ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಪದದ ಸುತ್ತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪದದ ಸುತ್ತ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಜುಲೈ 13, 2026

ಬಾನಲ್ಲೆ ಮತ್ತು ಬಾ ನಲ್ಲೆ - ವ್ಯತ್ಯಾಸ ಓದಿ ತಿಳಿ

  •  ಸ್ವಲ್ಪ ಸಮಯದ ಹಿಂದೆ ಬಾನಲ್ಲೆ (ಆಕಾಶದಲ್ಲೆ) ಹಕ್ಕಿ ಹಾರುತ್ತಿತ್ತು.
  •  ಬಾನಲ್ಲಿ(ಆಕಾಶ) ಹಕ್ಕಿ ಹಾರುವುದನ್ನು ನೋಡು ಬಾ ನಲ್ಲೆ (ಬಾ ಹೆಂಡತಿ)
ಬಾನಲ್ಲೆ ಮತ್ತು ಬಾ ನಲ್ಲೆ ಈ ಎರಡು ಪದಗಳು ಒಂದೇ ರೀತಿಯಾಗಿ ಕಂಡರೂ ಸ್ಥಳ ಅಂತರಗಳಿಂದ ಈ ರೀತಿ ಅರ್ಥ ದಿಂದ ಅಪಾರ್ಥವಾಗುಬಹುದು ಇಲ್ಲವೇ ಅಪಹಾಸ್ಯವಾಗಬಹುದು. ಆದ್ದರಿಂದ ಇನ್ನುಮುಂದೆ ಸರಿಯಾಗಿ, ಜಾಗರೂಕತೆಯಿಂದ ನಮ್ಮ ಕನ್ನಡವನ್ನು ಬಳಕೆ ಮಾಡಿ... 

ಮಂಗಳವಾರ, ಸೆಪ್ಟೆಂಬರ್ 24, 2019

ಪ್ರತಿಫಲ

  • ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಿಂದುಂಟಾಗುವ ಫಲ
  • ಕಲ್ಲು ಹೊಡೆದಿದ್ದ ಕೈ ಪ್ರತಿಯಾಗಿ ಉದುರಿದ ಹಣ್ಣು
  • ಮಾಡಿದ್ದುಣ್ಣುವ ಮಹರಾಯರ ಮಹತ್ಕಾರ್ಯಗಳ ಫಲ
  • ಗೋಡೆಗೆ ಬಡಿದ ಚೆಂಡು
  • ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೇ ಕರ್ಮ ಮಾಡು ಎಂದು ಕೃಷ್ಣ ಅರ್ಜುನನಿಗೆ ಹೇಳಿರುವುದರಿಂದ ನಾವಿದಕ್ಕೆ ತಲೆಕೆಡಿಸಿಕೊಂಡಿಲ್ಲ
  • ಕಲಿಯುಗದಲ್ಲಿ ಪ್ರವೃತ್ತಿಯ ಪ್ರೇರಕವೇ ಇದು
  • ಪ್ರತಿಫಲಾಪೇಕ್ಷೆಯಿಲ್ಲದೇ ಯಾರಾದರೂ ಉಪಕಾರ ಮಾಡಿದರೆ ಅದು ಅಕಸ್ಮಾತ್ತಾಗಿ ಆಗಿರುವ ಸಂಭವವೂ ಇದೆ
  • ಇದರ ಲಭ್ಯತೆಯನ್ನನುಸರಿಸಿ ಕಾರ್ಯ ಮಾಡಬೇಕೋ ಬೇಡವೋ ಎಂಬುದರ ನಿರ್ಣಯವಾಗುತ್ತದೆ.
  • ಎಷ್ಟು ಸಿಗುತ್ತೆ ? ಎಂದರೆ ಇದೇ ಅರ್ಥ
  • ಕೆಲಸ ಮಾಡದಿದ್ದರೂ ಫಲ ಸಿಗುತ್ತೆ ಸರ್ಕಾರಿ ಅಧಿಕಾರಿಗಳಿಗೆ
  • ದೇವರಿಗೆ ನೈವೇದ್ಯ ಮಾಡಿದ್ದರ ಫಲವೆಂದರೆ, ಅದನ್ನು ನಾವು ಮತ್ತೆ ನೈವೇದ್ಯ ಮಾಡುವುದೇ
  • ಪ್ರತಿಫಲಕ್ಕಾಗಿ ಕಾಯುತ್ತಾ 'ಕುಳಿತುಕೊಳ್ಳುವುದಕ್ಕಿಂತ' ಕಾಯುತ್ತಾ ಮಲಗುವುದು ಹೆಚ್ಚು ವಾಸಿ
  • ಲಕ್ಷಗಟ್ಟಲೆ ದಾನ ಕೊಟ್ಟವಗೆ ಸನ್ಮಾನ ಮಾಡುವುದೇ ಅತನಿಗೆ ಪ್ರತಿಫಲ
                  • ⇝-ವಿಶ್ವನಾಥ ಸುಂಕಸಾಳ

ಶನಿವಾರ, ಆಗಸ್ಟ್ 24, 2019

ಕಾವಿ

ಮನದ ಕಾವು ಆರಿದ ಮೇಲೆ ತೊಡುವ ಬಟ್ಟೆ
ಕಾಷಾಯ ವೇಷ
ಕೋವಿ ಯುದ್ಧಕ್ಕೆ; ಕಾವಿ ಶಾಂತಿಗೆ
ತ್ಯಾಗದ ಪ್ರತೀಕವಿದು
ಯಾವ ಕಾವಿಯೊಳಗೆ ಯಾವ ಹಾವಿದೆಯೊ ಬಲ್ಲವರಾರು?
ಕಾವಿ ತೊಟ್ಟವರೆಲ್ಲ ತ್ಯಾಗಿಗಳಲ್ಲ, ನಿತ್ಯಾನಂದ ಸ್ವಾಮಿಯೂ ಆಗಿರಬಹುದು
ಕಾವಿ ತೊಟ್ಟರೇನು ಬಂತು, ಮನದ ಕಾವು ತ್ಯಜಿಸದಿದ್ದರೆ?
ಭಾರತದಲ್ಲಿ ಇದಕ್ಕೆ ಒಳ್ಳೆ ಮಾರ್ಕೆಟ್ ಇದೆ
ಸರ್ವವನ್ನೂ ತ್ಯಜಿಸಿದವನು ಧರಿಸುವಂಥದ್ದು. ಆದರೆ ಇದನ್ನು ತೊಟ್ಟ ಮೇಲೆ ಎಲ್ಲವೂ ಅಂಟಿಕೊಳ್ಳುತ್ತದೆ
ವೋಟ್ ಬ್ಯಾಂಕ್ ಶೇಖರಣಾ ಮಾಧ್ಯಮ
ಕಾವಿ ಕಂಡಲ್ಲಿ ಅಡ್ಡಬೀಳುವುದರಿಂದ ರಾಜಕಾರಣಿಗಂತೂ ಲಾಭವಿದೆ
ಉದರ ನಿಮಿತ್ತ ಕಾವಿ ತೊಟ್ಟವರು ಬೇರೆಯವರನ್ನು ಬಾವಿಗೆ ಬೀಳಿಸುತ್ತಾರೆ
ಅಧ್ಯಾತ್ಮದತ್ತ ಹೊರಳಿದವರ ಗಣವೇಷ
ಇದು ತುಂಬ ಸೋವಿ
ಕಾಮಿಗಳು ಅವಿತುಕೊಳ್ಳುವ ಸುರಕ್ಷಿತ ಅಡಗು ತಾಣ

-ವಿಶ್ವನಾಥ ಸುಂಕಸಾಳ

ಬುಧವಾರ, ಜುಲೈ 24, 2019

ಅಂಗೀಕಾರ


  • ಅರ್ಧಾಂಗಿ ಹೇಳಿದ ಮಾತುಗಳಿಗೆಲ್ಲ ಬೀಳುವ ಗಂಡನ ಮುದ್ರೆ

  •   ಒಪ್ಪಿಗೆಯ ಅಪ್ಪುಗೆಯನ್ನು ಬಣ್ಣಿಸುವ ಬಗೆ

  • ಮತ ಬೇರೆಯಾದರೂ ಮತಿ ಒಂದೇ ಆದರೆ ಸಿಗುವ ಸಹಮತಿ

  •  ಸುಮತಿ ಸುಮ್ಮನೇ ಬಂದು ಪತಿಯಲ್ಲಿ ಕೇಳುವ ಸಮ್ಮತಿ

  • ಅಡ್ಡಿಯಿಲ್ಲ ಎನ್ನುವ ಮೂಲಕ ಮಕ್ಕಳಿಗೆ ಅಂಗಿ-ಚೆಡ್ಡಿಗಳನ್ನು ಖರೀದಿಸಲು ಸೂಚಿಸುವ ಬೆಂಬಲ

ಕೃಪೆ: ವಿಶ್ವನಾಥ ಸು೦ಕಸಾಳ 


ಭಾನುವಾರ, ಜೂನ್ 23, 2019

ನೆಪ


  •  ಮುಖ್ಯವಾದದ್ದು ನೆನಪಾಗದಿದ್ದಾಗ ಹೇಳಲು ನೆನಪಾಗುವ೦ಥದ್ದು 

  •  ರಜಾಚೀಟಿಯ ಕೇ೦ದ್ರಬಿ೦ದು 

  •  ಪ್ರತಿ ಸಲ ಒ೦ದ ಲ್ಲಾ ಒ೦ದು ನೆಪ ಹೇಳುವವನನ್ನು 'ನೆಪಾಲಿ' ಎನ್ನಬಹುದು 

  •  ಬಾಸ್ ತಾಪ ತಡೆಯುವ ತಾತ್ಕಾಲಿಕ ಅಗ್ನಿಶಾಮಕ 

  •  ನೆಪ ಹೇಳಿ ಪೋಲಿ ಅಲೆಯುವವ - ನೆಪೋಲಿಯನ್

ಶುಕ್ರವಾರ, ಮೇ 24, 2019

ಕನಿಕರ


  •  ಸಿ೦ಪ ಲ್ಲಾ ಗಿ ಹೇಳಬೇಕೆ೦ದರೆ ಇದು ಸಿ೦ಪಥಿ

  •  "ಪಾಪಪ್ರಜ್ಞೆ' ಅಥಾ೯ತ್ ಅಯ್ಯೋ ಪಾಪ ಎನ್ನುವ ಪ್ರಜ್ಞೆ

  • ಕೈ ಹಿಡಿದು ನಡೆಸೆನ್ನನು ಎ೦ದವರಿಗೆ ಕೈ ಕೊಡದೇ 'ಕರ' ಪಿಡಿವ ಬುದ್ಧಿ

  •  ದಯನೀಯ ಸ್ಥಿತಿಗೆ ತಲುಪಿದ ದೀನನ ಬಗೆಗಿನ ದಯೆ

  • ಕರುಳು 'ಚುರಕ…' ಎನ್ನಲು ಇದೇ ಕಾರಣ


ಕೃಪೆ: ವಿಶ್ವನಾಥ ಸು೦ಕಸಾಳ 

ಭಾನುವಾರ, ಮಾರ್ಚ್ 24, 2019

ಸೋವಿ


 * ದರದರನೇ ಕೆಳಗಿಳಿದು ಬ೦ದಾಗ ದರದ ಲ್ಲಾ ಗುವ ಸದರವೇ ಸೋವಿ 
  • ಹೆಚ್ಚು ಹೆಚ್ಚು ಖರೀದಿಯ ಉತ್ಸಾಹವನ್ನು ತೆರೆಯುವ ಚಾವಿ
  •  
  •  ಜಾಸ್ತೀ ವೇಟು, ಕಮ್ಮಿ ರೇಟು ಆದಾಗ ಕೊಡುವ ಹೆಸರು
  •  
  •  ಮಾಲು ಜಾಸ್ತೀಯಾಗಿ ಬೆಲೆಯೇ ನಾಸ್ತೀಯಾದಾಗಿನ ವಸ್ತು-ಸ್ಥಿತಿ 

