fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಅಮ್ಮ ಎಂಬ ಆ ಕರೆಯು

ಅಮ್ಮ ಎಂಬ ಆ..
 ಚಿತ್ರ: ದೇವತೆ
ಹಾಡಿದವರು: ವಾಣಿ ಜಯರಾಮ್
ಸಂಗೀತ: ಎಮ್. ಎಸ್. ವಿಶ್ವನಾಥನ್
ಸಾಹಿತ್ಯ: ಅರ್. ಎನ್. ಜಯಗೋಪಾಲ್
ಈ ಹಾಡನ್ನು ಇಲ್ಲಿ ಕೇಳಿ:
 www.raaga.com/player4/?id=168234&mode=100&rand=0.8747155613420297
ಅಮ್ಮಾ...
ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ.., ಇದನು ತಿಳಿಯಿತಮ್ಮಾ...ಆ..

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ..,

ಹಸಿದ ಕಂದ ಅಮ್ಮನೆಡೆಗೆ ಓಡಿ ಹೋಗುವುದಮ್ಮಾ...
ಅಮ್ಮ ಎಂದು ಯಾರ ಬಳಿಗೆ ನಾನು ಓಡಲಮ್ಮ..ಆ.., ನಾನು ಓಡಲಮ್ಮ..ಆ..

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ.. ಇದನು ತಿಳಿಯಿತಮ್ಮ...
ಉ...ಉಉಉಉ...
ಮುನಿಯು ತಂದ ಆಸರೆ, ಪತಿಯು ತೊರೆದ ಸೀತೆಗೆ..ಎ..
ರಾಮ ನಾಮ ಆಸರೆ..ಎ.. ಅವಳಿಗುಂಟು ಬಾಳಿಗೆ...
ತಾಳಿ ಗಂಟು ಹೇಗಿದೆ ನೆನಪು ದೂರ ಕಣ್ಣಿಗೆ...ಎ..
ಹೇಗೆ ನಾನು ಹೇಳಲಿ ಒಂದೇ ಹೆಸರು ಕಂದಗೆ..
ಇದೆ.. ಮನೆ, ಇದೆ ಸ್ವರ್ಗ ಈ ಜೀವಕೆ...

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ ಇದನು ತಿಳಿಯಿತಮ್ಮ...
ತಂದೆ ಇಂದ ದೂರದೆ ಬೆಳೆದ ಭರತ ಆ ದಿನ...ಆ..
ಅವನ ಹೆಸರಿಂದಲೇ ದೇಶ ಮೆರೆದಿದೆ ಈ ದಿನಾ..
ಕಂದ ನೀನೇ ಆಸರೆ.. ನೊಂದ ನಿನ್ನ ತಾಯಿಗೆ..ಎ..
ನಿನ್ನ ಮುದ್ದು ರೂಪದೆ ಕಂಡೆ ಅರ್ಥ ಬಾಳಿಗೆ...
ಸದಾ ನಗು... ಇದೆ ತಾಯಾ ಹಾರೈಕೆಯು...

ಅಮ್ಮ ಎಂಬ ಆ ಕರೆಯು ಏನಿತು ಮಧುರವಮ್ಮ..
ಜಗದ ಎಲ್ಲ ಜೀವ ರಾಶಿ..
ಇದನು ತಿಳಿಯಿತಮ್ಮ, ಇದನು ತಿಳಿಯಿತಮ್ಮಾ...

ಹು ಹು ಹು...ಹು.. ಹು...ಹು.ಹು.ಹು..

ಕಾಫಿ ಚಿತ್ರ-ಕಲೆ


ಹೊಸ ಸಂಶೋಧನೆ 3


ನಗೆ ಟಾನಿಕ್ 9


ಪ್ರಶ್ನೆ 5


ನುಡಿಮುತ್ತು 11

ಮಾಡಲು ಕೈಲಾದವನು ಮಾಡುತ್ತಾನೆ. ಮಾಡಲಾಗದವನು ಉಪದೇಶ ಮಾಡುತ್ತಾನೆ.
                                                         => ಅನಾಮದೇಯ

ಆರೋಗ್ಯ 2


ನಗೆ ಟಾನಿಕ್ 8


ಮೀನು ಮತ್ತು ಬೆಕ್ಕು


ನುಡಿಮುತ್ತು 10"ಭಾಷೆಯು ಭಾವನೆಯ ಪ್ರತಿಬಿಂಬ"
                                                => ಶ್ರೀರಂಗ

