fly

🍩🥧🍬🧁🍭🥕🍅🥦🍆🥔🌽🥑ʕ·͡ᴥ·ʔ仝ಇತ್ತೀಚಿನ ಸುದ್ದಿ仝ʕ·͡ᴥ·ʔ🥑🌽🥔🍆🥦🍅🥕🍭🧁🍬🥧🍩

𝕤 𝕙𝕚𝕧𝕒𝕜𝕦𝕞𝕒𝕣 . 𝕡 . 𝕟 𝕖𝕘𝕚𝕞𝕒𝕟𝕚 => 𝕤𝕡𝕟𝟛𝟙𝟠𝟟 | ಕನ್ನಡದ ಟೆ ಲಿ ಗ್ರಾ ಮ ಲಿಂಕ್| ಮಕ್ಕಳ ಗೀತೆಗಳು| ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ ☺ ☻ (ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ,ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯಕ್ಕಿಂತ, ಕೂಲಿ ಮಾಡೋದ್ ಲೇಸು.) WELCOME TO 2022

ಲೇಬಲ್‌ಗಳು

ನಿಮಗೆ ಗೋತ್ತೆ ? (105) ಅಮ್ಮ (102) ಸಾಮಾನ್ಯ ಜ್ಞಾನ (72) ಸಂದೇಶ (66) ವಚನ (62) ಚಿತ್ರ - ವಿ-ಚಿತ್ರ (59) ಈ ಕ್ಷಣ (53) ಪದದ ಸುತ್ತ (53) ಕನ್ನಡ ಗೀತೆ (50) ನುಡಿಮುತ್ತು (47) ಮಕ್ಕಳ ಹಾಡು (47) ಪರಿಸರ ತಿಳಿ (42) ತಿಂಗಳ ಟಾಪ್ 3 (40) ವಿಚಿತ್ರವಾದರು ಸತ್ಯ (37) ರಂಗೋಲಿ (34) ಪ್ರವಾಸಿ ತಾಣ (30) ನದಿಗಳು (29) ಪ್ರಾಣಿ / ಪಕ್ಷಿ ಜಗತ್ತು (29) ಶಾಯರಿಗಳು (24) ಹಚ್ಚೆ ಮಾತು (24) ಕೈಯಲ್ಲಿ ಆರೋಗ್ಯ (23) ಬೆನ್-ಹ್ಯಾಮ್ (23) ಸರಳ ಕಲೆ (23) ಹಬ್ಬ (23) ಕಾಲ (22) ನಗೆ ಟಾನಿಕ್ (21) ಗೂಗಲ್(Google) (20) ಚರಿತ್ರೆ (19) ವಿಶೇಷ ದಿನಗಳು (17) ಅಡುಗೆ ಮನೆ (16) ಸಾಧಕರ ಸಾಲು (16) ಕ್ರೀಡೆ (13) ನಕಲು ಪೋಸ್ಟರ್-ಗಳೂ (13) ಸಂಸ್ಥೆ ಸ್ಥಾಪಕರು (12) ಹಾಸ್ಯ ಕಥೆ (11) ಯೋಗಾಸನ (10) ಸಂಶೋಧನೆ (10) ಕನ್ನಡ (9) ಡಾ || ವಿಷ್ಣುವರ್ಧನ (9) ನಗೆ ವ್ಯತ್ಯಾಸ (8) ಪದ ಬಂಧ (7) ಮತದಾನ (7) ಮೆಟ್ಟಿಲುಗಳು (7) ಶಬ್ದಾರ್ಥ (6) ಸಾಂಕ್ರಾಮಿಕ ರೋಗ (6) ಅ-ಅಃ (4) ಕನ್ನಡ ಚಿತ್ರಗಳ ಪಟ್ಟಿ-1934-.. (4) ಕವನ (4) A-Z (3) ಪ್ರಯೋಗ ಶಾಲೆ (3) ಹೊಸ ನೋಟು (3) ಅಳಿಸು(Delete) (2) ಗೌತಮ ಬುದ್ಧ (2) ಶರಣರು (2) ಇತರೆ (1) ಕಂಪ್ಯೂಟರ (1) ಕೊರೊನಾ ಸಾಲು (1) ತಿಂಗಳ ತತ್ವ (1) ಫಲಿತಾಂಶ (1) ಸಂಬಂಧ (1)

ಮಹಿಳೆಯರಿಗೆ ಒಂದೆರಡು ಕಿವಿ ಮಾತುಗಳು

1.     ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯ ಕಸ ಗುಡಿಸಬೇಡಿ.
2.    ರಾತ್ರಿ ಮಲಗುವ ಮುಂಚೆ ಕಸ ಗುಡಿಸಿದ್ದಾದರೆ ಕಸವನ್ನು ಹೊರಗೆ ಹಾಕಬೇಡಿ. ಒಂದು ಗುಡ್ಡೆ ಮಾಡಿ ಇಟ್ಟು ಬೆಳಗಿನಜಾವ ಹೊರಗೆ ಹಾಕಿ.
3.    ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ.
4.    ಸಂಜೆ ದೀಪವನ್ನು ಹೊತ್ತಿಸುವ ಸಮಯದಲ್ಲಿ ಮುಂಬಾಗಿಲನ್ನು ತೆರೆದಿಡಿ. ಹಿಂಬಾಗಿಲ ಕದವನ್ನು ಮುಚ್ಚಿರಿ.
5.    ಪೊರಕೆಯ ತುದಿಭಾಗ (ಗುಡಿಸುವ ಭಾಗ)ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ. ಮೊರ, ಪೊರಕೆಗಳನ್ನು ಕಾಲುಗಳಿಂದ ಒದೆಯಬೇಡಿ.
6.    ಹೊರ ಬಾಗಿಲ ಹೊಸ್ತಿಲಲ್ಲೇ ಪಾದರಕ್ಷೆಗಳನ್ನು ಬಿಡಬಾರದು.
7.     ರಂಗೋಲಿ ಹಾಕದೆ ಬರೀ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಅಶುಭ ಸೂಚಕ.
8.    ಗೃಹದ ಗೋಡೆ, ದೇವರ ಮನೆ ಇತ್ಯಾದಿ ಸ್ಥಳಗಳ ಮೇಲೆ ಶಾಯಿ, ಕಪ್ಪು ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿ ಬರೆಯಬೇಡಿ.
9.    ಮಹಿಳೆಯರು ನಡೆಯುವಾಗ ಕಾಲು ಸಪ್ಪಳ ಸಾಧ್ಯವಾದಷ್ಟು ಕಡಿಮೆ ಇರಲಿ.
10.   ಮಂಗಳವಾರ, ಶುಕ್ರವಾರಗಳಲ್ಲಿ ಅವ್ಯಾಚ ಅಶುಭ ಶಬ್ದಗಳಿಂದ ಮಕ್ಕಳನ್ನು ಬಯ್ಯಬೇಡಿ. ಕದನ-ಜಗಳಗಳಿಗೆ ಅವಕಾಶ ಕೊಡಬೇಡಿ.
11.    ಹರಿದುಹೋದ ಬಟ್ಟೆಗಳನ್ನು ಮನೆಯವರು ಯಾರೂ ತೊಡಬಾರದು.
12.   ಉಗುರುಗಳನ್ನು ವಿಪರೀತ ಬೆಳೆಸಬೇಡಿ ಹಾಗೂ ಉಗುರುಗಳನ್ನು ರಾತ್ರಿಯಲ್ಲೂ, ಶುಕ್ರ, ಮಂಗಳ, ಶನಿವಾರಗಳಲ್ಲೂ ಕತ್ತರಿಸಬಾರದು. ಮನೆಯ ಮಧ್ಯ ಸ್ಥಳಗಳಲ್ಲಿ ಬಿಸಾಡಬಾರದು.
13.   ಧವಸ-ಧಾನ್ಯಗಳನ್ನು ಕಾಲಿನಿಂದ ಒದೆಯಬಾರದು. ಹಾಲು ಚೆಲ್ಲಿದ್ದರೆ ಬಟ್ಟೆಯ ಮೂಲಕ ಒರೆಸಬೇಕು.
14.   ಕೆದರಿದ ಕೂದಲು, ಕುಂಕುಮವಿರದ ಹಣೆ, ಅರಿಶಿನ ಹಚ್ಚದ ಕೈಕಾಲುಗಳು ಮಹಿಳೆಯರಿಗೆ ಅಶುಭ ಸೂಚಕ.
15.   ಚಾಪೆ, ಹಾಸಿಗೆ, ಸೋಫಾ ಮೇಲೆ ಕುಳಿತು ಧ್ಯಾನ, ಪೂಜೆಗಳನ್ನು ಮಾಡಬೇಡಿ. ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳಿ. ಇವುಗಳಲ್ಲಿ ಯಾವುದೇ ಲೋಪ ಕಂಡುಬಂದರೆ ದರಿದ್ರ ಲಕ್ಷ್ಮೀ ತಾಂಡವವಾಡುತ್ತಿದ್ದಾಳೆ ಎಂದರ್ಥ.

