ಹಸಿರು ''ಗಾಜಿನ ಬಳೆ'' ಗಳು 'ಕೈಗಳಿಗಾಗಿ'
ಹೊಳೆವ ''ಮೂಗುತಿ'' 'ಮೂಗಿಗಾಗಿ'
''ಬೆಳ್ಳಿ ಕಾಲುಂಗುರ'' 'ಕಾಲ್ಬೆರಳಿಗಾಗಿ'
ಹೊಳೆಯುವ ಚಿನ್ನದ ''ಮಾಂಗಲ್ಯ'' ಕೊರಳಿಗಾಗಿ
ಈ ಐದು ಮುತ್ತುಗಳು 'ಮುತ್ತೈದೆಯರಿಗಾಗಿ'
ಹೂವಿನಂಥ ನಗು ಮೊಗದಲ್ಲಿ
ತಲೆಯಲ್ಲಿ ಹೂ ಮುಡಿದು,
ಮುತ್ತು + ಐದು = 'ಮುತ್ತೈದೆ' ಗೆ ಅರಿಶಿನ, ಕುಂಕುಮವೇ ಭೂಷಣ
ಮುತ್ತೈದೆ ಪೂಜೆಯಿಂದಲೇ ಶುಭ ಸಮಾರಂಭಗಳಿಗೆ ಭೂಷಣ.
ಹಿರಿಯ ಮುತ್ತೈದೆಯರಿಂದ ಆಶೀರ್ವಾದ ಪಡೆದಾಗ ಅವರ ಈ ಆಶೀರ್ವಚನ ಮಾಡುತ್ತಾರೆ. ಅದು 'ಮುತ್ತೈದೆ ಸಾವಿತ್ರಿಯಾಗಿ' ಬಾಳಮ್ಮ ಎಂದು ಹರಸುವ ಅವರ ಆ ಹೃದಯ ವೈಶಾಲ್ಯತೆ. ಇವೆಲ್ಲವನ್ನು ಕರುಣಿಸಿ ಹರಸಿದ ಆ ಭಗವಂತನಿಗೆ ಪ್ರಣಾಮಗಳು 🙏🏽.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.