ಸಂದೇಶ 14


ನಗೆ ಟಾನಿಕ್ 7


ಕರ್ನಾಟಕವನ್ನು ಆಳಿದ್ದ ಪ್ರಮುಖ ರಾಜಮನೆತನಗಳು

1. 3ನೆಯ ಶತಮಾನಕ್ಕಿಂತ ಮುಂಚೆ - ಶಾತವಾಹನರು  -ಶ್ರೀಮುಖ, ಗೌತಮಿಪುತ್ರ
2. ಕ್ರಿ.ಶ. 325-540 - ಕದಂಬರು - ಮಯೂರವರ್ಮ
3. 325-999         - ಗಂಗರು - ಅವಿನೀತ, ದುರ್ವಿನೀತ, ರಾಚಮಲ್ಲ
4. 500-757         - ಬಾದಾಮಿ ಚಾಲುಕ್ಯರು - ಮಂಗಳೇಶ, ಪುಲಿಕೇಶಿ
5. 757-973          - ರಾಷ್ಟ್ರಕೂಟರು - ಕೃಷ್ಣ, ಗೋವಿಂದ, ನೃಪತುಂಗ
6. 973-1198         - ಕಲ್ಯಾಣದ ಚಾಲುಕ್ಯರು - ವಿಕ್ರಮಾದಿತ್ಯ
7. 1198-1312        - ದೇವಗಿರಿ ಯಾದವರು - ಸಿಂಗಾಹನ
8. 1000-1346      - ಹೊಯ್ಸಳರು - ವಿಷ್ಣುವರ್ಧನ
9. 1336-1565       - ವಿಜಯನಗರದ ಅರಸರು - ಕೃಷ್ೞದೇವರಾಯ
10. 1347-1527     ಬಹಮನಿ ಸುಲ್ತಾನರು - ಮಹಮದ್ ಷಾ ೧,೨
11. 1490-1696      -  ಬಿಜಾಪುರ ಸುಲ್ತಾನರು - ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ
12. 1500-1763      -  ಕೆಳದಿಯ ಅರಸರು - ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ
13. 1399-1761       - ಮೈಸೂರು ಒಡೆಯರು - ರಣಧೀರ ಕಂಠೀರವ, ಚಿಕ್ಕದೇವರಾಯ
14. 1761-1799       - ಹ್ಶೆದರ್ ಆಲಿ, ಟಿಪ್ಪುಸುಲ್ತಾನ್
15. 1800-1831       - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್
16. 1800             - ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ 
                          ಆಡಳಿತದಲ್ಲಿದ್ದ  ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ 
                         ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.
17. 1831-1881    ಬ್ರಿಟಿಷರು - ಆಂಗ್ಲರ ಆಧಿಪತ್ಯ
18. 1881-1950        - ಮೈಸೂರು ಒಡೆಯರು - ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್
19. 1956              - ಇಂದಿನ ಕರ್ನಾಟಕದ ರಚನೆ

ನುಡಿಮುತ್ತು 9

ಲೆಕ್ಕಕ್ಕೇ ಇಲ್ಲದಿರುವುದಕ್ಕಿಂತ ಟೀಕೆಗೆ ಗುರಿಯಾಗುವುದು ಲೇಸ
                                                                =>ಅನಾಮದೇಯ

ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?

   ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ? 

ಅಮ್ಮ ಎಂಬ ಮಾತಿಗಿಂತ
ಬೇರೆ ಮಂತ್ರ ಎಲ್ಲಿದೆ?
ಅದು ನೀಡುವ ಶಾಂತಿ ಕಾಂತಿ
ಯಾವ ತಾರೆ ರವಿಗಿದೆ?
ಹಾಲು ಕುಡಿಸಿ ಹೃದಯ ಬಿಡಿಸಿ
ಪ್ರೀತಿ ಉಣಿಸಿ ಮನಸಿಗೆ
ಬಾಳ ತೇದು ಮಕ್ಕಳಿಗೆ
ಬೆರೆದಳಲ್ಲ ಕನಸಿಗೆ!
ಗಾಳಿಯಲ್ಲಿ ನೀರಿನಲ್ಲಿ
ಮಣ್ಣು ಹೂವು ಹಸಿರಲಿ
ಕಾಣದೇನು ಕಾಯ್ವ ಬಿಂಬ
ಆಡುತಿರುವ ಉಸಿರಲಿ?
ಮರೆವೆ ಹೇಗೆ ಹೇಳೆ ತಾಯೆ
ನಿನ್ನೀ ವಾತ್ಸಲ್ಯವ?
ಅರಿವೆ ಹೇಗೆ ಹೇಳೆ ತಾಯೆ
ನಿನ್ನ ಪ್ರೀತಿ ಎಲ್ಲೆಯ?
*****
ಕೀಲಿಕರಣ: ಕಿಶೋರ್‍ ಚಂದ್ರ
ತಾಯಿಯ ಆ ರೂಪ
ಮಮತೆಯ ಪ್ರತಿರೂಪ
ಅವಳ ಜನ್ಮವು ಅಪರೂಪ
ಮನಸದು ರಾತ್ರಿಯ ಕೈದೀಪ...

ರುಧಿರ ಖಂಡಕ್ಕೆ ರೂಪವ ಕೊಡುವ ಅಮರ ಶಿಲ್ಪಿಯವಳು
ಮಾಂಸದ ಮುದ್ದೆಗೆ ಜೀವ ನೀಡುವ ಬ್ರಹ್ಮನ ತದ್ರೂಪಿಯವಳು
ನವಮಾಸಗಳು ಹೊತ್ತು ಹೆತ್ತು ಜನ್ಮವ ಕೊಟ್ಟವಳು
ತನ್ನಯ ಜೀವವನೆ ತೇಯ್ದು ನಮಗೆ ಪ್ರಾಣವ ನೀಡಿದಳು...೧


ತನ್ನ ದೇಹದ ಸಾರವನೆಲ್ಲ ಹಾಲಾಗಿ ಉಣಿಸಿದಳು
ಕರುಣೆ ಪ್ರೀತಿಯೆಂಬ ಊಟವ ಹಾಕಿ ನಮ್ಮನು ಬೆಳೆಸಿದಳು
ತಾನು ಕರಗುತ್ತ ಬೆಳಕ ನೀಡುವ ಅಮೃತ ಮೂರ್ತಿಯವಳು
ಆದ್ದರಿಂದಲೇ "ಅಮ್ಮ" ಎಂದೆಂದು ಬತ್ತದಂತ ಸ್ಪೂರ್ತಿ ಚಿಲುಮೆಯಾದಳು ...೨


ಅಪರೂಪ ಮಾಣಿಕ್ಯ
ಬಾಳಿನ ಸೌಭಾಗ್ಯ
ಅಮ್ಮ ನೆಂದು ಮರೆಯದಿರು
ಕಣ್ಣಿಗೆ ರೆಪ್ಪೆ ಯಂತೆ ಕಾಪಾಡುತಿರು ....೩

ಮೇ ೧೦, ತಾಯಂದಿರ ದಿನ - See more at: http://vismayanagari.com/node/6438#sthash.IAwV9fvO.dpuf
ಅಮ್ಮ , माँ , అమ్మ, Mother , அம்மா, അമ്മ 

ನೆರಳ ಡ್ಯಾನ್ಸ್

http://spn3187.blogspot.in/

ಹೊಸ ಸಂಶೋಧನೆ 2

http://spn3187.blogspot.in/

ನಗೆ ಟಾನಿಕ್ 6


ಪ್ರಶ್ನೆ 4


ನುಡಿಮುತ್ತು 8

 
ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ
                                                          => ವಿನೋಬಾ ಭಾವೆ

ನಗೆ ಟಾನಿಕ್ 5


ಕೈಯಲ್ಲಿ ಆರೋಗ್ಯ 1

ಇನ್ನು ಮುಂದೆ ನಿಮ್ಮ  ಕೈಯಲ್ಲಿಯೇ ನಿಮ್ಮ ಆರೋಗ್ಯ ಪಡೆದುಕೊಳ್ಳಬಹುದು,
ಇಲ್ಲಿದೆ ನಿಮ್ಮದೇ ಆದ ಮೆಮದ್ದು.

ನುಡಿಮುತ್ತು 7


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.
                                                          => ಜೇಮ್ಸ್ ಬ್ರಾಡ್‌ಸ್ಕಿ

ಪ್ರಾಣಿಯ ಪ್ರೀತಿ


ನಗೆ ಟಾನಿಕ್ 3

ಪ್ಲಾಸ್ಟಿಕ್ ಸರ್ಜರಿ

ಪುಂಡ : ಡಾಕ್ಟ್ರೇ ಈ ಬಕೆಟ್ ಸಿಕ್ಕಾ ಪಟ್ಟೆ ಸೋರುತಿದೆ...... ರಿಪೇರಿ ಮಾಡಿಕೋಡ್ತೀರಾ ?
ಡಾಕ್ಟರ್ : ಮೂರ್ಖ.... ನಾನ್ಯಾರೂಂತ ಗೊತ್ತಿದೆಯಾ ನಿನಗೆ ?

ಪುಂಡ : ಗೊತ್ತು ಡಾಕ್ಟ್ರೇ. ನೀವು ಪ್ಲಾಸ್ಟಿಕ್ ಸರ್ಜರಿಯಲ್ಲಿ ಫೇಮಸ್ಸಲ್ವಾ ?

ಸಂದೇಶ 13


ಮಹಾಭಾರತದ 18 ಪರ್ವಗಳ

ಮಹಾಭಾರತದ ಹದಿನೆಂಟು ಪರ್ವಗಳ ಸಂಕ್ಷಿಪ್ತ ಚಿತ್ರ1. ಆದಿಪರ್ವ: ಪರಿಚಯ, ವಿಶ್ವ ಸೃಷ್ಟಿ ಯ ವಿವರ ( ಸೃಷ್ಟಿ ಮತ್ತು ಮಹಾಭಾರತ) , ಹಿನ್ನೆಲೆ, ಪಾಂಡವ
     ಮತ್ತು  ಕೌರವರ ಜನನ ಹಾಗೂ ಬೆಳವಣಿಗೆ

