1. ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯ ಕಸ ಗುಡಿಸಬೇಡಿ.
2. ರಾತ್ರಿ ಮಲಗುವ ಮುಂಚೆ ಕಸ ಗುಡಿಸಿದ್ದಾದರೆ ಕಸವನ್ನು ಹೊರಗೆ ಹಾಕಬೇಡಿ. ಒಂದು ಗುಡ್ಡೆ ಮಾಡಿ ಇಟ್ಟು ಬೆಳಗಿನಜಾವ ಹೊರಗೆ ಹಾಕಿ.
3. ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ.
4. ಸಂಜೆ ದೀಪವನ್ನು ಹೊತ್ತಿಸುವ ಸಮಯದಲ್ಲಿ ಮುಂಬಾಗಿಲನ್ನು ತೆರೆದಿಡಿ. ಹಿಂಬಾಗಿಲ ಕದವನ್ನು ಮುಚ್ಚಿರಿ.
5. ಪೊರಕೆಯ ತುದಿಭಾಗ (ಗುಡಿಸುವ ಭಾಗ)ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ. ಮೊರ, ಪೊರಕೆಗಳನ್ನು ಕಾಲುಗಳಿಂದ ಒದೆಯಬೇಡಿ.
6. ಹೊರ ಬಾಗಿಲ ಹೊಸ್ತಿಲಲ್ಲೇ ಪಾದರಕ್ಷೆಗಳನ್ನು ಬಿಡಬಾರದು.
7. ರಂಗೋಲಿ ಹಾಕದೆ ಬರೀ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಅಶುಭ ಸೂಚಕ.
8. ಗೃಹದ ಗೋಡೆ, ದೇವರ ಮನೆ ಇತ್ಯಾದಿ ಸ್ಥಳಗಳ ಮೇಲೆ ಶಾಯಿ, ಕಪ್ಪು ಬಣ್ಣ ಇತ್ಯಾದಿಗಳಿಂದ ವಿಕಾರ ಆಕೃತಿ ಬರೆಯಬೇಡಿ.
9. ಮಹಿಳೆಯರು ನಡೆಯುವಾಗ ಕಾಲು ಸಪ್ಪಳ ಸಾಧ್ಯವಾದಷ್ಟು ಕಡಿಮೆ ಇರಲಿ.
10. ಮಂಗಳವಾರ, ಶುಕ್ರವಾರಗಳಲ್ಲಿ ಅವ್ಯಾಚ ಅಶುಭ ಶಬ್ದಗಳಿಂದ ಮಕ್ಕಳನ್ನು ಬಯ್ಯಬೇಡಿ. ಕದನ-ಜಗಳಗಳಿಗೆ ಅವಕಾಶ ಕೊಡಬೇಡಿ.
11. ಹರಿದುಹೋದ ಬಟ್ಟೆಗಳನ್ನು ಮನೆಯವರು ಯಾರೂ ತೊಡಬಾರದು.
12. ಉಗುರುಗಳನ್ನು ವಿಪರೀತ ಬೆಳೆಸಬೇಡಿ ಹಾಗೂ ಉಗುರುಗಳನ್ನು ರಾತ್ರಿಯಲ್ಲೂ, ಶುಕ್ರ, ಮಂಗಳ, ಶನಿವಾರಗಳಲ್ಲೂ ಕತ್ತರಿಸಬಾರದು. ಮನೆಯ ಮಧ್ಯ ಸ್ಥಳಗಳಲ್ಲಿ ಬಿಸಾಡಬಾರದು.
13. ಧವಸ-ಧಾನ್ಯಗಳನ್ನು ಕಾಲಿನಿಂದ ಒದೆಯಬಾರದು. ಹಾಲು ಚೆಲ್ಲಿದ್ದರೆ ಬಟ್ಟೆಯ ಮೂಲಕ ಒರೆಸಬೇಕು.
14. ಕೆದರಿದ ಕೂದಲು, ಕುಂಕುಮವಿರದ ಹಣೆ, ಅರಿಶಿನ ಹಚ್ಚದ ಕೈಕಾಲುಗಳು ಮಹಿಳೆಯರಿಗೆ ಅಶುಭ ಸೂಚಕ.
15. ಚಾಪೆ, ಹಾಸಿಗೆ, ಸೋಫಾ ಮೇಲೆ ಕುಳಿತು ಧ್ಯಾನ, ಪೂಜೆಗಳನ್ನು ಮಾಡಬೇಡಿ. ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದೇಳಿ. ಇವುಗಳಲ್ಲಿ ಯಾವುದೇ ಲೋಪ ಕಂಡುಬಂದರೆ ದರಿದ್ರ ಲಕ್ಷ್ಮೀ ತಾಂಡವವಾಡುತ್ತಿದ್ದಾಳೆ ಎಂದರ್ಥ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.