  •  ಕಡಿಮೆ ದರದ ಎತ್ತುಗಳಿಗೆ ಏನೆನ್ನಬಹುದು

ಭಾನುವಾರ, ಫೆಬ್ರವರಿ 24, 2019

ಉಪ್ಪು

ಪ್ರಮಾಣದಲ್ಲಿ ವ್ಯತ್ಯಾಸವಾದಾಗ ಇದರ ಮಹತ್ವದ ಅರಿವಾಗುತ್ತದೆ
ಉಪ್ಪು ತಿಂದವನ ಮುಖವು ಬೆಪ್ಪು ತಕ್ಕಡಿಯಂಥಕ್ಕು
ಸಮುದ್ರದಲ್ಲಿ ದೊರೆಯುವುದರಿಂದ ಇದು ಮೀನಿನ ಬೆವರಿನಿಂದ ಉಂಟಾಗುವುದೆಂದು ಊಹಿಸಬಹುದು
ಯಾವ ಕಾಲಕ್ಕೂ ಸಪ್ಪೆಯೆನಿಸದ ಪದಾರ್ಥ
ನಮ್ಮ ದೇಹದ ಕಣ ಕಣದಲ್ಲೂ ಉಪ್ಪೇ ಇದೆ. ಬೆವರಿದಾಗ ತಿಳಿಯುತ್ತದೆ
ಉಪ್ಪಿನಲ್ಲಿ ಮೋಸ ಮಾಡುವ ದ್ರೋಹಕ್ಕೆ ಉಪ್ಪಾಯ ಎನ್ನಬಹುದು
ತಪ್ಪು ಮಾಡಿದರೆ ಒಪ್ಪಿಕೊಳ್ಳಬೇಕು,ಅಥವಾ ಉಪ್ಪು ಕೊಳ್ಳಬೇಕು
ಉಪ್ಪಿಗೆ ಪೆಪ್ಪರ್ ಬೆರೆಸಿ ತಿಂದರೆ ನೀರೂರಿಸುತ್ತೆ
ಉಪ್ಪಿಗಿಂಥ ರುಚಿಯಿಲ್ಲ ಎನ್ನುವವರು ಒಮ್ಮೆ ಉಪ್ಪಿನಕಾಯಿ ತಿಂದು ನೋಡುವುದು ಒಳಿತು

-ವಿಶ್ವನಾಥ ಸುಂಕಸಾಳ

ಗುರುವಾರ, ಜನವರಿ 24, 2019

ಕಾವಿ

ಮನದ ಕಾವು ಆರಿದ ಮೇಲೆ ತೊಡುವ ಬಟ್ಟೆ
ಕಾಷಾಯ ವೇಷ
ಕೋವಿ ಯುದ್ಧಕ್ಕೆ; ಕಾವಿ ಶಾಂತಿಗೆ
ತ್ಯಾಗದ ಪ್ರತೀಕವಿದು
ಯಾವ ಕಾವಿಯೊಳಗೆ ಯಾವ ಹಾವಿದೆಯೊ ಬಲ್ಲವರಾರು?
ಕಾವಿ ತೊಟ್ಟವರೆಲ್ಲ ತ್ಯಾಗಿಗಳಲ್ಲ, ನಿತ್ಯಾನಂದ ಸ್ವಾಮಿಯೂ ಆಗಿರಬಹುದು
ಕಾವಿ ತೊಟ್ಟರೇನು ಬಂತು, ಮನದ ಕಾವು ತ್ಯಜಿಸದಿದ್ದರೆ?
ಭಾರತದಲ್ಲಿ ಇದಕ್ಕೆ ಒಳ್ಳೆ ಮಾರ್ಕೆಟ್ ಇದೆ
ಸರ್ವವನ್ನೂ ತ್ಯಜಿಸಿದವನು ಧರಿಸುವಂಥದ್ದು. ಆದರೆ ಇದನ್ನು ತೊಟ್ಟ ಮೇಲೆ ಎಲ್ಲವೂ ಅಂಟಿಕೊಳ್ಳುತ್ತದೆ
ವೋಟ್ ಬ್ಯಾಂಕ್ ಶೇಖರಣಾ ಮಾಧ್ಯಮ
ಕಾವಿ ಕಂಡಲ್ಲಿ ಅಡ್ಡಬೀಳುವುದರಿಂದ ರಾಜಕಾರಣಿಗಂತೂ ಲಾಭವಿದೆ
ಉದರ ನಿಮಿತ್ತ ಕಾವಿ ತೊಟ್ಟವರು ಬೇರೆಯವರನ್ನು ಬಾವಿಗೆ ಬೀಳಿಸುತ್ತಾರೆ
ಅಧ್ಯಾತ್ಮದತ್ತ ಹೊರಳಿದವರ ಗಣವೇಷ
ಇದು ತುಂಬ ಸೋವಿ
ಕಾಮಿಗಳು ಅವಿತುಕೊಳ್ಳುವ ಸುರಕ್ಷಿತ ಅಡಗು ತಾಣ