2. ಸಭಾಪರ್ವ: ಆಸ್ಥಾನದ ಜೀವನ, ಪಗಡೆಯಾಟ, ಇಂದ್ರಪ್ರಸ್ಥ, ಪಾಂಡವರ ವನವಾಸ ಆರಂಭ

3. ಅರಣ್ಯಕಪರ್ವ: ಹನ್ನೆರಡು ವರ್ಷದ ವನವಾಸ

4. ವಿರಾಟಪರ್ವ: ವಿರಾಟನ ಆಸ್ಥಾನದಲ್ಲಿ ಒಂದು ವರ್ಷದ ಅಜ್ಞಾತವಾಸ

5. ಉದ್ಯೋಗಪರ್ವ: ಯುದ್ಧದ ತಯಾರಿ

6. ಭೀಷ್ಮಪರ್ವ: ಯುದ್ಧ ಆರಂಭ, ಭೀಷ್ಮ ಕೌರವರ ಸೇನಾನಿ - ಕೃಷ್ಣನಿಂದ ಭಗವದ್ಗೀತೆ ಉಪದೇಶ

7. ದ್ರೋಣಪರ್ವ: ಯುದ್ಧದ ಮುಂದುವರಿಕೆ, ದ್ರೋಣರ ಸೇನಾಧಿಪತ್ಯದಲ್ಲಿ

8. ಕರ್ಣಪರ್ವ: ಕರ್ಣನ ಸೇನಾಧಿಪತ್ಯ, ಕರ್ಣಾವಸಾನ

9. ಶಲ್ಯಪರ್ವ: ಶಲ್ಯನ ಸೇನಾಧಿಪತ್ಯ

10. ಸೌಪ್ತಿಕಪರ್ವ: ಅಶ್ವತ್ಥಾಮ ಪಾಂಡವರ ಮಕ್ಕಳನ್ನು ಕೊಲ್ಲುತ್ತಾನೆ

11. ಸ್ತ್ರೀಪರ್ವ: ಗಾಂಧಾರಿಯ ವಿಲಾಪ

12. ಶಾಂತಿಪರ್ವ: ಯುಧಿಷ್ಠಿರನ ಪಟ್ಟಾಭಿಷೇಕ, ಭೀಷ್ಮನಿಂದ ಸಲಹೆ

13. ಅನುಶಾಸನಪರ್ವ: ಭೀಷ್ಮನ ಕೊನೆಯ ಮಾತುಗಳು

14. ಅಶ್ವಮೇಧಿಕಪರ್ವ: ಯುಧಿಷ್ಠಿರನಿಂದ ಅಶ್ವಾಮೇಧ ಯಜ್ಞ

15. ಆಶ್ರಮವಾಸಿಕಪರ್ವ: ಧೃತರಾಷ್ಟ್ರ, ಗಾಂಧಾರಿ, ಕುಂತಿಯರ ಆಶ್ರಮವಾಸ, ಕೊನೆಗೆ ಮರಣ

16. ಮೌಸಲಪರ್ವ: ಯಾದವರಲ್ಲಿ ಕಲಹ ("ಯಾದವೀ ಕಲಹ")

17. ಮಹಾಪ್ರಸ್ತಾನಿಕಪರ್ವ: ಪಾಂಡವರ ಮರಣದ ಮೊದಲ ಭಾಗ

18. ಸ್ವರ್ಗಾರೋಹಣಪರ್ವ: ಪಾಂಡವರ ಸ್ವರ್ಗಾರೋಹಣ

ನುಡಿಮುತ್ತು 6

ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ
ಅಥವಾ ಭಯ ಪಡುವ ಕಾರಣವಿಲ್ಲ,
ಅದು ನಿನ್ನ ಗುಲಾಮ, ನಿನ್ನ ಆಜ್ಞೆಯಂತೆ ನಡೆಯುತ್ತದೆ,
ನೀನು ನಿಂತರೆ ಅದೂ ನಿಲ್ಲುವುದು,
ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.
                                                        => ವಿನೋಬಾ ಭಾವೆ

ಸಾಮಾಜಿಕ ಜಾಲತಾಣಗಳು

'ಅಮ್ಮ'ನೆಂಬ ಅಯಸ್ಕಾಂತ

ತುತ್ತನುಣಿಸಿ
ತಾರೆನೆಣಿಸಿ
ಹಾಡಿಕರೆದು
ತೋರುತಿದ್ದ
ತೋರುಬೆರಳ
ತುತ್ತತುದಿಗೆ
ಅವಳಿರಬೆಕಿತ್ತು

ಅಮ್ಮನೆಂದು
ಇವಳಕರೆದು
ಅತ್ತುಊಯ್ವ
ಅಳುವಿನೊಳಗೆ
ಬಿಗಿದುಅಪ್ಪಿ
ಪಪ್ಪಿಕೊಡಲು
ಅವಳಿರಬೇಕಿತ್ತು

ಹಸಿವುಎಂಬ
ನೋವಿನೊಳಗೆ
ಜೀವಮಿದ್ದ
ಉಸಿರನೀವ
ತುತ್ತಿನೊಳಗೆ
ಅವಳಿರಬೇಕಿತ್ತು

=> ಶಿವ ಪ್ರಸಾದ

ಮಹಾನ ಕವಿಗಳುಕೈ - ಹೃದಯ

ಕೈಯೊಳಗೆ ಹೃದಯವೋ - ಹೃದಯದೊಳಗೆ ಕೈಯೋ ?