ಕೆಂಪು ಚಂದ್ರ ದರ್ಶನ (ಸೆಪ್ಟೆಂಬರ್ ೨೫,೨೦೧೫)

red moon ಗೆ ಚಿತ್ರದ ಫಲಿತಾಂಶ
      ಸರಿಯಾಗಿ ೩೩ ವರ್ಷಗಳ ನಂತರ ಇಂಥದೊಂದು ವಿಶಿಷ್ಟ ಬಗೆಯ ವಿದ್ಯಮಾನ ನಭೋಮಂಡಲದಲ್ಲಿ ಸೆಪ್ಟೆಂಬರ್ ೨೭-೨೮, ೨೦೧೫ ರಂದು ಜರುಗಲಿದೆ. ೨೭ರ ರಾತ್ರಿ ಸೂಪರ್ ಚಂದ್ರ ಗ್ರಹಣ ಸಂಭವಿಸಲಿದ್ದು, ಭೂಮಿಯನ್ನು ಸದಾ ಸುತ್ತುತ್ತಲೇ ಇರುವ ಚಂದ್ರನು ಭುವಿಗೆ ಅತೀ ಹತ್ತಿರದಲ್ಲಿ ಗೋಚರಿಸಲಿದ್ದಾನೆ.
     ಈ ರೀತಿ ಮತ್ತೆ ಗೋಚರಿಸುವುದು ೨೦೩೦ ರಲ್ಲಿ. ೧೯೦೦ ರಿಂದ ಕೇವಲ ೫ ಬಾರಿ ಮಾತ್ರ ಚಂದ್ರ ಇಷ್ಟು ಹತ್ತಿರಕ್ಕೆ ಬಂದಿದ್ದಾನೆ. ವಿಜ್ಞಾನಿಗಳ ಪ್ರಕಾರ, ಅನಂತ ಹುಣ್ಣಿಮೆಯಂದು ಚಂದ್ರ ಶೇ.೧೪ ರಷ್ಟು ದೊಡ್ಡದಾಗಿ ಕಂಗೊಳಿಸಲಿದ್ದು, ಶೇ.೩೦ ರಷ್ಟು ಹೆಚ್ಚು ಬೆಳದಿಂಗಳನ್ನು ಪೃಥ್ವಿಯ ಮೇಲೆ ಪಸರಿಸಲಿದ್ದಾನೆ. ಆದರೆ, ದುರಾದೃಷ್ಟದ ಸಂಗತಿಯೆಂದರೆ, ಈ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಸೆಪ್ಟೆಂಬರ್ ೨೭ ರ ರಾತ್ರಿ ಉತ್ತರ ಮತ್ತು ದಕ್ಷಿಣ ಅಮೆರಿಕ, ಯುರೋಪ್, ಆಫ್ರಿಕಾ, ಏಷ್ಯಾದ ಪಶ್ಚಿಮ ಭಾಗಗಳಲ್ಲಿ ಮತ್ತು ಪೆಸಿಫಿಕ್ ಪೂರ್ವ ಭಾಗದಲ್ಲಿ ಸಂಪೂರ್ಣ ಚಂದ್ರ ಗ್ರಹಣ ಗೋಚರಿಸಲಿದೆ.
      ೨೮ ರ ಮುಂಜಾವಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಇರಾನ್ ಪೂರ್ವ ಭಾಗದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. ಒಟ್ಟು ೧ ಗಂಟೆ ೧೨ ನಿಮಿಷಗಳ ಕಾಲ ಚಂದ್ರನ ಮೇಲೆ ಭೂಮಿಯ ನೆರಳು ಆವರಿಸಿಕೊಳ್ಳಲಿದೆ. ೧೦.೧೧ ಕ್ಕೆ ಗ್ರಹಣ ಆರಂಭವಾಗಲಿದ್ದು, ೧೦.೪೭ ಕ್ಕೆ ಸಂಪೂರ್ಣ ಗ್ರಹಣ ಸಂಭವಿಸಲಿದೆ.
ಕೃಪೆ : ವನ್ ಇಂಡಿಯಾ

ಪ್ರೀತಿಯೆಂಬ ಕಹಿ ನೆನಪು

 ಬೇಡವೆಂದರೂ ಮತ್ತೆ ಮತ್ತೆ ಚುಚ್ಚಿ ಕಾಡಿಸಿ,
 ಪೀಡಿಸಿ, ನೋಯಿಸುವುದು  
ಪ್ರೀತಿಯೆಂಬ ಕಹಿ ನೆನಪುಗಳು ಮಾತ್ರ.

