fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಸಾಯುತಿದೆ ನಮ್ಮನುಡಿ, ಓ ಕನ್ನಡದ ಕಂದರಿರ

ಸಾಯುತಿದೆ ನಮ್ಮನುಡಿ, ಓ ಕನ್ನಡದ ಕಂದರಿರ,
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೆಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ,
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!
ಕೂಗಿಕೊಳ್ಳಲು ಕೂಡ ಬಲವಿಲ್ಲ: ಮಕ್ಕಳೇ
ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ!

ಮೊಲೆವಾಲಿನೊಡಗೂಡಿ ಬಂದ ನುಡಿ ತಾಯಿನುಡಿ;
ಕೊಲೆಗೈದರಮ್ಮನನೆ ಕೊಲಿಸಿದಂತೆ!
ತಾಯ್ ಮುತ್ತು ಕೊಡುವಂದು ನಿಮ್ಮ ಕೆನ್ನೆಯ ಮೇಲೆ
ಮೆರೆಯಿತದು ಪೋಣಿಸಿದ ಮುತ್ತಿನಂತೆ:
ನಿಮ್ಮ ನಲ್ಲೆಯರೊಡನೆ ನಲ್ನುಡಿಯ ನುಡಿವಂದು
ಕನ್ನಡವೆ ಕಲಿಸುವುದು ತುಟಿಗೆ ಬಂದು:
ನಡುವಂದು ನಿಮ್ಮ ಮುದ್ದಿನ ಹಸುಳೆಗಳನೆತ್ತಿ
ಕನ್ನಡವೆ ನಿಮಗೀವುದೊಲವ ತಂದು.

ಇರುವಲ್ಪ ಶಕ್ತಿಯನು ಇರುವಲ್ಪ ದ್ರವ್ಯವನು
ಪರಭಾಷೆ ಮೋಹಕ್ಕೆ ಚೆಲ್ಲಬೇಡಿ;
ಹೂಮಾಲೆ ಸೂಡಿವೆವು ಕೊರಳಿಂಗೆ ಎಂದೆನುತೆ
ನೇಣುರುಳನೆಳೆದಯ್ಯೊ ಕೊಲ್ಲಬೇಡಿ.
ಪರಕೀಯರೆಲ್ಲರಾಶೀರ್ವಾದ ಕರವೆತ್ತಿ
ಹರಸುತ್ತ ಬರುವರೈ ಮೊದಲು ಮೊದಲು;
ಕಡೆಗದುವೆ ಕುತ್ತಿಗೆಗೆ ಕರವಾಳವಾಗುವುದು;
ನಮ್ಮ ನಾಲಗೆ ನಮಗೆ ಕೀಳುತೊದಲು!

ನಿಮ್ಮ ನುಡಿ ನಿಮ್ಮ  ಗಂಡಸುತನಕೆ ಹಿರಿಸಾಕ್ಷಿ;
ಗೆಲವಿದ್ದರದಕೆ ನಿಮಗಿಹುದು ಶಕ್ತಿ.
ನುಡಿ ಮಡಿದರೆಲ್ಲರೂ ಮೂಕ ಜಂತುಗಳಂತೆ;
ಬಾಲವಲ್ಲಾಡಿಪುದೆ ಪರಮ ಭಕ್ತಿ!
ಉತ್ತರದ ಕಾಶಿಯಲಿ ಕತ್ತೆ ಮಿಂದೈತರಲು
ದಕ್ಷಿಣದ ದೇಶಕದು ಕುದುರೆಯಹುದೆ?
ತಾಯಿತ್ತ ಮೊಲೆಹಾಲೆ ನಿಮ್ಮ ಮೈಗಾಗದಿರೆ
ಹೊತ್ತ ಹೊರೆ ಬಲಕಾರಿ ನೆತ್ತರಹುದೆ?

ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ,
ಗರ್ಜಿಸುವುದನು ಕಲಿತು ಸಿಂಹವಾಗಿ!
ನಖದಂಷ್ಟ್ರ ಕೇಸರಂಗಳ ಬೆಳೆಸಿ ಹುರಿಗೊಂಡು
ಶಿರವೆತ್ತಿ ನಿಂತು ಕುರಿತನವ ನೀಗಿ.

೩-೧೦-೧೯೩೫

ತಿರುಕ - ರಾಜಕಾರಣಿ


ಒಬ್ಬ ತಿರುಕ ಹತ್ತು ಮನೆ ತಿರುಗಿ ಅನ್ನ ಸಂಗ್ರಹಿಸುತ್ತಾನೆ,
ಅದರಂತೆ
ಒಬ್ಬ ರಾಜಕಾರಣಿ ಹತ್ತು ಮನೆ ತಿರುಗಿ ಅಧಿಕಾರ ಸಂಗ್ರಹಿಸುತ್ತಾನೆ

ಹೊಗಳು

ಘನ ಕಾರ್ಯದ ಬಗೆಗಿನ ಶ್ಲಾಘನೆ
ಉತ್ತಮ ದಾರಿಯಲ್ಲಿರುವವರನ್ನು ದಾರಿ ತಪ್ಪಿಸಲು ಬಳಸುವ ತಂತ್ರ
ಸವೆಯದ ನಾಣ್ಯ; ಹರಿಯದ ನೋಟು
ಬೇಗ ವಾಪಸ್ ಕೊಟ್ಟುಬಿಡಬೇಕೆಂಬ ಉದ್ದೇಶದಿಂದ ಕೆಲವರು ಇದನ್ನು ನಮಗೆ ಕೊಟ್ಟಿರುತ್ತಾರೆ
ಇದನ್ನು ಅಡವು ಇಡಲಾಗದು
ಮಿತವಾಗಿದ್ದರೆ ನಮ್ಮೆಲ್ಲ ಶ್ರಮವನ್ನು ಮರೆಸುವಂಥದ್ದು. ಹೆಚ್ಚಾದರೆ ಕೆಲಸವನ್ನೇ ಮರೆಸುವಂಥದ್ದು
ಎಲ್ಲ ಗಳಿಕೆಗಳಿಗಿಂತಲೂ ಹೆಚ್ಚು ಖುಷಿಕೊಡುವ ಗಳಿಕೆ ಹೊ-ಗಳಿಕೆ
ಪ್ರಶಸ್ತ ಕಾರ್ಯದ ಬಗೆಗಿನ ಪ್ರಶಸ್ತಿ
ನಾನು ಹೊಗಳಿಕೆಯನ್ನು ಇಷ್ಟಪಡುವುದಿಲ್ಲ ಎಂಬ ಮಾತಿನ ಹಿಂದಿರೋದು ಕೂಡ ಇದರದ್ದೇ ಬಯಕೆ
ಮುದುಕಿಯನ್ನು ತರುಣಿಯಾಗಿಸುವಂಥ ಮದಿರೆ
ಕಾರ್ಯವಾಸಿ ಹೊಗಳು ಭಟ..
ತೆಗಳಿಕೆಗೆ ಬಗ್ಗದವನೂ ಹೊಗಳಿಕೆಗೆ ಹಿಗ್ಗುತ್ತಾನೆ
ಬೀಗರನ್ನು ಬೀಗಿಸುವ ಬೀಗದ ಕೈ
ಹೆಣ್ಣು ಕೊಡುವವರೆಗೆ...ಮಾವನನ್ನು, ಕೊಟ್ಟ ನಂತರ ಅಳಿಯನನ್ನು..
ಮೂರ್ಖ ಬಯಸುವ ಅಗುಳು

-ವಿಶ್ವನಾಥ ಸುಂಕಸಾಳ

ಮಗುವಾಗೋ ಆಸೆ

ಅಮ್ಮ ನಿನ್ನ ಮಡಿಲಲ್ಲಿ
ಮತ್ತೊಮ್ಮೆ ಮಗುವಾಗಿ 
ಮಲಗೋ ಆಸೆ
ನಾ ನಕ್ಕು ನಿನ್ನ ಮುಖದಲ್ಲೂ
ನಗುವನ್ನು ನೋಡೋ ಆಸೆ

ಅಮ್ಮ ನಿನ್ನ ತೋಳಲ್ಲಿ
ಮತ್ತೊಮ್ಮೆ ತೊನೆಯುತ್ತಾ
ಕೂರೋ ಆಸೆ
ಕಾಟವ ಸಹಿಸದೇ
ಹುಸಿ ಪೆಟ್ಟು ಕೊಟ್ಟಿರಲು
ಸುಮ್ಮನೇ ಸಿಟ್ಟನ್ನು 
ಮಾಡೋ ಆಸೆ

ಅಮ್ಮ ನೀ ಕೈ ಹಿಡಿದು ನಡೆದರೂ
ನಾ ತಪ್ಪಿಸಿ ಹೋಗಿ
ಬೀಳೋ ಆಸೆ
ನೋವೇನೂ ಆಗದಿದ್ದರೂ
ನಿನ ಕಂಡು ಸುಮ್ಸುಮ್ನೆ ಅಳುವ ಆಸೆ
ನೀ ನನ್ನ ರಮಿಸುವುದಾ
ಕೇಳೋ ಆಸೆ

ಅಮ್ಮ ನಿನ್ನ ಕೈಯಲ್ಲಿ
ಕೈ ತುತ್ತು ತಿನ್ನೋ ಆಸೆ
ಚಂದಿರನ ತೋರಿಸುತಾ
ನೀ ತುತ್ತು ತಿನಿಸಲು
ನಾ ಹೀಗೆ ಇರುವಾಸೆ
ಮತ್ತೊಮ್ಮೆ ಮಗುವಾಗೋ ಆಸೆ