-ವಿಶ್ವನಾಥ ಸುಂಕಸಾಳ

ಸೋಮವಾರ, ಡಿಸೆಂಬರ್ 24, 2018

ಪ್ರತಿಫಲ

ಕ್ರಿಯೆಗೆ ತಕ್ಕ ಪ್ರತಿಕ್ರಿಯೆಯಿಂದುಂಟಾಗುವ ಫಲ
ಕಲ್ಲು ಹೊಡೆದಿದ್ದ ಕೈ ಪ್ರತಿಯಾಗಿ ಉದುರಿದ ಹಣ್ಣು
ಮಾಡಿದ್ದುಣ್ಣುವ ಮಹರಾಯರ ಮಹತ್ಕಾರ್ಯಗಳ ಫಲ
ಗೋಡೆಗೆ ಬಡಿದ ಚೆಂಡು
ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೇ ಕರ್ಮ ಮಾಡು ಎಂದು ಕೃಷ್ಣ ಅರ್ಜುನನಿಗೆ ಹೇಳಿರುವುದರಿಂದ ನಾವಿದಕ್ಕೆ ತಲೆಕೆಡಿಸಿಕೊಂಡಿಲ್ಲ
ಕಲಿಯುಗದಲ್ಲಿ ಪ್ರವೃತ್ತಿಯ ಪ್ರೇರಕವೇ ಇದು
ಪ್ರತಿಫಲಾಪೇಕ್ಷೆಯಿಲ್ಲದೇ ಯಾರಾದರೂ ಉಪಕಾರ ಮಾಡಿದರೆ ಅದು ಅಕಸ್ಮಾತ್ತಾಗಿ ಆಗಿರುವ ಸಂಭವವೂ ಇದೆ
ಇದರ ಲಭ್ಯತೆಯನ್ನನುಸರಿಸಿ ಕಾರ್ಯ ಮಾಡಬೇಕೋ ಬೇಡವೋ ಎಂಬುದರ ನಿರ್ಣಯವಾಗುತ್ತದೆ.
ಎಷ್ಟು ಸಿಗುತ್ತೆ ? ಎಂದರೆ ಇದೇ ಅರ್ಥ
ಕೆಲಸ ಮಾಡದಿದ್ದರೂ ಫಲ ಸಿಗುತ್ತೆ ಸರ್ಕಾರಿ ಅಧಿಕಾರಿಗಳಿಗೆ
ದೇವರಿಗೆ ನೈವೇದ್ಯ ಮಾಡಿದ್ದರ ಫಲವೆಂದರೆ, ಅದನ್ನು ನಾವು ಮತ್ತೆ ನೈವೇದ್ಯ ಮಾಡುವುದೇ
ಪ್ರತಿಫಲಕ್ಕಾಗಿ ಕಾಯುತ್ತಾ 'ಕುಳಿತುಕೊಳ್ಳುವುದಕ್ಕಿಂತ' ಕಾಯುತ್ತಾ ಮಲಗುವುದು ಹೆಚ್ಚು ವಾಸಿ
ಲಕ್ಷಗಟ್ಟಲೆ ದಾನ ಕೊಟ್ಟವಗೆ ಸನ್ಮಾನ ಮಾಡುವುದೇ ಅತನಿಗೆ ಪ್ರತಿಫಲ

-ವಿಶ್ವನಾಥ ಸುಂಕಸಾಳ

ಶನಿವಾರ, ನವೆಂಬರ್ 24, 2018

ಸ್ವಭಾವ

ತನ್ನದೇ ಅಕ್ಕನ ಗಂಡ
ಅವರವರ ಸ್ವಂತ ಗುಣ-ದೋಷ ಭಾವ
ಅವರವರ ಸ್ವಭಾವದಂತೆ ಭಾವವೂ ಬೆರೆ
ಇದೊಂದು ಹುಟ್ಟು ಗುಣ, ಸುಟ್ಟರೂ ಹೋಗದ್ದು
ಬೇರೆಯವರನ್ನು ಪ್ರಭಾವಿಸುವ ವ್ಯಕ್ತಿತ್ವದ ಅಂಶ
ರೂಪ ರೂಪಗಳನು ದಾಟಿದ ಸ್ವರೂಪ
ನಿರ್ವಾತಕ್ಕೆ ಅಭಾವವೇ ಸ್ವಭಾವ
ಪ್ರಶ್ನಿಸುವುದು ಹೆಂಡತಿಯ ಸ್ವಭಾವ, ಉತ್ತರಿಸದಿರುವುದು ಗಂಡನ ಸ್ವಭಾವ
ಕೆಟ್ಟ ಹೆಂಡತಿಯನ್ನಾದರೂ ಬಿಡಬಹುದು. ಕೆಟ್ಟ ಸ್ವಭಾವವನ್ನು ಬಿಡಲಾಗದು
ಸ್ವಭಾವವನ್ನು ಮೀರಲು ಸ್ವಂತ ಭಾವನಿಂದಲೂ ಸಾಧ್ಯವಿಲ್ಲ (ಸ್ವಭಾವೋ ದುರತಿಕ್ರಮಃ)
ಒಳ್ಳೆಯ ಸ್ವಭಾವದ ವ್ಯಕ್ತಿಗೆ ಮಗಳನ್ನು ಕೊಟ್ಟರೆ ಮಗಳೇನೋ ಸುಖವಾಗಿರಬಹುದು, ಅಳಿಯ...?
ಸ್ವಭಾವ ಬೇರೆಯಾದರೂ ಭಾವ ಒಂದಾದರೆ ಸಂಸಾರ ಸಸಾರ
ಸ್ವಭಾವವೆಲ್ಲ ಸ್ವಾಭಾವಿಕವೇ
ಬೇಕು ಬೇಕೆಂಬುದು ನರನ ಸ್ವಭಾವ, ಬೇಕೇ ಬೇಕೆಂಬುದು ನಾಗರಿಕರನ ಸ್ವಭಾವ

-ವಿಶ್ವನಾಥ ಸುಂಕಸಾಳ

ಬುಧವಾರ, ಅಕ್ಟೋಬರ್ 24, 2018

ಬೆಲೆ

ಗ್ರಾಹಕನ ಕಿಸೆಯ ಹಣ ಎಗರಿಸುವ ಬಲೆ
ಸರ್ಪ್ರೈಸ್ ಕೊಡುವ ಗುಣದ್ದು C price
ಬೆಳೆ ಬೆಳೆಯುವವನಿಗೆ ಸಿಗದ ಮರೀಚಿಕೆ ಇದು
ಗ್ರಾಹಕನ ತಲೆ ಮೇಲೆ ಬೀಳುವ ಏಟು- ರೇಟು
ವ್ಯಾಪಾರಿಯ ಸಂಪಾದನೆಗೊಂದು ಮರ- ದರ
ಬ್ಯಾಲೆ ನೃತ್ಯ ನೋಡಲು ಕೊಡುವ ಮೌಲ್ಯ
ನಮ್ಮ ಹಿಂದೆ ಜನ ಏನು ಆಡಿಕೊಳ್ಳುತ್ತಾರೋ ಅದೇ ನಮ್ಮ ನಿಜವಾದ ಬೆಲೆ
ತೂಕದಲ್ಲಿ ದೋಖಾ ಆಗಲು ವಿಪರೀತವಾಗಿ ಹೆಚ್ಚುತ್ತಿರುವ ಬೆಲೆಯೇ ಕಾರಣ
ಅತ್ಯಂತ ಬೆಲೆಬಾಳುವ ವಿಷಯಗಳಲ್ಲಿ ಬಾಳು ಕೂಡ ಒಂದು. ಅದನ್ನು ಹಾಳು ಮಾಡಿಕೊಳ್ಳಬಾರದು
ಬೆಲೆ ಕಟ್ಟಲಾಗದ್ದೆಲ್ಲ ಅಮೂಲ್ಯವೆನಿಸುವುದಾದರೆ, ಬೆಲೆಯು ಕೂಡ ಅಮೂಲ್ಯವೇ
ಕೊಳ್ಳುವುದಕ್ಕೆ ಹೆಚ್ಚು. ಕೊಡುವುದಾದರೆ ಕಡಿಮೆ
ನಿಮ್ಮ ಬೆಲೆ ಇರುವುದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ನಲ್ಲಿ
ಸತ್ತ ಮೇಲೆ ಎಲ್ಲರ ಬದುಕಿಗೂ ಬೆಲೆ ಬರುತ್ತೆ. ಬೆಲೆ ಬರಬೇಕೆಂದರೆ ಸಾಯಬೇಕು
ಬೆಲೆ ಬಾಳುವ ಮಾತು ಆಡಬೇಕೆಂದರೆ ಬೆಲೆಯ ಕುರಿತಾದ 'ಪೇಟೆ ಧಾರಣೆ' ಮಾತನ್ನೇ ಆಡಬಹುದು

-ವಿಶ್ವನಾಥ ಸುಂಕಸಾಳ

1.. ಜಾಹೀರಾತು

2.ಜಾಹೀರಾತು