ಅಮುಗೆ ರಾಯಮ್ಮ

ಗಣೇಶ ಚತುರ್ಥಿ

 s
           ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಪುರಾಣದಲ್ಲಿ

 • ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವ ವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ. ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತಿ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು.
 • ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ. ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು.
 • ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಮಹಿಮೆಯ ಅರಿವು ಉಂಟಾಗದೇ ಅವನ ರೂಪವನ್ನು ಹಾಸ್ಯಮಾಡುವ ದುರ್ಬುದ್ಧಿಯುಂಟಾಗುತ್ತದೆ.

ಗಣಪತಿ ಪೂಜೆ (ಕೆಲವು ಮಾಹಿತಿಗಳು)

ಗಣಾನಾಂ ತ್ವಾ ಗಣಪತಿಂ ಹವಾಮಹೇ, ಕವಿಂ ಕವೀನಾಂ ಉಪಮಶ್ರಮವಸ್ತಮಂ|
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನ:ಶೃಣ್ವನ್ ಊತಿಭಿ: ಸೀದ ಸಾಧನಂ||
(ಯಜುರ್ವೇದ ಸಂಹಿತೆ)
ತ್ವಮೇವ ಕೇವಲಂ
ಕರ್ತಾಸಿ ತ್ವಮೇವ ಕೇವಲಂ
ಧರ್ತಾಸಿ ತ್ವಮೇವ ಕೇವಲಂ

ಹರ್ತಾಸಿ ತ್ವಮೇವ ಸರ್ವಂ ಖಲ್ವಿದಂ ಬ್ರಹ್ಮಾಸಿ ತ್ವಂ ಸಾಕ್ಷಾದಾತ್ಮಾಸಿ ಆತ್ಮಂ ತ್ವಂ ಬ್ರಹ್ಮಾ ವಿಷ್ಣುಸ್ತ್ವಂ ರುದ್ರಸ್ತ್ವಂ ಇಂದ್ರಸ್ತ್ವಂ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ ಚಂದ್ರಮಾಸ್ತ್ವಂ ಬ್ರಹ್ಮಭೂರ್ಭುವಸ್ಸುವರೋಮ್ - 'ಗಣೇಶಾಥರ್ವಶೀರ್ಷ'ದಲ್ಲಿ ಆತನನ್ನು ಹೀಗೆ ವರ್ಣಿಸಲಾಗಿದೆ.

ಗಣೇಶನ ಹುಟ್ಟು

 • ಯಾಜ್ಞವಲ್ಕ್ಯ ಸ್ಮೃತಿಯ ಪ್ರಕಾರ ಅಂಬಿಕೆಯು ಗಣಪತಿಯ ತಾಯಿ. ಇನ್ನೊಂದು ಕಥೆಯ ಪ್ರಕಾರ ಆತನು ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು.
 • ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ. ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.

ಗಣೇಶನ ಹಬ್ಬ

 • ಮೊದಲ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ಮಾರನೆ ದಿನವೇ ಗಣೇಶನ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ.
 • ಸಾಮಾನ್ಯವಾಗಿ ಈ ಹಬ್ಬ ಭಾದ್ರಪದ ಚೌತಿಯ ದಿನದಂದು ಬರುತ್ತದೆ. ಆ ದಿನ ಯಾರೂ ಚಂದ್ರನನ್ನು ನೋಡಬಾರದಂತೆ. ಗಣೇಶ ಭೂಲೋಕಕ್ಕೆ ಬಂದ ದಿನವನ್ನು ವಾರಗಟ್ಟಲೆ ಸಂಭ್ರಮದಿಂದ ಆಚರಿಸುವುದು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಅಂದು ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ.