POSTED BY .... ಪ್ರವೀಣ್ ಭಟ್

ಯೆಂಕ ಓದ ಬಸ್ವಿ ಓದ್ಲು

ಯೆಂಕ ಓದ ಬಸ್ವಿ ಓದ್ಲು ಬೆಟ್ಟದ್ ಮ್ಯಾಕೆ
ಒಂದ್ ಕೊಡದ್ ತುಂಬಾ ನೀರ್ ತತ್ತಾರಕ್ಕೆ
ಯೆಂಕ ಬಿದ್ದ ಕೆಳಾಕ್ಕೆ ಮುರ್ಕೊಂಡ್ ಸೊಂಟಾವ
ಅವ್ನ್ ಹಿಂದೆ ಉರಳ್ಕೊಂಡ್ ಬಿದ್ಲು ನಮ್ ಬಸ್ವವ್ವ
ಯೆಂಕ ಮ್ಯಾಕೆದ್ದು, ಬಸ್ವಿದ್ ಕೈ ಹಿಡ್ದು
"
ನಿಂಗ್ಯೇನಾಗಿಲ್ಲಾಂದ್ರೆ ಕೊಡುವ್ಕೊ ಮೈನ,
ಮತ್ತ ಮ್ಯಾಕ್ ಹೋಗಿ ನೀರ ತತ್ತಾರೋಣ"
ಅಂಗಂದ್ ಬಸ್ವೀನ್ ಮ್ಯಾಕ್ ಎಬ್ಬುಸ್ದ

ಮತ್ತೆ ಬೆಟ್ಟಾ ಹತ್ತಿ ಬಸ್ವಿ ಯೆಂಕ
ಹೋದ್ರು ಕೊಡದ್ ತುಂಬ್ ನೀರ್ ತತ್ತಾರಕ್ಕ

ಇಬ್ರು ತಕ್ಕೋಂಡ್ ಹೋದ್ರು ಕೊಡ, ಅವ್ರ್ ಅಮ್ಮಂಗ್ ಕೊಡಾಕ್ಕ
ಅಮ್ಮಂಗ್ ಖುಷಿ ಆದಾಂಗ, ಎಲ್ರೂ ಕುಣುದ್ರು ತಕತಕ

ರಾಮಯಾಣದ ಸ್ವಾರಸ್ಯ ಸಂಗತಿಗಳು 3

ವನವಾಸಕ್ಕೆ ಹೋದಾಗ ರಾಮನಿಗೆ 27 ವರ್ಷ
     ರಾಮಾಯಣವನ್ನು ಸೂಕ್ಷ್ಮವಾಗಿ ಓದಿದರೆ ಮಾತ್ರ ಇದು ತಿಳಿಯುತ್ತದೆ. ರಾಮ ವನವಾಸಕ್ಕೆ ಹೊರಟಾಗ ಅವನಿಗೆ 27 ವರ್ಷದ ಪ್ರಾಯ. ಇನ್ನೊಂದು ಕುತೂಹಲಕರ ಸಂಗತಿಯೆಂದರೆ, ಕಾಡಿಗೆ ಹೋದಮೇಲೆ ರಾಮ ಅಲ್ಲಿ ಸುಖವಾಗಿರಲೆಂದು ಅಪ್ಪ ದಶರಥ ಅವನಿಗೆ ತುಂಬಾ ಸಂಪತ್ತು ಕೊಟ್ಟು ಕಳಿಸಬೇಕೆಂದು ಬಯಸಿದ್ದ. ಆದರೆ ಅವನು ಖಾಲಿ ಕೈಲಿ ಹೋಗಬೇಕೆಂದು ಕೈಕೇಯಿ ತಾಕೀತು ಮಾಡಿದಳು. ಅದಕ್ಕೂ ಮುನ್ನವೇ, ಅರಮನೆಯಿಂದ ಏನನ್ನೂ ತೆಗೆದುಕೊಂಡು ಹೋಗಬಾರದೆಂದು ರಾಮ ನಿರ್ಧರಿಸಿದ್ದ. ಕೈಕೇಯಿ ಹೇಳುವುದಕ್ಕೂ ಮೊದಲೇ ಸೀತೆಗೆ ನಾರುವಸ್ತ್ರ ಉಟ್ಟುಕೊಳ್ಳಲೂ ಅವನು ಸೂಚಿಸಿದ್ದ.                               ಕೃಪೆ : ಕೆ.ಟಿ.ಆರ್

ಮಕ್ಕಳ ಜನಪ್ರಿಯ ಪಾತ್ರಗಳು (Children Popular Characters)