ನುಡಿಮುತ್ತು 5


ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ,
ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.
                                                                             => ವಿನೋಬಾ ಭಾವೆ

ನುಡಿಮುತ್ತು 4


ಹಸಿವು ಒಂದು ರೋಗ ಎಂದು ತಿಳಿದುಕೋ,
ಭಿಕ್ಷೆ ದೊರಕಿದುದನ್ನು ಔಷ ಎಂದು ಸೇವಿಸು,
ಸಿಹಿಯನ್ನು ಬೇಡದಿರು, ದೊರೆತುದುದನ್ನು ಸೇವಿಸು,
ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು, ಹೆಚ್ಚಲ್ಲ ಕಡಿಮೆಯಲ್ಲ.
                                                              => ಶಂಕರಾಚಾರ್ಯರು

ನುಡಿಮುತ್ತು 3


ಹಸಿವು ಒಂದು ರೋಗ ಎಂದು ತಿಳಿದುಕೋ,
ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು,
ಸಿಹಿಯನ್ನು ಬೇಡದಿರು,
ದೊರೆತುದುದನ್ನು ಸೇವಿಸು,
ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು,
ಹೆಚ್ಚಲ್ಲ ಕಡಿಮೆಯಲ್ಲ.

                                                         =>  ಶಂಕರಾಚಾರ್ಯರು

ನುಡಿ ಮುತ್ತು 2

 
ನಾನು ಅವಧೂತನಾಗಿ ಹೋಗುವುದಿಲ್ಲ.
 ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ,
ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು,
ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು,
ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ.
ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
=>  ಕುವೆಂಪು (ಕನ್ನಡ ದೀಕ್ಷೆ)

ವಿಶಿಷ್ಟ ಚುನಾವಣಾ ಪತ್ರ (ನಗೆ ಟಾನಿಕ 2)


ಕ್ರೀಡೆ

ನಗೆ 1


ನಿಮ್ಮ ಮತನುಡಿ ಮುತ್ತು 1


ಒಳ್ಳೆಯ ಕಾರ್ಯವನ್ನು ಗಟ್ಟಿ ಮನಸ್ಸಿನಿಂದ ಮಾಡಿ
ಮುಗಿಸುವ ಪ್ರತಿಯೊಬ್ಬನೂ ಜಯಶಾಲಿಯೇ
ಆಗಿರುತಾನೆ ಎಂಬುದನ್ನು ನಾನು ಬಲ್ಲೆ.
ನಾನು ಸ್ವಾನುಭವದಿಂದ ಇದನ್ನು ಸಂಪೂರ್ಣವಾಗಿ
ನಂಬುತೇ ನೆ .
                                   =>   ಟ್ಹಾಮ್ ಕಂಪ್ರಿನ್

ವಿಷಯಗಳು

ಪ್ರಕಟಗೊಳ್ಳುವ  ನವೀಕರಣದ ಹೊಸ  ವಿಷಯಗಳು

ವಾರಕ್ಕೊಮ್ಮೆ
1. ಅಮ್ಮ , ಈ ಕ್ಷಣದ ಬದಲಾವಣೆ             (ರವಿವಾರ)
2. ಸಾಮಾನ್ಯ ಜ್ಞಾನ                        (ಸೋಮವಾರ)
3. ಸಂದೇಶ, ನುಡಿಮುತ್ತುಗಳು         (ಮಂಗಳವಾರ)
4. ಚಿತ್ರ-ವಿಚಿತ್ರ , ನಗೆ ಟಾನಿಕ್                (ಬುಧವಾರ)
5. ಕೈಯಲ್ಲಿ ಆರೋಗ್ಯ                         ( ಗುರುವಾರ)
6. ಪ್ರಶ್ನೆ ? , ಕನ್ನಡ ಚಿತ್ರಗಳ ಪಟ್ಟಿ           (ಶುಕ್ರವಾರ)
 7.  ಹೊಸ ಸಂಶೋಧನೆ                           (ಶನಿವಾರ)
 *****
ತಿಂಗಳಿಗೊಮ್ಮೆ
1.ಟಾಪ್ 3 ವಿಕ್ಷಣೆಗಳು,
2. ಕನ್ನಡ ಗೀತೆ ,          
               3. ಶ್ರೇಷ್ಠ ವ್ಯಕ್ತಿಗಳ ಜೀವನ ಚರಿತ್ರೆ.
                                                                                                                     {ತಿಂಗಳ ಕೊನೆಯ ದಿನ}
*****

ಬೇಸಿಗೆಯ ಪಾನೀಯಗಳು

ಬೇಸಿಗೆಯ ಆರೋಗ್ಯಕರ ಪಾನೀಯಗಳು 

1. ಸಿಹಿ ಲಸ್ಸಿ:
ಸಿಹಿ ಮೊಸರಿಗೆ ಕಲ್ಲುಸಕ್ಕರೆ ಬೆರೆಸಿ ಮಿಕ್ಸರ್ ನಲ್ಲಿ ತಿರುವಿ ಲಸ್ಸಿ ತಯಾರಿಸಬೇಕು.