ಗಣೇಶನ ಹಬ್ಬದ ವೈಶಿಷ್ಟ್ಯತೆಗಳು

 • ನಮ್ಮ ದೇಶದಲ್ಲಿ ಗಣಪತಿಯ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆಯನ್ನು ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನೂ ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದೂ ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ಅದಲ್ಲದೇ ಹೊಲಗಳಲ್ಲಿ ನಿಲ್ಲಿಸುವ ಬೆರ್ಚಪ್ಪನಿಗೂ ಗಣಪತಿಯಂತೆ ಡೊಳ್ಳು ಹೊಟ್ಟೆಯನ್ನು ಮಾಡಿರುತ್ತಾರೆ.
 • ಇದಲ್ಲದೇ ಗಣಪತಿಯನ್ನು ಬರ್ಮಾ, ಮಲೇಶಿಯಾ, ಇಂಡೋನೇಶಿಯಾ, ಚೀನಾ, ಸುಮಾತ್ರಾ, ಜಾವಾ, ಜಾಪಾನ್ ಮತ್ತಿತರ ದೇಶಗಳಲ್ಲಿಯೂ ಪೂಜಿಸುತ್ತಿದ್ದರು. ವಿಜ್ಞಾನಿಗಳ ಸೃಷ್ಟಿಯ ವಿಕಾಸಕ್ಕೂ ನಮ್ಮ ಪುರಾಣಗಳಲ್ಲಿ ಹೇಳುವ ದಶಾವತಾರ ಕಥೆಗಳಿಗೂ ಹೋಲಿಕೆಯುಂಟು. ಮೊದಲಿಗೆ ನೀರಿನಲ್ಲಿರುವ ಅವತಾರಗಳಾದರೆ, ನಂತರ ಅರ್ಧ ಪ್ರಾಣಿ ಅರ್ಧ ಮನುಷ್ಯ. ಇದರಲ್ಲಿ ಗಣಪತಿಯೂ ಒಂದಾಗಿದೆ. ಗ್ರೀಕರ ಕಲ್ಪನೆಯಲ್ಲಿಯೂ ಇಂತಹ ಉದಾಹರಣೆಗಳಿವೆ.
 • ಗಣಪತಿಯ ಮೂರ್ತಿಯ ಪೂಜೆಗೆ ಮೊದಲು ಸಗಣಿಯಿಂದ ಮಾಡಿ ಅದರ ಮೇಲೆ ಗರಿಕೆಯನ್ನಿಟ್ಟು ಅದನ್ನು ಪಿಳ್ಳೇರಾಯನೆಂದು ಕರೆದು ಅದಕ್ಕೆ ಪೂಜಿಸುವರು. ಮಿಕ್ಕೆಲ್ಲ ದೇವರುಗಳಂತೆ ಇದಕ್ಕೂ ಷೋಡಶಾಂಗ ಪೂಜಾವಿಧಾನದ ರೀತ್ಯಾ ಪೂಜಿಸುವರು. ಪೂಜೆಯ ನಂತರ ಹತ್ತುದಿನಗಳ ವರೆವಿಗೆ ನಿತ್ಯ ಪೂಜೆಯನ್ನು ಮಾಡಿ ೧೦ನೆಯ ದಿನ ಅಂದರೆ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡುವರು.
 • ದೇಶದ ವಿವಿದೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು. ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
 • "ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್"                              ಕೃಪೆ:ವಿಕೀಪಿಡಿಯ

