್ರಾಸ್ತ್ರ
ಪ್ರದರ್ಶನ, ಮತದಾರರಿಗೆ ಉಡುಗೊರೆ ಆಮಿಷ, ಬೆದರಿಕೆ,
ನಕಲಿ ಸುದ್ದಿ, ಕೋಮುದ್ವೇಷದ ಭಾಷಣ,
ಪಕ್ಷ ಮತ್ತು ಅಭ್ಯರ್ಥಿಗಳಿಂದ ಮತದಾರರ
ಸಾಗಣೆ ಕಂಡು ಬಂದಲ್ಲಿ ಸಾರ್ವಜನಿಕರು
ತಮ್ಮ ಮೊಬೈಲ್ನಲ್ಲಿ ಸೆರೆ
ಹಿಡಿದು ಸಿವಿಜಿಲ್ಗೆ ಅಪ್ಲೋಡ್
ಮಾಡಬಹುದು. ಚಿತ್ರ, ವಿಡಿಯೊ ಮತ್ತು
ಲಿಖಿತ ದೂರು ನೀಡಲು ಸಿವಿಜಿಲ್
ಆ್ಯಪ್ನಲ್ಲಿ ಅವಕಾಶ ಇದೆ.
ದೂರು ನೀಡಿದವರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.