2. ಕಬ್ಬಿನ ಹಾಲು :
ಇದಕ್ಕೆ ನಿಂಬೆರಸ ಬೆರೆಸಿ ಸೇವಿಸಬೇಕು. ಇದು ಬೇಸಿಗೆಯಲ್ಲಿ ಮಾತ್ರ. ಬೇರೆ ಕಾಲಗಳಲ್ಲಿ
ಬರೀ ಕಬ್ಬಿನ ರಸ ಸೇವಿಸಬೇಕು. ಅದಕ್ಕೆ ಸಕ್ಕರೆ, ಬೆಲ್ಲ, ಜೇನುತುಪ್ಪ ಇತ್ಯಾದಿಗಳನ್ನು ಬೆರೆಸಬಾರಾದು.

3. ಕಲ್ಲಂಗಡಿ ಜ್ಯೂಸ್:
ಕಲ್ಲಂಗಡಿ ಹಣ್ಣಿನ ತಿರುಳಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕಾಳುಮೆಣಸಿನಪುಡಿ ಬೆರೆಸಿ ಮಿಕ್ಸಿ ಯಲ್ಲಿ ತಿರುವಬೇಕು.

4. ರಾಗಿ ಪಾನೀಯ:
ಮೊಳಕೆ ಬರಿಸಿದ ರಾಗಿ ರುಬ್ಬಿ ಸೋಸಿ, ಅದಕ್ಕೆ ಬೆಲ್ಲ ಹಾಕಿ ತಣ್ಣಗೆ ಅಥವಾ ಬಿಸಿ ಮಾಡಿ ಸೇವಿಸಬಹುದು.

5. ಟೊಮೇಟೋ ಪಾನೀಯ:
ಮೂರು ಟೋಮೇಟೋಗಳನ್ನು ಹೆಚ್ಚಿ ರುಬ್ಬಿ, ಅದಕ್ಕೆ ಕಿತ್ತಳೆ, ನಿಂಬೆ ಅಥವಾ ಮೋಸಂಬಿ ರಸ ಬೆರೆಸಿ.

6. ಹೆಸರಿನ ಪೇಯ:
ಹೆಸರು ಕಾಳನ್ನು ಹುರಿದು ಪುಡಿ ಮಾಡಿ, ನೀರು ಹಾಗೂ ಬೆಲ್ಲ ಸೇರಿಸಿ ಸೇವಿಸಿ.

7. ಕಿತ್ತಳೆ ಲಸ್ಸಿ:
ಸಿಹಿ ಮೊಸರು ೧ ಕಪ್, ಕಿತ್ತಳೆ ರಸ ೧ ಕಪ್, ಸ್ವಲ್ಪ ಸಕ್ಕರೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಿರಿ.

8. ರಸಾಯನ:
ಸಿಹಿ ಮಾವಿನಹಣ್ಣನ್ನು ಕತ್ತರಿಸಿ ಸಕ್ಕರೆ ಜೊತೆ ಬೆರೆಸಿ ಮಿಕ್ಸರ್ ನಲ್ಲಿ ರುಬ್ಬಿ ನೀರಿನ ಬದಲು ಹಾಲು ಬೆರೆಸಿದರೆ ಮಾವಿನ ರಸಾಯನ ಅಥವಾ ಮಿಲ್ಕ್ ಶೇಕ್ ಸಿದ್ಧ. ಮಾವಿನ ಹಣ್ಣಿನ ಬದಲು ಬಾಳೆಹಣ್ಣಿನಿಂದಲೂ ತಯಾರಿಸಬಹುದು.

9. ಎಳ್ಳಿನ ನೀರು:
ಬಿಳಿ ಎಳ್ಳನ್ನು ಹುರಿದು ಪುಡಿ ಮಾಡಿ ಅದಕ್ಕೆ ನೀರು, ಬೆಲ್ಲ, ಚಿಟಿಕೆ ಏಲಕ್ಕಿ ಪುಡಿ ಬೆರೆಸಬೇಕು.

ಈ ಮೇಲಿನ ಪಾನೀಯಗಳು ದೇಹವನ್ನು ತಂಪಾಗಿಡುತ್ತವೆ. ಬಾಯಾರಿಕೆ,
ಸುಸ್ತು ನೀಗಿಸುತ್ತದೆ. ಅಗತ್ಯ ಪೋಷಕಾಂಶಗಳು, ನೀರಿನ ಅಂಶವನ್ನು ದೇಹಕ್ಕೆ ಪೂರೈಸುತ್ತದೆ.
                                                                                                                            =>

ಇಂಗ್ಲೀಷ ಪತ್ರಿಕೆಗಳು

ಇಂಗ್ಲೀಷ ಪತ್ರಿಕೆಗಳು

ಟಿವಿ 7

ಟಿವಿ 6

ಟಿವಿ 5

       
5.ವ್ಯಾಸ UGC

ಟಿವಿ 4

                                                        
4.ಡಿಡಿ ಪಂಜಾಬಿ

ಟಿವಿ 3

                     

ರೇಡಿಯೋ 2

ಟಿವಿ 2

ಟಿವಿ 1

ಮಹಾ ಶಿವರಾತ್ರಿ

   ಜಾತಿ-ಮತ ಭೇದವಿಲ್ಲದ ಮಹಾ ಶಿವರಾತ್ರಿ

***************************************************************
      
------------------------------------------
ಮಾಘ ಬಹುಳ ಚತುರ್ದಶಿ, ಮಹಾ ಶಿವರಾತ್ರಿ. ಶಿವನ ಆರಾಧನೆಗೆ ಪ್ರಶಸ್ತ ಮುಹೂರ್ತ. ಈ ಮಹಾ ಶಿವರಾತ್ರಿಯು ಬಹಳ ಶ್ರೇಷ್ಠವಾದುದು.

ಮಾಘ ಕಷ್ಣ ಚತುರ್ದಶ್ಯಾಂ ಆದಿ ದೇವೋ ಮಹಾನಿಶಿ
ಶಿವಲಿಂಗತಯೋದ್ಭೂತಃ ಕೋಟಿ ಸೂರ್ಯಸಮಪ್ರಭಃ
ತತ್ಕಾಲವ್ಯಾಪಿನೀ ಗ್ರಾಹ್ಯಾ ಶಿವರಾತ್ರಿ ವ್ರತೇ ತಿಥಿಃ

ಎಂಬ ಈಶಾನ್ಯ ಸಂಹಿತೆಯ ವಾಕ್ಯದಂತೆ ಮಹಾಶಿವರಾತ್ರಿಯಂದು ನಡುರಾತ್ರಿ ಕೋಟಿ ಸೂರ್ಯ ಪ್ರಕಾಶನಾದ ಪರಶಿವನು ಶಿವಲಿಂಗದಿಂದ ಸ್ವಯಂಭೂವಾಗಿ ಉದ್ಭವಿಸಿದನೆಂದು ತಿಳಿದು ಬರುತ್ತದೆ. ಇದಲ್ಲದೆ ಶಿವರಾತ್ರಿ ಶಿವನು ಹಾಲಾಹಲ ವಿಷ ಕುಡಿದ ದಿನವೆಂತಲೂ, ತಾಂಡವ ನತ್ಯ ಮಾಡಿದ ದಿನವೆಂತಲೂ ಹೇಳುತ್ತಾರೆ.

ಇಂದು, ವಿಶ್ವದ ಎಲ್ಲಾ ಶಿವಾಲಯಗಳಲ್ಲಿ, ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ, ಗೋಕರ್ಣ, ಯಾಣ, ಕಾಶಿ, ರಾಮೇಶ್ವರ ಮುಂತಾದ ತೀರ್ಥ ಕ್ಷೇತ್ರಗಳಲ್ಲಿ, ಲಕ್ಷ-ಲಕ್ಷ ಜನರು ಪೂಜೆ ಪುರಸ್ಕಾರ ಮಗ್ನರಾಗಿರುತ್ತಾರೆ.

ಶಿವರಾತ್ರಿ ಆಚರಣೆಯ ವಿಧಾನ: ಈ ದಿನ ಅರುಣೋದಯಕ್ಕೆ ಎದ್ದು ಸ್ನಾನ ಮಾಡಿ (ನದಿ, ಸಮುದ್ರ, ಸಂಗಮ ಸ್ನಾನ ಅತಿ ಶ್ರೇಷ್ಠವಾದುದು) ಶುಭ್ರ ವಸ್ತ್ರವನ್ನುಟ್ಟು  ಸಮಸ್ತ ಪಾಪ ನಿವಾರಣೆಗಾಗಿಯೂ, ಜ್ಞಾನ, ಮೋಕ್ಷ ಪ್ರಾಪ್ತಿಗಾಗಿಯೂ ಶಿವರಾತ್ರಿ ವ್ರತ ಆಚರಿಸುತ್ತೇನೆ  ಎಂದು ಸಂಕಲ್ಪ ಮಾಡಬೇಕು.

ತ್ರಯೋದಶಿಯಲ್ಲಿ ಒಪ್ಪತ್ತು ಊಟ, ಚತುರ್ದಶಿಯಂದು ಪೂರ್ಣ ನಿರಾಹಾರವಾಗಿದ್ದು, ಅಮಾವಾಸ್ಯೆಯಂದು ಪ್ರಸಾದ ಸ್ವೀಕರಿಸುವ ಮೂಕ ವ್ರತ ಸಂಪೂರ್ಣವನ್ನು ಮಾಡುತ್ತಾರೆ. ವಯೋವೃದ್ಧರು, ರೋಗಿಗಳು, ಸಣ್ಣ ಮಕ್ಕಳಾಗಿದ್ದಲ್ಲಿ ಕ್ಷೀರಾಹಾರ ಅಥವಾ ಫಲಾಹಾರ ಸ್ವೀಕರಿಸಬಹುದು.

ಪ್ರದೋಷ ಕಾಲಕ್ಕೆ ಶಿವಾಲಯಕ್ಕೆ ಹೋಗಿ ರಾತ್ರಿ ನಾಲ್ಕೂ ಯಾಮಗಳಲ್ಲೂ ರುದ್ರಾಭಿಷೇಕ ಪೂಜೆ, ಹರಿಕಥೆ, ಸತ್ಸಂಗಾದಿಗಳಲ್ಲಿ ಮಗ್ನರಾಗಬೇಕು.

ಶಿವ ಪೂಜೆಗೆ ಜಾತಿ-ಮತ, ಸ್ತ್ರೀ ಪುರುಷ ಭೇದವಿಲ್ಲ. ಎಂದಿದೆ ಈಶಾನ್ಯ ಸಂಹಿತೆ. ಸರ್ವಪಾಪಗಳನ್ನೂ ದೂರಮಾಡುವ ಈ ವ್ರತವನ್ನು ಜಾತಿ-ಮತ, ಸ್ತ್ರೀ-ಪುರುಷ ಎಂಬ ಭೇದವಿಲ್ಲದೆ ಅನನ್ಯ ಭಕ್ತಿಯಿಂದ ಧ್ಯಾನಿಸಿ ಜಾಗರಣೆ, ಉಪವಾಸ, ಅರ್ಚನೆ, ಅಭಿಷೇಕ ಶಿವ ಸಂಕೀರ್ತನಾದಿಗಳ ಮೂಲಕ ಮಹಾ ಶಿವರಾತ್ರಿಯನ್ನು ಆಚರಿಸುತ್ತಾರೆ.

ಪುರಾಣ ಪುಣ್ಯಕಥೆಗಳಲ್ಲಿ ತಿಳಿಸಿದಂತೆ ದೇವ ಲೋಕದ ಅಧಿಪತಿಗಳು, ಒಮ್ಮೆ ಬ್ರಹ್ಮ ಮತ್ತು ವಿಷ್ಣು ಅವರಲ್ಲಿ ಯಾರು ಶ್ರೇಷ್ಠರು ಎಂದು ವಾದ-ವಿವಾದಕ್ಕೆ ಇಳಿದಾಗ ಅವರ ಮಧ್ಯ ಒಂದು ಲಿಂಗಾಕಾರದ ಕಂಬವು ಪ್ರಕಾಶಮಾನವಾಗಿ ಎದ್ದು ನಿಂತಿತು.

ಒಂದು ಅಗೋಚರ ವಾಣಿಯು ಈ ಲಿಂಗದ ಆರಂಭ ಅಥವಾ ಕೊನೆಯ ಭಾಗವನ್ನು ಯಾರು ಕಂಡು ಹಿಡಿಯುವರೋ ಅವರೇ ಶ್ರೇಷ್ಠರು ಎಂದು ತಿಳಿಸಿದಾಗ ಅವರಲ್ಲಿ ಯಾರೂ ಕೂಡ ಅದನ್ನು ತಿಳಿಯಲಾಗದೇ, ಈ ಲಿಂಗಾಕಾರದಲ್ಲಿದ್ದ ಶಿವನನ್ನೇ ಶ್ರೇಷ್ಠನೆಂದು ಒಪ್ಪಿದರು.

ಇದು ಶಿವನೆಂದು ಪೂಜಿಸುವ ಲಿಂಗದ ಉದ್ಭವದ ಕಥೆ.ಮಾಘಮಾಸದ ಚತುರ್ದಶಿಯಂದು ಬರುವ ಈ ಮಹಾಶಿವರಾತ್ರಿ ಸಮಸ್ತರಿಗೂ ಸನ್ಮಂಗಳವನ್ನು ಉಂಟುಮಾಡಲಿ.

ಹೊಸ ಬೈಕ್

ಒಂದು ಗಾಲಿಯ ಹೊಸ ಬೈಕ್

ರೇಡಿಯೋ 1

ಟಿವಿ ಚಾನಲ್ ಗಳು

ನಿಮ್ಮ ಅಮೂಲ್ಯವಾದ ಮತ

ಮತ ಚಲಾವಣೆಗೆ ಬೇಕಾದ 23ರಲ್ಲಿ ಯಾವುದಾರು, ಒಂದು ದಾಖಲೆ ನೀಡಿ ನಿಮ್ಮ ಅಮುಲ್ಯವಾದ ಮತವನ್ನು ಚಲಾಯಿಸಿರಿ.

ಪ್ರಚಲಿತ ಘಟನೆ ಮತ್ತು ಮನರಂಜನೆಗೆ

ಟಾಪ್ - 3 (ಮಾರ್ಚ-2014)

 ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಮಾರ್ಚ - 2014

ಪ್ರಕಟನೆಗಳ ವೀಕ್ಷಣೆ ಟಾಪ್ 3 
1. ಕನ್ನಡ (Kannada SMS)
                            
                         

ರಾಷ್ಟ್ರಗಳ ಪ್ರಕಾರ ವೀಕ್ಷಣೆ ಟಾಪ್ 3

1. ಭಾರತ
2. ಅಮೇರಿಕಾ ಸಂಯುಕ್ತ ಸಂಸ್ಥಾನ
3. ರಷ್ಯಾ


ಬ್ರೌಸರ್‌ಗಳ ಪ್ರಕಾರ ವೀಕ್ಷಣೆ ಟಾಪ್ 3

1. Chrome
2. FireFox
3. Internet Explorer

ಆಪರೇಟಿಂಗ್ ಸಿಸ್ಟಮ್‌ಗಳ ವೀಕ್ಷಣೆ ಟಾಪ್ 3 

1. Windows
2. Linux
3.  Macintosh