ನಿದ್ದೆ ಮಾತು



 • ಕನಸಿನಲ್ಲಿನ ಕನವರಿಕೆ
 • ಕೆಲವು ಗಂಡಸರಿಗೆ ಹೆಂಡತಿಯೆದುರು ಮಾತನಾಡಲು ಇರುವ ಏಕೈಕ ಅವಕಾಶ
 • ಮನಸಿನಲ್ಲಿ ತಿಂದ ಮಂಡಿಗೆಗಳನ್ನೆಲ್ಲ ಕನಸಿನಲ್ಲಿ ಕಕ್ಕುವ ಮಾಧ್ಯಮ
 • ಮನಸಿನ ಕಿಲುಬುಗಳನ್ನೆಲ್ಲ ಹಲುಬುವ ಮೂಲಕ ತೊಳೆದುಕೊಳ್ಳುವಿಕೆ
 • ಸದನದಲ್ಲಿನ ಕೆಲವರ ಮಾತುಗಳನ್ನು ಕೇಳಿದರೆ ಹೀಗೆಯೇ ಅನಿಸುವುದು
 • ನಿದ್ರಾಂಗನೆಯೊಡನೆಯ ಸಲ್ಲಾಪ
 • ಸ್ವಪ್ನ ಭಾಷಣ
 • ವಿದ್ಯಾರ್ಥಿಗಳೆಲ್ಲ ನಿದ್ರೆಯಲ್ಲಿರುವಾಗ ನಡೆಯುವ ಪಾಠ
 • ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿರೇಕ ಬಳಕೆ
 • ವಿಶ್ರಾಂತಿ ಮತ್ತು ಕೆಲಸ ಏಕಕಾಲಕ್ಕೆ ನಡೆಯುವುದಕ್ಕೊಂದು ಉದಾಹರಣೆ
 • ವಾಚಾಳಿಯ ಅವಿಶ್ರಾಂತ ವಾಚಿಕ ಶ್ರಮ
 • ಅಕಸ್ಮಾತ್ ಸತ್ಯ ಹೇಳಿಬಿಡುವ ಅಪಾಯಕಾರಿ ಸಂದರ್ಭ
 • ಶ್ರೋತೃ ವರ್ಗದ ಅಪೇಕ್ಷೆಯಿಲ್ಲದ ಮಾತು
 • ಪ್ರಜ್ಞಾಹೀನ ನುಡಿಗಳು

-ವಿಶ್ವನಾಥ ಸುಂಕಸಾಳ

ಅಪ್ಪ ನೀನಾಗಬೇಡ ದಪ್ಪ

ಅಪ್ಪ ಅಪ್ಪ ಅಪ್ಪ
ನೀನಾದೆ ತುಂಬಾ ದಪ್ಪ
ಇನ್ನಾದರೂ ಬಿಡು
ತಿನ್ನೋದನ್ನ ತುಪ್ಪ

ಬೆಳಿಗ್ಗೆ ಎದ್ದು ಓಡು
ಹೊಟ್ಟೆ ಕರಗುತ್ತೆ ನೋಡು
ನಿತ್ಯ ನಡೆದಾಡು
ಸ್ಕೂಟರ್‌ನ್ನ ಷೆಡ್ಡಲ್ಲಿಡು

ತಿನ್ಬೇಡ ನಾನ್ ವೆಜ್ಜು
ವೆಜ್ಜಲ್ಲೆ ಅಡುಗೆ ಸಜ್ಜು
ಅಮ್ಮನ ಕೈಯ ಗೊಜ್ಜು
ಕರಗುತ್ತೆ ಮೈಯ ಬೊಜ್ಜು

ನಿನ್ ಕೆಲ್ಸ ನೀನೆ ಮಾಡು
ಆನಂದ ಆಮೇಲೆ ನೋಡು
ಗಾಂಧಿ ಹೇಳಿದ ಮಾತು
ಒಂದೊಂದು ಒಳ್ಳೆ ಮುತ್ತು.

*****
ಕೀಲಿಕರಣ: ಕಿಶೋರ್‍ ಚಂದ್ರ

ನಮ್ಮ ಮನೆಯ ಸಣ್ಣ ಪಾಪ

   ನಮ್ಮ ಮನೆಲೊಂದು ಪಾಪನಿರುವುದು
   
ಎತ್ತಿಕೊಳಲು ಹೋದರದಕೆ ಕೋಪ ಬರುವುದು ||||

   
ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು
   
ಕಿರುಚಿಕೊಂಡು ತನ್ನ ಮೈಯ್ಯ ಪರಚಿಕೊಳುವುದು ||||
   ಮೈಯ್ಯ ಪರಚಿಕೊಂಡು ಪಾಪ ಅತ್ತು ಕರೆವುದು,
   
ಅಳಲು ಕಣ್ಣಿನಿಂದ ಮುತ್ತು ಸುರಿವುದು , ||||
   ಪಾಪ ಅತ್ತರಮ್ಮ ತಾನೂ ಅತ್ತು ಬಿಡವುದು
   
ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು || ||
   ಪಾಪ ಪಟ್ಟು ಹಿಡಿದ ಹಟವು ಸಾರ್ಥ ವಾಯಿತು
   
ಪರಚಿ ಪರಚಿ ಅಳುವುದೆಲ್ಲ ಅರ್ಥವಾಯಿತು ||||