ಸೋಮವಾರ, ಸೆಪ್ಟೆಂಬರ್ 28, 2015

ಕೆಂಪು ಚಂದ್ರ ದರ್ಶನ (ಸೆಪ್ಟೆಂಬರ್ ೨೫,೨೦೧೫)

red moon ಗೆ ಚಿತ್ರದ ಫಲಿತಾಂಶ
      ಸರಿಯಾಗಿ ೩೩ ವರ್ಷಗಳ ನಂತರ ಇಂಥದೊಂದು ವಿಶಿಷ್ಟ ಬಗೆಯ ವಿದ್ಯಮಾನ ನಭೋಮಂಡಲದಲ್ಲಿ ಸೆಪ್ಟೆಂಬರ್ ೨೭-೨೮, ೨೦೧೫ ರಂದು ಜರುಗಲಿದೆ. ೨೭ರ ರಾತ್ರಿ ಸೂಪರ್ ಚಂದ್ರ ಗ್ರಹಣ ಸಂಭವಿಸಲಿದ್ದು, ಭೂಮಿಯನ್ನು ಸದಾ ಸುತ್ತುತ್ತಲೇ ಇರುವ ಚಂದ್ರನು ಭುವಿಗೆ ಅತೀ ಹತ್ತಿರದಲ್ಲಿ ಗೋಚರಿಸಲಿದ್ದಾನೆ.
     ಈ ರೀತಿ ಮತ್ತೆ ಗೋಚರಿಸುವುದು ೨೦೩೦ ರಲ್ಲಿ. ೧೯೦೦ ರಿಂದ ಕೇವಲ ೫ ಬಾರಿ ಮಾತ್ರ ಚಂದ್ರ ಇಷ್ಟು ಹತ್ತಿರಕ್ಕೆ ಬಂದಿದ್ದಾನೆ. ವಿಜ್ಞಾನಿಗಳ ಪ್ರಕಾರ, ಅನಂತ ಹುಣ್ಣಿಮೆಯಂದು ಚಂದ್ರ ಶೇ.೧೪ ರಷ್ಟು ದೊಡ್ಡದಾಗಿ ಕಂಗೊಳಿಸಲಿದ್ದು, ಶೇ.೩೦ ರಷ್ಟು ಹೆಚ್ಚು ಬೆಳದಿಂಗಳನ್ನು ಪೃಥ್ವಿಯ ಮೇಲೆ ಪಸರಿಸಲಿದ್ದಾನೆ. ಆದರೆ, ದುರಾದೃಷ್ಟದ ಸಂಗತಿಯೆಂದರೆ, ಈ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಸೆಪ್ಟೆಂಬರ್ ೨೭ ರ ರಾತ್ರಿ ಉತ್ತರ ಮತ್ತು ದಕ್ಷಿಣ ಅಮೆರಿಕ, ಯುರೋಪ್, ಆಫ್ರಿಕಾ, ಏಷ್ಯಾದ ಪಶ್ಚಿಮ ಭಾಗಗಳಲ್ಲಿ ಮತ್ತು ಪೆಸಿಫಿಕ್ ಪೂರ್ವ ಭಾಗದಲ್ಲಿ ಸಂಪೂರ್ಣ ಚಂದ್ರ ಗ್ರಹಣ ಗೋಚರಿಸಲಿದೆ.
      ೨೮ ರ ಮುಂಜಾವಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಇರಾನ್ ಪೂರ್ವ ಭಾಗದಲ್ಲಿ ಭಾಗಶಃ ಗ್ರಹಣ ಗೋಚರಿಸಲಿದೆ. ಒಟ್ಟು ೧ ಗಂಟೆ ೧೨ ನಿಮಿಷಗಳ ಕಾಲ ಚಂದ್ರನ ಮೇಲೆ ಭೂಮಿಯ ನೆರಳು ಆವರಿಸಿಕೊಳ್ಳಲಿದೆ. ೧೦.೧೧ ಕ್ಕೆ ಗ್ರಹಣ ಆರಂಭವಾಗಲಿದ್ದು, ೧೦.೪೭ ಕ್ಕೆ ಸಂಪೂರ್ಣ ಗ್ರಹಣ ಸಂಭವಿಸಲಿದೆ.
ಕೃಪೆ : ವನ್ ಇಂಡಿಯಾ

ಕಾಮೆಂಟ್‌ಗಳಿಲ್ಲ: