ಗುರುವಾರ, ಸೆಪ್ಟೆಂಬರ್ 24, 2015

ನಿದ್ದೆ ಮಾತು • ಕನಸಿನಲ್ಲಿನ ಕನವರಿಕೆ
 • ಕೆಲವು ಗಂಡಸರಿಗೆ ಹೆಂಡತಿಯೆದುರು ಮಾತನಾಡಲು ಇರುವ ಏಕೈಕ ಅವಕಾಶ
 • ಮನಸಿನಲ್ಲಿ ತಿಂದ ಮಂಡಿಗೆಗಳನ್ನೆಲ್ಲ ಕನಸಿನಲ್ಲಿ ಕಕ್ಕುವ ಮಾಧ್ಯಮ
 • ಮನಸಿನ ಕಿಲುಬುಗಳನ್ನೆಲ್ಲ ಹಲುಬುವ ಮೂಲಕ ತೊಳೆದುಕೊಳ್ಳುವಿಕೆ
 • ಸದನದಲ್ಲಿನ ಕೆಲವರ ಮಾತುಗಳನ್ನು ಕೇಳಿದರೆ ಹೀಗೆಯೇ ಅನಿಸುವುದು
 • ನಿದ್ರಾಂಗನೆಯೊಡನೆಯ ಸಲ್ಲಾಪ
 • ಸ್ವಪ್ನ ಭಾಷಣ
 • ವಿದ್ಯಾರ್ಥಿಗಳೆಲ್ಲ ನಿದ್ರೆಯಲ್ಲಿರುವಾಗ ನಡೆಯುವ ಪಾಠ
 • ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿರೇಕ ಬಳಕೆ
 • ವಿಶ್ರಾಂತಿ ಮತ್ತು ಕೆಲಸ ಏಕಕಾಲಕ್ಕೆ ನಡೆಯುವುದಕ್ಕೊಂದು ಉದಾಹರಣೆ
 • ವಾಚಾಳಿಯ ಅವಿಶ್ರಾಂತ ವಾಚಿಕ ಶ್ರಮ
 • ಅಕಸ್ಮಾತ್ ಸತ್ಯ ಹೇಳಿಬಿಡುವ ಅಪಾಯಕಾರಿ ಸಂದರ್ಭ
 • ಶ್ರೋತೃ ವರ್ಗದ ಅಪೇಕ್ಷೆಯಿಲ್ಲದ ಮಾತು
 • ಪ್ರಜ್ಞಾಹೀನ ನುಡಿಗಳು

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: